ಶ್ರೀ ವೀರಶೈವ ಸಿದ್ಧಾಂತ ಸ್ಥಾಪನಾಚಾರ್ಯರಪ್ಪ ಆದ್ಯರ ಅನುಮತದಿಂ ಉದ್ಧರಿಸಿದ ಕುಟಿಲ ಕುಹಕ ಯಂತ್ರಂಗಳಲ್ಲದ| ಶಿವಜ್ಞಾನ ಸಾಧನವಪ್ಪ ಶಿವಮಂತ್ರಂ ನ್ಯಾಸ ಶಿವತತ್ತ್ವ ಸ್ಥಾಪಿತ| ಶಿವಲಿಂಗಾಂಗ ಸಂಬಂಧ ಪ್ರತಿಪಾದಕಾಗಮಗ್ರಂಥಾರ್ಥ ವಾಚ್ಯಂಗಳಿಂ| ಕೆಲವು ವಚನಂಗಳಿಂ| ಸಂಗ್ರಹಿಸಿದ ಉದ್ಧರಣೆಯ ಪಟಲವಿದು| ಶಿವಲಿಂಗಾಂಕಿತ ಶಾಸನವೆಂದು ಶಿವಶರಣರವಧರಿಪುದು| ಪ್ರಥಮದಲಿ ಅನಾದಿ ಭಕ್ತನ ಉದ್ಧರಣೆಯ ಸಂಬಂಧ||

ಸರ್ವಶೂನ್ಯ ನಿರಾಲಂಬ ವಸ್ತುವಿನ| ಚಿನ್ನಾದ, ಚಿದ್ಬಿಂದು, ಚಿತ್ಕಳೆ ಸ್ವರೂಪವಾದ| ಲಿಂಗಜಂಗಮದ ಗರ್ಭೀಕರಿಸಿಕೊಂಡಿಪ್ಪ ಚಿತ್ಕಲಾ ಸ್ವರೂಪವಾದ ಅನಾದಿ ಭಕ್ತನ ನಿಲುವೆಂತೆದೊಡೆ||

ಸತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅಖಂಡ ಬ್ರಹ್ಮ ಸ್ವರೂಪವಪ್ಪ, ಗುರು, ಲಿಂಗ, ಜಂಗಮ, ಪಾದೋಪಕ, ಪ್ರಸಾದ ಭಕ್ತಿಗಳೆಂಬ ಷಡ್ವ್ರತಾಚಾರವು| ಆಚಾರ, ನಿಷ್ಠೆ, ಜ್ಞಾನ, ಅನುಭಾವ, ಸಮರಸ, ಸಾವಧಾನ ಅಳವಟ್ಟಿ ಸರ್ವಾಂಗದಲ್ಲಿ ಸಾಹಿತ್ಯವಾಗಿ ಬಳಿಕ ಅಷ್ಟಾವರಣದಿಂದ್ದಲಂಕೃತವಾಗಿರ್ಪ| ಅನಾಧಿ ಭಕ್ತನ ಅಂಗ ಸಂಬಂಧವನ್ನುದ್ಧರಿಸುವ ಕ್ರಮವೆಂತೆಂದೊಡೆ||

ಆವದಾನೊಂದು ಶೆವ್ಯವಾದ ಪತ್ರ ಮಧ್ಯದಲಿ| ಒಂದಂಗುಲ ಪ್ರಮಾಣಿನ| ಚೌಕಮಂ ಬರೆದು| ಬಳಿಕದರ ನಟ್ಟನಡುಮಧ್ಯವೆ ಊರ್ಧ್ವ ಭಾಗಮೆನಿಸುವುದಲ್ಲಿ ‘ಹ’ ಕಾರ ಪ್ರಣಮವನು ಪರಮ ತೇಜೋರಾಶಿಯೆನಿಪ ಪರಮವಸ್ತು ಸ್ವರೂಪವೆಂದು ಬರೆದು| ಅದರ ವಾನುಭಾಗದಲ್ಲಿ ‘ಅ’ ಕಾರವ| ಪೂರ್ವಭಾಗದಲ್ಲಿ ‘ಉ’ ಕಾರವ| ಪಶ್ಚಿಮಭಾಗದಲ್ಲಿ ‘ಮ’ +ಕಾರವ| ದಕ್ಷಿಣಭಾಗದಲ್ಲಿ ‘ಓ’ ಕಾರವನಾದೊಡೆ| ಚಿನ್ನಾದ, ಚಿದ್ಬಿಂದು, ಚಿತ್ಕಲಾ ತೇಜೋಮಯವಪ್ಪ ಚಿತ್ಪ್ರಾಣ, ಚಿದ್ಗಂಗ, ಚಿತ್ಸಿಖಿ| ಚಿದಾಕಾಶ ಸ್ವರೂಪವೆಂಬ ಭಾವನೆಯಿಂ ಬರೆಯಲದು| ಸೂಕ್ಷ್ಮಕರ್ನ್ನಿಕಾವರಣ| ಕಾರಣ ತನು ಸಂಬಂಧವೆನಿಸಿತ್ತು||

ಬಳಿಕಾ ಚೌಕಮಂ ಬಳಸಿ ಅರ್ಧಾಂಗುಲ ಪ್ರಮಾಣವ ಹೆಚ್ಚಿಸಿ| ಮತ್ತೊಂದು ಚೌಕಮಂ ಬರೆದು| ಮಧ್ಯ ನೀಳರೇಖೆಗಳೆರಡರ ಪೂರ್ವಪಟದ ತುದಿಗಳನ್ನು ಉನ್ನತವಂ ಮಾಡಲು| ಸಮದಿ ಸಮದ ಮನೆಗಳು ನಾಲ್ಕು ಹುಟ್ಟುವವದರೊಳು||

ಪೂರ್ವದಿಕ್ಕಿನ ಮನೆಯಲ್ಲಿ ಬಸವಕ್ಷರವಾ| ಆತ್ಮತ್ರಯವ| ಲಿಂಗತ್ರಯ ಸ್ವರೂಪವೆಂದು| ಪಶ್ಚಿಮ ದಿಕ್ಕಿನ ಮನೆಯಲ್ಲಿ ಅಟಮಾಕ್ಷರವಾ|ತನುತ್ರಯ| ಅಂಗತ್ರಯ ಸ್ವರೂಪವೆಂದು ವಿಮುಖವಾಗಿ ಬರೆವುದು| ದಕ್ಷಿಣ ದಿಕ್ಕಿನ ಮನೆಯಲ್ಲಿ ಒಂದರಿದೊಂದು ಊರ್ಧ್ವ ಮುಖವಾಗಿ ಷಟ್ವ್ರಾಸಾದ ಪ್ರಣಮಂಗಳಂ| ಷಟ್ಕರು ಷತ್ಸಾದಾಖ್ಯ ಲಿಂಗ ಸ್ವರೂಪವೆಂದು| ಉತ್ತರ ದಿಕ್ಕಿನ ಮನೆಯಲ್ಲಿ| ಒಂದರಿಂದೊಂದು ಅಧೋಮುಖವಾಗಿ ಷಡ್ವಿಧಮೂಲ ಪ್ರಣಮಂಗಳಂ| ಷಟ್ ತತ್ವ, ಷಡ್ವಿಧ, ಚಿದಂಗ ಸ್ವರೂಪವೆಂದು ಬರೆಯಲದು ಹೃದಯಂತಸ್ಥ್ಯವಾದ ಕರ್ನ್ನಿಕಾವರ್ಣ| ಕಾರಣ ಸೂಕ್ಷ್ಮತನು ಸಂಬಂಧವೆನಿಸುವುದು||

ಬಳಿಕಾ ಚೌಕದ ಅಷ್ಟದಿಕ್ಕುಗಳಲ್ಲಿ ಮಧ್ಯ ಚೌಕದ ಪ್ರಮಾಣನ ಮನೆಗಳ ನಾಲ್ಕುನಾಲ್ಕಾಗಿ| ಮೂವತ್ತೆರಡು ಮನೆಗಳಂ ಪೂರ್ವಾಪರಮನೆಗಳೆರಡರ ಮೇಲೆ ಎರಡು ಮನೆಗಳಂ ಬರೆದು| ಅದರೊಳು| ಈಶಾನ್ಯ ಇಂದ್ರಾಗ್ನಿಗಳ ಮೇಲೆ ಎರಡೆರಡು ಮನೆಗಳ ಕ್ರಮದಿಂ ನಮಃ ಶಿವಾಯ ಓಂ ಎಂಬ ನಕಾರ ಷಡಾಕ್ಷರಂಗಳಂ ಬರೆದವರಲ್ಲಿ| ಅಖಂಡತ್ವವೇ ಭಕ್ತ, ಪರಿ ಪೂರ್ಣತ್ವವೇ ಗುರು, ನಿತ್ಯತ್ವವೇ ಲಿಂಗ, ಚಿತ್ಪ್ರಾಕಾಶವೇ ಜಂಗಮ, ಪರಮಾನಂದವೇ ಪ್ರಸಾದ, ಚಿದ್ರಸವೇ ಪಾದೋದಕ, ಎಂಬ ಷಡ್ವಿಧ ಭಕ್ತ ಲಕ್ಷಣಂಗಳಂ ಸಂಬಂಧಿಸುವುದು| ಅವರಗಳ ಷಡ್ವಿಧ ಭವನಂಗಳಲ್ಲಿ| ‘ಮ’ ಶಿವಾಯ| ‘ಓಂ’ ‘ನ’ ಯೆಂಬ ‘ಮ’ ಕಾರ ಷಡಾಕ್ಷರಂಗಳಂ ಬರೆದವರಲ್ಲಿ ಪರಿಪೂರ್ಣತ್ವವೇ ಗುರು, ನಿತ್ಯತ್ವವೇ ಲಿಂಗ, ಚಿತ್ಪ್ರಾಕಾಶವೇ ಜಂಗಮ, ಪರಮಾನಂದವೇ ಪ್ರಸಾದ, ಚಿದ್ರಸವೇ ಪಾದೋದಕ, ಅಖಂಡತ್ವವೇ ಭಕ್ತ, ಎಂಬ ಷಡ್ವಿಧವು| ಗುರು ಲಕ್ಷಣಂಗಳಂ ಸಂಬಂಧಿಸುವುದು|

ಬಳಿಕಾ ವಿಧದಿಂದುಳಿದ ಮನೆಗಳಲ್ಲಿ ಶಿ, ಮ, ವಾ, ಯ, ‘ಓಂ’ ನ ಎಂಬ ಶಿಕಾರ ಷಡಾಕ್ಷರಂಗಳಂ ಬರೆದವರಲ್ಲಿ| ನಿತ್ಯತ್ವವೇ ಲಿಂಗ, ಪರಿಪೂರ್ಣತ್ವವೇ ಗುರು, ಚಿತ್ಪ್ರಾಕಾಶವೇ ಜಂಗಮ, ಪರಮಾನಂದವೇ ಪ್ರಸಾದ, ಚಿದ್ರಸವೇ ಪಾದೋದಕ, ಅಖಂಡತ್ವವೇ ಭಕ್ತನೆಂಬ ಡಡ್ವಿಧಲಿಂಗ ಲಕ್ಷಣಂಗಳಂ ಸಂಬಂಧಿಸುವುದು| ‘ವಾ’‘ಮ’‘ಶಿ’‘ಯ’‘ಓಂ’‘ನ’ ಎಂಬ ‘ವ’ ಕಾರ ಷಡಾಕ್ಷರಂಗಳಂ ಬರೆದು ಅವರಲ್ಲಿ ಚಿತ್ಪ್ರಾಕಾಶವೇ ಜಂಗಮ, ಪರಿಪೂರ್ಣತ್ವವೇ ಗುರು, ನಿತ್ಯತ್ವವೇ ಲಿಂಗ, ಪರಮಾನಂದವೇ ಪ್ರಸಾದ, ಚಿದ್ರಸವೇ ಪಾದೋದಕ, ಅಖಂಡತ್ವವೇ ಭಕ್ತ, ಎಂಬ ಷಡ್ವಿಧವು ಚರಲಕ್ಷಣಂಗಳ ಸಂಬಂಧಿಸುವುದು| ‘ಯ’‘ಮ’‘ಶಿ’‘ವ’‘ಓ’‘ನ’ ಯೆಂಬ ಯಕಾರ ಷಡಾಕ್ಷರಂಗಳಂ ಬರೆದವರಲ್ಲಿ| ಪರಮಾನಂದವೇ ಪ್ರಸಾದ, ಪರಿಪೂರ್ಣತ್ವವೇ ಗುರು, ನಿತ್ಯತ್ವವೇ ಲಿಂಗ, ಚಿತ್ಪ್ರಾಕಾಶವೇ ಜಂಗಮ, ಚಿದ್ರಸವೇ ಪಾದೋದಕ, ಅಖಂಡತ್ವವೇ ಭಕ್ತ, ಎಂಬ ಷಡ್ವಿಧವು ಶೇಷಲಕ್ಷಣಂಗಳಂ ಸಂಬಂಧಿಸುವುದು| ‘ಓಂ’‘ಮ’‘ಶಿ’‘ವಾ’‘ಮ’‘ನ’ ಯೆಂಬ ಓಂಕಾರ ಷಡಾಕ್ಷರಗಳಂ ಬರೆದವರಲ್ಲಿ ಚಿದ್ರಸವೇ ಪಾದೋದಕ, ಪರಿಪೂರ್ಣತ್ವವೇ ಗುರು, ನಿತ್ಯತ್ವವೇ ಲಿಂಗ, ಚಿತ್ಪ್ರಾಕಾಶವೇ ಜಂಗಮ, ಪರಮಾನಂದವೇ ಪ್ರಸಾದ, ಅಖಂಡತ್ವವೇ ಭಕ್ತನೆಂಬ ಷಡ್ವಿಧವು ತೀರ್ಥಲಕ್ಷಣಂಗಳಂ ಸಂಬಂಧಿಸುವುದು| ಬಳಿಕಾ ಪ್ರಕಾರದಿಂ ಮೂವ್ವತ್ತಾರಂಗ, ಮೂವ್ವತ್ತಾರು ಲಿಂಗ, ಮೂವತ್ತಾರು ಭಕ್ತಿಗಳಂ ಸಂಬಂಧಿಸಲು ಷಟ್ತ್ರಂಶಮಂತ್ರಾಚಾರ, ಲಿಂಗಾಂಗ ಸಂಬಂಧ ಸ್ವರೂಪನಿಂ | ಸ್ಥೂಲ ತನು ಸಂಬಂಧವೆನಿಸುವುದು|

ಇನ್ನು ದಕ್ಷಿಣೋತ್ತರ ಮನೆಗಳೆರಡರ ಮೇಲೆರಡೆರಡು ಮನೆಗಳಂ ಪುಟ್ಟಿಸಲು ದ್ವಾದಶಾಕೃತಿಯಾಗಿಪ್ವರ ಮೂಲೆಮೂಲೆಗಳ ತುದಿಯಲ್ಲಿ ದ್ವಾದಶದಳಂಗಳಂ ಬರೆದು| ಈಶಾನ್ಯ ದಳದಲ್ಲಿ ‘ನ’ ಕಾರವ ಅಲ್ಲಿ ಗುರುವ ಉಜ್ಞಿದಳದಲ್ಲಿ ‘ಮ’ ಕಾರವ ಅಲ್ಲಿ ಲಿಂಗವ, ದಕ್ಷಿಣ ಮನೆಗಳೆರಡರಲ್ಲಿ ‘ಶಿ’ ಕಾರ ‘’ಉ’ ಕಾರವ| ಅಲ್ಲಿ ಜಂಗಮವ, ಪ್ರಸಾದವ| ನೈರುತ್ಯದಳದಲ್ಲಿ ‘ಯ’ ಕಾರವ| ಅಲ್ಲಿ ಪಾದೋದಕವ| ವಾಯುವ್ಯದಳದಲ್ಲಿ ‘ಅ’ ಕಾರವ| ಅಲ್ಲಿ ವಿಭೂತಿಯ, ಉತ್ತರದ ಮನೆಗಳೆರಡರಲ್ಲಿ ‘ಟ’ ಕಾರ ‘ಮ’ ಕಾರವ ಬರದಲ್ಲಿ ರುದ್ರಾಕ್ಷಿ, ಪಂಚಾಕ್ಷರಿಯ ಸಂಬಂಧಿಸಲು – ಇವು ಅಷ್ಟಾವರ್ಣವೆನಿಸಿರ್ಪವು|

ಇನ್ನು ಈಶಾನ್ಯದಳದ ಮುಂದಣ ದಳವಾದಿಯಾಗಿ, ಉಳಿದ ಶೂನ್ಯದಳಂಗಳೆಂಟರಲ್ಲಿ ಪರಿವಿಡಿದೆಂಟು ತೆರನಾದ ಅಂಗಾಂಗ, ಮಂತ್ರಾಂಗ, ಶಿವಾಂಗ, ಶಕ್ತ್ಯಾಂಗ, ಬ್ರಹ್ಮಾಂಗ, ಜ್ಞಾನಾಂಗ, ಪದಾರ್ಥಾಂಗ, ಪ್ರಸಾಂಗಗಳಂ ಸಂಬಂಧಿಸಲು ಇಂತಿ ಸರ್ವಾಚಾರ ಸಂಪತ್ತು ಜ್ಞಾನ ಕ್ರಿಯಾ ಭೇದದಿಂ ಇಷ್ಟಪ್ರಾಣ ಸಂಯುಕ್ತವಾಗಿಹವು| ದೃಶ್ಯಾದೃಶ್ಯಾಂಗ, ಸಂಬಂಧವಾಗಿಹವು| ಮತ್ತಂ ಪಶ್ಚಿಮದಲ್ಲಿ ನಿರಂಜನಲಿಂಗ, ಶಿಖಿಯಲ್ಲಿ ಶೂನ್ಯಲಿಂಗ, ಬ್ರಹ್ಮರಂಧ್ರದಲ್ಲಿ ಚಿದಂಬರ, ಭೂಮಧ್ಯದಲ್ಲಿ ಶಿವಶಕ್ತಿ, ವಿಶುದ್ಧಿಯಲ್ಲಿ ಪಂಚಶಕ್ತಿ, ಪಂಚಕಲೆ, ಪಂಚಮುಖ, ಪಂಚಸಾದಾಖ್ಯ ಪಂಚನಾದ, ಪಂಚಮೂರ್ತಿ, ಅನಾಹುತದಲ್ಲಿ ಈಶ್ವರಾಷ್ಟಕ, ಮಣಿಪೂರಕದಲ್ಲಿ ಮಹೇಶ್ವರ ಪಂಚವಿಶತಿ| ಸ್ವಾಧಿಷ್ಠಾನದಲ್ಲಿ ರುದ್ರೆಕಾದಶ| ಆಧಾರದಲ್ಲಿತ್ರಯೊವಯ ಹಿರಣ್ಯ ಗರ್ಭ ವಿರಾಣ್ಮೋರ್ತಿ| ಸ್ವಾಯಕವಾಗಿಹವು| ಮತ್ತಂ, ಸೃಷ್ಟಿಕ್ರಮನಾಭ್ಯಾಂತರದಲ್ಲಿ| ಚಿದಾಕಾಶದಲ್ಲಿ ಚಿದ್ವಾಯು, ಅದರೊಳು ಚಿದಗ್ನಿ ಇದರಿಂ ಚಿಜ್ಜಲ, ಅಲ್ಲಿ ಚಿದ್ ಭೂಮಿಯುದಿಸಿ, ಸಕಲತತ್ತ್ವ ಜನನ ಸ್ಥಿತಿ ಕಾರಣವಾಗಿರ್ದು.

 

ಇಂತು ಅನಾಧಿ ಭಕ್ತನ ಉದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ