ಎತ್ತಬಾರದು ಎತ್ತಬಾರದು ಎತ್ತಬಾರದು
ಜನ್ಮವ ಗುರುವೆ ಸತ್ತು ಹೋದ ಮೇಲೆ
ಪುನರಪಿ ಎತ್ತಬಾರದು ಜನ್ಮವ
ಮೂರುಗೂಡಿದ ಮಂಟಪದೊಳು
ಏರಿ ಕುಳಿತಿರುವ ಚಂದವ
ಭೂರಿ ಭೂಷಣನರಿಯುತಿರುವನು
ನೋಡು ಮಹಾದಾನಂದವ || ಎತ್ತಬಾರದು ||
ಕಾಯನೋಡಿ ಬಾಯ ಬಡಿದವರು ಏನು
ಇದರ ಅನ್ಯಾಯವೊ |
ಮಾಯ ಪಾಶಕೆ ಸಿಲುಕಿ ನೀನು
ಕೆಡದಿರಯ್ಯ ಮಾನವ || ಎತ್ತಬಾರದು ||
ಎಲ್ಲರೊಳಗು ಬ್ರಹ್ಮನಿರುವನು
ಕಳಿದು ನೋಡು ಮಾನವ
ಹುಲ್ಲಿನೊಳಗು ಕಲ್ಲಿನೊಳಗು ಎಲ್ಲಾ
ಜೀವಕ್ಕೆ ಆಧಾರ || ಎತ್ತಬಾರದು ||
Leave A Comment