ಇಂತೀ ಷಡ್ಬ್ರಂಹಾದಿ ಸಕಲ ದೇವತಾ ಮಂತ್ರಾಕ್ಷರ ಸ್ವರೂಪವಾಗಿ ಶಿವಜ್ಞಾನ ಮಯವ ಹೊಂದೀ ಶಾಂಭವೀ ಚಕ್ರವ ಉದ್ಧರಿಸುವ ಲಕ್ಷಣವನು, ಅಕ್ಷರಂಗಳ ಬರೆವ ಕ್ರಮವನು, ಆಧಿದೈವಂಗಳನು, ಸಮ್ಮ್ಯಜ್ಞಾನ ಸಾಧನ ಸಂಪತ್ತುವನು ಶೃತಿ ಗುರುವಚನಗಳಿಂ ಸಂಕ್ಷೇಪ ಮಾತ್ರವಾಗಿ ನಿರೂಪಿಸಲ್ತಕ್ಕದೆಂತೆಂದೊಡೆ:

ತತ್ವಜ್ಞರಾದವರು ಸುಸ್ಥಲದಲ್ಲಿ ವಾತುಲ ತಂತ್ರವಿಧಾನ ಪ್ರೋಕ್ತವಾಗಿ ಭುಜಪತ್ರದಲ್ಲಿ ಹನ್ನೆರಡಂಗುಲ ವಿಸ್ತಾರಮಂ ಕೊಂಡು ಗೋರಂಜನ, ಕುಂಕುಮ, ರಸ, ಕಸ್ತೂರಿ, ಕರ್ಪೂರ, ಅಗಿಲು ಶ್ರೀಗಂಧಗಳೊಡನೆ ಕೂಡಿ ಬರುವ ವರ್ಣಂಗಳಾವಾವೆಂದೊಡೇ:

ರಕ್ತವರ್ಣದ ಸೂತ್ರದಿಂ ಮೂಡಣ ದಿಕ್ಕಿನಿಂ ಪಡುವಣದಿಕ್ಕನೈದುವ ಹಾಂಗೆ ಎರಡು ಸೂತ್ರಂಗಳಂ ತೆಂಕಣಿಬಡಗನೈದುವ ಹಾಂಗೆ ಎರಡು ಸೂತ್ರಂಗಳಂ ಮಿಡಿಯಲಾಗಿ ಚತುಃಸೂತ್ರವಾತನವಾದ ಚಕ್ರಕ್ಷೇತ್ರವು ಗುಣಿತ ಪ್ರಮಾಣಕ್ಕೆ ನೂರಾನಾಲ್ವತ್ತು ನಾಲ್ಕಂಗುಲವಹುದು. ಬಳಿಕಾ ಚತುರಾಶ್ರಯ ಮಧ್ಯದಲ್ಲಿ ಮೂಡಪಡುವ ತೆಂಕ ಬಡಗವಾರಂಗುಲವಹ ಹಾಂಗೆ ಮಧ್ಯಸ್ಥಾನದಲ್ಲಿ ಕಪ್ಪೆಯಾಕಾರದ ಮೊನೆಯನೂರಿ, ಮತ್ತೊಂದು ಮೊನೆಗೆ ಬತ್ತಿಯಂ ಸುತ್ತಿ ಎರಡಂಗುಲ ಪ್ರಮಾಣದಿಂದ ಹಾಂಗೆ ಮಾಡಿ ಪಿತವರ್ಣದಿಂ ತಿರುಹಲದು ಕರ್ನಿಕಾವೃತ್ತವೆನಿಸುವುದು. ಆ ಕರ್ನಿಕಾವೃತ್ತದ ಬಹಿ ಪ್ರದೇಶದಲ್ಲಿ ಒಂದು ವೃತ್ತವಾ ಮೂರಂಗುಲ ಪ್ರಮಾಣದಿಂದ ಹಾಂಗೆ ರಕ್ತವರ್ಣದಿಂ ಮತ್ತೊಂದು ವೃತ್ತವಾನಾಲ್ಕಂಗುಲ ಪ್ರಮಾಣವಹ ಹಾಂಗೆ ಹೆಚ್ಚಿಸಿ ಕೃಷ್ಣವರ್ಣದಿಂ, ಮತ್ತೊಂದು ವೃತ್ತವಾವೈದಂಗುಲ ಪ್ರಮಾಣವಹ ಹಾಂಗೆ ಹೆಚ್ಚಿಸಿ ಶ್ವೇತವರ್ಣದಿಂ, ಮತ್ತೊಂದು ವೃತ್ತವಾ ಹಾಂಗೆ ಒಂದಾನೊಂದ ಬಳಸಿಕೊಂಡಿರ ಹಾಂಗೆ ತಿರುಹಲು ಮಧ್ಯದಲ್ಲಿ ವರ್ಣತ್ರಯಾತ್ಮಕವಾದ ವೃತ್ತತ್ರಯಂಗಳು ಮೂಡಲು ತ್ರಯಂಗಳೆನಿಸಿಕೊಂಬವು.

ಇನ್ನು ಕರ್ನಿಕಾ ವೃತ್ತದಲ್ಲಿ ಕವೆಯಾಕಾರವನೂರು ರಂಧ್ರವಂ ಮೂಡಲದು ಸೂಕ್ಷ್ಮಕರ್ನಿಕೆಯನಿಸುವುದು ಬಳಿಕದರ ಹೊರವಲಯದೋಳು ಸುತ್ತಿ ಬರೆಯೆಲೀ ಕಣಿಕೆಯಲ್ಲಿ ಶ್ವೇತವರ್ಣದಿಂದ ಕೇಸರ ಸಹಿತವಾ ನಾಲ್ಕೆಸಳನು ಅರ ಮ್ಯಾಲಣ ಒಂದನೆಯ ವೃತ್ತದ ಅಷ್ಟ ದಿಕ್ಕಿನಲ್ಲಿ ಅಷ್ಟಪತ್ರಂಗಳನ್ನು ಅದರ ಹೊರಗಣ ಎರಡನೇ ವೃತ್ತದಲ್ಲಿ ಎರಡು ದಳಂಗಳನ್ನು, ಎರಡು ಉಪದಳಂಗಳನ್ನು ಅದರ ಹೊರಗಣ ಮೂರನೇ ಆವರಣದಲ್ಲಿ ರಕ್ತವರ್ಣದಿಂ ಹದಿನಾರು ದಳಂಗಳನ್ನು, ಹದಿನಾರು ಪದಂಗಳನ್ನು ಬಾಹ್ಯವೃತ್ತದಲ್ಲಿ ಮೂವತ್ತೆರಡು ಮುಕುಲಾಕಾರಂಗಳಂ ಸುತ್ತಿ ಬರಲೂ ಚಕ್ರನ್ಯಾಸ ಮುಗಿಯಿತು.

ಇನ್ನು ಪೀತ ವರ್ಣದಿಂ ಬರೆವ ಅಕ್ಷರಂನ್ಯಾಸ: ಅ ಕರ್ನಿಕಾ ವೃತ್ತ ಮಧ್ಯದಲ್ಲಿ ಶಿವಬೀಜವೆಂಬ ಹಕಾರವನು, ಪೂರ್ವದಳದಲ್ಲಿ ಸಕಾರವನು, ದಕ್ಷಿಣ ದಳದಲ್ಲಿ ಅಕಾರವನು ಪಶ್ಚಿಮದಳದಲ್ಲಿ ಐ ಕಾರವನು, ಉತ್ತರದಳದಲ್ಲಿ ಕ್ಷಕಾರವನು ಬರೆವುದು. ಇನ್ನು ಆವರಣ ತ್ರಯಂಗಳಲ್ಲಿ ಬರೆವ ವ್ಯಾಪಕ ಸ್ವರವಿಕಲಾಕ್ಷರಂಗಳ ವಿವರ:

ಸಕಾರವನು ಪ್ರಥಮಾವರಣದ ಪೂರ್ವದಳದಲ್ಲಿ, ಅಕಾರವನು ಮಧ್ಯಾವರಣದ ಪೂರ್ವದಳದಲ್ಲಿ, ಆಕಾರವನು ಇಂದಾಗ್ನಿಗಳ ಮಧ್ಯದ ಅಪದಿನೈಶದಳದಲ್ಲಿ ಕಕಾರವನು ಬಾಹ್ಯ ವೃತ್ತದ ಇಂದ್ರದಳದಲ್ಲಿ, ಖ ಕಾರವನ ಇಂದ್ರಾಗ್ನಿಗಳ ಮಧ್ಯವಿದಿಕ್ಕಿನ ಮಧ್ಯದಳದಲ್ಲಿ, ಗಕಾರವನು ಅಪದಿಗ್ದಳದಲ್ಲಿ ಬರೆಯಲು ಇಂದ್ರದಳ ಮೊದಲಾದ ಮೂರು ದಳಂಗಳಲ್ಲಿ ಮೂರಕ್ಷರಂ ನ್ಯಾಸ ಮುಗಿಯಿತು. ಈ ಮೂರರ ಮುಂದಣ ಅಗ್ನಿ ದಳದಲ್ಲಿ ಸೇರಿದ ದಳದಲ್ಲಿ ಅಕ್ಷರಂ ನ್ಯಾಸವಿಲ್ಲಾ ಅದೇನು ಕಾರಣವೆಂದೊಡೆ.

ಸ್ಪರ್ಶಕ್ಷರ ಇಪ್ಪತ್ತೈದರೊಳಗೆ ಮಕಾರ ಒಂದು ಪ್ರಥಮಾವರಣದ ವ್ಯಾಪಕಾಕ್ಷರಂಗಳೊಳಗೆ ಸೇರಿದ ಕಾರಣ, ಅದನ್ನೊಂದು ಕಳೆದು ಉಳಿದ ಇಪ್ಪತ್ನಾಲ್ಕು ಅಕ್ಷರಂಗಳನು ಬಾಹ್ಯ ವೃತ್ತದಲ್ಲಿಯ ಮೂವತ್ತೆರಡು ದಳಂಗಳೊಳಗೆ ಇಪ್ಪತ್ನಾಲ್ಕು ದಳದಲ್ಲಿ ಜ್ಞಾಸವ ಮಾಡಿದೊಡೆ ಎಂಟು ದಳಂಗಳು ಉಳಿವುದು. ಅದು ಕಾರಣವವರಲ್ಲಿ ನ್ಯಾಸವಿಲ್ಲ. ಈ ಕ್ರಮದಿಂದನೆ ಈಶಾನ್ಯಾಂತ್ಯವಾಗಿ ತ್ರಿವರ್ಣಾಕ್ಷರಂಗಳ ನ್ಯಾಸವ ಮಾಡಬೇಕಾದುದು.

ಯಕಾರವನು ಪ್ರಥಮಾವರಣದ ಕುಭೇರ ದಳದಲ್ಲಿ, ಓಕಾರವನು ಮಧ್ಯಾವರಣದ ಕುಭೇರದಳದಲ್ಲಿ, ಔಕಾರವನು ಅದರ ಸಮೀಪದಳದಲ್ಲಿ, ಧಕಾರವನು, ಬಾಹ್ಯಾವರಣದ ಕುಭೇರದಳದಲ್ಲಿ, ನಕಾರ ಪಕಾರಂಗಳನು, ಮುಂದಣವೆರಡು ದಳಂಗಳಲ್ಲಿ, ಮಕಾರವನು, ಪ್ರಥಮಾವರಣದ ಈಶಾನ್ಯ ದಳದಲ್ಲಿ, ಅಕಾರ ಪತ್ತಿರ್ದ ಬಿಂದು ಸ್ವರೂಪವನು ಮಧ್ಯಾವರಣದ ಈಶಾನ್ಯದಳದಲ್ಲಿ ಬಿಂದು ದ್ವಿಭಾವನೈದು ಆಕಾರವ ಪೊತ್ತಿರ್ದ ವಿಸರ್ಗವನು, ಅದರ ಸಮೀಪದಳದಲ್ಲಿ, ಫಕಾರವನು ಬಾಹ್ಯಾವರಣದ ಈಶಾನ್ಯದಳದಲ್ಲಿ, ಬಕಾರ ಭಕಾರಂಗಳನು, ಮುಂದಣ ಎರಡು ದಳಂಗಳಲ್ಲಿ, ನ್ಯಾಸ ಮಾಡಲು ಈ ಆವರಣದ ತ್ರಯಂಗಳೊಳಗೆ ಪ್ರಥಮಾಪರಣದ ಪೂರ್ವದಳ ಮೊದಲಾದಂ ಕುರಿತು ಆಯಾದಳ ಲಕ್ಷಣಂಗಳಲ್ಲಿ ನ್ಯಾಸವಾದ ನಾಲ್ವತೆಂಟಕ್ಷರಂಗಳಿಗೆ ಐವತ್ತೊಂದಕ್ಷರಂಗಳ ವಿಭಾಗೆ ಸಂಖ್ಯೆಯಾವಂದೆಂದೊಡೆ.

ಸಾರ ಕಲಾನ್ಯಾಸದಲ್ಲಿಯು ಮಕಾರ ಯಕಾರ ಕೂಡಿಹುದಾಗಿ ಆ ಮಕಾರ ಯಕಾರ ಸಮೀಪಸ್ಥವಾಗಿಹುದು. ಅದು ನಿಮಿತ್ಯಂ ಆ ಮಕಾರವಾದಿಯಾಗಿ ವ್ಯಾಪಕಾಕ್ಷರ ಹತ್ತೊರೊಳಗೆ ಯ, ರ, ಲ, ವ, ಶೆ, ಷ, ಸ, ಹ, ಎಂಬ ಎಂಟಕ್ಷರ ಕೂಡಿಹವು. ಪ್ರಥಮ ವೃತ್ತದ ಈಶಾನ್ಯದ ಅಷ್ಠದಳಂಗಳಲ್ಲಿ ನ್ಯಾಸವಾದ ಭೇದವಿಲ್ಲದ ಕಾರಣ ಹಕಾರ ಶಿವಬೀಜವಪ್ಪ ಕಾರಣ ಸೂಕ್ಷ್ಮ ಕರ್ನಿಕೆಯಲ್ಲಿ ನ್ಯಸ್ತವಾಯಿತು. ಲಕಾರ, ಳ ಕಾರಗಳಿಗೆ ಭೇದವಿಲ್ಲದ ಕಾರಣ ಆ ಳ ಕಾರ ಲಕರ ಅಂತರ್ಗತವಾಯಿತು. ಅಲ್ಲಾ, ಆ ಳಕಾರ ಆತ್ಮ ಬೀಜವಪ್ಪಕಾರಣ ಕರ್ನಿಕಾದಳ ನೆಸ್ತವಾದ ಆತ್ಮಬೀಜವೆನಿಸುವ ಅಕಾರ ಅಂತರ್ಗತವಾದಡೆಯೂ ಅಹುದು. ಕ್ಷಕಾರ ವಿದ್ಯಾತತ್ತ್ವವಾದ ಕರಣ ಜ್ಞಾನಶಕ್ತಿ ಸ್ವರೂಪದಿಂ ಶಿವ ಸಾಮಿಪ್ಯವಾಗಿ ಬಡಗಲ ಕರ್ನಿಕಾದಳದಲ್ಲಿ ನ್ಯಸ್ತವಾಯಿತು. ಸ್ವರಾಕ್ಷರಂಗಳು ತತ್ತ್ವಬೀಜ ಮೂರ್ತಿಬೀಜಂಗಳೆಂದು ದ್ವಿರೂಪವಾಗಿಹ ಕಾರಣ ಮಧ್ಯ ವೃತ್ತದ ಪೂರ್ವಾದಷ್ಠದಳ ಅಷ್ಠುಪದಳಂಗಳಲ್ಲಿ ನ್ಯಾಸವಾದವು. ಸ್ಪರ್ಶಾಕ್ಷರಗಳಿಪ್ಪತ್ತು ನಾಲ್ಕು ಬಾಹ್ಯಾವೃತ್ತದ ಪೂರ್ವಾದಿಯಾಗಿ ಮೂರು ಮೂರು ದಳಂಗಳ ಮುಂದಣ ಉಪದಳಂಗಳಂ ಬಿಟ್ಟು ಇಪ್ಪತ್ನಾಲ್ಕು ದಳಂಗಳಲ್ಲಿ ನ್ಯಾಸವಾದವು. ಈ ಪರಿಯಿಂ ಚಕ್ರದಳಂಗಳಲ್ಲಿ ಏಕಪಂಚಸದ್ವರ್ಣ ನ್ಯಾಸ ಮುಗಿಯಿತು.

ಇನ್ನು ದೇವತಾನ್ಯಾಸ ಸೂಕ್ಷ್ಮಕರ್ನಿಕಾ ಮಧ್ಯದಲ್ಲಿ ಸಮಸ್ತ ಮಂತ್ರಾಧಾರ ರೂಪಿಣಿಯಾದ ಪರಶಕ್ತಿ ಪೂಜಾಯೋಗ್ಯಳು. ಆ ಸೂಕ್ಷ್ಮ ಕರ್ನಿಕೆಯ ಬಳಸಿದ್ದ ಕರ್ನಿಕಾ ವೃತ್ತದ ಪೂರ್ವಾದಿಯಾದ ಚತುರ್ದಳದಲ್ಲಿ ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮವಿ ಎಂಬ ನಾಲ್ವರು ಶಕ್ತಿಯರು ಕಾರಣವಾಗಿಹರು. ದ್ವಿತೀಯಾವರಣದ ವೃತ್ತದಾದ್ಯಷ್ಠದಳಂಗಳಲ್ಲಿ ಉಮೇಶ್ವರ, ಚಂಡೇಶ್ವರ, ನಂದೀಶ್ವರ, ಮಹಾಕಾಳ, ಭೃಂಗಿರಿಟಿ, ಗಣೇಶ್ವರ, ವೃಷಭೇಶ್ವರ, ಷಣ್ಮುಖ ಎಂಬ ಅಷ್ಟಗಣೇಶ್ವರರು ಕಾರಣವಾಗಿಹರು. ಉಳಿದ ದಳಂಗಳಲ್ಲಿ ಭವ, ಸರ್ವ, ರುದ್ರ, ಮಹದೇವ, ಸೋಮ, ಭೀಮ ಉಗ್ರ, ಪಶುಪತಿ ಎಂಬ ಅಷ್ಠ ಮೂರ್ತಿಗಳು ಕಾರಣವಾಗಿಹರು.

ಮೂರನೇ ಆವರಣದ ಇಪ್ಪತ್ನಾಲ್ಕು ದಳಂಗಳಲ್ಲಿ ಅನಂತ, ಸೂಕ್ಷ್ಮ ಶಿವೋತ್ತಮ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಶ್ರೀಕಂಠ, ಶಿಖಂಡಿ, ಎಂಬ ಅಷ್ಠ ವಿದ್ಯೆಶ್ವರರು, ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ವಾಯುವ್ಯ, ಕುಭೇರ, ಈಶಾನ್ಯ ಎಂಬ ಅಷ್ಠ ದಿಕ್ಬಾಲಕರು, ಧರ, ದೃವ, ಸೋಮ, ಅಪ, ನಿಲ, ನಳ, ಪ್ರತ್ಯೇಶ, ಪ್ರಭಾವ ಎಂಬ ಅಷ್ಠವಸುಗಳು ಕಾರಣವಾಗಿಹರು.

ಮತ್ತಂ, ಈ ಚಕ್ರ ಬಂಧವನ್ನು ಶಾರದಾ ತಿಲಕದಲ್ಲಿ ಇನ್ನೊಂದು ಪ್ರಕಾರದಿಂದ ಹೇಳಲ್ಪಟ್ಟುದು, ಮಧ್ಯಬಟುವಿನಲ್ಲಿರ್ದ ಹಕಾರವೇ ಉಮೆ, ಅದರಿಂದ ಮೇಲಣ ಬಟುವಿನ ನಾಲ್ಕೆಸಳಲ್ಲಿಯ ನಾಲ್ಕಕ್ಷರಂಗಳೇ ನಾಲ್ಕು ಶಕ್ತಿ ಸ್ವರೂಪವನೈದಿದ ವಿವರ: ಸಕಾರವೇ ಅಂಬಿಕೆ, ಅಕಾರವೇ ಗಣಾನಿ, ಐಕಾರವೇ ಈಶ್ವರಿ, ಕ್ಷಕಾರವೇ ಮನೋನ್ಮನಿ ಅದರಿಂದ ಮೇಲಣ ಬಟುವಿನ ಎಂಟೆಸಳಲ್ಲಿಯ ಎಂಟಕ್ಷರಗಳೇ ಎಂಟು ಶಕ್ತಿ ಸ್ವರೂಪವನೈದುದರ ವಿವರ: ಸಕಾರವೇ ವಾಮೆ, ಷಕಾರವೇ ಜೇಷ್ಠೆ, ಶಕಾರವೇ ರೌದ್ರಿ, ವಕಾರವೇ ಕಾಳಿ, ಲಕಾರವೇ ಬಾಲೆ, ರಕಾರವೇ ಬಲಪ್ರಮಥನಿ, ಯಕಾರವೇ ಸರ್ವಭೂತದ ಮನಿ, ಮಕಾರವೇ ಮನೋನ್ಮನಿ ಅದರಿಂದ ಮ್ಯಾಲಣ ಬಟುವಿನ ಹದಿನಾರು ದಳಂಗಳಲ್ಲಿ ಹದಿನಾರಕ್ಷರಂಗಳು, ಹದಿನಾರು, ಗಣೇಶ್ವರರಾದ ವಿವರ: ಆಃ ಎಂಬುದೇ ಷಣ್ಮುಖ, ಅರಿ ಎಂಬುದೇ ಭವ, ಔಕಾರವೇ ಸರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಊಕಾರವೇ ಭೀಮ, ಉಕಾರವೇ ಉಗ್ರ ರೂಕಾರವೇ ಪಶುಪತಿ, ರುಕಾರವೇ ಉಮೇಶ್ವರ, ಆಕಾರವೇ ಚಂಡೇಶ್ವರ, ಟಕಾರವೇ ನಂದೀಶ್ವರ, ಈಕಾರವೇ, ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ಮೃಷಭೇಶ್ವರ, ಅದರಿಂದ ಮ್ಯಾಲಣ ಬಟುವಿನ ಮೂವತ್ತೆರಡು ದಳಂಗಳೊಳಗೆ ಎಂಟು ದಳಂಗಳು ಶೂನ್ಯದಳಂಗಳು. ಉಳಿದ ಇಪ್ಪತ್ತು ನಾಲ್ಕು ದಳಂಗಳಲ್ಲಿ ಇಪ್ಪತ್ನಾಲ್ಕು ಅಕ್ಷರಂಗಳೆ ಅಷ್ಠವಿದ್ಯೇಶ್ವರರು, ಅಷ್ಠದಿಕ್ಪಾಲಕರು, ಅಷ್ಠವಸುಗಳಾದ ವಿವರ: ಶಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ.

ಐನ್ಯಾಕಾರವೇ ಏಕರುದ್ರ, ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ, ಟಕಾರವೇ ಯಮ, ಠಕಾರವೇ ನೈರುತ್ಯ, ಡ ಕಾರವೇ ವರುಣ, ಢ ಕಾರವೇ ವಾಯುವ್ಯ, ಣಕಾರವೇ ಕುಭೇರ, ತಕಾರವೇ ಈಶಾನ್ಯ, ಢಕಾರವೇ ಧರ, ದಕಾರವೇ ದೃವ, ಧಕಾರವೇ ಸೋಮ, ನಕಾರವೇ ಅಪ, ಪಕಾರವೇ ನಿಲ, ಥಕಾರವೇ ನಳ, ಬಕಾರವೇ ಪ್ರತ್ಯೇಕ, ಭಕಾರವೇ ಪ್ರಭಾವ.

ಅದರಿಂದ ಮ್ಯಾಲಣ ಬಟುವಿನೊಳಗಿಹ ಮೂವತ್ತೆರಡು ದಳಂಗಳೊಳಗೆ ಇಂದ್ರ ದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು; ಇಂದ್ರ, ಸತ್ಯ ಭೃಂಗಿ, ಅಂತರ್ಲಕ್ಷ: ಅಗ್ನಿದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು: ಅಗ್ನಿ, ಪೂಹ, ವಿಧಿ, ದಮ, ಯಮ ದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು. ಯಮ, ಭಾಸ್ಕರ, ಪುಷ್ಪದತ್ತ, ಬಲ್ಲಾಟ ನೈರುತ್ಯ ದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು: ನೈರುತ್ಯ, ದೌವಾರಿಕ, ಸುಗ್ರೀವ, ಅರುಣ. ವರುಣದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು: ವರುಣ, ಅಸುರ, ಗಂಹಾರ, ವೇಗ; ವಾಯುವ್ಯ ದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು: ವಾಯುವ್ಯ, ನಾಗ, ಮುಖ್ಯ ಸೋಮ, ಕುಬೇರ ದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು: ಕುಭೇರ ಅಘೋರ, ದಿಶೆ, ಅದಿತಿ, ಈಶಾನ್ಯ ದಿಕ್ಕಿನ ನಾಲ್ಕು ದಳಂಗಳಲ್ಲಿ ವಾಸವಾದರು: ಈಶಾನ್ಯ ಪರ್ಜನ್ಯ, ಜಯಂತ, ಸಂಕ್ರ.

ಇನ್ನು ವಚನ||
ಅಣುವಿಂಗಣುವಾಗಿ ಮಹತ್ತಿಂಗೆ ಮಹತ್ತಾಗಿ,
ಪರಿಪೂರ್ಣವಾದ ಪರವೆಂಬ ಪ್ರಸಾದ ಮೂರ್ತಿಯ ಇರುವ
ಹೇಳಿಹೆನು ಕೇಳಿರಣ್ಣಾ,
ಮುಂದೆ ತಾರಾಬೀಜ, ಹಿಂದೆ ಸುನಾದ ಬೀಜ
ಬಲದಲ್ಲಿ ಆತ್ಮ ಬೀಜ ಎಡದಲ್ಲಿ ವಿದ್ಯಾಬೀಜ,
ಎಂಟರಲ್ಲಿ ಅಷ್ಟೈಶ್ವರ್ಯ, ಅಷ್ಟಶಕ್ತಿ ಬೀಜ,
ಹದಿನಾರಲ್ಲಿ ಕಲೆ, ಕಲಾಪತಿಗಳು
ಮೂವತ್ತೆರಡರಲ್ಲಿ ವಿಕಲೆ, ವಿಕಲಾಪತಿಗಳು

ಇಂತೀ ತ್ರಿಮಂಡಲ ಮಧ್ಯದ ಸೂಕ್ಷ್ಮ ಕರ್ಣಿಕೆಯಲ್ಲಿಯ ಶುದ್ಧ ಪ್ರಸಾದವನು ಮಹಾನುಭಾವರ ಸಂಗಮದಲ್ಲಿದ್ದರಿದೆನು ಕಾಣಾ ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ||

ತನುವೆಂಬ ಭೂಮಿಯ ಮೇಲೆ ಶೃಂಗಾರದ ಇಂದ್ರಕೂಟಗಿರಿ ಯೆಂಬ ಕೈಲಾಸದಲ್ಲಿ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ದಳದ ಆತ್ಮಶಕ್ತಿ, ಬಿಂದುನಾದಗಳ ಮಧ್ಯದಲ್ಲಿ ಶೂನ್ಯ ಸಿಂಹಾಸನವೆಂಬ ಸುಜ್ಞಾನ ಪೀಠದ ಮೇಲೆ ನೀವು ಮೂರ್ತಿಗೊಂಡಿಹರಾಗಿ ಕಂಡಕೆ ಹರುಷಿತನಾದೆನು.

ಸೂರ್ಯಮಂಡಲದ ದ್ವಾತ್ರಿಂಶದಳದ ರುದ್ರರು ರುದ್ರಶಕ್ತಿಯರು
ನಿಮ್ಮ ನೋಲೈಸುತ್ತಿಹರು
ಚಂದ್ರ ಮಂಡಲದ ಷೋಡಶ ದಳದ ರುದ್ರರು ರುದ್ರಶಕ್ತಿಯರು
ನಿಮ್ಮ ನೋಲೈಸುತ್ತಿಹರು
ಅಗ್ನಿ ಮಂಡಲದ ಅಷ್ಠದಳ ರುದ್ರರು, ರುದ್ರಶಕ್ತಿಯರು ನಿಮ್ಮ ನೋಲೈಸುತ್ತಿಹರು.
ಈ ಪರಿಯಿಂದ ದೇವರ ದೇವನ ಓಲಗವನೇನೆಂದು ಹೇಳುವೆನು
ಮತ್ತೆ ಭೇರಿ ಮೃದಂಗ ಸಾಗಸರ ಕೊಳಲು ವೀಣೆ, ಕಹಳೆ ಘಂಟಿ ಶಂಖನಾದ
ನಾನಾ ಬಹುವಿಧದ ಕೇಳಿಕೆಯ ಅವರಸರದಲ್ಲಿ ರಾಜಿಸುವ ರಾಜಯೋಗದ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ನಿಮ್ಮ ಶರಣರಾದ ರಾಜಯೋಗಿಗಳೇ ಬಲ್ಲರು.
ಹೃದಯ ಕಮಲದ ಅಷ್ಟದಳದ
ದ್ವಾತ್ರಿಂಶತ್ ಕುಸುಮ ಮಧ್ಯದಲ್ಲಿರ್ಪನಾ ಸೂರ್ಯ
ಆ ಸೂರ್ಯನ ಮಧ್ಯದಲ್ಲಿರ್ಪನಾ ಚಂದ್ರ
ಆ ಚಂದ್ರನ ಮಧ್ಯದಲ್ಲಿರ್ಪು ಅಗ್ನಿ
ಆ ಅಗ್ನಿಯ ಮಧ್ಯದಲ್ಲಿರ್ಪುದಾ ಕಾಂತಿ
ಆ ಕಾಂತಿಯ ಮಧ್ಯದಲ್ಲಿರ್ಪುದಾ ಸುಜ್ಞಾನ
ಆ ಸುಜ್ಞಾನದ ಮಧ್ಯದಲ್ಲಿರ್ಪನಾ ಚಿದಾತ್ಮ
ಆ ಚಿದಾತ್ಮನ ಮಧ್ಯದಲ್ಲಿರ್ಪುದು ಚಿತ್ಪ್ರಕಾಶ ರೂಪನಪ್ಪ ಪರಶಿವನು.
ಇಂತಪ್ಪ ಪರಶಿವನು
ಎನ್ನ ಸುಜ್ಞಾನ ಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ
ಮನಭಾವ ಶರಣೇಂದ್ರಿಯಂಗಳಿಂ ಸ್ವರೂಪೀಕರಿಸಿ, ದೃಷ್ಟಿಗೆ ತೋರಿ
ಕೈಯಲ್ಲಿ ಲಿಂಗವ ಕೊಟ್ಟ ಚನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನಯ್ಯಾ ಪ್ರಭುವೇ
ಕಪಿಲಸಿದ್ಧ ಮಲ್ಲಿಕಾರ್ಜುನಾ||

ಶಾಂಭವೀ ಚಕ್ರೋದ್ಧರಣೆಯ ಸಂಬಂಧ ಸಮಾಪ್ತ ಮಂಗಳ ಶ್ರೀ ಶ್ರೀ