ಇಂತಪ್ಪ ನವಚಕ್ರ ಭೇದ ಪರೀಕ್ಷಿತನಾದ ಶಿವಯೋಗಿಯ ಸಂಬಂಧವಾದ ತತ್ತ್ವ ಪಂಚೀಕರಣೋತ್ಪತ್ಯದ ನಿರ್ದೇಶನವೆಂತೆಂದೊಡೆ|

ಅಪ್ರತಿಮ ನಿತ್ಯ ನಿರಂಜನ ಪರಶಿವನ ಸಲೀಲಾನಂದವ ನೆನೆಹೆ ಪರಶಕ್ತಿ, ಅಪರಶಕ್ತಿ ಸಮೇತವಾಗಿ ನಾದಮೂರ್ತಿಯಾಗಿ, ತೋರ್ವುದೇ ಅನುಪಮ ಮಹಾ ಘನಲಿಂಗ, ಆ ಲಿಂಗದ ಚಿತ್ ಚೈತನ್ಯ ಪ್ರಭಾವವೇ ಮೂರ್ತಿಗೊಂಡು ಸರ್ವ ಲಕ್ಷಣ ಸಂಪನ್ನನೆನೆಪ ಸದಾಶಿವನಾದ. ಆ ಸದಾಶಿವನ ಸ್ವಲೀಲಾರ್ಥವಾಗಿ ಗೋಪ್ಯ ಮುಖದಿಂದಾತ್ಮನು ದಯವಾದ ಕೂಡಲೇ ಪಂಚವಕ್ತ್ರದಿಂ ಪಂಚಭೂತಂಗಳುದಿಸಿ ತತ್ವಾತ್ಮಕ ಶರೀರವಾಯಿತು. ಇಂತೀ ಶರೀರ ಸಂಬಂಧವಾದ ಆತ್ಮತತ್ತ್ವ ಭೂತಂಗಳಿಗೆ ವಿವರ.

ಆಕಾಶದಂಶ : ಆತ್ಮನಲ್ಲಿ ಭಾವ, ಆಕಾಶದಲ್ಲಿ ಜ್ಞಾನ, ವಾಯುವಿನಲ್ಲಿ ಮನ ಅಗ್ನಿಯಲ್ಲಿ ಬುದ್ಧಿ, ಅಪ್ಪುವಿನಲ್ಲಿ ಚಿತ್ತ, ಪೃಥ್ವಿಯಲ್ಲಿ ಅಹಂಕಾರ, ಇಂತಿವು ಆಕಾಶದಂಶಗಳು, ವಾಯುವಿನಂಶ : ಆತ್ಮನಲ್ಲಿ ಚೇತನ, ಆಕಾಶದಲ್ಲಿ ಸಮಾನ, ವಾಯುವಿನಲ್ಲಿ ವ್ಯಾನ, ಅಗ್ನಿಯಲ್ಲಿ ಉದಾನ, ಅಪ್ಪುವಿನಲ್ಲಿ ಅಪಾನ, ಪೃಥ್ವಿಯಲ್ಲಿ ಪ್ರಾಣ ಇಂತಿವು ವಾಯುವಿನಂಶಗಳು. ಅಗ್ನಿಯ ಅಂಶ : ಆತ್ಮನಲ್ಲಿ ಹೃದಯ ಆಕಾಶದಲ್ಲಿ ಶ್ರೋತ್ರ, ವಾಯುವಿನಲ್ಲಿ ತ್ವಕ್ಕು, ಅಗ್ನಿಯಲ್ಲಿ ನೇತ್ರ, ಅಪ್ಪುವಿನಲ್ಲಿ ಜಿಹ್ವೆ, ಪೃಥ್ವಿಯಲ್ಲಿ ಘ್ರಾಣ ಇಂತಿವು ಅಗ್ನಿಯ ಅಂಶಗಳು ಅಪ್ಪುವಿನಂಶ : ಆತ್ಮನಲ್ಲಿ ತೃಪ್ತಿ, ಆಕಾಶದಲ್ಲಿ ಶಬ್ದ, ವಾಯುವಿನಲ್ಲಿ ಸ್ಪರ್ಶನ, ಅಗ್ನಿಯಲ್ಲಿ ರೂಪು, ಅಪ್ಪುವಿನಲ್ಲಿ ರಸ, ಪೃಥ್ವಿಯಲ್ಲಿ ಗಂಧ, ಇಂತಿವು ಅಪ್ಪುವಿನಂಶಗಳು, ಪೃಥ್ವಿಯ ಅಂಶ : ಆತ್ಮನಲ್ಲಿ ಮನನ, ಆಕಾಶದಲ್ಲಿ ವಾಕು, ವಾಯುವಿನಲ್ಲಿ ಪಾಣಿ, ಅಗ್ನಿಯಲ್ಲಿ ಪಾದ, ಅಪ್ಪುವಿನಲ್ಲಿ ಗುಹ್ಯ, ಪೃಥ್ವಿಯಲ್ಲಿ ಪಾಯು ಇಂತಿವು ಪೃಥ್ವಿಯ ಅಂಶಗಳು.

ಇನ್ನು ಆತ್ಮನಲ್ಲಿ ಆಕಾಶಭಾವ, ಆತ್ಮನಲ್ಲಿ ವಾಯುಚೇತನ, ಆತ್ಮನಲ್ಲಿ ಅಗ್ನಿಹೃದಯ, ಆತ್ಮನಲ್ಲಿ ಅಪ್ಪು, ತೃಪ್ತಿ, ಆತ್ಮನಲ್ಲಿ ಪೃಥ್ವಿಮನನ ಇಂತಿವು ಆತ್ಮನ ಪಂಚೀಕೃತಿಗಳು. ಆಕಾಶದಲ್ಲಿ ಆಕಾಶಜ್ಞಾನ, ಆಕಾಶದಲ್ಲಿ ವಾಯು ಸಮಾನ, ಆಕಾಶದಲ್ಲಿ ಅಗ್ನಿ ಶ್ರೋತ್ರ, ಆಕಾಶದಲ್ಲಿ ಅಪ್ಪುಶಬ್ದ, ಆಕಾಶದಲ್ಲಿ ಪೃಥ್ವಿವಾಕು ಇಂತಿವು ಆಕಾಶದ ಪಂಚೀಕೃತಿಗಳೂ, ವಾಯುವಿನಲ್ಲಿ ಆಕಾಶಮನ, ವಾಯುವಿನಲ್ಲಿ ವಾಯುವ್ಯಾನ, ವಾಯುವಿನಲ್ಲಿ ಅಪ್ಪುಸ್ಪರ್ಶನ, ವಾಯುವಿನಲ್ಲಿ ಪೃಥ್ವಿ ಪಾಣಿ ಇಂತಿವು ವಾಯುವಿನ ಪಂಚೀಕೃತಿಗಳೂ, ಅಗ್ನಿಯಲ್ಲಿ ಆಕಾಶಬುದ್ಧಿ, ಅಗ್ನಿಯಲ್ಲಿ ವಾಯುಉಹಾನ, ಅಗ್ನಿಯಲ್ಲಿ ಅಗ್ನಿನೇತ್ರ, ಅಗ್ನಿಯಲ್ಲಿ ಅಪ್ಪುರೂಪು, ಅಗ್ನಿಯಲ್ಲಿ ಪೃಥ್ವಿವಾದ, ಇಂತಿವು ಅಗ್ನಿಯ ಪಂಚೀಕೃತಿಗಳು, ಅಪ್ಪುವಿನಲ್ಲಿ ಆಕಾಶ ಚಿತ್ತ, ಅಪ್ಪುವಿನಲ್ಲಿ ವಾಯು ಅಪಾನ, ಅಪ್ಪುವಿನಲ್ಲಿ ಅಗ್ನಿ ಜಿಹ್ವೆ, ಅಪ್ಪುವಿನಲ್ಲಿ ಅಪ್ಪುರಸ, ಅಪ್ಪುವಿನಲ್ಲಿ, ಪೃಥ್ವಿಗುಹ್ಯ ಇಂತಿವು ಅಪ್ಪುವಿನ ಪಂಚೀಕೃತಿಗಳು, ಪೃಥ್ವಿಯಲ್ಲಿ ಆಕಾಶ ಅಹಂಕಾರ, ಪೃಥ್ವಿಯಲ್ಲಿ ವಾಯುಪ್ರಾಣ, ಪೃಥ್ವಿಯಲ್ಲಿ ಅಗ್ನಿಘ್ರಾಣ, ಪೃಥ್ವಿಯಲ್ಲಿ ಅಪ್ಪುಗಂಧ, ಪೃಥ್ವಿಯಲ್ಲಿ ಪೃಥ್ವಿಪಾಯು ಇಂತಿವು ತೃತೀಯ ಪಂಚೀಕೃತಿಗಳು, ಇವು ಶರಣಗಂಗೆ ಜ್ಞಾನೋಪಕರಣ, ಸ್ವರೂಪವಾಗಿಹವು.

 

ತತ್ತ್ವ ಪಂಚೀಕರಣೋದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ