ಶಿವಜೀವರು ಎಂದೆರಡಿಲ್ಲಾ ಪರಶಿವಮಯವೇ
ಈ ಜಗವೆಲ್ಲಾ ಭವಕಾನನವನು ದಹಿಸುವ ಮಂತ್ರವ
ಭುವನದಿ ಗುರುಪುತ್ರನೇ ಬಲ್ಲಾ || ಶಿವದೇವರು ||

ದಾನವ ಮಾಡಿದರೇನುಂಟು ಬರಿ
ಮೌನದೊಳಿರ್ದೊಡದೇನುಂಟು ಜ್ಞಾನದಿ
ವಸ್ತುವರಿತೊಡೆ ಸಾಕುಪಮಾನಕೇ ಸಿಲುಕದ
ಸುಖವುಂಟು || ಶಿವದೇವರು ||

ನದಿಯೊಳು ಮುಳುಗಿದರೇನುಂಟು ಬಳಿಕದರಿಂ
ನಡುಗುವ ಛಳಿಯುಂಟು ಸದಮಲ ವಸ್ತುವೆ
ತಾನೆಂದರಿತೊಡೆ ಅದು ನಿತ್ಯಾನಂದದ ಗುಂಟೂ  || ಶಿವದೇವರು ||

ವೇದಗಳೋದಿದರೆಲ್ಲೆನು ಬಿಳಿ ಬೂದಿಯ
ಬಳಿದರು ಯಮ ಬಿಡನು ಭೇದವು ತೋರದೆ
ವಿಮಲಜ್ಞಾನವ ಸಂದಿಸಿದರೆ ಶಿವನಾಮವನೂ || ಶಿವದೇವರು ||

ಉತ್ತಮ ಕರ್ಮವ ಗೈದವರೂ ಕೇಳ್
ಮತ್ತಿದರೆಗೆ ಬರುತಿಹರು ಸತ್ಯದ
ಮರ್ಮವನರಿತಿಹ ಧೀರರು ನಿತ್ಯಾನಂದದಿ ಬೇರೆಯವರೂ || ಶಿವದೇವರು ||

ದೇಶವ ಸುತ್ತಿದರೇನಿಲ್ಲಾ ಭವ ಕಾಳೆಯೊಳಿದ್ದರು
ಬಿಡದಲ ಸಕಲವು ಪುಸಿಯೆಂದರಿತೊಡಿ
ಜಗದೀಶನೇ ತಾನಾಗುವನಲ್ಲ || ಶಿವದೇವರು ||

ನಂದನರಿಂದಲು ಭವ ಕೆಡದು ಸಂಧ್ಯಾವಂದನೆ
ನಿಜಮುಕ್ತಿಯಕೊಡದು ಕುಂದದೆ ಶಿವ
ತಾನೆಂದರಿತೊಡೆ ಆನಂದವು ಬೇಡೆಂದರೂ ಬಿಡದು || ಶಿವದೇವರು ||

ಉರುತರ ಕರ್ಮದ ಗೈದವರು ಕೇಳ್ ಪರಿಪರಿ
ಯಜ್ಞದ ದೀಕ್ಷಿತರು ಮರೆವೆಯು
ತೋಗದೆ ನಿಜಸುಖದೊಳಗಿಹ ಗುರುಪುತ್ರರ
ಪದತಿಹರರೂ || ಶಿವದೇವರು ||

ಘಂಟೆಯ ಬಡಿದರು ಗುಡಿಯಲ್ಲಿ ಯಮ ಭಂಟರು
ಬೇರೆ ಬಿಡರಲ್ಲಿ ಕಂಟಕವೆನಿಸಿದ ಮಾಯೆಯ
ಕಳೆದರೆ ರಂಟುಗುವದದು ಪರರಲ್ಲಿ || ಶಿವದೇವರು ||

ಎರಡೆಂಬುವನಿಗೆ ಕಡೆಯಲ್ಲಿ ಈ ದರಣಿಗೆ
ಬರುವುದು ಬಿಡದಲ್ಲ ಗುರು ಶಂಕರ ನಡಿಗಳ
ಪಿಡಿದವರಿಗೆ ಮರಳೀ ಸಂಸ್ಕೃತಿ ಭಯವಿಲ್ಲ
|| ಶಿವದೇವರು ಎಂದರಡಿಲ್ಲ ||

* * *

ಬಲ್ಲೋಡಿ ತತ್ವದೊಳ್ ಕೂಡಿ ನೀವು ಅಲ್ಲಲ್ಲಿ
ಬೆರೆತು ಸುಮ್ಮನೆ ಕೆಡಬ್ಯಾಡಿ || ಬಲ್ಲೋಡಿ ||

ಸೊಲ್ಲಿಡಲದು ವೇದ್ಯವಲ್ಲ ಅದಿನೆಲ್ಲಿ
ನೋಡಿದರು ಕಣ್ಣಿಗೆ ಕಾಂಬೋದಲ್ಲಾ ಎಲ್ಲೆಲ್ಲು
ತಾನೇ ತಾನಲ್ಲ ಅದರಲೂವೇ ನೋಡು ಈ ಜಗವೆಲ್ಲ || ಬಲ್ಲೋಡಿ ||

ಒಂದಾಗಿ ಎಂದೆನಿಸುವುದು ಬಳಿಕೊಂದಾಗಿ
ಮುಂದೆ ಮೂರೆನಿಸಿಕೊಂಬವದು ಬಂದನವನು
ಕಲ್ಪಿಸುವುದೂ ಅದರೊಳ್ ಹೊಂದಿ ಇಲ್ಲದ
ಚಿತ್ರಗಳನೆ ನೋಡುವುದೂ || ಬಲ್ಲೋಡಿ ||

ರೂಪು ನಾಮಗಳದರೆಲ್ಲಾ ಅದ್ಯಾಸೋಪದೊಳರಸಿ
ದೊಡದು ಸಿಕ್ಕೋದಲ್ಲ ತಾಪತ್ರಯಂಗಳಲ್ಲಿಲ್ಲ
ಧೂಪ ದೀಪ ನೈವೆದ್ಯಕ್ಕೆ ಅದು ವೇದ್ಯವಲ್ಲ || ಬಲ್ಲೋಡಿ ||

ಕಾಶಿಯೋಳರಸಿದೂಡಿಲ್ಲ ಉಪವಾಸದಿಂ
ಬಳಲುವರಿಗೆ ಸುಲಭವಲ್ಲ ನಾಶವೆಂಬುವುದು
ದರಿಂದರೆಲ್ಲಾ ಮಾಯಪಾಶ ಕಳದರವು ಗೂಡಮಾಗಿಲ್ಲ || ಬಲ್ಲೋಡಿ ||

ಅರಸ ಕಾಣರು ಲೋಕುಯತಕರು ಅದನರಿ
ತವರೆ ದೇಹವನೆ ಬಿಡುವರು ಪರಿತಿಸುತದನೆ
ಹಿಗ್ಗುವರು ಅದರ ಸಿರಿಯ ಕಂಡವರನು
ಮರಳಿ ಜನ್ಮಿಸಿರು || ಬಲ್ಲೋಡಿ ||

ಕಳದುಳಿಯುವದೇ ತಾಸಾಹುದು ನೋಡು
ಲೊಳ ಹೊರಗಲ್ಲು ತಾ ತುಂಬಿಕೊಂಡಿಹುವ
ತಿಳಿಯದಿ ಕಳವಳಿಸುವುದೊ ಅದು ತಿಳಿದೊಡೆ
ಲೋಕವೆಲ್ಲವ ಕೆಡಿಸುವುದೂ || ಬಲ್ಲೋಡಿ ||

ಮೂರು ದೇವರ ಮೇಲೇರುವುದೂ ಬೇರೆ
ಬೇರಾಗಿ ಮೂರು ಲೋಕಗಳನಾಳುವುದೂ
ಆರನೆ ನೆಲೆಯೇ ತಾನಹುದೂ ಇಲ್ಲಿ ತೋರುವೇ
ಜಗವೆಲ್ಲ ತಾನೇ ತಾನಹುದೂ || ಬಲ್ಲೋಡಿ ||

ಎಡ ಬಲದೊಡೆಯರ ಪಿಡಿದು ಕಟ್ಟೆ ನಡುವೆ
ಮೇಲಿರುವೆರಡನ್ನೆಲ್ಲಾ ತಡೆಹಿದರು ಬಿಡಗಲ
ಗುಡಿಯೊಳ್ ಸುಳಿದೂ ಸುಧೆಯ ಕುಡಿದೊಡೇನದು
ಬೇರನ್ನೆಲ್ಲುಕಾಣಿಸದು || ಬಲ್ಲೋಡಿ ||

ಮರಣ ಜನ್ಮಗಳದರೆಲ್ಲ ಕಾಯಕರಣ ಕಾರ್ಯ
ಗಳ್ಳೊಳು ಬೆರೆಯುವುದರಲ್ಲಿ ಮರೆಯೊಳಗದು
ನೆಲಸಿಲ್ಲ ಅದನು ಗುರುಶಂಕರಾರ‍್ಯನೊಳ್
ಬರೆದಂತ ಬಲ್ಲ || ಬಲ್ಲೋಡಿ ||