ಸುನಾಮ ಹಿಂದಿನ ಪಾಟಿಯಾಲಾ ರಾಜ್ಯದ ಒಂದು ಚಿಕ್ಕ ಊರು. ಬಹಳ ವರ್ಷಗಳ ಹಿಂದಿನ ಮಾತು. ಸುಬೇದಾರ ರಾಮಸಿಂಹನೆಂಬವನು ಆ ಊರಲ್ಲಿ ವಾಸವಾಗಿದ್ದನು. ಒಂದು ದಿನ ಮಧ್ಯಾಹ್ನ ಸುಬೇದಾರರ ಇಬ್ಬರು ಮಕ್ಕಳು ಹಾಗೂ ಅವರ ಅನೇಕ ಯುವ ಮಿತ್ರರು ಸಬೇದಾರರ ಮನೆಯಲ್ಲಿ ಸೇರಿದರು ಉಧಮ್ ಸಿಂಗ್ ಅವರಲ್ಲೊಬ್ಬ ಉಧಮ್ ಸಿಂಗ್ ಯಾವಾಗಲೂ ಹಸನ್ಮುಖಿ. ಆದರೆ ಆ ದಿನ ಅವನು ಯಾವುದೋ ವಿಚಾರಲ್ಲಿ ಮಗ್ನನಾಗಿದ್ದನು. ಅವನು ಯಾವದೋ ಗಾಢವಾದ ಆಲೋಚನೆಯಲ್ಲಿದ್ದಂತಿತ್ತು.

‘ಕಾಲುಗಳನ್ನು ನೋಡಬಹುದು

ಮಿತ್ರರ ಮಾತು ಸಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಜ್ಯೋತಿಷಿ ಬಂದ. ಸುಬೇದಾರರ ಮಗ ಅಜಿತ್ ಸಿಂಹನು ಆತನನ್ನು ಸ್ವಾಗತಿಸಿದ. ಆತ ಒಳಗೆ ಬಂದ. ಮೇಲೆ ಎಲ್ಲರೂ ತಮ್ಮ ತಮ್ಮ ಕೈಗಳನ್ನು ತೋರಿಸಿದರು. ಅನೇಕ ರೀತಿಯ ಪ್ರಶ್ನೆಗಳನ್ನು ಹಾಕಿದರು. ಜ್ಯೋತಿಷಿ ತನಗೆ ತೋರಿದ ಭವಿಷ್ಯವನ್ನು ನುಡಿದ. ಯುವಕರು ತಮ್ಮ ಇಷ್ಟಬಂದಂತೆ ದಕ್ಷಿಣೆ ನೀಡಿದರು.

ಇದಾದಮೇಲೆ ಸುಬೇದಾರನ ಇನ್ನೊಬ್ಬ ಮಗ ತಾರಾಸಿಂಹನು ಉಧಮ್ ಸಿಂಗನಿಗೂ ಕೈ ತೋರಿಸುವಂತೆ ಹೇಳಿದ. ಉಧಮ್ ಸಿಂಗ್ ಯಾವುದೋ ಭಾವನಾಲೋಕದಲ್ಲಿ ವಿಹರಿಸುತ್ತಿದ್ದ ಈ ಸಲಹೆಯಿಂದ ಬೆಚ್ಚಿಬಿದ್ದ ಕಾರಣ ಅವನಿಗೆ ಜ್ಯೋತಿಷದಲ್ಲಿ ವಿಶ್ವಾಸವಿರಲಿಲ್ಲ. ಕ್ರಿಯೆಯಲ್ಲಿ ವಿಶ್ವಾಸವಿತ್ತು. ಅವನೊಬ್ಬ ಆದರ್ಶವಾದಿ. ಕ್ರಾಂತಿಕಾರಿಯೂ ಹೌದು. ಉಧಮ್ ಸಿಂಗ್ ನಗುತ್ತಾ ಜ್ಯೋತಿಷಿಗೆ, “ನಾನು ಕೈ ತೋರಿಸಲಾರೆ. ಬೇಕಾದರೆ ತಾವು ತನ್ನ ಕಾಲುಗಳನ್ನು ನೋಡಬಹುದು” ಎಂದು ಹೇಳಿದ. ಅವನ ಮಾತುಗಳಲ್ಲಿ ತಾತ್ಸಾರ ಭಾವನೆ ಕಂಡುಬರುತ್ತಿತ್ತು.

ಎಲ್ಲರೂ ಒಬ್ಬರೊಬ್ಬರ ಮುಖ ನೋಡತೊಡಗಿದರು. ನಿಜವಾಗಿಯೂ ಜ್ಯೋತಿಷಿಗೆ ಅವಮಾನ ವಾದಂತಾಗಿತ್ತು. ಅವನ ಜ್ಞಾನಕ್ಕೆ ಮಸಿ ಬಳಿದಂತಾಗಿತ್ತು. ಆದರೂ ಜ್ಯೋತಿಷಿ ಶಾಂತಚಿತ್ತನಾಗಿಯೇ ಇದ್ದ ಮುಖಭಾವದಲ್ಲಿ ಯಾವ ಬದಲಾವಣೆಗಳೂ ಕಂಡು ಬರಲಿಲ್ಲ, ಆತ ಗಂಭೀರವಾಗಿ ಉಧಮ್ ಸಿಂಗನಿಗೆ ಹೇಳಿದ; “ತಾವು ತಮ್ಮ ಕಾಲನ್ನೇ ತೋರಿಸಿ. ನನಗೆ ತಿಳಿದಷ್ಟುನ್ನು ಹೇಳುತ್ತೇನೆ.” ಉಧಮ್ ಸಿಂಗ್ ತನ್ನ ಎರಡೂ ಕಾಲುಗಳನ್ನು ಜ್ಯೋತಿಷಿಗೆ ನೀಡಿದ. ಜ್ಯೋತಿಷಿ ಎರಡೂ ಕಾಲುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ. ಉಧಮ್ ಸಿಂಗನ ಕಾಲುಗಳನ್ನು, ಒಮ್ಮೆ ಆತನ ಮುಖವನ್ನು ದಿಟ್ಟಿಸಿ ನೋಡಲು ತೊಡಗಿದ ಸುತ್ತ ಇದ್ದವರ ಕುತೂಹಲ ಹೆಚ್ಚಾಯಿತು. ಜ್ಯೋತಿಷಿ “ನನ್ನ ಮಾತು ಕೇಳಿ ತಾವು ತಪ್ಪು ತಿಳಿಯಬಾರದು. ನಾನು ನಿಮ್ಮ ಕಾಲಿನ ಗೆರೆಗಳನ್ನು ಗಮನಿಸಿ ಅವು ನನಗೆ ಏನನ್ನು ಹೇಳುತ್ತವೆಯೋ ಅದನ್ನೇ ನಾನು ತಮಗೆ ಹೇಳುತ್ತೇನೆ” ಎಂದು. ಉಧಮ್ ಸಿಂಗ್ ಒಪ್ಪಿಕೊಂಡ ಜ್ಯೋತಿಷಿ ಮುಂದುವರಿದ, “ನೀವು ಎರಡು ಬಾರಿ ವಿದೇಶಕ್ಕೆ ಹೋಗುವಿರಿ. ಆದರೆ ಎರಡನೆಯ ಬಾರಿ ಅಲ್ಲಿಂದ ಮರಳಿ ಬರಲಾರಿರಿ. ನಿಮ್ಮ ಕೈಯಿಂದ ಯಾವುದೋ ವ್ಯಕ್ತಿಯ ಕೊಲೆಯಾಗುವುದು. ನಿಮಗೆ ಗಲ್ಲಿನ ಶಿಕ್ಷೆಯಾಗುವುದು” ಎಂದು ಹೇಳಿದನು. ಉಧಮ್ ಸಿಂಗ್ ನಕ್ಕ. ಉಳಿದ ಸಂಗಾತಿಗಳು ಸುಮ್ಮನಿದ್ದರು. ಜ್ಯೋತಿಷಿ ನುಡಿದಿದ್ದು ಸತ್ಯವಾಯಿತು.

ಕಷ್ಟಗಳ ಪರಂಪರೆ

ಉಧಮ್ ಸಿಂಗ್ ೧೮೯೯ರ ಡಿಸೆಂಬರ್ ೨೬ರಂದು ಸುನಾಮದ ಶಹಪುರದಲ್ಲಿ ಜನಿಸಿದ. ಸುನಾಮ ಪಾಟಿಯಾಲಾ ರಾಜ್ಯದ ಒಂದು ಸಣ್ಣ ಊರು. ತಂದೆ ಟಹಲ್ ಸಿಂಹನು ಚೌಕಿದಾರನಾಗಿ ಕೆಲಸ ಮಾಡುತ್ತಿದ್ದನು. ಆದಾಯ ಅಲ್ಪ. ಬಾಳು ಸಾಗಿಸುವುದೇ ಕಷ್ಟವಾಗಿತ್ತು. ಉಧಮ್ ಸಿಂಗನಿಗೆ ಎರಡು ವರ್ಷವಾಗಿದ್ದಾಗ ತಾಯಿ ಮರಣ ಹೊಂದಿದಳು. ಅಣ್ಣ ಸಾಧುಸಿಂಹ, ಉಧಮ್ ಸಿಂಗನಿಗಿಂತ ಎರಡು ವರ್ಷ ಮಾತ್ರ ದೊಡ್ಡವನು. ಉಧಮ್ ಸಿಂಗನಿಗೆ ಏಳು ವರ್ಷಗಳಾಗಿದ್ದಾಗ ಟಹಲ್ ಸಿಂಹ ತನ್ನ ಇಬ್ಬರು ಮಕ್ಕಳೊಡನೆ ಅಮೃತಸರಕ್ಕೆ ಹೋದ. ಹೋಗುವಾಗ ರೋಗಿಯಾಗಿಯೇ ಹೋಗಿದ್ದ ಹೋಗಿ ಇನ್ನೂ ಎರಡು ದಿನಗಳಾಗಿರಲಿಲ್ಲ. ಟಹಲ್ ಸಿಂಹ ಅಸುನೀಗಿದ. ಮಕ್ಕಳು ತಬ್ಬಲಿಗಳಾದರು. ಅಲೆಮಾರಿಗಳ ಜೊತೆಗೆ  ಅಲೆಯುತ್ತಿದ್ದರು. ಚಂಚಲ್ ಸಿಂಹ ಎಂಬವರು ಅಣ್ಣ-ತಮ್ಮಂದಿರಿಬ್ಬರನ್ನೂ ೧೯೦೭ರಲ್ಲಿ ಆಕಸ್ಮಾತ್ತಾಗಿ ಕೈ ಸೇರಿಸಿದರು. ಇಬ್ಬರೂ ಓದುವುದನ್ನು ಮುಂದುವರಿಸಿದರು. ಜೊತೆಗೆ ಕೈ ಕೆಲಸವನ್ನೂ ಕಲಿತುಕೊಂಡರು. ೧೯ನೇ ವಯಸ್ಸಿನಲ್ಲಿ ಸಾಧುಸಿಂಹನು ತೀರಿಕೊಂಡ. ಉಧಮ್ ಸಿಂಗನಿಗೆ ಆದ ಆಘಾತ ಅಷ್ಟಿಷ್ಟಲ್ಲ! ಕಷ್ಟಗಳ ಪರಂಪರೆಯೇ ಬಂದೆರಗಿದಂತಿತ್ತು. ಉಧಮ್ ಸಿಂಗ್ ಅನಾಥಾಲಯವನ್ನು ಬಿಡುವ ಹೊತ್ತಿಗೆ ಮೆಟ್ರಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದನು.

ಮಹಾ ಹತ್ಯಾಕಾಂಡ

’ಬೈಸಾಖಿ’ಯಂದು ಅಮೃತಸರದಲ್ಲಿ ಹೊಸ ವರ್ಷದ ಜಾತ್ರೆ ನಡೆಯುತ್ತದೆ. ೧೯೧೯ರಲ್ಲಿ ಆ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ಇತ್ತು. ಸ್ವದೇಶಿ ಚಳವಳಿ ಭರದಿಂದ ಸಾಗಿತ್ತು. ಬ್ರಿಟಿಷ್ ಸಾರ್ವಭೌಮತ್ವವನ್ನು ಧಿಕ್ಕರಿಸುವ ಮಾತುಗಳು ಕೇಳಿಬರುತ್ತಿದ್ದವು.

ಬ್ರಿಟಿಷರು ಭಾರತದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದರು. ಅಪಮಾನ ಮಾಡುತ್ತಿದ್ದರು, ಬಿಳಿಯ ಮಹಿಳೆಯೊಬ್ಬಳಿಗೆ ದೇಶೀಯರು ಅವಮಾನ ಮಾಡಿದರೆಂದು, ಆ ರಸ್ತೆಯಲ್ಲಿ ಭಾರತೀಯರು ತೆವಳಿಕೊಂಡು ಹೋಗಬೇಕೆಂದು ನಿಯಮ ವಿಧಿಸಿದರು. ಭಾರತೀಯರನ್ನು ತುಳಿಯುವ ಶಾಸನಗಳನ್ನು ಮಾಡಿದರು. ಪಂಡಿತ ಮದನಮೋಹನ ಮಾಳವೀಯ, ಮಹಮದಾಲಿ ಜಿನ್ನ ಮೊದಲಾದವರೆಲ್ಲ ಶಾಸನ ಸಭೆಗೆ  ರಾಜೀನಾಮೆ ಕೊಟ್ಟರು. ೧೯೧೯ರ ಏಪ್ರಿಲ್ ೧೩, ವೈಶಾಖದ ಹಬ್ಬದಂದು ಭಾರತೀಯರ ಪ್ರತಿಭಟನೆ ತೋರಿಸಬೇಕೆಂದು ಡಾಕ್ಟರ್ ಸತ್ಯಪಾಲ್, ಡಾಕ್ಟರ್ ಸೈಫುದ್ದೀನ ಕಿಚ್ ಲೂ ಮೊದಲಾದ ನಾಯಕರು ತೀರ್ಮಾನಿಸಿದರು. ಪ್ರಸಿದ್ಧ ಕವಿಗಳು, ಚರಿತ್ರಕಾರರು, ನಾಯಕರು ಅಮೃತಸರದ ಜಾಲಿಯನ್ ವಾಲಾಬಾಗಿನಲ್ಲಿ ಭಾಷಣ ಮಾಡಿಲಿದ್ದರು. ಸಾವಿರರು ಮಂದಿ ಹಿಂದೂಗಳು, ಮುಸ್ಲಿಮರು, ಸಿಖ್ಖರು ಸಭೆ ಸೇರಿದರು.

ಆಗ ಪಂಜಾಬಿನ ಗವರ್ನರ್ ಆಗಿದ್ದವನು ಮೈಕೇಲ್ ಓಡ್ವಯರ್ ಎಂಬಾತ; ಸೊಕ್ಕಿನ ಕ್ರೂರಿ, ಭಾರತೀಯರು ಆ ಹಬ್ಬವನ್ನು ಜಾಲಿಯನ್ ವಾಲಾಬಾಗಿನಲ್ಲಿ ನಡೆಸಲು ಅವಕಾಶ ಕೊಡುವುದೇ ಇಲ್ಲ ಎಂದು ಘೋಷಿಸಿದ, “ವಿಧೇಯರಾಗದಿದ್ದರೆ ಅವರನ್ನೆಲ್ಲ ಕೊಲ್ಲುತ್ತೇನೆ” ಎಂದು.

ಆಗ ಜಲಂಧರಿನಲ್ಲಿದ್ದ ಬ್ರಿಟಿಷ್ ಸೈನ್ಯದ ಮುಖ್ಯ ಅಧಿಕಾರಿ ಹ್ಯಾರಿ ಎಂಬಾತ, ಓಡ್ವಯರನಷ್ಟೆ ಕೊಬ್ಬಿದವನು, ಕ್ರೂರಿ. ಗವರ್ನರ್ ಜಾಲಿಯನ್ ವಾಲಾಬಾಗಿನ ಸಭೆಗೆ ಅಡ್ಡಿಮಾಡಲು ಅವನನ್ನು ಕರೆಸಿದ.

ಜಾಲಿಯನ್ ವಾಲಾಬಾಗಿಗೆ ಇದ್ದುದು ಒಂದೇ ದ್ವಾರ. ಅಲ್ಲಿ ಎತ್ತರದ ಸ್ಥಳದ ಮೇಲೆ ಸೇನೆಯನ್ನು ಸಿದ್ಧಗೊಳಿಸಿ, ಗುಂಡಿನ ಮಳೆಗರೆಯುವಂತೆ ಮೈಕೇಲ್ ಓಡ್ವಯರ್ ಡೈಅರನಿಗೆ ಆಜ್ಞೆ ಮಾಡಿದ. ಅವನ ಆಜ್ಞೆಯಂತೆ ಸೈನಿಕರು ಗುಂಪಿನ ಮೇಲೆ ಒಂದೇಸಮನೆ ಗುಂಡಿನ ಮಳೆಗರೆದರು. ಮೊದಮೊದಲು ಓಡಲು ಯತ್ನಿಸಿದರು. ಸುತ್ತ ಎತ್ತರವಾದ ಗೋಡೆ; ಹತ್ತಿ ತಪ್ಪಿಸಿಕೊಳ್ಳುವಂತೆ ಇಲ್ಲ. ಸೈನಿಕರು ಒಟ್ಟು ೧೬೫೦ ಸತ್ತು ಗುಂಡುಗಳನ್ನು ಹಾರಿಸಿದ್ದರು. ೩೭೯ ಜನ ಗಂಡಸರು, ಹೆಂಗಸರು ಮತ್ತು ಮಕ್ಕಳು ಕೊಲ್ಲಲ್ಪಟ್ಟಿದ್ದರು. ೧೫ ಸಾವಿರ ಜನರಿಗೆ ತೀವ್ರ ಗಾಯಗಳಾದವು. ಸೈನಿಕರ ವಿರುದ್ಧ ಯಾರು ಒಂದು ಕಲ್ಲನ್ನೂ ಎಸೆಯಲಿಲ್ಲ, ಒಂದು ಕಡ್ಡಿಯನ್ನೂ ಎತ್ತಲಿಲ್ಲ, ರಸ್ತೆಗಳಲ್ಲೆಲ್ಲೂ ಮನುಷ್ಯರ ಮಾಂಸ. ನಾಯಿ-ನರಿಗಳು ಮಾಂಸವನ್ನು ಕಿತ್ತು ತಿನ್ನುತ್ತಿದ್ದವು. ಜಲಿಯನ್ ವಾಲಾಬಾಗಿನಲ್ಲಿ ಮಹಾ ಹತ್ಯಾಕಾಂಡವೇ ನಡೆದಿತ್ತು.

ನೊಂದ ಭಾರತ ಪ್ರತಿನಿಧಿ

ಆಕಸ್ಮಿಕ ಘಟನೆ. ಪೆಶಾವರದಿಂದ ರತ್ನಾದೇವಿ ಎಂಬಾಕೆ ತೀರ್ಥಸ್ನಾನ ಮಾಡಲು ಪತಿಯೊಡನೆ ಅಮೃತಸರಕ್ಕೆ ಬಂದಿದ್ದಳು. ಆಕೆಯ ಪತಿಯೂ ಗುಂಡಿಗೆ ಬಲಿಯಾಗಿದ್ದ. ಕೊನೆಯ ಪಕ್ಷ ಪತಿಯ ಶವವನ್ನಾದರೂ ದೊರಿಕಿಸಿಕೊಳ್ಳುವ ಆಸೆಯಿಂದ ಆಕೆ ‘ಜಾಬಾಟಲ ನಾಮ’ ಹತ್ತಿರ ನಿಂತು ಅಳುತ್ತಿದ್ದಳು. ಆದರೆ ಆ ಗುಂಡಿನ ಸುರಿಮಳೆಯಲ್ಲಿ ಒಳಹೊಕ್ಕು ಹುಡುಕುವವರಾರು? ಹತ್ತಿರದಲ್ಲಿಯೇ ಇದ್ದ ಉಧಮ್ ಸಿಂಗನಿಗೆ ಆಕೆಯ ದುಃಖವನ್ನು ಸಹಿಸಲಾಗಲಿಲ್ಲ. ಅವನು ರತ್ನಾದೇವಿಯನ್ನು ಕರೆದುಕೊಂಡು ಶವವನ್ನು ಹುಡುಕತೊಡಗಿದ. ಒಂದು ಗುಪ್ತ ಮಾರ್ಗದಿಂದ ಅವರು ಆ ತೋಟವನ್ನು ಪ್ರವೇಶಿಸಿದರು. ಕತ್ತಲು ದಟ್ಟವಾಗಿ ಆವರಿಸತೊಡಗಿತ್ತು. ಎತ್ತ ನೋಡಿದರೂ ಹೆಣದ ರಾಶಿಗಳೇ. ಅಂತೂ ಅವರು ರತ್ನಾದೇವಿಯ ಪತಿಯ ಶವವಿದ್ಧ ಸ್ಥಳವನ್ನು ಸಮೀಪಿಸಿದರು.’ ಯಾವುದೇ ಪರಿಸ್ಥಿತಿಯಲ್ಲಿ ಅಳಲಾರೆ, ಚೇರಲಾರೆ’ ಎಂದು ರತ್ನಾದೇವಿ ಮಾತುಕೊಟ್ಟಿದ್ದಳು. ಆದರೆ ಕಲ್ಲೆದೆಯನ್ನೂ ಕರಗಿಸುವ ಆ ದೃಶ್ಯವನ್ನು ಕಂಡಾಗ ಚೀತ್ಕಾರ ತಾನೇತಾನಾಗಿ ಹೊರಹೊಮ್ಮಿತು!

ರತ್ನಾದೇವಿ ಆ ಗಳಿಗೆಯಲ್ಲಿ ನೊಂದ ಭಾರತದ ಪ್ರತಿನಿಧಿಯಾಗಿದ್ದಳು.

ಆ ಚೀತ್ಕಾರವನ್ನು ಕೇಳುತ್ತಲೇ ಒಬ್ಬ ಆಂಗ್ಲ ಸೈನಿಕ ಗುಂಡು ಹಾರಿಸಿದ. ಆ ಗುಂಡು ಉಧಮ್ ಸಿಂಗನ ಬಲ ರಟ್ಟೆಯನ್ನು ಸೀಳಿ ಹೊರಹೋಯಿತು. ಅವನ ಕೈಯಿಂದ ರಕ್ತ ಧಾರಾಕಾರವಾಗಿ ಹರಿಯತೊಡಗಿತು. ಉಧಮ್ ಸಿಂಗ್ ತನ್ನ ಪಗಡಿಯನ್ನು ಬಿಚ್ಚಿ ಬಲ ರಟ್ಟೆಗೆ ಬಿಗಿಯಾಗಿ ಕಟ್ಟಿಕೊಂಡ. ಇಬ್ಬರೂ ಸೇರಿ ಆ ಶವವನ್ನು ಹೊರತಂದರು. ಅಂದಿನ ರಾತ್ರೀಯೇ ಕರ್ಫ್ಯು ಆಜ್ಞೆ ಜಾರಿಗೆ ಬಂದಿತು. ಈ ಕಾರಣದಿಂದಾಗಿ ಇನ್ನು ಬದುಕಿ ಉಳಿದು ಬಾಳಿ ಬೆಳಗ ಬೇಕಾಗಿದ್ದ ಅನೇಕ ಗಾಯಾಳುಗಳೂ ಒಬ್ಬರ ಕಣ್ಣಮುಂದೆ ಒಬ್ಬರು ಒದ್ದಾಡುತ್ತ ಕೊನೆಯುಸಿರೆಳೆದರು.

 

ಇಬ್ಬರು ಸೇರಿ ಶವವನ್ನು ಹೊರಕ್ಕೆ ತಂದರು

ಈ ದುರ್ಘಟನೆಯಲ್ಲಿ ಎಷ್ಟೋ ನಿರ್ದೋಷಿ ಸ್ತ್ರೀಯರ ಹಾಗೂ ಮಕ್ಕಳ ಭಯಾನಕ ಕೊಲೆಯಾಯಿತು. ಉಧಮ್ ಸಿಂಗ್ ಈ ಭೀಕರ ದೃಶ್ಯವನ್ನು ಕಂಡು ಕನಲಿ ಕೆಂಡವಾದನು. ಕೊಲೆಯ ಪ್ರತೀಕಾರವನ್ನು ಕೊಲೆಯಿಂದಲೇ ತೀರಿಸುವ ದೃಢ ನಿರ್ಧಾರವನ್ನು ಅಂದೇ ಕೈಗೊಂಡನು.

ಅಮೆರಿಕದಲ್ಲಿ

ಜಾಲಿಯನ್ ವಾಲಾಬಾಗಿನ ಹತ್ಯಾಕಾಂಡದ ಭೀಕರ ಕಲೆಗಳು ಇನ್ನೂ ಮಾಸಿರಲಿಲ್ಲ, ಉಧಮ್ ಸಿಂಗ್ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ. ಅಲ್ಲಿ ಗದರ್ ಪಕ್ಷದ ಸಂಪರ್ಕ ಪಡೆದ. ಶಸ್ತ್ರವನ್ನು ಬಳಸಿ ಬ್ರಿಟಿಷರನ್ನು ವಿರೋಧಿಸಬೇಕೆಂಬ ಅಭಿಪ್ರಾಯವನ್ನು ಅವರು ಪ್ರಸಾರ ಮಾಡುತ್ತಿದ್ದರು. ಪೆಸಿಫಿಕ್ ತೀರದಲ್ಲಿದ್ದು ಅಲ್ಲಿಗೆ ಆಗಮಿಸುತ್ತಿದ್ದ ಕ್ರಾಂತಿಕಾರಿಗಳನ್ನು ಸ್ವಾಗತಿಸಿ ಗೊತ್ತಿದ್ದ ಸ್ಥಳಗಳಿಗೆ ಕರೆದೊಯ್ಯುವ ಕೆಲಸ ಉಧಮ್ ಸಿಂಗನದಾಗಿತ್ತು. ಭಗತ್ ಸಿಂಗ್ ಆಗ ಭಾರತದಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿಗಳ ಸಂಘಟನೆ ಮಾಡುತ್ತಿದ್ದ ಮುಂದಾಳು. ಅವನು ಈ ಕೆಲಸದಲ್ಲಿ ತೊಡಗಿದ್ದಾಗಲೇ ಅವನಿಗೆ ಭಗತ್ ಸಿಂಗನಿಂದ ಕರೆ ಬಂದಿತ್ತು. ಭಾರತಕ್ಕೆ ಬಂದು ತನ್ನೊಡನೆ ಕೆಲಸ ಮಾಡಬೇಕೆಂದು ಭಗತ್ ಸಿಂಗ್ ಉಧಮ್ ಸಿಂಗನಿಗೆ ಬರೆದಿದ್ದನು.

ಮರಳಿ ಭಾರತಕ್ಕೆ

ಉಧಮ್ ಸಿಂಗನು ಅನೇಕ ಆಯುಧಗಳ ಸಹಿತ ಭಾರತಕ್ಕೆ ಮರಳಿದನು .ಆತನೊಡನೆ ಇಪ್ಪತ್ತೈದು ಜನ ಭಾರತೀಯರಲ್ಲದೆ ಒಬ್ಬ ಅಮೆರಿಕನ್ ಮಹಿಳೆಯೂ ಇದ್ದಳು . ಉಧಮ್ ಸಿಂಗನ ತ್ಯಾಗ ಮತ್ತು ಆದರ್ಶಗಳನ್ನು ನೋಡಿ ಅವಳು ಮುಗ್ಧಳಾಗಿದ್ದಳು . ಅವಳೂ ಸಹ ಉಧಮ್ ಸಿಂಗನೊಡನೆ ಇದ್ದು ಕ್ರಾಂತಿಕಾರಿ ಕಾರ್ಯವನ್ನು ಮಾಡುವ ಪಣ ತೊಟ್ಟಿದ್ದಳು.

ಉಧಮ್ ಸಿಂಗ್ ತನ್ನ ಕ್ರಾಂತಿಕಾರಿ ಕೆಲಸಗಳಿಗೆ ಲಾಹೋರ್ ನಗರವನ್ನೇ  ಆರಿಸಿಕೊಂಡನು. ಒಂದು ದಿನ ಕಾರ್ಯಕ್ರಮಕ್ಕಾಗಿ ಮುಂಜಾನೆಯನ್ನು ಹೊರಗೆ ಕಳೆಯಬೇಕಾಯಿತು. ಅವನ ಇಬ್ಬರು ಸ್ನೇಹಿತರಲ್ಲದೆ ಅಮೆತಿಕನ್ ಮಹಿಳೆಯೂ ಅವರೊಡನಿದ್ದಳು. ಲೈಂಡೊ ಬಾಜಾರಿನಿಂದ ಟಾಂಗಾ ನಿಲ್ಲಿಸಿದ್ದರು. ಪೊಲೀಸರು ಇತರನ್ನು ಬಿಟ್ಟು ಉಧಮ್ ಸಿಂಗನನ್ನು ಮಾತ್ರ ಹಿಡಿದುಕೊಂಡು ಹೋದರು. ಅವನ ಬ್ರೀಫ್ ಕೇಸ್ ತೆಗೆದು ನೋಡಿದಾಗ ಆದರಲ್ಲಿ ನಾಲ್ಕು ಅಮೆರಿಕನ್ ಪಿಸ್ತೂಲುಗಳು ಹಾಗೂ ನಾಲ್ಕುನೂರು ಗುಂಡುಗಳೂ ದೊರೆತವು. ಅಕ್ರಮವಾಗಿ ಮದ್ದುಗುಂಡುಗಳನ್ನು ಸಂಗ್ರಹಿಸಿದ ಅಪರಧಕ್ಕಾಗಿ ಉಧಮ್ ಸಿಂಗನ ಮೇಲೆ ಪೊಲೀಸರು ಖಟ್ಲೆ ನಡೆಸಿದರು. ಉಧಮ್ ಸಿಂಗನಿಗೆ ನಾಲ್ಕು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಆಯಿತು.

ಕಾರಾಗೃಹ ವಾಸ ಮುಗಿದ ಮೇಲೆ ಅವನು ಸ್ವಲ್ಪ ಕಾಲವನ್ನು ಸ್ವಗ್ರಾಮ ಸುನಾನದಲ್ಲಿ ಕಳೆದನು.

ಸಾಧುವಿನ ವೇಷದಲ್ಲಿ

ಉಧಮ್ ಸಿಂಗ್ ಓಡಾಡುವುದೇ ದುಸ್ತರವಾಯಿತು. ಯಾವಾಗಲೂ ಪೊಲೀಸರು ಹಿಂದೆಯೇ ಇರುತ್ತಿದ್ದರು. ಅದಕ್ಕಾಗಿ ಅವನು ಕಾಶ್ಮೀರಕ್ಕೆ ಹೋಗುವ ಇರುತ್ತಿದ್ದರು. ಅದಕ್ಕಾಗಿ ಅವನು ಕಾಶ್ಮೀರಕ್ಕೆ ಹೋಗುವ ತೀರ್ಮಾನವನ್ನು ಕೈಗೊಂಡನು. ಜಮ್ಮುವಿನಲ್ಲಿ ಸಾಧು ವೇಷವನ್ನು ಧರಿಸಿದನು. ಕೈಯಿಂದ ನೇಯ್ದ ಉಣ್ಣೆ ಬಟ್ಟೆಯ ಕಾವಿ ಬಣ್ಣದ ನಿಲುವಂಗಿಯನ್ನು ತೊಟ್ಟುಕೊಂಡನು. ಅಂತಹದೇ ಒಂದು ಟೋಪಿಯನ್ನು ಧರಿಸಿದನು. ಕಾವಿ ಬಣ್ಣದ ಕಾಲುಚೀಲುದ ಮೇಲೆ ಖಾಕಿ ಬಣ್ಣದ ಬೂಟ್ಸ್ ಹಾಕಿಕೊಂಡನು. ಕಾಲುನಡಿಗೆಯಲ್ಲಿಯೇ ಶ್ರೀನಗರವನ್ನು 1932 ಜೂನ್ ಮಧ್ಯಭಾಗದಲ್ಲಿ ತಲುಪಿದನು. ಅಲ್ಲಿ ಸ್ವರ್ಣ ಸಿಂಗ್ ಎಂಬವನನ್ನು ಭೇಟಿಯಾದನು. ಉಧಮ್ ಸಿಂಗ್ ಮೈ ತುಂಬಿಕೊಂಡಿದ್ದ. ಅಲ್ಲದೆ ಚುರುಕಾಗಿ ಕಂಡುಬಂದನು. ಆತನಿಗೆ ಸಾಕಷ್ಟು ಆತ್ಮವಿಶ್ವಾಸ ಬಂದಿತ್ತು. ಸ್ವರ್ಣಸಿಂಗನಿಗೆ ಈತನ ಪ್ರಭಾವಶಾಲಿಯಾದ ಆಕರ್ಷಕ ವ್ಯಕ್ತಿಯಾಗಿ ಕಂಡುಬಂದನು. ತನ್ನೊಡನೆ ವಾಸಿಸುವಂತೆ ಉಧಮ್ ಸಿಂಗನನ್ನು ಆಹ್ವಾನಿಸಿದನು, ಉಧಮ್  ಸಿಂಗನು ಯಾವ ಸಂಕೋಚವೂ ಇಲ್ಲದೆ ಒಪ್ಪಿಕೊಂಡನು. ಹದಿನೈದು ಕೊಠಡಿಗಳಿಂದ ಕೂಡಿದ ಎರಡಂತಸ್ತಿನ ಮನೆಗೆ ನಡೆದರು. ಮನೆಗೆಲ್ಲಾ ಇವರಿಬ್ಬರೆ.

ಉಧಮ್ ಸಿಂಗ್  ಸ್ವರ್ಣ ಸಿಂಗನೊಡನೆ ಎರಡು ವಾರಗಳನ್ನು ಕಳೆದನು. ಸ್ವರ್ಣ ಸಿಂಗನ ಸಲಹೆತಯಂತೆ ಉಧಮ್ ಸಿಂಗ್ ಯಾವುದಾದರೂ ಒಂದು ಕೆಲಸ ಹಿಡಿಯಲು ಒಪ್ಪಿಕೊಂಡನು. ಒಬ್ಬ ಮೋಟರ್ ರಿಪೇರಿಯವನ ಹತ್ತಿರ ಹೋದರು. ಅವನ ಮೂರು ರೂಪಾಯಿ ದಿನಗೂಲಿ ಕೊಡುವುದಾಗಿ ಹೇಳಿದನು. ಅದು ಇವರಿಗೆ ಹಿಡಿಸಲಿಲ್ಲ . ಅನಂತರ ಒಬ್ಬ ಸಿಖ್ ಮರಗೆಲಸದವನ ಬಳಿಗೆ ಹೋದರು. ಇವನ ಕೆಲಸವನನು ಪರೀಕ್ಷಿಸಿದ ಬಳೀಕ ದಿನಕ್ಕೆ ಮೂರು ರೂಪಾಯಿ ಕೋಲಿಯಮೇಲೆ ಇವನು ನೇಮಿಸಿಕೊಳ್ಳಲಾಯಿತು. ಮಾಲೀನು ಸಿಖ್ ಆದುದರಿಂದ ಉಧಮ್ ಸಿಂಗ್ ಅವನಲ್ಲಿ ಕೆಲಸಕ್ಕೆ ನಿಂತನು. ಉಧಮ್ ಸಿಂಗ್ ಅಲ್ಲಿ ಹತ್ತು ದಿನ ಕೆಲಸ ಮಾಡಿದನು ಪೊಲೀಸರು ಸೆರೆ ಹಿಡಿದರು. ಸ್ವರ್ಣ ಸಿಂಗನನ್ನು ಮಾತ್ರ ಇಟ್ಟುಕೊಂಡು ಉಧಮ್ ಸಿಂಗನನ್ನು ಬಿಡುಗಡೆ ಮಾಡಿದರು.

ಕ್ರಾಂತಿಕಾರಿ ಉಧಮ್ ಸಿಂಗ್

ಜಾಲೀಯನ್ ವಾಲಾಬಾಗ್ ಹತ್ಯಾಕಾಂಡವನ್ನು ಕಂಡಂದಿ ನಿಂದಲೇ ಉಧಮ್ ಸಿಂಗ್ ಕ್ರಾಂತಿಕಾರಿಯಾಗಿದ್ದ. ಅವನ ಕರೆಯಂತೆ ಉಧಮ್ ಸಿಂಗ್ ಕ್ರಾಂತಿಕಾರಿಯಾಗಿದ್ದ  ಅವನ ಕರೆಯಂತೆ ಉಧಮ್ ಸಿಂಗ್ ಅಮೆರಿಕ ದಿಂದ ಭಾರತಕ್ಕೆ ಶಸ್ತ್ರಗಳನ್ನು ತಂದಿದ್ದ.ಅವನು ಕಾಶ್ಮೀರದಲ್ಲಿದ್ದಾಗ ಭಗತ್ ಸಿಂಗನ ಭಾವ ಚಿತ್ರವನ್ನು ಹಿಡಿದೇ ತಿರುಗುತ್ತಿದ್ದನು. ಕ್ರಾಂತಿಕಾರಿ ಗೀತೆಗಳೆಂದರೆ ಉಧಮ್ ಸಿಂಗನಿಗೆ ಪಂಚಪ್ರಾಣ. ಅದರಲ್ಲಿಯೂ  ರಾಮಪ್ರಸಾದ ಬಿಸ್ಮಿಲ್ಲಾರವರಿಂದ ರಚಿತವಾದ ಘಜಲ್ ತುಂಬಾ ಪ್ರಸಿದ್ಧವಾಗಿದ್ದವು ಅವುಗಳನ್ನು ಓದಿದಂತೆಲ್ಲ ಅವನ  ಮೈನವಿರೇಳುತ್ತಿತ್ತು. ಅವನ ಅಸಾಧಾರಣ ಎದೆಗಾರಿಕೆ ಮತ್ತು ತ್ಯಾಗಗಳನ್ನು ಸ್ವರ್ಣಸಿಂಗ್ ಬಹುವಾಗಿ ಮೆಚ್ಚಿಕೊಂಡಿದ್ದನು. ಸ್ವಲ್ಪಕಾಲ ಉಧಮ್ ಸಿಂಗ್ ಅಮರನಾಥಕ್ಕೆ ಹೋಗಿದ್ದನು. ಅಲ್ಲಿ ಯಾತ್ರಾರ್ಥಿಗಳಿಗೆ ಸಹಾಯ ಮಾಡುವುದರಲ್ಲಿ ತುಂಬಾ ದಣಿದು ಹಿಂತಿರುಗಿದನು. ಅಷ್ಟರಲ್ಲಿ ಸ್ವರ್ಣ ಸಿಂಗನನ್ನು ಕಾಲ್ನಡಿಗೆಯಲ್ಲಿ ಜಮ್ಮುನಿಗೆ ಕರೆದುಕೊಂಡು ಹೋಗುವರೆಂಬ ವಿಷಯ ಉಧಮ್ ಸಿಂಗನಿಗೆ ತಿಳಿಯಿತು. ಇದನ್ನು ಅವನಿಂದ ಸಹಿಸಲಾಗಿಲಿಲ್ಲ. ಮಧ್ಯೆ ಪ್ರವೇಶ ಮಾಡಿದ. ಮೊದಲು ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆರಲ್ಲಿ ಅನಂತರ ಮ್ಯಾಜಿಸ್ಟ್ರೇಟರ ಬಳಿ ಸ್ವರ್ಣ ಸಿಂಗನ ಪರವಾಗಿ ಮಾತನಾಡಿದ. ಅವರಿಬ್ಬರೂ ತಾವು ಏನೂ ಮಾಡಲು ಸಾಧ್ಯವಿಲ್ಲ ಎಂದರು. ಆದರೆ ಮ್ಯಾಜಿಸ್ಟ್ರೇಟ್ ಅವರು ಒಂದು ಸಲಹೆ ಮಾಡಿದರು. ಉಧಮ್ ಸಿಂಗ್ ಆಗಲಿ ಅಥವಾ ಬೇರೆ ಯಾರಾದರೂ ಆಗಲಿ ಬಸ್ ಟಿಕೆಟ್ಟುಗಳನ್ನು ಕೊಂಡು ಕೊಡುವುದಾದರೆ. ಸ್ವರ್ಣ ಸಿಂಗನನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗ ಬಹುದು ಎಂದರು. ಕೊನೆಗೆ ಸ್ವರ್ಣ ಸಿಂಗ್ ಬಸ್ಸಿನಲ್ಲಿಯೇ ಪ್ರಯಾಣ ಮಾಡಿದನು. ಉಧಮ್ ಸಿಂಗ್ ಶ್ರೀನಗರದಲ್ಲಿಯೇ ಕೆಲಕಾಲ ಉಳಿದನು.

ಒಂದೇ ಗುರಿ

ಉಧಮ್ ಸಿಂಗ್ ಎಲ್ಲೇ ತಿರುಗಲಿ ಎಷ್ಟೇ ಕಾಲ ಇರಲಿ ಅವನ ಅಂತಿಮ ಗುರಿ ಒಂದೆ – ಮೈಕೆಲ್ ಓಡ್ವಯರನ ಕೊಲೆ. ೧೯೧೯ರ ಏಪ್ರಿಲ್ ೧೩ರಂದು ತಾನು ಕೈಗೊಂಡ ಕೊಲೆಯ ಪ್ರತೀಕಾರವನ್ನು ಕೊಲೆ ಯಿಂದಲೇ ತೀರಿಸುವ ದೃಢವಿರ್ಧಾರ  ಆಗಾಗ್ಗೆ ನೆನಪಿಗೆ ಬರುತ್ತಿತ್ತು. ಅಂತೆಯೇ ಆತ ಅನೇಕ ಬಾರಿ ಇಂಗ್ಲೆಂಡಿಗೆ ಹೋಗುವ ಮಾತುಗಳನ್ನಾಡುತ್ತಿದ್ದ. ಇಂಗ್ಲೆಂಡಿಗೆ ಹೋಗುವುದರಲ್ಲಿ ಒಂದು ಗೊತ್ತಾದ ಉದ್ದೇಶವಿತ್ತು. ಆದರೆ ಹಿಂತಿರುಗೆ ಬರುವ ಭರವಸೆ ಇರಲಿಲ್ಲ. ಬಹಳ ಯೋಚನೆ ಮಾಡಿ ಉಧಮ್ ಸಿಂಗ್ ೧೯೩೪ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿರಬೇಕು.

ಸ್ವಲ್ಪ ಕಾಲದಲ್ಲಿಯೇ ಉಧಮ್ ಸಿಂಗ್ ಉಂಡನ್ನಿನ ಪರಿಚಯವನ್ನು ಮಾಡಿಕೊಂಡನು. ಅವನು ಅಲ್ಲಿ ಕೂಲಿ-ನಾಲಿ ಮಾಡಿ ಜೀವಿಸುತ್ತಿದ್ದ. ಅವನಿಗೆ ಭಾರತೀಯರ ಸಂಪರ್ಕವೂ ಬೇಕಾಗುತ್ತಿತ್ತು. ಆದರೆ ಹೆಚ್ಚುಮಂದಿ ಭಾರತೀಯರ ಭೇಟಿಯಾಗುವ ಸ್ಥಳಗಳು ಹೆಚ್ಚಾಗಿರಲಿಲ್ಲ. ಷಪರ್ಡ್ ಬುಷ್ ನಲ್ಲಿನ ಗುರುದ್ವಾರದಲ್ಲಿ ಮಾತ್ರ ಸಾಕಷ್ಟು ಜನರ ಭೇಟಿಯಾಗುತ್ತಿತ್ತು. ಅವನು ಆಗಾಗ್ಗೆ ಅಲ್ಲಿಗೆ ಉಧಮ್ ಸಿಂಗನಿಗೆ ಕ್ರಾಂತಿಕಾರಿ ಗೀತೆಗಳ ಮೇಲೆ ಅತಿಯಾದ ಪ್ರೇಮ. ಅವನ ಕ್ರಾಂತಿಕಾರಿ ಗೀತೆಗಳ ಮೇಲೆ ಅತಿಯಾದ ಪ್ರೇಮ. ಅವನ ಕ್ರಾಂತಿಕಾರಿ ಗೀತೆಗಳು ಅನೇಕ ಗೆಳೆಯರನ್ನು ಒದಗಿಸಿಕೊಟ್ಟವು. ಅಂತಹ ಗೆಳೆಯರಲ್ಲಿ ಶಿವಸಿಂಗ್ ಜೋಹಲ್ ಒಬ್ಬ ಶಿವಸಿಂಗ್ ಜೋಹಲ್ ಗೆ ಉಧಮ್ ಸಿಂಗ್ ಇತರರಿಗಿಂತ ಭಿನ್ನ ವ್ಯಕ್ತಿಯಾಗಿ ಕಂಡುಬಂದ.

ಕೇವಲ ಮಾತುಗಾರ

ಉಧಮ್ ಸಿಂಗನಲ್ಲಿ ಲೌಕಿಕವಾದ ಯಾವ ಆಶೋತ್ತರಗಳೂ ಕಂಡುಬರಲಿಲ್ಲ. ಆದರೆ ಅವನು ಏನನ್ನೋ ಮಾಡಲು ಹವಣಿಸುತ್ತಿದ್ದಾನೆಂಬುದು ಮಾತ್ರ ಹಿಂತಿರುಗಿದನು. ಅಷ್ಟರಲ್ಲಿ ಸ್ವರ್ಣ ಸಿಂಗನನ್ನು ಕಾಲ್ನಡಿಗೆಯಲ್ಲಿ ಜಮ್ಮುನಿಗೆ ಕರೆದುಕೊಂಡ ಹೋಗುವರೆಂಬ ವಿಷಯ ಉಧಮ್ ಸಿಂಗನಿಗೆ ತಿಳಿಯಿತು. ಇದನ್ನು ಅವನಿಂದ ಸಹಿಸಲಾಗಿಲಿಲ್ಲ. ಮಧ್ಯೆ ಪ್ರವೇಶ ಮಾಡಿದ. ಮೊದಲು ಪಲೀಸ್ ಡೆಪ್ಯುಟಿ ಸೂಪರಿಂಟೆಂಡೆರಲ್ಲಿ ಅನಂತರ ಮ್ಯಾಜಿಸ್ಟ್ರೇಟರ ಬಳಿ ಸ್ವರ್ಣ ಸಿಂಗನ ಪರವಾಗಿ ಮಾತನಾಡಿದ. ಅವರಿಬ್ಬರೂ ತಾವು ಏನೂ ಮಾಡಲು ಸಾಧ್ಯವಿಲ್ಲ ಎಂದನು. ಆದರೆ ಮ್ಯಾಜೀಸ್ಟ್ರೇಟ್ ಅವರು ಒಂದು ಸಲಹೆ ಮಾಡಿದರು. ಉಧಮ್ ಸಿಂಗ್ ಆಗಲಿ ಅಥವಾ ಬೇರೆ ಯಾರಾದರೂ ಆಗಲಿ ಬಸ್ ಟಿಕೆಟ್ಟುಗಳನ್ನು ಕೊಂಡು ಕೊಡುವುದಾದರೆ. ಸ್ವರ್ಣಸಿಂಗನನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗ ಬಹುದು ಎಂದರು. ಕೊನೆಗೆ ಸ್ವರ್ಣಸಿಂಗ್ ಶ್ರೀನಗರದಲ್ಲಿಯೇ ಕೆಲಕಾಲ ಉಳಿದನು.

ಒಂದೇ ಗುರಿ

ಉಧಮ್ ಸಿಂಗ್ ಎಲ್ಲೇ ತಿರುಗಲಿ ಎಷ್ಟೇ ಕಾಲ ಇರಲಿ ಅವನ ಅಂತಿಮ ಗುರಿ ಒಂದೆ-ಮೇಕೆಲ್ ಓಡ್ವಯರನ ಕೊಲೆ. ೧೯೧೯ರ ಏಪ್ರಿಲ್ ೧೩ರಂದು ತಾನು ಕೈಗೊಂಡ ಕೊಲೆಯ ಪ್ರತೀಕಾರವನ್ನು ಕೊಲೆ ಯಿಂದಲೇ ತೀರಿಸುವ ದೃಢವಿರ್ಧಾರ ಆಗಾಗ್ಗೆ ನೆನಪಿಗೆ ಬರುತ್ತಿತ್ತು. ಅಂತೆಯೇ ಆತ ಅನೇಕ ಬಾರಿ ಇಂಗ್ಲೆಂಡಿಗೆ ಹೋಗುವ ಮಾತುಗಳನ್ನಾಡುತ್ತಿದ್ದ. ಇಂಗ್ಲೆಂಡಿಗೆ ಹೋಗುವುದರಲ್ಲಿ ಒಂದು ಗೊತ್ತಾದೆ ಉದ್ದೇಶವಿತ್ತು. ಆದರೆ ಹಿಂತಿರುಗಿ ಬರುವ ಭರವಸೆ ಇರಲಿಲ್ಲ. ಬಹಳ ಯೋಚನೆ ಮಾಡಿ ಉಧಮ್ ಸಿಂಗ್ ೧೯೩೪ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿರಬೇಕು.

ಸ್ವಲ್ಪ ಕಾಲದಲ್ಲಿಯೇ ಉಧಮ್ ಸಿಂಗ್ ಉಂಡನ್ನಿನ ಪರಿಚಯವನ್ನು ಮಾಡಿಕೊಂಡನು. ಅವನು ಅಲ್ಲಿ ಕೂಲಿ – ನಾಲಿ ಮಾಡಿ ಜೀವಿಸುತ್ತಿದ್ದ. ಅವನಿಗೆ ಭಾರತೀಯರ ಸಂಪರ್ಕವೂ ಬೇಕಾಗುತ್ತಿತು. ಆದರೆ ಹೆಚ್ಚುಮಂದಿ ಭಾರತೀಯರ ಭೇಟಿಯಾಗುವ ಸ್ಥಳಗಳು ಹೆಚ್ಚಾಗಿರಲಿಲ್ಲ. ಷಪರ್ಡ್ ಬುಷನಲ್ಲಿನ  ಗುರುದ್ವಾರದಲ್ಲಿ ಮಾತ್ರ ಸಾಕಷ್ಟು ಜನರ ಭೇಟಿಯಾಗುತ್ತಿತ್ತು. ಅವನ ಆಗಾಗ್ಗೆ ಅಲ್ಲಿಗೆ ಉಧಮ್ ಸಿಂಗನಿಗೆ ಕ್ರಾಂತಿಕಾರಿ ಗೀತೆಗಳ ಮೇಲೆ ಅತಿಯಾದ ಪ್ರೇಮ.ಅವನ ಕ್ರಾಂತಿಕಾರಿ ಗೀತೆಗಳ ಮೇಲೆ ಅತಿಯಾದ ಪ್ರೇಮ. ಅವನ ಕ್ರಾಂತಿಕಾರಿ ಗೀತೆಗಳು ಅನೇಕ ಗೆಳೆಯರನ್ನು ಒದಗಿಸಿಕೊಟ್ಟವು. ಅಂತಹ ಗೆಳೆಯರಲ್ಲಿ ಶಿವಸಿಂಗ್ ಜೋಹಲ್ ಗೆ ಉಧಮ್ ಸಿಂಗ್ ಇತರರಿಗಿಂತ ಭಿನ್ನ ವ್ಯಕ್ತಿಯಾಗಿ ಕಂಡುಬಂದ. 

ಉಧಮ್ ಸಿಂಗ್ ಗುಂಡುಗಳನ್ನು ಹಾರಿಸಿದ

ಕೇವಲ ಮಾತುಗಾರ

ಉಧಮ್ ಸಿಂಗನಲ್ಲಿ ಲೌಕಿಕವಾದ ಯಾವ ಆಶೋತ್ತರಗಳೂ  ಕಂಡುಬರಲಿಲ್ಲ. ಆದರೆ ಅವನು ಏನನ್ನೋ ಮಾಡಲು ಹವಣಿಸುತ್ತಿದ್ದಾನೆಂಬುದು ಮಾತ್ರ ಗೊತ್ತಾಗುತ್ತಿತ್ತು. ಬಹಳ ದಿನಗಳ ಕಾಲ ಏನೂ ನಡೆಯದಿದ್ದುದನ್ನು ಕಂಡ ಶಿವಸಿಂಗ್ ಉಧಮ್ ಸಿಂಗನನ್ನು ‘ಕೇವಲ ಒಬ್ಬ ಮಾತುಗಾರ’ನೆಂದು ಗೇಲಿ ಮಾಡಿದನು. ಯಾವುದಕ್ಕೂ ಕಾಲ ಕೂಡಿಬರಬೇಕು. ಉಧಮ್ ಸಿಂಗನಿಗೆ ಬೇಕಾಗಿದ್ದವರು ಸರ್ ಮೈಕೇಲ್ ಓಡ್ವಯರ್ ಮತ್ತು ಭಾರತದ ವ್ಯವಹಾರಗಳ ಬ್ರಿಟಿಷ್ ಮಂತ್ರಿ ಲಾರ್ಡ್ ಜೆಟ್ ಲೆಂಡ್. ಉಧಮ್ ಸಿಂಗ್ ಅವರ ಹುಡುಕಾಟದಲ್ಲಿದ್ದ. ಗೇಲಿ ಮಾತುಗಳನ್ನು ಕೇಳಿ ಅವನಿಗೆ ಬೇಸರವಾಯಿತು. ಕ್ರಮೇಣ ಉಧಮ್ ಸಿಂಗ್ ಶಿವಸಿಂಗನಲ್ಲಿಗೆ ಹೋಗುವುದನ್ನೇ ನಿಲ್ಲಿಸಿದ. ತನ್ನ ಕಾರ್ಯದಲ್ಲಿ ಮಗ್ನನಾದ.

ಸೆರಗಿನ ಕೆಂಡ

ಸರ್ ಮೈಕೇಲ್ ಓಡ್ವಯರನು ಲಂಡನ್ ನಗರದ ಕೆನ್ ಸಿಂಗ್ ಟನ್ ಎಂಬ ಭಾಗದಲ್ಲಿ ವಾಸಿಸುತ್ತಿದ್ದನು. ಉಧಮ್ ಸಿಂಗ್ ಓಡ್ವಯರನ ಜೊತೆ ಸ್ನೇಹ ಬೆಳೆಸಿದನು. ಆ ಸ್ನೇಹ ಎಷ್ಟರಮಟ್ಟಿಗೆ ಬೆಳೆಯಿತೆಂದರೆ ಓಡ್ವಯರನು ಅವನನ್ನು ತನ್ನ ಮನೆಗೆ ಚಹಾ ಪಾನಕ್ಕೆ ಕರೆದೊಯ್ಯುತ್ತಿದ್ದನು. ಆ ಚಹಾ ಪಾನದ ಸಮಯದಲ್ಲಿ ಓಡ್ವಯರನು ಪಂಜಾಬಿನಲ್ಲಿ ನಡೆದ ಘಟನೆಗಳ ಬಗ್ಗೆ ಹರಟೆ ಕೊಚ್ಚುತ್ತಿದ್ದನು. ತಾನು ಮಾಡಿದ ಉಧಮ್ ಸಿಂಗ್ ಯಾವ ಪ್ರತಿಕ್ರಿಯೆ ಯನ್ನು ತೋರಿಸದೇ ಸಮ್ಮನೆ ಕುಳಿತುಕೊಳ್ಳುತ್ತಿದ್ದನು.

ಓಡ್ವಯರನ ಇನ್ನೊಂದು ವಾಸಸ್ಥಳ ಡೆವಾನ್ ಷ್ಟೆರಿನಲ್ಲಿತ್ತು. ಅವನು ಆಗಾಗ ವಿಶ್ರಾಂತಿಗಾಗಿ ಆಲ್ಲಿಗೆ ಹೋಗುತ್ತಿದ್ದನು. ಒಮ್ಮೆ ಉಧಮ್ ಸಿಂಗನನ್ನು ಅಲ್ಲಿಗೆ ಚಹಾ ಪಾನಕ್ಕೆ ಆಹ್ವಾನಿಸಿದನು. ಆಗ ಮನೆಯಲ್ಲಿ ಮಾಡಿದ್ದರೆ ಉಧಮ್ ಸಿಂಗ್ ಓಡ್ವಯರನ ಕತೆಯನ್ನು ಆಗಲೇ ಮುಗಿಸಿಬಿಡಬಹುದಿತ್ತು. ಆದರೆ ಇದು ಉಧಮ್ ಸಿಂಗನ ವೈಯಕ್ತಿಕ ಸೇಡಿನ ಭಾವನೆಯಾಗಿರಲಿಲ್ಲ. ಹಾಡು ಹಗಲಿನಲ್ಲಿ ಎಲ್ಲರೂ ನೋಡುತ್ತಿರುವಂತೆ-ಗುರಿ ತಪ್ಪದಂತೆ-ಗುಂಡಿಕ್ಕೆ ಕೊಲ್ಲುವ ಭಾರತೀಯ ಕ್ರಾಂತಿಕಾರಿಗಳ ಉಜ್ವಲ ಪರಂಪರೆಗೆ ಉಧಮ್ ಸಿಂಗ್ ಸೇರಿದ್ದ ಅಂತಹ ಸಮೂಹುರ್ತಕ್ಕಾಗಿ ಆತ ಕಾಯುತ್ತಿದ್ದ. ಸೆರೆಗಿನಲ್ಲಿಯೇ ಕೆಂಡವಿದೆಯೆಂಬುದು ಓಡ್ವಯರನಿಗೆ ಹೇಗೆ ತಿಳಿಯಬೇಕು!

ಸರ್ಪಸೇಡು

ಉಧಮ್ ಸಿಂಗನ ರಕ್ತ ಕುದಿಯುತ್ತಲೇ ಇತ್ತು. ಜಾಲಿಯನ್ ವಾಲಾಬಾಗಿನ ಭೀಕರ ಘಟನೆ ನೆನಪಿಗೆ ಬಂದಾಗ ಮೈ ನವಿರೇಳುತ್ತಿತ್ತು. ಸೇಡಿನ ಕೋಡಿ ಹರಿಯುತ್ತಿತ್ತು. ಹಾವಿನ ರೋಷ ಹನ್ನೆರಡು ವರ್ಷ ಎನ್ನುತ್ತಾರೆ. ಆದರೆ ಉಧಮ್ ಸಿಂಗನ ರೋಷ ಅದಕ್ಕೂ ಹೆಚ್ಚಿನದಾಗಿತ್ತು. ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿ ಆತ ಅಖಂಡ ಇಪ್ಪತ್ತೊಂದು ವರ್ಷಗಳ ಕಾಲ ಕಾಯಬೇಕಾಯಿತು.

೧೯೪೦ರ ಮಾರ್ಚ್ ೧೩ರಂದು ಉಧಮ್ ಸಿಂಗನ ಜೀವನದಲ್ಲಿ ಅಪೂರ್ವ ದಿನ. ಆ ದಿನ ಆತ ಒಂದು ಪ್ರಕಟಣೆಯನ್ನೂ ನೋಡಿದ. ಆ ಪ್ರಕಟಣೆಯಂತೆ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿಗಳ ಆಶ್ರಯದಲ್ಲಿ ಕ್ಯಾಕ್ಸ್ ಟನ್ ಹಾಲನಲ್ಲಿ ಪರ್ಸಿ ಸೈಕ್ಸ್, ಆಫ್ಘಾನಿಸ್ಥಾನವನ್ನು ಕುರಿತು ಮಾತನಾಡುವವರಿದ್ದರು. ಲಾರ್ಡ್ ಜೆಟ್ ಲೆಂಡ್ ಅಧ್ಯಕ್ಷ ಮೈಕೇಲ್ ಓಡ್ವಯರನೂ ಭಾಗವಹಿಸುತ್ತಿದ್ದ!

ಬಹು ದಿನದಿಂದ ಎದುರು ನೋಡುತ್ತಿದ್ದ ಅದೃಷ್ಟದ ದಿನ ಬಂದಿತೆಂದು ಉಧಮ್ ಸಿಂಗ್ ಹಿಗ್ಗಿದ.

ಮೈಕೇಲ್ ಓಡ್ವಯರ್ ತನ್ನ ಹೆಂಡತಿಗೆ, “ಐದು ಗಂಟೆಗೆ ಟೀ ಹೊತ್ತಿಗೆ ಬಂದುಬಿಡುತ್ತೇನೆ” ಎಂದು ಹೇಳಿ ಮನೆ ಬಿಟ್ಟ.

ಉಧಮ್ ಸಿಂಗ್ ಸಕಲ ಸಿದ್ಧತೆಯೊಂದಿಗೆ ಸಭೆಗೆ ಧಾವಿಸಿದ. ಸಭೆ ಮಧ್ಯಾಹ್ನ ಮೂರು ಗಂಟೆಗೆ ಪ್ರಾರಂಭವಾಯಿತು. ಮೊದಲು ಪರ್ಸಿ ಸೈಕ್ಸ್ ಮಾತನಾಡಿದ. ಅನಂತರ ಲೂಯಿ ಡೇನ್, ಲಾರ್ಡ್ ಲ್ಯಾಮಿಂಗ್ ಟನ್ ಮತ್ತು ಮೈಕೇಲ್ ಓಡ್ವಯರ್ ಮಾತನಾಡಿದರು.

ಕಟುಕ ಉರುಳಿದ

‌‌ಓಡ್ವಯರನ ಜಾಲಿಯನ್ ವಾಲಾಬಾಗಿನಲ್ಲಿ ಗುಂಡಿನ ಮಳೆಗರೆದದ್ದನ್ನು ಪ್ರಸ್ತಾಪಿಸಿದ; ಇನ್ನೂ ನೂರಾರು ವರ್ಷ ಭಾರತವನ್ನು ದಾಸ್ಯದಲ್ಲಿಡಬಹುದು., ಅಮೃತಸರದಲ್ಲಿ  ಗುಂಡಿನ ಮಳೆಗರೆಯುವ ಆಜ್ಙೆನ್ನು ಕೊಟ್ಟೊಡನೆ ಭಾರತೀಯರು ಬಾಲ ಮುದುರಿಕೊಂಡನು ಓಡಿಹೋದರು ಎಂದೆಲ್ಲ ಬಡಾಯಿ ಕೊಚ್ಚಿಕೊಂಡನು, ಧನ್ಯವಾದದೊಡನೆ ಸಭೆ ಮುಕ್ತಾಯಗೊಂಡಿತು.

ಸಭೆ ಇನ್ನೇನು ಚದುರಬೇಕು ಆ ಹೊತ್ತಿಗೆ  ಉಧಮ್ ಸಿಂಗ್ ಸ್ವಲ್ಪಸ್ವಲ್ಪ ಜರುಗಿಕೊಂಡು ವೇದಿಕೆಯ ಬಳಿ ಬಂದಿದ್ದ.

ಸ್ವಲ್ಪ ಹೊತ್ತಿನಲ್ಲೇ ಗುಂಡುಗಳ ಸದ್ದು ಕೇಳಿಬಂತು. ಎಲ್ಲೆಲ್ಲೂ ಗಡಿಬಿಡಿಯಾಯಿತು.ಉಧಮ್ ಸಿಂಗ್ ಗುಂಡುಗಳನ್ನು ಹಾರಿಸಿದ್ದ. ಅವು ಗುರಿ ತಪ್ಪದೆ ಓಡ್ವಯರ ನಿಗೆ ತಗುಲಿದ್ದವು. ಅವನು ನೆಲಕ್ಕೆಬಿದ್ದನು. ಬಿದ್ದವನು ಮತ್ತೆ ಮೇಲೇಳಲೇ ಇಲ್ಲ.

ಲಾರ್ಡ ಲ್ಯಾಮಿಂಗ್‌ಟನ್ ಮತ್ತು ಲೂಯಿಡೇನ್‌ರವರಿಗೆ ಗಾಯಗಳಗಿದ್ದವು. ಲಾರ್ಡ್‌ಜೆಟ್ ಲೆಂಡ್ ಸಹ ನೆಲಕ್ಕುರುಳಿದ್ದ. ಉಧಮ್ ಸಿಂಗ್ ಕೇವಲ ಹತ್ತೆಂಟು ಅಡಿಗಳಷ್ಟೇ ಅಂತರದಲ್ಲಿದ್ದ. ಆತನನ್ನು ಹಿಡಿದುಕೊಂಡರು. ಆತನ ರಿವಾಲ್ವರನ್ನು ಪೊಲೀಸರಿಗೆ ಒಪ್ಪಿಸಿದರು. ಆದರೇನು, ಉಧಮ್ ಸಿಂಗನ ಆಸೆ ಈಡೇರಿತ್ತು.

ಮಹಮ್ಮದ ಸಿಂಹ ಆಜಾದ್

ಉಧಮ್ ಸಿಂಗ್ ತನ್ನ ಹೆಸರು ಮಹಮ್ಮದ ಸಿಂಹ ಆಜಾದ ಎಂದು ತಿಳಿಸಿದನು. (ಇದಕ್ಕೆ ಕಾರಣ ತಾನು ಆ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆದಿದ್ದರಬೇಕು.) ಅವನನ್ನು ಪರೀಕ್ಷಿಸಿದಾಗ ಅವನಲ್ಲಿ ಇಪ್ಪತ್ತಮೂರು ಸುತ್ತಿಗೆ ಆಗುವಷ್ಟು ಗುಂಡುಗಳು, ಮೋಚಿಗಳ ಒಂದು ಚಾಕು ಇದ್ದುದು ಕಂಡುಬಂದಿತು. ಬಂದೂಕು ತಜ್ಙರೊಬ್ಬರ ಮಾತಿನಂತೆ, ಆತನ ರಿವಾಲ್ವರಿನಲ್ಲಿ ದೋಷವಿತ್ತಂತೆ. ಸರಿಯಾಗಿದ್ದಿದ್ದರೆ ಇನ್ನೂ ಏನೇನಾಗುತ್ತಿತ್ತೋ!

ಉಧಮ್ ಸಿಂಗ್ ತಪ್ಪೊಪ್ಪಿಕೊಳ್ಳವ ಭರದಲ್ಲಿದ್ದ ಪತ್ತೇದಾರ ರಿಚರ್ಡ್ ಡೈಟಿಸ್ ಅವನಿಗೆ ’ ನಿನ್ನನ್ನು ವಿಚಾರಣೆಯಾಗುವವರೆಗೆ  ಇಟ್ಟುಕೊಂಡಿರುತ್ತೇವೆ’ ಎಂದು ಹೇಳಿದ. ಉಧಮ್ ಸಿಂಗ್ ಕೂಡಲೇ ಉತ್ತರಿಸಿದ: ” ಉಪಯೋಗವಿಲ್ಲ, ಎಲ್ಲಾ ಮುಗಿಯಿತ್ತು.” ಓಡ್ವಯರನ ದೇಹವನ್ನು ತೋರಿಸುತ್ತ ತಾತ್ಯಾರದಿಂದ, “ಅದೋ ಅಲ್ಲಿ ಬಿದ್ದಿದೆ” ಎಂದು ನುಡಿದ ಒಂದು ಹಂತದಲ್ಲಿ “ಜೆಟ್ ಲೆಂಡ್ ಸತ್ತಿದ್ದಾನೆಯೇ? ಸತ್ತಿರಲೇಬೇಕು. ಅವನಿಗೆ ಎರಡು ಬಾರಿ ಗುಂಡಿಟ್ಟಿದ್ದೇನೆ” ಎಂದು ಹೇಳಿದನು. ಬೇಗುದಿಗೊಂಡ ಹೃದಯದಿಂದ ಇನ್ನೆಂತಹ ಮಾತುಗಳು ಹೊರಹೊಮ್ಮಬೇಕು !

ದೇಶಕ್ಕಾಗಿ ಸಂತೋಷದಿಂದ ಸಾಯುತ್ತೇನೆ

ಉಧಮ್ ಸಿಂಗ್ ಭರತದ ಸುಪುತ್ರನೇ ಸರಿ, ತಾಯ್ನಾಡಿನ ಬಗ್ಗೆ ಅದೆಷ್ಟು ಮಮತೆ, ಪ್ರೇಮ, ಗೌರವ ! ಆತನು ಸುಪುತ್ರನಷ್ಟೇ ಅಲ್ಲ ಹೆಮ್ಮೆಯ ಸುಪ್ರತ್ರ. ಲಂಡನ್ನಿನಲ್ಲಿ ಅವನ ವಿಚಾರಣೆಯಾಯಿತು. ಉಧಮ್ ಸಿಮಗ್ ತಪ್ಪನ್ನು ಬೇರೆಯವರ ಮೇಲೆ ಹೊರಿಸಲು ಸಿದ್ದನಿರಲಿಲ್ಲ. ಮೈಕೇಲ್ ಓಡ್ವಯರನ ಬಗ್ಗೆ ತನಗಿದ್ದ ದ್ವೇಷವನ್ನು ಉಧಮ್ ಸಿಂಗ್ ಬಿಚ್ಚಿ ಹೇಳಿದ. ತಾನು ಯಾವ ಸಂಘ-ಸಂಸ್ಥೆಗಳಿಗೂ ಸೇರಿದವನಲ್ಲ ಎಂಬುದನ್ನು ಸ್ವಷ್ಟಪಡಿಸಿದ . ಒಂದು ಹಂತದಲ್ಲಿ ಆತನು ನುಡಿದ: “ನನಗೆ  ಈಗ ಯಾವುದೂ ಲೆಕ್ಕವಿಲ್ಲ. ಸಾಯಲು ನಾನು ಅಳುಕುವುದಿಲ್ಲ. ಮುದಿತನ ಬರುವವರೆಗೆ ಬದುಕಿರುವುದರಲ್ಲಿ ಯಾವ ಸಾರ್ಥಕತೆ ಇದೆ?  ನಾನು ನನ್ನ ದೇಶಕ್ಕಾಗಿ ಸಂತೋಷದಿಂದ ಸಾಯುತ್ತಿದ್ದೇನೆ.”

ಕ್ಯಾಕ್ಸ್ ಟನ್ ಹಾಲ್ ಪ್ರಕರಣವು ಪತ್ರಿಕೆಗಳಲ್ಲಿ ಪ್ರಸಾರವಾಯಿತು. ಉಧಮ್ ಸಿಂಗ್ ಮಾಡಿದ ಕೆಲಸ ಇಂಗ್ಲೆಂಡನ್ನು ನಡುಗಿಸಿತ್ತು. ಕಾಮನ್ಸ್ ಸಭೆಯಲ್ಲಿ ಪ್ರಧಾನಿ ಚೇಂಬರ್ ಲಿನ್ ಹೇಳಿಕೆಯನ್ನಿತ್ತು, ‘ಈ ಪ್ರಕರಣಕ್ಕೆ ಉಧಮ್ ಸಿಂಗ್ ಎಂಬ ಹೆಸರಿನ ಭಾರತೀಯನೊಬ್ಬನು ಕಾರಣವಾಗಿರ ಬೇಕೆಂದು ನಂಬಲಾಗಿದೆ’ ಎಂದು ತಿಳಿಸಿದನು. ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಬಹು ಅಸಮಾಧಾನವು ಕೋಪವು ಉಂಟಾಗಿದೆ  ಎಂದ.

ಆದರೆ ಭಾರತದ ಪತ್ರಿಕೆಗಳು ಬೇರೊಂದು ರೀತಿಯಲ್ಲಿ ಪ್ರಕಟಿಸಿದವು ಉಧಮ್ ಸಿಂಗ್ ಒಬ್ಬ ವೀರ ಎಂದು ಅವು ಕೊಂಡಾಡಿದವು.

ಸೆರೆಮನೆಯಲ್ಲಿ

ಕ್ಯಾಕ್ಸ್ ಟನ್ ಹಾಲ್ ಪ್ರಕರಣವಾದ ಕೂಡಲೇ ಉಧಮ್ ಸಿಂಗನನ್ನು ಬ್ರಿಕ್ಸ್ ಟನ್ ಸೆರೆಮನೆಗೆ ಸಾಗಿಸಲಾಯಿತು. ಅಲ್ಲಿಂದ ಪತ್ರವ್ಯವಹಾರದ ಮೂಲಕ ಶಿವಸಿಂಗ್ ಜೋಹಲ್ ನೊಂದಿಗೆ ಸಂಪರ್ಕವನ್ನು ಬೆಳೆಸಿಕೊಂಡು ಉಧಮ್ ಸಿಂಗ್, ಆದರೆ ತನ್ನ ಹೆಸರನ್ನು ಮಾತ್ರ ಮಹಮದ್ ಸಿಂಗ್ ಆಜಾದ್ ಎಂದೆ ಬರೆಯುತ್ತಿದ್ದ. ಅವನಿಗೆ ಇತಿಹಾಸದ ಪುಸ್ತಕಗಳ ಹಾಗೂ ಭಾರತದ ವಾರ್ತಾ ಪತ್ರಿಕೆಗಳು ಬೇಕಾಗಿದ್ದವು. ಕೆಲವು ದಿವಸಗಳಲ್ಲಿ ಶಿವಿಸಿಂಗನಿಂದ ಹಲವು ಪುಸ್ತಕಗಳನ್ನು ಪಡೆದು. ಆತನಿಗೆ ವಂದನಾಪತ್ರವನ್ನು ಬರೆದು. ಅದರಲ್ಲಿ ತನ್ನ ಮೊಕದ್ದಮೆಯ ಫಲಿತಾಂಶವನ್ನು ಕುರಿತು ಬರೆದಿದ್ದ. ಅವನಿಗೆ ಶಿವಸಿಂಗನನ್ನು ಭೇಟಿಯಾಗುವ ಬಯಕೆಯಿತ್ತು. ಕಾಗದದಲ್ಲಿ ಮತಾಧಿಕಾರಿಗಳು ಬಂದಿಗಳನ್ನು ನೋಡಲು ಅವಕಾಶವಿದೆ ಎಂದು ಬರೆದ. ಶಿವಸಿಂಗನು ಸಿಖ್ಖರ ಖಾಲ್ಸಾಜಾಥಾದ ಕಾರ್ಯದರ್ಶಿಯಾಗಿದ್ದುಗಿದ್ದುದರಿಂದ ಅವನು ತಾನು ಮತಾಧಿಕಾರಿ ಎಂದು ಹೇಳಿ ಉಧಮ್ ಸಿಂಗನನ್ನು ನೋಡಲು ಪ್ರಯತ್ನಿಸಬಹುದಾಗಿತ್ತು. ಪ್ರಾಯಶಃ ಉಧಮ್ ಸಿಂಗ್ ಶಿವಸಿಂಗನಿಂದ ಗುಟ್ಟಾಗಿ ರಿವಾಲ್ವರ್ ಪಡೆಯಲು ಉದ್ದೇಶಿಸಿದ್ದ ಆದರೆ ಉಧಮ್ ಸಿಂಗನು ಕೊಟ್ಟ ಸೂಚನೆ ಶಿವಸಿಂಗನಿಗೆ ಅರ್ಥವಾಗಲಿಲ್ಲ ಎಂದು ಕಾಣುತ್ತದೆ. ಶಿವಸಿಂಗ್ ಉಧಮ್ ಸಿಂಗ್ ನ ಕೋರಿಕೆಯಂತೆ ಪ್ರಾರ್ಥನಾ ಪುಸ್ತಕವನ್ನು ತಲುಪಿಸಿದ್ಧನು. ಪ್ರಾಯಶಃ  ‘ಪ್ರಾರ್ಥನಾ ಪುಸ್ತಕ ಬೇಕು’ ಎಂದು ಬರೆದಾಗ ಉಧಮ್ ಸಿಂಗ್ ‘ರಿವಾಲ್ವರ್ ಬೇಕು’ ಎಂದು ಸೂಚಿಸಿದ್ದ.

ಏಪ್ರಿಲ್ ೧೪ರ ಹೊತ್ತಿಗೆ ಸೆರೆಮನೆಯ ಅಧಿಕಾರಿ ಪುಸ್ತಕಗಳನ್ನು ತರಿಸಿಕೊಡುವುದನ್ನು ನಿಲ್ಲಿಸಿದನು. ಪುಸ್ತಕಗಳನ್ನು ಬಹಿಷ್ಕರಿಸಲಾಗಿದೆಯೇ ಎಂಬುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಉಧಮ್ ಸಿಂಗ್ ಆಧಿಕಾರಿಯನ್ನು ಬೆದರಿಸಿದ.

ಪತ್ರಗಳು

ಉಧಮ್ ಸಿಂಗ್ ತಾನು ಸೆರೆಮನೆಯನ್ನು ಸೇರಿದ ಒಂದೆರಡು ದಿನಗಳಲ್ಲಿಯೇ ಪತ್ರವ್ಯವಹಾರಕ್ಕೆ ತೊಡಗಿದ. ೧೯೪೦ ಮಾರ್ಚ್ ೧೫ರಿಂದ ಜೂನ್ ೭ ರವರೆಗೆ ಪತ್ರ ವ್ಯವಹಾರ ಮಾಡುತ್ತಿದ್ದ. ಉಧಮ್ ಸಿಂಗ್ ಎಲ್ಲಾ ಪತ್ರಗಳನ್ನು ಒಂದೇ ಹೆಸರಿನಲ್ಲಿ ಬರೆದಿಲ್ಲ. ಸಹಿ ಮಾಡುವಾಗಲೂ ಒಂದೇ ರೀತಿಯಲ್ಲಿ ಮಾಡಿಲ್ಲ. ತಾನು ಸಹಿ ಮಾಡುವಾಗ ಮಹಮದ್ ಸಿಂಗ್ ಅಜಾದ್, ಎಂ.ಎಸ್.ಆಜಾದ್, ಎಂ.ಎಸ್.ಎ.ಉಧಮ್ ಸಿಂಗ್ ಎಂದು ವಿವಿಧ ರೀತಿಗಳಲ್ಲಿ ಸಹಿ ಮಾಡಿದ್ದಾನೆ. ಪತ್ರಗಳು ಮಾತ್ರ ಸತ್ತ್ಜಯುಕ್ತವಾಗಿದೆ. ಪತ್ರಗಳ ಕೆಲವು ಭಾಗಗಳು ಇವು.

೧೫-೦೩-೧೯೪೦

ಕೆಲವು ಉರ್ದು ಅಥವಾ ಗುರುಮುಖಿ ಪುಸ್ತಕಗಳನ್ನು ಕಳುಹಿಸಿಕೊಡಿ. ಪುಸ್ತಕಗಳು ಇತಿಹಾಸವನ್ನು ಕುರಿತದ್ದಾಗಿರಲಿ, ಭಾರತದ ವಾರ್ತಾ ಪತ್ರಿಕೆಗಳನ್ನು ಕಳುಹಿಸಿ ನನಗೆ ಸಾಕಷ್ಟು ಸಮಯವಿದೆ. ಬೇರೊಂದು ಸೌಧಕ್ಕೆ ಹೋಗಲು ಆಲೋಚಿಸುತ್ತಿದ್ದೇನೆ. ಸಾಕಷ್ಟು ಅಂಗ ರಕ್ಷಕರಿದ್ದು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಈ ಮೊಕದ್ದಮೆಗಾಗಿ ನಾನು ಬಹಳ ದಿನಗಳು ಕಾದಿದ್ದೆ.

(’ಬೇರೊಂದು ಸೌಧಕ್ಕೆ ಹೋಗಲು ಆಲೋಚಿಸುತ್ತಿದ್ದೇನೆ’ ಎಂದರೆ ಬೇರೊಂದು ಸೆರೆಮನೆಗೆ ಕಳುಹಿಸುತ್ತಾರೆ ಎಂದು ಅರ್ಥ. ಇಷ್ಟರಲ್ಲಿ ಬೇರೆ ಲೋಕಕ್ಕೆ ಹೋಗಬಹುದು ಎಂಬ ಅರ್ಥವೂ ಉಂಟು.)

೨೦-೦೩-೧೯೪೦

ನಾನು ಅದೃಷ್ಟವನ್ನು ನಂಬುವುದಿಲ್ಲ. ನಾನು ನನ್ನ ದೇವರನ್ನು ಭಾರತದಲ್ಲಿಯೆ ಬಿಟ್ಟುಬಂದಿದ್ದೇನೆ.

೩೦-೦೩-೧೯೪೦

ನೀವು ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸುತ್ತಿದ್ದೇನೆ. ಇವು ತಲುಪಿದನಂತರ ಬೇರೆ ಕೆಲವು ಪುಸ್ತಕಗಳನ್ನು ಕಳುಹಿಸಿಕೊಡಿ. ನಾನು ಈ ಸ್ಥಳವನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ. ನನ್ನ ತೂಕ ಹೆಚ್ಚಾಗಿತ್ತಿದೆ. ನನಗಾಗುವ ವಂಚನೆಗಳಿಗೆ ನಾನು ಯಾವಾಗಲೂ ಚಿಂತಿಸುವುದಿಲ್ಲ. ನಾನು ಸಾಯುವುದಕ್ಕಾಗಿ ಹುಟ್ಟಿದ್ದೇನೆ. ನಾನು ಸಾಯಬೇಕು. ಅನೇಕ ಜನ ಭಾರತೀಯರು ನನಗೆ ವಿರುದ್ಧವಾಗಿದ್ದಾರೆ. ನನ್ನ ಮೊಕದ್ದಮೆಗೆ ತುಂಬಾ ಹಣ ಖರ್ಚಾಗುತ್ತದೆ. ಬೇರೆಯವರು ನನಗಾಗಿ ಹಣ ಖರ್ಚು ಮಾಡುವುದು ನನಗೆ ಇಷ್ಟವಿಲ್ಲ. ನಾನು ಮರಣದೊಡನೆ ಮದುವೆಯಾಗಲಿದ್ದೇನೆ. ನಾನು ನನ್ನ ರಾಷ್ಟ್ರದ ಯೋಧ. ಅವರು ಹಣವನ್ನು ‘ಕೊಲೆಗಡುಕನಿಗೆ’ ಸಹಾಯ ಮಾಡುವ ಸಲುವಾಗಿ ಖರ್ಚು ಮಾಡುವ ಬದಲು ಶಿಕ್ಷಣಕ್ಕಾಗಿ ಖರ್ಚು ಮಾಡಿದರೆ ನಾನು ಸಂತೋಷಪಡುತ್ತೇನೆ.

(ಈ ಕಾಗದದಲ್ಲಿ ಉಧಮ್ ಸಿಂಗ್ ಹಣದ ಪ್ರಸ್ತಾಪ ಮಾಡಿದ್ದಾನೆ. ಮೊಕದ್ದಮೆಯಲ್ಲಿ ಅವನಿಗಾಗಿ ವಕೀಲರನ್ನು ಗೊತ್ತುಮಾಡಲು ಮತ್ತು ಬೇರೆ ಖರ್ಚಿಗಾಗಿ ಭಾರತೀಯರು ಹಣ ಸಂಗ್ರಹಿಸುತ್ತಿದ್ದರು. ಅದು ಉಧಮ್ ಸಿಂಗನಿಗೆ ಬೇಕಿರಲಿಲ್ಲ.)

೧೪-೪-೧೯೪೦

ನಿಮ್ಮ ಪುಸ್ತಕಗಳನ್ನು ನನಗೆ ಕೊಡಲಾಗಲಿಲ್ಲ, ಈ ಸೆರೆಮನೆಗೆ ಅಧಿಕಾರಿ ಐದು ನಿಮಿಷಗಳಿಗೊಮ್ಮೆ ಮನಸ್ಸು ಬದಲಾಯಿಸುತ್ತಾನೆ. ಬೇರೆಯವರಿಗಂತೂ ತಮ್ಮ ತಮ್ಮ ಧರ್ಮಗ್ರಂಥಗಳನ್ನು ಓದಲು ಅವಕಾಶವಿದೆ. ನನ್ನನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಸ್ನಾನಮಾಡದೆ ಧರ್ಮಗ್ರಂಥವನ್ನು ಓದಬಾರದು. ನಾನು ಹತ್ತು ದಿನಗಳಿಗೊಮ್ಮೆ ಸ್ನಾನ ಮಾಡುತ್ತೇನೆ. ಸೆರೆಮನೆಗಳಲ್ಲಿ ಪುಸ್ತಕಗಳನ್ನು ಸ್ನಾನ ಮಾಡುತ್ತೇನೆ. ಸೆರೆಮನೆಗಳಲ್ಲಿ ಪುಸ್ತಕಗಳನ್ನು ಬಹಿಷ್ಕರಿಸಲಾಗಿದೆಯೇ ಎಂದು ನ್ಯಾಯಾಲಯದಲ್ಲಿ ಕೇಳುತ್ತೇನೆ.

೨೦-೦೫-೧೯೪೦

ನನ್ನ ವಿಚಾರಣೆ ಮುಗಿಯುವ ಮೊದಲು ಬಂದು ನೋಡಿ. ಕಾರಣ ವಿಚಾರಣೆಯ ಅನಂತರ ನಿಮ್ಮನ್ನು ನೋಡಲು ನನ್ನಿಂದ ಸಾಧ್ಯವಾಗಲಾರದು. ಇಲ್ಲಿ ಕೆಲವು ಪುಸ್ತಕಳಿವೆ. ನಾನು ಅವುಗಳನ್ನು ಪಡೆಯಬಹುದು. ತಾವು ಬರುವುದಾದರೆ ತುಂಬಾ ಸಂತೋಷ.

೭-೬-೧೯೪೦

ಸಿಖ್ ಪ್ರಾರ್ಥನಾ ಪುಸ್ತಕ ‘ಗುಟ್ಕಾ’ವನ್ನು ಕಳುಹಿಸಿಕೊಡುತ್ತೀರ? ನೀವು ಕಳುಹಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ.

ಕರ್ತವ್ಯವನ್ನು ಮಾಡಿದ್ದೇನೆ

ಉಧಮ್ ಸಿಂಗನ ಮೊಕದ್ದಮೆ ೧೯೪೦ ಜೂನ್ ೪ರಂದು ನ್ಯಾಯಾಧೀಶ ಆಟ್ಕಿನ್ ಸನ್‌ರ ಸಮ್ಮುಖದಲ್ಲಿ ವಿಚಾರಣೆಗೆ ಬಂತು. ಉಧಮ್ ಸಿಂಗ್” ನಾನು ತಪ್ಪಿತಸ್ಥನಲ್ಲವೆಂದು ಹೇಳುತ್ತೇನೆ. ನನ್ನ ವಾದವನ್ನು ಕಾಯ್ದಿರಿಸಿ ಕೊಳ್ಳುತ್ತೇನೆ” ಎಂದು ಹೇಳಿದನು. ಅವನ ಪರವಾಗಿ ಜಾನ್ ಹಚಿಸನ್, ಆರ್.ಇ.ಸೀಟನ್ ಮತ್ತು ಏ.ಕೆ.ಕೃಷ್ಣ ಮೆನನ್ ವಾದಿಸಿದರು. ಸಾಕ್ಷಿ ಹೇಳಿದವರೆಲ್ಲರೂ ಅವನ ವಿರುದ್ಧವಾಗಿ ಹೇಳಿದರು.

ಉಧಮ್ ಸಿಂಗನ ಹೇಳಿಕೆಯೇ ಅವನಿಗೆ ಅನನುಕೂಲವಾಗಿತ್ತು.

“ನಾನು ಕೇವಲ ವಿರೋಧ ವ್ಯಕ್ತಪಡಿಸಲು ಗುಂಡು ಹಾರಿಸಿದೆ. ಬ್ರಿಟಿಸ್ ಸಾರ್ವಭೌಮತ್ವದಲ್ಲಿ ಭಾರತೀಯರು ಹೊಟ್ಟೆಗಿಲ್ಲದೆ ಸಾಹುವುದನ್ನು ನಾನು ಕಂಡಿದ್ದೇನೆ. ವಿರೋಧ ಮಾಡಿದುದಕ್ಕಾಗಿ ನಾನು ದುಃಖಿಸುವುದಿಲ್ಲ. ಆ ರೀತಿ ಮಾಡುವುದು ನನ್ನ ಕರ್ತವ್ಯವಾಗಿತ್ತು. ನನಗೆ ಕೊಡುವ ಶಿಕ್ಷೆ ಹತ್ತು-ಇಪ್ಪತ್ತು ವರ್ಷಗಳದ್ದಾಗಬಹುದು. ಅಥವಾ ನನ್ನನ್ನು ಗಲ್ಲಿಗೇರಿಸಬಹುದು. ನಾನು ಅದಕ್ಕೆ ಅಂಜುವುದಿಲ್ಲ. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ.

ಭಾರತೀಯ ಸಂಸ್ಕೃತಿ

ವಿಚಾರಣೆ ಮುಂದುವರಿದಿತ್ತು. ಉಧಮ್ ಸಿಂಗ್ ಅಚಲಿತನಾಗಿ, ಸದೃಢವಾಗಿ ಗುರಿ ಸಾಧಿಸಿದ ತೃಪ್ತಿಯಿಂದ ವಿಚಾರಣಾ ಕಟಕಟೆಯಲ್ಲಿ ನಿಂತಿದ್ದನು. ತನ್ನ ಜೀವನದಲ್ಲಿ ನಡೆದ ಘಟನೆಗಳೆಲ್ಲವೂ ಕೆಲವೇ ನಿಮಿಷಗಳಲ್ಲಿ ಒಂದೊಂದಾಗಿ ಅವನ ಸ್ಮೃತಿ ಪಟಲದ ಮೇಲೆ ಚಲನಚಿತ್ರ ಸನ್ನಿವೇಶಗಳಂತೆ ಮಿಂಚಿ ಮಾಯವಾದವು.

ಉಧಮ್ ಸಿಂಗ್ ಬಾಲ್ಯದ ದಿನಗಳನ್ನು ನೆನೆದು ಅನೇಕ ವೇಳೆ ಸಂಕಟಪಟ್ಟಿದ್ದ. ಅನೇಕ ಆಘಾತಗಳಿಗೆ ಗುರಿಯಾಗಿದ್ದರೂ ಜೀವನದಲ್ಲಿ ಬಾಳಿ ಬದುಕುವುದಕ್ಕೆ ಬೇಕಾದಷ್ಟು ವಿದ್ಯೆ-ಬುದ್ಧಿಗಳನ್ನು ಸಂಪಾದಿಸಿಕೊಂಡಿದ್ದ ಉಧಮ್ ಸಿಂಗ್ ಸಂತುಷ್ಟನಾಗಿಯೇ ಇದ್ದ. ಜಾಲಿಯನ್ ವಾಲಾಬಾಗಿನ ಮಹಾ ಹತ್ಯಾಕಾಂಡ ಅವನ ಜೀವನ ಪಥವನ್ನೇ ಬದಲಿಸಿತ್ತು. ೧೯೧೯ರ ಏಪ್ರಿಲ್ ೧೩ರಂದು ಭೀಕರ ಹತ್ಯಾಕಾಂಡವನ್ನು ಕಂಡು ಕನಲಿದ ತಾನು ಕೈಗೊಂಡ ಕೊಲೆಯ ಪ್ರತೀಕಾರವನ್ನು ಕೊಲೆಯಿಂದಲೇ ತೀರಿಸುವ ದೃಢ ನಿರ್ಧಾರ ಆಗಾಗ ಕಣ್ಣುಗಳ ಮುಂದೆ ಮೂಡಿ ಮಾಯವಾಗುತ್ತಿತ್ತು. ೧೯೪೦ರ ಮಾರ್ಚ್ ೧೩ರಂದು ಕ್ಯಾಕ್ಸಾಟನ್ ಗುಂಡು ಹಾರಿಸಿ ಕೊಲೆ ಮಾಡಿ ತನ್ನ ಆಸೆ ಯನ್ನು ಈಡೇರಿಸಿಕೊಂಡಿದ್ದುದರ ಅಪೂರ್ವ ಚಿತ್ರವೂ ನೆನಪಿಗೆ ಬಂದಿತು. ಬ್ರಿಟಿಷ್ ನ್ಯಾಯಾಲಯದ ಪಂಜರದಲ್ಲಿ ನರಕೇಸರಿ ಉಧಮ್ ಸಿಂಗನು ಅಚಲನಾಗಿ ನಿಂತಿದ್ದನು.

 

ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ.

ಅಷ್ಟರಲ್ಲಿ ಒಬ್ಬ ಯುವತಿಯು ಜನಗಳನ್ನು ಬದಿಗೆ ಸರಿಸುತ್ತ ನ್ಯಾಯಾಧೀಶರೆದುರಿನಲ್ಲಿ ಬಂದು ನಿಂತಳು. ಅನಂತರ ಆಕೆ ನ್ಯಾಯಾಧೀಶರ ಅನುಮತಿ ಪಡೆದು ಉಧಮ್ ಸಿಂಗನನ್ನು ಕೇಳಿದಳು.

“ನಿನ್ನ ರಿವಾಲ್ವರಿನಲ್ಲಿ ಇನ್ನೂ ಮೂರು ಗುಂಡುಗಳಿದ್ದವು ನೀವು ಆಗ ಅಡ್ಡಗಟ್ಟಿದ ನನ್ನನ್ನು ಗುಂಡಿಗೆ ಬಲಿಮಾಡಿ ಪಾರಾಗಲು ಏಕೆ ಯತ್ನಿಸಲಿಲ್ಲ? ಇದಲ್ಲದೆ ನಿನ್ನ ಬಳಿ ಒಂದು ಹರಿತವಾದ ದೊಡ್ಡ ಚೂರಿಯೂ ಕೂಡ ಇತ್ತಲ್ಲವೇ?”

ಉಧಮ್ ಸಿಂಗ್ ಆಕೆಯ ಪ್ರಶ್ನೆಗಳನ್ನು ಸವಧಾನದಿಂದ ಕೇಳಿದನು. ಶಿಷ್ಟತೆಯಿಂದ, ವಿನಮ್ರತೆಯಿಂದ ಅವನು ಉತ್ತರಿಸಿದ:

“ಸಹೋದರಿ, ನಾವು ಭಾರತೀಯರು, ಮಹಿಳೆಯರ ಮೇಲೆ ಕೈಯೆತ್ತುವುದು ಭಾರತೀಯ ಸಂಸ್ಕೃತಿಯಲ್ಲ. ಆದುದರಿಂದಲೇ ನಾನು ರಿವಾಲ್ವರನ್ನು ಕೆಳಗೆ ಎಸೆದಿದ್ದೆ. ಚೂರಿಯನ್ನು ಜೇಬಿನಲ್ಲಿಯೇ ವಿಶ್ರಾಂತಿ ಪಡೆಯಲು ಬಿಟ್ಟಿದ್ದೆನು. ಒಂದು ವೇಳೆ ನಿಮ್ಮ  ಸ್ಥಾನದಲ್ಲಿ ಗಂಡಸರು ಇದ್ದಿದ್ದರೆ.ಅವರು ಖಂಡಿತ ಗುಂಡಿಗೆ ಗುರಿಯಾಗುತ್ತಿದ್ದರು.”

ಹುತಾತ್ಮನಾದ

ಜೂನ್ ೫ರಂದು ಉಧಮ್ ಸಿಂಗನು ತಪ್ಪಿತಸ್ಥನೆಂದು ತೀರ್ಮಾನಿಸಲಾಯಿತು. ಅವನಿಗೆ ಮರಣದಂಡನೆ ವಿಧಿಸಲಾಯಿತು.

ಮೊಕದ್ದಮೆ ಮುಗಿದು ಶಿಕ್ಷೆಯನ್ನು ವಿಧಿಸಿದಕೂಡಲೇ ಉದ್ಧಮ್ ಸಿಂಗನನ್ನು ಪೆಂಟೋನ್ ವಿಲ್ ಸೆರೆಮನೆಗೆ ಸ್ಥಳಾಂತರಿಸಲಾಯಿತು. ಏಳನೇ ತಾರೀಖು ಸಿಖ್ಖರ ಪ್ರಾರ್ಥನಾ ಪುಸ್ತಕ ಬೇಕೆಂಬ ಕೋರಿಕೆಗೆ ಉಧಮ್ ಸಿಂಗ್ ಸಹಿ ಹಾಕಿದ ಕೆಲವು ದಿವಸಗಳ ಅನಂತರ ಪ್ರಾರ್ಥನಾ ಪುಸ್ತಕಗಳನ್ನು ಕಳುಹಿಸಿಕೊಡಲಾಯಿತು. ಗಲ್ಲಿಗೇರಿಸುವ ವರೆಗೂ ಶಿವಸಿಂಗನಿಗೆ ಉಧಮ್ ಸಿಂಗನನ್ನು ನೋಡಲು ಅವಕಾಶವನ್ನೇ  ಕೊಡಲಿಲ್ಲ.

೧೯೪೦ ಜುಲೈ ೩೧ ರಂದು ಉಧಮ್ ಸಿಂಗನನ್ನು ಗಲ್ಲಿಗೇರಿಸಲಾಯಿತು. ಅಂದಿಗೆ ಭಾರತದ ವೀರ ಸುಪುತ್ರನೊಬ್ಬನ ಜೀವನ ಅಂತ್ಯವಾಯಿತು.

ಗುರಿಗಾಗಿ ಬಾಳಿದ ವೀರ

ಆದರೇನು? ಆತನು ಅನೇಕ ಒಳ್ಳೆಯ ಗುಣಶೀಲಗಳನ್ನು ಬಿಟ್ಟುಹೋಗಿದ್ದಾನೆ. ಆತನೊಬ್ಬ ರಾಷ್ಟ್ರಪ್ರೇಮಿ. ರಾಷ್ಟ್ರಭಕ್ತ. ತಾಯ್ನಾಡಿನ ಗೌರವ ಪ್ರತಿಷ್ಠೆಗಳನ್ನು ಪರನಾಡಿನಲ್ಲಿ ಮೆರೆದು ಮೇರು ಸಾಹಸಿ. ನಿಸ್ಸಹಾಯರಾದ ಜನರ ಮೇಲೆ-ಹೆಂಗಸರು, ಮಕ್ಕಳನ್ನೂ ಬಿಡದೆ ಗುಂಡಿನ ಮಳೆಗರೆದು ಸೊಕ್ಕಿನಿಂದ ಬೀಗುತ್ತದ್ದ ದುಷ್ಟನನ್ನು ತೀರಿಸಿದ ಸಾಹಸಿ. ಮಹಾವೀರಯೋಧ. ಗುಂಡೇಟನ್ನು ಗಂಡೆದೆಯಿಂದ ಸಿಹಿಸಿಕೊಂಡು ರತ್ನದೇವಿಗೆ ತನ್ನ ಪತಿಯ ಶವವನ್ನು ದೊರಕಿಸಿಕೊಟ್ಟ ಕರುಣಾಮಯಿ. ಸಮಯ ಸಾಧಿಸಿ ಓಡ್ವಯರನನ್ನು ಕೊಲೆ ಮಾಡುವುದಷ್ಟೇ ಅವನ ಗುರಿಯಲ್ಲ. ಅವನನ್ನು ಸಾರ್ವಜನಿಕ ವೇದಿಕೆಯ ಮೇಲೆಯೇ ಗುಂಡಿಟ್ಟು ಕೊಂದು. ಭಾರತದಲ್ಲಿ ಅವನು ಮಾಡಿದ ಘೋರ ಅಪರಾಧಕ್ಕೆ ಶಿಕ್ಷೆಯಾಯಿತೆಂದು ಜಗತ್ತಿಗೆ ಸಾರಿದ. ಓಡ್ವಯರನ ಕೊಲೆಯ ದಿನದಿಂದಲೇ ಬರೆಯಲಾಗಿದ್ದರೂ ಸಹ ಸೆರೆಮನೆಯ ದಿನಗಳನ್ನು ಧೀರೋದಾತ್ತತೆಗಳಿಂದ ಕಳೆದ ಗಂಡುಗಲಿ. ಮರಣವೇ ಮಹಾನವಮಿಯೆಂದು ಮಡಿದ ಮಹಾಮಹಿಮೆ.

ಚಿತಾಭಸ್ಮಕ್ಕೆ ಭಕ್ತಿಯ ಸ್ವಾಗತ

ಆಗಸ್ಟ್ ೬ ರಂದು ಶಿವಸಿಂಗ್ ಪೆಂಟೋನ್ ವಿಲ್ ಕಾರಾಗೃಹದ ಮುಖ್ಯಾಧಿಕಾರಿಗಳಿಗೆ ಉಧಮ್ ಸಿಂಗನ್ನು ಸೇರಿದ ವಸ್ತುಗಳು ಹಾಗೂ ಆತನ ಚಿತಾಭಸ್ಮವನ್ನು ಕಳುಹಿಸಿಕೊಡುವಂತೆ ಪತ್ರ ಬರೆದನು. ಅದಕ್ಕೆ ಉತ್ತರವಾಗಿ ಆತನಿಗೆ ಸೇರಿದ ವಸ್ತುಗಳನ್ನು ಕಳುಹಿಸುವುದಾಗಿಯೂ ಚಿತಾಭಸ್ಮದ ವಿಚಾರ ಬೇರೆಯೆಂದೂ ಉತ್ತರ ಬಂದಿತು.

ಜಾಲಿಯನ್ ವಾಲಾಬಾಗ್ ಹತ್ಯಕಾಂಡ ನಡೆದದ್ದು ೧೯೧೯ರಲ್ಲಿ ಕೊನೆಯ ಪ್ರತೀಕಾರವನ್ನು ಕೊಲೆಯಿಂದಲೇ ತೀರಿಸಲು ಇಪ್ಪತ್ತೊಂದು ವರ್ಷಗಳು ಬೇಕಾದವು. ಸೇಡು ತೀರಿಸಿಕೊಂಡದ್ದು ೧೯೪೦ರಲ್ಲಿ ಉಧಮ್ ಸಿಂಗನನ್ನು ಗಲ್ಲಿಗೇರಿಸಿದ್ದು ೧೯೪೦ರಲ್ಲಿ. ಆತನ ಚಿತಾಭಸ್ಮವನ್ನು ಭಾರತಕ್ಕೆ ತರಲು ಹಿಡಿದ ಕಾಲಾವಧಿ ೩೪ ದೀರ್ಘ ವರ್ಷಗಳು.

೧೯೭೪ರ ಜುಲೈ ೧೯ರಂದು ಏರ್ ಇಂಡಿಯಾ ಬೋಯಿಂಗ್ ವಿಮಾನ ಲಂಡನಿನಿಂದ ಭಾರತಕ್ಕೆ ಶಹಿದ್ ಉಧಮ್ ಸಿಂಗರ ಚಿತಾಭಸ್ಮವನ್ನು ತಂದಿತು. ಅದನ್ನು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನ ಭಕ್ತಿಯಿಂದ ಸ್ವಾಗತಿಸಿದರು. ಮರದ ಕರಂಡದಲ್ಲಿ ಇಡಲಾಗಿದ್ದ ಚಿತಾಭಸ್ಮಕ್ಕೆ ಕೇಂದ್ರದ ಸಚಿವರುಗಳು, ಪಂಜಾಬಿನ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು, ಸಂಸತ್ತಿನ ಸದಸ್ಯರು ಮತ್ತು ಇನ್ನಿತರರು ತಮ್ಮ ಭಕ್ತಿ-ಗೌರವಗಳನ್ನು ತೋರಿಸಿದರು.

ಉಧಮ್ ಸಿಂಗ್ ಅಮರ್ ರಹೆ

ಚಿತಾಭಸ್ಮದ ಕರಂಡಕ್ಕೆ ಪುಷ್ಪಗುಚ್ಛಗಳನ್ನಿರಿಸಲಾಗಿತ್ತು. ಕರಂಡವನ್ನು ವಿಮಾನದಿಂದ ಹೊರಕ್ಕೆ ತರುತ್ತಿದ್ದಂತೆ ಪುರುಷರು, ಸ್ತ್ರೀಯರು ಮಕ್ಕಳು ಸಾವಿರಾರು ಮಂದಿ ‘ಉಧಮ್ ಸಿಂಗ್ ಅಮರ್ ರಹೆ’ ಎಂದು ಘೋಷಣೆಗಳನ್ನು ಕೂಗಿದರು. ವಿಮಾನ ನಿಲ್ದಾಣದ ಕೈಸಾಲೆಗೆ ಕರಂಡವನ್ನು ತಂದಾಗ ಜನರ ಅದಕ್ಕೆ ಪುಷ್ಪಗಳನ್ನು ಅರ್ಪಿಸಿದರು. ಅನಂತರ ಪುಷ್ಪಾಲಂಕೃತ ವಾಹನದಲ್ಲಿ ಚಿತಾಭಸ್ಮದ ಕರಂಡವನ್ನು ‘ಕಪೂರ್ ತಲಾಕ್’ಗೆ ತೆಗೆದುಕೊಂಡು ಹೋಗಲಾಯಿತು.

ತಾಯ್ನಾಡು ಪವಿತ್ರವಾದುದು. ತಾಯ್ನಾಡಿಗಾಗಿ ಮಡಿಯಲು ಸಿದ್ದರಿರಬೇಕು. ನಾಡಿನ ಏಳ್ಗೆ ನಮ್ಮ ಏಳ್ಗೆಯಾಗಬೇಕು. ನಾಡಿಗಾಗಿ ಅನೇಕರು ಪ್ರಾಣಾರ್ಪಣೆ ಮಾಡಿದ್ದಾರೆ. ಭಾರತವನ್ನು ದಾಸ್ಯಕ್ಕೊಳಗು ಮಾಡಿದ ವಿದೇಶೀಯರ ಸೊಕ್ಕಿಗೆ ಬೆಂಕಿ ಇಟ್ಟ ಉಧಮ್ ಸಿಂಗನ ಜೀವನವೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಉಧಮ್ ಸಿಂಗರಂತಹ ಪೀಳಿಗೆ ಎಂದೆಂದಿಗೂ ಬೆಳೆಯುತ್ತಿರಲಿ.