ಕಥಾಪ್ರಪಂಚ ಮನುಷ್ಯನು ಮತು ಕಲಿತಂದಿನಿಂದ ಕಥೆ ಹೇಳಲು, ಕೇಳಲು ತೊಡಗಿದ.  ಅಂದಿನಿಂದ ಇಂದಿನವರೆಗೆ ಕಥೆ ಸ್ರೋತ ಅದರ ನಾನಾ ರೂಪಗಳಲ್ಲಿ, ನಾನಾ ಭಾಷೆಗಳಲ್ಲಿ ಅನುಸೂತ್ಯವಾಗಿ ಹರಿದುಬಂತು.  ಕಥೆಯೆಂದರೆ ದೊಡ್ಡವರು ಚಿಕ್ಕವರೆನ್ನದೆ, ಮಕಕ್ಳು ಮರಿಯನ್ನೆದೆ, ಮೈಯೆಲ್ಲ ಕಿವಿಯಗಿ ಕೀಳುವರು.  ಕೇಳುವವರ ಸಂಖ್ಯೆ ಹಿರಿದಾದುದರಿಂದ ಕಥೆಗಳ ರಾಶಿಯೂ ಕಾಲಕಾಲಕ್ಕೆ ಬೆಳೆಯಿತು.  ಪ್ರಪಂಚದ ಸಾಹಿತ್ಯದಲ್ಲಿ ಕಥಾಪ್ರಪಂಚ ಬೆಳೆದ ಹಾಗೆಯೇ ಭರತಖಂಡದಲ್ಲಿಯೂ ಬೃಹತ್ಕಥೆ, ಪಂಚತಂತ್ರ, ಹಿತೋಪದೇಶ, ಕಥಾಸರತ್ಸಾಗರ, ಮೊದಲಾದ ಕಥಾಸಮುದ್ರಗಳು ಸೃಷ್ಟಿಯಾದುವು.  ಇವುಗಳಲ್ಲಿ ಪೈಶಾಚಿಭಾಷೆಯಲ್ಲಿರುವ ಗುಣಾಢ್ಯನ ಬೃಹತ್ಕಥೆ ಪ್ರಾಚೀನವಾದುದು.  ಆದರೆ ಈಗ ಇದು ಉಪಲಬ್ಧವಾಗಿಲ್ಲ.  ಇದನ್ನು ಮೂಲವಾಗಿಟ್ಟುಕೊಂಡು ಅನೇಕ ಸಂಗ್ರಹಗಳು ಬಂದುವು.  ಅವುಗಳ ಆಧಾರದಿಂದ ಮೂಲದಲ್ಲಿ ಅದು ಹೇಗಿದ್ದಿರಬಹುದು ಎಂಬ ಕಲ್ಪನೆಯನ್ನು ಮಾಡಿಕೊಳ್ಳಬೇಕಾಗಿದೆ. ಗುಣಾಢ್ಯನ ವಿಚಾರವೂ ಏನೂ ತಿಳಿದುಬಂದಿಲ್ಲ. ಬೃಹತ್ಕಥೆಯ ಸಂಗ್ರಹಗಳಲ್ಲಿ ನೇಪಾಳದ ಬುದ್ಧಸ್ವಾಮಿಯಿಂದ ಕ್ರಿ.ಶ. ೮ ೯ನೆಯ ಶತಮಾನಗಳಲ್ಲಿ ರಚಿತವಾದ ‘ಬೃಹತ್ಕಥಾಸ್ಲೋಕಸಂಗ್ರಹವು ಅತ್ಯಂತ ಪ್ರಾಚೀನವಾದುದು.  ಅನಂತರ ೧೧ನೆ ಶತಮಾನದಲ್ಲಿ ಕಾಶ್ಮೀರದ ಸೋಮದೇವನು ಬರೆದ ‘ಬೃಹತ್ಕಥಾ ಸರಿತ್ಸಾಗರ ಮುಖ್ಯವಾದುದು.  ಈ ಕಥೆಗಳಲ್ಲೆಲ್ಲ ಮಾನವನ ಆಚಾರ ವಿಚಾರ, ನಡೆನುಡಿಗಳನ್ನು ಮೃಗಪಕ್ಷಿಗಳಿಗೆ ಆರೋಪಿಸಿ ಕಥೆಗಳ ನಿರೂಪಣೆ ಮಾಡುವುದು ವಿಶೇಷವಾದ ಅಂಶ. ಈ ಕಥಾ ಸಾಗರದಲ್ಲಿ ‘ಪಂಚತಂತ್ರ ಮತ್ತು ಹಿತೋಪದೇಶ ಎಂಬ ಕೃತಿಗಳು ವಿಶೇಷ ಜನಪ್ರಿಯವಾದುವು.

ಇವೆರಡೂ ಕೃತಿಗಳು ಅಲ್ಪಸ್ವಲ್ಪ ವ್ಯತ್ಯಾಸವನ್ನು ಹೊಂದಿ ಪ್ರಪಂಚದ ನಾನಾ ಭಾಷೆಗಳಲ್ಲಿ ಅವತರಿಸಿದುವು. ‘ಬೈಬಲ್ ಗ್ರಂಥವನ್ನು’ಬಿಟ್ಟರೆ ಪ್ರಪಂಚದಲ್ಲಿ ‘ಪಂಚತಂತ್ರದಷ್ಟು ಹೆಚ್ಚು ಭಾಷೆಗಳಿಗೆ ಅನುವಾದವಾದ ಗ್ರಂಥ  ಇನ್ನೊಂದಿಲ್ಲ.  ಅಥಶಾಸ್ತ್ರದ ಐದು ತಂತ್ರಗಳನ್ನು ಕಥೆಗಳ ಮೂಲಕ ಅದು ಪ್ರತಿಪಾದಿಸುವುದರಿಂದ ಅದಕ್ಕೆ ‘ಪಂಚತಂತ್ರ ಎಂಬ ಹೆಸರು ಬಂತು.  ಪ್ರಪಂಚದ ನೂರರು ವಿದ್ವಾಂಸರು ಮಾಡಿದ್ದಾರೆ.  ಶಾಸ್ತ್ರೀಯ ಸಂಸ್ಕರಣಗಳನ್ನು ತರಲು ಭಗೀರಥಪ್ರಯತ್ನ ಮಾಡಿದ್ದರೆ. ಪಂಚತಂತ್ರ*ದ ‘ಪ್ರಪಂಚವೇ ಒಂದು ಪ್ರಪಂಚದಷ್ಟು ವಿಶಾಲವೆಂಬಷ್ಟು ಅದನ್ನು ಕುರಿತು ಕೆಲಸಗಳಾಗಿವೆ.  ‘ಪಂಚತಂತ್ರದ ಕರ್ತೃ ವಿಷ್ಣುಶರ್ಮನೆಂಬ ಬ್ರಾಹ್ಮಣ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.  ಆದರೆ ಅವನು ಯಾರು , ಎಲ್ಲಿದ್ದ, ಯಾವಾಗ ಇದ್ದ, ಏನಾಗಿದ್ದ ಎಂಬ ವಿವರವನ್ನೆಲ್ಲ ಕಾಲಗರ್ಭದಲ್ಲಿ ಅಡಗಿಹೋಗಿದೆ.