ಆಧುನಿಕ ಕನ್ನಡ ಗದ್ಯಸಾಹಿತ್ಯದ ನಿರ್ಮಾಪಕರಲ್ಲಿ ಎಂ.ಎಸ್. ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದಾರೆ. ಸುವರ್ಣ ಕರ್ನಾಟಕ ವರ್ಷದ ಶುಭ ಸಂದರ್ಭದಲ್ಲಿ ‘ಎಂ.ಎಸ್. ಪುಟ್ಟಣ್ಣನವರ ಕಾದಂಬರಿಗಳು’ ಎಂಬ ವಿಷಯವಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ನವೆಂಬರ್ ೧೦, ೨೦೦೬ ರಂದು ಒಂದು ವಿಶೇಷ ಉಪನ್ಯಾಸವನ್ನು ನೀಡುವ ಸದವಕಾಶವನ್ನು ನನಗೆ ಕೊಟ್ಟ ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ ನಾನು ಕೃತಜ್ಞೆಯಾಗಿದ್ದೇನೆ. ಈ ಹೊತ್ತಿನಲ್ಲಿ ನನಗೆ ನೇರವಾಗಿ ನಿಂತ ಅಧ್ಯಯನಾಂಗದ ನಿರ್ದೇಶಕರಾದ ಡಾ. ಟಿ.ಆರ್. ಚಂದ್ರಶೇಖರ ಅವರಿಗೂ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶ ಇಂದ್ವಾಡಿ ಅವರಿಗೂ ನಾನು ಆಭಾರಿ. ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಈ ಕಿರುಹೊತ್ತಿಗೆ ಹೊರಬರುತ್ತಿರುವುದು ನನಗೆ ತುಂಬ ಸಂತಸ ನೀಡಿದೆ. ಅದಕ್ಕಾಗಿ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ನಾನು ಋಣಿ.

ಸುಂದರ ಹಸ್ತಪ್ರತಿಯನ್ನು ತ್ವರೆಯಿಂದ ಸಿದ್ಧಪಡಿಸಿದ ಪ್ರೊ. ಐ.ಕೆ. ವಸುಂಧರಾ ಅವರಿಗೆ ನಾನು ಕೃತಜ್ಞೆ. ನನ್ನ ಎಲ್ಲ ಸಾಹಿತ್ಯಕ ಕಾರ್ಯಗಳಲ್ಲಿ ನನ್ನ ಜೊತೆಯಲ್ಲಿರುವ ನನ್ನ ಪತಿ ಪ್ರೊ. ರಮಾನಂದರ ಉಪಕಾರವನ್ನು ಸ್ಮರಿಸುವೆ.

ಎಚ್.ಎಸ್. ಸುಜಾತಾ
ನವೆಂಬರ್ ೨೦, ೨೦೦೬
ಸುವರ್ಣ ಕರ್ನಾಟಕ ವರ್ಷ
ಮೈಸೂರು