ಎತ್ತ ಹೋಗುತಿಯಾ ತಂಗೀ ಇತ್ತ ಬಾರಮ್ಮ ಸತ್ಯ ಲೋಕಕ್ಕೆ
ಹೋಗುವ ಮಾರ್ಗ ಒಂದೇ ನಿತ್ಯ ನೋಡಮ್ಮ          || ೧ ||

ಹಾದಿ ಬೀದಿಯ ಕಾಡೋ ಸುದ್ದಿಯ ದಾಂಟಿ ಬಾರಮ್ಮ
ವೈರಾಗ್ಯವೆಂಬ ಜ್ಞಾನಮಾರ್ಗವ ಹಿಡಿಯಬೇಕಮ್ಮ     || ೨ ||

ಮಮತೆಯೆಂಬ ಮುಸುರೆಯೆನ್ನ ಒರಸಿ ಬಾರಮ್ಮ
ತಂಗಿ || ಸಾದು ಜನರ ಸೇವೆಯ ಮಾಡಿ ಸಾಧಿಸಬೇಕಮ್ಮ      || ೩ ||

ಆರು ಲಿಂಗದ ನೆಲೆಯ ಕಂಡು ಪೂಜೆ ಮಾಡಮ್ಮ ತಂಗಿ
ಅಲ್ಲಿ ಆರು ಎಂಟು ಆರು ಇಲ್ಲ ಅಲ್ಲಿ ನಿಂತು ನೆಲೆಯ
ನೋಡಮ್ಮ ತಂಗೀ         || ೪ || ಪ

ದಾಸ ಜನ್ಮವ ತಿರುಗಿ ತಿರುಗಿ ಹೀನಳಗಮ್ಮ ತಂಗಿ ||
ಇಂಥ ಮಾನವ ಜನ್ಮಕೆ ಬಂದು ನೀನು ದೀನಾಳಾದೆಮ್ಮಾ
ವಾಸತುಳಸೀ ತ್ರಿವುಟೆಯೊಳಗೊಂದು ಪೇಟೆ ಕಾಣಮ್ಮ ತಂಗಿ ||

ಅಲ್ಲಿ ಸಾಟಿ ಇಲ್ಲದ ಬ್ರಹ್ಮಾನಂದವ ಬೆಲೆಯ
ಮಾಡಮ್ಮ || ಎಂಟು ಎಸಳಿನ ಕಮದೊಳಗೊಂದು
ಶಿಶುವು ಕಾಣಮ್ಮ ತಂಗಿ ಅಲ್ಲಿ ಶಿಶುವನೆತ್ತಿ ಮುದ್ದನಾಡಿ
ಒಂದು ಮಾತ ಕೇಳಮ್ಮ ತಂಗೀ ||

ಹುಟ್ಟಸಾವು ಇಲ್ಲದೊಂದು ರತ್ನವ ಕೇಳಮ್ಮ ತಂಗೀ ||
ಮೃತ್ಯುಂಜಯ ಶ್ರೀ ರಂಭಾಪುರೀಶನ ನಿತ್ಯ ನೆನೆಯಮ್ಮ ||