ಇಂತಪ್ಪ ಪರಮ ಕಾರಣ ಪುರುಷನಾದ ನಂದಿ ನಾಮಾಂಕಿತ ವೃಷಭಲಿಂಗ ಮೂರ್ತಿ ಬಸವೇಶ್ವರನು ಷಟ್ ಸ್ಥಲಾನುಭಾವ ಸಂಪನ್ನನೆನಿಸಿ, ಸದ್ಭಕ್ತಿಸ್ಥಲುವನುವಾಗಿ, ಜಂಗಮ ಪ್ರಾಣವವದಾನದಲಿಂಗ ಲಿಂಗಚೈತನ್ಯ ವಿಡಿದಿರ್ಪ ಕಾರಣ, ತತ್ಪ್ರಾಣಲಿಂಗ ಪ್ರತಿಷ್ಠಾ ಸಂಬಂಧಪಟ್ಟ ಶಿವಯೋಗಿ ಲಕ್ಷಣ ಲಕ್ಷಿತವಾದ ನವಚಕ್ರ ಭೇದವೆಂತೆಂದೊಡೆ|

ಹೃತ್ಕಮಲ ಕರ್ನಿಕಾ ಕುಹಕ ಮಧ್ಯಸ್ತವಾದ ಸತ್ಪ್ರಣಮ ಜ್ಞಾನ ಚೈತನ್ಯದಿಂದಣುಚಕ್ರ ಆ ಅಣುಚಕ್ರದಿಂ ಪಶ್ಚಿಮ, ಆ ಪಶ್ಚಿಮ ಚಕ್ರದಿಂ ಶಿಕಾಚಕ್ರ, ಆ ಶಿಖಾ ಚಕ್ರದಿಂ ಬ್ರಹ್ಮ ಚಕ್ರ, ಆ ಬ್ರಹ್ಮ ಚಕ್ರದಿಂ ಜ್ಞಾನಚಕ್ರ, ಆ ಜ್ಞಾನ ಚಕ್ರದಿಂ ವಿಶುದ್ಧಿ ಚಕ್ರ, ಆ ವಿಶುದ್ಧಿ ಚಕ್ರದಿಂ ಅನಾಹತ ಚಕ್ರ, ಆ ಅನಾಹುತ ಚಕ್ರದಿಂ ಮಣಿಪೂರಕ ಚಕ್ರ, ಆ ಮಣಿಪೂರಕ ಚಕ್ರದಿಂ ಸ್ವಾದಿಷ್ಠಾನ ಚಕ್ರ, ಆ ಸ್ವಾದಿಷ್ಠಾನ ಚಕ್ರದಿಂ ಆಧಾರಚಕ್ರ ಜನಿತವಾದವು. ಇಂತೀ ದಶವಿಧ ಚಕ್ರಂಗಳೊಳಗೆ ಅಣುಚಕ್ರವೆಂಬುದು ಸರ್ವ ಶೂನ್ಯ ನಿರಾಲಂಬವಾಗಿ ನಿರಾಳ ಸ್ಥಾನವಾದ ಕಾರಣ ಉಳಿದ ನವಚಕ್ರ ಸಂಬಂಧದ ವಚನ.

ಗುರು ಸ್ಥಾನದಲ್ಲಿ ಆಧಾರಚಕ್ರ ಪೃಥ್ವಿಯೆಂಬ ಮಹಾಭೂತ, ಆ ಭೂತ ಪೀತ ವರ್ಣ, ಚತುಃಕೋಣೆ, ಚೌದಳಪದ್ಮ ಆ ಪದ್ಮ ಸುವರ್ಣದ ವರ್ಣ, ಆ ದಳದಲ್ಲಿ ವ, ಶ, ಷ, ಸ ಎಂಬ ನಾಲ್ಕಕ್ಷರ. ಆ ಕರ್ನಿಕಾ ಮಧ್ಯದಲ್ಲಿ ನಕಾರವೆಂಬ ಬೀಜಾಕ್ಷರ, ಆ ನಕಾರ ಬೀಜಾಕ್ಷರ ಅದು ಪೆಣ್ದುಂಬಿನಾದ. ಅಲ್ಲಿ ಆಚಾರಲಿಂಗ, ಅದಕ್ಕೆ ಪೀತವರ್ಣವನುಳ್ಳ ಸದ್ಯೋಜಾತ ಮುಖ, ನಿವೃತ್ತಿಕಲಾ ಪರ್ಯಾಯ ನಾಮವನುಳ್ಳ ಕ್ರಿಯಾಶಕ್ತಿ. ಆ ಶಕ್ತಿ ಪೀತವರ್ಣ, ಅಲ್ಲಿ ಕರ್ಮ ಸಾದಾಖ್ಯ. ಅನಾದಿಯೆಂಬ ಸಂಜ್ಞೆ ಪಶ್ಚಿಮ ದಿಕ್ಕು, ಅಲ್ಲಿ ಋಗ್ವೇದವನುಚ್ಚರಿಸುತ್ತಾ ಸುಚಿತ್ತವೆಂಬ ಹಸ್ತದಿಂ ಸುಗಂಧ ದ್ರವ್ಯವನು ಘ್ರೂಣವೆಂಬ ಮುಖಕ್ಕೆ ಶ್ರದ್ಧಾ ಭಕ್ತಿಯಿಂದರ್ಪಿಸುವಳಾ ಶಕ್ತಿ. ಬ್ರಹ್ಮ ಪೂಜಾರಿ ಶಕ್ತಿ ಡಾಕಿನಿ ಭವನಧೀದೇವತೆ ಯಿಂತಿವೆಲ್ಲಕ್ಕೂ ಮಾತೃಸ್ಥಾನವಾಗಿಬಹದು. ನಕಾರವೆಂಬ ಬೀಜಾಕ್ಷರ ಅದು ಪ್ರಣಮದ ತಾರಕಾಕೃತಿಯಲ್ಲಿಹುದು, ಓಂ, ಓಂ, ಓಂ, ನಾಂ, ನಾಂ, ನಾಂ ಎಂಬ ಬ್ರಹ್ಮನಾದ ಮಂತ್ರಮೂರ್ತಿ ಪ್ರಣಮಕ್ಕೆ ನಮಸ್ಕಾರವು, ಇದು ಪ್ರಥಮ ಚಕ್ರ ಭಕ್ತಸ್ಥಲ.

ಅಲ್ಲಿಂದ ಮ್ಯಾಲೆ, ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನ ಚಕ್ರ ಅಪ್ಪುವೆಂಬ ಮಹಾಭೂತ, ಆ ಭೂತಕ್ಕೆ ಶ್ವೇತವರ್ಣ, ಧನುರ್ಗತಿ, ಅಲ್ಲಿ ಷಡುದಳ ಪದ್ಮ, ಆ ಪದ್ಮ ಪಚ್ಚೇವರ್ಣ, ಆ ದಳದಲ್ಲಿ ಬ, ಭ, ಮ, ಯ, ರ, ಲ ಎಂಬಾರಕ್ಷರ, ಆ ಕರ್ನಿಕಾ ಮಧ್ಯದಲ್ಲಿ ಮಕಾರವೆಂಬ ಬೀಜಾಕ್ಷರ, ಆ ಮಕಾರ ರಕ್ತವರ್ಣ, ಅದು ವೀಣಾನದ ಅಲ್ಲಿ ಗುರುಲಿಂಗ ಅಲ್ಲಿ ಶ್ವೇತವರ್ಣವನುಳ್ಳ ವಾಮದೇವ ಮುಖ, ಪ್ರತಿಷ್ಠಾಕಲಾ ಪರ್ಯಾಯ ನಾಮವನುಳ್ಳ ಜ್ಞಾನ ಶಕ್ತಿ. ಆ ಶಕ್ತಿ ಶ್ವೇತವರ್ಣ, ಅಲ್ಲಿ ಕರ್ತೃ ಸಾದಾಖ್ಯಲಿಂಗಕ್ಷೇತ್ರವೆಂಬ ಸಂಜ್ಞೆ, ಉತ್ತರದಿಕ್ಕು, ಅಲ್ಲಿ ಯಜುರ್ವೇದವನುಚ್ಚರಿಸುತ್ತಾ ಸುಬದ್ಧಿಯೆಂಬ ಹಸ್ತದಿಂ ಸುರಸದ್ರವ್ಯವನು ಜಿಹ್ವೆಯೆಂಬ ಮುಖಕ್ಕೆ ನೆಷ್ಠಿಕಾ ಭಕ್ತಿಯಿಂದರ್ಪಿಸುವಳಾ ಶಕ್ತಿ. ವಿಷ್ಣು ಪೂಜಾರಿ. ಆ ಶಕ್ತಿ ಕಾಕಿನಿ ಮೃಡನಧಿದೇವತೆ, ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು. ಮಕಾರವೆಂಬ ಬೀಜಾಕ್ಷರ ಅದು ಪ್ರಣಮದ ದಂಡಾಕೃತಿಯಲ್ಲಿಹುದು. ಓಂ, ಓಂ, ಓಂ, ಮಾಂ, ಮಾಂ, ಮಾಂ ಎಂಬ ಬ್ರಹ್ಮನಾದ ಮಂತ್ರಿಮೂರ್ತಿ ಪ್ರಣಮಕ್ಕೆ ನಮಸ್ಕಾರವು. ಇದು ದ್ವಿತೀಯ ಚಕ್ರ ಮಹೇಶ್ವರಸ್ಥಲ.

ಅಲ್ಲಿಂದ ಮ್ಯಾಲೆ ನಾಭಿ ಸ್ಥಾನದಲ್ಲಿ ಮಣಿಪೂರಕ ಚಕ್ರ. ಅಗ್ನಿಯೆಂಬ ಮಹಾಭೂತ. ಆ ಭೂತ ರಕ್ತವರ್ಣ, ತ್ರಿಕೋಣೆ ದಶದಳ ಪದ್ಮ, ಪದ್ಮ ಕೃಷ್ಣವರ್ಣ, ಆ ದಳದಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ಹಸ್ತಾಕ್ಷರ, ಆ ಕರ್ನಿಕಾ ಮಧ್ಯದಲ್ಲಿ ಶಿಕಾರವೆಂಬ ಬೀಜಾಕ್ಷರ. ಆ ಶಿಕಾರ ನೀಲವರ್ಣ, ಅದು ಘಂಟಾನಾದ, ಅಲ್ಲಿ ಶಿವಲಿಂಗ, ಅದಕ್ಕೆ ಕಪ್ಪು ವರ್ಣವನುಳ್ಳ ಅಘೋರಮುಖ, ವಿದ್ಯಾಕಲಾ ಪರ್ಯಾಯ ನಾಮವನುಳ್ಳ ಇಚ್ಚಾಶಕ್ತಿ, ಆ ಶಕ್ತಿ, ಕೆಂಪುವರ್ಣ, ಅಲ್ಲಿ ಮೂರ್ತಿ ಸಾದಾಖ್ಯ. ಶರೀರಸ್ತನೆಂಬ ಸಂಜ್ಞೆ, ದಕ್ಷಿಣ ದಿಕ್ಕು, ಅಲ್ಲಿ ಸಾಮವೇದವನುಚ್ಚರಿಸುತ್ತಾ, ನಿರಹಂಕಾರವೆಂಬ ಹಸ್ತದಿಂ ಸುರೂಪುದ್ರವ್ಯವನು ನೇತ್ರವೆಂಬ ಮುಖಕ್ಕೆ ಸಾವಧಾನ ಭಕ್ತಿಯಿಂದರ್ಪಿಸುವಳಾ ಶಕ್ತಿ. ರುದ್ರ ಪೂಜಾರಿ, ಶಕ್ತಿ ಲಾಕಿನಿ ಹರನಧಿದೇವೆ, ಇಂತಿವೆಲ್ಲಕ್ಕೂ ಮಾತೃಸ್ಥಾನದಲ್ಲಿಹುದು. ಶಿಕಾರವೆಂಬ ಬೀಜಾಕ್ಷರ, ಅದು ಪ್ರಣಮದ ಕುಂಡಲಾಕೃತಿಯಲ್ಲಿಹುದು. ಓಂ, ಓಂ, ಓಂ, ಶಿಂ, ಶಿಂ, ಶಿಂ ಎಂಬ ಬ್ರಹ್ಮನಾದ ಮಂತ್ರ, ಮೂರ್ತಿ ಪ್ರಣಮಕ್ಕೆ ನಮಸ್ಕಾರವು. ಇದು ತೃತೀಯ ಚಕ್ರ ಪ್ರಸಾದಿಸ್ಥಲ.

ಅಲ್ಲಿಂದ ಮ್ಯಾಲೆ ಹೃದಯ ಸ್ಥಾನದಲ್ಲಿ ಅನಾಹತ ಚಕ್ರ, ವಾಯುವೆಂಬ ಮಹಾಭೂತ, ಆ ಭೂತ, ಮಾಂಜಿಷ್ಠವರ್ಣ, ಷಟ್ಕೋಣಿ, ದ್ವಾದಶ ದಶದಳ ಪದ್ಮ, ಆ ಪದ್ಮ ಕುಂಕುಮ ವರ್ಣ, ಆ ದಳದಲ್ಲಿ ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ, ಠ ಎಂಬ ಹನ್ನೆರಡಕ್ಷರ. ಆ ಕರ್ನಿಕಾ ಮಧ್ಯದಲ್ಲಿ ವಕಾರವೆಂಬ ಬೀಜಾಕ್ಷರ, ಆ ವಕಾರ ಶ್ವೇತವರ್ಣ, ಅದು ಭೇರಿನಾದ, ಅಲ್ಲಿ ಜಂಗಮ ಲಿಂಗ, ಅದಕ್ಕೆ ಕೆಂಪು ವರ್ಣವನುಳ್ಳ ತತ್ಪುರುಷ ಮುಖ, ಶಾಂತಿಕಲಾ ಪರ್ಯಾಯ ನಾಮವನುಳ್ಳ ಆದಿಶಕ್ತಿ, ಆ ಶಕ್ತಿ ಮಾಂಜಿಷ್ಠ ವರ್ಣ, ಅಲ್ಲಿ ಆ ಮೂರ್ತಿ ಸಾದಾಖ್ಯ, ಗೂಡವೆಂಬ ಸಂಜ್ಞೆ, ಪೂರ್ವದಿಕ್ಕು. ಅಲ್ಲಿ ಅಥರ್ವಣ ವೇದವನುಚ್ಚರಿಸುತ್ತಾ ಸಮನವೆಂಬ ಹಸ್ತದಿಂ ಸುಸ್ಪರ್ಶನ ದ್ರವ್ಯವನು ತ್ವಕ್ಕೆಂಬ ಮುಖಕ್ಕೆ ಅನುಭಾವ ಭಕ್ತಿಯಿಂದರ್ಪಿಸುವಳಾ ಶಕ್ತಿ. ಈಶ್ವರ ಪೂಜಾರಿ. ಶಕ್ತಿ ಕಂಕಾಳಿನಿ, ಭೀಮನಧಿದೇವತೆ. ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ವಕಾರವೆಂಬ ಬೀಜಾಕ್ಷರ. ಅದು ಪ್ರಣಮದ ಆರ್ಧ ಚಂದ್ರಾಕೃತಿಯಲ್ಲಿಹುದು. ಓಂ, ಓಂ, ಓಂ, ವಾಂ, ವಾಂ, ವಾಂ ಎಂಬ ಬ್ರಹ್ಮನಾದ ಮಂತ್ರ ಮೂರ್ತಿ ಪ್ರಣಮಕ್ಕೆ ನಮಸ್ಕಾರವು. ಇದು ನಾಲ್ಕನೆಯ ಅನಾಹುತ ಚಕ್ರ, ಪ್ರಾಣಲಿಂಗಿಸ್ಥಲ.

ಅಲ್ಲಿಂದ ಮ್ಯಾಲೆ ಕಂಠಸ್ಥಾನದಲ್ಲಿ ವಿಶುದ್ಧಿ ಚಕ್ರ, ಆಕಾಶವೆಂಬ ಮಹಾಭೂತ, ಆ ಭೂತ ಕೃಷ್ಣವರ್ಣ, ವರ್ತುಳಾಕಾರ, ಅಲ್ಲಿ ಷೋಡಶದಳಪದ್ಮ, ಆ ಪದ್ಮಶ್ವೇತವರ್ಣ, ಆ ದಳದಲ್ಲಿ ಅ, ಆ, ಇ, ಈ, ಟ, ಟಾ, ರು, ರೂ, ಲು, ಲೂ, ಎ, ಙ, ಓ, ಔ, ಅಂ, ಆಃ ಎಂಬ ಹದಿನಾರಕ್ಷರ. ಆ ಕರ್ನಿಕಾ ಮಧ್ಯದಲ್ಲಿ ಯಕಾರವೆಂಬ ಬೀಜಾಕ್ಷರ. ಆ ಯಕಾರವ ಸ್ಪಟಿಕವರ್ಣ. ಅದು ಮೇಘಧ್ವನಿ, ಅಲ್ಲಿ ಪ್ರಸಾದಲಿಂಗ, ಅದಕ್ಕೆ ಸ್ಪಟಿಕ ವರ್ಣವನುಳ್ಳ ಈಶಾನ್ಯ ಮುಖ, ಶಾಂತಾತೀತೆಂಬ ಕಲಾ ಪರ್ಯಾಯ ನಾಮವನುಳ್ಳ ಪರಶಕ್ತಿ. ಆ ಶಕ್ತಿ ಕಪೋತವರ್ಣ ಅಲ್ಲಿ ಶಿವಸಾದಾಖ್ಯ ಪರವಂಬ ಸಂಜ್ಞೆ ಊರ್ಧ್ವದಿಕ್ಕು ಅಲ್ಲಿ ಗಾಯತ್ರಿ ವೇದವನುಚ್ಚರಿಸುತ್ತಾ ಸುಜ್ಞಾನವೆಂಬ ಹಸ್ತದಿಂದ ಸುಶಬ್ದದ್ರವ್ಯವನು ಶ್ರೋತ್ರವೆಂಬ ಮುಖಕ್ಕೆ ಆನಂದ ಭಕ್ತಿಯಿಂದರ್ಪಿಸುವಳಾ ಶಕ್ತಿ. ಸದಾಶಿವಪೂಜಾರಿ, ಅಲ್ಲಿ ಶಕ್ತಿ ಶಾಕಿನಿ, ಮಹಾದೇವನಧಿ ದೇವತೆ ಇಂತಿವೆಲ್ಲವಕ್ಕೂ ಮಾತೃ ಸ್ಥಾನವಾಗಿಹುದು ಯಾಕಾರವೆಂಬ ಬೀಜಾಕ್ಷರ ಅದು ಪ್ರಣಮದ ದರ್ಪಣಾ ಕೃತಿಯಲ್ಲಿಹುದು. ಓಂ, ಓಂ, ಓಂ, ಯಾಂ, ಯಾಂ, ಯಾಂ ಎಂಬ ಬ್ರಹ್ಮನಾದಮಂತ್ರ ಮೂರ್ತಿ ಪ್ರಣಮಕ್ಕೆ ನಮಸ್ಕಾರವು. ಇದು ಐದನೆಯ ಚಕ್ರ ಶರಣಸ್ಥಲ.

ಇಲ್ಲಿಂದ ಮ್ಯಾಲೆ ಭೂ ಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ಆ ಭೂತ ತಮಂದಾಕಾರ. ಅಲ್ಲಿ ದ್ವಿದಳ ಪದ್ಮ, ಆ ಪದ್ಮ ಅನಂತ ಮಿಂಚಿನವರ್ಣ, ಆ ದಳದಲ್ಲಿ ಹಂಸಾವೆಂಬೆರಡಕ್ಷರ, ಆ ಕರ್ನಿಕಾ ಮಧ್ಯದಲ್ಲಿ ಓಂಕಾರವೆಂಬ ಬೀಜಾಕ್ಷರ, ಆ ಓಂಕಾರ ಅನಂತ ಬೀಜಾಕ್ಷರಂಗಳ ಗರ್ಭೀಕರಿಸಿಕೊಂಡಿಹುದು. ನಾದಬಿಂದು ಕಳೆಗಳಿಗೆ ಆಶ್ರಯವಾಗಿಹುದು. ತತ್ಪದ, ತ್ವಂಪದ, ಅಸಿಪದಬೆಂಬುದನೊಳಗೊಂಡು ಉತ್ತುಂಗ ಕಿರಣ ರಾಶಿಯೆಂಬಂತೆ ತೇಜೋವರ್ಧನಕ್ಕೆ ತಾನೇಯಾಗಿರ್ಪುದು. ಅಲ್ಲಿ ಪ್ರಣಮನಾದ, ಮಹಾಲಿಂಗ ಅದಕ್ಕೆ ಪಾತಾಳ ದಿಕ್ಕನನ್ನುಳ್ಳ ಹೃದಯ ಮುಖ, ಶಾಂತಾತೀತ್ತೋತ್ತರ ಕಲಾ ಪರ್ಯಾಯ ನಾಮವನುಳ್ಳ ಚಿತ್ ಶಕ್ತಿ. ಆ ಶಕ್ತಿ ಮಹಾಘನ ಬೆಳಕಿನ ವರ್ಣ, ಅಲ್ಲಿ ನಿರ್ಮುಕ್ತಿ ಸಾದಾಖ್ಯ ನಿರಾಳವೆಂಬ ಸಂಜ್ಞೆ, ಗಂಭೀರದಿಕ್ಕು ಅಲ್ಲಿ ಅಜಪವನುಚ್ಚರಿಸುತ್ತಾ ಸದ್ಭಾವ ಹಸ್ತದಿಂದ ತೃಪ್ತಿಯಿಂದ ದ್ರವ್ಯವನು ಹೃದಯವೆಂಬ ಮುಖಕ್ಕೆ ಸತುರಸ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ. ಪರಶಿವ ಪೂಜಾರಿ ಆ ಶಕ್ತಿ ಹಾಕಿನಿ. ಮಹಾ ಶ್ರೀಗುರುವಧಿದೇವತೆ, ಇಂತಿವೆಲ್ಲಕ್ಕೂ ಮಾತ್ರ ಸ್ಥಾನವಾಗಿಹುದು. ಓಂಕಾರವೆಂಬ ಬೀಜಾಕ್ಷರ, ಅದು ಪ್ರಣಮದ ಜ್ಯೋತಿರಾಕೃತಿಯಲ್ಲಿಹುದು. ಓಂ, ಓಂ, ಓಂ ಎಂಬ ಬ್ರಹ್ಮನಾದ ಮಂತ್ರ ಮೂರ್ತಿ ಪ್ರಣಮಕ್ಕೆ ನಮಸ್ಕಾರವು ಇದು ಆರನೆಯ ಚಕ್ರ, ಐಕ್ಯಸ್ಥಲ.

ಇಲ್ಲಿಂದ ಮ್ಯಾಲೆ ಅಜರಂಧ್ರ ಮಧ್ಯದಲ್ಲಿ ಬ್ರಹ್ಮಚಕ್ರ, ಆ ಚಕ್ರಕ್ಕೆ ಸಹಸ್ರದಳ ಪದ್ಮ, ಅನಂತ ಜ್ಯೋತೀರ್ವಣ, ಸಹಸ್ರಾಕ್ಷರ, ಅನಂತ ವೇದಗಳನ್ನೊಳಗೊಂಡಿರ್ಪ ಅಖಂಡ ಪ್ರಣಮವೇ ಮಂತ್ರ, ಅನಂತಕೋಟಿ ಸೂರ್ಯ ಪ್ರಕಾಶವನ್ನುಳ್ಳ ನಿಷ್ಕಳ ಲಿಮಗ ಪರಮಾತ್ಮನಧಿದೇವತೆ, ಅಕ್ಷರಾತ್ಮಕ ಸುನಾದ ಅನಾದಿಯೆಂಬ ಕಲೆ, ಅಗಮ್ಯ ಸಾದಾಖ್ಯ, ಅಪ್ರಮಾಣವೆಂಬ ಸಂಜ್ಞೆ, ನಿರ್ಮಾಯ ಶಕ್ತಿ. ಅವಿರಳದ್ರವ್ಯ ನಿರಂಜನ ಭಕ್ತಿ. ಅಗಣಿತ ಪೂಜೆ, ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು. ಪ್ರಣಮದ ಗೋಪ್ಯಮಪ್ಪ ಬೀಜಾಕ್ಷರ, ಆ ಪ್ರಣಮ ಬೀಜಾಕ್ಷರ ಸಕಲ ನಿಷ್ಕಳವ ಹೊಂದಿದ್ದು ಬ್ರಹ್ಮನಾದ ಮಂತ್ರ ಮೂರ್ತಿಯಾಗಿ ಅನಿರ್ವಾಚ್ಯವಾಗಿ ನಿರಾವರಣ, ನಿರಾಲಂಬ ಬಿಂದು ತಾನೆಯಾಗಿಹುದು. ಆ ನಿರಾವರಣ ಬಿಂದುವಿಗೆ ನಮಸ್ಕಾರವು.

ಅಲ್ಲಿಂದ ಮ್ಯಾಲೆ ಮಸ್ತಕಾಗ್ರದಲ್ಲಿ ಶಿಖಾಚಕ್ರ, ತ್ರಿದಳ ಪದ್ಮ ಮಹಾಜ್ಯೋತಿವರ್ಣ, ನಿಃಭ್ರಾಂತಶಕ್ತಿ, ನಿರುಪಮಕಲೆ, ನಿರ್ನಾಮ ಸಂಜ್ಞೆ, ಅವಿರಳ ಸಾದಾಖ್ಯ, ಕ್ಷಕಾರಮಂತ್ರ ಕಲಾಗ್ನಿ ಪ್ರಕಾಶವನ್ನುಳ್ಳ ಮಹಾಶೂನ್ಯಲಿಂಗ, ಪರಮಾತ್ಮನು ಪೂಜಾರಿ, ಮಹಾಲಿಂಗವೇ ಅಧಿದೇವತೆ, ಅಕ್ಷರಾತ್ಮಕಲಿಂಗ ದಿವ್ಯನಾದ ಪರಿಪೂರ್ಣ ಭಕ್ತಿ.

ಇಲ್ಲಿಂದ ಮ್ಯಾಲೆ ಪಶ್ಚಿಮ ಚಕ್ರ, ಏಕದಳ ಪದ್ಮ ಹವಣಿಸಬಾರದ ತೇಜ ಏಕಾಕ್ಷರ ಕುರುಹಿಗೆ ಬಾರದನಾದ ಅಪ್ರದರ್ಶನ ವರ್ಣ, ನಿರುಪಾಧಿಕ ಶಕ್ತಿ, ಸರ್ವಾತ್ಮನೆಂಬ ಜಂಗಮವೇ ಅಧಿದೇವತೆ, ಪರಿಪೂರ್ಣ ಜಂಗಮಲಿಂಗ, ಅಕ್ಷರಾತೀತ, ನಿಶಬ್ದ ಬ್ರಹ್ಮವಾಗಿಹುದು. ಇಂತಪ್ಪ ಲಿಂಗಾಂಗವೇ ತಾನಾಗಿ ಅವಿರಳ ಜಂಗಮ ಭಕ್ತಿಯ ಮಾಡಬಲ್ಲತನೇ ಬಸವಪ್ರಿಯ ಕೂಡಲ ಚನ್ನಸಂಗಯ್ಯನಲ್ಲಿ ಸಂಗನ ಬಸವಣ್ಣನಯ್ಯಾ ಪ್ರಭುವೆ ತಿಳಿಯಬಲ್ಲ ಪರಮರಹಸ್ಯ, ಪ್ರಣಮಕಾರಕ ಸಂಪೂರ್ಣ.

ಇನ್ನು ಮಂತ್ರ ಸಕೀಲ ಸ್ಥಳ ಕುಳ ಸಂಬಂಧ ಆಧಾರದಲ್ಲಿ ನಕಾರ, ಸ್ವಾದಿಷ್ಠನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹುತದಲ್ಲಿ ವಕಾರ, ವಿಶುದ್ಧಿಯಲ್ಲಿ ಯಕಾರ, ಅಗ್ನಿಯಲ್ಲಿ ಓಂಕಾರ, ಬ್ರಹ್ಮ ರಂಧ್ರದಲ್ಲಿ ಅಕಾರ, ಒಕಾರ, ಓಂಕಾರ, ಶಿಖಿಯಲ್ಲಿ ಟಕಾರ, ಸಕಾರ, ಕ್ಷಕಾರ, ಪಶ್ಚಿಮದಲ್ಲಿ ಮಕಾರ, ವಕಾರ, ಹಕಾರ, ಸಂಬಂಧ, ಇಂತೀ ಹದಿನೈದು ಪ್ರಣಮವ ನವವಿಧ ಲಿಂಗಾಂಗ ಸ್ಥಲಂಗಳನೊಳಗೊಂಡು, ನಾದತ್ರಯ, ಬಿಂದುತ್ರಯ, ಕಲಾತ್ರಯ, ಸ್ವರೂಪಿನಿಂ ಲಿಂಗತ್ರಯ ಸಂಬಂಧವಾಗಿಹುದು.

ಮತ್ತಂ, ತಾರೆ, ನಾ ಹ್ರಾಂ ಎಂಬ ಮೂರು ಆಧಾರದಲ್ಲಿ, ದಂಡೆ, ಮ, ಹ್ರಿಂ ಎಂಬ ಮೂರು ಸ್ವಾಧೀಷ್ಠಾನದಲ್ಲಿ ಟ, ಸಾ, ಕ್ಷಾ ಎಂಬ ಮೂರು ಶಿಖಿಯಲ್ಲಿ ಸಂಬಂಧ, ಈ ಒಂಭತ್ತು ಲಿಂಗತ್ರಯ ಸ್ವರೂಪಿನಿಂ ಇಷ್ಟಲಿಂಗ ಸಂಬಂಧವಾಗಿಹುದು. ಕುಂಡಲಿ, ಶಿ, ಹ್ರೂಮ ಎಂಬ ಮೂರು ಮಣಿಪೂರಕದಲ್ಲಿ ಅರ್ಧಚಂದ್ರ, ವಾ, ಹ್ರೈಂ ಎಂಬ ಮೂರು ಅನಾಹತದಲ್ಲಿ ಮ, ವಾ, ಹ ಎಂಬ ಮೂರು ಪಶ್ಚಿಮದಲ್ಲಿ ಸಂಬಂಧ, ಈ ಪೂರ್ವೋಕ್ತ ಬಿಂದು ಸಹ ಹತ್ತು ಕಲಾತ್ರಯ ಸ್ವರೂಪಿನಿಂ ಪ್ರಾಣಲಿಂಗ ಸಂಬಂಧವಾಗಿಹವು, ದರ್ಪಣ, ಯ, ಹ್ರಾಂ ಎಂಬ ಮೂರು ವಿಶುದ್ಧಿಯಲ್ಲಿ ಜ್ಯೋತಿ ಓ ಹ್ರಃ ಎಂಬ ಮೂರು ಆಗ್ನೆಯಲ್ಲಿ ಅ, ಬ, ಓಂ ಎಂಬ ಮೂರು ಬ್ರಹ್ಮರಂಧ್ರದಲ್ಲಿ ಸಂಬಂಧ. ಈ ಒಂಭತ್ತು ಪೂವೋಕ್ತ ಬಿಂದು ಕಲಾ ಸಹ ಹನ್ನೊಂದು ನಾದತ್ರಯ ಸ್ವರೂಪಿನಿಂ ಭಾವಲಿಂಗ ಸಂಬಂಧವಾಗಿಹವು.

ಮತ್ತಂ, ನಕಾರದಲ್ಲಿಯ ನ, ಮ, ಶಿ, ವಾ ಈ ನಾಲ್ಕು ಆಧಾರದಲ್ಲಿ ಮಕಾರದಲ್ಲಿಯ ನ, ಮ, ಶಿ, ವಾ, ಈ ನಾಲ್ಕು ಸ್ವಾದಿಷ್ಠಾನದಲ್ಲಿ ಇವರಲ್ಲಿ ಉಳಿದ ಯ ಓಂ, ಯ, ಓಂ ನಾಲ್ಕು ಶಿಖೆಯಲ್ಲಿ ಸಂಬಂಧ, ಈ ಹನ್ನೆರಡು ಪ್ರಣವ ಸ್ವರೂಪವಾದ ಭಕ್ತನ ಅಂಗ ೯ ಆಚಾರಲಿಂಗ ಸ್ಥಲ ೯, ಶ್ರದ್ಧಾಭಕ್ತಿ ೯, ಮಹೇಶ್ವರನಂಗ ೯, ಗುರುಲಿಂಗಸ್ಥಲ ೯, ನೈಷ್ಠಿಕ ಭಕ್ತಿ ೯, ಈ ನಲ್ವತ್ತೆಂಟು ಬಿಂದುತ್ರಯ ಸ್ವರೂಪಿನಿಂ ಇಷ್ಠಲಿಂಗ ಸಂಬಂಧವಾಗಿಹವು. ಶಿಕಾರದಲ್ಲಿ ಹ, ನ, ಮ, ಶಿ, ವಾ ಈ ನಾಲ್ಕು ಮಣಿಪೂರಕದಲ್ಲಿ, ವ ಕಾರದಲ್ಲಿ ನ, ಮ, ಶಿ, ವಾ ಈ ನಾಲ್ಕು ಅನಾಹತದಲ್ಲಿ ಇವರಲ್ಲಿ ಉಳಿದ ಯ, ಓಂ, ಯ, ಓಂ ಈ ನಾಲ್ಕು ಪಶ್ಚಿಮದಲ್ಲಿ ಸಂಬಂಧ, ಈ ಹನ್ನೆರಡು ಪ್ರಣಮ, ಸ್ವರೂಪವಾದ ಪ್ರಸಾದಿಯಂ ೯, ಶಿವಲಿಂಗಸ್ಥಲ ೯, ಸಾವಧಾನ ಭಕ್ತಿ ೯, ಪ್ರಾಣಲಿಂಗಿಯ ಅಂಗ ೯, ಜಂಗಮ ಲಿಂಗಸ್ಥಲ ೯, ಅನುಭವ ಭಕ್ತಿ ೯, ಈ ನಲವತ್ತೆಂಟು ಕಲಾತ್ರಯ ಸ್ವರೂಪಿನಿಂ ಪ್ರಾಣಲಿಂಗ ಸಂಬಂಧವಾಗಿಹವು, ಯಕಾರದಲ್ಲಿ ನ, ಮ, ಶಿ, ವಾ ಈ ನಾಲ್ಕು ವಿಶುದ್ಧಿಯಲ್ಲಿ ಓಂಕಾರದಲ್ಲಿಯ ನ, ಮ, ಶಿ, ವಾ, ಈ ನಾಲ್ಕು ಆಗ್ನೆಯಲ್ಲಿ ಇದರಲ್ಲಿ ಉಳಿದ ಯ, ಓಂ, ಯ, ಓಂ ಈ ನಾಲ್ಕು ಬ್ರಹ್ಮ ರಂಧ್ರದಲ್ಲಿ ಸಂಬಂಧ ಈ ಹನ್ನೆರಡು ಪ್ರಣಮ ಸ್ವರೂಪವಾದ ಶರಣ ನಂಗ ೯, ಪ್ರಸಾದ ಲಿಂಗಸ್ಥಲ ೯, ಆನಂದ ಭಕ್ತಿಯ ಐಕ್ಯನ ಅಂಗ ೯, ಮಹಾಲಿಂಗಸ್ಥಲ ೯, ಸಮರಸ ಭಕ್ತಿ ೯, ಈ ನಲವತ್ತೆಂಟು ನಾದತ್ರಯ ಸ್ವರೂಪಿನಿಂ ಭಾವಲಿಂಗ ಸಂಬಂಧವಾಗಿಹವು.

ಇನ್ನು ಪಿಂಡ, ಪಿಂಡಜ್ಞಾನ, ಸಂಸಾರಹೇಯ ಗುರುಕರಣ, ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರು ಈ ಏಳು ಲಿಂಗಧಾರಣ, ಕ್ರಿಯಾಲಿಂಗ, ಭಾವಲಿಂಗ, ಜ್ಞಾನಲಿಂಗ ಈ ನಾಲ್ಕು ವಿಭೂತಿ, ರುದ್ರಾಕ್ಷಿ – ಈ ಎರಡೂ ಇಂತೀಸ್ಥಲ ಸಹ ಹದಿಮೂರು, ಆಧಾರದಲ್ಲಿ ಮಹೇಶ್ವರ, ಕ್ರಿಯಾಗಮ, ಭಾವಾಗಮ, ಜ್ಞಾನಾಗಮ ಈ ನಾಲ್ಕು ಲಿಂಗನಿಷ್ಠೆ, ಸಕಾಯ, ಆಕಾಯ, ಪರಕಾಯ ಈ ನಾಲ್ಕು ಪೂರ್ವಾಶ್ರಯ. ನಿರಸನ, ವಾಗದ್ವೈತ ನಿರಸನ, ಆಹ್ವಾನ ನಿರಸನ, ಅಷ್ಠತನುಮೂರ್ತಿ ನಿರಸನ ಈ ನಾಲ್ಕು ಇಂತೀ ಸ್ಥಲ ಸಹ ಹನ್ನೆರಡು, ಸ್ವಾದಿಷ್ಠಾನದಲ್ಲಿ ಸರ್ವೆಗತ ನಿರಸನ. ಧರ್ಮಾಚಾರ, ಭಾವಾಚಾರ, ಜ್ಞಾನಾಚಾರ, ಶಿವಜಗನ್ಮಯ ಭಕ್ತದೇಹಿ, ಕಲಿಂಗ ಈ ಆರು. ಪಂಚಾಕ್ಷರಿ, ಸ್ವಯ, ಚರ, ಪರ ಈ ನಾಲ್ಕು ಭಕ್ತ, ಉಭಯ ತ್ರಿವಿಧ ಸಂಪತ್ತು ಚತುರ್ವಿಧ ಸಾರಾಯ, ಉಪಾಧಿ, ನಿರುಪಾಧಿ ಸಹಜಮಾಟ ಈ ಏಳು ಇಂತೀ ಸ್ಥಲ ಸಹ ೧೭ ಶಿಖಿಯಲ್ಲಿ ಸಂಬಂಧ. ಈ ೪೨ ಬಿಂದು, ಪರಬಿಂದು ಅಪರ, ಬಿಂದು ಸ್ವರೂಪವಾದ ಟ, ಸಾ, ಕ್ಷ ಎಂಬ ಅಕ್ಷರ ತ್ರಯಾತ್ಮಕವಾಗಿಹವು. ಪ್ರಸಾದಿ ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹ, ಈ ೪ ಗುರುಮಹಾತ್ಮೆ, ಲಿಂಗಮಹಾತ್ಮೆ, ಜಂಗಮ ಮಹಾತ್ಮೆ, ಭಕ್ತ ಮಹಾತ್ಮೆ ಈ ೪, ಶರಣ ಮಹಾತ್ಮೆ, ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತ, ಈ ೪ ಇಂತೀ ಸ್ಥಲಸಹ ೧೨ ಮಣಿ ಪೂರಕದಲ್ಲಿ ಸಂಬಂಧ.

ಪ್ರಾಣಲಿಂಗಿ, ಜೀವಾತ್ಮ, ಅಂತರಾತ್ಮ ಪರಾತ್ಮ ಈ ೪ ಪ್ರಾಣಲಿಂಗಾರ್ಚನ, ಶಿವಯೋಗ ಸಮಾಧಿ ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗ, ಈ ೪, ಲಿಂಗ ನಿಜ, ಆದಿಪ್ರಸಾದಿ, ಅಂತ್ಯ ಪ್ರಸಾದಿ, ಶೈವ ಪ್ರಸಾದಿ, ಈ ೪ – ಇಂತಿ ಸ್ಥಲಸಹ ೧೩ ಅನಾಹತದಲ್ಲಿ ಸಂಬಂಧ. ಅಂಗಲಿಂಗ ದೀಕ್ಷಾಪಾದೋದಕ, ಶಿಕ್ಷಾ ಪಾದೋದಕ, ಜ್ಞಾನ ಪಾದೋದಕ, ಈ ೪. ಪ್ರಸಾದ ಮಹಾತ್ಮೆ ಈ ೧ ಶಿಷ್ಯ. ಶಿಶ್ರೂಷೆ, ಸೇವ್ಯ ಈ ೩ – ಇಂತೀ ಸ್ಥಲಸಹ ಪಶ್ಚಿಮದಲ್ಲಿ ಈ ೩೩. ಕಲೆ ಪರಕಲೆ, ಅಪರಕಲೆ ಸ್ವರೂಪವಾದ ಮ, ವಾ, ಹ ಎಂಬ ಅಕ್ಷರ ತ್ರಯಾತ್ಮಕವಾಗಿಹವು.

ಶರಣ, ಕ್ರಿಯಾನಿಷ್ಪತಿ, ಭಾವನಿಷ್ಪತಿ, ಜ್ಞಾನ ನಿಷ್ಪತಿ, ಈ ೪, ತಾಮಸನಿರಸ ಈ ೧. ನಿರ್ದೇಶ, ಪಿಂಡಾಕಾಶ, ಬಿಂದಾಕಾಶ, ಮಹಾದಾಕಾಶ ಈ ೪. ಇಂತೀ ಸ್ಥಲ ಸಹ ವಿಶುದ್ಧಿಯಲ್ಲಿ ಐಕ್ಯಗೊಂಡದ್ದು ಪ್ರಸಾದ, ನಿಂದುದ್ದು ಓಗರ ಚರಾಚರ ನಾಸ್ತಿ ಈ ೪. ಸರ್ವಾಚಾರ ಸಂಪತ್ತು ಈ ೧. ಭಾಂಡ, ಭಾಜನ, ಅಂಗಲೇಪನ, ಈ ೩, ಇಂತೀ ಸ್ಥಲ ಸಹ, ಆಗ್ನೆಯಲ್ಲಿ ಏಕಭಾಜನ ಈ ೧. ಸಹ, ಭೋಜನ ಸ್ವಯಪರಿವರಿಯಿಂದ ಭಾವಾನಷ್ಠ. ಜ್ಞಾನಶೂನ್ಯ. ಈ ನಾಲ್ಕು ಶೀಲಸಂಪಾದನೆ, ಕ್ರಿಯಾಪ್ರಕಾರ, ಭಾವ ಪ್ರಕಾಶ, ಜ್ಞಾನ ಈ ೪ – ಇಂತೀ ಸ್ಥಲ ಸಹ ಬ್ರಹ್ಮರಂಧ್ರದಲ್ಲಿ ಸಂಬಂಧ ಈ ೨೬. ನಾದ ಪರನಾದ, ಪರನಾದ ಸ್ವರೂಪಿನಿಂ ಅ, ಬ, ಓಂ, ಎಂಬ ಅಕ್ಷರ ತ್ರಯಾತ್ಮಕವಾಗಿಯವು, ಈ ನಾಲ್ಕು ಸ್ಥಲ ಸಂಬಂಧವನು ಅನಾದಿಭಕ್ತ ಮೊದಲಾದ ಕೆಲವು ಉದ್ಧರಣೆಗಳಲ್ಲಿ ಸಂಬಂಧಿಸುವುದು.

 

ನವಚಕ್ರೋದ್ಧರಣೆಯ ಸಂಬಂಧ ಸಮಾಪ್ತಿ ಮಂಗಳ ಶ್ರೀ ಶ್ರೀ