ಬಗೆಬಗೆಯ ವಸ್ತುಗಳ ಆಧಾರದ ಮೇಲೆ ನೃತ್ಯ ರೂಪಕಗಳನ್ನು ರಚಿಸಿ, ಅವನ್ನು ಕನ್ನಡ ರಂಗಭೂಮಿಯ ಮೇಲೆ ಬೆಳಗಿಸಿ, ನಾಡಿಗೆ ಹೊಸ ಪರಂಪರೆಯನ್ನು ಹಾಕಿಕೊಟ್ಟ ಎಂ.ಸಿ. ವೀರ್‌ರವರು ಕಲಾವಿದ ಮಹಾಲಿಂಗಪ್ಪನವರ ಮಗನಾಗಿ ೧೯೦೩ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಹಲವು ಚಿತ್ರಗಳ ನೃತ್ಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಹಲವು ವರುಷಗಳು ಗುಬ್ಬಿ ಕಂಪನಿಯಲ್ಲಿ ನಟರಾಗಿ, ಕಾಗದಗೊಜ್ಜಿನಿಂದ ನಾಟಕಗಳಿಗೆ ಬೇಕಾಗುವ ಅಲಂಕರಣಾ ವಸ್ತುಗಳ ನಿರ್ಮಾಪಕರಾಗಿ ಕೆಲಸ ಮಾಡಿದ ಚನ್ನವೀರರು ಶಿಲ್ಪ, ಛಾಯಾಗ್ರಹಣ ಮತ್ತು ಸ್ತಬ್ಧ ದೃಶ್ಯಗಳ ಸಂಯೋಜನೆಗಳಲ್ಲೂ ನಿಷ್ಣಾತರಾಗಿದ್ದರು.

ಇಂತಹ ಹಿನ್ನೆಲೆಯ ಜೊತೆಗೆ ಪ್ರಖ್ಯಾತ ಕಥಕ್ ಪಟು ಹಾಗು ಗುರು ಸೋಹನ್ ಲಾಲ್ ರ ಮಾರ್ಗದರ್ಶನದಿಂದ ನೃತ್ಯ ಕಲೆಯಲ್ಲಿಯೂ ಪಳಗಿ ಅವರ ಸಾಮರ್ಥ್ಯ ದ್ವಿಗುಣಗೊಂಡಿತು. ಹೀಗೆ ನಾನಾ ಕಲೆಗಳ ಅನುಭವ, ವಿಶಾಲ ದೃಷ್ಟಿಯಿಂದ ಕಲಾ ಸಮಸ್ಯೆಗಳನ್ನು ಸಂಯಮ, ಪ್ರವೃತ್ತಿ ಮತ್ತು ನೃತ್ಯ ರಚನೆಯ ಅದ್ಬುತ ಕಲ್ಪನಾ ಚಾತುರ್ಯ ಇವರನ್ನು ಪಕ್ವಕಲಾವಿದರನ್ನಾಗಿ ರೂಪಿಸಿತು.

ಶ್ರೀಯುತರು ಮೈಸೂರಿನಲ್ಲಿ ಶ್ರೀ ನಟರಾಜ ನೃತ್ಯ ಶಾಲೆ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದರು. ಇಂತಹ ಶಿಷ್ಯರುಗಳನ್ನೊಳಗೊಂಡ ಅವರ ನೃತ್ಯ ತಂಡ ರಾಜ್ಯದ ನಾನಾ ಕೇಂದ್ರಗಳಲ್ಲಿ ಪ್ರದರ್ಶನಗಳನ್ನಿತ್ತು ಜನತೆಯ ಅಪಾರ ಮನ್ನಣೆಯನ್ನು ಗಳಿಸಿರುವ ಚೆನ್ನವೀರ್ ರವರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿ ತನ್ನ ೧೯೬೭ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಜ್ಯದ ರಂಗಮಂದಿರ ವ್ಯವಸ್ಥಾಪಕರು, ಕಾಳಿದಾಸನ “ಶಾಕುಂತಲಾ” ನಾಟಕವನ್ನು ಪ್ರದರ್ಶಿಸಲು ನೆರವಾದರು. ರಷ್ಯಾದಲ್ಲಿ ಅತ್ಯಂತ ಜನಪ್ರಿಯ ಭಾರತೀಯ ಕಲಾವಿದೆಯಾದರು. ೧೯೬೨ರ ಹೆಲ್ಸಿಂಕಿ ಯುವಜನ ಸಮ್ಮೇಳನದ ಅಂಗವಾಗಿ ನಡೆದ ಉತ್ಸವದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರದರ್ಶನವಿತ್ತು. ಸುವರ್ಣ ಪಕದ ಪಡೆದು ಭಾರತಕ್ಕೆ ಕೀರ್ತಿ ತಂದರು.

ಶ್ರೀಮತಿಯವರು ೧೯೮೮ರಿಂದ ತಮ್ಮ ನೃತ್ಯಶಾಲೆಯನ್ನು ಬೆಂಗಳೂಗರಿಗೆ ವರ್ಗಾಯಿಸಿ, ಅದರ ಮೂಲಕ ತಮ್ಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇವರಿಗೆ ರಾಜ್ಯದ ಅತ್ಯುನ್ನತ ’ಶಂಕುತಲ’ ಪ್ರಶಸ್ತಿಯೂ ಸಂದಿದೆ. ಇವರು ಕೇಂದ್ರ ನಾಟಕ ಅಕಾಡೆಮಿ ಸದಸ್ಯೆಯಲ್ಲದೇ. ರಾಜ್ಯದ ಅಕಾಡೆಮಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿರುವ ಶ್ರೀಮತಿ ಮಾಯಾರಾವ್ ರವರಿಗೆ ರಾಜ್ಯ ಸಂಗೀತ -ನಾಟಕ ಅಕೆಡೆಮಿ ತನ್ನ ೧೯೬೬-೬೭ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.