ಹೆಸರು: ರಾಘವೇಂದ್ರ
ಊರು: ಹುಣಸೂರು.

. ಪ್ರಶ್ನೆ: ನನಗೆ ೨೫ ವರ್ಷ. ನಾನು ಅವಿವಾಹಿತ. ನನಗೆ ಸುಮಾರು ನಾಲ್ಕುವರೆ ತಿಂಗಳಿಂದ ಮೂತ್ರ ವಿಸರ್ಜನೆಯು ಹಳದಿ ಬಣ್ಣದಲ್ಲಿದೆ. ಮೂತ್ರ ವಿಸರ್ಜನೆಯಾದಾಗ ಉರಿ ಬರುತ್ತದೆ. ಇದಕ್ಕೆ ಪರಿಹಾರ ತಿಳಿಸಿ. ನನ್ನ ಶಿಶ್ನ ನಿಮಿರುವುದಿಲ್ಲ ತುಂಬಾ ನಿತ್ರಾಣಗೊಂಡಿದೆ ಹಾಗೂ ತುಂಬಾ ಬೆಂಡಾಗಿದೆ. ಜೊತೆಗೆ ಶಿಶ್ನದಲ್ಲಿನ ನರಗಳು ಎದ್ದು ಕಾಣುತ್ತವೆ, ಶಿಶ್ನವನ್ನು ಅದುಮಿ ಹಿಡಿದಾಗ ನೋವಾಗುತ್ತದೆ. ಇದಕ್ಕೆ ಏನು ಮಾಡುವುದು? ಜಾಂಡೀಸ್ ಇರಬಹುದೆಂದು ನಾನು ಹಲವಾರು ವೈದ್ಯರ ಬಳಿ ತೋರಿಸಿದೆ ಕೈ ಔಷಧಿಯನ್ನು ತೆಗೆದುಕೊಂಡು ಪಥ್ಯ ಮಾಡಿದೆ. ಇದರಿಂದ ಮನಸ್ಸಿಗೆ ನೆಮ್ಮದಿ ಇಲ್ಲ, ಹಸಿವಿಲ್ಲ, ನಿದ್ರೆಯಿಲ್ಲ, ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

ಉತ್ತರ: ನೀವು ಮೂತ್ರ ಪರೀಕ್ಷೆ, C/S ಮಾಡಿಸಿ, ಜೊತೆಗೆ ರಕ್ತ ಪರೀಕ್ಷೆ (Liver Profile) ಮಾಡಿಸಿ. ನಿಮಗೆ ಸಿಶ್ಯಕ್ತಿ ಆಗಿದೆ. ಒಮ್ಮೆ ನೀವು ವೈದ್ಯರ (Physician) ಹತ್ತಿರ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳಿ. ಪೌಷ್ಠಿಕ ಆಹಾರವನ್ನು ಸೇವಿಸಿ. ಹೆಚ್ಚಾಗಿ ಹಸಿರು ತರಕಾರಿ ಸೊಪ್ಪು, ಹಣ್ಣುಗಳನ್ನು ತಿನ್ನಿ, ಜೊತೆಗೆ ಬಿ.ಪ್ರೋಟೀನ್ ಪುಡಿಯನ್ನು ಹಾಲಿಗೆ ಹಾಕಿಕೊಂಡು ಕುಡಿಯಿರಿ.