೧
ಹಿತ್ತಾಳೆಯೇ ಚಿನ್ನವೆಂದು
ಕಬ್ಬಿಣಗಳೆಲ್ಲಾ ಉದ್ಘೋಷಿಸುವ
ಹೊತ್ತಿನಲ್ಲಿ,
ನಿಜವಾದ ಚಿನ್ನಕ್ಕೆ ಅನ್ನಿಸಿತು
ಮತ್ತೆ ನಾ ಹೋಗುವುದೇ ಸರಿ
ನೆಲದಾಳಗಳ ನಿಶ್ಶಬ್ದದಲ್ಲಿ.
೨
ಆನೆಯನೇರಿಕೊಂಡು ಹೋದಿರಿ ನೀವು
ಕುದುರೆಯನೇರಿಕೊಂಡು ಹೋದಿರಿ ನೀವು
ದಂಡುದಾಳಿಯನೆತ್ತಿ
ಬಾಜಾಬಜಂತ್ರಿಯಲ್ಲಿ ಮೆರವಣಿಗೆ
ಹೋದಿರಿ ನೀವು
ಹಿಂದೆದ್ದ ಧೂಳಿನಲಿ ಉಳಿದವರು ನಾವು !
Leave A Comment