ಇಂತಪ್ಪ ಶಿವಯೋಗಿಯ ಮನನ ಪ್ರಾಣ ರೂಪಮಾದ ಮಂತ್ರ ಚೈತನ್ಯ ಜ್ಞಾನರೂಢಮಪ್ಪ ಷಡಾಕ್ಷರೊದ್ಧರಣೆಯ ಸಂಬಂಧವೆಂತೆಂದೊಡೆ:

ಪೂರ್ವಾಪರ ದಕ್ಷಣೋತ್ತರಕ್ಕಾಗಿ ಹದಿನಾಲ್ಕು ರೇಖೆಗಳಂ ಬರೆದು, ಎಂಭತ್ತೈದು ಭುವನವನುಳ್ಳಯಂತ್ರವೇ ಚಿದಾಂಗ, ಮಧ್ಯಭವನಸ್ತವಾದ ಅವಾಗ್ಜ ಪ್ರಣಮವೆ ಚಿತ್ ಪ್ರಾಣಲಿಂಗ, ಆ ಲಿಂಗಾಸ್ಮರಿಸುವ ೧೪ ಭವನಸ್ತವಾದ ಮಂತ್ರಾಕ್ಷರಂಗಳೇ ಲಿಂಗಜಂಗಮ ಭಾವನೆಗಳಿಂ ಭಜಿಸುವಲ್ಲಿ ಉಪಕರಣ ಸ್ವರೂಪವಾದ ವಿವರವೆಂತೆಂದೊಡೆ:

ಶಿವಭಕ್ತಿಯಲ್ಲಿ ಪ್ರೀತಿಯಾಗಿಹುದು ೧, ಅವರನಾರಾಧಿಸಿ ಸಂತೋಷಪಡಿಸುವುದು ೧, ತಾ ಲಿಂಗವನರ್ಚಿಸುವುದು ೧, ಅದಕ್ಕೆ ನಡಕ ನುಡಿಪಲ್ಲಟ, ಬೆಮರು ಉಬ್ಬುವುದು ಮೊದಲಾಗಿ ಶಿವಲಿಂಗ ನಿಮಿತ್ತ ಅಂಗ ಚೇಷ್ಠೆ ಹುಟ್ಟುವುದು ೧, ಶಿವ ಕಥೆಯನಾಗ್ರಹದಿಂ ಕೇಳುವುದು ೧, ಸ್ವರನೋಟ ಕೈಯೆಡೆಯಾಟದಲ್ಲಿ ಮಾಡುವುದು ೧, ಅನುಶೃತಿಲಿಂಗವ ನೆನಹುದು ೧, ಲಿಂಗೋಪಜೀವಕನಾಗಿಹುದು

೧, ಇಂತಿವು ಅಷ್ಠವಿಧ ಭಕ್ತಿ.

ಜಲ ೧, ಗಂಧ ೧, ಅಕ್ಷತೆ ೧, ಪುಷ್ಪ ೧, ಧೂಪ ೧, ನೈವೇದ್ಯ ೧, ತಾಂಬೂಲ
೧, ಇಂತಿವು ಅಷ್ಠವಿದಾರ್ಚನೆ.

ಲಿಂಗದಲ್ಲಿ ವಿಭೂತಿ ತಳೆವುದು ೧, ಕರಣವಂ ಮಾಡುವುದು ೧, ಸ್ನಾನವಂ ಮಾಡುವುದು ೧, ಧೂಪವ ನೆತ್ತುವುದು ೧, ಅಗ್ನಿಸೇವನೆ ಮಾಡುವುದು ೧, ಧೂಪದ ಹೊಗೆಯಲ್ಲಿ, ಮುಣಿಗಿಸುವುದು ೧, ಗಂಧವಧರಿಸುವುದು ೧, ಅಕ್ಷತೆಯ ನೀಡುವುದು ೧, ಪುಷ್ಪವನಲಂಕರಿಸುವುದು ೧, ದೀಪವ ಬೆಳಗುವುದು ೧, ನೈವೇದ್ಯವ ಸಮರ್ಪಿಸುವುದು ೧, ಇಂತಿವು ದ್ವಾದಶವಿದಾರ್ಚನೆ.

ಅರ್ಘ್ಯವು ೧, ಪಾದ್ಯವು ೧, ಅಚಮಾನ್ಯವು ೧, ಸ್ನಾನವು ೧, ಪಂಚಾಮೃತಾಭಿಷೇಕವು ೧, ದರ್ಪಣವು ೧, ಧೂಪವು ೧, ಚಾಮರವು ೧, ಆತಪತ್ರ ೧, ಗೀತವು ೧, ವಾದ್ಯವು ೧, ನೃತ್ಯವು ೧, ನಮಸ್ಕಾರವು ೧, ಜಪವು ೧, ಪ್ರದಕ್ಷಣವು ೧ ಇಂತಿವು ಷೋಡಶೋಪಚಾರಗಳು.

ಆಸನ ೧, ಆಹ್ವಾನವು ೧, ಅರ್ಘ್ಯವು ೧, ಪಾದ್ಯವು ೧, ಆಚಮಾನ ೧, ಯಜ್ಷೋಪವೀತವು, ೧, ಪುಷ್ಪಮಾಲ ೧ ಅನುಲೇಪನ ೧, ಆಭರಣವು ೧, ಚಕ್ರವು ೧, ಚಾಮರವು ೧, ಆತ ಪತ್ರವೂ ೧, ದರ್ಪಣವು ೧, ಘಂಟೆ ೧, ಶಂಖವು ೧, ಗೀತವು ೧, ವಾದ್ಯವು ೧, ನೃತ್ಯವು ೧, ಪ್ರದಕ್ಷಣವು ೧, ನಮಸ್ಕಾರವು ೧, ಸ್ತುತಿಯು ೧, ಯಾಚಿಸುವುದು ೧, ವಿಜ್ಞಾಪನವು ೧, ಸಜ್ಜಿಗೆ ಬಿಜಯಂಗೈಸುವುದು ೧, ಇಂತಿವು ಚತುರ್ವಿಂಶತಿ ಉಪಚಾರವು. ಇವು ಲಿಂಗ ಸಂಬಂಧವಾದ ಭಕ್ತಿಗಳೆಂದರಿವುದು.

ಇನ್ನು, ಮಜ್ಜನವು ೧, ವಸ್ತ್ರವು ೧, ಹಸ್ತಚಮಾನವು ೧, ತಾಂಬೂಲವು ೧, ವಸ್ತ್ರವು ೧, ತೂರ್ಯತ್ರಯವು ೧, ಮಾನಿನಯು ೧, ಭೂಷಣವು ೧, ವಾಹನವು ೧, ಗೃಹ ೧ ಇಂತಿವು ಷೋಡಶ ವಿಧವು. ಜಂಗಮ ಸಂಬಂಧವಾದ ಭಕ್ತಿಗಳೆಂದರಿವುದು.

ಇನ್ನು ಮಧ್ಯ, ಹ ಕಾರಕ್ಕೆ ಸಮ್ಮುಖವಾದ ಓಂಕಾರ, ಸಹ ಓಂ ನಮಶಿವಾಯ ಎಂದು ಬಿಡದೆ ಉಚ್ಚರಿಸಲು ಪೂರ್ವದಿಂ ದಕ್ಷಣಾಂತವಾಗಿ ಈ ೨೧ ಕ್ಕೆ ೩೬ ಪ್ರಣಮಂಗಳಹವು ಇವು ೩೬ ಅಂಗಸ್ವರೂಪವೆಂದರಿವುದು ಪಶ್ಚಿಮದಿಂ ಉತ್ತರಾಂತ್ಯವಾಗಿ ೨೧ಕ್ಕೆ ೩೬ ಪ್ರಣಮಂಗಳಹವು ಇವು ೩೬ ಭಕ್ತಿ ಸ್ವರೂಪವೆಂದರಿವುದು. ಉತ್ತರದಿಂ ಪೂರ್ವಾಂತ್ಯವಾಗಿ ೨೧ ಕ್ಕೆ ೩೬ ಪ್ರಣಮಂಗಳಹವು -ಇವು ೩೬ ಪ್ರಸಾದ ಸ್ವರೂಪವೆಂದರಿವುದು, ಬಳಿಕವರಲ್ಲಿ ಉಳಿದ ಸಕೀಲಂಗಳಡಗಿರ್ಪವು. ಮತ್ತಂ ಇವರಲ್ಲಿ ಮೂರ್ತಿ ಸಂಬಂಧವಾದದೂ ತಿಳಿಯುವುದು.

 

ಷಡಾಕ್ಷರೊದ್ಧರಣಿಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ