ಹೀಗೆ ಸಗುಣ ನಿರ್ಗುಣ ಸ್ವಭಾವ ಚಾರಿಕ್ರವನುಳ್ಳ| ಅನಾದಿ ಭಕ್ತನ ಅಂಗದಲ್ಲಿ ಅಲಂಕೃತಮಾಗಿ ತೋರುವ ಅಷ್ಟಾವರ್ಣದ ಜ್ಞಾನ ಸಾಧನ ಸಂಪತ್ತುವನುದ್ಧರಿಸುವ ಕ್ರಮವೆಂತೆಂದೊಡೆ||

ಚಕ್ರಾಕೃತಿಯಂ ತಿರುಹಿ ಅದರ ಮಧ್ಯದಲ್ಲಿ ಕರ್ಣಿಕಾವರ್ಣಮಂ ಬಳಸಿ, ಚತುರ್ವಿಧ ಸ್ಥಾನಭೇದ ಮಾಗಿರ್ದ ಅಷ್ಟದಳಂಗಳಂ ಬರೆದವರಲ್ಲಿ, ಪೂರ್ವದಳ ಮೊದಲುಗೊಂಡು, ತ್ರಿವಿಧ ತ್ರಿವಿಧ ದರ್ಶಭೇದವನೊಳಗೊಂಡಿರ್ಪ| ಅಷ್ಟಾವರ್ಣಮಂ ಉದ್ಧರಿಸಿ ಕೈಕಾವರ್ಣ ತಂತ್ರ ವಿಧಾನದಿಂ| ಸಂಬಂಧಿಸುವ ಭೇದವೆಂತೆಂದೊಡೆ|

ಶ್ರೀಗುರುವಿನ ಪಾದವೇ ಅವಿರಳ ಘನಲಿಂಗ, ತನ್ಮೂರ್ತಿಯೇ ಆರ್ಯನು| ತತ್ಸಂಬಂಧವಾದ ಸುಜ್ಞಾನವೇ ಚರಮೂರ್ತಿ, ಶಿವಲಿಂಗದ ಪೀಠವೇ ಗುರು, ಗೋಮುಖವೇ ಚರಮೂರ್ತಿ, ಗೋಳಕವೇ ಶಿವಲಿಂಗ, ಶ್ರೀಜಂಗಮದ ಶ್ರೀಪಾದವೇ ಅವಿರಳ ಪುನಲಿಂಗ ತನ್ಮೂರ್ತಿಯೇ ಚರಮೂರ್ತಿ, ತತ್ಸಂಬಂಧದ ಸುಜ್ಞಾನವೇ ಶ್ರೀದೇಶೀಕಾಶೇಷ, ಸ್ವಯವೇ ಮಹಾ ಘನಲಿಂಗ, ತದೃಚಿಯೇ ಚರಮೂರ್ತಿ, ಪರಿಣಾಮವೇ ಶ್ರೀಗುರು, ಪಾದೋದಕದ ಸ್ವರೂಪವೇ ಶ್ರೀಗುರು, ತಚ್ಛದ್ರರಸವೇ ಶಿವಲಿಂಗ, ಶಿವನ ಮುಖದಾನಂದವೇ ಚರಮೂರ್ತಿ, ಭಸ್ಮಸ್ವಯವೇ ಶಿವಲಿಂಗ, ತದ್ಗತಮಂತ್ರವೇ ಚರಮೂರ್ತಿ, ದ್ವಂದ್ವಗ್ರಸ್ಥ ಚೈತನ್ಯವೇ ಶ್ರೀಗುರು, ಅಕ್ಷಿಮೂಲವೇ ಶ್ರೀಗುರು ತನ್ನಾಳವೆ ಶಿವಲಿಂಗ, ತನ್ಮೂಖವೇ ಚರಮೂರ್ತಿ, ನ,ಮವರ್ಣವೇ ಶಿವಲಿಂಗ, ಶಿವಾಕ್ಷರವೇ ಚರಮೂರ್ತಿ, ‘ಯ’ಕಾರವೇ ಶ್ರೀಗುರು|

ಇನ್ನು ತತ್ಪೂರ್ವ ಸಂಬಂಧವನೇ ನಾಮಾಕ್ಷರದಲ್ಲಿ ಸಂಬಂಧಿಸಲ್ಪಟ್ಟುದದೆಂತ್ತೆಂದೊಡೆ ‘ಗು’ಕಾರವೇ ಚರ, ‘ಮ’ಕಾರವೇ ಲಿಂಗ, ದ್ವಂದ್ವೀಕರಿಸಿದ ಜ್ಞಾನವೇ ಗುರು, ಲಿಂಗಾಕಾರವೇ ಗುರು, ಬಿಂದುವೇ ಲಿಂಗ, ‘ಗ’ಕಾರವೇ ಚರ, ‘ಜ’ ಕಾರವೇ ಗುರು, ‘ಗ’ ಕಾರವೇ ಲಿಂಗ, ‘ಮ’ ಕಾರವೇ ಚರ, ‘ಪ್ರ’ಕಾರವೇ ಚರ, ‘ಸ’ಕಾರವೇ ಲಿಂಗ, ‘ದ’ ಕಾರವೇ ಗುರು, ‘ಪ’ ಕಾರ ‘ದ’ಕಾರವೇ ಗುರು, ‘ವು’ಕಾರ ‘ದ’ಕಾರವೇ ಲಿಂಗ, ಉಭಯ ಸಂಬಂಧವೇ ಚರ ‘ವೀ’ಎಂಬಕ್ಷರವೇ ಲಿಂಗ, ‘ಭೂ’ ಎಂಬ ವರ್ಣವೇ ಚರ, ‘ಶೀ’ಎಂಬ ಅಕ್ಷರವೇ ಗುರು, ‘ರು’ಕಾರವೇ ಜಂಗಮ, ‘ದ್ರಾ’ಕಾರವೇ ಗುರು, ‘ಕ್ಷಾ’ಕಾರವೇ ಲಿಂಗ, ‘ಮ’ಕಾರವೇ ಲಿಂಗ, ಬಿಂದುವೇ ಚರ, ‘ತ್ರ’ಕಾರವೇ ಗುರು|

ಮತ್ತಂ, ಶಕ್ತಿರೂಪು ಶಿವರೂಪಾದ ಕಾರಣ ಗುರು ಶಬ್ದಕ್ಕೆ ನಿರ್ವಚನ; ಲಯಸ್ಥಿತಿ ಸೃಷ್ಟಿಕಾರಣವಾದುದಾಗಿ ಲಿಂಗ ಶಬ್ದಕ್ಕೆ ನಿರ್ವಚನ, ತ್ಹ್ರೆಮೂರ್ತಿ ಸ್ವರೂಪವಾದ ಕಾರಣ| ಶರಶಬ್ದಕ್ಕೆ ನಿರ್ವಚನ, ಪ್ರಸಾದ ಭಕ್ತಿ ಮುಕ್ತಿ ಸ್ವರೂಪವಾದ ಕಾರಣ ಶೇಷಶಬ್ದಕ್ಕೆ ನಿರ್ವಚನ, ಸುಜ್ಞಾನ ದೋಷನಾಶನ ಜನ್ಮಸಹಾನ ಕರ್ಮ ಛೇದನದಿಂದುದಕ ಶಬ್ದಕ್ಕೆ ನಿರ್ವಚನ. ಶಕ್ತಿರೂಪು, ತೇಜೋರೂಪು ಶಿವರೂಪಿನಿಂಭೂತಿ ಶಬ್ದಕ್ಕೆ ನಿರ್ವಚನ, ಬಿಂದು ಕಳಾನಾದ ಶಿವವೆಂಬೀ ಚತುರ್ವಿಧ ಧಾತು ಶಬ್ದದಿಂ ರುದ್ರಾಕ್ಷ ಶಬ್ದಕ್ಕೆ ನಿರ್ವಚನ, ಚಿತ್ಕಾಳಾಮಾಲ ಪ್ರಕಾಶ ಸುನಾದ ಸುಜ್ಞಾನದಿಂ ಮಂತ್ರ ಶಬ್ದಕ್ಕೆ ನಿರ್ವಚನ, ಗುರುವೇ ಇಷ್ಟಲಿಂಗವೇ, ಪ್ರಾಣಜಂಗಮವೇ, ಭಾವ ಪ್ರಸಾದವೇ, ಚಿತ್ಕಾಯ ಪಾಮೋದಕವೇ ಶರಣ ವಿಭೂತಿಯೇ, ಅಂತರಂಗದ ಚಿತ್ಪ್ರಾಕಾಶ ರುದ್ರಾಕ್ಷಿಯೇ, ಚತುರ್ದಶ ಇಂದ್ರಿಯಂಗಳು| ಮಂತ್ರವೇ ಷಟ್ಟ್ರಕಾರವಾದ ಮಂತ್ರ ತತ್ತ್ವಕರಣಂಗಳು.

ಮುಂದೆ ಲಿಂಗಾರ್ಚನಾಕ್ರಮ| ಇಷ್ಟಲಿಂಗವೇ ಕ್ಷಕಾರ ಸ್ವರೂಪು, ಪ್ರಾಣಲಿಂಗವೇ ಓಂ ಕಾರ ಸ್ವರೂಪು, ಭಾವ ಲಿಂಗವೇ ಹ್ರೂಂ ಕಾರ ಸ್ವರೂಪು, ಮತ್ತಂ| ಇಷ್ಟಲಿಂಗದ ಪೀಠದ, ಇಷ್ಟಲಿಂಗ ಗೋಮುಖವೇ, ಪ್ರಾಣಲಿಂಗವೇ, ಗೋಳಕವೇ ಭಾವಲಿಂಗ, ತಾರೆದಂಡೆಗಳೆರಡು ಇಷ್ಟಲಿಂಗ. ಕುಂಡಲಾಕೃತಿ – ಅರ್ಧಚಂದ್ರಾಕೃತಿಗಳೆರಡು ಪ್ರಾಣಲಿಂಗ ದರ್ಪಣಾಕೃತಿ, ಜ್ಯೋತಿರಾಕೃತಿಗಳೆರಡು ಭಾವಲಿಂಗ ‘ಹ’ ಕಾರ ಬಿಂದುಗಳೆರಡು ಇಷ್ಟಲಿಂಗ, ಮಂತ್ರ ಶೃಂಗಾಗ್ನಿ ಬೀಜಂಗಳೆರಡು ಪ್ರಾಣಲಿಂಗ, ದೀರ್ಘವೊಂದೇ ಭಾವಲಿಂಗ ಇಂತೀ ವಿವಿಧ ಪ್ರಕಾರದಲ್ಲಿ ಕರ, ಮನ, ಭಾವ ಸ್ಥಲದಲ್ಲಿ ಸಂಬಂಧಿಸಿ ತ್ರಿವಿಧವಂದೇ ಎಂದರಿದು ಮಾಡುವ ಪೂಜಾವಿಧಾನವೆಂತ್ತೆಂದೊಡೆ|

ಭೂತಿ ರುದ್ರಾಕ್ಷಿ ಧಾರಣಾಲಂಕಾರವೇ ಇಷ್ಟಲಿಂಗದ ಪೂಜೆ, ಪೂಜಾ ವಿಧಾನವೇ ಇಷ್ಟಲಿಂಗದಲ್ಲಿ ನ್ಯಸ್ಥವಾದ ಪ್ರಾಣಲಿಂಗದ ಪೂಜೆ, ಶ್ರದ್ದ್ಯಾಭಕ್ತಿಯ ಇಷ್ಟಲಿಂಗದಲ್ಲಿ ಸ್ಥಾಪ್ಯವಾದ ಭಾವಲಿಂಗದ ಪೂಜೆ.

ಬಹು ಪೂಜಾಕ್ರಮ| ಅಂತರಂಗದಲ್ಲಳವಡಿಸಿ ಮಾಡುವುದು ಪ್ರಾಣಲಿಂಗದ ಪೂಜೆ, ಮಾನಸ ಮಂತ್ರೋಚರಣವೇ ಪ್ರಾಣಲಿಂಗದಲ್ಲಿ ನೆಲೆಸಿದ ಇಷ್ಟಲಿಂಗದ ಪೂಜೆ ಧ್ಯಾನಾರೂಢವೇ ಪ್ರಾಣಲಿಂಗದಲ್ಲಿ ಸಂಬಂಧವಾದ ಭಾವಲಿಂಗದ ಪೂಜೆ, ಮನೋರ್ಲಯವೇ ಭಾವಲಿಂಗದ ಪೂಜೆ, ಸುಜ್ಞಾನವೇ ಭಾವಲಿಂಗದೊಳಗಣ ಇಷ್ಟಲಿಂಗದ ಪೂಜೆ, ಪರಿಣಾಮವೇ ಭಾವಲಿಂಗದಲ್ಲಿ ಕೂಡಿದ ಪ್ರಾಣಲಿಂಗದ ಪೂಜೆ, ಮತ್ತಂ| ಅಷ್ಟಾವರ್ಣವ ಧರಿಸಿದ ಭಕ್ತನು ಭಕ್ತಿ ಭಾವ ಭರಿತನಾದ ಕಾರಣ ಭಕ್ತನೆನಿಸಿಕೊಂಡ,

ಬಳಿಕಾ ಭಕ್ತಿಯೆಂಬ ತ್ರಯಾಕ್ಷರಕ್ಕೆ ನಿರ್ವಚನ| ಶ್ರದ್ದೆ ವಿಶ್ವಾಸದಿಂ ‘ಬ’ ಕಾರವಾಯಿತು. ನಿರ್ವವಂಚಕತ್ವದಿಂ ‘ಕ’ ಕಾರವಾಯಿತು, ದೃಢ ನಿಷ್ಠೆಯಿಂ ‘ತೀ’ ಯೆಂಬಕ್ಷರವಾಯಿತು, ಇಂತಪ್ಪ ಸ್ವರೂಪದರಿವನುಳ್ಳಾತನಾದ ಕಾರಣ ಜ್ಞಾನಿಯೆನಿಸಿಕೊಂಡವನು. ಆ ಜ್ಞಾನಿ ಶಬ್ದಕ್ಕೆ ನಿರ್ವಚನ| ಶಿವತತ್ತ್ವವ ವರ್ಧನವ ಮಾಡುವುದರಿಂ ’ಜ್ಞಾ’ ಕಾರವಾಯಿತು, ಸಂಸಾರ ಪ್ರಪಂಚಲ್ಲಮಂ ಲೋಪವಮಾಡುವುದರಿಂ ’ನ’ ಕಾರವಾಯಿತು, ಇಂತಾ ಸ್ವರೂಪವಾನರಿದಾ ಚರಿಸುವಾತನೀಗ ಅನಾದಿ ಭಕ್ತನೆನಿಕೊಂಬ, ಅಂತಪ್ಪ ಅನಾದಿ ಭಕ್ತ ನಯನವೇ ಲಿಂಗ, ತನ್ಮನದ ಜ್ಞಾನವೇ ಜಂಗಮ, ಆ ಸುಜ್ಞಾನ ಪರಿಪೂರ್ಣವೇ ಶ್ರೀಗುರು, ತದ್ಬಕ್ತನೇ ಶೇಷ, ಆ ಜ್ಞಾನದ ಸಾರವೇ ಪಾದೋದಕ, ಆ ಜ್ಞಾನದ ಪ್ರಕಾಶವೇ ವಿಭೂತು, ಆಯಾ ಕರಣಂಗಳ ಮೇಲೆ ಕರದ ಜ್ಞಾನಸಾರಾಮೃತ ವೃಷ್ಟಿಯೇ ರುದ್ರಾಕ್ಷಿ, ಆ ಭಕ್ತನ ನಾಮವೇ ಮಂತ್ರ, ಇಂತಪ್ಪ ಅಷ್ಟವರ್ಣವ ಧರಿಸಿರ್ದ ಭಕ್ತನೇ ಪರಬ್ರಹ್ಮ ವಸ್ತುವೆಂದು ಶರಣೆಂದವರು, ಧನ್ಯರಹರು| ಹರಹರ ಶಿವಶಿವಾ ಜಯಜಯತು ಶರಣು ಕರುಣಾಕರ ತ್ರಾಹಿಮಾಂ ಭಕ್ತವತ್ಸಲಾ ಮತ್ಪ್ರಾಣನಾಥ ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ||

 

ಅನಾದಿ ಭಕ್ತನ ಜ್ಞಾನ ಅಷ್ಟಾವರ್ಣೋದ್ದರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ