ಇಂತೀ ತತ್ತ್ವ ಕರಣಂಗಳ ಪರಶಿವನ ಮುಖದಿಂ ಜನಿಸಿದ ಪ್ರಣವ ಪಂಚಾಕ್ಷರಿಯಿಂ ನಿವೃತ್ತಿ ಮುಖವನೈದಿದ ಮಂತ್ರ ಪಂಚೀಕರಣೋತ್ಪತ್ತಿಯ ನಿರ್ದೇಶನವೆಂತೆಂದೊಡೇ ಯ- ಓಂ, ಭಾವ, ಯ-ಯ ಜ್ಞಾನ ಯಾ-ವ ಮನ, ಯ-ಶೀ ಬುದ್ಧಿ ಯ-ಮ ಚಿತ್ತ, ಯ-ನ ಅಹಂಕಾರ ಇಂತಿವು ಯಕಾರದಂಶಗಳು. ವಾ- ಓ ಚೇತನ, ವಾ-ಯ ಸಮಾನ, ವಾ-ವಾ-ವ್ಯಾನ, ವಾ-ಶಿ ಉದಾನ, ವಾ-ಮ-ಪಾನ, ವಾ-ನ ಪ್ರಾಣ ಇಂತಿವು ವಕಾರದಂಶಗಳು. ಶಿ-ಓಂ ಹೃದಯ ಶಿ-ಯ ಶ್ರೋತ್ರ, ಶ-ವಾ ತ್ವಕ್ಕು, ಶಿ-ಶಿ ನೇತ್ರ, ಶಿ-ಮ ಜಿಹ್ವೆ, ಶಿ-ನ ಘ್ರಾಣ, ಇಂತಿವು ಶಿಕಾರದಂಶಂಗಳು. ಮ-ಓಂ ತೃಪ್ತಿ, ಮ-ಯ ಶಬ್ದ, ಮ-ನ ಸ್ಪರ್ಶನ, ಮ-ಶೀ ರೂಪು, ಮ-ಮ ರಸ, ಮ-ನ ಗಂಧ ಇಂತಿವು ಮಕಾರದಂಶಂಗಳು. ನ-ಓಂ ಮನನ ನ-ಯ ವಾಕು, ನ-ವ ಪಣೆ ನ- ಶಿ ಪಾದ, ನ-ಮ, ಗುಹ್ಯ, ನ-ನ ಪಾಯು ಇಂತಿವು ನಕಾರದಂಶಂಗಳು.

ಇನ್ನು ಓಂ-ಯ ಭಾವ, ಓಂ-ವಾ ಚೇತನ, ಓಂ-ಶಿ ಹೃದಯ, ಓಂ-ಮ ತೃಪ್ತ, ಓಂ-ನ ಮನನ, ಇಂತಿವು ಓಂಕಾರದ ಪಂಚೀಕೃತಿಗಳು, ವ- ಯ ಮನ, ವ-ವ ವ್ಯಾನ, ವ-ಶಿ ತ್ವಕ್ಕು, ಮ-ಮ ಸ್ಪರ್ಶನ ವ-ನ ವಾಣಿ ಇಂತಿವು ವಕಾರದ ಪಂಚೀಕೃತಿಗಳು. ಶಿ-ಯ ಬುದ್ಧಿ, ಶೀ-ವ ಉದಾನ, ಶಿ-ಶಿ ನೇತ್ರ, ಶಿ-ಮ ರೂಪು, ಶಿ-ನ ಪಾದ ಇಂತಿವು ಶಿಕಾರದ ಪಂಚೀಕೃತಿಗಳು. ಮ-ಯ ಚಿತ್ತ, ಮ-ವ ಅವಾನ, ಮ-ಶಿ ಜಿಹ್ವೆ, ಮ-ಮ ರಸ ಮ-ನ ಗುಹ್ಯ, ಇಂತಿವು ಮಕಾರದ ಪಂಚೀಕೃತಿಗಳು. ನ-ಯ ಅಹಂಕಾರ, ನ-ವ ಪ್ರಾಣ, ನ-ಶಿ ಘ್ರಾಣ, ನ-ಮ ಗಂಧ, ನ-ನ ವಾಯುಃ ಇಂತಿವು ನಕಾರದ ಪಂಚೀಕೃತಿಗಳೂ. ಇವು ಶರಣಂಗೆ ಅರ್ಪಣ ಸಾಧನೋಪಕರಣ ಸಕೀಲಂಗಳಾಗಿಹವು.

 

ಮಂತ್ರ ಪಂಚೀಕರಣೋದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ