ಇಂತಪ್ಪ ಪರಮ ಮಂತ್ರ ಧ್ಯಾನರೂಢನಾದ ಶಿವಯೋಗಿ ನೂರೆಂಟು ಪ್ರಣವ ಸಂಬಂಧವನರಿದು ಜಪಿಸುವ ಕ್ರಮವೆಂತೆಂದೊಡೆ|

ಸಚ್ಚಿತ್ಸುಖ ಸ್ವರೂಪವಾದ ಬಸವಾಕ್ಷರತ್ರಯ ಸುನಾದ, ಬಿಂದು ಕಲಾರೂಪವಾದ ಆಟಮಾಕ್ಷರತ್ರಯ ಸತ್ತ್ಯಾದಿ ಲಕ್ಷಣವನುಳ್ಳ ಪ್ರಣವಾದಿ ಪಂಚಾಕ್ಷರವೆಂಬ ದ್ವಾದಶ ಪ್ರಣವಂಗಳಂ ಒಂಭತ್ತು ವ್ಯಾಳಿ ಪುನರುಚ್ಚರಣೆಯ ಮಾಡಲು ನೂರೆಂಟು ಪ್ರಣವಂಗಳಹವು. ಇದನರಿದು ಜಪಿಸಲು ಆತ್ಮತ್ರಯಂಗಳೆಲ್ಲವು ಬಸವಾಕ್ಷರ ರೂಪವಾದ ಗುರುಲಿಂಗ ಜಂಗಮ ಸ್ವರೂಪವಹವು, ತನುತ್ರಯಂಗಳೆಲ್ಲವು ಆಟ ಮಾಕ್ಷರ ರೂಪವಾದ ಇಷ್ಠ ಪ್ರಾಣಭಾವಲಿಂಗ ಸ್ವರೂಪವಹವು. ಷಟ್ ತತ್ವಂಗಳೆಲ್ಲವು ಷಡಾಕ್ಷರಿ ರೂಪವಾದ ಷಡ್ವಿಧಲಿಂಗ ಸ್ವರೂಪವಹುವು. ಮತ್ತಂ, ಸರ್ವತತ್ವಂಗಳೆಲ್ಲವು ಮಂತ್ರಮಯ ಲಿಂಗತತ್ತ್ವ ಸ್ವರೂಪವಾಗಿ ನಿಜ ಸಮಾಧಿ ಸಿದ್ಧಿಸಿ ಪರಶಿವಯೋಗ ಸಂಭವಿಸುವದು.

 

ನೂರೆಂಟು ಪ್ರಣಮೊದ್ಧರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ