ಹೊಳೆವ ನೀಲಿಯ ಗಾಜು ಮುಗಿಲೊಳು
ಕಳೆದು ಹೋದುವು ಕಂಗಳು !
ಹಾಗು ಹೀಗೂ ಹುಡುಕಿ ತಂದರೆ
ಇನ್ನುಳಿದ ನೋಟವೆ ತಂಗಳು.


ಸತಿ ಎಂದಳು:
ಮುತ್ತಿನಂಥಾ ಮೂರು ಮಕ್ಕಳಿವೆ ನನಗೆ.
ಪತಿ ಎಂದನು :
ಕಪ್ಪೆಚಿಪ್ಪೊಳು ಮುತ್ತು ಒಗೆವುದಚ್ಚರಿಯೆ ?