ಕಾಂತಮಣಿ ನೀ ಕರೆದು ತಾಕಿನ್ನಾ ಜ್ಞಾನಾನಂದನಾ
ಹೃದಯದೊಳಗೆ ಎದ್ದು ನೋಡಲು ಮುದದಿ ಧ್ಯಾನವ
ಗೈಯುವಾ || ಚತುರೆಯನೆಗೆ ಮೋಕ್ಷವೀಯುವಾ ಹೃದಯ
ಕರ್ತರ ಬೇಡುವೆ || ೧ || ಬಾಲತದಿ ಪಾಲನೆರೆದು
ಪಾಲಿಸಿದ ಪರಮೇಶ್ವನಾ || ಕ್ಷಣದೊಳೆದ್ದು | ಪಿಡಿವೆನೆಂದರೆ
ಚಿನ ಮಾಯಾತ್ಮಕ ಹಾರಿದಾ ಉಪ್ಪರಿಕೆ ಮಠದಲ್ಲಿ ನೆಲೆಸದಾ
ನಮ್ಮಪ್ಪ ರೇವಣಸಿದ್ದ || ಮುದ್ದು ಜಂಗಮ ರೊಪ್ಪತೋರಿ
ಅಲ್ಲದು ಮಾಯವಾದರು ಶಂಕೆಯಿಲ್ಲದೆ ಸ್ತೋತ್ರಮಾಳ್ಪರ
ಸಂಕಟ ಪರಿಹಾರಕ ಶಂಖುಚಕ್ರ ಗಧಾದಾರಿಯು ಧರ ಮೆರೆವ
ಶ್ರೀ ಗುರುವರ‍್ಯನ || ೪ || ಧರೆಯೋಳ್ ಕೊಲ್ಲಿಯ ಪಾಕಿಯೆಲ್ಲಿಯ
ಮೆರೆವ ಸೋಮನಾಥನೋಳ್ ಉರುತರುವ
ಆಯ್ಕೆ ಗೊಂಡಿಹಾ ಗುರು ಸಾರ್ವಭೌಮ || ೫ ||