ದೀಪ ಮುಡಿಸುವ ಮೊದಲು ಕವಿದ ಕತ್ತಲೆಯಲ್ಲಿ ಒಂದೇ ಕೊರಗು:
ಕತ್ತಲಾಗಿದೆ, ಇನ್ನು ಬೆಳಕು ಬೇಕು.
ದೀಪವಾರಿಸಿದಾಗ ಕವಿದ ಕತ್ತಲಿನಲ್ಲಿ ಒಂದೇ ಬೆರಗು;
ಇಷ್ಟೊಂದು ದೀಪದ ಬೆಳಕು ಎಲ್ಲಿ ಹೋಯ್ತು !