ರುಕ್ಮಿಣಿದೇವಿ ಅರುಂಡೇಲ್ ಅವರ ಪ್ರತಿಷ್ಠಿತ ನೃತ್ಯಶಾಲೆ ’ಕಾಲಕ್ಷೇತ್ರ’ದ ಹೆಮ್ಮೆಯ ಕೊಡುಗೆಯಾಗಿರುವ ನೃತ್ಯ ಪಟು ಶ್ರೀ ಕೃಷ್ಣಮೂರ್ತಿಯವರು, ಪಂದನಲ್ಲೂರು ನೃತ್ಯ ಶೈಲಿಯ ಪ್ರಮುಖ ವಾರಸುದಾರರು. ಶ್ರೀಮತಿ ರುಕ್ಮಿಣೀದೇವಿ ಅರುಂಡೇಲ್ ಮತ್ತು ಶ್ರೀಮತಿ ಗೌರಿ ಅಮ್ಮಾಳ್ ಅವರಲ್ಲಿ ಭರತನಾಟ್ಯವನ್ನೂ ಶ್ರೀ ಚಂದು ಪಣಿಕ್ಕರ್ ಅವರಲ್ಲಿ ಕಥಕ್ಕಳಿಯನ್ನೂ ಅಭ್ಯಾಸ ಮಾಡಿರುವ ಶ್ರೀ ಕೃಷ್ಣಮೂರ್ತಿ ಮದ್ರಾಸ್ ಕಲಾಕ್ಷೇತ್ರದ ಶಿಸ್ತಿನ ಶಿಕ್ಷಣವನ್ನು ಬೆಂಗಳೂರಿನ ನೃತ್ಯಾಸಕ್ತರಿಗೆ ನೀಡುವ ಅಪರೂಪದ ಕೆಲಸ ಮಾಡುತ್ತಿದ್ದಾರೆ.

ನೃತ್ಯ ಶಿಕ್ಸಣದ ಪ್ರಾರಂಭದ ದಿನಗಳಲ್ಲೇ ಭಾರತ ಸರ್ಕಾರ ಹಾಗೂ ತಮಿಳುನಾಡು ಸರ್ಕಾರಗಳಿಂದ ಶಿಷ್ಯ ವೇತನ ಪಡೆದ ಹೆಗ್ಗಳಿಕೆ ಶ್ರೀಯುತರದು. ರುಕ್ಮಿಣಿದೇವಿಯವರ ಬಹುತೇಕ ಎಲ್ಲ ನೃತ್ಯ ನಾಟಕಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಕೃಷ್ಣಮೂರ್ತಿಯವರು, ನೃತ್ಯ ತಂಡದೊಂದಿಗೆ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ.

ನೃತ್ಯದಲ್ಲಿ ಶಿಸ್ತು ಹಾಗೂ ಸಂಪ್ರದಾಯಕ್ಕೆ ಹೆಚ್ಚಿನ ಗಮನ ಹರಿಸಿ ದುಡಿಯುವ ಕೃಷ್ಣಮೂರ್ತಿಯವರು ಉತ್ತಮ ನೃತ್ಯ ಶಿಕ್ಷಕರೆಂದು ಪ್ರಸಿದ್ಧರಾಗಿರುವ ಶ್ರೀಯುತರಿಗೆ ೧೯೯೮-೯೯ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.