ಇಂತಪ್ಪ ಶಿವಮಂತ್ರ ಧ್ಯಾನ ಪಾರಾಯಣನಾದ ಶಿವಯೋಗಿಕುಂಡಲಿಯೆಂಬಾ ಮಹಾನಾಡಿಯೇನಿಪ ನಾಭಿ ಪ್ರದೇಶದಲ್ಲಿ ನೆಲಸಿ, ನಿವೃತ್ತಿ ಮುಖವಾಗಿರ್ಪ ಕುಂಡಲೀಶಕ್ತಿಯ ಪ್ರವೃತ್ತಿ ಲಕ್ಷನವೆಂತೆಂದೊಡೆ:

ಕರ್ಮಾರಣ್ಯ ಪ್ರವೇಶವಾಗಿ ಜರಾಮರಣಭೀತೊಪದ್ರರೂಪವಾಗಿ ಸಮಸ್ತ ವಿಶ್ವದಲ್ಲುಳ್ಳ ಪಶುಪ್ರಾಣಿಗಳ ಮುರಿದು ನುಂಗುತ್ತಿಹ ಕಾಲನೆಂಬ ವ್ಯಾಘ್ರವೇ ಮುಖ, ಮುಂದಣ ಬಲಪಾದವೇ ಉಗ್ರಕಾರ ವಾಹ ರೂಪಾಗಿ ಭವಾರಣ್ಯ ಪರವೇಶಿಯಾಗಿ ಸಂಚಲಗುಣ ಯುತ ಸಂಬಂಧಿಯಾಗಿ ವೃಥಾ ಭ್ರಾಂತು ಲಕ್ಷಣೆಯಾಗಿ, ಭಿನ್ನದೃಷ್ಟಿಗೆ ಸ್ವರೂಪಿಣಿಯಾಗಿ, ತೃಣಪ್ರತಿ ಪತ್ತಾಗುತ್ತಿಹ ಸಂಸಾರ ಸುಖವನು, ವಿಷಯ ರಸೋದರವನು ಕೊಂಡು, ಜಗದಗಲಕ್ಕೆ ಹರಿದು ಮೋಹವೆಂಬ ಮುಖದಿಂದ ವಿಶ್ವವನಗಿದಗಿದು ತಿನ್ನುತ್ತಿಹ ಮಾಹೆಯೆಂಬ ಹರಿಣಿಯೇ ಶಿರ.

ಶೃಂಗಕರ್ನ ನಯನ ಹಿಂದಣ ಎಡದ ಪಾದದಾಕಾರ ವಾಹನರೂಪಾಗಿ ಅಹಂಕಾರವೆಂಬ ಪರ್ವತವನ್ನೇರಿ ನಿಂದು, ದುರ್ವಿವೇಕ ಮುಖಾವಲೋಕನದಿಂ ದುರ್ಮದ ಗ್ರಹಕಚಿತ್ರ ವಿಭ್ರಾಂತಿಯನ್ನುಳ್ಳ ಮೋಹವೆಂಬ ಸಿಂಹವೇ ಮುಂದಣ ಎಡದ ಪಾದ. ಅಡಿ ಹೊಟ್ಟಿನ ನಡುವಿನಾಕಾರ ವಾಹನ ರೂಪವಾಗಿ ಸಂಸಾರ ಪಾಶದಿಂ ಬಿಗಿವಡೆದು ಪರತಂತ್ರವಾದ ಜೀವವೆಂಬಾ ಪಶುವೇ ಹಿಂದಣ ಬಲದ ಪಾದ. ಮೇಲೆ ಕೆಚ್ಚಲಿನಾಕಾರ, ವಾಹನಾರೂಪವಾಗಿ ಶಂಕಾವಿಷ ಸಂಬಂಧಿಯಪ್ಪಾ ಕುಂಡಲಿ ಭುಜಂಗವೇ ಬಾಲವಾಗಿ ಪಾದಾದ್ಯವಯಷಂಗಳು. ಮನುಜಾಕಾರವಾಗಿ ನರಸತಿಯೋ, ನಗಕರ್ನಿಕೆಯೋ ಕಿನ್ನರಸ್ತ್ರೀಯೋ ಯಕ್ಷವನಿತೆಯೋ, ಮೃತ ಕುಲಜಯೋ ಇದಾವ ಸತಿಯೋ ಎಂದು ವಿವರಿಸಲಸದವಳಲ್ಲದ ದೇವತೀರ್ಯ ಮನುಷ್ಯಾಕಾರವಪ್ಪ ವಿಚಿತ್ರಂ ರೂಪದಿಂ, ಕಾಮರೂಪಿಯಾಗಿ, ಧೂರ್ತ ವಿಗ್ರಹಿದಿಂ ನಾನಾ ಚಾರಿತ್ರವ ಮುಂದಗೊಂಡು ಲೋಕಮೋಹಿನಿ, ಜಗದ್ವ್ಯಾಪಿನಿ ಅಂತರ‍್ ಮನೋರೂಪಿನಿಯಾಗಿರ್ಪಳೀ ಕುಂಡಲಿ ಶಕ್ತಿಯ ಸ್ವರೂಪು ಲಕ್ಷಣ ಸಂಬಂಧವೆಂತೆನಲು|

ಕ್ರೋಧವೆರಸಿದ ದುರ್ಮೋಹವೇ ಮುಖ, ದುರ್ವಿವೇಕವೇ ಶಿರಸ್ಸು, ದುರ್ವಾಸ ನಾ ಸ್ವೀಕಾರವೇ ನಾಸಿಕ, ದುರ್ಮುಕ್ತಿಯೇ ಮೂಗುತಿ, ದುರಾಪೇಕ್ಷೆಯೇ ಜಿಹ್ವೆ, ಸಂಕಲ್ಪ ವಿಕಲ್ಪಾದಿ ಗುಣಂಗಳೇ ದಂತಪಂಕ್ತಿಗಳು, ಕರನಮಥನಂಗಳೇ ಕೋರಿ ದಾಡಿಗಳು, ಜ್ಞಾನಾಜ್ಞಾನಂಗಳೇ ನೇತ್ರಂಗಳು, ಶೃತಾಶೃತಂಗಳೇ ಕರ್ಣಂಗಳು, ಆಚಾರನಾಚಾರಂಗಳೇ ಕರ್ಣಾಭರಣಂಗಳೂ, ದುರಹಂಕಾರ ದುರ್ಮಮಕಾರಂಗಳೇ ಕೋಡ್ಗಳು, ಅದೃಡವೇ ಕಂಟ, ಅವ್ಯಕ್ತ ನಿಷ್ಠೆಯೇ ಕಂಠಾಭರಣ ಸ್ವರಸೂತ್ರ ಮಿಡಿದಿರ್ಪ ಅಕ್ಷರ ಮಾಲೆಯೇ ಕೊರಳಹಾರ, ಕುಚಿತ್ತ ಕುಬುದ್ಧಿ ಕುಮನ ಕುಭಾವವೇ ಕರಚತುಷ್ಟಯಂಗಳು, ತದ್ಗುಣ ದೋಷಂಗಳೇ ಹಸ್ತಾಭರಣಂಗಳು, ಅಮೃತ ವಿಷಪೂರಿತವಾದ ಪಾತ್ರಾಪಾತ್ರಂಗಳೇ ಮ್ಯಾಲಣ ಹಸ್ತ ದ್ವಯದ ಕುಂಭಂಗಳು. ತಥ್ಯಾವ ಮಿಥ್ಯಾವ ಮಾಡಿ ಶುಭಾಶುಭಂಗಳಲ್ಲಿ ಲಿಖಿಸುವ ಮಹಾದಹಂಕಾರವೇ ಬಲದ ಅಧೋಹಸ್ತದ ಕಂಠ. ಪ್ರಾರಾಬ್ಧ ಕಲ್ಪಿತವಾದ ಪ್ರಕೃತಿ ಪಿಂಡ ಸಂಬಂಧವಪ್ಪ ಫಣಿಯೇ ದುಲೇಖನವೇ ಎಡದ ಅಧೋಹಸ್ತದ ಶಾಸನಪತ್ರ, ಇಹಪರದ ಭೋಗಾಭೋಗದ ಸಂಪತ್ಸುಖರಸ ಪೂರಿತವಾದ ಶುಭಾಶುಭಕರ್ಮಂಗಳೇ ಸ್ತನಂಗಳು.

ಅಲ್ಲಿಯ ಪ್ರಪಂಚಾಧ್ಯಾನವೆ ಕಂಚುಕ ತತ್ಪ್ರಪಂಚಾವಲಂಬ ನವಗರ್ಭೀಕೃತವೇ ಗರ್ಭ, ತನ್ಮಧ್ಯ ಸ್ಥಿತಿಯೇ ನಾಭಿ, ಆ ಸ್ಥಿತಿಗತಿ ಸಂಧಾನ ರತಿಯೇ ನಡುವು. ಲೋಕೋತ್ಪತ್ತಿಯೇ ಹೇತು, ಸಾಧನ ಗುಣವೇ ಗೋಪ್ಯಾಂಗ, ವರ್ಣಾಂಶಿಕ ಗುಣ ಪ್ರಪಂಚ ಲಕ್ಷಣವನುಳ್ಳ ಆಜ್ಞಾನವೇ ಉಟ್ಟ ಪಟ್ಟಾವಳಿ, ಸಪುರ ವಸ್ತ್ರ, ದುರ್ಭಾವ ಪ್ರಕೃತಿಯೇ ಮಧ್ಯಾವರಣ, ದುರಾಚಾರ ದುಚ್ಚಾರಿತ್ರ್ಯವೇ ಕೀಳು ಮ್ಯಾಲಣ ಚರಣದ್ವಯಂಗಳು, ತತ್ಸಂಬಂಧವಾದ ಕುಟಿಲ ಕುಹಕ ಗುಣದೋಷಂಗಳೆ ಪಾದ್ಯಾವರಣಂಗಳು, ಸಾಧಕರ ಸಾಧಿಸುವ ವಿಜಯ ವಿಶಾಲ ಪ್ರತಾಪಗುಣವೇ ಬಿರಿದಿನಕಾಲಪೆಂಡೆ, ನಿಲುವ ತೊಡರು ಭಾಪುಲಿಗಳೂ, ಕ್ರೋಧವೆಂಬ ಹುಲಿ, ಮೊಹವೆಂಬ ಸಿಂಹ, ಜೀವವೆಂಬ ಪಶು, ಮಾಯೆಯೆಂಬ ಹರಿಣಿ ಈ ನಾಲ್ಕು ವಾಹನಂಗಳು, ಅಧರ್ಮ, ಅಜ್ಞಾನ, ಅವೈರಾಗ್ಯ, ಅನ್ಯಶ್ವರ್ಯ ಈ ನಾಲ್ಕು ಶರಣಂಗಳು, ಭೋಕ್ತ್ರೃ ಕರ್ಮ ಸ್ಥಿತಿಯೇ ಕೆಚ್ಚಲು, ಧರ್ಮಾರ್ಥ ಕಾಮ ಮೋಕ್ಷಂಗಳೇ ಸ್ತನಂಗಳು, ಆ ಸ್ತನ್ಯಪಾನ ಸ್ವೀಕೃತರಪ್ಪ ಜೀವರಾಶಿಗಳೇ ಭವಾಂಬೋರಾಶಿ ಕ್ರೀಡಿತ ಮತ್ಸ್ಯಂಗಳು,

ಮತ್ತಂ, ಶಂಖಾವಿಷ ಸಂಬಂಧವಪ್ಪ ಚತುರ್ದಸೇಂದ್ರಿಯಂಗಳೇ ಮುಖವಾಗಿ ಅರಿಷಡ್ ವರ್ಗಗಳೇ ವಡಲಾಗಿ, ಪ್ರಕೃತಿಗುಣವೇ ಬಾಲವಾಗಿ ಪಂಚಭೂತ ಗುಣಮನೆ ಬುದ್ಧಿ ಅಹಂಕಾರವೆಂಬ ಷಷ್ಠ ಪ್ರಕೃತಿಯಂ ಪಂಚತನ್ಮಾತ್ರ ಪ್ರಕೃತಿ ಮಹತ್ವವೆಂಬ ಸಪ್ತ ಕುಟಿಲಾಕಾರದಿಂದಾಹ್ಯ ಲೇಖನದಂತೆ ಚೌಪದಿಷ್ಠಿನವೋಲ್ ಬಾಲವ ಬ್ರಹ್ಮ ನಾಡಿಯತ್ತ ನೀಡಿ, ನಾಭಿಯೊಳ್ ತೆಕ್ಕೆಯ ನಿಕ್ಕಿ ಮುಖಹರಿದ್ವಾರದಲ್ಲಿರಿಸಿ ಜನನ ಹೇತುವಿನಿನ್ನಾದ ಬಿಂದು ರೂಪವಾದ ಕಾಲಕೂಟ ವಿಷಯವನು ಗುಳಿ ಸಂಹರ ಕಾರಣವಾಗಿ ಲೋಕೋಪದ್ರವ ಮಾಡತ್ತಿಹ ಬಾಲವಾಗಿರ್ಪ ಕುಂಡಲೀ ಸರ್ಪನಾ ತೊಡೆಯಕಾಣಾ, ಕಾಲಸಂಧಿಯಲ್ಲಿ ಸಿಲ್ಕಿಸಿ ತಲೆಯತ್ತಲೀಯದೆ ಅಜ್ಞಾನ ವೆಂಬಲಗಿ ನಿಂದಲುಕಿಸಿ ಕೊಂಡಿರ್ಪಳ, ಮರಣರುಜೆರೂಪವಾದ ಕಾಲಮೃತ್ಯು ಅಪಮೃತ್ಯುಗಳೆರಡು ಎಡಬಲದ ಶಿರದ್ವಯಂಗಳು.

ಮತ್ತಂ, ಇದನಾವರ್ಸಿಸಿಕೊಂಡು ವಿಷಮ ವಿಷಯ ಸಂಸಾರ ಜಲದಿಂ ಷಡೊರ್ಮೆ, ಷಡ್ಬ್ರಮೆ, ಷಡ್ಬಾವ ವಿಕಾರ, ಸಪ್ತಧಾತು, ವ್ಯಸನಂಗಳೆಂಬ ಪೇನ ತರಂಗ ಬುದ್ಬುದ ಸ್ವೀಕಾರ ವತುಳಂಗಳಿಂ ಮೂಲಹಂಕಾರವೆಂಬ ಮಠ ಕರ್ಮಠದಿಂ ಅರಿವು ಮರವೆಗಳೆಂಬತಿಮಿತಿಮಿಯಂಗಳಿಂ, ಅರಿಷಡ್ ವರ್ಗಗಳೆಂಬ ಜಲಸರ್ಪ ಜಲಗ್ರಹ, ಕರ್ಕ್ಕಟ, ಕಮಟಿ, ಮಂಡೂಕ, ಕಾಲ್ಗಡಲಿಂ, ಸಕಲ ಜೀವರಾಶಿಗಳೆಂಬ ಮೀನ್ಗಳಿಂ, ಕಾಲಕರ್ಮಕಾಮನೆಂಬ ವ್ಯಾಧರಿಂ, ಜಗಜ್ವಾಲವೆಂಬ ಚೈತ್ರಂಗಳಿಂ, ಪುಣ್ಯಪಾಪಗಳೆಂಬ ತೀರಂಗಳಿಂ, ಗರ್ಭೋದಕ ಶರಧಿಯಂತೆ ಭವಸಮುದ್ರ ಎಸಹುತ್ತಿಹುದು, ಇಂತಪ್ಪ ಕುಂಡಲಶಕ್ತಿ ನಿವೃತ್ತಿ ಮುಖವ ನೈದಿ ಮಂತ್ರ ಶಕ್ತಿಯಾದ ವಿವರವೆಂತೆಂದೊಡೆ.

 

ಅಧೋಕುಂಡಲಿ ಶಕ್ತೋದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ