ಇಂತಪ್ಪ ಸರ್ವಾಚಾರ ಸಂಪತ್ತಂಗವಾಗಿ ಸಕಲ ಕಲಾಮೂರ್ತಿಗಳ ಗರ್ಭೀಕರಿಸಿ ಕೊಂಡು, ಅಷ್ಟಾವರ್ಣದಿಂದಲಂಕೃತವಾಗಿ ವಿರಾಜಿಸುವ, ಅನಾದಿ ಭಕ್ತನಂತರಂಗದಲ್ಲಿ ಶಿವಧರ್ಮವೆಂಬ ಕಂದದೊಡನೆ ಕೂಡಿದ ಸುಜ್ಞಾನವೆಂಬ ನಾಳವನುಳ್ಳ ಚಂದ್ರನ ಹೋಲುವ ಕಾಂತಿಯಿಂದೆಸೆವ ನಿತ್ತ್ಯೆಶ್ವರ್ಯವೆಂಬದಳಾಷ್ಟಕಂಗಳಿಂ| ವೈರಾಗ್ಯವೆಂಬ ಕರ್ನಿಕೆಯಿಂ| ಶ್ರೀರುದ್ರಗಣಂಗಳೆಂಬ ಕಿಂಜಲ್ಕಂಗಳಿಂದೊಪ್ಪುವ ಹೃತ್ಕಮಲ ಮಧ್ಯದ ಶೀತ ರಕ್ತ ಕೃಷ್ಣವರ್ಣವನ್ನುಳ್ಳ ಚಂದ್ರಸೂರ್ಯಾಗ್ನಿ ಮಂಡಲ ತ್ರಯದ ಮೇಲೆ ಅವುಮಾಕ್ಷ್ರರತ್ರಯ ಏಕವಾದ ಪ್ರಣಮ ಪೀಠಾಗ್ರದಲ್ಲಿ ಧ್ಯಾನ ಸ್ವರೂಪವಾಗಿ ಚಿನ್ಮಯ, ಚಿದ್ರೂಪ, ಚಿದಾನಂದ, ಸುಜ್ಞಾನ ಭರಿತವೆನಿಸಿ, ಸಕಲ ತತ್ತ್ವಗರ್ಭಗರ್ಭೀಕೃತವಾದ ಅನಾದಿ ಜಂಗಮದ ಅಂಗಸಂಬಂಧವನು ಧರಿಸುವ ಕ್ರಮವೆಂತೆಂದೊಡೆ|

ಪೂರ್ವಪರ ಉತ್ತರ ದಕ್ಷಿಣಕ್ಕೆ ಹತ್ತು ಹತ್ತು ರೇಖೆಗಳೊಳಗೆ ಒಂಭತ್ತೊಂಬತ್ತಂಗಲ ಪ್ರಮಾಣಿನ ಮಧ್ಯರೇಖೆಗಳ ನಾಲ್ಕು ನಾಲ್ಕನು ಉಳುಹಿ ಮಿಕ್ಕ ರೇಖೆಗಳೆಡಬಲ ಕೊಂದೊಂದಂಗುಲ ಕಿರಿದಾಗಿ, ಪದಮಧ್ಯಸ್ಥಾನಮಂ ಬಿಟ್ಟು ಬರೆಯಲು ಐವತ್ತಾರು ಮನೆಗಳಾದವವರೊಳು ಪೂರ್ವಪರಕ್ಕೆರಡೆರಡು, ಉತ್ತರ ದಕ್ಷಿಣಕ್ಕೆ ಮುರು ಮೂರು ಮನೆಗಳಂ ಬಿಡಲು, ಮಧ್ಯದಲ್ಲಿ ನೀಳವಾಗಿ ಮೂರು ಅಡ್ಡಲಾಗಿ ಐದು ಸಾಲಿನ ಮನೆಗಳುಳಿದರ್ಪವರ ಮಧ್ಯದಲ್ಲಿ ಐದು ಅಡ್ಡ ರೇಖೆಗಳಂ| ಪೂರ್ವದಿಕ್ಕಿನ ನಾಲ್ಕುರೇಖೆಗಳ ಎರಡಂಗುಲಮಂ ಹೆಚ್ಚಿಸಿ ಎರಡಡ್ಡ ರೇಖೆಗಳಂ ಆ ಮೇಲೆ ನಡುವಣೆರಡು ರೇಖೆಗಳನೊಂದಗುಲವಹೆಚ್ಚಿಸಿ ಅಡ್ಡ ರೇಖೆಯೊಂದನು ಅದರ ತುದಿಯಲ್ಲಿ ಗೋಳಾಕಾಕಾರಮಂ, ಎಂಟು ದಿಕ್ಕಿನಲ್ಲಿ ಎಂಟು ದಳಗಳಂ ಬರೆಯಲು| ಅಂಗ ಪ್ರತ್ಯಾಂಗ ಸಾಂಗಾಂಗ ಉಪಾಂಗನ್ಯಾಸ ಮುಗೀತು| ಇನ್ನು ಮಂತ್ರನ್ಯಾಸ ಸ್ಥಳಕುಳ ಸಂಬಂಧವೆಂತೆಂದೊಡೆ| ಮೇಲಣ ಗೋಳಕಾಕಾರದ ಮನೆಯೆ ಪಶ್ಚಿಮದಲ್ಲೀ ನ್ಯಾಸವಾದ ‘ಹ’ ಕಾರವೇ ನಿತ್ಯ ನಿರಾಲಂಬ, ನಿರಂಜನ ಬ್ರಹ್ಮ| ಅದರ ಕೆಳಗಣ ಮನೆಯೇ ಶಿಖಿ, ಅಲ್ಲಿ ನ್ಯಾಸವಾದಕ್ಷರವೇ ನಿತ್ಯ, ನಿರಾಳ, ನಿಃಶೂನ್ಯ ಬ್ರಹ್ಮ| ಅದರ ಕೆಳಗಣ ದ್ವಾದಶ ಕೋಷ್ಟಂಗಳೇ ಬ್ರಹ್ಮರಂದ್ರದಲ್ಲಿ ಉತ್ತರದಿಂ ದಕ್ಷಿಣಕ್ಕಾಗಿ ಸಾಲುಗೊಂಡು ನ್ಯಾಸವಾದ ಚಿನ್ನಾದ, ಚಿದ್ಬಿಂದು, ಚಿತ್ಕಾಳ ರೂಪವಾದ ಬಸವಾಕ್ಷರ ತ್ರಯವೂ. ಸತ್ಯಾದಿ ಲಕ್ಷಣವನ್ನುಳ್ಳ ಹ್ರೂಂ, ಹ್ರಿಂ, ಹ್ರೊಂ, ಹ್ರೈಂ, ಹ್ರಾಂಹ, ಹಃ – ಎಂಬ ಷಟ್ ಪ್ರಸಾದ ಮಂತ್ರವು| ಶಿವ ಶಕ್ತ್ಯಾತ್ಮಕವಾದ ಅಟಮಾಕ್ಷರ ತ್ರಯವೆಂಬಿವು| ನಿತ್ಯ ನಿರವಯ ನಿಷ್ಕಳ ಬ್ರಹ್ಮ. ಅದರ ಕೆಳಗಣ ಮನೆಯೇ ಭ್ರೂಮಧ್ಯ ಅಲ್ಲಿ ನ್ಯಾಸವಾದ ಓಂಕಾರವೇ ನಿತ್ಯ ಪರಿಪೂರ್ಣ ಪರಂಜ್ಯೋತಿ ಪರಬ್ರಹ್ಮ|

ಮತ್ತಂ, ಪ್ರತ್ಯಾಂಗ ಸಂಬಂಧದಿಂ ವದನೆವೆನಿಸುವದು| ಅದರ ಕೆಳಗಣ ಮನೆಯು| ಅದರೆಡಬಲದ ಮನೆಗಳೆರಡು ಆತ್ಮತ್ರಯಃ ಅಲ್ಲಿ ನ್ಯಾಸವಾದ ನಾದಸುನಾದ ಮಹಾನಾದ ಸ್ವರೂಪವಾದ ಓಂ, ಅ, ಬ ಎಂಬಕ್ಷರತ್ರಯವೇ ತತ್ತ್ವತ್ರಯವು| ಅದರ ಕೆಳಗಣ ಮಧ್ಯಭವನವೇ ವಿಶುದ್ಧಿ| ಅಲ್ಲಿ ನ್ಯಾಸವಾದ ‘ಯ’ ಕಾರವೇ ವಿಜ್ಞಾನ ಬ್ರಹ್ಮ. ಅದರ ಕೆಳಗಣ ಮನೆಯೇ ಅನಾಹುತ| ಅಲ್ಲಿ ನ್ಯಾಸವಾದ ‘ವ’ ಕಾರವೇ ಆನಂದಬ್ರಹ್ಮ, ಅದರ ಕೆಳಗಣ ಮನೆಯೇ ಹೃತ್ಕಮಲ ಕರ್ನಿಕಾಕುಹರ| ಅಲ್ಲಿ ನ್ಯಾಸವಾದ ಅವಾಜ್ಞವೇ ಸರ್ವಚೈತನ್ಯಾತ್ಮಕವಾಗಿ ಕೆಳಗೆ ಬೆಳಗುವ ಪರಮಾತ್ಮ ತತ್ತ್ವ| ಅದರ ಕೆಳಗಣ ಮನೆಯೇ ಮಣಿಪೂರಕ| ಅಲ್ಲಿ ನ್ಯಾಸವಾದ ‘ಶಿ’ಕಾರವೇ ಕಲಾಬ್ರಹ್ಮ. ಬಳಿಕ ಅಂಗ ಸಂಬಂಧದಿಂ ಶರೀರ ಮಧ್ಯವೆನಿಸುವುದು ಅದರ ಕೆಳಗಣ ಮನೆಯೇ ಸ್ವಾದಿಷ್ಟಾನದಲ್ಲಿ ನ್ಯಾಸವಾದ ‘ಮ’ಕಾರವೇ ಪಿಂಡ ಬ್ರಹ್ಮ. ಅದರ ಕೆಳಗಣ ಮನೆಯೇ ಆಧಾರದಲ್ಲಿ ನ್ಯಾಸವಾದ ‘ನ’ಕಾರವೇ ಮೂರ್ತಿಬ್ರಹ್ಮ| ಅದರ ಕೆಳಗಣ ಮನೆಯು| ಅದರಡಬಲದ ಮನೆಗಳೆರಡು ಅಂಗತ್ರಯದಲ್ಲಿ ನ್ಯಾಸವಾದ ಬಿಂದು, ಚಿದ್ಬಿಂದು, ಮಹಾ ಬಿಂದು ಸ್ವರೂಪವಾದ ‘ವು’‘ಸ’‘ಕ್ಷ’ ಎಂಬ ಅಕ್ಷರತ್ರಯವೇ ಶಕ್ತಿತ್ರಯವು| ಇವೇ ನವಚಕ್ರ ಸ್ಥಾನದಲ್ಲಿ ಪೂರ್ವೋಕ್ತ ಕಲಾಮೂರ್ತಿ ಸಂಬಂಧವನ್ನರಿವುದು| ಸ್ಥಲಕುಳ ಸಂಬಂಧವನಾದೊಡೆ ಮುಂದಣ ನವಚಕ್ರೋದ್ಧರಣೆಯಲ್ಲಿ ನೋಡಿಕೊಂಬುದು| ಇಂತಿವು ಕಾರಣತನು ಸಂಬಂಧವೆಂದರಿವುದು|

ಇನ್ನು ನಾದವೆಂಬ ಪೆಸರನ್ನುಳ್ಳ ಓಂಕಾರದ ನ್ಯಾಸದ ಮನೆಯ ಕೆಳಗಣ ಷಡ್ವಿಧ ಭವನಂಗಳಲ್ಲಿ ನ್ಯಾಸವಾಗಿರ್ದು| ನಕಾರಾದಿ ಷಡ್ವರ್ನಂಗಳೆ ಸರ್ವಜ್ಞತ್ವ ಪ್ರತ್ಯತ್ವ ಅನಾದಿ ಬೋಧಕತ್ವ, ಸ್ವತಂತ್ರತ್ವ, ನಿತ್ಯತ್ವ, ಅಲುಪ್ತ ಶಕ್ತ್ಯತ್ವವೆಂದಿ ಚಿದಂಗ ಷಟ್ಸ್ಥಲವು| ಬಕಾರನ್ಯಾಸದ ಮನೆಯ ಕೆಳಗಣ ಷಡ್ವಿಧ ಭವನಂಗಳಲ್ಲಿ ನ್ಯಾಸವಾದ ಹ್ರೀಂ ಕಾರದಿ ಷಡ್ವರ್ನಂಗಳೇ ಶಿವ, ಸದಾಶಿವ, ಈಶ, ಬ್ರಹ್ಮೇಶ, ಈಶ್ವರ, ಈಶಾನ್ಯವೆಂಬ ಷಟ್ಸಾದಾಖ್ಯ ನಾಮಲಿಂಗಗಳು. ಇಂತಿವು ಸೂಕ್ಷ್ಮತನು ಸಂಬಂಧವೆಂದರಿವುದು| ಇನ್ನು ವಿಶುದ್ದಿ ಅನಾಹುತದ ಮನೆಯ ಸೋಂಕಿರ್ದ ಮನೆಗಳೆರಡ ಹೊಂದಿರ್ದ ಭುಜದ್ವಯದಲ್ಲಿ ನ್ಯಾಸವಾದ ‘ವ’ಕಾರ ‘ಯ’ಕಾರಂಗಳು. ಕೆಳಗಣ ಮನೆಗಳೆರಡು ಭುಜದ್ವಯದಲ್ಲಿ ನ್ಯಾಸವಾದ ಪಾದಸ್ಥಾನ, ಅಲ್ಲಿ ನ್ಯಾಸವಾದ ನಕಾರ ಮಕಾರಂಗಳು ಶರೀರ ಮಧ್ಯಸ್ಥವಾದ ಶಿಕಾರವು ವದನ ಸಂಬಂಧವಾದ ಓಂಕಾರವೆಂಬಿವು ಷಡ್ವಿಧ ಮಹಾತತ್ತ್ವಗಳೆನಿಸಿ ಸರ್ವಕಾರಣವಾಗಿಹವು|

ಇನ್ನು ಉತ್ತರ – ಈಶಾನ್ಯ ಮಧ್ಯವಿ ದಿಕ್ಕಿನ ಮನೆ ಮೊದಲು| ಅಗ್ನಿ, ಯಮ, ಮಧ್ಯದಿ ದಿಕ್ಕಿನ ಮನೆ ಕಡೆಯಾಗಿ ಪಂಕ್ತಿ ಪಲ್ಲಟಮಲ್ಲದೆ ಷಟ್ತ್ರಿಂಶ ಭವನಂಗಳೇ ಷಟ್ತ್ರಿಂಶ ತತ್ತ್ವಂಗಳು| ಅಲ್ಲಿ ನ್ಯಾಸವಾದ ನಕಾರಾದಿ ಷಟ್ತ್ರಿಂಶ ಮಿಶ್ರ ಪ್ರಣಮಂಗಳೇ ಷಟ್ತ್ರಿಂಶ ಅಂಗಸ್ಥಲಂಗಳು, ಅವಕ್ಕೆ ವಿವರಾ|

ಆಚಾರಾಂಗ ಗೌರವಾಂಗ, ಶಿವಾಂಗ, ಚರಾಂಗ, ಪ್ರಸಾರಾಂಗ, ಮಹಾದಾಂಗ – ಎಂಬ ಭಕ್ತನ ಅಂಗವಾರು| ಆಚಾರ ನಿಷ್ಠೆ, ಗುರುನಿಷ್ಠೆ, ಚರನಿಷ್ಠೆ, ಪ್ರಸಾದನಿಷ್ಠೆ, ಮಹಾದನಿಷ್ಠೆ – ಎಂಬ ಮಹೇಶ್ವರನ ಅಂಗವಾರು. ಆಚಾರಾವಧಾನಿ ಗೌರವಾವಧಾನಿ, ಲಿಂಗಾವಧಾನಿ, ಚರಾವಧಾನಿ, ಪ್ರಸಾದಾವಧಾನಿ, ಮಹಾವಧಾನಿ, ಎಂಬ ಪ್ರಾಣಲಿಂಗಿಯಂಗವಾರು| ಸಾದ್ಯ, ಭೇದ್ಯ, ಯೋಗ್ಯ, ಸನ್ನಹಿತ, ಮಹಾವುಭಾವ- ಎಂಬ ಆಯತ, ಸ್ವಯತ, ಸನ್ನಹಿತ, ಕಳಾಗ್ರಹಕ, ಮನೋಮಗ್ನತೆ, ಘನಸಮರಸ – ಎಂಬ ಶರಣನಂಗವಾರು| ಆಚಾರತೃಪ್ತಿ, ಗೌರವತೃಪ್ತಿ, ಲಿಂಗತೃಪ್ತಿ, ಚರತೃಪ್ತಿ, ಪ್ರಸಾದತೃಪ್ತಿ, ಮಹಾನುಭಾವ ನಿರ್ಭಾವ, ತೃಪ್ತಿ – ಎಂಬ ಐಕ್ಯನಂಗವಾರು| ಇಂತಿವರಲ್ಲಿ ಅಂತರ್ಗತವಾದ ಲಿಂಗಸ್ಥಳ ಷಟ್ತ್ರಂಶವವಕ್ಕೆ ವಿವರ|

ಕ್ರಿಯೆ, ಮಂತ್ರ, ವೇಧೆ, ಯಜನ, ಈಳನ, ನಿರೀಕ್ಷಣಾ – ಎಂಬ ಆಚಾರ ಲಿಂಗಸ್ಥಲವಾರು| ಕ್ರಿಯಾದೀಕ್ಷೆ, ಮಂತ್ರದೀಕ್ಷೆ, ಬೋಧಾದೀಕ್ಷೆ, ಪ್ರಸನ್ನದೀಕ್ಷೆ, ನಿರ್ವಾಣದೀಕ್ಷೆ – ಎಂಬ ಗುರುಲಿಂಗಸ್ಥಲವಾರು| ಕರಸ್ಥಲ, ನಯನಸ್ಥಲ, ಹೃದಯಸ್ಥಲ, ಮಂತ್ರಸ್ಥಲ, ತ್ರಿಕೂಟಸ್ಥಲ, ಲಯಸ್ಥಲ – ಎಂಬ ಶಿವಲಿಂಗಸ್ಥಲವಾರು| ಸ್ವಯ, ಸ್ವತಂತ್ರ, ಚರ, ಪರಿಣಾಮಿ, ನೀರು, ಪಾಧಿಕ, ಪರಿಪೂರ್ಣ – ಎಂಬ ಚರಲಿಂಗಸ್ಥಲವಾರು| ಇಂದ್ರಿಯಾನಂದ, ಪ್ರಾಣಾನಂದ, ಜ್ಞಾನಾನಂದ, ಭಾವಾನಂದ, ತುರ್ಯಾನಂದ, ಮಹಾದಾನಂದ – ಎಂಬ ಪ್ರಸಾದಲಿಂಗಸ್ಥಲವಾರು| ಪಿಂಡಾಕಾಶ, ಬಿಂದಾಕಾಶ, ಮಹಾದಾಕಾಶ, ಭಾವಾಗಮ್ಯ, ಸರ್ವತತ್ವಾಶ್ರಯ, ಪರಿಪೂರ್ಣಪ್ರಕಾಶ – ಎಂಬ ಮಹಾಲಿಂಗಸ್ಥಲವಾರು| ಇಂತಿವು ಸ್ಥೂಲತನು ಸಂಬಂಧವಾಗಿಹವೆಂದರಿವುದು|

ಇನ್ನು ಈಶಾನ್ಯ – ಇಂದ್ರ ದಿಕ್ಕಿನ ಮಧ್ಯದಳವಾದಿಯಾಗಿ ಅಷ್ಟದಂಗಳಗಲ್ಲಿ ನ್ಯಾಸವಾದ ‘ಬ’‘ಸ’‘ವ’‘ಆ’‘ಟ’‘ಮ’‘ಹ’ ‘ಕ್ಷ’ಎಂಬ ಅಷ್ಟಕ್ಷರಂಗಳೇ ಸತ್ತು ಚಿತ್ತಾನಂದ, ನಿತ್ಯ, ಪರಿಪೂರ್ಣ ತೇಜೋಮುಖನಾಮವನುಳ್ಳ ನಿರ್ಗುಣ, ಅಷ್ಟಾವರ್ಣ, ಸ್ವರೂಪವೆಂದರಿವುದು|

ಇನ್ನು ಜ್ಞಾನ ಮುದ್ರಾಲಕ್ಷಣ, ಬ್ರಹ್ಮಾಂಡವೇ ಕಿರೀಟ, ಗಗನವೇ ಮುಖ, ಸಮಸ್ತ ದಿಕ್ಕುಗಳೆ ಭುಜಂಗಳು, ಚಂದ್ರಸೂರ್ಯರೇ ನೇತ್ರಂಗಳು, ನಿರ್ವಯ ಸ್ವರೂಪವೇ ಶರೀರ ಪಾತಾಳವೇ ಪಾದಾರವಿಂದವು, ಕರಸ್ಥಲದಲ್ಲಿ ಶೂನ್ಯಲಿಂಗವು ಸಮಸ್ತ ಮೇಘಗಳೇ ಜಡೆಗಳು, ಚಂದ್ರ ಜ್ಯೋತಿಯೇ ಭಸ್ಮ ಲೇಪನವು, ಸಮಸ್ತ ವೇದಂಗಳೇ ಸತ್ಕ್ರಿಯೆಗಳು, ನಕ್ಷತ್ರಂಗಳೇ ಪುಷ್ಪಮಾಲೆ, ಕುಲಪರ್ವತಗಳೇ ರುದ್ರಾಕ್ಷ ಮಾಲಾಭರಣ, ಸಮುದ್ರಂಗಳೇ ಕಮಂಡಲ, ಸೃಷ್ಟಿಮಯವಾದ ಜಗತ್ತೇ ಕಂಥೆ, ಪೃಥ್ವಿಯೇ ಸಿಂಹಾಸನವು, ದಿವಾರಾತ್ರಿಗಳೇ ಅಕಲ್ಪಿತ ಮಟವು, ತ್ರಿಕಾಲಂಗಳೇ ಜ್ಞಾನಸಂಪತ್ತು, ಷಡುಋತುಗಳೇ ಷಟ್ಸ್ಥಲಂಗಳು, ಮಹಾಶೇಷವೇ ಕಟಿಸೂತ್ರವು ಸಮಸ್ತ ಶಿವ ಮಂತ್ರ ವಿದ್ಯೆಯೇ ಜ್ಞಾನಮುದ್ರೆ, ಮೇರುಗಿರಿಯೆ ದಂಡಿಕೋಲು, ಗುಣತ್ರಯವೇ ಕರ್ಪೂರ, ಕುಲವೇ ಶಿವಕುಲವು ನವಸ್ಪತಿಗಳೇ, ರೋಮಂಗಳು, ಇಂತಿಪ್ಪ ಅನಾದಿಜಂಗಮವು ತನ್ನ ಮುಖ, ಬಾಹು, ತೊಡೆ, ಪಾದಾದಿ ಅವಯವಂಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ ವೈಶ್ಯ, ಶೂದ್ರ ಮೊದಲಾದ ಸಕಲ ಜಗತ್ತು ನಿರ್ಮಿಸಿ, ತಾನು ಜಗದ್ಧಿತಾರ್ಥವಾಗಿ ಸಾಕಾರಮಂ ಧರಿಸಿ ಸರ್ವಲಕ್ಷಣ ಸಂಪೂರ್ಣನಾಗಿರ್ಪ ಜಂಗಮದ ಸ್ವರೂಪ ಸಂಬಂಧವೆಂತೆಂದೊಡೆ|

ಪಾದ ತಳದಲ್ಲಿ ಅತಳಲೋಕ, ಪಾದೋರ್ಧ್ವದಲ್ಲಿ ವಿಕಳಲೋಕ, ಜಂಘೆಯಲ್ಲಿ ಸುತಳಲೋಕ, ಜಾನುವಿನಲ್ಲಿ ತಳಾತಳ ಲೋಕ, ಉರುವಿನಲ್ಲಿ ಮಹಾತಳಲೋಕ, ಗುಹ್ಯದಲ್ಲಿ ರಸಾತಳಲೋಕ, ಕಟಿಯಲ್ಲಿ ಪಾತಾಳಲೋಕ, ನಾಭಿಯಲ್ಲಿ ಭೂಲೋಕ ಕುಕ್ಷಿಯಲ್ಲಿ ಭುವಲೋಕ, ಹೃದಯದಲ್ಲಿ ಸ್ವರ್ಗಲೋಕ, ವೀಕ್ಷೆಯಲ್ಲಿ ಮಹಾಲೋಕ, ಕಂಟದಲ್ಲಿ ಜನಲೋಕ, ಲಲಾಟದಲ್ಲಿ ತಪಲೋಕ, ಮೂರ್ಧ್ನಿಯಲ್ಲಿ ಸತ್ಯಲೋಕ, ಇಂತಿವಾದಿಯಾಗಿ ಬ್ರಹ್ಮಾಂಡದ ಗುಣಂಗಳೆಲ್ಲವೂ ತನುಗುಣಂಗಳಲ್ಲಿ ಅಡಗಿಸಿಕೊಂಡು ತಾನಾಜಗದ ಉತ್ಪತ್ಯ, ಸ್ಥಿತಿ, ಲಯರಹಿತನಾಗಿ ಗುಣತ್ರಯ ರೂಪವಾದ ತ್ತ್ರೈಮೂರ್ತ್ಯಾತ್ಮಿಕವೆನಿಪ ಜಂಗಮವೆಂಬ ಅಕ್ಷರತ್ರಯವೇ ನಾಮಸಂಜ್ಞೆಯಾಗಿ, ದೀರ್ಘವೇ ಶಿರಸ್ಸು. ಬಿಂದುವೇ ಮುಖ, ಹ್ರಸ್ವ ಶೃಂಗಗಳೇ ಭುಜಂಗಳು, ಹಕಾರವೇ ದೇಹ, ಆವೃತ್ತ ರೇಖೆಯೇ ಪದಂಗಳು, ಇಂತಪ್ಪ ಮಂತ್ರ ವಿಗ್ರಹ ಮೂರ್ತಿಯ ಶಿರದಲ್ಲಿ ಓಂಕಾರ, ಸೃತಿ ಪುಟದಲ್ಲಿ ಯಕಾರ, ತ್ವಕ್ಕಿನಲ್ಲಿ ವಕಾರ, ನೇತ್ರ ಯುಗ್ಮದಲ್ಲಿ ಶಿಕಾರ, ಜಿಹ್ವೆಯಲ್ಲಿ ಮಕಾರ, ನಾಸಾಪುಟದಲ್ಲಿ ನಕಾರ, ಬಳಿಕೀ ಷಡಕ್ಷರಿಯೇ ಮುಖ, ಭುಗಯುಗ ದೇಹ ಮಧ್ಯಪದದ್ವಯ, ಷಡಾಧಾರಂಗಳಲ್ಲಿ ಸಂಬಂಧವಾಗಿರ್ಪ ಕಾರಣ, ಹಸ್ತ ಪಾದ ಅಂಗುಲಿಗಳಲ್ಲಿ ಪಂಚಾಕ್ಷರಿ ನ್ಯಾಸವಾಗಿರ್ಪವು! ಇಂತೀ ಮೂವತ್ತೆಂಟ ಪ್ರಣಮ ಸ್ವರೂಪವಾಗಿ ತನ್ನತ ಸ್ಮರಿಸಿಕೊಳ್ಳುತ್ತಿರ್ದ ಜಂಗಮದ ಜಪ ಪೂಜಾ ಲಕ್ಷಣವೆಂತೆಂದೊಡೆ!

ಕರಸ್ಥಲದಲ್ಲಿ ಶಿವಲಿಂಗವು ಬಾಹ್ಯೋಪಚಾರಂಗಳಲ್ಲಿ ಲೋಲುಪ್ತವಾಗಿ, ಅಂತರಮಗ ಛೇದಿಸಿ ಷಡಾಧಾರ ಚಕ್ರಂಗಳಲ್ಲಿ ಚತುರ್ವಿಧ ಬಿಂದು ಲಿಂಗ, ಷಡ್ವಿಧ ಧಾತುಲಿಂಗ, ದಶವಿಧಕ್ಷೇತ್ರಲಿಂಗ, ದ್ವಾದಶವಿಕೃತಿಲಿಂಗ, ಷೋಡಶ ಕಲಾಲಿಂಗ, ಆತ್ಮವಿದ್ಯಾಲಿಂಗ ವೆಂದಾರು ತೆರೆನಾಗಿರ್ಪವಾ ಲಿಂಗಾಂಗಳಂತರಂಗದಲ್ಲಿ ಚಿದಕ್ಷ ಮಣಿಗಳಾಗಿರ್ಪವವದಕ್ಕೆ ವಿವರಾ| ಕಂಠಸ್ಥಾನದ ಸ್ವರಾಕ್ಷರ ಸ್ವರೂಪವಾದ ಶ್ರೀಕಂಠಾದಿ ಪದಿನಾರು ರುದ್ರರು, ವಿಕಲಾಕ್ಷರಾದಿ ದೇವತೆಗಳೆನಿಸುವ ಅನಾಹತ ಅಕ್ಷರ ಸ್ವರೂಪವಾದ ಕ್ರೋದೀಶಾದಿ ದ್ವಾದಶ ರುದ್ರರು, ಮಣಿಹಾರ ಅಕ್ಷರಸ್ವರೂಪವಾದ ದಾರುಕಾದಿ ದಶರುದ್ರರು, ಸ್ವಾದಿಷ್ಠಾನ ಸ್ವರೂಪವಾದಕ್ಸಿಖಿಯಾದಿ ಆರುರುದ್ರರು, ಆಧಾರಕ್ಷರ ಸ್ವರೂಪವಾದ ಪಿನಾಕೀಶ್ಯಾದಿ ನಾಲ್ವರು ರುದ್ರರು, ಆಜ್ಞಾ ಚಕ್ರಕ್ಷರ ಸ್ವರೂಪವಾದ ಶಿವ ಸಂವರ್ತ್ತಕದೆಂಬೀರ್ವರು ರುದ್ರರು| ತ್ರಿಶೂಲ ಕಪಾಲಂಗಳ ಧರಿಸಿ ರಕ್ತವರ್ಣ ಶರೀರದಿಂದಿರ್ಪರೀ ರುದ್ರ ಬೀಜಾಕ್ಷರಂಗಳೆ ಐವತ್ತು ಲೋಮವಿಲೋಮದೊಳೆಣಿಸೆ, ಶತರುದ್ರ ಬೀಜಂಗಳಾಗಿಹವವರಲ್ಲಿ ಓಂ ಹ್ರಾಂ ಹ್ರೀಂ| ನಮಃ ಶಿವಾಯ ಎಂಬ ಮಾಯಾಖ್ಯಂಗೊಡೆ ನೂರೆಂಟು ರುದ್ರ ಬೀಜಂಗಳಾಗಿ ಚಿದ್ರುದ್ರಾಕ್ಷಿಗಳೆಣಿಸಿರ್ಪವು ಇವು ತಾನೆ ಮರಳಿ ನೂರೆಂಟು ಶಕ್ತಿ ಬೀಜಂಗಳಾಗಿರ್ಪವದೆಂತೆಂದೊಡೆ|

ವಿಶುದ್ಯಾಕ್ಷರ ಸ್ವರೂಪವಾದ ಹರ್ನೋಧರಿ ಮೊದಲಾದ ಘೋಡಶ ಶಕ್ತಿಯರು, ವಿಶಾಲಾಕ್ಷರ ಸ್ವರೂಪಿಯರೆನಿಸುವ ಅನಾಹತಾಕ್ಷರ ಮಹಾಕಾಳಿ ಮೊದಲಾದ ದ್ವಾದಶಶಕ್ತಿಯರು, ಮಣಿಪೂರಕಾಕ್ಷರ ಸ್ವರೂಪವಾದ ವಿರಜೆ ಮೊದಲಾದ ಹತ್ತು ಶಕ್ತಿಯರು; ಸ್ವಾಧಿಷ್ಟಾನಕ್ಷರ ಸ್ವರೂಪವಾದ ವಾಗ್ಮೆಯೆ ಮೊದಲಾದ ಆರು ಶಕ್ತಿಯರು, ಆಧಾರಕ್ಷರ ಸ್ವರೂಪವಾದ ವಾಣಿ ಮೊದಲಾದ ನಾಲ್ಕು ಶಕ್ತಿಯರು, ಆಜ್ಞಾಚಕ್ರಕ್ಷರ ಸ್ವರೂಪವಾದ ವ್ಯಾಪಿನಿ ಮಾಯಾನ್ವಿತೆಯೆಂಬುಭಯ ಶಕ್ತಿಯರು, ಮಯಾಖ್ಯಂಗೂಡೆ ಮೊದಲೆಣಿಸಿದೊಳೆಣಿಸಲು ನೂರೆಂಟು ಶಕ್ತಿಗಳಾಗಿ ಚಿದ್ಗ್ರಂಥಿಗಳೆನಿಸಿ ಸಿಂಧೂರ ದೋಪಾದಿಯ ಶರೀರದಿಂ ಕೆನ್ನೈದಿಲು ಕಾಪಾಲಂಗಳಂ ಧರಿಸಲು ಪಟ್ಟ ಹಸ್ತಗಳಿಂ| ನೂರೆಂಟು ರುದ್ರರಿಗೆ ಸತಿ ಭಾವದಿಂದಿರ್ಪರೆಂಬುದರಿದು, ಬಳಿಕ ಲಿಂಗವೆ ಮಂತ್ರ, ಮಂತ್ರವೆ ಚಿತ್ತುವೆಂದು ತಿಳಿದು ಜಪಿಸಲು, ಪ್ರಾಣವಾಯು ವಿಕಾರವಳಿದ ಸುಜ್ಞಾನ ಸೂತ್ರವಾಗಿರ್ಪುದುದಕ್ಕೆ ಆ ನೂರೆಂಟು ಚಿದೃದ್ರಾಕ್ಷಿಗಳಂ ಅವರ ಮಧ್ಯದಲ್ಲಿ ನೂರೆಂಟು ಚಿದ್ಗ್ರಂಥಿಗಳಂ ಸಂಬಂಧಿಸಿಯಾದೊಡೆ ಅಂತುಮಲ್ಲದೆ ಇನ್ನೊಂದು ಪ್ರಕಾರ!

ಅಂತರಂಗದಲ್ಲಿ ಹವಳ ಮನಿಯೋಪಾದಿಯಲ್ಲಿ ಪ್ರಕಾಶಿಸುತ್ತಿರ್ದ ಊರ್ಧ್ವ ಕುಂಡಲಿಯೆಂಬ ಸೂತ್ರದಿಂದೆ ಪವಣಿಸಲು ತಕ್ಕ ರೋಹಪರೋಹದಿಂನೂರೆರಡು ವರ್ಣಂಗಳೊಳಗೆ ಹಂಸವೆಂಬೆರಡಕ್ಷರಂಗಳಂ ಮೇರುವಿಗೆ ತೆಗೆಯಲಾಗಿ ಮಿಕ್ಕ ನೂರು ವರ್ಣಂಗಳು ಅಷ್ಟಾವರ್ಗಾಕ್ಷರಂಗೂಡಿ ವೋರ್ವೊಕ್ತಕ್ರಮದಿಂ ಜಪಿಸಲು ಏಕವಿಂಶತಿ ಸಹಸ್ರ ಷಟ್ ಶತ ಜೀವಜಪವರಿತು ರೇಚಕವೇ ಪಂಚಾಕ್ಷರಿ, ಪೂರಕವೇ ಓಂಕಾರ, ಕುಂಭಕವೇ ಚಿತ್ ಶಕ್ತಿ ಸ್ವರೂಪಿಣಿ, ‘ಉ’ಕಾರ, ‘ಅ’ಕಾರ, ‘ಮ’ಕಾರ ವೆಂಬಕ್ಷರ ತ್ರಯಂಗಳನೊಳಗೊಂಡು ಶಿವಜಪವಾಯಿತು. ಅದು ನಿಮಿತ್ಯಂ, ಬಹಿರಂಗದಲ್ಲಿ ಗೋಮುಖಾವೃತ್ತವಾದ ಜಪಮಾಲಾ ಲಕ್ಷಣವನರಿದುದ್ಧರಿಸಲಾಯಿತು.

 

ಅನಾದಿ ಜಂಗಮ ಉದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ