ಇಂತು ಅನಾದಿಭಕ್ತನ ಹೃತ್ಕಮಲ ಕರ್ನಿಕಾಪೀಠದಲ್ಲಿ ಸ್ವತ ಸಿದ್ಧವಾಗಿರ್ಪ ನಿರಂಜನ ಜಂಮದ ಮಕುಟದಿಂ ಜನಿಸಿದ, ಶೂನ್ಯಲಿಂಗದಿಂದಾದ, ಚಿದಂಬರ ವನುದ್ಧರಿಸುವ ಕ್ರಮವೆಂತೆಂದೊಡೆ||

ನವರಂಗ ಚೌಕದೋಪಾದಿಯಲ್ಲಿ ಲಕ್ಷಿಸಿ ಪೂರ್ವಾಪರ ಉತ್ತರ ದಕ್ಷಿಣಕ್ಕೆ ದ್ವಾದಶ ರೇಖೆಗಳ ಹೊರ ತುದಿಯಲ್ಲಿ ತ್ರಿಶೂಲಂಗಳಂ, ಅಗ್ರದಲ್ಲಿ ಶ್ರೀಕಾರಂಗಳಂ, ಮಧ್ಯ ಚೌಕದಲ್ಲಿ ವೃತ್ತದ್ವಯಂಗಳಂ ಬರೆಯಲು ಯಂತ್ರನ್ಯಾಸ ಮುಗಿಯಿತು|

ಇನ್ನು ವರ್ಣೋದಯನ್ಯಾಸ ಕ್ರಮ. ದಿವ್ಯನಾದ ನಿರಾವರಣ ಬಿಂದು ನಿರುಪಮ ಕಲೆ ಈ ತ್ರಿವಿಧವು ಸ್ವರೂಪೀಕರಿಸಿ ಅವಾಗ್ಜಪ್ರಣಮವಾಯಿತು, ಆ ಪ್ರಣವನಾದ ಚೈತನ್ಯವೇ ಓಂಕಾರವಾಯಿತು. ಓಂಕಾರದ ಚಿನ್ನಾದವೇ ಅಕಾರ, ಚಿದ್ಬಿಂದುವೇ ‘ಉ’ಕಾರ, ಚಿತ್ಕಳೆಯೇ ‘ಮ’ಕಾರ ಈ ತ್ರಿವಿಧ ಒಂದಾಗಿ ಓಂಕಾರವಾಯಿತು. ಆ ಓಂಕಾರದ ಪಂಚಕೃತಿಗಳಿಂದುದಯವಾದ ಪಂಚಾಕ್ಷರವೇ ಲೋಮವಿಲೋಮದಿಂ ಸಕಲ ಸಂಬಂಧದಿಂ ಅವಾಗ್ಜಂಗೂಡಿ ನೂರಮೂವತ್ತಾರು ವರ್ಣಂಗಳಾದವು. ಇದರೊಳು ಹಕಾರವನೆ ಮಧ್ಯವೃತ್ತದಲ್ಲಿ ನಮಃಶಿವಾಯ, ಯವಶಮಃನ, ಶಿವಾಯ ನಮಃ ಎಂಬ ಪಂಚದಶ ವರ್ಣಂಗಳಂ ಮ್ಯಾಲಣ ವೃತ್ತದಲ್ಲಿ ಪೂರ್ವ ದಿಕ್ಕು ಬಳಿಗೊಂಡು ಬಲ ಪ್ರದಕ್ಷಿಣವಾಗಿ ಬರೆದು ಬಳಿಕಾ ಅಗ್ನಿ ದಿಕ್ಕಿನ ಮನೆಗಳಿಪ್ಪತ್ತೈದರಲ್ಲಿ ನಮಃ ಶಿವಾಯ, ವಾನಮಃ, ಶ, ಮಃ ಶಿವಾಯನ, ಯನಮಃ, ಶಿವಾ, ಶಿವಾಯನಮಃ, ಎಂಬ ಪಂಚವಿಶಂತಿ ವರ್ಣಂಗಳಂ| ಯಮದಿಕ್ಕಿನ ಮನೆಗಳೈದರಲ್ಲಿ ಹ್ರೆಂ, ಶ್ರೀಂ, ಕ್ಷೂಂ, ಸಾಂ, ಕ್ಲಿಂ ಎಂಬ ಪಂಚವರ್ಣಂಗಳಂ| ನೈರುತ್ಯ ದಿಕ್ಕಿನ ಮನೆಗಳಿಪ್ಪತ್ತೈದರಲ್ಲಿ ಯವಾಶಿವಃ,ನ, ಶಿಮಃನಯವಾ, ನಯವಾಶಿಮಃ, ವಾಶಿಮಃನಯ, ಮಃ ನಯವಾಶಿ, ಎಂಬ ಪಂಚವಿಶಂತಿ ವರ್ಣಂಗಳಂ, ವರುಣದಿಕ್ಕಿನ ಮನೆಗಳೈದರಲ್ಲಿ ಕ್ಲಿಂ, ಸಾಂ, ಓಂ, ಹ್ರೆಂ, ಕ್ಷೂಂ, ಎಂಬ ಪಂಚವರ್ಣಂಗಳಂ ವಾಯುವ್ಯ ದಿಕ್ಕಿನ ಮನೆಗಳಿಪ್ಪತ್ತೈದರಲ್ಲಿ ನವಾಮಃ ಯಶಿ, ಮಃಯಶಿನವಾ, ಶಿವವಾಮಃಯ, ವಾಮಃಯಶಿನ, ಯಶಿನವಾಮಃ ಎಂಬ ಪಂಚವಿಶಂತಿ ವರ್ಣಂಗಳಂ, ಕುಭೇರ ದಿಕ್ಕಿನ ಮನೆಗಳೈದರಲ್ಲಿ ಓಂ, ಹ್ರೆಂ, ಕ್ಷೂಂ, ಕ್ಲಿಂ, ಸಾಂ, ಎಂಬ ಪಂಚವರ್ಣಂಗಳಂ, ಈಶಾನ್ಯ ದಿಕ್ಕಿನ ಮನೆಗಳಿಪ್ಪತ್ತೈದರಲ್ಲಿ ಶಯಮಃ, ವಾನ, ವಾನ, ಶಿಯಮಃ, ಯಮಃ, ವಾನಶಿ, ನಶಿಯಮಃವಾ, ಮಃವಾನಶಿಯ, ಎಂಬ ಪಂಚವಿಶಂತಿ ವರ್ಣಂಗಳಂ, ಇಂದ್ರದಿಕ್ಕಿನ ಮನೆಗಳೈದರಲ್ಲಿ ಕ್ಷೂಂ, ಕ್ಲಿಂ, ಸಾಂ, ಶ್ರಿಂ, ಹ್ರೆಂ ಎಂಬ ಪಂಚವರ್ಣಂಗಳಂ ಬರೆಯಲು ವರ್ಣನ್ಯಾಸ ಮುಗಿಯಿತು.

ಇನ್ನು ತತ್ತ್ವಸಂಬಂಧ ಪಂಚಶಕ್ತಿ, ಪಂಚಕಲೆ, ಪಂಚಸಾದಾಖ್ಯ, ಪಂಚಮುಖ ಪಂಚಮೂರ್ತಿ, ಇಪ್ಪತ್ತೈದು ಅಗ್ನಿದಿಕ್ಕಿನ ಮನೆಗಳ ವರ್ಣಸ್ವರೂಪ| ಮಹೇಶ್ವರನ ನಿರ್ಗುಣಮೂರ್ತಿ, ಇಪ್ಪತ್ತೈದು, ನೈರುತ್ಯದಿಕ್ಕಿನ ಮನೆಗಳ ವರ್ಣ ಸ್ವರೂಪ ಪಂಚನಾದ, ಈಶ್ವರಾಷ್ಟಕ, ರುದ್ರೇಕಾದಶ, ನಿಜಾತ್ಮತತ್ತ್ವ, ಈ ಇಪ್ಪತ್ತೈದು ವರುಣದಿಕ್ಕಿನ ಮನೆಗಳ ವರ್ಣಸ್ವರೂಪು ಆತ್ಮತತ್ತ್ವ, ಇಪ್ಪತ್ತೈದು ಈಶಾನ್ಯ ದಿಕ್ಕಿನ ಮನೆಗಳ ವರ್ಣಸ್ವರೂಪು ಶ್ರೀತತ್ತ್ವ ಸಂಬಂಧವಾದ ಮೂವತ್ತಾರು ತತ್ತ್ವಂಗಳ ಮಧ್ಯವೃತ್ತದ ಹಕಾರ ಆದಿಯಾಗಿ ಮ್ಯಾಲಣ ವೃತ್ತದ ನಕಾರವ ಬಳಿಗೊಂಡು ಇಂದ್ರ ದಿಕ್ಕು ಮೊದಲಾದ ನಾಲ್ಕು ದಿಕ್ಕಿನ ಮನೆಗಳ ವರ್ಣ ಸ್ವರೂಪವೆಂದರಿವುದು|

ಇನ್ನೊಂದು ಪ್ರಕಾರ ಅಗ್ನಿ ದಿಕ್ಕಿನ ಕೋಷ್ಠಂಗಳ ಇಪ್ಪತ್ತೈದು ವರ್ಣಕ್ಕೆ ವಿವರ| ನಕಾರವೇ ಸತ್ತು, ಮಕಾರವೇ ಚಿತ್ತು, ಶಿಕಾರವೇ ಆನಂದ, ವಕಾರವೇ ನಿತ್ಯ, ಯಕಾರವೇ ಪರಿಪೂರ್ಣ ಮತ್ತಂ ವಕಾರವೇ ಲಿಂಗಕ್ಷೇತ್ರ ಸಂಜ್ಞ, ಯಕಾರವೇ ಅನಾದಿ ಸೌಗ್ನ, ನಕಾರವೇ ಪರಸೌಗ್ನ, ಮಕಾರವೇ ಗೂಢಸೌಗ್ನ ಶಿಕಾರವೇ ಶರೀರಸ್ಥಸೌಗ್ನ ಮತ್ತಂ ಮಕಾರವೇ ಪೀಠಬ್ರಹ್ಮ ಶಿಕಾರವೇ ಕಲಾಬ್ರಹ್ಮ, ವಕಾರವೇ ಆನಂದಬ್ರಹ್ಮ, ಯಕಾರವೇ ವಿಜ್ಞಾನ ಬ್ರಹ್ಮ, ನಕಾರವೇ ಮೂರ್ತಿಬ್ರಹ್ಮ. ಮತ್ತಂ ಯಕಾರವೇ ಸದಾಶಿವ, ನಕಾರವೇ ಈಶಾನ್ಯ, ಮಕಾರವೇ ಈಶ್ವರ. ಶಿಕಾರವೇ ಬ್ರಹ್ಮೇಶ್ವರ, ವ ಕಾರವೇ ಈಶ್ವರ, ಮತ್ತಂ ಶಿಕಾರವೇ ಶಿವತತ್ತ್ವ, ವಕಾರವೇ ಈಶ್ವರತತ್ತ್ವ, ಯಕಾರವೇ ಸದಾಶಿವತತ್ತ್ವ, ನಕಾರವೇ ಆತ್ಮತತ್ತ್ವ ಮಕಾರವೇ ವಿದ್ಯಾತತ್ತ್ವ.

ಇನ್ನು ಯಮದಿಕ್ಕಿನ ಕೋಷ್ಠಂಗಳ ಬೀಜಾಕ್ಷರವೈದಕ್ಕೆ ವಿವರ| ಹ್ರೆಂ ಎಂಬುದೇ ನಿರಂಜನ, ಶ್ರೀಂ ಎಂಬುದೇ ಮಹಾಸೌಗ್ನ, ಕ್ಷೂಂ ಎಂಬುದೇ ಪರಬ್ರಹ್ಮ, ಸೌಂ ಎಂಬುದೇ ಶಿವಮೂರ್ತಿ, ಕ್ಲಿಂ ಎಂಬುದೇ ಪರತತ್ತ್ವ!

ಇನ್ನು ನೈರುತ್ಯ ದಿಕ್ಕಿನ ಕೋಷ್ಠಂಗಳ ಇಪ್ಪತ್ತೈದು ವರ್ಣಕ್ಕೆ ವಿವರ. ಯಕಾರವೇ ಪರಶಕ್ತಿ, ವಕಾರವೇ ಆದಿಶಕ್ತಿ, ಶಿಕಾರವೇ ಇಚ್ಛಾಶಕ್ತಿ, ಮಕಾರವೇ ಜ್ಞಾನಶಕ್ತಿ, ನಕಾರವೇ ಕ್ರಿಯಾಶಕ್ತಿ. ಮತ್ತಂ ಶಿಕಾರವೇ ಮೂರ್ತಿಸಾದಾಖ್ಯ, ಮಕಾರವೇ ಕರ್ತೃಸಾದಾಖ್ಯ, ನಕಾರವೇ ಕರ್ಮಸಾದಾಖ್ಯ, ಯಕಾರವೇ ಶಿವಸಾದಾಖ್ಯ, ವಕಾರವೇ ಅಮೂರ್ತಿ ಸಾದಾಖ್ಯ. ಮತ್ತಂ ನಕಾರವೇ ನಿವೃತ್ತಿಕಲೆ, ಯಕಾರವೇ ಶಾಂತಾತೀತಕಲೆ, ವಕಾರವೇ ಶಾಂತಿಕಲೆ, ಶಿಕಾರವೇ ವಿದ್ಯಾಕಲೆ, ಮಕಾರವೇ ಪ್ರತಿಷ್ಠಾಕಲೆ. ಮತ್ತಂ ವಕಾರವೇ ತತ್ಪುರುಷಮುಖ, ಶಿಕಾರವೇ ಅಘೋರಮುಖ, ಮಕಾರವೇ ವಾಮದೇವಮುಖ, ನಕಾರವೇ ಸದ್ಯೋಜಾತಮುಖ, ಯಕಾರವೇ ಈಶಾನ್ಯ ಮುಖ. ಮತ್ತಂ ಮಕಾರವೇ ಅಪ್ಪು, ನಕಾರವೇ ಪೃಥ್ವಿ, ಯಕಾರವೇ ಆಕಾಶ, ವಕಾರವೇ ವಾಯು, ಶಕಾರವೇ ಅಗ್ನಿ.

ಇನ್ನು ವರುಣ ದಿಕ್ಕಿನ ಕೋಷ್ಠಂಗಳ ಬೀಜಾಕ್ಷರವೈದಕ್ಕೆ ವಿವರ : ಕ್ಲಿಂ ಎಂಬುದೆ ಶಿತ್ ಶಕ್ತಿ, ಸೌಂ ಎಂಬುದೆ ಮಹಸಾದಾಖ್ಯ, ಓಂ ಎಂಬುದೇ ಶಾಂತಾತೀತೋತ್ತರ ಕಲೆ, ಹ್ರೆಂ ಎಂಬುದೆ ಗೋಪ್ಯ ಮುಖ, ಕ್ಷೊಂ ಎಂಬುದೆ ಆತ್ಮತತ್ವ|

ಇನ್ನು ವಾಯುವ್ಯ ದಿಕ್ಕಿನ ಕೋಷ್ಠಂಗಳ ಇಪ್ಪತ್ತೈದು ವರ್ಣಕ್ಕೆ ವಿವರ : ನಕಾರವೇ ಆಸ್ತಿ, ವಕಾರವೇ ನಾಡಿ, ಯಕಾರವೇ ರೋಮ, ಮಕಾರವೇ ಮಾಂಸ, ಶೀಕಾರವೇತ್ವಕ್ಕು, ಮತ್ತಂ ಮಕಾರವೇ ರುಧಿರ, ಯಕಾರವೇ ಶ್ಲೇಷ್ಮ, ಶಿಕಾರವೇ ಶುಕ್ಲ, ನಕಾರವೇ ರಸ, ವಕಾರವೇ ಪಿತ್ತ| ಮತ್ತಂ| ವಕಾರವೇ ಯೋಗ, ಮಕಾರವೇ ವಲ್ಗನ, ಯಕಾರವೇ ವಿಯೋಗ, ಶಿಕಾರವೇ ಭಯ, ನಕಾರವೇ ರಾಗ, ವಕಾರವೇ ಲಜ್ಞೆ, ಮಕಾರವೇ ದ್ವೇಷ|

ಇನ್ನು ಕುಭೇರ ದಿಕ್ಕಿನ ಕೋಷ್ಠಂಗಳ ಬೀಜಾಕ್ಷರವೈದಕ್ಕೆ ವಿವರ : ಓಂ ಎಂಬುದೇ ಕಠಿಣ, ಹ್ರೆಂ ಎಂಬುದೇ ಮೃದು, ಕ್ಷೂಂ ಎಂಬುದೇ ಓಷ್ಠ, ಕ್ಲಿಂ ಎಂಬುದೇ ಚಲನೆ, ಸೌಂ ಎಂಬುದೇ ಶೂನ್ಯ|

ಇನ್ನು ಈಶಾನ್ಯ ದಿಕ್ಕಿನ ಕೋಷ್ಠಂಗಳ ಇಪ್ಪತ್ತೈದು ವರ್ಣಕ್ಕೆ ವಿವರ : ಶಿಕಾರವೇ ಪಾದ, ಯಕಾರವೇ ವಾಕು, ಮಕಾರವೇ ಗುಹ್ಯ, ವಕಾರವೇ ವಾಣಿ, ನಕಾರವೇ ಪಾಯು. ಮತ್ತಂ ವಕಾರವೇ ಸ್ಪರ್ಶನ, ನಕಾರವೇ ಗಂಧ, ಶಿಕಾರವೇ ರೂಪು, ಯಕಾರವೇ ಶಬ್ದ, ಮಕಾರವೇ ರಸ, ಮತ್ತಂ, ಯಕಾರವೇ ಶ್ರೋತ್ರ, ಮಕಾರವೇ ಜಿಹ್ವೆ, ವಕಾರವೇ ತ್ವಕ್ಕು, ನಕಾರವೇ ನಾಸಿಕ, ಶಕಾರವೇ ನೇತ್ರ, ಮತ್ತಂ ನಕಾರವೇ ಪ್ರಾಣ, ಶಿಕಾರವೇ ವ್ಯಾನ, ಯಕಾರವೇ ಸಮಾನ, ಮಕಾರವೇ ಅವಾನ, ವಕಾರವೇ ಉದಾನ. ಮತ್ತಂ ಮಕಾರವೇ ಬುದ್ಧಿ, ಬಕಾರವೇ ಮನ, ನಕಾರವೇ ಚಿತ್ತ, ಶಿಕಾರವೇ ಅಹಂಕಾರ, ಯಕಾರವೇ ಜ್ಞಾನ.

ಇನ್ನು ಇಂದ್ರ ದಿಕ್ಕಿನ ಮನೆಗಳ ಬೀಜಾಕ್ಷರ ವೈದಕ್ಕೆ ವಿವರ| ಕ್ಷೂಂ ಎಂಬುದೇ ಮನನ, ಕ್ಲಿಂ ಎಂಬುದೇ ತೃಪ್ತಿ, ಸೌಂ ಎಂಬುದೇ ಹೃದಯ, ಶ್ರೀಂ ಎಂಬುದೇ ಚೇತನ, ಹ್ರೆಂ ಎಂಬುದೇ ಭಾವ|

ಇನ್ನು ಎರಡನೆಯ ವೃತ್ತದ ಹದಿನೈದು ವರ್ಣಂಗಳಿಗೆ ವಿವರ : ನಕಾರವೇ ಋಗ್ವೇದ, ಮಕಾರವೇ ಯಜುರ್ವೇದ, ಶಿಕಾರವೇ ಸಾಮವೇದ, ವಕಾರವೇ ಅಥರ್ವಣವೇದ, ಯಕಾರವೇ ಗಾಯತ್ರಿ ವೇದ| ಅಲ್ಲಿಂದ ಮುಂದೆ ಯಕಾರವೇ ಮಹಾದೇವ, ವಕಾರವೇ ಭೀಮ, ಶಿಕಾರವೇ ಹರ, ಮಕಾರವೇ ಮೃಡ, ನಕಾರವೇ ಭವ, ಅಲ್ಲಿಂದ ಮುಂದೆ ಶಿಕಾರವೇ ನೀಲವರ್ಣ, ವಕಾರವೇ ಶ್ವೇತವರ್ಣ, ಯಕಾರವೇ ಸ್ಪಟಿಕ ವರ್ಣ, ನಕಾರವೇ ಪೀತವರ್ಣ, ಮಕಾರವೇ ರಕ್ತವರ್ಣ|

ಇನ್ನು ಮಧ್ಯ ವೃತ್ತದ ವರ್ಣಕ್ಕೆ ವಿವರ : ಹಕಾರವೇ ಸಹಸ್ರ ವೇದ ಉಪಮಾತೀತ, ಮಾಣಿಕ್ಯ ವರ್ಣ, ಸ್ವರೂವೆಂದರಿದು ಸಂಬಂಧಿಸುವುದು. ಮತ್ತಮೀ ಯಂತ್ರವೇ ಮಹಾದಾಕಾಶಮಯವಪ್ಪ ಕಂಥೇ, ವೃತ್ತದ್ವಯವೇ ಪ್ರಕೃತಿ ಪುರುಷ ರೂಪುವಪ್ಪ, ಕಂಠತಾಲು ರೇಖೆಗಳೇ ಗುಣತ್ರಯಗಳಿಂ ಮುಪ್ಪುರಿಗೂಡಿದ ದಾರಂಗಳು, ತ್ರಿಶೂಲಂಗಳೇ ಅವಗಾಹನ, ಪ್ರತ್ಯಾಗಾರ ದಕ್ಷಿಣಾಗ್ನಿ ಸ್ವರೂಪವಾದ ಆಯುಧ, ಸೂತ್ರಂಗಳು, ಶ್ರೀ ಕಾರಂಗಳೇ ಅಷ್ಠ ಮಹದೈಶ್ವರ್ಯ ಸ್ವರೂಪವಾದಲಂಕಾರಂಗಳು. ಅಕ್ಷರ ನ್ಯಾಸಂಗಳೇ ಸಕಲತತ್ತ್ವ ಸ್ವರೂಪವಾದ ಸೂತ್ರಕೋಶಂಗಳು, ಇಂತಿವು ಪ್ರವೃತ್ತಿ ಮಾರ್ಗವನುಳ್ಳ ಪಂಚಪ್ರಣವ ಸಂಬಂಧವೆಂದರಿವುದು. ಆ ಬಿಂದುನಾದ ಕಲೆ ಶಕ್ತಿ ಶಿವಸ್ವರೂಪವಾದ ಟ. ಆ. ಮ. ಓಂ ಎಂಬ ಪಂಚಪ್ರಣಮಂಗಳು ಪರಿವಿಡಿಯಿಂ ಜಾಗ್ರಾದಿ ಪಂಚವ್ಯವಸ್ಥೆಗಳಲ್ಲಿ ಸಂಬಂಧವಾದ ನಿವೃತ್ತಿ ಮಾರ್ಗವೆಂತೆಂದೊಡೆ|

ಇನ್ನು ಮಂತ್ರ ಸಂಬಂಧ ಮೂಲ ಪಂಚಾಕ್ಷರವಾರು, ಸ್ಥೂಲ ಪಂಚಾಕ್ಷರ ಒಂಭತ್ತು, ಸೂಕ್ಷ್ಮ ಪಂಚಾಕ್ಷರ ಐದು, ಮಾಯಾಖ್ಯ ಪಂಚಾಕ್ಷರವೆಂಟು, ಪ್ರಸಾದ ಪಂಚಾಕ್ಷರ ಹತ್ತು. ನಿರಂಜನ ಶೂನ್ಯ, ನಿಃಷ್ಕಲ, ಮೂಲ ಪ್ರಣಮವೆಂಬಿವು, ನಾಲ್ಕು ಷಡಾಕ್ಷರಮಂತ್ರವಾರು, ಆ ಷಡಕ್ಷರ ರೂಪವಾದ ಅಕಾರಾದಿ ಬೀಜಾಕ್ಷರ ಮಂತ್ರವೈವತ್ತೆರಡು ಇಂತೀ ಶತಮಂತ್ರಾಕ್ಷರಂಗಳು|

ಅಗ್ನಿದಿಕ್ಕು ಮೊದಲಾದ ನಾಲ್ಕು ದಿಕ್ಕಿನ ಮನೆಗಳ ವರ್ಣಸ್ವರೂಪ ಬ,ಸ,ವ,ಅ,ಟ,ಮ ಎಂಬ ಬೀಜಾಕ್ಷರ ಮಂತ್ರವಾರು. ಹ್ರಾಂ ಹ್ರಿಂ ಹ್ರುಂ ಹ್ರೈಂ, ಹ್ರಾಂ ಹ್ರಃ ಎಂಬ ಕೀಲಕ ಮಂತ್ರವಾರು. ಓಂ ಹ್ರಾಂ ಹೃದಯಾಯ ನಮಃ ಓಂ ಹ್ರಿಂ ಸಿರಸೆ ಸ್ವಹ ಓಂ, ಹ್ರೂಂ ಶಿಖಾಯ ವೌಷಟೀ| ಓಂ, ಹ್ರೃ ಕವಚಾಯ| ಹುಂ, ಓಂ ಹ್ರಾಂ ನೇತ್ರತ್ರಯಾಯವೌಷಟೀ| ಓಂ ಹ್ರಃ ಅಸ್ತ್ರಾಯ ಪಟೀ ಎಂಬ ನ್ಯಾಸಾಕ್ಷರ ಮಂತ್ರವಾರು, ಓಂ, ಹ್ರಂ ನೇತ್ರನಾಂ ಸದ್ಯೋಜಾತಾಯ ನಮಃ, ಓಂ ಹ್ರಿಂ ಮಾಂ ವಾಮದೇವಾಯ ನಮಃ, ಓಂ ಹ್ರಾಂ ಶಿ ಅಘೋರಾಯನಮಃ, ಓಂ, ಹ್ರೃಂ ವಾಂ ತತ್ಪರುಷಾಯ ನಮಃ, ಓಂ ಹ್ರಾಂ ಎಂಬ ಈಶಾನಾಯ ನಮಃ, ಓಂ ಹ್ರಃ ಓಂ ಹೃದಯಾಯ ನಮಃ ಎಂಬ ವದನಾಕ್ಷರ ಮಂತ್ರವಾರು, ಓಂ ಹ್ರಾಂ ನಾಂ ಸರ್ವಜ್ಞ ಶಕ್ತಿಧಾಮ್ನೆ ನಮಃ, ಓಂ, ಹಿಂ, ಮಾಂ ತೃಪ್ತಿಶಕ್ತಿಧಾಮ್ನೆನಮಃ, ಓಂ ಹ್ರೂಂ ಶಿಂ ಅನಾದಿಶಕ್ತಿಧಾಮ್ನೆ ನಮಃ, ಓಂ, ಹ್ರೈಂ, ವಾಂ, ಸ್ವತಂತ್ರಶಕ್ತಿನಾಮ್ನೆ ನಮಃ, ಓಂ, ಹ್ರಾಂ, ಯಾಂ ನಿತ್ಯಶಕ್ತಿಧಾಮ್ನೆ ನಮಃ, ಓಂ ಹ್ರಃ, ಓಂ ಅಲುಪ್ತ ಶಕ್ತಿಧಾಮ್ನೆ ನಮಃ, ಎಂಬ ಶಕ್ತಿ ಷಡಾಂಗ ಮಂತ್ರವಾರು. ಓಂ ಹ್ರಾಂ ಶಿಂ, ಶಿವಲಿಂಗಾಯ ನಮಃ, ಓಂ ಹ್ರೈಂ, ವಾಂ ಜಂಗಮ ಲಿಂಗಾಯನಮಃ, ಓಂ ಹ್ರಾಂ ಯಾಂ ಪ್ರಸಾದಲಿಂಗಾಯ ನಮಃ, ಓಂ ಹ್ರಃ ಓಂ ಮಹಾಲಿಂಗಾಯ ನಮಃ, ಎಂಬ ಲಿಂಗಾಕ್ಷರ ಮಂತ್ರವಾರು. ಇಂತೀ ಚತ್ತೀಶ ಮಂತ್ರಗಳು ಮಧ್ಯವೃತ್ತದ ಹಕಾರವಾದಿಯಾಗಿ ಮ್ಯಾಲಣ ವೃತ್ತದ ನಕಾರ ಬಳಿಗೊಂಡು ಇಂದ್ರದಿಕ್ಕು ಮೊದಲಾದ ನಾಲ್ಕು ದಿಕ್ಕಿನ ಮನೆಗಳ ವರ್ಣ ಸ್ವರೂಪ. ಜ್ಞಾನಶೂನ್ಯಸ್ಥಲ ನಿಷ್ಪತ್ತಿ ಸ್ಥಾನ ವಾದುದರಿಂದಾನುಳುಹಿ ಉಳಿದ ಪಿಂಡಾದಿ ಶತಸ್ಥಲಂಗಳ ಇಂದ್ರ ದಿಕ್ಕು ಮೊದಲಾದ ನಾಲ್ಕು ದಿಕ್ಕಿನ ಮನೆಗಳ ವರ್ಣ ಸ್ವರೂಪ, ತ್ರಿವಿಧ ತ್ರಿವಿಧ ಮಿಶ್ರ ಷಡ್ವಿಧ ಅಂಗಲಿಂಗ ಸ್ಥಲಂಗಳ ಮೂವತ್ತಾರನು ಪೂರ್ವೊಕ್ತ ಕ್ರಮದಂತೆ ಅರಿವುದು.

ಇನ್ನೊಂದು ಪ್ರಕಾರ ಭಕ್ತನ ಯೋಗಾಂಗವೈದನು, ಮಹೇಶ್ವರನ ಯೋಗಾಂಗ ವೈದನು, ಪ್ರಸಾದಿಯ ಯೋಗಾಂಗವೈದನು, ಪ್ರಾಣಲಿಂಗಿಯ ಯೋಗಾಂಗವೈದನು, ಶರಣನ ಯೋಗಾಂಗವೈದನು, ಅಗ್ನಿದಿಕ್ಕಿನ ಮನೆಗಳ ವರ್ಣಂಗಳಲ್ಲಿ ಇವರಲ್ಲಿ ಉಳಿದವೈದನು, ಯಮದಿಕ್ಕಿನ ಮನೆಗಳ ವರ್ಣಂಗಳಲ್ಲಿ ಆಚಾರಲಿಂಗ ಮಿಶ್ರವೈದನು, ಗುರುಲಿಂಗ ಮಿಶ್ರವೈದನು, ಶಿವಲಿಂಗ ಮಿಶ್ರವೈದನು, ಜಂಗಮಲಿಂಗ ಮಿಶ್ರವೈದನು, ಪ್ರಸಾದಲಿಂಗ ಮಿಶ್ರವೈದನು, ನೈರುತ್ಯ ದಿಕ್ಕಿನ ಮನೆಗಳ ವರ್ಣಂಗಳಲ್ಲಿ ಇವರಲ್ಲಿ ಉಳಿದವೈದನು ವರುಣ ದಿಕ್ಕಿನ ಮನೆಗಳ ವರ್ಣಂಗಳಲ್ಲಿ ಶ್ರದ್ಧಾಭಕ್ತಿ ಮಿಶ್ರವೈದನು, ನೈಷ್ಠಿಕಾ ಭಕ್ತಿ ಮಿಶ್ರ ವೈದನು, ಸಾವಧಾನಭಕ್ತಿ ಮಿಶ್ರವೈದನು, ಅನುಭಾವ ಭಕ್ತಿ ಮಿಶ್ರವೈದನು, ಆನಂದಭಕ್ತಿ ಮಿಶ್ರವೈದನು, ವಾಯುವ್ಯ ದಿಕ್ಕಿನ ಮನೆಗಳ ವರ್ಗಗಳಲ್ಲಿ ಇವಲ್ಲಿ ಉಳಿದವೈದನು, ಕುಭೇರದಿಕ್ಕಿನ ಮನೆಗಳ ವರ್ಣಂಗಳಲ್ಲಿ ಗಂಧಪ್ರಸಾದ ಮಿಶ್ರವೈದನು, ರಸಪ್ರಸಾದ ಮಿಶ್ರವೈದನು, ರೂಪುಪ್ರಸಾದ ಮಿಶ್ರವೈದನು, ಸ್ಪರ್ಶನಪ್ರಸಾದ ಮಿಶ್ರವೈದನು, ಶಬ್ದಪ್ರಸಾದ ಮಿಶ್ರವೈದನು,ಈಶಾನ್ಯ ದಿಕ್ಕಿನ ಮನೆಗಳ ವರ್ಣಂಗಳಲ್ಲಿ ಅವರಲ್ಲಿ ಉಳಿದವೈದನು, ಪೂರ್ವ ದಿಕ್ಕಿನ ಮನೆಗಳ ವರ್ಣಂಗಳಲ್ಲಿ, ಐಕ್ಯನ ಯೋಗಾಂಗವೈದನು, ಮಹಾಲಿಂಗ ಮಿಶ್ರವೈದನು, ಸಮರಸಭಕ್ತಿ ಮಿಶ್ರವೈದನು, ಮ್ಯಾಲಣ ವೃತ್ತದ ವರ್ಣಂಗಳಲ್ಲಿ ಇವರಲ್ಲಿ ಉಳಿದ ಸ್ಥಲಮೂರನು, ತೃಪ್ತಿಪ್ರಸಾದ ಮಿಶ್ರವೈದನು, ಮಧ್ಯವೃತ್ತದ ವರ್ಣಂಗಳಲ್ಲಿ ಪೂರ್ವೋಕ್ತ ಕ್ರಮದಂತೆ ವಣ್ ಪಲ್ಲಟ ಸ್ಥಲ ಪಲ್ಲವನರಿದು ಸಂಬಂಧಿಸುವುದು.

ಇನ್ನುಳಿದ ಸಕೀಲಂಗಳನು ಇವರಲ್ಲಿ ತಿಳಿವುದು. ಮತ್ತಂ ಯಂತ್ರವೇ ಚಿದಂಬರವೆಂಬ ಕಂಥೇ ವೃತ್ತದ್ವಯಂಗಳೇ ಜ್ಞಾನ ಕ್ರಿಯಾರೂಪವಾದ ಕಂಠಕಾಲು ರೇಖೆಗಳೇ ಭಕ್ತಿಜ್ಞಾನ ವೈರಾಗ್ಯ ಮುಪ್ಪರಿಗೂಡಿದದಾರಂಗಳು, ತ್ರಿಶೂಲಂಗಳೆ ಜ್ಞಾತೃ, ಜ್ಞಾನಜ್ಞೇಯ ಧ್ಯಾನ, ಧಾರಣ, ಸಮಾಧಿ ತತ್ತ್ವಜ್ಞಾನಾನುಭವ, ಶಿವ ಮಂತ್ರಸ್ಮರಣೆ, ವಸ್ತು ಲಕ್ಷಾನುಸಂಧಾನ, ಕ್ಷಮೆ, ಧೃತೆ, ವಿರಾಗ, ಎಂಬಾಯುಧ ಸೂತ್ರಂಗಳು. ಶ್ರೀಕಾರಂಗಳೇ ಆರಾರು ತೆರೆನಾದ ಮಿಶ್ರಾಷ್ಟಾವರಣ ನಾಲ್ವತ್ತೆಂಟು ವಿಧ ಮಾಗಿರ್ಪವು. ಅಂತಲ್ಲದೆ ನಾಲ್ವತ್ತೆಂಟು ತೆರನಾದ ಅಷ್ಟವಿಧ ಸಕೀಲಂಗಳನಾದಡು ಆಗಲಿ ಇಂತಿವು ಅಲಂಕಾರಗಳು. ಅಕ್ಷರ ನ್ಯಾಸವೇ ಸರ್ವಾಚಾರ ಸ್ವರೂಪವಾದ ಸೂತ್ರಕೋಶಂಗಳೆಂದರಿವುದು.

ಇನ್ನು ಸೃಷ್ಟಿಕ್ರಮ ಹಕಾರವೇ ಸಾಕ್ಷಾತ್ ಪರಸಿವನು, ಆ ಪರಶಿವ ನಿಂದಾದುದೇ ಓಂಕಾರ, ಆ ಓಂಕಾರವೇ ಪರಮಾತ್ಮ, ಆ ಪರಮಾತ್ಮನಿಂದಾದ ಅನಾದಿಬಿಂದು, ಆ ಬಿಂದುವಿನಿಂ ಕಲೆ, ಆ ಕಲೆಯಿಂ ಶಕ್ತಿ, ಆ ಶಕ್ತಿಯಿಂ ಸತ್ತು, ಆ ಸತ್ತುವಿನಿಂ ಚಿತ್ತು, ಆ ಚಿತ್ತುವಿನಿಂ ಪರಮತೇಜೋರಾಶಿ ಎನಿಸುವ ಶಿವತತ್ತ್ವ, ಆ ಶಿವತತ್ವದಿಂ ಸದಾಶಿವ, ಆ ಸದಾಶಿವನಿಂ ಈಶ್ವರ, ಆ ಈಶ್ವರನಿಂ ರುದ್ರ, ಆ ರುದ್ರನಿಂ ವಿಷ್ಣು, ಆ ವಿಷ್ಣುವಿನಿಂ ಬ್ರಹ್ಮ, ಆ ಬ್ರಹ್ಮನಿಂ ಜಗತ್ ಸಚರಾಚರವಾಯಿತ್ತೆಂದರಿವುದು.

 

ಚಿದಂಬರೊದ್ಧರಣೆ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ