ಇಂತಿ ಸಕಲ ನಿಷ್ಕಳ ಸ್ವಭಾವ ಚಾರಿತ್ರವನ್ನೊಳಗೊಂಡ ನಿರಾಲಂಬ ನಿಜ ಚೈತನ್ಯ ಜಂಗಮದ ಮಕುಟೋದ್ಧರಣೆಯ ಸಂಬಂಧವೆಂತೆಂದೊಡೆ|

ಮಧ್ಯ ಸ್ಥಾನದ ಶಿವಲಿಂಗಾಕೃತಿಯೇ ಶಿಖಾಗ್ರಹ ಶೂನ್ಯ ಲಿಂಗ, ಸಪ್ತಾವರಣದ ರೇಖೆಗಳೇ ಶಿರದ ಜಟಾಬಂಧ, ಅಷ್ಟೋತ್ತರ ಶತದಳಂ ನ್ಯಾಸಂಗಳೇ ಕೇಶ ಕೋಶಂಗಳು, ಇಂತಿವ್ರ ಮಂತ್ರಾಕ್ಷರ ಸಂಬಂಧವೆಂತೆಂದೊಡೆ|

ಲಿಂಗವ ಬಳಸಿರ್ದ ಬಟುವಿನಲ್ಲಿಹ ಅಷ್ಟದಳಂಗಳಲ್ಲಿ ಬಸವ, ಹ್ರಾಂ, ಹ್ರೀಂ, ಹ್ರೂಂ, ಹ್ರೆ, ಹ್ರಾಂ ಎಂಬ ಬಕರಾದಿ ಹ್ರಾಂ ಕಾರಾಂತ್ಯಮಾದ ಅಷ್ಟಾಕ್ಷರನ್ಯಾಸನಾಗಿಹವು, ಅದರಿಂ ಮ್ಯಾಲಣ ಬಟುವಿನಲ್ಲಿಹ ದ್ವಾದಶ ದಳಂಗಳಲ್ಲಿ ಹ್ರಾಂ, ಹ್ರಃ, ಅ, ಟ, ಮ, ಓಂ ನಮಃ ಶಿವಾಯನ ಹ್ರಾಂಕಾರಾದಿ ನಕಾರಾಂತ್ಯಮಾದ ದ್ವಾದಶಾಕ್ಷರ ನ್ಯಾಸವಾಗಿಹವು| ಅದರಿಂ ಮ್ಯಾಲಣ ಬಟುವಿನಲ್ಲಿಹ ಷೋಡಶ ದಳಂಗಳಲ್ಲಿ ಮ ಶಿವಾಯ ಓಂ ಹ್ರಾಂ ಹ್ರೀಂ ಹ್ರೂಂ ನಮಃ ಶಿವಾಯ ಓಂ ಹ್ರೀಂ ಶ್ರೀಂ ಎಂಬ ಮಕಾರಾದಿ ಶಿಶಾಕಾಂತ್ಯಮಾದ ಷೋಡಶಾಕ್ಷರ ನ್ಯಾಸವಾಗಿಹವು, ಅದರಿಂ ಮೇಲಣ ಬಟುವಿನಲ್ಲಿಹ ಇಪ್ಪತ್ತು ದಳಂಗಳಲ್ಲಿ ವಾಯ, ಓಂ, ಹ್ರಾಂ, ಹ್ರೀಂ, ನಮಃ, ಶಿವಾಯ ಓಂ ಹ್ರಾಂ ಹ್ರಿಂ ಹ್ರೂಂ ಹ್ರೊಂ ನಮಃ ಶಿವಾಯ| ವಕಾರಾದಿ ಯಾಕಾರಾಂತ್ಯಮಾದ ಇಪ್ಪತ್ತಕ್ಷರ ನ್ಯಾಸವಾಗಿಹವು ಇಂತಿವು ಮೂಲಮಂತ್ರಗಳೆನಿಸುವವು.

ಅದರಿಂ ಮ್ಯಾಲಣ ಬಟುವಿನಲ್ಲಿಹ ಇಪ್ಪತ್ನಾಲ್ಕು ದಳಂಗಳಲ್ಲಿ ಅ, ಆ, ಇ, ಈ, ಟ, ಟಾ, ರು, ರೂ, ಲು, ಲೂ, ಎ. ಐ, ಔ, ಅಂ, ಅಃ ಕ, ಖ, ಗ, ಘ, ಙ, ಚ, ಛ, ಜ, ಝ ಅಕಾರಾದಿ ಜಕಾರಾಂತ್ಯಮಾದ ಇಪ್ಪತ್ನಾಲ್ಕು ಅಕ್ಷರನ್ಯಾಸವಾಗಿಹವು, ಅದರಿಂ ಮ್ಯಾಲಣ ಬಟುವಿನಲ್ಲಿಹ ಇಪ್ಪತ್ತೆಂಟು ದಳಂಗಳಲ್ಲಿ ಝ,ಞ, ಟ, ಠ, ಡ, ಢ, ಣ, ತ, ಥ, ದ, ಧ, ನ, ಪ, ಫ, ಬ, ಭ, ಮ, ಯ, ರ, ಲ, ವ, ಶ, ಷ, ಸ, ಹ, ಳ, ಕ್ಷ ಅವಾಗ್ಜ| ಅವಾಗ್ಜವೆಂದೊಡೆ ವಾಚ್ಯಕ್ಕೆ ಬಾರದ ನಿರಂಜನ| ಹಕಾರ ನಾದಬಿಂದು ಸಮೇತವಾಗಿ ಸರ್ವಮಂತ್ರತತ್ವಾಧಾರ ಮಪ್ಪುದುರಿಂ| ಅಂತ್ಯಂನ್ಯಾಸ ಝಕಾರಾದಿ ಹಕಾರಾಂತ್ಯವಾದ ಇಪ್ಪತ್ತೆಂಟು ಅಕ್ಷರ ನ್ಯಾಸವಾಗಿಹವು. ಇಂತಿವರಲ್ಲಿ ಸರ್ವಮಂತ್ರಗಳಂತರ್ಗವಾದ ಕಾರಣ ಬೀಜಾಕ್ಷರ ಮಂತ್ರಗಳೆನಿಸದವು| ಇಂತಿವರ ವ್ಯುತ್ಪತ್ತ್ಯವೆಂತೆಂದೊಡೆ.

ನಿಷ್ಕಳ ಪ್ರಣಮದಿಂ ಬಸವಾಕ್ಷರ ತ್ರಯ, ಪ್ರಸಾದಾಕ್ಷರ ಷಡ್ವಿಧ, ಅ,ಟ, ಮಾಕ್ಷರತ್ರಯ, ಬೀಜಾಕ್ಷರ ಷಡ್ವಿಧ, ಮೂಲ ಪಂಚಾಕ್ಷರ, ಸ್ಥೂಲ ಪಂಚಾಕ್ಷರ, ಸೂಕ್ಷ್ಮ ಪಂಚಾಕ್ಷರ, ಮಾಯಾಖ್ಯ ಪಂಚಾಕ್ಷರ, ಪ್ರಸಾಧ ಪಂಚಾಕ್ಷರ, ನಾದಬಿಂದುವೆಂಬ ಅಕಾರ ಸಕಾರ ಅವಾಗ್ಜವೆಂಬ ನಿರಂಜನ ಹಕಾರ ಇಂತೀ ಐವತ್ತೆಂಟು ಪ್ರಣಮಂಗಳುದಿಸಿದವು. ಓಂಕಾರದಿಂ ಕ್ಷಕಾರ ’ಳ’ ಕಾರ ಹಕಾರಂಗಳು, ಮಕಾರದಿಂ ಅಕಾರಾದಿ ಷೋಡಶ ವರ್ಣಂಗಳು, ವಕಾರದಿಂ ಕಕಾರಾದಿ ದ್ವಾದಶ ವರ್ಣಂಗಳು, ಶಿಕಾರದಿಂ ದಂಡಕಾರಾದಿ ದಶವರ್ಣಂಗಳೂ, ವಕಾರದಿಂ ಬಕಾರಾದಿ ಷಡವರ್ಣಂಗಳು ನಕಾರದಿಂ ವಕಾರಾದಿ ಚತುವರ್ಣಂಗಳುದಿಸಿದವು. ಇಂತೀ ನೂರೊಂಭತ್ತು ಪ್ರಣಮಂಗಳೊಳಗೆ, ’ಅಂ’ ಕಾರ ಹಕಾರಂತರ್ಗವಾದುದರಿಂ ನೂರೆಂಟು ಪ್ರಣಮಂಗಳು ಗಣನೆಗೆ ಸಂಬಂಧವು. ಅದು ಕಾರಣ ಜಂಗಮದ ಮಕುಟವು ಸರ್ವ ಮಂತ್ರ ತತ್ವಾಲಯವೆಂದರಿವುದು.

ಇನ್ನು ಸೃಷ್ಟಿಯ ಕ್ರಮ| ಮಕುಟದಿಂ ಶೂನ್ಯ, ಆ ಶೂನ್ಯದಿಂ ಚಿದಂಬರ, ಆ ಚಿದಂಬರದಿಂ ಶಿವಶಕ್ತಿ, ಆ ಶಿವಶಕ್ತಿಯಿಂ ಪರಶಕ್ತಿ, ಆ ಪರಶಕ್ತಿಯಿಂ ಆದಿಶಕ್ತಿ, ಆ ಆದಿಶಕ್ತಿಯಿಂ ಇಚ್ಛಾಶಕ್ತಿ, ಆ ಇಚ್ಛಾಶಕ್ತಿಯಿಂ ಜ್ಞಾನಶಕ್ತಿ, ಆ ಜ್ಞಾನ ಶಕ್ತಿಯಿಂ ಕ್ರಿಯಾಶಕ್ತಿ, ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂ ನಾದ ಕೋಟಿ, ಆ ನಾದ ಪಂಚಕದ ಸಹಸ್ರಾಂಶದಿಂ ಪಂಚಸಾದಖ್ಯ, ಆ ಸದಾಖ್ಯತತ್ತ್ವದ ಸಹಸ್ರಾಂಶದಿಂ ಈಶ್ವರಾಷ್ಟಕ, ಆ ಈಶ್ವರನ ಸಹಸ್ರಾಂಶದಿಂ ಮಹೇಶ್ವರ ಪಂಚವಿಂಶತಿ, ಆ ಮಹೇಶ್ವರ ಸಹಸ್ರಾಂಶದಿಂ ರುದ್ರೇಕಾದಶ, ಆ ರುದ್ರನ ಸಹಸ್ರಾಂಶದಿಂ ವಿಷ್ಣುದಶ, ಆ ವಿಷ್ಣುವಿನ ಸಹಸ್ರಾಂಶದಿಂ ಬ್ರಹ್ಮವನ, ಆ ಬ್ರಹ್ಮವನ ಸಹಸ್ರಾಂಶದಿಂ ಸ್ಥಾವರ ಜಂಗಮಾತ್ಮಕವಾದ ಸಕಲ ಜಗದುತ್ಪತ್ತಿಯಾಗಿರ್ಪುದೆಂದರಿದು

 

ಮುಕುಟೋದ್ಧರಣಿಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ