ಪ್ರತೀ ವಾರ ತಪ್ಪದೆ ‘ಉದಯವಾಣಿ’ಯ ಡಾ| ಆರ್. ಪೂರ್ಣಿಮಾ ಬರೆಸಿದ ಈ ಲೇಖನಗಳನ್ನು ಓದಿ ನನ್ನಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಹಲವರು ಸಾಹಿತಿಗಳಲ್ಲ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ.

ನನ್ನ ಮೆಚ್ಚಿನ ಹಲವು ಯುವ ಲೇಖಕರು ಇವುಗಳನ್ನು ನನ್ನ ಸೃಜನಶೀಲ ಬರವಣಿಗೆಯೆನ್ನುವಂತೆಯೇ ಓದಿದ್ದಾರೆ. ಇವರಿಗೆ ಕೃತಜ್ಞತೆಗಳು. ಈ ದಿನಗಳಲ್ಲಿ ನಾವು ಇದು ಕಥೆ, ಕವಿತೆಯೆಂಬ ಲೆಕ್ಕಾಚಾರಕ್ಕೆ ಹೋಗದೆ ನನ್ನ ಒಳಗಿನಿಂದ ಒಳಗಿನ ಮಾತುಗಳನ್ನು ಬರೆದುಕೊಂಡಿದ್ದೇನೆ. ನಾನು ಹುಡುಕಾಡುತ್ತಿರುವ ಮಾತಿನ ಹೊಸ ರೂಪಗಳಿಗೆ ಹೀಗೆ ಪ್ರಜ್ಞಾವಂತ ಯುವ ಲೇಖಕರು ಅವಕಾಶ ಮಾಡಿಕೊಟ್ಟಿದ್ದಾರೆ. ಇವರಿಗೆ ನನ್ನ ಕೃತಜ್ಞತೆ.

ಯಾವುದೂ ಕೊನೆಯ ಮಾತಲ್ಲ. ಅವು ಬೇರೆ ಮನಸ್ಸುಗಳನ್ನು ಮುಟ್ಟಿ ಅಲ್ಲಿ ಬೆಳೆದು ಹೊಸ ಅರ್ಥಗಳನ್ನು ಹುಟ್ಟಿಸಿಕೊಳ್ಳುತ್ತವೆ. ಹೀಗೆ ಹುಟ್ಟುವ ವಿಚಾರಗಳು ಮತ್ತೆ ಬೆಳೆಯುವಂತೆ ಇರುತ್ತವೆ.

ಈ ಬಗೆಯ ಸಂವಾದ ಸಾಧ್ಯವಾಗುವಂತೆ ಶ್ರೀ ಫನಿರಾಜ್‌, ಶ್ರೀ ಶಿವಕುಮಾರ್, ಶ್ರೀ ಸುದರ್ಶನ ಪಾಟೀಲ್‌ ಕುಲಕರ್ಣಿ, ಶ್ರೀ ಇಸ್ಮಾಯಿಲ್ ಮತ್ತು ಶ್ರೀ ಸುರೇಶ್‌ ಕೆ. ಮಾಡಿದ್ದಾರೆ. ಇವರಿಗೆ ನಾನು ಋಣಿ.

ಕನ್ನಡ ಪುಸ್ತಕ ಪ್ರಕಾಶನದಲ್ಲಿ ದೊಡ್ಡ ಸಾಧನೆ ಮಾಡುತ್ತಿರುವ ಶ್ರೀ ಪ್ರಕಾಶ್‌ ಕಂಬತ್ತಳ್ಳಿ ತಮ್ಮ ಪ್ರಕಾಶನದಲ್ಲಿ ಇದನ್ನು ತಂದಿದ್ದಾರೆ. ಇವರಿಗೆ ಕೃತಜ್ಞ.

ಯು.ಆರ್. ಅನಂತಮೂರ್ತಿ
೪೯೮, ೬ನೆಯ ‘ಎ’ ಮೇನ್
ಆರ್‌ಎಂವಿ ಎರಡನೇ ಹಂತ
ಬೆಂಗಳೂರು –  ೫೬೦ ೦೯೪

* * *