ದೇವನಾಜ್ಞೆಈವಿದಿರುವದು |

ಸಾವಧಾನದಿಈವದು

ಭವಕೆಮೂಲನುದೇವನೊಬ್ಬನು

ಅವನಸ್ತುತಿಪ್ರಾರ್ಥಿಪುದು ||ಪಲ್ಲ||

ಸ್ವಾಯವನವನಾಮಧ್ಯಾನವ |

ನೇಮದಲಿಕಾಮಿಸುವದು

ಆಮಹಾಮಹಿಮನನೇಮವ

ಪ್ರೇಮದಾಚರಿಸುವದು ||1||

ತಂದೆತಾಯ್ಮನನೊಂದಿಸದೆಸದಾ |

ನಂದಸುಖದಿಂದಿರುವದುಮಂದಮತಿ

ಕೊಲೆಬಂಧನಾರಿಗು

ಎಂದಿಗೈವದಿರುವದು ||2||

ಮೋಹಕೆಮನಸಹಾಯಗೈಯದೆ |

ಇಹಪರದಿಸ್ಥಿರವಿರುವದು

ಸಹಿಸದೆಪರರೊಡವಿಕದಿಯದೆ

ಸಹಜನುಡಿನುಡಿಯಲಿರುವದು ||3||

ಸುಳ್ಳುಸಾಕ್ಷಿಗಳುಸುರದೆಸದಾ |

ಒಳ್ಳೆಯವನಾಗಿರುವದು

ಇಳೆಯೊಳಗೆಪರಸ್ತ್ರೀಯದ್ರವ್ಯದ

ಒಳಗಾಗದೆಬಾಳಿರುವದು ||4||

ಧರಿಯೊಳಗೆಯಾವನರನೆಯಾಗಲೀ |

ಪರಿಯೊಳಿರೆಮೋಕ್ಷಾಗ್ವದು

ಮೀರಿದಪದದಾರಿದೋರುವದು

ಕರಿಘೂಳೀಶನಕರುಣಿದು ||5||

ಶಿವದೇವದೇವಸುಕೃತಿಗೊರವ |

ತವಕರುಣನವರಸವೀವ ||ಪಲ್ಲ||

ಗಿರಿಜೆಯಜಾತರುಕರಿವದನಾದಿಸುರ |

ಹರಿಅಜಗರುಡಕಿನ್ನರರು

ಗೈವರುತವಸೇವಶಿವ ||1||

ಯೋಗಿಜನಾರ್ಚಿತ |

ಶ್ರೀಗೌರಿಯಾವೃತಸಾಗಿಸು

ಕೃತಿನಾನರಿಯೆವರಿಯೊಶಿವಶಿವ ||2||

ರುಗ್ವೇಜುಸಾಮಥರ್ವೇದಕ್ಕೆ |

ನಿಲಕದೀಕಥೆಯೇಕೋನಿಷ್ಠಗೀಸುಖ

ಕರವಸ್ಥಿರವಕಾವಶಿವ ||3||

ತ್ರಿಗುಣರಹಿತತ್ರಿಗಜವಿನುತ |

ತ್ರಿಕೂಟವಾಶಿತತ್ರಿಲೋಚನ

ವಾಚನಾಮಶಿವ ||4||

ಅಂತಕನಾಂತಕಶಾಂತಸುವಾಚಕ |

ಅಂತಃಕರುಣಕರಿಘೂಳೀಶ

ಪೋಷಭಾಷಶಿವ ||5||

ಶ್ರೀಗುರುವಿನಭಜಿಸೊಜಗತ್ಯಜಿಸೊ |

ಯೋಗಾಸನಸುಖವಾಗಿವಿರಾಜಿಸೊ ||ಪಲ್ಲ||

ಅನುದಿನದೊಳುತನುಮನಮಂದಿರದೊಳ್ |

ಘನತರಪರಬ್ರಹ್ಮಾಮೃತಸೇವಿಸೋ ||1||

ಭೂತಛೆತ್ತೀಸದಜಾತಕಪ್ರಕಟಿಸಿ |

ಜಾತಿಅಜಾತಿಸುಜಾತಿಅಜಮಜಿಸೊ ||2||

ಕರುಣರಸಾಲಮಾರಹರಶೀಲ |

ಶರಣಗಣಂಗಳಸಾರವಸೃಜಿಸೊ ||3||

ಗುರುಚರಧೀರಕರಿಘೂಳಿನಿರಾಕಾರ |

ಪರಮಪಾವನಚರಣಂಗಳಪೂಜಿಸೊ ||4||

ಶ್ರೀ ಮಹಾದೇವಗಾರತಿ |

ಬೆಳಗಿರಿ ಮಂಗಲಂ ಜಯತು

ಕರ ತ್ರಿಶೂಲಧರನಿಗೆ ಕೊರಳಲ್ಲಿಸುರ

ಶಿರಹಾರಧರಗೆ ನರರ ಪರಿದುರಿತ ಹರಿತನಿಗೆ

ಹರಿಣ ಕರಧಾರ ಶಂಕರಗೆ ||ಪಲ್ಲ||

ವಿಧಿಸುರ ಬುಧಗಳಾರ್ಚಿತಗೆ |

ಆದಿ ಅನಾದಿ ಸದಮಲಗೆ

ನಾದ ನಿಧಿ ಬಿಂದು ಕಳೆವರೆಗೆ

ಸದಾ ಪರಬ್ರಹ್ಮ ಮೂರುತಿಗೆ ||1||

ಶಶಿಧರ ಶೇಷಭೂಷನಿಗೆ |

ಕೂಸಿನಗೊರಳಗಾಸಿಪಗೆ

ಪಶುಪತಿ ಶಿಷ್ಯ ಪೋಷಿಪಗೆ

ಈಶ ಕೈಲಾಸವಾಸನಿಗೆ ||2||

ಕಾಮನ ಹಮ್ಮನಳಿದವಗೆ |

ನಿರ್ಮಲ ಉಮಾರಮಣನಿಗೆ

ಪ್ರೇಮದಿರೊ ವಾಮಸ್ವಾಮಿಗೆ

ಜನ್ಮಜ ಕರ್ಮಪರಿಹಾರಗೆ ||3||

ತ್ರಿಕೂಟದಿ ತ್ರಿಪುರ ಸಂಹರಗೆ |

ತ್ರಿಜಗದಿ ತ್ರಿಗುಣವಂದಿತಗೆ

ತ್ರಿನದಿಯ ರಾಜೋಳಿಯ ವಾಸನಿಗೆ

ಶ್ರೀ ಕರಿಘೂಳೀಶ ಗುರುವರಗೆ ||4||

ಜೋ ಜೋ ಎನ್ನಿರಿ ಶಿವತತಿಸುತಗೆ |

ಜೋ ಜೋ ಯನ್ನಿರಿ ಭವತತಿ ಹತಗೆ

ಜೋ ಜೋ ಯನ್ನಿರಿ ಜೋ ಘನ ಯತಿಗೆ

ಸದಾ ಜೋ ಯಂದು ಪಾಡಿರಿ

ಸದುಹೃದಯನಿಗೆ ಜೋ ಜೋ ||ಪಲ್ಲ||

ಕೈಲಾಸದೊಂದಿನ ಸಭೆಯು ನೆರೆದಿರಲು |

ಅಲ್ಲಿಗೆ ನಾರದ ಮುನಿಯು ತಾ ಬರಲು

ಕೇಳಿ ಲೋಕದವಾರ್ತಿ ಬಸವಗ್ಹೋಗೆನಲು

ಕೇಳಿ ಇಳೀಯೊಳಗಿಳಿದಾನು

ಬಾಲಲೀಲನಿಗೆ ಜೋ ಜೋ ||1||

ಸತ್ತಂಥ ಶಿಶುವಿಗೆ ಕಳೆಯನಿತ್ತವಗೆ |

ಮತ್ತು ಬರಡಾಕಳ ಪಾಲ್ಕರಸಿದವಗೆ

ಅರ್ತು ಸಂಗನ ಕೂಡಿ ಮಾತಾಡಿದವಗೆ

ಇತ್ತ ವಾರ್ತಿಯು ಹರಡೀತು

ಕಲ್ಯಾಣದೊಳಗೆ ಜೋ ಜೋ ||2||

ಕಲ್ಯಾಣದೊಳು ಪ್ರಧಾನಾದ ಬಲ್ಲಿದಗೆ |

ಎಲ್ಲ ಗಣಂಗಳ ಸೊಲ್ಲರಿದವಗೆ

ನಿಲ್ಲದೆ ಪವಾಡಗಳಲ್ಲಿ ಮಿಗೆ ಖುಲ್ಲರೆಲ್ಲ

ಮೆಲ್ಲನೆ ಪಾಡಿರಿ ಜೋಗುಳ ಜೋ ||3||

ಸಾಲೋಕ್ಯ ವಂಶದಿ ಶರಣಬಸವನು ಕಲಬುರ್ಗಿಯಲಿ |

ಮಹತ್ವ ತೋರಿ ನೆಲಸಿದನು

ಸಲಿಸಷ್ಟ ಭರಣ ದಾಸೋಹಂ ನಡೆಸಿದನು

ರಾಜಹಳ್ಳಿಯೊಳ್ಜನಿಸಿ ಕರಿಘೂಳಿಯೆನಿಸಿದನು ಜೋ ಜೋ ||4||

ಶರಣಬಸವ ಕರುಣಿಸೊ ಶಿವ |

ಪರಮನೀಶವತಾರನೆ ಪರಿಪರಿಯಲಿ

ಚರಣ ಸ್ಮರಿಸುವೆ ಮರಿಯದಲಿ ಬೆರೆಧೀರನೆ ||ಪಲ್ಲ||

ಸಾಲೋಕ್ಯವರಕುಲವುದ್ಧಾರ |

ನೀಲ ಲೋಹಿತ ಬಾಲನೆ

ಕಾಲ ಕಾಲದಲ್ಲಿಯು ಸುಲೀಲೆಯೊಳಿರುವಾತನೆ ||1||

ಅಷ್ಟ ಮದಗಳ ಮೆಟ್ಟಿ ದಳಗಳ |

ಅಷ್ಟವರಣಾ ನಿಷ್ಠನೆ ಸೃಷ್ಟಿಯೊಳು

ಸುಧರ್ಮನಟ್ಟಿಸಿ ಇಷ್ಟ ವರ ಕೊಟ್ಟಾತನೆ ||2||

ಕಲಬುರ್ಗಿಯೊಳು ನೆಲಸಿ ಮಹಿಮೆಗಳ್ |

ನಿಲಸಿಯಿಳೆಯೋಳ್ಮೆರೆದವನೆ ನೆಲದಧಿಕ

ರಜತಾದ್ರಿಪುರ ಕರಿಘೂಳೀಶನೆ ಭಾಳಾಕ್ಷನೆ ||3||

ಆನಂದವಾಯಿತೆ ಇಂದಿನ ದಿನದಲಿ |

ದೀನದಯಾಳು ಗುರು ಮನಿಗೆ ಬಂದುದಕ್ಕೆ ||ಪಲ್ಲ||

ಬಹಳ ದಿನದಲಿಂದೆ ರಹ ನೋಡುತಲಿಯಿದ್ದೆ |

ಇಹಪರ ಹರಿಸಿದ ಮಹನೀಯ ಬಂದುದಕ್ಕೆ ||1||

ಮನು ಮುನಿ ಸುರಕೋಟಿ ಗಣಕೆಲ್ಲ ಘನವಾದ |

ಓಂ ನಮಃಶಿವ ಗುರು ಪ್ರಣಮನು ಬಂದುದಕ್ಕೆ ||2||

ಹುಣ್ಣಿವಿ ಚಂದ್ರನ ಕಣ್ಣಿಲಿ ಕಂಡೆನು |

ಚಿನುಮಯ ಕರಿಘೂಳೀಶ ತನ್ನಂತೆಗೈದುದಕ್ಕೆ ||3||

ಇಲ್ಲ ಇಲ್ಲ ಇಲ್ಲ ಈ ಲೋಕದ |

ನರರಿಗೆ ಆರಿಗು ಸ್ಥಿರ ಸುಖವಿಲ್ಲ ||ಪಲ್ಲ||

ಹರಿಹರ ಅಜರಿಗೆ ಸ್ಥಿರ ಸುಖವಿಲ್ಲ |

ಧರಿಯೋಳ್ಜನ ಸ್ಥಿತಿಲಯವಾದಲ್ಲ

ಸೂರ್ಯ ಚಂದ್ರರಿಗೆ ಸ್ಥಿರಸುಖವಿಲ್ಲ

ಗ್ರಹಣವೆಂಬುವದು ವೈರಾದಲ್ಲ ಇಲ್ಲ ||1||

ಸುರಮುನಿಗಳಿಗೆ ಸ್ಥಿರ ಸುಖವಿಲ್ಲ |

ಅಸುರರವರಿಗೆ ಎದುರಾರಲ್ಲ

ಪರಿಪರಿ ವಿಧದಲಿ ಕಾಡುವರಲ್ಲ

ನರಕಕ ಗುರಿಯಾಗುವರಲ್ಲ ಇಲ್ಲ ||2||

ಜಪತಪಗೈಯಲು ಸ್ಥಿರ ಸುಖವಿಲ್ಲ |

ಉಪವಾಸಗೈಯಲು ತಾಪದೆಲ್ಲ

ವಿಪಿನದಿ ಫಲಹಾರ ಭೂಜಿಸಿದರಿಲ್ಲ

ಕೋಪ ದಮನ ಸಾಪಾಗುವತನಕ ಇಲ್ಲ ||3||

ಜಡೆಮುಡಿ ಬೆಳಸಿದರೇನು ಸುಖವಿಲ್ಲ |

ಜಡೆಮುಡಿಗಳು ಬೋಳಾದರು ಇಲ್ಲ

ಅಡವಿಯ ಗಡ್ಡೆ ಬೇರುಂಡರೆ ಇಲ್ಲ

ಮೃಢ ನುಡಿ ಅಡಿಗಡಿ ನುಡಿಯುವ ತನಕ ಇಲ್ಲ ||4||

ತಾನು ದೇವರು ಹೇಳಲು ಇಲ್ಲ |

ಮನುಜರು ಮನ್ನಣೆ ಮಾಡಲು ಇಲ್ಲ

ಬಿನಗು ಮಂತ್ರ ಯಂತ್ರಗಳಲ್ಲಿಲ್ಲ

ನಾನು ನೀನು ಒಂದಾಗುವತನಕ ಇಲ್ಲ ||5||

ಕಾವಿಯು ಕಪನಿ ಹಾಕಿದರಿಲ್ಲ |

ಮೈಯೆಲ್ಲ ರುದ್ರಾಕ್ಷಿ ಧರಿಸಲು ಇಲ್ಲ

ಕಾಯೆಲ್ಲ ವಿಭೂತಿ ಧರಿಸಿದರಿಲ್ಲ

ದೇಹದೊಳಾತ್ಮನ ಕೂಡುವತನಕ ಇಲ್ಲ ||6||

ಹೇಸಿ ಸಂಸಾರ ಈಸಲು ಇಲ್ಲ |

ದೇಶ ಕಾಶಿಗಳು ತಿರುಗಲು ಇಲ್ಲ

ವಾಸ ಗಿರಿಗಳಲ್ಲಿ ಗೈಯಲು ಇಲ್ಲ

ನಾಶಿಕದೀಶನ ಧ್ಯಾಸಿಸೊತನಕ ಇಲ್ಲ ||7||

ಮಾತಿಗೆ ಮಾತು ಕಲಿತರು ಇಲ್ಲ |

ಮಾತಾಡದೆ ಮೌನಿದ್ದರು ಇಲ್ಲ

ಜಾತಿ ಅಜಾತನಾದರು ಇಲ್ಲ

ಆತ್ಮಾನುಸಂಧಾನಗೈಯುವ ತನಕ ಇಲ್ಲ ||8||

ಚೌಸಷ್ಟಿ ವಿದ್ಯೆಗಳ್ಕಲಿತರು ಇಲ್ಲ |

ದ್ರವ್ಯ ಗಳಿಸಿ ಹೌದೆನಿಸಿದರಿಲ್ಲ

ಭಾವಿ ಗುಡಿ ಅನ್ನದಾನದಿ ಇಲ್ಲ

ಭಾವದಿ ಶಿವನು ಭಾವಿಸತನಕ ಇಲ್ಲ ||9||

ವೇದ ಓದಿ ಸಾಧಿಸಲು ಇಲ್ಲ |

ಆಧಾರ ಚಕ್ರಗಳರಿತರು ಇಲ್ಲ

ಓದು ಬರದೆ ಸಾಧುರಾದರೆ ಇಲ್ಲ

ಸಾಧು ಕರಿಘೂಳಿಪಾದ ನಂಬುವತನಕ ||10||

ಇದು ಎಂಥ ಸೋಜಿಗವೊ ಸದ್ಗುರು ದೇವ ||ಪಲ್ಲ||

ಇದು ಎಂಥ ಸೋಜಿಗವೊ |

ಸದಮಲಾನಂದನಿಗೆ ವಾದಿಸಿಯವ

ನಿಜ ಬೋಧಕರನಲ್ಲಂಬ ಇದು ||1||

ಸಾವಿರಕೊಬ್ಬ ಶರಣ |

ಭವದೊಳವತರಿಸಿರುವ ಭವಹರಣ

ಅವರ ಕಂಡು ಇವರೆಲ್ಲನು ಭವರೆಂದು

ಜವದೆಮನಾಲಯಕೆ ತಾವಾಗಿ ಸೇರುವ ಇದು ||2||

ಮಂತ್ರ ತಂತ್ರ ಕಲಕಂಡು ಭ್ರಾಂತಿಯಲಿಂದೆ |

ಮಹಾಂತರು ಇವರುಯೆಂದು

ಹಂತಿಲೋಗೆ ಅವರು ಬಂತು ಬ್ಯಾಟಿಯನೆಂದು

ಮಂತ್ರದಿಂದ ಮಂತ್ರಿಸಿ ಯಲ್ಲರಲ್ಲಿ ಅಂತಕನಲ್ಲಿಗೋಗ್ವರಿದು ||3||

ಕಲ್ಲು ಕಾಷ್ಠವಗ್ನಿ ಭೂ ಪೂಜಿಸಿ |

ಯಲ್ಲರಲ್ಲಿ ತಾವೆ ಬಲ್ಲಿದರೆನಿಸಿ

ಬಲ್ಲಿದರಲ್ಲೆಂದು ಹೇಳಲು ಕೇಳಾದೆ

ಖುಲ್ಲತನದಿ ಕಾಲನಲ್ಲಿ ನಿಲ್ಲುವರಯ್ಯೋ ಇದು ||4||

ಹರನಾಮ ಸ್ಮರಣೆಯಿಲ್ಲ |

ಇರುಳ್ಹಗಲ ಸಂಸಾರ ಶರಧಿಯೊಳ್ಹಾರಲ್ಲ

ಸ್ಮರಣೆ ಮಾತ್ರದಿ ಸರ್ವ ದುರಿತಗಳರಿತಿರಲು

ಕರುಘೂಳೀಶನ ಪಾದ ಮರಿದು ಮರುಳಾದರಿದು ಇದು ||5||

ಗುರು ಪರಬ್ರಹ್ಮವೆಂದರಿದು |

ಮೂರೊಂದಾದ ಗುರು

ಸೇವೆಗೈಯುವ ನರನೆ ಉತ್ತಮನು ||ಪಲ್ಲ||

ಗುರುಮನೆ ಕ್ಷೇತ್ರದಿರುವ ಕಾಶಿಯಂತೆಂದೀ |

ಪರಿ ಕಾಯುತ್ತಿರುವನೆ ಸ್ಥಿರನೆನಿಸುವನು

ಮರಿಯದೆ ಗುರುಪೂಜೆ ಗುರುಭಕ್ತಿಗೈಯಲು

ಗುರುಧ್ಯಾನ ಗೈಯುವನಧಿಕನೆನಿಸುವನು ||1||

‘ಗುರು ತಾಯಿ ತಂದೆಯು ಗುರುವೆ ಸುಕುಲ ದೀಪ |

ಗುರುದೇವನೆಂಬುವನೆ ಗುರುಪುತ್ರನಹನು

ಗುರುವು ಕೋರಿದ ವಸ್ತುಗಳನೆಲ್ಲನಿರಿಸುತ

ಗುರುವಿಗಾರಾಧಿಸಲು ಗುರು ಆತ್ಮನವನು ||2||

ಗುರು ವಚನವೇ ವೇದ ಗುರು ವಚನವೇ ಮಂತ್ರ |

ಗುರುವಿನೀ ಪರಿ ನೆನಿದು ತಾನು ತನ್ನನು

ತಾನಾರೆಂದು ಗುರುವಿನ ಅರಿತಿರಲನುದಿನ

ಗುರು ಕರಿಘೂಳೀಶ ಗುರುವರನಹನು ||3||

ಜಪದೊಳು ತಪ ಮಾಡೊ ಶಾಂತ ಜೀವ |

ಜಪಿಸೋ ಪ್ರಣಮ ಮಂತ್ರ ಗುಪಿತದೇಕಾಂತ ||ಪಲ್ಲ||

ಆತ್ಮಜ್ಞಾನಕ ಬೇಕು ಶಾಂತ |

ಜೀವಾತ್ಮನಿಗೆ ಮುಕ್ತಿಯನರಿಸುವದಂತ

ರಾತ್ಮನಲ್ಲಿರಿಸೋದೆ ಶಾಂತ

ಪರಮಾತ್ಮನೋಳ್ಬೆರಿಸುವದೀ ಪರಮಹಾಂತ ||1||

ಅಸ್ಥಿರ ತ್ರಿತನುವೆಂದರಿದು ಮೂರವಸ್ಥೆಗೆ ಸಿಲುಕದೆ |

ಮಸ್ತಿಯ ಮರಿದು ಸುಸ್ತಿಗೈಯ್ಯದೆ

ಪರದಾರ್ಹಿಡಿದು ಗುರ್ತುದೋರುವ

ಗುರುಪಾದ ಕರುಣವ ಪಡಿದು ||2||

ವಿಧಿಯ ಜ್ಞಾನಕೆ ಬೇಕು ಶಾಂತ |

ಅದು ಸಾಧಿಸದಿರೆವೈದು ಶಾಮಲಿಕಾಂತ

ಬಾಧೆಯೊಳಿರಿಸುವನಂತ

ನಿಜಬೋಧ ಸಾಧನ ಹಾದಿ ಹಿಡಿಸೋದೆ ಶಾಂತ ||3||

ಸುರರಿಗಾಧಾರವಾದಶಾಂತ |

ಪರತರ ಪುರುಷೋತ್ತಮ

ನರಿಸುವದೆ ಶಾಂತ ಇಹಪರ ಸೌಖ್ಯವು ಶಾಂತ

ಪರಿಪೂರ್ಣ ಪರಬ್ರಹ್ಮನಲ್ಲಿರಿಸುವದು ಶಾಂತ ||4||

ಅಂತರಂಗದಿ ಯಿರೊಭ್ರಾಂತ |

ಮೋಹ ಸಂತತಿ ಶಾಂತದಿ ತರಿದು ನಿಶ್ಚಿಂತ

ಅಂತಕಾಂತಕನಾದ ಶಾಂತ

ನಿರಂತರ ಕರಿಘೂಳ್ಯಾಗಿರುಸುವದೆ ಶಾಂತ ||5||

ಓದುಗಲಿಸಬಾರದೆ ಶ್ರೀ ಸದ್ಗುರು ||ಪಲ್ಲ||

ಪರದ್ಹಾದಿದೋರಿಸಬಾರದೆ |

ವೇದದ ಮೂಲವು ಸಾಧಿಸೆಂದು ನಿಜ ಬೋಧ

ಊದಲಿಬಾರದೆ ಸದ್ಗುರುರಾಯ ||1||

ತತ್ವಗೊತ್ತಿಸಬಾರದೆ ತತ್ವದೊಳು |

ಸತ್ಯ ಹತ್ತಿಸಬಾರದೆ ಸತ್ತುಚಿತ್ತಾನಂದ

ನಿತ್ಯ ಪಥ ಪರಮಾತ್ಮನರಿಸಬಾರದೆ ||2||

ಮಾತು ಮಾತಿಗೆ ಶಂಕರಾ |

ಸದ್ಗುರುವೆ ನಿನ್ನ ಜಾತನಲ್ಲವೆ ಕಿಂಕರಾ

ನಿತ್ಯನಿರಂಜನ ಅತ್ಯಧಿಕ ಘನ ಜ್ಯೋತಿ ಉದಿಸಬಾರದೆ ||3||

ನಾನಾರೆಂಬುವದರಿಯೆಸದ್ಗುರುರಾಯ |

ನಾನು ನಿನ್ನಗೆ ಸರಿಯೆ ಜ್ಞಾನ ಮೂರುತಿ ನಿನ್ನ

ಧ್ಯಾನದಿರಿಸಿ ನಿಧಾನದಿರಿಸಬಾರದೆ ||4||

ಧರಿಯೊಳರಸಪುರವಾ ಶ್ರೀಗುರುದೇವ |

ಕರಿಘೂಳಿ ಗುರುದೇವ ವರಕವಿ

ಶ್ರೀಗುರು ಮುರುಗೇಂದ್ರನೆ ಸುಖದರಿವು ಅರಿಸಬಾರದೆ ||5||

ಶಿವ ಶಿವನೆಂದರ ದೂರಿಲ್ಲ |

ಶಿವ ನಿನ್ನೊಳಾನ ನೀ ನೋಡಿಲ್ಲ

ಭವಮಾಲೆಯ ನೀ ಗೆಲಿಲಿಲ್ಲ

ಶಿವನ ತೋರುವ ಗುರುವಿನ ಅರಿ ಮೊದ¯ ||ಪಲ್ಲ||

ಮೇ-ಮಹಲಿನೊಳಗಾತ ಹಾನಲ್ಲ |

ಆ ವiಹಲಿಗೆ ನವದ್ವಾರ ಬಾಗಿಲ

ಸಾಲ ಗಂಟಿ ಓಂಕಾರ ನಾದ ಸೊಲ್ಲ

ಅಲ್ಲಿ ಮನ ನಿಲ್ಲಿಸಲು ಕಾಣುವನಲ್ಲ ||1||

ಆರರಿ ಪೈರ ತಿರುಗುವರಲ್ಲ |

ಅವರ ಕೈಯಲಿ ಸಿಕ್ಕರೆ ನಿನ್ನ ಬಿಡೊದಿಲ್ಲ

ಘೋರ ಕಷ್ಟಕ ಗುರಿ ಮಾಡ್ವರಲ್ಲ

ಆರರಿಗಳರಿತರೆ ಪರಶಿವನಲ್ಲ | ||2||

ವಸುಧಿಯೊಳೋಂಕಾರ ಮಠದಲ್ಲಿ |

ಶಶಿಧರನು ವಾಸವಾಗಿರುವನಲ್ಲಿ

ಶೇಷಧರ ಕಾಣಿಪ ಕ್ಷಣದಲ್ಲಿ

ಈಶ ಕರಿಘೂಳಿ ತೋರಿಪನು ಇದರ ಕೀಲಿ ||3||

ಎಂಥಾತ ನೋಡು ಈ ಗುರುವು ಎನ್ನಂತಿಲಿರುವೋ |

ಭ್ರಾಂತಿ ಬಿಡಿಸಿದನೆ ಮರವೂ

ಸಂತೋಷದಿಂದ ಹಂತಿಲಿ ಕರೆದು

ಅಂತರಂಗದ ಕೀಲನರುಹಿ

ಶಾಂತ ಸದ್ಗುರು ಬೋಧಿಸಿ ಯೆನ್ನ

ಚಿಂತೆ ಬಿಡಸಿ ತೋರಿದನರುಹು ||ಪಲ್ಲ||

ಬುಡನಡುವಾಗಿರುವದು ಗಿಡವು |

ಗಿಡದೆಲೆಯಲ್ಲಿ ಮಿಡಿಗಾಯಿ ಹಣ್ಣಿನೊಳು ರಸವು

ಅಡಿಗಳಿಲ್ಲದೆ ನಡೆದು ಪೋಗಿ

ಗಿಡದ ತುದಿಯಲಿ ದೃಢವನಿಲಿಸಿ

ಮೃಢನ ನುಡಿಗಳು ಬಿಡದೆ ನುಡಿಸುತ

ಮಿಡಿಹಣ್ಣು ಕುಡಿಸಿ ತೋರಿದ ಕುರುಹು ||1||

ಕೆರೆಯೊಂದು ಯೆನಗ ತೋರಿದನೆ |

ಆ ಕೆರೆಯ ಮಧ್ಯದಿ ನೀರೆ ನೀನೆಂದು ನಿಲಸಿದನೆ

ನೀರಿನೊಳಗೆ ನಾರಿಯರು ಮೂವರು

ಮೂರು ಲೋಕದಿ ಮೀರಿ ಮೆರೆವರು

ನಾರಿಯರ ಸೇರುವ ದಾರಿಯ ತೋರಿ

ಪಾರು ಮಾಡಿದ ಭವ ಸಾಗರವು ||2||

ಅಕಾರ ಉಕಾರ ತಿಳಿಸಿದ ನೇಮ |

ಮಕಾರದ ಮಾರ್ಗ ಸಾಕಾರದಿ ನೆಲಿಯಗೊಳಸಿದನೆ

ಓಂಕಾರ ನಾದವ ಹಿಡಿಸಿ

ಝೇಂಕಾರ ಪ್ರಣಮವು ಕೂಡಿಸಿ

ನಿರಾಕಾರನಾದ ಕರಿಘೂಳೀಶನು

ಸಾಕು ಮಾಡಿದ ನರ ಜನ್ಮವು ||3||

ಚಿತ್ರ ಎಂಥಾದು ಕಂಡೆ ರಾತ್ರಿ ಮನಗಂಡೆ |

ಉತ್ರ ಬಾಗಿಲದಿ ಬಂದೆ ಚಿತ್ರವು ಯಂಥಾದು ಕಂಡೆ

ಧಾತ್ರಿಯಲ್ಲ ತುಂಬ್ಯಾದ ಕಂಡೆ ನೇತ್ರ ದ್ವಾರದಲ್ಲಿರುವ

ಸೂತ್ರಧಾರನ ಕೂಡ್ವದು ಕಂಡೆ ||ಪಲ್ಲ||

ಮೇಲುಮಾಲಿನವಳಗ ಬಾಲೆಯೊಬ್ಬಳು |

ನಲಿನಲಿದಾಡುವುದು ಕಂಡೆ

ಕಾಲನಿಲ್ಲದ ಹೆಳವನೊಬ್ಬ ಮೇಲು ಮಾಲಿನೊಳಗೆ

ಪೋಗಿ ಬಾಲೆಯೊಳು ಕೂಡಿ ಲೋಲದಿ

ಬಾಲನೊಬ್ಬನ ಪಡೆದದ್ದು ಕಂಡೆ ||1||

ಕಣ್ಣು ಕುರುಡಾದಾಗ ಕಂಡೆ |

ಆ ಕಣ್ಣಿನೊಳು ಎಣ್ಣಿಲ್ಲದೆ ಜ್ಯೋತುರಿವದು ಕಂಡೆ

ಸಣ್ಣ ದ್ವಾರವ ತೆರೆದು ನೋಡಲು ಬಣ್ಣವೈದು ಕಾಣ್ವದು ಕಂಡೆ

ಬಣ್ಣದೊಳಗಿರುವ ಕರಿಘೊಳೀಶಗೆ ತನುಮನಧನ ಕೊಟ್ಟು ಕೂಡಿ ಕೊಂಡೆ ||2||

ದುರ್ಗುಣಗಳ ನೀ ನಡಿಬ್ಯಾಡೋ ಬ್ಯಾಡೊ ಬ್ಯಾಡೊ |

ಘೋರ ಸಂಸಾರ ಶರಧಿಯು ನೋಡೋ

ಪಾರು ಮಾಡುವ ಗುರುವಿನ ಕೂಡೋ

ಆರು ಅರಿಯದಂಥ ಪಾರಮಾರ್ಥದ

ಸಾರತತ್ವ ವಿಚಾರವ ಮಾಡೋ ||ಪಲ್ಲ||

ಶ್ರವಣ ಮನನ ನಿಧಿ ಧ್ಯಾಸವು ಮಾಡೋ |

ಭವದ ಬಾಧೆ ನೀಗುವದು ಪಾಡೋ

ಶಿವಯೋಗಾಸನ ಹಾಕಿ ನೀ ಬೇಡೋ

ಜೀವನು ಜಪಿಸುವ ಮಂತ್ರದಿ ಕೂಡೋ ||1||

ಚಕ್ಷುರಾಗ್ರದಲ್ಲಿ ಈಕ್ಷಿಸಿ ನೋಡೋ |

ಪಕ್ಷಿವಂದು ಹಾಡುವದು ಪಾಡೋ

ತಕ್ಷಕ ಭೂಷಣ ಸಾಕ್ಷಾತ ಸದ್ಗುರು

ದಕ್ಷಶಿಕ್ಷ ವಿರುಪಾಕ್ಷನ ಕೂಡೋ ||2||

ದಾನ ಧರ್ಮ ಪರವುಪಕಾರ ಮಾಡೋ |

ಹೀನ ಜನರ ಸಂಗವು ಬ್ಯಾಡೋ

ಜ್ಞಾನ ಮೂರುತಿ ಕರಿಘೂಳೀಶಗೆ

ತನುಮನಧನ ಕೊಟ್ಟು ಉನ್ಮನಿ ನೋಡೋ ||3||

ಶಾಂಭವಿ ಶಂಕರಿ ಬಿಂಬಾಧಾರಿ |

ಭ್ರಮರಾಂಬೆಯೆ ಪೊರೆಯಮ್ಮ

ಲಂಬೋಧರ ಪಿತನ ಸತಿಯಳಮ್ಮ

ಸಾಂಭನ ರಾಣಿ ಏನಮ್ಮ

ನಂಬಿಗಿಯಿಂದ ಹಂಬಲದಿ ಬಂದೆ

ಬೆಂಬಿಡದೆ ಸಲಹಮ್ಮ ||ಪಲ್ಲ||

ತ್ರಿಗುಣದಿಂದೆ ತ್ರಿಮೂರ್ತಿಗಳನು |

ವಧಿಸಿದೆ ನೀನಮ್ಮ

ತ್ರಿ ಅಕ್ಷರಕಧಿಕಾರಾದೆಮ್ಮ

ತ್ರಿ ಶಕ್ತಿಯರವುತ ನೀನಮ್ಮ

ತ್ರಿಪುರ ಸುಂದರಿ ತ್ರಿನಯನ ಧಾರಿ

ತ್ರಿಲೋಕ ನಿನ್ನೊಳಗಮ್ಮ ||1||

ದುಷ್ಟ ಮಧು ಕೈಟಭ |

ಮಹಿಷಾಸುರನ ಸೀಳಿದಿಯೆನ್ನಮ್ಮ

ಕೆಟ್ಟ ಶುಂಭ ನಿಶುಂಭರ ತರಿದೆಮ್ಮ

ಶ್ರೇಷ್ಠ ಶರಣರ ಸಲಹಿದೆಮ್ಮ

ಸೃಷ್ಟಿಯೊಳು ರಾಜೋಳಿಯಲಿ ನಿಂತು

ಘೂಳೀಶಗೊಲಿತೆಮ್ಮ ||2||

ಅಲ್ಲಿಪುರದಲ್ಲಿ ಕಾಲಹರಣ ಮಾಡುವಂತ |

ಶೀಲವಂತರು ಗೌಳಿಗೇರು ನಾವಮ್ಮಾ

ಕಾಲಕಾಲದಲ್ಲಿ ಹಾಲ ಮಾರುವಂತ

ಮೇಲಾದ ವ್ಯವಹಾರ ನಮ್ಮದು ಬಾಲಿ ಕೇಳಮ್ಮಾ ||ಪಲ್ಲ||

ಆರು ಛಾಯದಾಕಳದ್ಹಾಲ ಮೂರು ಸೇರು |

ಹಿಂಡಿ ನಾನು ಬೇರೆ ಸ್ವಾರ್ಯಾಗ ಕಾಸೀನಿ ನೋಡಮ್ಮಾ

ಸಾರ ಮಾಡಿ ಉಣವಂಥ ಧೀರ ಶರಣರಿಗೆಲ್ಲ

ಆರು ಲಕ್ಷಕ್ಕೆ ಸೇರು ಮಾರುವರಮ್ಮಾ ||1||

ಕಾಸಿದ ಹಾಲಿಗೆ ಶಶಿಧರನ್ಹೆಪ್ಪು ಕೊಟ್ಟೆ |

ಮೊಸರಾಯಿತು ಒಳ್ಳೆ ಅಸಲ ನೋಡಮ್ಮಾ

ಕಸರಿಲ್ಲದೆ ಮೊಸರ ಸೋಸಿ ಮಜ್ಜಿಗಿ ಮಾಡಿ

ಹಸನಾದ ಬೆಣ್ಣೆಯ ತೆಗೆದೆ ನೋಡಮ್ಮಾ ||2||

ನುಣ್ಣಾಗಿ ಬೆಣ್ಣೆ ತೊಳೆದು ಸಣ್ಣಾಗಿ ವುರಿಯನ್ಹಚ್ಚೋಣ |

ಬಣ್ಣ ಬದಲಾಯಿತದೇ ಕ್ಷಣದಲ್ಲೆಮ್ಮಾ

ಎಣ್ಣಿ ಹೋಳಿ ಗುಣವಂಥ ಶರಣಾರು

ಬಣ್ಣ ನೋಡಿ ಸುಣ್ಣದ ಬಣ್ಣಾಯಿತ್ತು ಬೆಣ್ಣಿ ಕಾಸಿದ ತುಪ್ಪಮ್ಮಾ ||3||

ಬೇಕಾದರೆ ಕೊಳ್ಳಿರಿ ಸಾಕಾದರೆ ಬಿಡಿರಿ |

ಏಕ ಲಕ್ಷಕ್ಕೆ ಸೇರು ಮಾರುವೇನಮ್ಮಾ

ಅಕಾರ ಉಕಾರ ಮಕಾರ ಸಕಾರ

ಓಂಕಾರ ನಿರಂಕಾರ ಲಿಂಗಜಂಗಮರಮ್ಮಾ ||4||

ಪಂಚತತ್ವ ಕಂಡು ವಂಚನಿಲ್ಲದೆ ಕೊಂಡು |

ಪಂಚ ಅಮೃತವುಂಡು ಸುಖವು ನೋಡಮ್ಮಾ

ಸಂಚಿತಾಗಮಕಿನ್ನು ಮಿಂಚೀದ ಕರಿಘೂಳೀಶನ

ಪಂಚಾಕ್ಷರಿ ಮಂತ್ರ ಪಡಿ ಹಂಚಿಕಿಯಿಂದಮ್ಮಾ ||5||

ದೇಶ ದೇಶವ ತಿರುಗಿ ಬ್ಯಾಸತ್ತು ಬಂದರೆ |

ಈಶನ ದರುಶನವಾಗಲಿಲ್ಲಮ್ಮಾ

ಆಶಾಪುರವ ಬಿಟ್ಟು ಹಾಸನಪುರಕ್ಕೆ ಬಂದೆ

ಅಕ್ಕಾ ನಿಜಪುರದಲ್ಲಿ ಸಿಕ್ಕ ಶಿವನಮ್ಮಾ ||ಪಲ್ಲ||

ಅಂಗದ ಊರ ಬಿಟ್ಟೆ ಲಿಂಗದ ಊರುಗಟ್ಟೆ |

ಸಂಗಪುರದಲ್ಲಿ ಸ್ನಾನ ಮಾಡಿದೆನಮ್ಮಾ

ಕಂಗಳಪುರದಲ್ಲಿ ರಂಗುಮಾಲಿನೊಳಗಿರುವ

ಲಿಂಗ ಮಹಾಲಿಂಗನ ನೋಡಿದೆನಮ್ಮಾ ||1||

ಆಧಾರಪುರವ ನೋಡಿ ಸ್ವಾಧಿಷ್ಠಪುರಕ್ಕೆ ಬಂದೆ |

ಮುಂದೆ ಮಣಿಪುರದ ದಾಟಿ ರುದ್ರಪುರವಮ್ಮಾ

ವಿಶುದ್ಧಗ್ನಿ ಚಕ್ರದ ಮೇಲು ಬುದ್ಧಿಯಿಂದ ಯಿರುವಂಥ

ಸಿದ್ಧ ಕರಿಘೂಳಿಯ ಕಂಡು ಶುದ್ಧಾದೆನಮ್ಮಾ ||2||

ಗುರುವರ ಸ್ಮರಣೆ ಮರಿಬ್ಯಾಡ ತರುಳೆ |

ಕರುಣಾದಿ ಕಾಯ್ವನು ಧೀರನ್ಹಗಲಿರುಳೆ

ದಾರೇನಂದರೇನಾಗುವದು

ಮಾರಹರನ ಶಿವಶರಣರ ಸೇವೆಯೊಳೆ ||ಪಲ್ಲ||

ಸ್ಥಿರವಿಲ್ಲ ಕಾಯ |

ಅರುವಿನಲಿ ನಡೆಯಿರಿ

ನರಜನ್ಮ ದೊರೆಯದಯ್ಯ

ಮರಣಾಗದ ವರ ಪಡೆಯೋ ||1||

ಕೆಟ್ಟ ಭವ ಸಾಗರ |

ದಾಟುವದು ದುಸ್ತರ

ಧಿಟ್ಟ ಕರಿಘೂಳಿಚರಣವೇ ಜಹಜ

ಯೇರಿ ಪಾರಾಗು ಮಗಳೆ ||2||

ಯಲ್ಲಮ್ಮ ಯಲ್ಲಮ್ಮ |

ನಿನ್ನಂಥ ದೇವರೆಲ್ಲಿಲ್ಲಮ್ಮಾ

ಬಲ್ಲಿದ ಶರಣಗೊಲಿತೆಮ್ಮಾ

ನೀ ಖುಲ್ಲರ ಹಲ್ಲು ಮುರಿದೆಮ್ಮಾ ||ಪಲ್ಲ||

ವಿಷ್ಣು ಅವತಾರವು ನೀನಮ್ಮಾ |

ದುಷ್ಟ ಮಧುಕೈಟಭ ಸಂಹಾರೆಮ್ಮಾ

ಕಟ್ಟಿಳಿ ಮೀರಿ ನಡೆದಂತವರಿಗೆ

ಕಟ್ಟು ಮಾಡಿ ಕಷ್ಟ ಕೊಟ್ಟೆಮ್ಮಾ ||1||

ಕಪಾಟ ಮುಚ್ಚಿಕೊಂಡು ಕುಳಿತೆಮ್ಮಾ |

ಭವದಾಟ ನಿನಗೆ ಸರಿ ಬಾರದಮ್ಮಾ

ಜೀವಾತ್ಮನೆ ನಿನ್ನ ಗುರುತಮ್ಮಾ

ಶಿವನಾಟದಲ್ಲಿರುವಗೆ ತೋರಿದೆಮ್ಮಾ ||2||

ಯಿಳಿಯೊಳು ಒಳ್ಳೆ ವೀಳ್ಯದೆಲಿಯಮ್ಮಾ |

ಹೊಳಿಯದಂಡಿಲಿ ರಾಜೊಳ್ಯಮ್ಮಾ

ಒಳ್ಳೆ ಕರಿಘೂಳೀಶಮ್ಮಾ

ಬಾಲರಿಗೆ ವಲಿತೆ ನೀನ್ಹಡದಮ್ಮಾ ||3||

ಹಾದಿಯ ನೋಡಿದೆ |

ಸದಾಶಿವನ್ಹಾದಿಯ

ಹಾದಿಯ ನೋಡಿದೆ ಭೇದವನಿಲ್ಲದೆ

ಸದಾ ಸದ್ಗುರು ನಿಜ ಬೋಧದಿಂದಲಿ ||ಪಲ್ಲ||

ಆರು ಚಕ್ರದ ಮೇಲೆ ಬೇರೊಂದು |

ಮೂರು ನದಿಯ ಮೇಲೆ

ಭಾರಿವುನ್ಮನಿಯಲ್ಲಿ ಸೇರಿಕೊಂಡಿರುವಂತ

ಪರಿಪೂರ್ಣನಾದಂತ ಪರಬ್ರಹ್ಮನಿರುವೋ ||1||

ವಿಂಶಪಂಚ ತತ್ವದ ಮೇಲೆ |

ಸಂಶಯವಿಲ್ಲ ಸಂತೋಷದಿ ನಾ

ಹಂಸದ ಸೋಹಂಯಂಬ ಹಂಸವನೇರಿಸದ

ಕಂಸಮರ್ಧನ ಸಖ ವಂಶವುದ್ಧಾರನಿರುವೋ ||2||

ಝೇಂಕಾರ ನಾದದಲ್ಲಿ |

ಓಂಕಾರ ಪ್ರಣಮ ರೂಪದಲ್ಲಿ

ಅಕಾರ ಉಕಾರ ಮಕಾರ ಸಕಾರಾಗಿ

ಯೇಕವಾದೊಸ್ತುವ ನಿರಾಕಾರನಿರುವೋ ||3||

ಕಾಲಕಾಲದಲ್ಲಿ ಸದಾಕಾಲ

ಬಾಲಲೀಲೆಯಲ್ಲಿ ಬೈಲಿನೊಳಗ

ಆಲಯಪುರದಿಯಿರೋ

ನಿರ್ಬೈಲನಾದ ಕರಿಘೂಳೀಶನಿರವೋ ||4||

ಮೃಢನಡಿ ದೃಢದೆಡೆ ಬಿಡದಿರು ಮಾನವ |

ಅಡಿಗಡಿಗಾನುಡಿ ಸಡಗರದನುವಾ

ಬಡಿವಾರದ ಬಿಡಿನುಡಿ ಬಿಡು ಅನುವಾ

ಜಡರೊಳು ಕೂಡದೆ ಕೂಡೊ ಗುರು ಘನವಾ ||ಪಲ್ಲ||

ಕಡಿಕೆಡ ಕಿಡಿಗುಣ ಬ್ಯಾಡಿದು ಗುಣವಾ |

ಅಡಿದಿಡಿದ್ಹೊಡಿಯುವ ನೋಡೋ ಯಮ ತನುವಾ

ಈಡೆಯಡನಾಡಿ ಬಲ ಬಿಡಿದಿಡಿವ ಪಿಂಗಳ

ನಡುನಾಡಿ ಸುಷುಮ್ನನಿಡಿದು ನೋಡು ಪತಿ ಕಾಣುವಾ ||1||

ಬುಡದಡಿ ಸಡಿಲಿಡಿ ಕುಡಿಪಡಿಪದವಾ |

ಕಡಿಮೇಡ ಬಿಡದೆ ನೋಡೋ ಹಿಡಿ ಘಡಿಪಥವಾ

ಪೊಡವಿಲಿ ಹಿಡಿ ಜಾಂಡಿ ಸಡಗರಾಜೊಳ್ಳಿ ಕಡಿ

ಬೆಡಗಿಲ್ಲದ ಕರಿಘೂಳಿಗೆ ಕೊಡೋ ತನುಮನಧನವಾ ||2||

ಕಂಡೆನಂಡ ಮಂಡಲದೊಳು |

ಪುಂಡ ಮಹಾರ್ತಂಡನಾ

ಅಂಡಪಿಂಡ ಬ್ರಹ್ಮಾಂಡದೊಳು

ಗಂಡುಗಲಿ ಅಖಂಡನಾ ||ಪಲ್ಲ||

ಖಂಡಿತದಿ ಬೆಳಕಿಂಡಿಲಿರುವೊ |

ರುಂಡಮಾಲ ವುದ್ಧಂಡನಾ

ಎಲ್ಲಿ ಎಲ್ಲಿ ತಿರುಗಿ ನೋಡಲು

ಅಲ್ಲಿ ಅಲ್ಲಮ ಸಂಗಮ ||1||

ಖುಲ್ಲಗುಣಳೆಲ್ಲ ನಿಲ್ಲಿಸಿ |

ಆಲೆ ನಿಲಿಸಿದ ಜಂಗಮ

ಮೆಲ್ಲಮೆಲ್ಲನೆ ಹುಲ್ಲೆಬಲ್ಲಿಸೆ

ಸುಲಲಿತದ ಘನಲಿಂಗಮಾ ||2||

ಭೀಮಶಾಮ ನೇಮದಿರುವಾ |

ಕಾಮಹರ ಮಹಾಮಹಿಮನಾ ವ್ಯೋಮಕೇಶ

ಸೋಮವಾಸ ಕಾಮಿತಜನ ಉಮೇಶನಾ

ನೇಮಹೋಮ ಮಾಧವ ಸ್ವಾಮಿ ಕರಿಘೂಳೀಶನಾ ||3||

ಈಶಧ್ಯಾಸ ಶಿಶುವೆ ಮರಿಬ್ಯಾಡ |

ಬ್ಯಾಸರಿಯಲಿ ಬ್ಯಾಡ ವಸುಧಿಯೊಳಗೆ ಪೋಷಿಸುವಪಾಡ

ಕಸಿಬಿಸಿ ಪುಸಿನುಡಿ ಹುಸಿ ಮನ ಮಾಡಿ

ಲೇಶದಿಂದ ಯೋಗಾಸನ ಕೂಡಿ

ನಾಸಿಕಾಗ್ರದಿ ಮನ ಸೂಸದೆ ನಿಲಿಸಲು

ದಶವಿಧ ಕ್ಷೇತ್ರವು ಧ್ಯಾಸಿಸು ಗಾಢ ||ಪಲ್ಲ||

ಆರರಿ ಮೂರು ಗುಣಗಳನು ಬ್ಯಾಡ |

ಮೂರಾರಲ್ಲಿ ಸೇರಿ ಸಾಧನವನು ಸರಸದಿ ಮಾಡೊ

ಕಾರಣಾ ಮಹಾಕಾರಣದಲ್ಲಿ

ಮಾರಹರನಿರೋ ಅರಮನಿ ನೋಡೊ

ಭಾರಿವುನ್ಮನಿಯಲ್ಲಿ ಸೇರಿರು ಪರತರ

ಪರಮ ಸುಖ ಪರಮಾತ್ಮನಗೂಡೊ ||1||

ಸಪ್ತ ವ್ಯಸನಗಳ್ಹಾಳು ನೀ ಮಾಡೊ |

ಆಪ್ತರನು ಕೂಡೊ

ಸಪ್ತನದಿಯಲಿ ಸ್ನಾನವನು ಮಾಡೊ

ಸಪ್ತವರ್ಣದಿಂದಲಿಯಿರುವ

ಸಪ್ತಲಿಂಗದ ಪೂಜೆಯಗೈವ

ಗುಪ್ತ ಕರಿಘೂಳಿ ಗುರುವಿನ ಮಂತ್ರವ

ಶಪ್ತದಿ ತಪ್ಪದೆ ನಿತ್ಯ ಜಪ ಮಾಡೊ ||2||

ಶ್ರೀಗುರು ಕರಿಬಸವರ ಪೊರೆವಂತ ಧೀರ |

ಮರೆಯಲಾರೆನು ಮುಕ್ತಿ ಕೊಡುವದು ವರಾ

ಶರಧಿ ಸಂಸಾರ ಪಾರವಾರ

ಸೇರಿ ತಿರಗಿದೆ ಭುವನ ಸಾಸಿರ

ಪೂರ್ವಜನ್ಮದ ಗುರ್ತನರುಹಿ

ಪರಮ ಬೋಧವ ಬೋಧಿಸಿದ ವರ ||ಪಲ್ಲ||

ಆಟಪಾಟಗಳೆಲ್ಲ ಬಿಡಿಸಿದ ಸಟೆ ಮಾಡಿಸಿದ |

ಪಟುತರದ ಹಟಯೋಗ ಬಿಡಿಸಿದ

ದಿಟವಾದ ಪಂಚಾಕ್ಷರಿಯ ಮಂತ್ರವನ್ನು ಪಠಿಸಿದ

ಷಟ್‍ಚಕ್ರಗಳನು ಮುಟ್ಟಿ ಶಿವನ ಆಟ ತೋರಿಸಿದ

ನಾಟಕ್ಹಂಸನೊಳು ಸೇರಿಸಿ ತ್ರಿಕೂಟ ಸಂಗಮದಿ ನಿಲಸಿ

ಥೇಟ ಜ್ಞಾನ ಮಂಟಪದೊಳು ಕೋಟಿ ಸ್ಫಟಿಕ ಚಾಟಿ ಹಿಡಿಸಿದ ||1||

ಯೇಕ ದೋನಿ ತೀನಿಯೆಂಬುವದಾ ಯೇಕಾಗಿಯಿರುವದ |

ನಾಲ್ಕು ಆರು ಹತ್ತುಯೆರಡಾದ

ಬೇಕಾದವರಿಗೆ ಹದಿನಾರೆರಡು ದಳದ ಮೇಲದಾ

ಆಕಾಶದಲ್ಲಿ ಕೋಕಿಲೊಂದು ಕೇಕೇ ಹಾಕುವದಾ

ಆಕಾರ ಕಾಣಿಸುವದಾದ ಝೇಂಕಾರ ಓಂಕಾರನಾದ

ಯೇಕ ದೃಷ್ಟಿಲಿ ಆಲಿಸಿದರೆ ಸಾಕು ಬೇಕೆಂಬೋ ನಾದ ||2||

ಜಂಗಮ ರೂಪದಿಂದೆ ಜಗದೊಳಗೆ ಬಂದೆ |

ಸಂಗನಬಸವನ ಕಾಣದೆ ಕಂಗೆಟ್ಟು

ಧರೆಯಲಿ ಮಂಗಳೆಂದು ತಿರುಗಿ ಹುಡುಕಿದೆ

ಸಂಗನಬಸವನಿಗೆ ಭೀಮ ಮೇಲ್ಗಿರಿಯಲ್ಲಿ ಕೂಡಿದೆ

ಲಿಂಗಮುದ್ರಿಯಲ್ಲಿಯಿರಿಸಿ ಮಂಗಳ ವಾದ್ಯದಿ ಮೆರಸಿ

ಸಂಗಮನ ಸಂಗದಿ ಜಂಗಮನಯ್ಯ ಮಾಡಿದ ಕರಿಘೂಳೀಶ್ವರ ||3||

ಊರಿಗ್ಹೋಗಿ ಗುರು ಕರುಣದಿಂದೆ ಉಳದೆ ||ಪಲ್ಲ||

ಮರವರುವಿನೊಳಾದೆ ಘೋರ ದುರಿತಗಳು |

ದೂರಾದವೇಳಮದೆ ಪುರಹರ ದಯದಿಂದೆ ||1||

ಬಲ್ಲವರೆಂದು ಬಹಳ ಹರುಷದಿಂದೆ |

ರೇಲ್ವಾಡಿಗೆ ಇಳದೆ ಎಲ್ಲವರ ಕೂಡಿಕೊಂಡೆ ಬಳ್ಳಡಗಿಯಲಿಂದೆ

ಕಲ್ಲಿನ ಮೇಲಿರೊ ಕೊಲ್ಲೂರಿಗೆ ಹೋದೆ ಬಲಿಯೊಳಗ ಆದೆ ||2||

ಹತ್ತು ಎಂಟು ಮಂದಿ ಜತ್ತಿಲಿರುವುಹರು |

ಮಿಥ್ಯ ಉತ್ತಮರವರು ಸುತ್ತಲೆ ಮುತ್ತಿ ಕುತ್ತಿಗಿ ಕೊಯ್ವರು

ಸತ್ಯ ಶರಣರ ಪತ್ತನೆ ಕಳೆಯುವರು ಸತ್ಯ ನಾಶಾದವರು ||3||

ಆರು ಮೂರು ವಾರಿಗೂರೊಳು ಸೇರಿದರು |

ಜಾರ ಚೀರರವರು ಪೈರಕಾರನ ಕೈಯೋಳು ಸೇರಿದರು

ಮರಳಿ ಮರಳಿ ನರಕಕ್ಕೆ ಬರುವರವರು ಗುರು ದ್ರೋಹಿಗಳವರು ||4||

ಕಡಿ ಕಾಲಕ್ಕೆ ಗುರುದೇವ ತಾ ಬಂದ ಬಿಡಿಸಿದನು ಅಲ್ಲಿಂದೆ |

ಆಡುತ ಪಾಡುತ ನಾಲ್ವಾರಕ ಬಂದೆ ಗಡಿ ಬಳ್ಳಡಗಿ

ವಡೆಯ ಮೃಢತಂದೆ ಬಿಡದಿದ್ದ ಬೆನ್ನಿಂದೆ ||5||

ಪರಿ ಪರಿ ಬಂಧನ ದೂರಾಯ್ತೇಳಂದೆ |

ಶರಣೆನುತ ಬಂದೆ ಧರಣಿಯ ಜನರ ಸಂಗವ ಬೇಡಂದೆ

ಸ್ಥಿರ ಬೈಲಾದ ಕರಿಘೂಳೀಶ ದಯದಿಂದೆ ಧರಿಯೊಳು ಪಾರಾದೆ ||6||

ಸಾಕು ಸಾಕು ಈ ಎನ್ನ ಜನ್ಮ |

ಬೇಕಾಗಿಲ್ಲಮ್ಮ ಓಯಮ್ಮ

ಕಾಕು ಜನರ ವಾಕ್ಯವು ಕೇಳಿ

ವಾಕರಿಸಿತು ಮನವು ಓ ದೇವ ||ಪಲ್ಲ||

ಹೊಟ್ಟಿಲಿ ಹುಟ್ಟಿದ ಶ್ರೇಷ್ಠ ಕುಮಾರಗೆ |

ಬಿಟ್ಟೆ ಹೊರಿಸುವರಯ್ಯೋ ಹೇ ದೇವ

ಶ್ರೇಷ್ಠರಿವರೆಂದು ಭೆಟ್ಟಿಗೆ ಹೋದರೆ

ಕುಟ್ಟಿಹಾಕುವರಯ್ಯೋ ಹೇ ದೇವ ||1||

ಶಂಭು ಈತನೆಂದು ನಂಬಿಗಿಯಿಂದಲಿ |

ಬೆಂಬಲಿಸಿದೆನಮ್ಮ ಓ ಯಮ್ಮ

ಬೆಂಬಿಡದಲೆ ನಿನಗಿಂಬುಯಿರುವೆವೆಂದು

ನಂಬಿಗೇಳಿದರಮ್ಮ ಓ ಯಮ್ಮ ||2||

ಸ್ಮರಣಿಯೊಳಿರುವ ತರುಳನ ಮರಿಯಾದಿ |

ಸೂರೆಮಾಡಿದರಮ್ಮ ಧೀರ ಕರಿಘೂಳಿ

ಕರುಣದಿಂದಲಿ ಪಾರಾದೆನಮ್ಮ ||3||

ಶ್ರೀಗುರುಲಿಂಗ ಜಂಗಮವ |

ಇಹಪರದಿ ಸ್ಥಿರದಿ ನಂಬಿರುವ

ಪರಿಪರಿಯಲ್ಲಿ ಪರಕಿಸುವ ಮಹಾದೇವ

ಶಿರ ಬಾಗೆ ವರ ನಿಜವರಿದ ಸಂಜೀವ ||ಪಲ್ಲ||

ಧರಿಯೊಳುಯಲ್ಲವು ತರವಾ |

ಗುರುತರಿತು ಮೊರೆಯ ಸೇರಿರುವ

ಹರಶರಣರ ಕರುಣದಿ ಪೊರೆಯುವ

ಮರೆಯದಿರನುದಿನ ಸುರಿ ಅಮೃತವ ||2||

ಕೋರಿದ ವರ ಕರುಣಿಸುವ |

ಕರ ಪಿಡಿದು ಮುಕ್ತಿಯನು ಕೊಡುವ

ಕರಿಘೂಳಿ ಗುರುವರ ದಯದಲಿ ಮೆರಿವಾ

ಸೇರಿ ಸುಖಿಸು ಸಂಗನಬಸವ ||3||

ಅನುದಿನದಲಿ ಘನ ಗುರುವಿನ ನೆನಿ |

ಅನುಮಾನವೇಕೊ ಸಾಕೊ ||

ಸನುಮತದಿಂದಲಿ ಮನದೊಳು ತಿಳಿಯೊ |

ಯೇನೇನು ಸುಖವಿಲ್ಲ ಜನ್ಮಕಾ

ತಣ್ಣಗೆನಿರಿಸುವ ಹುಣ್ಣಿವಿ ಚಂದ್ರನ ಕಣ್ಣಿನೊಳಗ

ತಾ ಕಾಣುವದಕೆ ಅನುಮಾನವ್ಯಾಕೊ ಸಾಕೊ ||1||

ಕಸಿಬಿಸಿ ಪುಸಿ ನುಡಿ ಮೋಸಗೊಳಿಸುವದು |

ಲೇಶವಿಲ್ಲ ತುಸು ಕಾಯಕ ಆಶೆ ಅಗಿದು

ಪದ್ಮಾಸನ ಬಿಗಿದು ಆಶೆರಹಿತ ಶಶಿಯೀಶನ

ಕಾಣೋದಕನುಮಾನವ್ಯಾಕೊ ಸಾಕೊ ||2||

ದುಷ್ಟ ಗುಣಗಳಿಂದ ಕೆಟ್ಟು ಹೋಗುವಿ |

ಕಟ್ಟಿ ಕಟ್ಟುವ ಯಮನಾಳುಗಳು ಶ್ರೇಷ್ಠ ಶರಣರ ಸೇವೆ

ನಿಷ್ಠಿಯಿಂದಲಿ ಮಾಡಿ ಇಷ್ಟವಾದವರ ಪಡಿವದಕೆ

ಅನುಮಾನವ್ಯಾಕೊ ಸಾಕೊ ||3||

ಹಮ್ಮಿನಿಂದ ಅಜಹರಿ ಹೇಮರು ಕೆಟ್ಟರೋ |

ಸುಮ್ಮನೆ ಕೂಡುವದ್ಯಾತಕೊ ಒಮ್ಮನದಿಂದ

ಓಂ ನಮಃ ಶಿವಾಯಗೂಡಿ ಸೋಹಂನಿಂದ

ಬ್ರಹ್ಮನ ಕಾಣೋದಕನುಮಾನವ್ಯಾಕೊ ಸಾಕೊ ||4||

ಆತ್ಮಶೋಧನವಿಲ್ಲದೆ ಭೇದವಾಚರಿಸುತ |

ಹಾದರಗೈಯ್ಯುವದ್ಯಾತಕೊ ಮೋದದಿಂದ

ಪರದ್ಹಾದಿ ತೋರಿಸುವ ಸಾಧು ಕರಿಘೂಳಿ

ಪಾದನಂಬುವದಕೆ ಅನುಮಾನವ್ಯಾಕೊ ಸಾಕೊ ||5||

ಗುರುವಿನ ಸ್ಮರಣೆಯಲ್ಲಿಯಿರು ಸದಾ ನೇಮಾ |

ಆರು ಮೂರನು ಸೇರಿ ಪರದಲ್ಲಿರುಸು ಕಾಮಾ ||ಪಲ್ಲ||

ಗುರುವೆ ಬ್ರಹ್ಮಾಕರ |

ಗುರುವಿಷ್ಣು ಉಕಾರ

ಗುರುರುದ್ರ ಮಕಾರ

ಗುರು ಓಂಕಾರ ಪ್ರಣಮಾ ||1||

ತಪ್ಪದಲೆ ಇಪ್ಪತ್ತೊಂದು |

ಸಾವಿರದಾರುನೂರದ

ಜಪಿಸೋಹಂ ಸೇರಿಸದ

ಭಾಪುರೆ ಪರಮಾ ||2||

ಆರು ಚಕ್ರದ ನೆಲಿಯ |

ಅರಿತು ಸೇರುನ್ಮನಿ ನಿಲಯ

ಭೋರ್ಗರಿಪ ಭೇರಿ

ಆಲಯದಿರುವ ಸಾರ್ವಭೌಮಾ ||3||

ಬೈಲಿನಲ್ಲಾಡೊ ಸದಾ |

ಬೈಲಿಂದೆ ಪಡಿಯೊ ಪದ

ನಿರ್ಬೈಲ ಸುಳಿ ತಿಳಿ

ಘೂಳೀಶನ ಮಹಿಮಾ ||4||

ಆನಂದಮಯ ಸುಖ ಏನೆಂದ್ಹೇಳಲಿ |

ತಾನು ದಯವಾದಳು ಭಾನುವಾರದೊಳಗೆ ||ಪಲ್ಲ||

ಏನು ಅರಿಯದೆ ಧ್ಯಾನಗೈಯುತ |

ನೀನೆ ನೀನೆಂತೆಂಬೊ ಸಮಯದಿ

ಜ್ಞಾನ ಮೂರುತಿ ಚಿನುಮಯಳು

ತಾನುನುಮಾನಿಲ್ಲದೆ ಮೌನದೊಳಗೆ ||1||

ಅಂದ ಚಂದದ ಸಭಾ ಮಂದಿ ಸಂದಣಿಯಲ್ಲಿ |

ಸಂದೇಹವಿಲ್ಲದೆ ಮಹಾಧರೆಯೊಳಗೆ

ಮಂದಮಾರುತಳಾದ ಶ್ರೀದೇವಿ ಅಂದಳವ ತಾನೇರಿ ಭರದಿ

ಕಂದನೆಡೆಗೆ ಬಂದಳೋಡಿ ನಿಂದಳಿಂದು ವಾರದೊಳಗೆ ||2||

ಗಂಗೆಯಮುನೆ ಸರಸ್ವತಿ ಸಂಗಮದಲ್ಲಿ |

ಮಂಗಳಾಂಗಿಯು ಅಂಗಸಹಿತವಾಗಿ

ಜಂಗು ಝಾಗಟಿ ಹಿಂಗದಲೆ ಮೃದಂಗ ಶಂಖು ಸಮ್ಮೇಳದೊಳಗೆ

ಸಂಗಮಹಾಲಿಂಗ ಜಂಗಮನಾಂಗಿ ಮಂಗಳವಾರದೊಳಗೆ ||3||

ಕೆಂಪು ಕರಿದು ಬಿಳಿದ್ಹಳದಿ ನೀಲದೊಳಗೆ |

ಇಂಪು ಬಹು ಸೊಂಪಾದ ತಂಪಿನೊಳಗೆ

ಸಂಪನ್ನೆಯುತಾ ಸೌಮ್ಯವಾರದಿ ಪೊಂಪ ಕ್ಷೇತ್ರದಿ ಬಂದುಯಿಳಿಯಲು

ಕಂಪಿಸಿತು ದೆಶೆದೆಶೆಗೆ ಶಶಿಕಳೆ ಝಂಪಿಸಿತು ಗುರುವಾರದೊಳಗೆ ||4||

ಮಾರ್ಗ ಹಿಡಿದು ಬರುವಾಗ್ಯೆ ಭೋರ್ಗರದಿಂದ |

ಸ್ವರ್ಗಕಿಳಿದಳು ಭಾರ್ಘ ವಾರದೊಳಗೆ

ಅಘ್ರ್ಯಪಾದ್ಯ ಆಚಮಾನದಿ ಮಹಾರ್ಗಣಗಳ ಸೇವೆಗೊಳ್ಳುತ

ಹೆಗ್ಗ ಹೆಗ್ಗಳವಾದ ವರಗಳ ಕೊಡುತ ಮಂದವಾರದೊಳಗೆ ||5||

ಕೇಚರಿ ಭೂಚರಿ ಸಹಚರಿ ಷಣ್ಮುಖಿ |

ಶಾಂಭವಿಳಿದಳು ನಿಚ್ಚವಾರದೊಳಗೆ

ಸ್ವಚ್ಛದಿಂದಲಿ ಬಂದು ಮನಸಿನ ಇಚ್ಛೆ ಪೂರ್ತಿಸುವಂಥ ನಾಮವ

ಉಚ್ಛಾರಗೈಯ್ಯೆಂದು ನಿಶ್ಚಯವಾಗುಚ್ಚರಿಸಿದ ಕರಿಘೂಳಿಗೆ ||6||

ನಾದದಿ ನಾದ ವಿನೋದ |

ಸದಾ ಸಾಧನದಿ ಈಶನಾದ

ಆದಿ ಅನಾದಿ ಮೊದಲ್ಹಾದಿದೋರಿಪ ನಾದ

ಅದೀದು ಚೌದಳ ದೇವದಯದಾದಿ ನಾದ ||ಪಲ್ಲ||

ಆತ ಈತನೆಂಬುವದ್ಯಾವದೊ |

ನಿತ್ಯ ತತ್ವದಿ ಹತ್ತದು ಶೋಭಾ

ಆತನಿಂದ ಈತನಾದ ಈತನಿಂದ ಆತನಾದ

ಆತಯೀತ ಈತ ಆತ ಪತೀತ ಏಕನಾದ ||1||

ಶ್ರವಣ ಮನನ ಧ್ಯಾನದಾದ |

ಪೂರ್ವ ಝಾವದಿ ನಿಜ ಗುಡಿಯುವದ

ಶಿವನಿಂದ ಜೀವನಾದ ಜೀವನಿಂದ ಭಾವನಾದ

ಜೀವ ಶಿವನೊಂದಾದರೆ ಭವಬಾಧೆ ಯಾವಲ್ಯಾದ ||2||

ತನ್ನ ತಾನೆ ತಿಳಿಯೋದಾದ ಇನ್ನು |

ನಾನು ನೀನೆಂಬುವದ್ಯಾವದೊ

ನಾನು ನಾನು ನಾಯೇನಾದ ನೀನು ನೀನು ನೀನೇನಾದ

ನಾನು ನೀನೊಂದಾದರೆ ಅನುಮಾನಿನ್ನೇನಾದ ||3||

ಅಕಾರದಿಂದ ಬ್ರಹ್ಮನಾದ ಸಾಕೊ |

ಉಕಾರದಿಂದ ವಿಷ್ಣುವಾದ ಮಕಾರ ರುದ್ರನಾದ

ಸಕಾರ ನಿರಾಕಾರನಾದ ಅಕಾರುಕಾರ ಮಕಾರ

ಝೇಂಕಾರೋಂಕಾರನಾದ ||4||

ಅದು ಅದು ಯೆಂಬುವದ್ಯಾವದೊ ಭೇದ |

ಇದುಯಿದುಯೆಂಬುದ್ಯಾವದೊ

ಅದೆಯಿದು ಇದೆ ಅದು ಇದೆ ಅದು ಅದೆಯಿದು

ಅದುಯಿದು ಒಂದಾದರೆ ಸಾಧು ಕರಿಘೂಳಿಯಾದ ||5||

ತತ್ವದಿ ತತ್ವದಿ ತತ್ವ |

ಸತ್ಯ ತತ್ವ ತಿಳಿದರೆ ಮಹಾತ್ಮ

ತತ್ವಾದಿ ತತ್ವ ತಾ ತತ್ವಾತ್ತು ಅರ್ಥ ತತ್ವ

ಪೃಥ್ವಿ ಆಪ ತೇಜ ವಾಯು ಆಕಾಶ ತತ್ವ ||ಪಲ್ಲ||

ಮುನ್ನ ಆಕಾಶದ ತತ್ವಯನ್ನಂತರಿಂದ್ರಿಯ |

ಮನತ್ಹಳದಿಚ್ಛಾಯ

ಉನ್ಮನಿ ಮನ ಬುದ್ಧಿ ಚಿತ್ತ ಅಹಂಕಾರ ತತ್ವ ||1||

ಕಾಣದು ಜಾಣವಾಯು ತತ್ವ |

ಕಾಣೋ ನಾರಾಯಣನಾಗಿ ಫಕ್ತ

ಪ್ರಾಣೇಂದ್ರಿಯ ಉಸಿರು ಬಣ್ಣ ಕಾಣೊ ಹಸಿರು

ಸಮಾನ ಉದಾನ ತಾ ಕಾಡುವದಕೆ ಪ್ರಾಣ ಅಪಾನ ತತ್ವ ||2||

ವನ್ಹಿ ಪಂಚಕವಾದ ತತ್ವ |

ನೀನು ಅನುವಿನಿಂದಲಿ ಗುಣಿಸುತ

ಜ್ಞಾನೇಂದ್ರಿಯಂಗಳು ಬಣ್ಣ ಹೊಂಬಣ್ಣದೊಳು

ಕಣ್ಣು ಕಿವಿ ಚರ್ಮ ಜಿಂಹ್ವಮಾಣದ ಘ್ರಾಣತತ್ವ ||3||

ಉದಕದಿಂದಾದಂತ ತತ್ವ |

ಭೇದ ಮೊದಲರಿದದು ಸಾಧಿಸುತ

ಯಿದೈದ್ವಿಷಯಗಳು ಅದು ಬಣ್ಣದಾ ಧವಳ

ಶಬ್ದ ಸ್ಪರ್ಶ ರೂಪ ರಸ ಗಂಧಾದ ತತ್ವ ||4||

ಧರ್ಮ ಧರಿಯದಾದ ತತ್ವ |

ಮರ್ಮ ಅರಿದು ಜನ್ಮ ಆಗೋ ಸಾರ್ಥ

ಕರ್ಮೇಂದ್ರಿಯ ಚಿತ್ರಬಣ್ಣದ ವಾಕ್ಪಾಣಿಪಾದ ಗುದ ಗುರುವು

ಕರಿಘೂಳಿ ಗುಂಹ್ಯಗುಪ್ತದಿರುವೋ ತತ್ವ ||5||

ಶ್ರೀ ಸದ್ಗುರುನಾಥ ಕರುಣದಿ ನೀ ನಾಥ |

ವಿಷಯಗಳಿರುವವು ಬಾಳ ವಿಪರೀತ

ವಶವಲ್ಲವು ಮೋಸ ಮಾಡ್ವವು ತುರತ

ಕಸಿಬಿಸಿ ಹುಸಿನುಡಿ ದೃಢವಿಲ್ಲ ನಿರುತ

ಪಾಶ ಹರಿಸಿ ಪೋಷಿಸೆನ್ನಯ ದಾತ ||ಪಲ್ಲ||

ಈ ಸಂಸಾರದೊಳ್ಮುಳ ಮುಳಗಿಯೇಳುತ |

ಸಂಶಯ ನುಡಿಗಳ ಗಡಣ ಕೇಳುತ

ಹಿಂಸಿಸಿ ಪರರನ್ನು ದೋಷಕೊಳ್ಳುತ

ದೋಷ ಹರಿಸು ಬಸವೇಶಾ ಆಶಾ ರಹಿತ ಕರುಣದಿ ||1||

ಉತ್ತಮ ಜನ್ಮವಿದು ಆಗ್ವದು ವ್ಯರ್ಥ |

ಮತ್ತೆ ಬೋಧಿಸೊ ನೀ ಪರಮಾರ್ಥ

ಸತ್ಯವಾದ ಪದ ಹತ್ತಿಸೊ ತುರ್ತ

ಛೆತ್ತೀಸ ತತ್ವದೊಳಿರುವ ಸಮರ್ಥ ಕರುಣದಿ ||2||

ಆರು ಮೂರರೊಳಗಿರುವಂಥ ಅರ್ಥ |

ತೋರಿಸೊ ತಾರಕ ಬ್ರಹ್ಮನ ಗುರ್ತ

ಮೀರಿದವುನ್ಮನಿಗಾದಂಥ ಕರ್ತ

ತರುಳನ ಕರಪಿಡಿ ಇಲ್ಲ ನಿನ್ನ ಹೊರ್ತ ಕರಣದಿ ||3||

ಕಾಲನಿಲ್ಲದೆ ಮೇಲಕೇರಿಸುವಾತ |

ಬೈಲಿನೊಳಗ ಓಡ್ಯಾಡಿಸೆನ್ನಯ ಪಿತ

ಕಾಲ ಕಾಲ ನಿರ್ಬೈಲಲ್ಲಿ ಭರಿತ

ಘೂಳೀಶಯಿಳೆಯೊಳು ಮಾಡ್ಯಾನ ಮುಕ್ತ ||4||

ಶ್ರೀಗುರುವೇ ಕರುಣದಿಂದೆ ಕಾಯೋ ಯೆನ್ನನು |

ಮರಿಲಾರೆ ನಿಮ್ಮನು ಘೋರ ಸಂಶರಧಿಯೊಳು

ಮುಳುಗಿರುವೆನಾ ಕರ ಪಿಡಿದು ಪೊರೆಯೆನ್ನ

ಮೂರಾರೇಳೆಂಟ್ಹತ್ತು ಅರಹಾರಿ ಸಲಹೆನ್ನ

ಮಾರವೈರಿಯಿರುವಂಥ ದಾರಿ ತೋರಿಸೊ ಮುನ್ನ ||ಪಲ್ಲ||

ಮಾಯದಿಂದ ಜನಿಸಿ ಬೆಳೆದ ಕಾಯವಿದನು |

ಆಯಾಸದಿಂದೇನು ಮಾಯ ಮೋಹದ

ಬಲಿಗೆ ಶಿಲ್ಕಿ ಭಯದಿ ನೊಂದೆನು

ಬಾಯ್ಬಿಡುತ ಬೆಂದನು ಭಯ ಬಿಡಿಸಯ್ಯ

ಮಾಯ ದೂರ ದಾಟಿಸಯ್ಯ

ಕೈಯ ಹಿಡಿದ್ಹಡದಯ್ಯನಡಿಯ ಶೇರಿಸಯ್ಯ ||1||

ಕೆಂಪು ಕರಿದು ಬಿಳಿದಳಿ ದಾಸೋಹಂ ಎಂಬುದನು |

ಇಂಪದರ ತಿಳಿಸಿನ್ನು ತಂಪಿನೊಳು

ಹಂಪಿ ಕ್ಷೇತ್ರದಿರುವ ಲಿಂಗವನು

ಪೊಂಪಮ್ಮ ಪತಿಯನು ಸಂಪು ನಾದದಿ

ಮನ ಇಂಪುಗೊಳಿಸೊ ಎನ್ನ

ಸಂಪಾನ್ನಾದಂತ ಕರಿ ಘೂಳಿ ಪೋಷಿಸೆನ್ನ ||2||

ಮರಿಯಲಾರೆನು ಶ್ರೀಗುರುವೆ ನಿನ್ನ ತರುಳನೆಂದೆನು |

ಮರೆಯಲಾರೆ ನಿನ್ನ ಚರಣ

ಕರುಣದಿಂದೆ ನೋಡೊ ಶರಣ

ಪೊರೆ ಪರಿಪೂರ್ಣ ನಿನ್ನ ಮೊರೆಯ ಸೇರಿರುವೆ ಹರನೆ ಮರೆ ||ಪಲ್ಲ||

ಘೋರ ಸಂಸಾರ ಶರಧಿಯೊಳುರುಳಿ ನಾರಿಪುತ್ರರ |

ಸೇರಿರುವ ಭಾರಿ ಕಳವು ಹಾದರ ಇಲ್ಲಾದೆನದರ

ಮಾರಹರನೆ ಭರದಿ ಬಂದು ತರುಳನ ಕರಪಿಡಿಯೊ ಇಂದು

ಪಾರಮಾರ್ಥದ್ಹಾದಿದೋರಿ ತ್ವರದಿ ಪಾರು ಮಾಡೊ ಹರನೆ ||1||

ಕರ್ತಧರಗಿನ್ನು ನಿನ್ಹೊರ್ತ ಮತ್ರ್ಯದೊಳಗ ದಾರಿನ್ನು |

ಗುರ್ತರಿಯೆ ತೋರೊ ಸಾರ್ಥಕ್ಹಾದಿಯನು ವ್ಯರ್ಥಾಗುವೆನು

ಅರ್ಥಪ್ರಾಣ ಗುರ್ತುಗೈದು ತುರ್ತು ಬಂದು ವಲಿಯೋ ದೇವ

ಭರ್ತಿ ತೊಂಭತ್ತಾರು ತತ್ವ ಪೂರ್ತಿಗೊಳಿಸೋ ಮೃತ್ಯುಂಜಯನೆ ||2||

ಕಾಮ ದಹನನೆ ಪ್ರೇಮದಿ ಕಾಯೋ ಸೋಮಧರನೆ ಮಹಾಮಹಿಮನೆ |

ಉಮಾದೇವಿ ಪ್ರಿಯಕರನೆ ಕಾಮಿಸಿದೆ ನಾ ನೇಮವಳಿದು

ಸ್ಥೋಮ ನಿರ್ಗುಣಧಾಮ ನಿಮ್ಮ ಮೊರೆಯಪೊಕ್ಕೆ

ಹೇ ಮಹೇಶ ಕರಿಘೂಳೀಶ ಸ್ವಾಮಿ ನಿಮ್ಮ ಕಂದ ನಿನ್ನ ಮರೆ ||3||

ಎಂದಾದರೊಂದಿನ ಸಾಯೋಣ |

ಸಾವಿಗೆ ಯಾತಕೆ ಅಂಜೋಣ

ಇಂದ್ರಜಾಲದಂತೆ ಈ ಸಂಸಾರ

ನೌರಂಧ್ರದೊಳಗ ನೋಡು ನಿನ್ನ ಜ್ಞಾನ ||ಪಲ್ಲ||

ನೀನಿರೋತನ ಬಂಧು ಬಳಗಣ್ಣ |

ಪ್ರಾಣ ಹಾರಿಹೋಗುವಾಗ್ಯಾರಿಲ್ಲಣ್ಣ

ನಿನ್ನ ಗುರುತು ನೀನರಿಯಣ್ಣ

ಮನದೊಳು ಸದಾ ಮಾಡು ಶಿವಧ್ಯಾನ ||1||

ಪ್ರಪಂಚ ಮಾಡು ಬಿಡಬೇಡಣ್ಣ |

ಪಾರಮಾರ್ಥ ದಾರಿ ಹಿಡಿಯಣ್ಣ

ದಾರಿದೋರುವ ಗುರುವಿನ ಸೇರಿ

ಪಾರಾಗಿ ಭವದೊಳಗಿರಣ್ಣ ||2||

ಚಿಂತಿ ಯಾತಕೆ ಮಾಡುವದಣ್ಣ |

ಎಂಥ ಉತ್ತಮ ಜನ್ಮಾದಣ್ಣ

ಕಂತುಹರನ ಪಾದಂತು ಭಜಿಸಿದರೆ

ಅಂತುಪಾರಿಲ್ಲದ ಮುಕ್ತ್ಯಣ್ಣ ||3||

ಕಂಡಕಂಡಲ್ಲಿ ಕೂಡಬೇಡಣ್ಣ |

ಹೆಂಡರ ಮಕ್ಕಳ ಜರಿಬೇಡಣ್ಣ

ಕಂಡು ಕಾಣಲ್ದಂಗ ಉಂಡುವುಣಲ್ದಂಗ

ಪಿಂಡ ಬ್ರಹ್ಮಾಂಡೊಳಿರಣ್ಣ ||4||

ಭಕ್ತಿಲಿ ನಡೆಯಲಿ ಬೇಕಣ್ಣ |

ವಿರಕ್ತಿಯ ಬಲಿಸಲು ಬೇಕಣ್ಣ

ಮುಕ್ತಿದಾಯಕ ಕರಿಘೂಳೀಶಗೆ

ತನುಮನಧನ ಕೊಟ್ಟು ಕೂಡಣ್ಣ ||5||

ನಿನ್ನ ನೀ ಕಾಣೋತನಕ ಇನ್ನೆಲ್ಲಿಯಿಲ್ಲ ಮುಕ್ತಿ |

ಕಣ್ಣಿನೊಳಗ ಹುಣ್ಣಿವಿ ಚಂದ್ರನ ಕಾಣೋ ತನಕ ||ಪಲ್ಲ||

ಶ್ರವಣ ಮನನ ನಿಧಿ ಧ್ಯಾನಗೈಯುವ ತನಕ |

ಭವ ನೀಗಿಸುವ ಶಿವಯೋಗಿಯಾಗುವ ತನಕ ||1||

ಉಗ್ರದಿಂದಲ್ಲಿ ವ್ಯಘ್ರಾಸನ ಹಾಕೋ ತನಕ |

ಜಾಗ್ರ ಸ್ವಪ್ನ ಸುಷುಪ್ತಿಯಲಿ ಜಾಗ್ರಾಗೋ ತನಕ ||2||

ಸಂಸಾರರಿಯುವ ತನಕ ಸಂಶಯ ಮುರಿಯುವ ತನಕ |

ಹಂಸೋಹಂ ಸೇರಿ ಮಾಯೆ ಧ್ವಂಸಗೂಯು ತನಕ ||3||

ಉತ್ರಾದಿಗ್ಹೋಗಿ ಗೋತ್ರ ಸೂತ್ರೊಂದು ಆಗೋ ತನಕ |

ನೇತ್ರ ಮಧ್ಯದಿ ಶಿವಜಾತ್ರಿ ಕಾಣೋ ತನಕ ||4||

ಅರ್ಥಿಯಿಂದಲಿ ಗುರು ತೀರ್ಥಕೊಳ್ಳುವ ತನಕ |

ಶರ್ತಿನಿಂದಲಿ ಭಕ್ತಿ ಪ್ರಸಾದ ಪೂರ್ತಿಸೋತನಕ ||5||

ಕಾಲನಿಲ್ಲದೆ ಬೈಲಿನೊಳಗ ಓಡ್ಯಾಡೊ ತನಕ |

ನಿರ್ಬೈಲನಾದ ಕರಿಘೂಳೀಶಗೆ ಕೂಡೊ ತನಕ ||6||

ನೋಡೋ ನೋಡೋ ಕಡಿವಡಲೂರು ನೋಡೋ |

ದಡ್ಡ ನಿನ್ನೊಳು ದೊಡ್ಡ ಮಹನೀಯನಿರುವನು

ದುಡ್ಡನಿಲ್ಲದೆ ನಿನ್ನ ಧಡ್ಡತನವ ಬಿಟ್ಟು ನೋಡೋ ||ಪಲ್ಲ||

ಆರುವಾರೋ ಪುರಕರಸರು |

ಮೂವರಾರೊ ಮೂರಾರು ಬಾಗಿಲೆರಡು ಕಿಡಕಿಗಳೂ

ಸೂರ್ಯಚಂದ್ರರೆಂಬ ಬೀದಿಗಳೆರಡು ನೋಡೋ ||1||

ಆದಿಲಿದ್ದ ಜ್ಯೋತಿಯ ಮಧ್ಯ ಓಂಕಾರಿದ್ದ |

ಅರ್ತಿನಿಂದಲಿ ಬುದ್ಧಿವಂತರೈವರಿದ್ದು

ಸಿದ್ಧರಾಗಿ ತಾವಿದ್ದಾರೊ ಜೋಡೋ ನೋಡೊ ||2||

ಮೇಲುಮಾಲೋ ಏಳೇಳು ಲೋಕ ತುಂಬ್ಯಾದೇಳೊ |

ಏಳೆಡೆ ಸರ್ಪನಲ್ಲಿ ತಲೆಯೊಳು ರತ್ನವುಂಟು

ಬೆಲೆಯನಿಲ್ಲದ ದೇವ ಬಲ್ಲೆಯಿರುವನು ನೋಡೊ ನೋಡೊ ||3||

ನೋಡಿ ಬೇಡೊ ನಡುನಾಡಿ ಕೂಡಿ ಜಾಡಿ ಹಿಡಿ |

ತಡಬ್ಯಾಡ ಮೃತಬಿಂದ ಕುಡಿ ಪಡಿ ಮುಕ್ತಿಪದ

ಮೃಢಕರಿಘೂಳಿಯ ಅಡಿಗಳಿಡಿದು ಸದಾ ನೋಡೊ ||4||

ಆರುವೆಂಬರಿವೆ ಧರೆಯನು |

ಅರಿದಿತು ಓಹೋ ಮಾಡಲಿನ್ನೇನ

ಗರುಡಗೆ ಸರ್ಪಗೆ ಮೊದಲೆ ವೈರಿತ್ತ

ಎರಡಕ್ಕೆ ಯುದ್ಧವು ಭರ್ತಿ ನಡೆದತ್ತ

ಶತ್ರು ಹೋಗಿ ಮಿತ್ರರಾದರಂತೆ ಓಹೋ ||ಪಲ್ಲ||

ಮದ ಬಂದಾನೆಗೆ ದ್ವಾಮಿ ಒಂದು ನೋಡೀತ |

ಕ್ರೋಧವಿಲ್ಲದ ದ್ವಾಮಿ ಓಡೋಡಿ ಬಂತ

ನಾದಾದಿ ದ್ವಾಮಿ ಮದದಾನಿಯ ಜೈಸಿತ್ತು ಓಹೋ ||1||

ಕುರಿಮರಿಯೊಂದು ಹೊರಟಿತ್ತು ಹಾರ ಹುಡಕೂತ |

ಆರ್ಹುಲಿಗಳು ಅರಣ್ಯದಿ ಕುರಿಮರಿ ನೋಡೋತ

ಹಾರಿ ಆರ್ಹುಲಿಗಳೇರಿ ಮೆರೆದಿತ್ತು ಓಹೋ ||2||

ದೊಡ್ಡ ಗುಡ್ಡದೊಳು ಗವಿಯೊಂದಿತ್ತು |

ದೊಡ್ಡ ಕರಿಘೂಳಿ ಗವಿಯೊಳ್ತೋರಿದ ಹುತ್ತ

ಆ ಹುತ್ತು ಮುತ್ತುಗೊಂಡು ಮುಕ್ತನಾದ ಭಕ್ತ ಓಹೋ ||3||

ಸಾಕು ಸಾಕು ಈ ಬಡತನ ಸಂಸಾರ |

ಲೋಕದಿ ಸುಖವಿಲ್ಲವೋ

ಕೈಕಾಲಿಲ್ಲದ ಮೂಕಗ ಕೊಟ್ಟಿದೆ

ಸುಖವೇನು ಕಡಿಮಿಲ್ಲವೊ ||ಪಲ್ಲ||

ಕಳಗೇಡಿ ಗಂಡನ ಕಣ್ಣು ಹೋಗಲಿ |

ಸಣ್ಣಕ್ಕಿ ನಾ ನೀನೆವೊ

ವಾಲಿ ಕೀಲುಗಂಟಿ ಜಿಮ್ಕಿ ಬುಗಡಿ

ಕಿವಿಯೊಳಗಿಟ್ಟಾನವೊ ||1||

ಬಾಳಗೇಡಿಯಲ್ಲಿ ಮೂಲಾಗಿ ಕೂತಿತ್ತು |

ಬಾಯಾಗ ಮಣ್ಣೊಯಿಲೆವೊ

ಹೋಳಿಗಿ ತುಪ್ಪ ಉಳ್ಳಕ ನೀಡಿ

ಮ್ಯಾಲೆ ವೀಳ್ಯವ ಕೊಡತಾನವೊ ||2||

ಸತ್ಯವಿಲ್ಲದ ಗಂಡ ಸತ್ತು ಹೋದನಾ |

ಬತ್ತಲೆಯಾದೆನವೊ

ಮುತ್ತಿನ ಮೂಗುತಿ ಮೂಗಿನೊಳಗಿಟ್ಟುಗೊಂಡು

ಮುತ್ತೈದಾದೆನವೊ ||3||

ಎಲ್ಲಿ ನೋಡಲಲ್ಲಿ ಶಿವಮ್ಮನೆಂದು |

ಬಲ್ಲವರು ಬಗಿತಾರವೊ

ಅಲ್ಲಮ ಮಹಾಪ್ರಭು ಕರಿಘೂಳೀಶನ

ಬಲ್ಲಂಗೆ ಕೂಡಿದೆನವೊ ||4||

ಶ್ರೀಗುರುವಿನ ನೋಡೋ ಮನವೆ ಪರಮ ಹರುಷದಿ |

ಇರುಳು ಹಗಲು ಗುರಿಯ ನೀಡೊ

ಅರುವಿನ ಆಲಯದಿ ||ಪಲ್ಲ||

ದುರ್ಗುಣದಿಂದ ಹರದೊರೆವದು ದುರ್ಲಭ |

ಸಾರವಿಲ್ಲದ ಸಂಸಾರದ ಶರಧಿ

ನಿರುತದಿ ಜೀವನು ಜಪಿಸುವ ಮಂತ್ರದಿ

ಮರೆಯದೆ ಪುರಹರ ಸ್ಮರಣೆಯ ಬಲದಿ ಶ್ರೀಗುರು ||1||

ಬಟ್ಟಿ ಗಂಟಿನೊಳು ರತ್ನವ ಕಟ್ಟಿದೆ |

ಗಂಟು ಬಿಟ್ಟು ರತ್ನಿಟ್ಟುಕೊಂಡ ತೆರ

ಶ್ರೇಷ್ಠ ದೇಹದಿ ದುಷ್ಟಗುಣಳಿದು

ನಿಷ್ಠಿಯಿಂದ ಸೃಷ್ಠಿಗೀಶನ ದಿಟದಿ ಶ್ರೀಗುರು ||2||

ಮುತ್ತು ಗೊಬ್ಬರದಿ ಮಬ್ಬಿಲಿ ಕಳಿಯಲು |

ವತ್ತಿ ಜಲ್ಲಿಸಿ ಮುತ್ತುಗೊತ್ತಿಲಿಟ್ಟ ತೆರ

ತತ್ವ ಕೂಡಿದ ಕಾಯದೊತ್ತಿ ಬೆಳಗುವ ಸತ್ಯ

ಪರಿಪೂರ್ಣನು ನಿತ್ಯದಿ ಚಿತ್ತದಿ ಶ್ರೀಗುರು ||3||

ಕನಕವನ್ಹಿಲಿ ಕಾಣದೆ ಅಡಗಿರೆ |

ಮೊನೆಗಾವಿಲಿ ಚಿನ್ನವನು ಹಿಡಿಯುವ ತೆರ

ತನುವಿಲಿ ಬುದ್ಧಿ ಜ್ಞಾನದಿ ಹೊಳೆಯುವ

ಚಿನುಮಯಾತ್ಮಕನ ಚಿದ್ವಿವೇಕದಿ ಶ್ರೀಗುರು ||4||

ತುಂಬಿ ತಂಬಿಗೆ ನೀರೊಳು ಮುಳುಗಿರೆ |

ಹಂಬಲದಿಂದ ನೀರ್ಮುಳಗಿ ಹಿಡಿದ ತೆರ

ನಂಬಿಗೆಯಿಂದಲಿ ಬಿಂಬದೊಳಗಿರುವ

ಶಂಭು ಕರಿಘೂಳಿಯ ಜಂಬು ದ್ವೀಪದಿ ಶ್ರೀಗುರು ||5||

ಯಾರಂಗನರಿ ಯಾರಿಂಗನರಿ |

ನಿಮ್ಮ ಮನಸಿಗೆ ಬಂದಂತೆ ನುಡಿಯರಿ ||ಪಲ್ಲ||

ಪರಮ ಪಾವನನಾದ ಗುರು ದೊರೆತ ಎನಗೆ |

ಸ್ಥಿರವಾದ ಜ್ಯೋತಿಯನ್ನರಿತು ಬೆರಿತವನಿಗೆ ||1||

ಪಂಚ ತತ್ವಗಳೆಲ್ಲ ವಂಚನಿಲ್ಲದೆ ತಿಳಿದು |

ಸಂಚಿತಾಗಮಕಿನ್ನು ಸಾಕ್ಷಿಯಾದವನಿಗೆ ||2||

ಕಂಗಳ ಮಧ್ಯದಿ ರಂಗಮಂಟಪದಲ್ಲಿ |

ಸಂಗವಾಗಿಹ ನಿಜ ಲಿಂಗ ಗಂಗಾಧರಗೆ ||3||

ಅಂಗಲಿಂಗದ ಸಂಗ ಅನುಭಾವ ತಿಳಿದು |

ಲಿಂಗಪೂಜಿಸುವಂಥ ಜಂಗಮಯ್ಯನಿಗೆ ||4||

ಧರಿಯೊಳು ನರರಿಗೆ ಗುರುವಾಗಿ ಮೆರೆಯುವ |

ಕರಿದಾರೆ ಕರಿಘೂಳಿ ಕರೆದಿದ್ರೆ ಮುರಿಗಯ್ಯನಿಗ್ಯಾಂಗನರಿ ||5||

ಏನೋಗಿ ಏನಾಯಿತೊ |

ಜನಮನದೊಳು ಜ್ಞಾನ ಶೂನ್ಯವಾಯಿತೊ

ಹೀನ ವಿಷಯದೊಳು ಮುಳುಗುತ ತೇಲುತ

ಮೀನ ಗಾಳಕೆ ಬಿದ್ದು ಮತಿಗೆಟ್ಟ ಪರಿಯಾಯ್ತು ||ಪಲ್ಲ||

ಲಿಂಗವಂತರೆಲ್ಲರು |

ಅಂಗಕ ಮೆಚ್ಚಿ ಭಂಗಪಡುವದಾಯಿತು

ಮಂಗಳಾತ್ಮಕ ಭವಭಂಗ ಶಿವನ್ಹಿಂಗಿತು

ಮಂಗನಂದದಿ ಭವಿಸಂಗ ಮಾಡುವದಾಯ್ತೊ ||1||

ವೀರಶೈವರ ಗುರುತೊ |

ಆರಲಿಯಿಲ್ಲ ಮಾರಮರವಿನೊಳಾಯಿತು

ಪುರಹರ ಸ್ಮರಣೆಯ ಸೇರದೆ ಹೋಯಿತು

ಘೋರ ನರ ಜನುಮದಿ ಸಾರಿ ಬರುವದಾಯ್ತು ||2||

ದೇಸಾಯಿ ಧೊರಿಗಳಂತು |

ಆಶದಿ ಮೋಸೆಮಪಾಶ ಬೀಳುವದಾಯಿತೊ

ಪೋಷದಿ ದಶವಿಧ ಭಾಷೆಯಾಶಿಸದೆ

ಈಶ ಕರಿಘೂಳೀಶನ ಧ್ಯಾಸವು ಮರೆದಿತ್ತು ||3||

ಕಣ್ಣಿನೊಳು ಕೈಲಾಸ ನೋಡೊ |

ಜಾಣ ಸಾಧನೆ ಮಾಡೋ

ಗುಣಗಳ ಬೇಡನ್ನ ದಾನವು ಮಾಡೊ

ಸಣ್ಣ ದ್ವಾರದ್ಹುಣ್ಣಿವಿ ಚಂದ್ರನ ನೋಡೊ ಫಣಿಪತಿಯಗೂಡೋ ||ಪಲ್ಲ||

ಸಂಸಾರ ಮಾಡೊ ಸಂಶಯ ಬಿಡು ಬ್ಯಾಡೊ |

ಸೋಹಂ ಸೇರಿ ಮಾಯ ಧ್ವಂಸವ ಮಾಡೊ

ವಂಶ ಉದ್ಧಾರ ನೋಡೊ ||1||

ಕೆಂಪು ಕರಿದು ಬಿಳಿದ್ಹಳದಿ ನೀಲ ನೋಡಿ |

ತಂಪ್ಹಂಪಿ ಕ್ಷೇತ್ರದೊಳಾಡೊ

ಪೊಂಪಪತಿಯಗೂಡೊ ||2||

ಆಧಾರಿಡಿದು ಮಾಡೊ ಸ್ವಾಧಿಷ್ಟ ಸ್ವಾದ ನೋಡೊ |

ಆದಿ ನಾದದಿ ಮನಗೂಡೊ

ಸದಾ ಬ್ರಹ್ಮನೊಳಾಡೊ ||3||

ಕಾಳನಿಲ್ಲದೆ ಬೈಲಿನೊಳಗ ಓಡ್ಯಾಡೊ |

ನಿರ್ಬೈಲ ಕರಿಘೂಳಿಗೆ ಕೂಡೊ

ವೇಳೆ ಮುಂದಿಲ್ಲ ನೋಡೊ ||4||

ಗಿಡ ಎಂಥದಾದ ಎಡ ಬಿಡದೆ ನೋಡೊ ಸದಾ |

ಗಿಡ ಮೊದಲೆ ಬುಡ ನಡುವಾಗ್ಯಾದ

ಬಿಡದೆಂಟು ಗೇಣು ಉದ್ದಾಗುತಾದ

ಎರಡಾರು ವರುಷಕ ಹುವ್ವಾಗುತಾದ

ಹೂವಿನೊಳಗೆ ಮಿಡಿಗಾಯಾಗುತಾದ

ಎಡಬಿಡದೆ ನೋಡೊ ಸದಾ ||ಪಲ್ಲ||

ಮೂರಾರು ತಿಂಗಳ ವಳಗಿರುತಾದ |

ಹೊರಗೆ ಬಂದು ಬೆಳೆದ್ಹಣ್ಣಾಗುತಾದ

ಮೂರು ರಂಧ್ರದಿ ರಸ ಸೋರ್ಹೋಗುತಾದ

ಯಾರಿಗಿ ಸಿಗದಾಂಗ ಹಾರೋಗುತಾದ ||1||

ಕಣ್ಣಿಲ್ಲದೆ ಗಿಡ ನೋಡುವದಾದ |

ಹುಣ್ಣಿವಿ ಚಂದ್ರನ ಬೆಳಗಿನೊಳಾದ

ಹಣ್ಣಿಗಾರು ಮಂದಿ ಕಾವಲಿಟ್ಟಾದ

ಹಣ್ಣು ಸೇವಿಸೆ ಜನನ ಮರಣ ದೂರಾದ ||2||

ಕಾಲಿಲ್ಲದೆ ಗಿಡನೇರುವದಾದ |

ಇಲ್ಲದ ಕೈಯಿಂದ ಕಡಿಯುವದಾದ

ಬಾಲ ಬಾಯಿಲ್ಲದೆ ತಿಂಬುವದಾದ

ಬಲ್ಲವರಿಗೆ ಭಲೆ ಬಲ್ಲೆ ರುಚಿಯಾದ ||3||

ಆದಿ ಅನಾದಿ ಮುದದಿಂದಲಿ ಆದ |

ಹಾದಿಯು ಬೈಲಿನೊಳಗಿಂದಾದ

ಭೇದವಿಲ್ಲದ ನಿರ್ಬೈಲೊಳಗಾದ

ಸಾಧು ಕರಿಘೂಳಿ ತೋರಿಸುವ ಭೇದ ಎಡಬಿಡದೆ ||4||

ಈಶಧ್ಯಾಸ ಸೂಸಿಲಿ ಧ್ಯಾಸಿಸೊ |

ಬೇಸರಿಲ್ಲದೆ ಮನವೆ ಬೇಸರಿಲ್ಲದೆ || ||ಪಲ್ಲ||

ಏಸೇನು ಜನ್ಮದಲಿಂದೆ |

ಈಶನ ಕಾಣದೆ ಬಂದೆ

ಕೂಸನಾಗಿ ವಸುಧಿಯೊಳು ಧ್ಯಾಸಿಸೊ ಬೇಸರಿಲ್ಲದೆ ||1||

ಆಶೆಯನು ಬಿಡು ಬೇಡಂದೆ |

ನಿರಾಶದೊಳಿರುವದು ಛಂದೆ

ಆಶಾರಹಿತ ಶಶಿ ಈಶನ ಧ್ಯಾಸಿಸೊ ಬೇಸರಿಲ್ಲದೆ ||2||

ಗಂಗೆಯಮುನೆ ಸರಸ್ವತಿಲಿಂದೆ |

ಸಂಗಮದಿ ಸ್ನಾನಮಾಡಂದೆ

ಅಂಗದೊಳಗ ಮಹಾಲಿಂಗನ ಧ್ಯಾಸಿಸೊ ಬೇಸರಿಲ್ಲದೆ ||3||

ಕಂಗಳ್ತಿಂಗಳ ನೋಡಂದೆ |

ಮಂಗಳಾತ್ಮ ಪೂಜಿಸಂದೆ

ಜಂಗಮ ಕರಿಘೂಳಿಯ ಧ್ಯಾಸಿಸೊ ಬೇಸರಿಲ್ಲದೆ ||4||

ಚಿಂತಿಯ ಪರಿಹರಿಸೊ ಸಂತೋಷದಿರಿಸೊ |

ಶಾಂತಮನದಿ ಬೆರಿಸೊ ಎಂತು ಮಾಡಲಿ

ಭವಭವಾಂತರಂತುಗಳ ನಾನೆಂತು ತಾಳಲಿ

ಅಂತಃಕರುಣದಿ ಭ್ರಾಂತಿ ಬಿಡಿಸೊ

ಕಂತುಹರ ಏಕಾಂತದಿರಿಸೊ ||ಪಲ್ಲ||

ಮೂರಾರ್ವೈರಿಗಳರಿಸೋ ಮೂರಾರು ಸ್ಥಲದಿ |

ಮೀರಿದರುವನು ದೋರಿಸೊ

ಮೂರು ನಾಲ್ಕು ವ್ಯಸನಗಳ ತರಿಸೊ

ಮೂರು ಒಂದು ಕರುಣ ಹಿಡಿಸೊ

ಮೂರು ಮೂರೆರಡಾನೆ ಮುರಿಸೊ

ಮೂರು ಒಂದಾಗಿರಿಯನೇರಿಸೋ ||1||

ಕಾಣಬರುವದು ಮಾಣಿಸೊ ಈ ಕಣ್ಣಿನೊಳು |

ಬಣ್ಣೈದೆಣ್ಣಿನ ಕಾಣೀಸೊ

ಸಣ್ಣ ದ್ವಾರದಿ ಬಣ್ಣ ಧವಳ

ಹುಣ್ಣಿವಿ ಚಂದ್ರನ ಕಾಣಿಸೊ

ಮಣಿಯಲಾರದ್ಹಣ್ಣು ತಿನಸಿ ಮಾಣದೆನ ಪ್ರಾಣದಣಿಸೊ ||2||

ಕಂಗಳಂಗಳ ತಿಳಿಸೊ |

ತಿಂಗಳ ಬೆಳದಿಂಗಳೊಳ್ ಸ್ನಾನ ಗೊಳಿಸೊ

ಶೃಂಗ ರಂಗುಮಂಟಪದಿ

ಗುರುಲಿಂಗ ಜಂಗಮದಂಗದೊರಿಸೊ

ಮಂಗಳಾತ್ಮಕ ಕರುಘೂಳೀಶ ಹಿಂಗದಲೆ ಮುಕ್ತ್ಯಾಂಗಿನೊಲಿಸೊ ||3||

ಘೋರ ದುರಿತ ದೂರಾಗುವದಮ್ಮಾ

ಅರುವಿನಿಂದಲಿ ಗುರುಚರಣ ಸ್ಮರಣೆ ನೇಮ

ಮರೆಯದಿರನುದಿನ ಪೊರೆವ ಶ್ರೀಸೋಮ ||ಪಲ್ಲ||

ಜ್ಯೋತಿಯುರುವದು ಉತ್ತಮ |

ನಿನ್ನ ಆತ್ಮದೊಳಗ ನೋಡೊ ಪರಮಾ

ನಿತ್ಯವಲ್ಲೀತನು ವ್ಯರ್ಥವಾಗೊದೊಂದಿನ

ಮೃತ್ಯುಗೆಲಿದು ಮನಗೊತ್ತುಲಿರು ಸುಮ್ಮ ||1||

ಹೆಬ್ಬುಲಿಗಳು ಆರಾವಮ್ಮಾ |

ನಿನ್ನ ಮಬ್ಬಿನೊಳುಬ್ಬಬೇಡಮ್ಮಾ

ಹೆಬ್ಬಳಿಗ್ಹೋದರೆ ಮೊಬ್ಬ ಬೆಳಕಾಗುವದು

ಹೆಬ್ಬುಲೆಬ್ಬರಿಸುವಾಗೊಬ್ಬರಿಲ್ಲಮ್ಮಾ ||2||

ಇರುವ ಗುರುಲಿಂಗ ಜಂಗಮ |

ಮೀರಿದುನ್ಮನಿ ತೋರುವನಮ್ಮಾ

ಮೂರು ಆರೆರಡಳಿದ ಧಿರ ಕರಿಘೂಳಿ ಭೇದ

ಅರಿತು ಮೂರಾರಲ್ಲಿ ಸೇರಿ ನಿರುತ ಸಾಧಿಸು ನಿತ್ಯ ಪ್ರಣಮ ||3||

ಲೋಕ ಏಕಾಗುವದು ನೋಡಣ್ಣ |

ಜ್ವಾಕಿಲಿರಣ್ಣ ಲೋಕ ಏಕಾಗುವದು ನೋಡೊ

ಕಾಕು ಜನರಿಗೆ ಬಂತು ಕೇಡೊ

ಲೋಕನಾಥನ ಪಾದ ಪಿಡಿದು ನೇಕಿಯಿಂದ ನಡಿಯರಣ್ಣ ||ಪಲ್ಲ||

ತಾಯಿ ಮಕ್ಕಳಿಗೊಬ್ಬ ಪುರುಷಣ್ಣ |

ಆಯಾಸವಿಲ್ಲದೆ ಮಾಯ ಮದುವೆಯ ಮಟ್ಟುತಾದಣ್ಣ

ಆಯಿ ಮುತ್ಯೆನ ಬಿಟ್ಟು ಬಿಡುವಳು

ತಾಯಿ ಮಕ್ಕಳೂ ನ್ಯಾಯದೊಳು

ಮಾಯಿ ಬಂದು ಛಾಯ ನುಂಗಿ ಬಿಡುವಳಣ್ಣ ||1||

ಊಚ ನೀಚೊಂದಾಗುವದಣ್ಣ |

ಬಚ್ಚಲ ಕುಣಿಯೊಳು ಉಚ್ಚಿಬಿಳ್ವಾಗ ಎಚ್ಚರಿರಲಣ್ಣ

ಲಕ್ಷ್ಮೀಪುತ್ರರೆಲ್ಲರವರು ನಿಶ್ಚಯದಿ ದಾರಿದ್ರರಾಗ್ವರು

ಮೆಚ್ಚಿ ಬಂದ ಸ್ತ್ರೀಯು ಪುರುಷಗೆ ನಿಚ್ಚ ಸಂಸರ ಮಾಡ್ವಳಣ್ಣ ||2||

ಗಂಡ ಹೆಂಡರ ಕೂನವಿಲ್ಲಣ್ಣ |

ಭಂಡಾಟ ಕೇಳರಿ ಮಂಡಲಕ್ಕೆ ಬಲಿಯ ಬಂತಣ್ಣ

ಭಂಡ ವೀರಶೈವರೀಗೆ ಗಂಡಮಾರ್ತಂಡ ಬರುವಾಗ

ಬಂಡುಗೆಟ್ಟು ಸಾಧುರೆಲ್ಲ ಕಂಡಕಡಿಗೋಡೋಗ್ವರಣ್ಣ ||3||

ಬೀಡಿಗೆ ಬೆಂಕ್ಹೆತ್ತುತಾದಣ್ಣ |

ಹತ್ತಿದ ಮೇಲೆ ಕಡ್ಡಿ ಸುಟ್ಟು ಕರಿಯ ಬಿತ್ತಣ್ಣ

ನಾಡಿಯಲ್ಲಲಿ ನುಡಿಯ ತುಂಬಿ ನಡಿವವೆಚ್ಚರವಿಲ್ಲದಲೆ

ಆಡಿದಂತೆ ನಡಿಯವಲ್ಲದೆ ಖೋಡಿ ನರ್ಕಕ್ಕಿಳಿವರಣ್ಣ ||3||

ಆಚಾರ ವಿಚಾರವಿಲ್ಲಣ್ಣ |

ಮನದೊಳು ಶಿವನ ಗೋಚರವು ಮೊದಲಿಗಿಲ್ಲಣ್ಣ

ವಾತಗುಣಗಳು ವಾಚಿಸದೆ ಮರೆಮಾಚವಿಲ್ಲದೆ ಕರಿಘೂಳೀಶನ

ಪಶ್ಚನೀಲ ಜ್ಯೋತಿಯೊಳು ನಿಶ್ಚಲಾತ್ಮನ ಕೂಡಿ ಸಂಧಾನ ||4||

ಪುರಹರ ಸ್ಮರಣೆಯ ಮರೆಯದಿರನುದಿನ |

ಕರುಣದಿ ಪೊರೆಯುವನೆಲೆ ಮನುಜಾ

ಘೋರ ಸಂಸಾರಪಾರ ವಾರಿಧಿಯೊಳು

ಮುರಿದು ಮುಳುಗಬೇಡ ಇರು ಸಹಜ ||ಪಲ್ಲ||

ಮೂರಾರು ಅರಿಗಳು ಕ್ರೂರವಾಗಿರುತಿಹರು |

ಅರಿತು ಅವರನು ದೂರನಾಗಿರೊ ನೀ ನಿಜ

ಮೂರೆರಡಾರೊಂದು ಬೇರೆ ಭಾವಿಸು ಇಂದು

ಮೂರು ಮೂರೆರಡಾರ ಮದ ಮರ್ಧಿಸು ರೋಜಾ ||1||

ಮೂರಾರು ಹಿಡುಕೊಂಡು ಮೂರಾರು ಪಡಕೊಂಡು |

ಮೂರಾರು ದ್ವಾರಗಳ್ ಬಂಧಿಸಿರೊ ಸದೋಜಾ

ಮೂರಲ್ಲೊಂದನೆ ಹರಿದು ಎರಡು ಒಂದಾಗಿರಿಸಿದು

ತಾರನರಸನೋರ್ವ ಪರಿಪೂರ್ಣತೇಜ ||2||

ಮೂರಾರು ಮೇಲಾದ ಸೇರಿರು ನೀ ಸದಾ |

ಭೇರಿವುನ್ಮನಿಯೊಳಾದ ಮೋಹಜಾ

ಮೂರಾರು ಬೇರೊಂದು ಭೇರಿ ಮೃದಂಗದ

ಸ್ವರನರಿ ಅಲ್ಲಿರುವನು ಪರತರಜಾ ||3||

ಮೂರು ಮೂರು ಮೂರು ಮೇರೊಂದಾದ ತೀರ್ಥ |

ಮೂರು ಮೂರು ಮೂರೆರಡು ಪ್ರಸಾದಜ

ಮೂರಾರು ಸ್ಥಲ ಮೀರಿ ಹಾರಿಹೋಗುವದಕ್ಕೆ

ಧೀರ ಶ್ರೀ ಕರಿಘೂಳಿ ಚರಣವೆ ಜಹಜ ||4||

ಆಹಾ ಹೇ ಮನಸೇ ನೀ |

ಅಹಂಕಾರದಾಗುವಿ ಯಮಕಿಂಕರ ಮೋಸೆ ||ಪಲ್ಲ||

ಸಾಂಖ್ಯ ತಾರಕ ಅಮನಸ್ಕವ ಸಾಧಿಸಿ |

ಕಿಂಕರನಾಗಿ ಮಾಡು ಶಂಕರಧ್ಯಾಸೆ ||1||

ಆಶದಿ ಮೋಸ ಮೋಸೆಮಪಾಶ |

ಆಶೆದೊಳೀಸಿ ನಾಶಾವಾಗುವಿ ಮನಸೆ ||2||

ಆಶಿಸು ವಿನಯದಿ ಘೋಷವನಾಲಿಸಿ |

ಕೂಸನಾಗಿ ಜಗದೀಶನ ಭಜಿಸೇ ||3||

ಆಚಾರಡಿದು ಶಿವ ಗೋಚರಗೈಯುತೆ |

ಖೇಚರಿ ಶಾಂಭವಿ ಆಚಿಗೆ ನಿಲ್ಲಿಸೆ ||4||

ಯಲ್ಲರೊಳಗೆ ನೀ ಬಲ್ಲಿದನೆನದಿರು |

ವಲ್ಲಭ ಶ್ರೀ ಕರಿಘೂಳೀಯನೊಲಿಸೆ ||5||

ಶಿವನಿರುವ ಸ್ಥಲವ ನೋಡೋ |

ಆವಾವಗ ಭಯ ಬೇಡೋ

ದಿವನಂದದಿ ಮರಿಯಬ್ಯಾಡೊ

ಭವ ಗೆಲಿವುಪಾಯ ಮಾಡೊ ||ಪಲ್ಲ||

ಆಕಾಶ ಭೂಮಿಯೆರಡೊ |

ಆ ಕನಕಗಿರಿಯವ ನೋಡೋ

ಪಾಕಾಗಿ ಯಿರುವ ಪಾಡೊ

ನೇಕಿಲೇಕ ಲಕ್ಷ ಮಾಡೊ ||1||

ಯರಡೊಂದು ಮೂರು ನುಡಿಯೊ |

ಮೂರಾರು ಯರಡು ತಡಿಯೊ

ಆರೊಂದು ಮೂರು ನಡಿಯೊ

ಹರನಿರುವ ಅರಮನ್ಹಿಡಿಯೊ ||2||

ವಿಂಶೊಂದು ಸಾವಿರಾರ್ನುಡಿಯೊ |

ಹಂಸೇರಿ ವೇಗ ನೀ ನಡಿಯೊ

ನೌಂಶಾರು ತಿಳಿದುವುಳಿಯೊ

ಧ್ವಂಸ ಮಾಯಮಯನೋಳ್ಸುಳಿಯೊ ||3||

ಮಾನಪಮಾನೊಂದೆ ತಿಳಿಯೊ |

ಮೌನೊಂದೆ ಮನದಿವಳಿಯೊ

ಹಣಿಗಣ್ಣಿನೊಳಗ ಸುಳಿಯೊ

ಫಣಿಪತಿಯ ನೀಲ ನಡುವೊ ||4||

ಸಪ್ತ ಪಾತಾಳದೊಳು ನೀ ಯಿಳಿಯೊ |

ಸಪ್ತಸಾಗರ ಬೇರೆ ಮೂರ್ಹೊಳಿಯೊ

ಸಪ್ತಯಲಿ ತೋಟ ರತ್ನ ರಾಜೋಳಿಯೊ

ಗುಪ್ತ ಗುಹದಿರುವನು ಹಿಡಿ ಕರಿಘೂಳಿಯೊ ||5||

ಹರಹರಹರ ಪರಮೇಶ್ವರನ ನೆನಿ ಮರೆಯದಿರು ಮರವಿನೊಳಗ |

ಕ್ರೂರಾರು ಸೇರಿ ನೀ ಮಾರವೈರಿಯ ಸೇರಿ ದಾರಿ ತ್ವರಿದು

ಶರದುರುಳುವಿಯ ಮೂರಾರು ಪದಾರಿದೋರಿಸುವರನರಿ

ಸ್ಮರಿನರಿ ಪುರಹರ ಗೌರಿವರನನು ಮರೆಯದಿರು ಮರವಿನೊಳಗ ||ಪಲ್ಲ||

ಖುಲ್ಲ ಗುಣಗಳಿಂದ ತಲ್ಲಣಗೊಳ್ಳುವಿ |

ನಿಲ್ಲದೊಯ್ಯುವ ಜವನಾಳುಗಳು

ಮೆಲ್ಲನೆ ಬಲ್ಲಿದವರಲ್ಲಿ ಮನ ನಿಲ್ಲಿಸೊ

ಅಲ್ಲಮಲ್ಲ ಯಲ್ಲರಲ್ಲಿರುವನು ಮರೆಯದಿರು ಮರವಿನೊಳಗ ||1||

ಆವಾಗಲು ಭವ ಭವದೊಳು ತಿರುಗಿ |

ಜೀವ ಶಿವನೆಂಬೊ ಭಾವದಿ ಮರಗಿ

ಭವಧವ ಶಿವಸೇವನೆಯ ಜವಗೈಯ್ಯುತ

ಪವನರಿ ಪಾವಕ ಭೂಷಣನನು ಮರೆಯದಿರು ||2||

ನಾಶಿಕ ತುದಿಯಲಿ ಧ್ಯಾಸವನಾಸಿಸೊ |

ಘೋಷದಿ ದಶವಿಧ ಭಾಷೆಯನು

ಸೂಸುವ ಮನ ಶಶಿವಾಸನೊಳು ನಿಲ್ಲಿಸು

ಕ್ಲೇಶನಾಶ ಶಶಿವಾಸನನು ಮರೆಯದಿರು ಮರವಿನೊಳಗ ||3||

ಪಕ್ಷಿವಾಹನ ಪ್ರಿಯ ತಕ್ಷಕ ಭರಣ |

ದಕ್ಷಶಿಕ್ಷಪಿತನೀಕ್ಷಿಸೊ ಮೋಕ್ಷದಾಯಕ

ವಿರುಪಾಕ್ಷ ಶ್ರೀ ಕರಿಘೂಳಿ ಪೇಕ್ಷಿಸಿದವರಿಗೆ

ಮೋಕ್ಷ ಕೊಡುವನು ಮರೆಯದಿರು ಮರವಿನೊಳಗ ||4||

ಶ್ರೀಗುರು ವರಪುತ್ರ ಚೈತ್ರ ವೈಶಾಖಿಡಿ |

ಪರಮ ಪರತರ ದೊರೆವನು ನಿನಗೆ ||ಪಲ್ಲ||

ಶ್ರೇಷ್ಠವಾದ ಜೇಷ್ಠದಲ್ಲಿ |

ಮುಟ್ಟಿ ಮನವನು ಗಟ್ಟಿ ನಿಲ್ಲಿಸಿ

ಇಷ್ಟವಾದಾಷಾಢದಟ್ಟಿಸಿ

ಮೆಟ್ಟು ಮೊದಲಷ್ಟ ದಳಗಳಿಗೆ ||1||

ಶ್ರಾವಣದಿ ಮನನ ನಿಧಿ ಧ್ಯಾಸವು ಗೈಯುತ |

ಮೌನ ಮುದ್ರದಿ ರುದ್ರಭಾದ್ರಿಪದಗೆ ಲೇಶದಿಂ ಸದಾಶ್ವಿಜಯದಿ

ಮೋಸ ಹೋಗದೆ ಘೋಷನಾಸಿಸು ಧ್ಯಾಸ ಮರೆಯದೆ

ಕಾರ್ತಿಕ ಪರಿಪೂರ್ತಿಯಾಗಲು ಮೃತ್ಯಂಜಯಗೆ ||2||

ಮಾರ್ಗಶಿರ ಮಾಸದಿ ದೀರ್ಘಮ ಪೌಷಿಪ |

ಸ್ವರ್ಗದಿ ಮಾರ್ಗಣ ವರ್ಗದೊಳಗೆ

ಭಾಗ್ಯದಿಂದಲಿ ಮಾಘ ಫಾಲ್ಗುಣಾದೀಗೆ ಅಗಲದೆ

ಬೆಳಗಿನೊಳಗೆ ಸಾಗಿಸಾಗಲು ನಿಗಮ

ಕರಿಘೂಳಿ ನಗುಪಡುವನಿನ್ನೊಂದು ಘಳಿಗೆ ||3||

ಎಲ್ಲಿ ನೋಡಲು ಅಲ್ಲಿ ನಾನೆ |

ನಾನಿಲ್ಲ ನೀನೆ ನಾನೆಲ್ಲಿಲ್ಲ ನೀನೆ ||ಪಲ್ಲ||

ಭೂಮಿ ಆಕಾಶದಲ್ಲಿ ನಾನೆ ನೀನೆ |

ಕಾಮ ಕ್ರೋಧಗಳಲ್ಲಿ ನಾನೆ ನೀನೆ

ಹೇಮ ನೇಮ ನಿತ್ಯಗಳಲ್ಲಿ ನಾನೆ ನಾನಿಲ್ಲ ನೀನೆ ||1||

ಕೊಡುವ ಕೊಂಬಾಗಲು ನಾನೆ ನೀನೆ |

ಬಿಡ ದೃಢ ಹಿಡಿವಡೆ ನಾನೆ ನೀನೆ

ಮೃಢನುಡಿ ನುಡಿವಡೆ ನಾನೆ ನಾನೆಲ್ಲಿಲ್ಲ ನೀನೆ ||2||

ನೋಡಿ ಮಾಡ್ಯಾಡುವ ನಾನೆ ನೀನೆ |

ಕೂಡ್ಯಾಡದವ ನಾನೆ ನೀನೆ

ಘಡಿ ರೂಢಿಗೊಡಿಯನು ನಾನೆ ನಾನೆಲ್ಲಿಲ್ಲ ನೀನೆ ||3||

ಹೇಳಿ ತಿಳಿಲಾರದವ ನಾನೆ ನೀನೆ |

ಹೇಳಾದೆ ತಿಳಿದವ ನಾನೆ ನೀನೆ

ಅಳಿದುಳಿ ಸುಳಿವಂಥ ಕಾಳ ನಾನೆ ನಾನಿಲ್ಲ ನೀನೆ ||4||

ಅಂಡಪಿಂಡ ಬ್ರಹ್ಮಾಂಡನು ನೀನೆ |

ಮಂಡಲದೊಳು ನೌಖಾಂಡನು ನೀನೆ

ಖಂಡಿತಾ ಖಂಡಿತ ನಾನೆ ನಾನಿಲ್ಲ ನೀನೆ ||5||

ನರಹರಿ ಪುರಹರ ನಾನೆ ನೀನೆ |

ಕರುಣದಿ ಪೊರೆದವ ನಾನೆ ನೀನೆ

ಕರಿಘೂಳಿ ಕಂದ ಮುರುಗೀಂದ್ರ ನಾನೆ ನಾನೆಲ್ಲಿಲ್ಲ ನೀನೆ ||6||

ನೋಡಬಾರದೆ ಮೃಢನ ನೋಡ || ||ಪಲ್ಲ||

ನೋಡಬಾರದೆ ರೂಢಿಗೀಶನ |

ಈಡಪಿಂಗಳ ನಾಡಿ ನಡುವೆ

ಕೂಡಿ ಸುಷುಮ್ನೊಡದು ಪ್ರಣಮಾ

ಆಡುವ ನುಡಿಗಢಣದೊಳಗೆ ನೋಡ ||1||

ಮೇಲುಮಾಲಿನ ಕೀಲಿಯ ತೆರೆದು |

ನೀಲದುಪ್ಪರಿಗೇರಿ ನಿಂದು

ಬಾಲಚಂದ್ರ ಧರನ ಕಳೆಯೊಳ್

ಥಳಥಳ ಹೊಳಿಯೊ ಬೆಳಗಿಲಿ ನಿಂದು ನೋಡ ||2||

ಗಂಗೆ ಯಮುನೆ ಕೂಡಿದಂಥ |

ಸಂಗಮ ಸರಸ್ವತಿಯಾದಂಥ

ರಂಗುಮಾಲಿನೊಳಗೆ ಕೋಟಿ

ತಿಂಗಳ ಪ್ರಭೆ ಮಂಗಳನೆಂದು ||3||

ಆರು ಅಂತರ ಅರಮಂದಿರದಿ |

ಆರು ಅರುಯದಂತೆಯಿರುವ

ಭೇರಿ ಝಾಂಗುಟಿ ಓಂಕಾರ ಘಂಟಿ

ಸಾರ ಸಂಗ್ರಹ ನಾದನಿಂದು ||4||

ಅರ್ತಿಯಿಂ ಗುರುಮೂರ್ತವಗೊಳಿಸಿ |

ತೀರ್ಥ ಪ್ರಸಾದವನ್ನು ಪೂರ್ತಿಸಿ

ಶರ್ತಿನಿಂದಲಿ ವ್ಯರ್ಥಾಗದೆ

ಮತ್ರ್ಯದಿ ಕರಿಘೂಳಿ ಕರುಣವ ಪಡೆದು ನೋಡ ||5||

ಮರೆಯದಿರನುದಿನ ಸ್ಮರಣೆಯ |

ಅರಿ ಪರತರ ಹರಿಣಾಂಕಧರನಾ

ಚರಣ ಸ್ಮರಣೆಯ ||ಪಲ್ಲ||

ವೇದ ಸಾಧಿಸಿದವನುದರಜ ಜನಪುರ |

ಚಂದವಳಿದ ತಂದೆಸಖನಣೆಗಣ್ಣಿನ ಸ್ಮರಣೆಯ ||1||

ಆಗಮಗಳಿಗೆ ಗೋಚರವಾಗದವನ |

ನಿಗಮಾತೀತ ಜಗದೀಶನಾಗೀಶ ಸ್ಮರಣೆಯ ||2||

ತಕ್ಷಕಧಿಕಾರಣ ದಕ್ಷಶಿಕ್ಷಪಿತನ |

ತಕ್ಷಕ ಅರಿಸಖ ಚಕ್ಷು ವಿರುಪಾಕ್ಷನ ಸ್ಮರಣೆಯ ||3||

ಚಂದ್ರಮೌಳಿಧರ ಇಂದ್ರಪೂಜಿತಸುರ |

ರಂಧ್ರದೊಳಿರೊ ವೃಷಭೇಂದ್ರ ನಾಗೇಂದ್ರನ ಸ್ಮರಣೆಯ ||4||

ಆರು ಸ್ಥಲದ ಮೇಲಿರುವೊ ರಜತಾಚಲ |

ಧೀರ ಶ್ರೀ ಕರುಘೂಳೀಶ ಗುರುವರನ ಸ್ಮರಣೆಯ ||5||

ಶ್ರೀಗುರು ನಿಮ್ಮ ದರುಶನದಿ |

ಪಾರಾದೆನು ಘೋರ ಸಂಸಾರ ಶರಧಿ

ಮರೆಸಿದಿ ಮರವೆಂಬುದು ಭರದಿ

ಕುರುದೋರಿದಿ ಅರುವಿನಾಲಯದಿ ||ಪಲ್ಲ||

ಮೂರಾರುಯೆರಡು ಯೇಳೋಡಿಸಿದಿ |

ಯರಡೊಂದು ಮೂರು ದ್ವಾರ್ಹಿಡಸಿದಿ

ಆರಕ್ಷರ ಮಂತ್ರ ನುಡಿಸೀದಿ

ತಾರವರನ ಸ್ವರೂಪವ ತೋರಿಸಿದಿ ||1||

ಆರ್ಗಿರಿಗಳ ಮೇಲೇರಿಸಿದಿ |

ಭೇರಿ ಮೃದಂಗ ಪ್ರಣವಾದ್ಯ ಬಾರಿಸಿದಿ

ಸುರರಮೃತ ಕರದ್ವರಿಸೀದಿ

ಪುರಹರಿಹರ ಪರಮನ ತೋರಿಸಿದಿ ||2||

ಏರಬಾರದ ಮರನೇರಿಸಿದಿ |

ಆರರಿಯದವಂದ್ಹಣ್ಣು ತಿನ್ನಿಸಿದಿ

ಜರೆಮರಣಿಲ್ಲದೆ ಕರುಣಿಸಿದಿ

ಪರದಾರಿದೋರಿ ಕರಿಘೂಳೆನ್ನಿಸಿದಿ ||3||

ಏನು ಕಾಣಲವೊ |

ಮನಸಿನ ಗುಣವು ಮಾಣದವೊ

ಕೂನವಿಲ್ಲದೆ ಶ್ವಾನನ ಪರಿ

ಮನಿಮನಿ ತಿರುಗೋದವೊ ||ಪಲ್ಲ||

ಇಂದ್ರ ಪೂರ್ವಕೋಗೋದವೊ |

ಸುರರಾಜಿಂದ್ರನಾಗದವೊ

ಇಂದ್ರಜಾಲ ಗೆದ್ದು ನೌರಂದ್ರದಿ ರವಿ

ಚಂದ್ರನ ನೋಡೋದವು ||1||

ಮುದ್ರಿಯ ನೋಡೋದವೊ |

ನಿದ್ರಿಗೈವದಿದ ಜ್ಞಾನವೊ

ತದ್ರೂಪ್ಯ ಮನೋಳ್ಸೇರಿ

ಛಿದ್ರಗುಣಳಿದು ರುದ್ರನ ನೋಡೋದವೊ ||2||

ನೈರುತ್ಯಕೋಗೋದವೊ |

ಘೋರ ದುರಿತ ಚರಿಸುವದವೊ

ವರುಣಾದಿ ನಾರಿ ಸಂಗಬೇಡಿ ಮಾರುತ ಬುದ್ಧಿ

ಸುರಿತಾನಂದ ಸೌಖ್ಯವೊ ||3||

ಈಶನ ಧ್ಯಾಸದೊಳವೊ |

ಸೋಸಿ ಆಶೆಗೈಯುವದವೊ

ಘೋಷದ ಮಧ್ಯದಲ್ಲಿ ವಾಸ ವಾಸಿಸಿದ

ಕರಿಘೂಳಿ ತಾನಾಗ್ಯಾದವೊ ||4||

ಮರಿಯಾಲಾರೆ ಗುರುವೇ ನೀ ಮರುಳ ಮಾಡಿದಿ ಮನ |

ಪರಿಪರಿ ದುರಿತ ಪರಿಹರಿಸಿ ಧರೆಯೊಳಗೆ

ಕ್ರೂರಾರ ಸೇರಿ ನಾ ಶರಧಿಯೊಳುರುಳಿದ್ದೆ

ಪಾರಮಾರ್ಥದಿ ಕರ ಪಿಡಿದು ಕರೆದೆನಗೆ ||ಪಲ್ಲ||

ತಂದೆ ತಾಯಿಗಳೆನಗೆ ಕುಂದಿದ್ದ ಗಂಡಗೆ |

ಮಂದಮತಿಯಲಿಂದೆ ಧಾರೆರೆದರಾಗೇ

ಸಂದೇಹವಿಲ್ಲದೆ ಇಂದು ಗಂಡನ ಹೊಂದಿ

ಬಂಧುಬಳಗ ದಂದುಗ ದೂರಾಯಿತೆನಗೆ ||1||

ಅಣ್ಣ ತಮ್ಮರು ಮಣ್ಣುಪಾಲು ಮಾಡುವೆವೆಂದು |

ಬಣ್ಣಿಸಿಯನ್ನನ್ನು ಕರೆದೊಯಿದರಾಗೆ

ಅಣ್ಣ ತಮ್ಮರ ಕಣ್ಣು ಕಾಣದೆ ನಾದ್ಹಿಡಿದು

ಹುಣ್ಣಿವಿ ಚಂದ್ರನ ತೋರಿದಿ ಎನಗೆ ||2||

ಹೇಸಿ ಸಂಸಾರವಿದು ಘಾಸಿ ಮಾಡುತಲಿತ್ತು |

ಮೋಸದಿ ಯಮಪಾಶ ಸುತ್ತಿ ಕೊರಳಿಗೆ

ನಾಶಿಕಾಗ್ರದಿ ವಾಸಾ ದಾಸೋಹಂ ಸೇರಿಸಿ

ಪಾಶರಿದೋರಿಸಿದಿ ಶಶಿವಾಸನ ಬೆಳಗೆ ||3||

ಶರ್ತಿನಿಂದಲಿ ಮತ್ರ್ಯದೊಳ್ವೆರ್ಥಾಗುತಲಿರ್ದೆ |

ಗುರ್ತ ಅರಿಯದೆ ನಿನ್ನ ಮರ್ತಿದ್ದೆನಗೆ

ಭರ್ತಿಪ್ರಸಾದ ಪೂರ್ತಿಸಿದ ಶ್ರೀ ಕರಿಘೂಳಿ

ಗುರ್ತರ್ಥ ತೋರಿದಿ ಕರ್ತನೆನ್ನಗೆ ||4||

ಹಂಸೇ ಪರಮಹಂಸೆ |

ವಿಂಶತಿ ಸಂಶಯ ಧ್ವಂಸ ಮಾಡುವಂಥ ಹಂಸೆ ||ಪಲ್ಲ||

ಗಂಗಯಮುನ ಸರಸ್ವತಿಯ ಸಂಗಮದಲ್ಲಿ |

ಮಂಗಳಾತ್ಮಕ ಪರಬ್ರಹ್ಮನ ತೋರಿಸುವಂಥ ಹಂಸೆ ||1||

ಎಂಟು ಮಂಟಪದೊಳು ಘಂಟೆಯ ನುಡಿಸುತ |

ಭಂಟನ ಕಂಟಲಾಗೊಯಿಕುಂಠ ತೋರಿಸುವಂಥ ಹಂಸೆ ||2||

ಶಂಖನಿಲ್ಲದ ಅಕಳಂಕ ಮೂರ್ತಿಯಾದ |

ಓಂಕಾರ ಪ್ರಣಮ ಶಂಕರನ ತೋರಿಸುವಂಥ ಹಂಸೆ ||3||

ಆದಿನಾದದಲ್ಲಿ ಭೇದವಿಲ್ಲದಿರುವದು |

ಸದಾ ನಾದದಿ ಸದಾಶಿವನ ತೋರಿಸುವಂಥ ಹಂಸೆ ||4||

ಪಂಚ ಬಣ್ಣದ ಹಂಸ ಮಿಂಚು ಗುಡುಗಿನ ವಂಶ |

ಪಂಚಾಕ್ಷರಕೆ ಮಿಂಚಿದ ಕರುಘೂಳಿ ತೋರಿಸುವಂಥ ಹಂಸೆ ||5||

ಓಂ ನಮಃ ಶಿವಾಯ ಎನು ಮನವಾ |

ಕಾಮನೇಮ ಹೋಮಮಾಡರಿದನುವಾ

ಓಂಲಿಂದೆ ಅ ಉ ಮ ಜನುಮವಾ

ಬ್ರಹ್ಮಾಂಡ ಪಿಂಡಾಂಡೊಂದೆ ಸಮಾನವಾ ||ಪಲ್ಲ||

ಓಂಕಾರ ಪ್ರಣಮದ ಸ್ವರ ಘನವಾ |

ಶಂಕರನಿರುವದು ತೋರಿಪದು ಸ್ಥಾನವಾ

ಕಿಂಕರನಾಗಿ ಮಾಡು ಗುರು ಧ್ಯಾನವಾ

ಸಾಂಖ್ಯ ತಾರಕಾಂಕಿತದಿ ಹರನಿರುವಾ ||1||

ಜಂಗಮನೊಲಿಸೊ ಕೊಟ್ಟು ಧನವಾ |

ಸಂಗಮದಿ ಲಿಂಗಕಿಡು ನಿನ್ನ ಮನವಾ

ಮಂಗಳಾಂಗ ಗುರುವಿಗೆ ತನುವಾ

ಅಂಗಲಿಂಗ ಸಂಗದಿ ಕರಿಘೂಳಿರುವಾ ||2||

ಓಂ ನಮಃ ಶಿವಾಯೆಂಬೊ ಮಂತ್ರೆನ್ನ ಜಿಂಹ್ವಕೆ |

ಘನ ನೂತನ ರುಚಿ ದೊರಿಯಿತಮ್ಮೊ

ಅನುದಿನ ಗುರುಧ್ಯಾನ ಮನದೊಳು ಮಾಡಲು

ಎನಿತ್ಹೇಳಲಿ ಶಿವಸುಖವಮ್ಮೊ ||ಪಲ್ಲ||

ಕೊಂಬೆಯಲ್ಲಿರೊ ಮಿಡಿಮಾವಿನ ಫಲ ರಸ |

ಪಂಚಧಾರಕದು ಮಿಂಚಾದಮ್ಮೊ

ವಂಚನಿಲ್ಲದೆ ನೋಡು ಶಿವನಾಮಾಮೃತಮಿದು

ಪಂಚಾಕ್ಷರದಿ ಮಧು ಮಿಂಚ್ಯಾದಮ್ಮೊ ||1||

ಅಂಡಪಿಂಡ ಬ್ರಹ್ಮಾಂಡದೊಳು |

ಅಖಂಡದಿ ತುಂಬಿದಖಂಡನಮ್ಮೊ

ತಂಡತಾಂಡಲೆದಾಖಂಡನ ಭಜಿಸಲು

ತಾಂಡವಾಡುವ ರುಂಡಮಾಲನವೊ ||2||

ತುಂಬಿದ ಕೆರೆಯಂತಿರುವ ಕರ್ಮವು |

ಅಂಬರ ನೀರಾಗ್ಹರಿವುದವೊ

ಶಂಭು ಪಾದಾಂಬುಜ ನಂಬಿದವರಿಗೆ

ತುಂಬಿದ ಪಾಪ್ಹರಿದೋಗ್ವದಮ್ಮೊ ||3||

ದೇವರದಾಶ್ಯವು ದೊರೆವದವೊ |

ಈ ಜೀವವು ದೇವರ ಸೇವೆಗವೊ

ಭುವಿಯೊಳರಸಪುರ ಕರಿಘೂಳಿ ಗುರುಸೇವ

ನಿರುತದಿಗೈವದು ಮರಿಯೆನವೊ ||4||

ಬೇಗನ್ಹೋಗನು ಬಾರಮ್ಮಾ |

ಶ್ರೀಗುರುವಿನ ಪೂಜೆಗೋಗನು ಬಾರಮ್ಮಾ ||ಪಲ್ಲ||

ಬೇಗನೋಗನು ಬಾರೆ |

ನೀಗಿ ಭೋಗಾದ ವಿಷಯ

ಮೋಘನಾದ್ಹರಿ ಶಿವ

ಯೋಗ ಮಂದಿರಕೀಗ ||1||

ಶೃಂಗಾಟ ಸಂಗಮದಿ ಸ್ನಾನವಗೈದು |

ಭಂಗಾರ ಮಡಿ ಹೊದಿದು

ಅಂಗದೊಳ್ಗಂಧ ಕಸ್ತೂರಿ ತಿಲಕ್ಹಣಿ ಮ್ಯಾಲ

ಅಂಗಜಮದ ಭಂಗಗೈದ ಮಹಾದೇವನಲ್ಲಿಗೆ ||2||

ತುಂಬಿದ ತಂಬಿಗಿಡಿಯೆ ಸಾಂಬನ ಪೂಜೆಗೆ |

ನಂಬಿಗಿಯಿಂದ ನಡಿಯೆ

ಅಂಬುಜಾಕ್ಷಿಯೆ ಕೇಳೆ ಸಂಭ್ರಮದಿಂದಲಿ

ಜಂಬುದ್ವೀಪದೊಳಿರೊ ಶಂಭುಮಹಾಲಿಂಗನಲ್ಲಿಗೆ ||3||

ಮೂರೊಂದರುವಾತ್ತಾರದ ಸರಸಿಜಗಳ್ತರಿದು |

ಎರಡೊಂದೆ ಸಾಸಿರದಳದ

ನಿರುತ ಜೀವ ಜಪಿಸುವ ಮಂತ್ರ ನೀರೆರದು ಭಸಿತ

ಧರಿಸಿ ಕಮಲೇರಿಸೊನ್ಹಿ ಲೋಭಾನ ಸುಡುವದಕ್ಕೆ ||4||

ಅಂಗಡಿಗೋಗಬೇಕಮ್ಮಾ |

ಟೆಂಗಿನಕಾಯಿ ಮುಂದೆ ತಂದಿಡಬೇಕಮ್ಮಾ

ಟೆಂಗಿನಕಾಯಿ ವಡಿದೆಡಿಯ ಸಮರ್ಪಿಸಿ

ಮಂಗಳಾತ್ಮಗೆ ಜಯಮಂಗಳ ಹಾಡೊದಕ್ಕೆ ||5||

ಕರ್ಪುರವನು ಮುಟ್ಟಿಸಿ |

ದರ್ಪಣದೊಳು ಮುಪ್ಪುರಹರನ ದಿಟ್ಟಿಸಿ

ತಪ್ಪದೆ ಪ್ರಣಮ ಘಂಟೆಯಿಪ್ಪ ಸ್ವರ ಕೇಳುತ

ಅಪ್ಪ ಶ್ರೀಕರಿಘೂಳಿ ಪಾದಗಳಪ್ಪಿ ವಂದಾಗುವದಕ್ಕೆ ||6||

ಗುರುತರಿತಿರುಬಾರದೆ ಹೇ ಮನಸೆ ||ಪಲ್ಲ||

ಗುರುತಿನೊಳು ಗುರುತಿಟ್ಟು ನಿರುತದಿ ನೋಡಲು |

ಪರಶಿವ ನಿನ್ನೊಳಗೆ ||1||

ಗುರುವೆಂಬ ಎರಡಕ್ಷರ ಪರಿಪಾಠವ |

ಸೇರಿ ಸೋಹಂ ಸ್ಮರಿಸೊ ಹೇಮನಸೆ ||2||

ಆದಿಯನಾದವಿದು ಭೇದಿಲ್ಲದಿರುವದು |

ಮುದದಲ್ಲಿ ಮನ ನಿಲ್ಲಿಸೊ ಹೇ ಮನಸೆ ||3||

ಮುಕುರದ ಮುಖದೊಳು ಅಕ್ಕರದಿಂದು ಮಧ್ಯ |

ನಿರಾಕಾರದಾನೆ ಲೋಕೇಶಾ ಹೇ ಮನಸೆ ||4||

ಆಧಾರ ಮೊದಲಲ್ಲಿ ಸಾಧಿಸು ವಿಧಿಯನಲ್ಲಿ |

ಸಾಧು ಕರಿಘೂಳಿಯನೊಲಿಸೊ ಹೇ ಮನಸೆ ||5||

ಈಶ್ವರ ವಿಶ್ವಾದೀಶ್ವರ |

ಶಿಶುಭಾಷನಾಸಿಸು ||ಪಲ್ಲ||

ಈಶ್ವರ ಜಗದೀಶ ಜವನ |

ಪಾಶ ಘಾಸಿಸು ಶೇಷ ಭರಣ

ಮೋಸ ಮಾಡಲಿಬೇಡ

ನಿನ ಪಾದಾಶಿಸಿರುವೆನು ಪೋಸಿಸೆನ್ನನು ಈಶ್ವರ ||1||

ಕೋಪವೇ ನಾ ಮೊದಲು ಮಾಡಿದ ಪಾಪವೆ |

ಕೋಪವೇನಾ ಮೊದಲು ಮಾಡಿದ ಪಾಪ ಬಿಡಿಸುವ

ಭೋ ಪ್ರಭೊ ನಿನ್ನ ಕ್ಯಾಪಿಕ್ಯಾಪಿಗೆ ಬೇಡುವೆ

ನಿಜ ರೂಪ ತೋರಿಸೊ ಆಪದ್ಬಾಂಧವ ಈಶ್ವರ ||2||

ಸೂಕ್ಷ್ಮನೆ ಹದಿನಾಲ್ಕು ಲೋಕ ಸಂರಕ್ಷನೆ |

ರಕ್ಷನೆ ಎನ ಮೇಲೆಯಿಂಥ ಪಕ್ಷಪಾತದೀಕ್ಷಿಸಲುಬಹುದೆ

ಲಕ್ಷ್ಮಿಪತಿ ಪ್ರಿಯ ದಕ್ಷಶಿಕ್ಷನೆ

ಕಕ್ಷಬೇಡಿನ್ನ ಬಿಕ್ಷುಕನಕರಿ ಈಶ್ವರ ||3||

ಶಾಂತನೆ ಶಾಂತದಿ ನೋಡು ಗುಣವಂತನೆ |

ಶಾಂತನೆ ಶಾಂತಾದಿ ನೋಡು ಗುಣವಂತ ಪಂಥಯಾತಕೆನ್ನೊಳು

ಚಿಂತಿಸುವೆನು ಕಂತುಹರ ಭವ

ಭ್ರಾಂತಿ ಬಿಡಿಸೊ ಮಾಂತು ಶಿರಧರ ಈಶ್ವರ ||4||

ವಾಸನೆ ಅರಸ್ಯೋಗಪುರ ನಿವಾಸನೆ |

ವಾಸನೆ ಅರಸ್ಯೋಗಪುರ ನಿವಾಸ

ಶೇಷಭೂಷ ಶಶಿಧರ ಆಶಿಸಿದ ನಿನ

ಕೂಸಿನ ಕರ ಸೂಸಿಲ್ಹಿಡಿ ಶ್ರೀಕರಿಘೂಳೀಶ್ವರ ||5||

ಪುರಹರ ಸುರ ಪೋಷಣ |

ಉರಗಾಭರಣ ಶಿರದಿಂದು ಗಂಗಾಧಾರಣ

ಮಾರವೈರಿಯೆ ನಿನ್ನ ಸೇರಿ ಸ್ಮರಿಸುವರ

ಮರೆಯದೆ ಪೊರೆದೆಯ ಕರುಣಾಳು ರಾಜಗುಣ ||ಪಲ್ಲ||

ತರುಳ ಪ್ರಹಲ್ಲಾದ್ಹರಿಯ ಸ್ಮರಣೆಯೊಳಿರೆ |

ಮೊರಿ ಕೇಳಿ ಸ್ತಂಭದಿಳಿಯೆ

ಧಿರ ಹಿರಣ್ಯನುದರ್ಹರಿದ ನಾರಸಿಂಹರ

ಸಿರಹಾರ ವೀರಲಿಂಗೊದ್ಭವತಾರ ತಾಮಸ ಗುಣ ||1||

ಬಾಲ ಮಾರ್ಕಂಡೇಯ ಶಿವಾಲಯದಿರೆ |

ಕಾಲಪಾ ಶೆಳೆಯುತಿರೆ

ಭೊಳಶಂಕರ ನಿನ್ನ ಕಾಲು ಬಿದ್ದೇನೆನೆ

ಕಾಲ ಪಾಶರಿದ ಸುಶೀಲ ಸುಸತ್ವ ಗುಣ ||1||

ಶ್ರೇಷ್ಠ ಅಷ್ಟಮದವಳಿಸೊ ಸೃಷ್ಟೀಶ |

ಅಷ್ಟದಳ ಮಧ್ಯ ನಿಷ್ಠಿ ನಿಲ್ಲಿಸೊ

ಎಷ್ಟ ಬೇಡಲು ನೀ ಸಿಟ್ಟಿಲಿರುವದು ಶ್ರೇಷ್ಠವೇನು

ದಿಟ್ಟಿಸಿ ನೋಡು ಪರಮೇಷ್ಟಿ ಪಾಲಿಸು ಸಗುಣ ||2||

ದುರ್ಗುಣ ವಂದಿತನೆ |

ಭಾರ್ಗಾಸಿನಾಥ ಮಾರ್ಗಣ ಶೇವಿತನೆ

ಸ್ವರ್ಗಾಧಿಪತಿ ಕರಿಘೂಳಿ ವರಗಳನೀಡೊ

ಭೋರ್ಗರಿಪ ನಾದದಿ ಪ್ರಣಮ ನಿರ್ಗುಣ ||3||

ಶ್ರೀಗುರುವರ ತವ ಚರಣವ ಸ್ಮರಿಸುವ |

ಧೀರಮನವು ಸ್ಥಿರ ಮಾಡುವದು

ಪೂರ್ವಪುಣ್ಯದಿ ನರ ಜನ್ಮದಿ ಬಂದು

ಮರವಿನೊಳಾದರುವದೋರಿಸುವದು ||ಪಲ್ಲ||

ಘೋರ ಸಂಸಾರದ ಪಾರುವಾರಿಧಿ |

ಯೊಳುರುಳಿರುವೆನು ಕರ ಪಿಡಿಯುವದು

ಮಾರಹರನೆ ಸುರತರುಳನೆಂದು ಭವ

ದುರಿತಗಳನು ದೂರ ಹರಿಸುವದು ||1||

ಆರಿಸು ಆಶಸಿರ ಘೋಷದೊಳಿರೊ |

ಪರಮೇಶ ಕರುಣಿ ಸಾಂಖ್ಯರಿಸುವದು

ತಾರವರನೆದರ ಆರರಿಗಳನ್ಹರಿ

ಪಾರಮಾರ್ಥ ದಾರಿ ಹಿಡಿಸುವದು ||2||

ಆರೊಂದ್ವೆಸನಗಳರಿದಾರು ನೆಲಿ ಮ್ಯಾಲಿರೊ |

ಆರೊಂದಕ್ಷರ ಬರೆಸುವದು

ಭಾರಿವುನ್ಮನಿಯೊಳಿರುವಂಥ ಪರಮನೆ

ಪರಸ್ಥಿರ ಭಕ್ತಿಯನಿರಿಸುವದು ||3||

ದುರ್ಗುಣ ವಂದಿತ ಮಾರ್ಗಣ ಸೇವಿತ |

ನಿರ್ಗುಣ ಸುಮಾರ್ಗಿಡಿಸುವದು

ಸ್ವರ್ಗಾಧಿಪ ಕರಿಘೂಳಿ ಪ್ರಸಾದದಿ

ಶೀಘ್ರದಿ ನೀನವರ್ಗಿಡಿಸುವದು ||4||

ವೇದವನೋದಿಸೊ |

ಸದ್ಗುರು ನಿಜ ಬೋಧವ ಬೋಧಿಸೊ

ಆದಿನಾದದಿ ಮುದದುದಸಿದ ವಿದ್ಯೆಗಳ

ಹಾದಿದೋರಿ ಭೇದಷ್ಟಮದ ಮಥಿಸೊ ||ಪಲ್ಲ||

ಪೂರ್ವ ಪುಣ್ಯದ ಸುಕೃತ ವರ ದಯದಿ |

ನರ ಜನ್ಮದಿ ನಾ ಬಂದೆನು

ನಾರಿಪುತ್ರರೆನ್ನವರೆಂದಿಂದುಧರ

ಮರೆದು ನಿನ್ನ ನಾ ನೊಂದೆನು

ಪರನಾರಿಯರ ವಾರಿನೋಟಕ ಮರುಳಾಗಿ

ಸ್ಮರಶರಕರಿತದಿ ಬೆಂದೆನು

ಮೂರಾರೇಳೆಂಟ್ಹತ್ತರಿ ಹದಿನಾರು

ಆರೆರಡೊಂದಾದ ನಾದ ಪ್ರಣಮದಿವುದಿಸೊ ||1||

ಆಟ ಬಿಡಿಸಿ ಭವದಾಟ ಕೆಡಿಸಿ |

ಶಿವನಾಟಕ್ಹಂಸನೇರೊ ನೆಲೆದಿಳಿಸೊ

ಕುಟಿಲ ಕಪಟ ಹಟ ಸಟಿಯನು ಮಾಡು ದಿಟ

ಪಟುತರ ಯೋಗದಿ ಮನ ಘಟಿಸೊ

ಬೂಟಾಟಕ ಕಡಿ ಥೇಟ ಬಾಟ ಹಿಡಿ ಸೂಟಿಲಿ

ಶಶಿಧರ ಮಠ ದಿಟ್ಟಿಸೊ ಅಷ್ಟದಳದಿಗಟ್ಟಿ ಸೃಷ್ಟಿನೀಲ ಮುಟ್ಟಿ

ಸ್ಫಟಿಕ ಪೀಠದಿ ಸೋಮ ಕೋಟಿ ಪ್ರಕಟಿಸೊ ||2||

ಆಧಾರ ಸಾಧನದಿರಿಸಿ ಸ್ವಾಧಿಷ್ಟದಿ |

ಸದಮಣಿಪೂರದಿ ಹದಗೊಳಿಸೊ

ಶೋಧನದಿಂದನಾಹತವ ಶೋಧಿಸಿ

ಶುದ್ಧವಾದ ವಿಶುದ್ಧದಿರಿಸೊ

ಸಿದ್ಧಪ್ರಸಿದ್ಧಗ್ನಿ ಬೌದ್ಧನೆ ಬುದ್ಧಿಯಯಿ ದ್ವಯವುದಿಸೆನ್ನುದ್ಧರಿಸೊ

ಸದ್ಯ ಸಾಸಿರದಳ ಚರಣ ಕಮಲಕ್ಕೆ ನಾ

ಬಿದ್ದು ಬೇಡುವೆ ಕರಿಘೂಳಿ ಭಕ್ತಿ ಹುದುಗಿಸೊ ||3||

ಸಲಹು ಸದಾ ನೀ ಭಕ್ತಪಾಲಯ |

ಬಾಲಿಂದುಧರಾಯ ಸಲಹು ಸದಾ ನಿನ್ನ ಭಕ್ತರ

ದುರ್ಜಾಲ ಗುಣಗಳನೆಣಿಸದೆ ಭವದಿ

ಕಾಲಪಾಶವ ಹರಿ ಸುಶೀಲ ತ್ರಿಶೂಲಕರಧರ ಪಾಲಿಸುರಾಯ ||ಪಲ್ಲ||

ಹಿಂದೆ ನಾನಾ ಜನ್ಮಗಳು ತಿರುಗಿ ನಾ |

ಬಂದೆನು ಮರಗಿ ಇಂದುಧರ ನಿನ್ನ ನೆನವು ಮರಿಯಾಗಿ

ಬಂಧುರ ಮಾರನು ಬಂಧನದೊಳಗ

ಬಂಧಿಸುವನು ಬಂದು ಬಿಡಿಸೋಹಂ

ಕಂದುಗೊರಳ ನಿನ್ನ ಕಂದ ದಯಾಳನೆ

ಇಂದು ಕೈ ಬಿಡದಿರು ಕಂದರ್ಪಹರಾಯ ||1||

ಪರ ಧನವ ಪರ ನಾರಿಯರ ವರಸಿ |

ಗುರುಹಿರಿಯರ ಪರಕಿಸಿ

ಪರರಗೀಪರಿ ಶರೆಯೊಳುರುಳಿಸಿ

ಉರಿವ ಕರ್ಮೇಂದ್ರಿಯಗಳ

ಆಶಿಸಿ ಸೊರಗಿ ಕೊರಗಿರುವೆನು ಘಾಸಿ

ಘೋರದುರಿತ ದೂರ್ಮಾಡೊ ಪರಮಹರ

ಕರಿ ಚರ್ಮಾಂಬರ ತಾರವರಧರಾಯ ||2||

ಸತ್ಯ ವಚನಗಳಾಡದಿರುತಿರುತ |

ಅಸತ್ಯದ ತನುವ ನಿತ್ತವೆಂದು ಮತ್ತೆ ನಂಬುತ

ಸತ್ತು ಚಿತ್ತಾನಂದ ನಿನ್ನ

ಗೊತ್ತನರಿಯದೆ ವ್ಯರ್ಥ ಕೆಡುವೆ

ನನ್ಹೆತ್ತಪಿತ ಮೋಕ್ಷಿತ್ತು ರಕ್ಷಿಸು

ಕರ್ತು ಶ್ರೀಗುರು ಕರಿಘೂಳೀರಾಯ ||3||

ಸಾಂಬಶಿವನೆನು ಮಾನವಾ |

ನಂಬಿಗೆಯಲಿ ಸದಾ ಸಾಂಬ

ಕುಂಭಿನಿ ಹೆಮ್ಮೆಯ ಹಂಬಲ ಬಿಡು ನೀ ಅನುದಿನವಾ ||ಪಲ್ಲ||

ನರ ಮಾಂಸಸ್ಥಿಯ ಶ್ವೇತ ಸೇರಿ ಶೋಣಿತಪಿತ್ಥ |

ಸ್ಥಿರವಿಲ್ಲೀತನುಜಾತ ಮರಣಾಗದ ವರ ಕೊಡುವಾ ||1||

ಧನ ವನಿತೆಯ ಸೂನುರನು ಘನವೆನದಿರು ನೀನು |

ಅನುದಿನ ಮನದೊಳು ಚಿನುಮಯನ ನೆನೆದನುವಾ ||2||

ಹಿಂದಿನ ಪುಣ್ಯದಿ ಬಂದು ನರ ಜನ್ಮದಿ |

ಯಿಂದುಧರ ಕರಿಘೂಳಿದಂದುಗ ಕಳಿಯುವಾ ||3||

ನೋಡಬಾರದೆ ನೀ ದಯ ಮಾಡಬಾರದೆ |

ಬೇಡಿಕೊಂಬೆ ನಿನ್ನಡಿಗಳಿಡಿದು ಸದಾ ||ಪಲ್ಲ||

ಮೂಢರು ಬಿಡದನುದಿನದಿ ಕಾಡ್ವರು |

ಕೋಡಿಹ ಗುಣ ಕಿಡಿಗಣ್ಣಿಂದಲಿಡಿ

ಬಿಡದೆ ಬಿಡಿಸು ಕಡಿಸೊಡರು ಯಡರು ಜಾಡಿ

ಬೇಡುವೆ ಮೃಢ ಧೃಢಹಿಡಿದು ಸಡಗರದಿ ||1||

ವಸುಧಿಯ ಕಸಿಬಿಸಿ ಮುಸುಗಾಸಿರುವದು |

ಮಾಸಿಸು ಶಶಿಧರ ಬಿಸಜಾಕ್ಷಿಂದಲಿ

ಆಶೆ ಹರಿಸು ಪರಮೇಶ ಗಿರೀಶನೆ

ಸೂಸುವ ನಾಶಿಕವಾಸ ನೀನಲ್ಲವೆ ||2||

ಧರಿಹಿರಿಯನೆ ಖರೆ ಕಿರಿದಾಗಿರುವದು |

ಮಾರನಂತರಿ ಉರಿನೇತ್ರದಿಂದಲಿ

ಘೋರದುರಿತ ದೂರ್ಮಾಡೊ ಪರಮ ಹರ

ದಾರಿದೋರೊ ತಾರವರಧರನಲ್ಲವೆ ||3||

ಇಂದುಧರನೆ ಭವಬಂಧನ ನಂದಿಸೊ |

ಕಂದುಗೊರಳ ಸಣ್ಣ ಕಂದ ದಯಾಳನೆ

ಮಂದಮಾರುತ ಮಹೇಂದ್ರ ಜಾಲ್ಹರಿ ರವಿ

ಚಂದ್ರ ಕೋಟಿ ಪ್ರಭೇಂದ್ರನಲ್ಲವೆ ||4||

ಇಳಿಯ ಕಾಳ ಸುತ್ತುಳಿಯದು ತನು ಘನ |

ಬೋಳ ಶಂಕರ ಭಾಳಾಕ್ಷ ಕಾಪಾಡೊ

ತಾಳ ಝಾಂಗುಟಿ ಸಮ್ಯಾಳ

ರಾಜ್ಹಳ್ಳಿಲಿರೊ ಬಾಲನ ಸಲಹು ಕರಿಘೂಳಿ ನೀನಲ್ಲವೆ ||5||

ಶ್ರೀ ಗಣನಾಯಕನೆ ಶರಣು ಶರಣು |

ಶರಣು ಪಾಹಿಮಾಂ ಗಿರಿಜಾತೆ ನಂದನ ||ಪಲ್ಲ||

ಮೂಷಕ ವಾಹನನೆ |

ಸುರಪೋಷಕ ನಿನ್ನಾಶಿಸಿರುವೆ

ಪೋಷಿಸೆನ್ನ ಕ್ಲೇಶರಹಿತ

ಈಶಗೂಸೆ ಪಾಹಿಮಾಂ ಗಿರಿಜಾತೆ ನಂದನ ||1||

ಲಂಬೋದರ ನಿನ್ನ ದಿವ್ಯಪಾ |

ದಾಂಬುಜಗಳ ನಂಬಿರುವೆ

ಸಂಭ್ರಮಾಂಬ ಹಿಂಬಾಲಿಸು

ಶಂಬಾಂಬುಜ ಪಾಹಿಮಾಂ ಗಿರಿ ||2||

ವಿದ್ಯೆಕಧಿಕಾರನೆ ಸದಸು |

ಬುದ್ಧಿಯ ನಿರ್ಧರಿಸೊ

ಸದ್ಯ ನಿಮ್ಮ ಪಾದಕೆ ನಾ

ಬಿದ್ದು ಬೇಡುವೆ ಪಾಹಿಮಾಂ ಗಿರಿ ||3||

ಕರಿಶಿರ ಕರಿವದಸುರ |

ವರಪೊರಿ ಕರಿವೀರನನುಜ

ನಿರುತ ಚರಣ ಸ್ಮರಣಿಗೈವೆ

ಮರೆಯದಿರೆನ್ನ ಪಾಹಿಮಾಂ ಗಿರಿ ||4||

ಓಂಕಾರ ಅಂಕಿತ ಶಿವ |

ಶಂಕರ ಹರ ಕಿಂಕರ ನಿನ್ನ

ಶಂಕರಿಸು ಪಂಕಜಜಾಕ್ಷಿ

ಕರಿಘೂಳೀಶ ಪಾಹಿಮಾಂ ಗಿರಿ ||5||

ಓಂ ನಮಃ ಶಿವಾಯನುವಾ |

ಹೇ ಮನವಾ ಮನದನುದೀ ನುಡಿಸೆ

ಘನ ಪದವಿ ನಿಜವಾ ||ಪಲ್ಲ||

ಜಪತಪ ಹೋಮ ನೇಮ ಉಪವಾಸ ವ್ರತವ್ಯಾಕೊ |

ಆಪಾನವಿಡಿದಾ ಜೀವ ಗುಪಿತದಿ ಜಪಿಸುವಾ ||1||

ಕುಟಿಲ ಕಪಟ ಹಟ ಸಟಿಯನು ಮಾಡೊ ದಿಟ |

ನಿಟಿಲ ದೃಷ್ಟಿಯ ನೀಡೊ ಸೃಷ್ಟೀಶ ಕಾಣುವಾ ||2||

ನಾರಿ ಪುತ್ರ ಬಾಂಧವ ಸ್ಥಿರವಿಲ್ಲ ನೋಡೊ ಜವ |

ಶರೆ ಪರಿಹರಿಸುವ ಸ್ಮರವೈರಿ ಕಾಯುವಾ ||3||

ಕಂದಮೂಲ ಸೇವಿಸಿ ಕಂದರ ವಾಶಿಸಿ |

ಇಂದೂರು ಬಿಡಲ್ಯಾಕೊ ಚಂದ್ರಧರ ಕಾಯುವಾ ||4||

ಸುರಮುನಿ ಹರಿಹರಾಜ ಸ್ಮರಿಸಿದರಿದರನ್ನೆ |

ಕರಿಘೂಳಿ ಚರಣ ಸೇವೆ ಮರೆಯದಿರುಸುರುವಾ ||5||

ಬಸವ ಜಗದೀಶ ಪೋಷಿಸೊ |

ಶಿಶುವಿನಾ ಕಾಲಪಾಶರಿಸೊ ||ಪಲ್ಲ||

ಆವಾಗಲು ಸ್ಮರಿಸುವೆ ನಾನು |

ದೇವಾಧೀದೇವ ನಿಮ್ಮ ನಾಮ

ಕಾವುದೈ ಕಂದನ ನಿಮ್ಮ

ತವಿಸು ಭಯ ಜವದಿ ಮಹಾಮಹಿಮಾ ||1||

ಮೂರು ಲೋಕಕ್ಕೆ ನೀ ಕರ್ತ |

ಕಾರಣ ಸ್ಮರಿಸುವೆನು ಚರಣ

ಕರುಣದಿ ನೋಡೋ ಶಿವಶರಣ

ತರುಳನ ಶರೆಯ ಹರಿಸಿನ್ನು ||2||

ಬಸವ ನಿನ್ನಾಮ ಉಚ್ಚಾರಗೈಯಲು |

ದೋಷ ಪರಿಹಾರ ಈ ಸಮಯದಿ

ಬಾರೊ ಬಾ ಧೀರ ವಿಷಮ

ಪುಸಿ ತ್ಯಜಿಸೊ ಶಿವಶರಣ ||3||

ಬಾ ಗುರುಬ್ರಹ್ಮ ರೂಪನೆ |

ಸಾಗುರು ಸಾಂಬ ರೂಪನೆ

ವರ ಗುರುವಿಷ್ಣು ರೂಪನೆ

ಭಕ್ತರ ಸಲಹು ಸದಾಶಿವನೆ ||4||

ಆಶೆ ಮಾಡಿರುವೆ ನಿನ್ನ ಪಾದ |

ನಿನ್ನ ಕೂಸಿನೆಮಬಾಧೆ

ಘಾಸಿಸು ಕರಿಘೂಳೀಶ ಭೇದ

ನಿರುತುಪದೇಶೀಸೊ ನಿಜ ಬೋಧ ||5||

ಶ್ರೀಗುರು ಜಯತುಮಾಂಗ |

ಬೇಗನೆ ಬೀರಿ ಕೃಪಾಂಗ ಅಂಗಜ ಮದಹರ

ಗಂಗಾಧರ ಸಂಗನ ಶರಣರ ಸುಭಾಂಗ

ಮಂಗಳಾತ್ಮ ನಿಸ್ಸಂಗ ನಿರುಪಕೋಟಿ

ತಿಂಗಳ ಪ್ರಭೆ ಧವಳಾಂಗ ||ಪಲ್ಲ||

ಶೇಷಭೂಷ ಶಶಿವಾಸ |

ಸೂಸುವ ನಾಶಿಕವಾಸ್ಕಳಿ ದೋಷ

ಇಸಮಯದಿ ನಿನ್ನ

ಧ್ಯಾಸದೊಳಿರಿಸಿ ಪೋಷಣ ಮಾಡು ಸರ್ವೇಶ ||1||

ಆವಾಗಲು ಶಿವ ಸೇವೆಯಲಿರಿಸು |

ಭಾವಭರಿತನೀಯೀವ

ಕಾವದು ಭಕ್ತರ ಜೀವೋದ್ಧಾರನೆ

ಭವ ಭಯ ಕಳಿ ಮಹದೇವ ||2||

ಭೋಗಭಾಗ್ಯ ಸುಖವಾಗಿ ಇರಿಸು |

ಶಿವಯೋಗದೊಳಗೆ ಮನವಾಗ

ನಾಗಭೂಷಣ ಶಿರಬಾಗಿ ಬೇಡುವೆನು

ಶೀಘ್ರದಿ ಕಾಯೊ ಬಾಲರಿಗೆ ||3||

ಪಕ್ಷಿವಾಹನ ಪ್ರಿಯ ತಕ್ಷಕ ಭರಣ |

ದಕ್ಷ ಶಿಕ್ಷ ಫಾಲಾಕ್ಷ

ಮೋಕ್ಷದಾಯಕ ವಿರುಪಾಕ್ಷ

ಶ್ರೀ ಕರಿಘೂಳೆಪೇಕ್ಷಿಸಿರುವೆ ಕೊಡು ಮೋಕ್ಷ ||4||

ಪಾಲಯಮಾಂ ಶ್ರೀಗುರುವೆ |

ನಿನ್ನ ಬಾಲಕರನು ಎಡೆಬಿಡದಲಿ ಕರುಣದಿ

ಕಾಲಕಂಧರ ಕಾಲಸಂಹರ

ಕಾಲಕಾಲನೀನಿರುಳ್ಹಗಲಾ ಪಾಲ ||ಪಲ್ಲ||

ಶ್ರವಣ ಮನನ ನಿಧಿ ಧ್ಯಾಸದೊಳಗೆ |

ಭಾವ ಆವಾಗಲು ತವಿಯದೆ

ಸ್ಥಿತವಾಗಿರಿಸು ಶಿವಯೋಗದೊಳಗೆ ಮನವ

ದೇವ ಭಕ್ತರು ಸಲಹುವ

ಜೀವದುದ್ಭಾವಗಳೆಣಿಸದೆ ಕಾವದು ದೇವ

ಝಾವಝಾವ ನಿನ್ನ ಸೇವೆಯೊಳಿರಿಸೊ

ದೇವ ಭವ ಭಯಕಳಿ ಮಹದೇವ ಪಾಲ ||1||

ಅಂಡಪಿಂಡ ಬ್ರಹ್ಮಾಂಡದಿ ನೌಖಂಡದಿ |

ಮಂಡಿತನಾಗಿ ತುಂಡತಂಡ ಮಾರ್ತಂಡನೆ ಅಖಂಡ

ಮಂಡೆ ಬಾಗಿಸಿ ಗಜ ಹಿಂಡುಗಳನು

ಕೋದಂಡದಿ ದಂಡಿಸು ಗಂಡರ ಗಂಡ

ಖಂಡದಿರುವೊ ಬ್ರಹ್ಮಾಂಡವ ಖಂಡಿಸು

ದಂಡನಾಯಕ ವೈರಿಕರ ಹಿಡಕೊಂಡು ಪಾಲ ||2||

ತುಂಟರೆಂಟು ಮಂದಿರುವರು ಮಹಾಭಂಟ |

ನಿನ್ನಂಟಿ ತಿರುಗುವರಂಟಿ ಪೊರೆಯೊ ನಿಜಕುಂಠ ನೀಲಕಂಠ

ಎಂಟು ಮಂಟಪದಿ ಘಂಟೆಯ ನುಡಿಸುತ

ವಂಟಿಯಾಗಿರುವನೀ ಭಂಟರ ಭಂಟ

ಜಂಟೆ ಸ್ವರಗಳೊಳಂಟಿಯಿರುವ ವೈಕುಂಠಪತಿಯೇ

ಪತಿ ಬಿಡು ಭವಗಂಟ ಪಾಲ ||3||

ಮೊಟ್ಟ ಮೊದಲು ನಾ ನಿನಗೆ ವಚನ ಕೊಟ್ಟ |

ನಾ ಬಿಟ್ಟರೆ ಬಿಟ್ಟ ಸೃಷ್ಟಿಗೀಶ ಬೆನ್ನಟ್ಟಿ ಸುಮತಿ ಕೊಟ್ಟ

ಕಟ್ಟಕಡಿಗೆ ನಿನ್ನ ದಿಟ್ಟಪಾದದಿ ಮನ ಘಟ್ಟಿಯಾಗಿ

ಎನ್ನ ನಿಲ್ಲಿಸು ಶ್ರೇಷ್ಠ ಇಷ್ಟ ಪ್ರಾಣ ಭಾವ

ದೃಷ್ಟಿಯನಿಟ್ಟ ನಿಷ್ಠಿವಂತನೆ ನೀ ಕರುಣಿಟ್ಟ ||4||

ದಕ್ಷ ಶಿಕ್ಷಪಿತ ಪಾಲಾಕ್ಷಿರುಪಾಕ್ಷ |

ಅಧೋಕ್ಷಜ ಚಕ್ಷವಪೇಕ್ಷಿಸಿ ಪುಷ್ಪವಗೈಸಿದಿ ನೀರಕ್ಷ

ಪಕ್ಷಿವಾಹನ ಸತಿ ಲಕ್ಷ್ಮಿಪ್ರಿಯ ಪತಿ

ಕಕ್ಷಬೇಡ ನಿನ್ನ ಭಿಕ್ಷುಕನಕರಿ ಮೋಕ್ಷದಾಯಕ

ವಿರುಪಾಕ್ಷ ಶ್ರೀಕರಿಘೂಳಿ ಪೇಕ್ಷಿಸಿರುವೆ ಕೊಡು ಮೋಕ್ಷ ||5||

ಎಂಥ ಒಳ್ಳೆ ಪ್ರಿಯೆ ದೊರೆತಾನೆ |

ಎನ್ನಂತರಂಗದ ಅಂತು

ತಿಳುಹಿದ ಅಂತಕಾಂತಕನೆ ||ಪಲ್ಲ||

ಎಂಥ ವಳ್ಳೆವ ಪ್ರಿಯ ದೊರೆತ ಕಾಂತೆ |

ಕೇಳೆ ಮೂರು ಜಗದಿ ಭ್ರಾಂತಿ

ಹಿಡಿಸುವ ಅಣ್ಣ ತಮ್ಮರ ಭ್ರಾಂತಿ

ಬಿಡಿಸಿದ ಶಾಂತ ತಾನೆ ||1||

ಬಿಟ್ಟು ಎನ್ನರಘಳಿಗಿಯಿರಲಾರ |

ಎನ್ಮುಟ್ಟಿ ಮುಟ್ಟದೆ ಬಟ್ಟ ಬಯಲಲಿ

ಮಲಗುವನು ಧೀರ ಹೊಟ್ಟಿಲಿ ಹುಟ್ಟಿದ ಕೆಟ್ಟ ಶಿಶುಗಳ

ಕಷ್ಟವಿಲ್ಲದೆ ನಷ್ಟಗೊಳಿಸಿ ಕಟ್ಟ ಕಡಿಗೆಟ್ಟ

ಮಕ್ಕಳೆಂದರೆ ಹುಟ್ಟಿ ಹುಟ್ಟಿಲ್ದಂತೆ ಮಾಡಿದ ||2||

ಆರಿಗಾದರು ನೋಡಗೊಡಲಾರ |

ಆರಮನಿಯ ಬಾಗಿಲ ಹೊರಗಿನರಮನಿಗ್ಹೋಗಗೊಡಲಾರ

ಬಾರಿ ಬಾರಿಗು ತನ್ನ ನಾಮಸ್ಮರಣೆ ಚರಣಾ ಸೇವೆಗೈಸಿ

ಊರ ಸಂಗತಿ ಮರೆದು ನೆರೆಮನೆ ತಿರುಗದೆಯಿರು ಅಂತಾನಮ್ಮಾ ||3||

ಒಡವಿ ವಸ್ತ ಶಿಸ್ತಿಲಿಟ್ಟಾನೆ |

ಉಡುಲಾಕ ಯಾರ್ಯಾರ್ಹೆಸರುಯಿಡದ ಮಡಿಯ ಕೊಟ್ಟಾನೆ

ಮಡಿಯು ಪಂಚಭೂತದೆಳೆಗಳು ಬಿಡದೆ

ಎಂಭತ್ತುನಾಲ್ಕಲಕ್ಷವು ದೃಢದಿ ಅಳತೆಯ ಮಾಡೆನಂದರೆ

ಮೃಢನಿಗರಿಯದೆ ಪೊಡವಿಗಲ್ಲವು ||4||

ಈ ಸುಮಯದೆನ್ನದರಿಗಿರುಹುವನೆ |

ಭವದೋಷ ದೂಷಿಸಿ ಈಶ ತಾ

ಸಂತೋಷಗೊಳಿಸುವನೆ ಏಸು ಜನ್ಮದಿ ಜನಿಸಿ

ಎನ್ನನು ಕೂಸಿನಂತೆ ಪಾಡಿ ಕರಿಘೂಳೀಶ ಗುರುವು

ಪೋಷಿಸುವನು ಖಾಸಜನಕನಾದಿ ಪ್ರೀಯನು ||5||

ಕಾಣಲಿಲ್ಲ ಕಾಣಲಿಲ್ಲವೊ |

ಅಣುರೇಣು ಗುರುವಿನ

ಕಾಣಲಿಲ್ಲ ಕಾಣಲಿಲ್ಲ ಗುರುವಿನ ನರರು

ಮಾಣಲಿಲ್ಲ ಮಾಯ ಭ್ರಮಿಗಳೂ

ನಾನಾ ಜನ್ಮವ ತಿರುಗಿ ತಿರುಗಿ

ಮಾನವ ಜನ್ಮದಲಿ ಮೋಕ್ಷವು ಕಾಣ ||ಪಲ್ಲ||

ಜ್ಞಾನ ಭಕ್ತಿ ತಿಳಿದು ನಿತ್ಯ |

ದಾನ ಧರ್ಮವಗೈದು ಪರಶಿವ

ಧ್ಯಾನದಲ್ಲಿ ತನುವು ಮರಿದಾನಂದ

ಸೌಖ್ಯ ಹೊಂದಿದ ನರರು ||1||

ಯೋನಿಯೊಳಗೆ ಜನಿಸಿ ಮೂತ್ರ |

ಯೋನಿಗೆ ಮೋಹಿಸಿ ಹೊಲಸು

ಯೋನಿ ಮರ್ಮವು ತಿಳಿಯದಲೆ

ಮತಿಹೀನರಾಗ್ಹೋಗುವ ನರರು ||2||

ಜಾರ ಚೋರ ಕೃತಕವಾಚರಿಸಿ

ಭಾರಿ ದ್ರವ್ಯ ಹೂಳಲು ಘಳಿಸಿ

ಸಾರಿಯಮನರಿಯಳದೊಯ್ವಾಗ

ಭೂರಿ ದ್ರವ್ಯವು ಆರಿಗಹುದೊ ||3||

ಆಸೆಯೆ ಬಹು ಮೋಸವೆನಿಪುದು |

ಮೋಸವೇ ಯಮ ಪಾಶವೆನಿಪುದು

ಪಾಶದೊಳಗೆ ಈಸಿ

ಹೊರಳಿ ನಾಶವಾಗ್ಹೋಗುವ ನರರು ||4||

ಹಿತದಿ ಸತಿಸುತರೆನ್ನವರೆಂದು |

ಸತತ ನುತಿಸಿ ಎತಿಸುತಿಹರು

ಪತಿಯ ಜವ ನಿನ್ನತಿ ವ್ಯಥೆ ಮತಿಸುವಾಗ

ಹಿತ ಸತಿಸುತ ಗತಿ ಜತಿಯಾರಿಲ್ಲವೊ ||5||

ಭೂತ ಪಂಚಕ ದೇಹವಿದು |

ಸುಜಾತ ಶ್ರೀಗುರು ಕರಿಘೂಳೀಶಗೆ

ನೀತಿಯಿಂದಲಿ ಅರ್ಪಿಸಿ ನಿಜ ಅವ

ಧೂತ ಜಾತವು ಮಥಿಸರವರು ||6||

ಸಾಧು ಶಿವಯೋಗಿ ಬಂದ ನೋಡಮ್ಮಾ |

ಸಾತ್ವೀಕದವನ ಪಾದಪೂಜೆಯ ಮಾಡಬೇಕಮ್ಮಾ

ಸಾಧು ಶಿವಯೋಗಿ ಬಂದು ಭಕ್ತರ

ಬಾಧೆಗಳನು ತ್ಯಜಿಸಿ ನಿಜ ಪ್ರಸಾದವಿತ್ತು ಬ್ರಹ್ಮಾಜ್ಞಾನ

ಬೋಧೆಗೈದು ಸಲಹುವದಕೆ ||ಪಲ್ಲ||

ಆದಿ ಅಂತ್ಯವಿಲ್ಲದವನಮ್ಮಾ |

ಅನಾದಿ ವಸ್ತು ಶೋಧ ಮಾಡಿದ ಸುಂದರಾನಮ್ಮಾ

ವಾದಭೇದ ಮರೆದು ತನ್ನೊಳು

ನಾದಬಿಂದು ಕಳೆಯ ತಿಳಿದು

ಮೋದದಿಂದ ಮೋಕ್ಷ ಸತಿಯ

ವಿನೋದಗೂಡಿದ ಜ್ಞಾನಪುರುಷನು ||1||

ಯೋಗನಿದ್ರೆಯ ತಿಳಿಸುವಾನಮ್ಮಾ |

ಬೇಗನೆ ನಿನ್ನಯ ರಾಗದ್ವೇಷ ನಿಲಿಸಿ ನೋಡಮ್ಮಾ

ಯೋಗ ಭೋಗಗಳರಿವನರುಹಿಸಿ

ರೋಗ ಆಗಳೆಲ್ಲ ತಗಿಸಿ

ಭೋಗ ವಿಷಯಗಳೆಲ್ಲ ನೀಗಿಸಿ

ಸಾಗಿ ಪೋಗುವ ಮಾರ್ಗದೋರುವ ||2||

ಎಷ್ಟು ಮಾಡಿದರಿಷ್ಟೆ ಸುಖವಮ್ಮಾ |

ಏನಿಲ್ಲಯಿದರೊಳು

ನಷ್ಟ ಸಂಸಾರಕಿಷ್ಟು ಭ್ರಮಿಯಮ್ಮಾ

ಎಷ್ಟೊ ಕಷ್ಟದಿಂದಲರ್ಥವು

ನಿಷ್ಠಿಯಿಂದಲಿ ತಾ ಸಂಪಾದಿಸಿ

ಅಷ್ಟರೊಳು ತಾ ಹೋಗೊ ವ್ಯಾಳ್ಯಾ ಹುಗಿ

ದಿಟ್ಟ ದ್ರವವು ಆರಿಗಹುದೊ ||3||

ಕೇಳಿದಾಗಲೆ ಒಳ್ಳೆದೆಂಬುವರೊ |

ಕಲಿಮಾಯ ಕತ್ತಲಿ ಕವಿದು

ಮನೆಯೋಳ್ಮರಿದು ಮಲಗುವರು

ವ್ಯಾಳ್ಯ ವಾಳ್ಯದಿ ಯಾವ ವ್ಯಾಳ್ಯವೂ

ಹೇಳದೆ ತಾ ಹೋಗೊಕಾಲದಿ

ಗೋಳಿಡುತ ಅಮ್ಮಪ್ಪನೆಂದರೆ

ಕಾಲಮೃತ್ಯವು ಗೆಲಿಸುವ ಶಿವ ||4||

ಭೂತ ಪಂಚಕ ತೋಟ ನೀಟಮ್ಮಾ |

ಈ ತೋಟದೊಳಗಿರೊ

ಮರ್ಕಟೊಂದನು ಕಟ್ಟಬೇಕಮ್ಮಾ

ನೀತಿಗಳು ತಾವ್ಹೇಳೊ ವಚನವು

ನೀತಿಯಿಂದಲಿ ನಡಿಯದೆ ಯಮ

ದೂತರ ಕರ ಸಿಲ್ಕಿ ನರಕ

ಯಾತನೆಗೆ ಹೇತುವಾಗಿಯಿರಸಿದ ||5||

ತಿಳಿದು ತಿಳಿಯರು ಮರುಳು ಜನರಮ್ಮಾ |

ಇನ್ನೇನು ಮಾಡಲಿ ತಿಳಿದು ತಿಳಿದರೆ

ಸತ್ಯ ಶರಣಮ್ಮಾ ತಿಳಿದ ಶ್ರೀಗುರು ಕರಿಘೂಳೀಶನ

ತಿಳಿದು ಚರಣ ಸೇವೆ ಮರೆಯದೆ

ತಿಳಿದು ಅಳಿದು ಉಳಿದು ಹೊಳೆಯಲು

ಬೆಳಗಿನೊಳು ನಿರ್ಬೈಲನಾದ ||6||

ಆರದೈವವು ಆರಿಗೇನು ಗುರುತು |

ಗುರುರಾಯನ್ಹೊರತು ಆರು ದೈವವು

ಆರಿಗೇನು ಗುರುತಾರು ಪೇಳಲು ಆರು ಸಾಧ್ಯವು

ಆರುಮೂರನು ಅರಿತು

ಮಹಾ ಮೇರು ಶಿಖರದಿರುವನ್ಹೊರತು ||ಪಲ್ಲ||

ತರುಳ ಮಾರ್ಕಂಡೇಯಗೊರವಿತ್ತು |

ಹದಿನಾರು ವರುಷ ಸಮರಣ ಜನನ ಬ್ರಹ್ಮ ಬರಯಿತ್ತು

ಶ್ರೀಗುರು ನಾರದರ ಬೋಧವ

ಅರುವಿನಲಿ ತಾನರಿತು ಭೇದವ

ಮಾರಸಂಹರನೊರವ

ಪಡಿದಾಪಾರ ಮಹಿಮಾನಾದ ತುರುತೊ ||1||

ಸತ್ಯ ಹರಿಶ್ಚಂದ್ರಾನು ತಾನರಿತು |

ಸತ್ಯವು ಬಿಡದಾ ಸತ್ಯ ನುಡಿಗಳು ನುಡಿಯಲಿಲ್ಲಿನಿತು

ಸತ್ಯ ನುಡಿದದರಿಂದ ಸತಿಸುತ

ಮಿಥ್ಯರಾಗಿ ಮತ್ರ್ಯದೊಳಗೆ

ಸತ್ತ ಪ್ರೇತಗಳಿಡುವ ಪೃಥ್ವಿಯ

ಸತ್ಯದಿ ಕಾಯುವದಾಯ್ತು ||2||

ಧರಿಯೊಳಿರೊ ಕರಿಪುರವರ ಧಾತು |

ಧೊರಿ ಧರ್ಮರಾಜನು ಮರಿಯದಲೆ

ಧರ್ಮದಲಿ ನಡಿದಾಯ್ತು

ಕುರುಪಾಂಡವರು ಆಡಿ ಲೆತ್ತ

ಸರ್ವರಾಜ್ಯವು ಸೋಲದಾಯ್ತು

ಎರಡಾರೊರುಷಾರಣ್ಯದಿರುತ

ತಿರಿದು ಮನಿಮನಿ ತಿರುಗೊದಾಯ್ತು ||3||

ನಾನಾ ಜನುಮ ಜನಿಸಿ ಬರೋದಾಯ್ತು |

ಇನ್ನೇನು ಹೇಳಲಿ ಮಾನವ ಜನ್ಮದಲಿ

ಗುರು ದೊರೆತು ಜ್ಞಾನಭಕ್ತಿ ತಿಳಿಸಿ

ನಿತ್ಯಧ್ಯಾನದೊಳು ನೀಧಾನವಿಡಸಿದ

ಜ್ಞಾನಮೂರುತಿ ಕರಿಘೂಳೀಶನ

ಧ್ಯಾನದೊಳು ಸುಜ್ಞಾನವಾಯ್ತು ||4||

ಓ ದೇವ ನಿನ್ನ ಪಾದ ದರುಶನದಿ |

ನಾ ಧನ್ಯನಾದೆನೊ ||ಪಲ್ಲ||

ಕಾಮಕ್ರೋಧ ಹೋಮ ನೇಮ ಪಾಮರ್ಹರಸಿದಿ |

ತಾಮಸಾಂಕುರವ ತರಿದು ಪ್ರೇಮದೋರಿದಿ

ಕಾಮೇಶ ಉಮೇಶ ಭೀಮೇಶ

ಕಾಮ ಸಂಹರನೆ ನಿನ್ನ ನೇಮವಿಡಿಸಿದಿ

ವಾಮ ಭಾಗದಿರವೊ ಸೋಮಧರನ ತೋರಿದಿ ||1||

ಅಂಗನಿಯರ ಹಂಬಲವನು ಭಂಗಗೊಳಿಸಿದಿ |

ಸೂಕ್ಷ್ಮಾಂಗದಿರುವೊ ಅಂಗನೀಯ ಭಂಗಗೊಳಿಸಿದಿ

ಶಿವಭಂಗ ಭವ ಭಂಗ ನಿಜಲಿಂಗ

ಶೃಂಗಾರದ ರಂಗುಮಂಟಪದಿ ನಿಲಿಸಿದಿ

ಕಂಗಳೂರಿನಲ್ಲಿ ಮಂಗಳಾತ್ಮನ ತೋರಿದಿ ||2||

ಕಂಡ ನೋಟಗಳನು ಬಿಡಿಸಖಂಡದೋರಿದಿ |

ಮಾರ್ತಂಡ ತೇಜ ಕುಂಡಲಿಯ

ಅಂಡನರುಹಿದಿ ಅಂಡಾಂಡ ಪಿಂಡಾಂಡ

ಬ್ರಹ್ಮಾಂಡ ಮಂಡಲೀಶ ಪುಂಡ ಕರಿಘೂಳೀಶ ಅರಿಸಿದಿ

ಕಂಡೆನಂಡ ಪಿಂಡದೊಳ್ ಬ್ರಹ್ಮಾಂಡವಿರಿಸಿದಿ ||3||

ಓಂ ನಮಃ ಶಿವಾಯನುವಾ ಹೇ ಮನವಾ |

ಓಂ ನಮಃ ಶಿವಾಯೆಂದು ಒಮ್ಮೆ ನೀನೆನಿಯಲು

ಉನ್ನತ ಪದವೀವ ಹೇ ಮನವಾ ||ಪಲ್ಲ||

ಆರ್ಗುಣ ಅರಿದು ಮೂರ್ಗುಣ ಬಿರಿದು |

ಆರಕ್ಷರದಿಯಿರುವಾ ಹೇ ಮನವಾ ||1||

ಆರು ಚಕ್ರದ ಮ್ಯಾಲ ಬ್ಯಾರೊಂದು ಮನಿನಡು |

ಸೂರ್ಯಪ್ರಕಾಶನ್ಹೊಳೀವಾ ||2||

ಸಂಸಾರದೊಳಿರೊ ಸಂಶಯವೆಲ್ಲವು |

ಧ್ವಂಸ ಮಾಡಿತಲಿರುವಾ ||3||

ಗಂಗೆ ಯಮುನೆ ಮಧ್ಯ ಸಂಗಮದೊಳಗಿದ್ದ |

ಮಂಗಳಾತ್ಮಕ ನುಡಿವಾ ||4||

ಅಕಾರ ಉಕಾರ ಮಕಾರ ಸಕಾರದ |

ಝೇಕಾರೋಂಕಾರ ನಾದವಾ ||5||

ಅಕ್ಷರತ್ರ ಯನಾದ ಅಕ್ಷರರ್ಥವುನಾದ ಅಕ್ಷಾರಶೂನ್ಯ ಶಿವಾ |

ಮೀರಿದುನ್ಮನಿಯೊಳು ಸೇರಿರು ನೀ ಸದಾ ಧೀರ ಕರಿಘೂಳಿವುಸುರುವಾ ||6||

ಶ್ರೀಗುರುವಿನ ನೀ ನೋಡೊ ಮನವೇ |

ಶ್ರೀಗುರುವಿನ ನೋಡೊ ||ಪಲ್ಲ||

ಭೋಗ ಭಾಗ್ಯ ಸ್ಥಿರವಾಗಿಯಿರಿಸು ಶಿವ |

ಯೋಗದೊಳಗೆ ಮನವಾಗು ಮನವೆ

ಶ್ರೀ ತತ್ವ ತತ್ವ ವಿಚಾರಿಸು ಸತ್ಯ

ತತ್ವದೊಳಗೆಯಿರುವಾ ಹತ್ತಾರು ಕಳೆಗಳೊತ್ತಿ

ನಿನ್ನ ಮನ ಚಿತ್ತದೊಳಗೆ ಬೆರಿವಾ

ಹತ್ತು ನಾದದ ಧ್ವನಿ ಮೊತ್ತ ಕೇಳುತಲಿರು

ಸತ್ತು ಚಿತ್ತಾನಂದ ಕಾಣುವ ಮನವೆ ಶ್ರೀ ||1||

ಶ್ರವಣ ಮನನ ನಿಧಿ ಧ್ಯಾಸದೊಳಿರಲು |

ಝಾವ ಝಾವಕ್ಕೆ ಬರುವಾ

ಆವಾಗಲು ಗುರುಸೇವೆಯೊಳಿರು ಶಿವ

ನಾವಾಗಲು ಬರುವ

ಕಾಯುವ ಭಕ್ತರ ಜೀವೋದ್ಧಾರನು

ಜೀವ ಶಿವ ಏಕೋಭಾವದಿ ಮನವೆ ಶ್ರೀ ||2||

ಸಪ್ತ ಸಮುದ್ರದ ಮಧ್ಯದಿ ತಾನು |

ಗುಪ್ತನಾಗಿರುವ ಹತ್ತೆಂಟು ಸಪ್ತ ಚೌಕಿಯ

ಪೈರ ಸುತ್ತಲೆಯಿಟ್ಟಿರುವಾ

ಹತ್ತೆಂಟು ಜವಾನರ ವತ್ತಿ ಪ್ರಭೆಯೊಳೆತ್ತಿ

ಮುತ್ತಿನೊಳಗ ಥಳಥಳ ಹೊಳಿತಿರುವಾ ಶ್ರೀ ||3||

ಗಂಗೆ ಯಮನೆ ಸರಸ್ವತಿಯ ಸಂಗಮದಿ |

ಸಂಗಮೇಶನಿರುವಾ

ಕಂಗಳ ಮಧ್ಯದಿ ರಂಗುಮಂದಿರದಿ

ಮಂಗಲಾತ್ಮನಿರುವಾ

ಮಂಗನಂದದಿ ಭವಭಂಗ ಬಡುವದ್ಯಾಕೊ

ಅಂಗಜಮದಹರ ಅಂತರಂಗದಿಯಿರುವಾ ಶ್ರೀ ||4||

ಈಡಪಿಂಗಳ ನಡುನಾಡಿ ಸುಷುಮ್ನದಿ |

ರೂಢಿಗೀಶನು ಮೆರೆವಾ

ಎಡೆಬಿಡದಲೆ ಸಡಗರದಿ ನಡಿಸೊ ಸೋಹಂ

ಮೃಢನೆಡೆ ಬಿಡದಿರುವಾ

ಬಡಿವಾರವ ಬಿಡು ದೃಢದಡಿಗಳನಿಡಿ

ಬೇಡು ಬೇಡು ಪದವ ಕೊಡುವನು ಮನವೆ ಶ್ರೀ ||5||

ತಾಳ ತಂಬೂರಿ ಸಮಾಳ |

ಸಮ್ಯಾಳದಿ ಲೋಲನಾಗಿರುವಾ

ವ್ಯಾಳ್ಯ ವ್ಯಾಳ್ಯಕೆ ಬಿಡದಲೆ ನುಡಿಯಲು

ಭಾಳಾಕ್ಷನಿರುವಾ

ಮೆಲ್ಲಮೆಲ್ಲನೆ ಮನ ಅಲ್ಲೆ ನಿಲ್ಲಿಸಲಾಗ

ಅಲ್ಲಮಹಾಪ್ರಭುಯೆಲ್ಲರಲ್ಲಿ ಮನವೆ ಶ್ರೀ ||6||

ಮೂರಾರೆರಡ್ಹತ್ತನ್ನೆರಡ್ಹದಿನಾರು |

ಎರಡೊಂದೆ ಮನದಲ್ಲಿ

ಪರಿಪರಿಯಲಿ ಪರಿಪೂರ್ಣ ಜ್ಯೋತಿಯದು

ಸಾವಿರ ದಳದಲ್ಲಿ ಕರಿಘೂಳೀಶನ ನಿಜ

ನಿರ್ಗುಣ ಪಥದಲ್ಲಿ ಸರ್ವಾಕಾರ

ನೋಂಕಾರನು ಮನವೆ ಶ್ರೀ ||7||

ಶ್ರೀಗುರುವಿನ ಮಹಿಮಾ ಗೋಚರಿ ಗೋಚರವೊ |

ಅಂಡನಾದವ ತಾನೆ ಪಿಂಡನಾದವ ತಾನೆ

ಅಂಡಪಿಂಡದ ನಡು ಬ್ರಹ್ಮಾಂಡಾದವ ತಾನೆ

ಖಂಡಿತಾಖಂಡ ತಾನೆ ಶ್ರೀ ||ಪಲ್ಲ||

ಅಕಾರಾದವ ತಾನೆ ಉಕಾರದವ ತಾನೆ |

ಮಕಾರದವ ತಾನೆ ಸಕಾರಾದವ ತಾನೆ

ಝೇಂಕಾರರೋಂಕಾರ ತಾನೆ ಶ್ರೀ ||1||

ಬ್ರಹ್ಮನಾದವ ತಾನೆ ಬ್ರಹ್ಮ ವಿಷ್ಣುವು ತಾನೆ |

ಬ್ರಹ್ಮರಿರುದ್ರ ತಾನೆ ಬ್ರಹ್ಮಸದಾಶಿವ ತಾನೆ

ಬ್ರಹ್ಮಪರಬ್ರಹ್ಮ ತಾನೆ ಶ್ರೀ ||2||

ವಿಘ್ನಾದವ ತಾನೆ ನಿರ್ವಿಘ್ಮನಾದವ ತಾನೆ |

ಪ್ರಜ್ಞಾನಾದವ ತಾನೆ ಸುಜ್ಞಾನಾದವ ತಾನೆ

ಮಗ್ನ ಸರ್ವಜ್ಞನಾದವ ತಾನೆ ಶ್ರೀ ||3||

ಗುರುವಾದವ ತಾನೆ ಗುರುವಿಗೆ ಶಿಷ್ಯನು ತಾನೆ |

ಗುರುವಿನ ಗುರುವು ತಾನೆ ಗುರು ಪರಮಗುರುವು ತಾನೆ

ಗುರುವು ಕರುಘೂಳಿ ತಾನೆ ಶ್ರೀ ||4||

ದೇಶವ್ಯಾತಕೆ ಗುರುವುಪದೇಶವ್ಯಾತಕೆ |

ಆಶೆ ತಪಿಸಿ ಶಿವನಾಸಿಸದವನಿಗೆ ||ಪಲ್ಲ||

ಗುರುಹಿರಿಯರ ಕಂಡು ಚರಣಕೆ ಎರಗದೆ |

ಗುರುವಿಗೆ ತಿರುಮಂತ್ರೇಳುತ

ಬರೆ ಆರು ಶಾಸ್ತ್ರಗಳು ಕೇಳುತ ತಾ

ಸರ್ವರೊಳಗೆ ಹಿರಿಯನಾಗುತ

ಪರನಾರಿಯರವಾರಿ ನೋಟಕ ಮರುಳಾಗಿ

ಪರಿಭವ ಶರಧಿಯೊಳುರುಳುವ ಮರುಳಗೆ ||1||

ವಸುಧಿಯ ಕಸಿಬಿಸಿ ವಿಷಯದಿ ಮುಳಗುತ |

ಪುಸಿನುಡಿಗಳ ಸದನಾಡುತ

ವಿಶ್ವಾಸಘಾತಕರೊಳು ಕೂಡುತ

ಹೊಸ ವಶಿಕರ ವಶವನು ಮಾಡುತ

ಸೂಸುವ ನಾಶಿಕ ಶ್ವಾಸದಿ ಈಶನ

ಧ್ಯಾಸವು ನಡಿಸದೆ ಘಾಸಿಯಾದವನಿಗೆ ||2||

ತತ್ವ ತತ್ವಾದಿ ಸತ್ಯ ತತ್ವವ ಶೋಧಿಸಿ |

ಭಕ್ತಿ ಜ್ಞಾನ ವಶ ಮಾಡದೆ

ಹತ್ತೆಂಟು ಮದಗಳನು ದೂಡದೆ

ಸಪ್ತೇಳು ವ್ಯಸನ ಹಾಳು ಮಾಡದೆ

ತತ್ತರವಿಲ್ಲದುತ್ತರ ದ್ವಾರದಿ ಮನ

ಚಿತ್ತವು ನಿಲಿಸದ ಸತ್ಯ ಮನುಜನಿಗೆ ||3||

ಬಡಿವಾರದಿ ಬಿರುನುಡಿಗಡನಾಡುತ |

ಬಿಡದಲೆ ಜಡರೊಳು ಕೂಡುತ

ಮೃಢನಡಿಯ ಸೇವಕರಿಗೆ ಕಾಡುತ

ಸಡಗರದಿ ಕೈಹೊಡಿದ್ಹಾಸ್ಯ ಮಾಡುತ

ತಡಿದೀಡಪಿಂಗಳ ನಡುನಾಡಿ ಸುಪುಮ್ನದಿ

ರೂಢಿಗೀಶನ ಕೂಡದ ಮೂಢಗೆ ||4||

ಆದಿವೇದದ ಬೋಧ ಕೇಳದನುದಿನ |

ನಿಧಾನದಿ ಸಾಧನ ಮಾಡದೆ

ನಾದಬಿಂದು ಕಳೆಯೊಳಗೆ ಕೂಡದೆ

ವಾದಭೇದ ಕಡಿಗೆ ನಿಲುಕಾಡದೆ

ಮೋದದಿಂದ ಪರದ್ಹಾದಿದೋರಿಸುವ

ಸಾಧು ಕರಿಘೂಳಿ ಪಾದ ನಂಬದ ಅಧಮಗೆ ||5||

ಗುರುವರನ ಸೇವೆ ಮಾಡೊ |

ನರಮನುಜ ಮರಿಯಬ್ಯಾಡೊ ಓಂ ಗುರು ||ಪಲ್ಲ||

ಪೂರ್ವದ ಪುಣ್ಯದಿಂದೆ |

ಅರಿವಿನ ಜನುಮದಿಂದೆ

ಧರಿಯೊಳಗೆ ಜನಿಸಿ ಬಂದೆ

ಹರಯೆನು ಸದಾ ಹರುಷದಿಂದೆ ಓಂ ||1||

ತಾಯ್ತಂದಿ ರಕ್ತಶ್ವೇತ |

ಮಾಯದಿಂದ ಶರೀರವಾಯ್ತು

ಕಾಯ ಸ್ಥಿರವಲ್ಲ ಜಾತ

ಆಯಾಸವಿಲ್ಲ ತ್ವರಿತ ಓಂ ||2||

ವಾದ ಭೇದ ಕಡಿಗೆ ಮಾಡೊ |

ಅದೆ ನಿನಗೆ ಮುಂದೆ ಕೇಡೊ

ಸಾಧು ಸೇವೆ ಮಾಡಿ ಬೇಡೊ

ನಿಜಬೋಧ ಶ್ರವಣ ಮಾಡೊ ಓಂ ||3||

ದಾನ ಧರ್ಮ ನಿಧಾನ ಮಾಡೊ |

ಜ್ಞಾನ ಭಕ್ತಿ ಮನ ನೀಡೊ

ಹೀನಜನರ ಸಂಗ ಬ್ಯಾಡೊ

ಮನದಲ್ಲಿ ಮನೆಯ ಮಾಡೊ ಓಂ ||4||

ವೈರಾಗ್ಯ ದಾರಿ ನೋಡೊ |

ಮೀರೀದ ಪದವಿ ಬೇಡೊ

ಕರುಘೂಳಿ ಪಾದದೊಳಾಡೊ

ನಿರುತದಿ ಮೋಕ್ಷ ನೋಡೊ ಓಂ ||5||

ಕಾಯರಹಿತ ನಿರ್ಮಾಯ ಪರಿಭವ |

ಭಯ ದೂರನಾಗುವದ್ಯಾಂಗಮ್ಮಾ

ಆಯಸಿಲ್ಲದ ಜೀವ ಜಪಿಸುವ ಮಂತ್ರದಿ

ನ್ಯಾಯದಿ ಕೂಡಲು ಹೀಂಗಮ್ಮಾ ||ಪಲ್ಲ||

ಅಷ್ಟಮದೇಳ್ವೆಸನ ನಷ್ಟಗೈದು |

ಶ್ರೇಷ್ಠ ಸೃಷ್ಟಿ ಕಷ್ಟ ಕಳಿವದ್ಯಾಂಗಮ್ಮಾ

ನಿಷ್ಠಿಯಿಂದ ಪವನ ದೃಷ್ಟಿಯನಟ್ಟಿರಲು

ಸೃಷ್ಟೀಶನ ಭೆಟ್ಟಿ ಹೀಂಗಮ್ಮಾ ||1||

ಮೂರಾರು ಅರಿಯದ ಆರು ವರ್ಗಂಗಳ |

ಮೀರಿಹೋಗುವ ದಾರಿ ಹ್ಯಾಂಗಮ್ಮಾ

ಮೂರಾರು ಮೇಲಿರೊ ಅರಮನೆ ಸೇರಲು

ಪುರಹರನರಿವದು ಹೀಂಗಮ್ಮಾ ||2||

ತಾನು ತನ್ನನು ತಿಳಿದು ತಾ ಬ್ರಹ್ಮನಾಗದೆ |

ನಾನೆಂಬೊದಳಿಯುವದ್ಯಾಂಗಮ್ಮಾ

ಮಾಣದೆ ಧ್ವನಿ ಸಣ್ಣ ಕಣ್ಣಾಲೆ ನಿಲ್ಲಿಸಲು

ತಾನೆ ತಾನಾಗುವದ್ಹೀಂಗಮ್ಮಾ ||3||

]ಇಂದ್ರಜಾಲ ದಶಯಿಂದ್ರಿಯಗಳು |

ನೌರಂಧ್ರ ಬಂಧಿಸುವದ್ಯಾಂಗಮ್ಮಾ

ಇಂದ್ರ ದಿಕ್ಕಿನ ರವಿಚಂದ್ರದಿ ಸೇರಲು

ರಾಜಯೋಗೀಂದ್ರನಾಗುವದ್ಹೀಂಗಮ್ಮಾ ||4||

ವಾದ ಭೇದಗಾದ ಮೋದ ನಿಲ್ಲಿಸಿ |

ಪರದ್ಹಾದಿಗ್ಹೋಗುವ ಹಾದಿ ಹ್ಯಾಂಗಮ್ಮಾ

ಆದಿನಾದ ಪ್ರಣಮ ಸಾಧನೆಗೈಯಲು

ಸದ್ಗುರುವಿನ ಕೂಡುವದ್ಹೀಂಗಮ್ಮಾ ||5||

ಅಂತರಂಗರಿಯದ ಪಂಥ ಬಿಡಿಸಿ |

ಸದಾ ಶಾಂತನಾಗುವ ಬಗಿ ಹ್ಯಾಂಗಮ್ಮಾ

ಅಂತಃಕರುಣ ಸುರುಗುರು ಕರಿಘೂಳಿಯ

ಹಂತಿಲಿ ಸೇರಲು ಶಾಂತಮ್ಮಾ ||6||

ನರಜನ್ಮದೊಳು ನಿಜ ಗುರುವು ದೊರೆತ ಮೇಲೆ |

ಪರಿಭವ ಶರಧಿಯೊಳುರುಳುವರೇನೊ

ಪೂರ್ವ ಸುಕೃತದಿಂದ ಸಿರಿ ಬರಲದು ಉಣದೆ

ತಿರುತಿರುಗಿ ಮನೆಮನೆ ತಿರಿದುಂಬುವರೇನೊ ||ಪಲ್ಲ||

ಗುರುವುದೋರಿದ ಮೋಕ್ಷದೆರಡಕ್ಷರಿರಲಿಕ್ಕೆ |

ಬರಿದೆ ಆರು ಶಾಸ್ತ್ರ ತೋರುವರೇನೊ

ಮೂರಾರು ಸ್ಥಲ ಮೀರಿದರ ಮನೆ ಸೇರಿರಲು

ಮೂರಾರು ಪುರಾಣಕ್ಕಾರೈಸುವರೇನೊ ||1||

ಚಿತ್ತ ಚಿನ್ಮಯನ ಬೆನ್ನತ್ತಿ ಹತ್ತಲು ಮನ |

ಮತ್ತೆ ಅತ್ತಲು ಇತ್ತ ಚಿತ್ತಾಗ್ವರೇನೊ

ಹತ್ತು ನಾದದ ಮೊತ್ತ ಸತ್ಯ ಕೇಳುತಯಿರಲು

ಸತ್ತು ಹುಟ್ಟುತೆ ಸಾವು ಎತ್ತಣದಿನ್ನು ||2||

ಸೂಸೊ ನಾಶಿಕ ಶ್ವಾಸದೀಶ ವಾಸಾಗಿರಲು |

ದೇಶ ಕಾಸಿಗಾಸಿ ಘಾಸ್ಯಾಗ್ವರೇನೊ

ಹಸನಾದ ಗುರು ಉಪದೇಶಿಸಿದ ಮೇಲೆ

ವಿಷಯ ಬಯಸಿ ಈಸಿ ಮೋಸಾಗ್ವರೇನೊ ||3||

ಚಕ್ಷು ರೂಪದೊಳಗಿರೊ ನಿಕ್ಷೇಪೇಕ್ಷಿಸುತಿರಲು |

ಪಕ್ಷಿವಾಹನಪ್ರಿಯನೀಕ್ಷಿಸುವರೇನೊ

ಮೋಕ್ಷದಾಯಕ ಕರಿಘೂಳಿ ಸಾಕ್ಷಾತಿರಲು

ಮೋಕ್ಷಪೇಕ್ಷದಿ ಭೀಕ್ಷ ಬೇಡುವರೇನೊ ||4||

ಬಿಡು ಚಿಂತೆ ಯಾಕೆ ಮನುಜಾ |

ಜಗದೊಡೆಯನಿರುವ ಸಹಜ ಓಂ ||ಪಲ್ಲ||

ಯಿಂದೆಮಗೆ ಸಹಾಯರಿಲ್ಲ |

ಯೆಂದೆನುತ ಬಳಲೊದಲ್ಲ

ಚಂದಾದಿ ಪೋಷಿಸಬಲ್ಲ

ಇಂದುಧರನು ಮರೆಯೋಣಿಲ್ಲ ಓಂ ||1||

ನಾರಿಸುತರು ಗತಿಯಿಲ್ಲೆಂದು |

ವರಲುವದು ಏನು ಛಂದೊ

ಮಾರಹರನೆ ಭಕ್ತ ಬಂಧು

ಪುರಹರನ ಸ್ಮರಿಸೊ ನಿಂದು ಓಂ ||2||

ಅಡವಿಗಿಡ ಪ್ರಾಣಿಗಳಿಗೆಲ್ಲ |

ಬಿಡದುಣಿಸಿ ತಣಿಪನಲ್ಲ

ಸುಡುಸೂಡೊ ನಿನ್ನ ಸೊಲ್ಲ

ಮೃಡಕರಿಘೂಳಿಯಿರುವನಲ್ಲ ||3||

ಓಂ ನಮಃ ಶಿವಾಯಯೆಂದು ಒಮ್ಮೆ ನೀ ನೆನೆಯಲು |

ಆ ಮಹ ಘನಪದ ಕೈವಲ್ಯವೊ

ಹಮ್ಮಿನಿಂದ ಪರ ಬ್ರಹ್ಮದೊರಿವನಲ್ಲ

ಸುಮ್ಮನ ಕೂಡುವದಿದು ಥರವೊ ||ಪಲ್ಲ||

ಹಿಂದಕ್ಕೆ ವಿಂಧ್ಯಾದ್ರಿ ಮಂದಮತಿವ್ಯಾಧನು |

ಬಂದ ಮೃಂಗಗಳೆಲ್ಲ ವಧಿಸುತಲು

ಬಂದ ಶಿವರಾತ್ರಿದಿನ ಶಿವನೆಂದು ನೆನೆಯಲು

ಅಂದು ಶಿವಧೂತರವನ ಕೊಂಡೊಯುತಲಿ ||1||

ಶ್ವೇತನೆಂಬುವ ಪ್ರಖ್ಯಾತಿ ಭೂಪತಿ ನಿತ್ಯ |

ಭೀತಿಯಿಲ್ಲದೆ ಜಾತಕಮಲಗಳ

ಆತುರದಲ್ಲಿ ಶಿವನಿಗರ್ಪಿತ ಎನಲಾಗ

ಶ್ವೇತಾನ ಶಿವದೂತ ಕಾದರೇಳೊ ||2||

ತರುಳ ಮಾರ್ಕಂಡೇಯಗೊರುಷ |

ಹದಿನಾರಿರಲು ದುರಿಳೆ ಯಮಪಾಶಾಕೆ ಎಳೆಯುತಿರೆ

ಹರಗುರು ಭವಹರ ಗುರುವೆಂದ ತರುಳಗೆ

ಪರಮ ಪದವಿ ಕೈಸೇರಿತಲಿ ||3||

ಸತಿಸುತರೀಭವ ನಿತ್ಯವೇನು ನಿನಗೆ |

ಎತ್ತಣ ಭಯಪುರ ಹರನಿರಲು |

ಪೃಥ್ವಿಯೊಳತ್ಯಧಿಕ ಸತ್ಯ ಶ್ರೀ ಕರಿಘೂಳಿ

ಗೊತ್ತಿಸಿರುವ ಗುಪ್ತ ಪಥದಲ್ಲಿ ||4||

ತೀರ್ಥಯಾತ್ರೆಗೈವದೇತಕೊ |

ಗುರು ಗುರ್ತಿನೊಳಗಿರಬೇಕೊ ಓಂ ||ಪಲ್ಲ||

ಪರಸತಿಯ ಧನ ಅಪಹರಿಸಿ |

ಪರನಿಂದೆಗಳನು ಬೆಳಸಿ

ಪರರೊಳಗೆ ಶ್ರೇಷ್ಠನೆನಿಸಿ

ಪರಿಭವದ ಸುಖವ ಬಯಸಿ ಓಂ ||1||

ಅಕಾರ ಉಕಾರ ಮಕಾರದಿಂದೆ |

ಓಂಕಾರನಾದ ಬಿಂದೆ

ಅಕಚಟತಪಯಸಂದೆ

ಸಕಾರ ಕಳೆದಿನಿಂದೆ ಓಂ ||2||

ಹಟಕುಟಿಲ ಕಪಟದಿಂದೆ |

ಸಟೆ ನಟಿಸಿ ದಿಟಯಿದಂದೆ

ಪಟುಭಟದಿ ನಟಿಸೆನಂದೆ

ದಿಟ ಸಟಿಯು ಸ್ಪಟಿಕ ಮುಂದೆ ಓಂ ||3||

ಮೂರಾರು ಏಳೆಂಟ್ಹತ್ತರಿದು |

ಮೂರಾರು ಚಕ್ರ ಮರೆದು

ತಾರವರನ ಬೆಳಗಿಲುಳಿದು

ಸ್ಥಿರ ಪರಮನೊಳಗ ಬೆರೆದು ಓಂ ||4||

ಈಡಪಿಂಗಳದಾದಿ ತಡೆದು |

ನಡುನಾಡಿ ನೋಡಿ ಹಿಡಿದು

ಬಿಡದೆ ನುಡಿ ಪ್ರಣಮ ಜಡಿದು

ಮೃಢ ಘೂಳಿ ಪಾದ ಪಿಡಿದು ಓಂ ||5||

ಹಿಂದಿನ ಶರಣರ ನಿಂದಿಸಿದ |

ಮಂದಮತಿಗ್ಯಾವ ಬಂಧನ ಹೇಳಯ್ಯ

ಎಂದಿಗು ಅಂದದ ದಂದುಗದೊಳು

ಮಹಾಂಧ ಹಂದ್ಯಾಗುವ ಕೇಳಯ್ಯ ||ಪಲ್ಲ||

ಪತಿವ್ರತೆಯರ ವ್ರತ ಗತಿಗೆಡಿಸಿದ |

ಘನ ಘಾತಕಗ್ಯಾತರ ಶಿಕ್ಷೆ ಹೇಳಯ್ಯ

ಗತಿಯಿಲ್ಲದ ಮತಿಹಿತ ಹೀನನಾಗುತ

ಕೋತಿ ಜಾತ್ಯಾಗುವ ಕೇಳಯ್ಯ || ||1||

ಕೂಡಿದ ಸತಿಪತಿ ಬಿಡಿಸಿದ ಮೂಢಗೆ |

ರೂಢಿಯೋಳ್ಯಾಜಾಡಿ ಹೇಳಯ್ಯ

ಕಾಡಡವಿಲಿ ದೊಡ್ಡ ಬಡಗಿಡನಾಗುತೆ

ಜಡ ಕಾಲಕಳಿಯುವ ಕೇಳಯ್ಯ || ||2||

ಭವಭವದೊಳು ಹುಟ್ಟಿ ಶಿವ ನೆನಿಯದ |

ಮಾನವಗ್ಯಾವ ಭವಣಿಯು ಹೇಳಯ್ಯ

ಭವದೊಳು ರವಿಚಂದ್ರರಿರುವ

ತನಕಲು ರವರವ ನರಕವು ಕೇಳಯ್ಯ || ||3||

ಅರುವಿನ ನರಜನ್ಮ ಜನಿಸಿ ಶ್ರೀಗುರು ಚರಣ |

ಮರೆದರ್ಯಾದಾರಿ ಕರಿಘೂಳಯ್ಯ

ಪರಮಪಾವನ ಪರಬ್ರಹ್ಮನೋಳ್ಸೇರಿರು

ಮುರುಗೀಂದ್ರ ದಾರ್ಯವರಿಗಿಲ್ಲಯ್ಯ || ||4||

ಯಾತಕ್ಕೆ ಚಿಂತಿಯ ಮಾಡುವೆ ಎಲೆ ಮೂಢ |

ಪತಿತ ಪಾವನ ಗುರುಪಾದ್ಹಿತದಿ ಕೊಂಡಾಡೊ

ಸತಿಸುತರ್ಹಿತಕ್ಕಾಗಿ ವೃಥ ವ್ಯಥೆ ಬಿಡುಬ್ಯಾಡೊ

ಹಿತವಾದ ಪಥ ಸತತ ಶಾಂತನೊಡಗೂಡೊ ||ಪಲ್ಲ||

ಸಣ್ಣದು ದೊಡ್ಡದೆಂದೆಣಿಸಿ ದಣಿಯಲಿಬ್ಯಾಡ |

ಸಣ್ಣನಾದ ಬಿಂದು ಕಳೆಯೊಳಗಾಡೊ

ಸಣ್ಣ ಕುಂಬಾರನ ಗಡಿಗಿ ಶಬ್ದಕ್ಕೆ

ಮುಕ್ಕಣ್ಣ ಕುಣಿದ ಕಣ್ಣಾರೆ ನೀ ನೋಡೊ ||1||

ಸಡಗರ ಸಂಪತ್ತು ದೃಢವೆಂದಡರಲಿ ಬೇಡ |

ಝೆಡೊದ್ಹಿಡಿದೆ ಯಮದೂತರ್ಹೊಡಿವಾಗಿಲ್ಜೋಡೊ

ತಡಿದೀಡಪಿಂಗಳ್ನಡುನಾಡಿ ಸುಷುಮ್ನದಿ

ರೂಢಿಗೀಶನ ಕೂಡ್ಯಾಡಿ ನೀ ನೋಡೊ | ||2||

ಮೂರಾರೇಳೆಂಟ್ಹತ್ತರಿದಾರಿ ಸೇರಲು |

ಮಾರಾರಿ ಕರಪಿಡಿವ ಪರಿಹಾಸ್ಯ ಬೇಡೊ

ಪರಮ ಪರತರ ಪೂರ್ಣ ನರಮನಿ ಸೇರಲು

ತಾರಕ ಬ್ರಹ್ಮನ ನಿನ್ನೊಳೊಡಗೂಡೊ ||3||

ಚಕ್ಷುಪದೊಳಗಿರೊ ನೀಕ್ಷೇಪೇಕ್ಷಿಸಲಾಗ |

ಪಕ್ಷಿವಾಹನ ಸಖನಾಕ್ಷದಿ ಮೂಡೊ

ಮೋಕ್ಷ ಗುರುವು ಸಾಕ್ಷಾತ ಕರಿಘೂಳಿರಲು

ಮೋಕ್ಷಪೇಕ್ಷದಿಂದೆ ಯೀಕ್ಷಿಸುವರೇನೊ ||4||

ಎಂಥ ಸೋಜಿಗವಾಯಿತೇಳಮ್ಮಾ |

ಯಿಂದರಂತರಂಗದ ಅಂತು ತಿಳಿದರೆ ಶಾಂತ ತಾನಮ್ಮಾ

ಪಂಥವಿಲ್ಲದೆ ನರಸಂತಿಗೆ ಬಂದು

ಮನ ಭ್ರಾಂತಿ ಕಳಿದರಿದರಂತು ತಿಳಿಯುವದು

ಅಂತುಯಿಂತು ಎಂತಾದಯೆನುವದೇಕಾಂತದಿ

ನೋಡು ನಿನ್ನಂತಿಲದಮ್ಮಾ ||ಪಲ್ಲ||

ಕೋಣಗಳೆಂಟು ನೊಣವಂದು ಕಾಣಿಸಿತೋ |

ಆ ನೊಣವು ಕಂಡು ಕೆಣಕಿ ರಣದೊಳ್ಹಗರಣಾಗಿತ್ತೊ

ಆ ನೊಣವು ತನ್ನ ಗೆಣಿಯ ಗೌಳಿಯಗ್ಹೇಳಿ ಕರೆತಂತೊ

ಸಣ್ಣದಾದ ನೊಣ ಒಂದು ಬಾಣದಲಿ ಕೋಣಗಳನು

ನಿತ್ರಾಣ ಮಾಡಿಗಿಣಿ ಬಾಣದ ಕಳೆಯೋಳ್ಪ್ರಾಣ ಬಿಟ್ಟವು

ಪ್ರವೀಣನಾದ ನೊಣ ಈ ಹರಣ ಗೆದ್ದಿತೊ ||1||

ಇಲಿಯು ಒಂದು ಮಾರ್ಜಾಲವನೇರಿತ್ತೊ |

ಆ ಇಲಿಯ ಕಂಡು ಹುಲಿಗಳೇಳರ ಬಲವನಡದಿತ್ತೊ

ಆ ಇಲಿಯು ತನ್ನ ಗೆಳೆಯ ಸ್ವಾನುಭಾವಗೆ ಕರತಂತೊ

ಬಾಲ ಕುರಿಗಳ ನೋಡಿ ಹುಲಿಗಳ ಕಾಲು ಕೈಗಳು

ಮೊದಲಿಗ್ಹೋದವು ಏಳಲಾರದಾತುರ ಮರಿ

ಬೇಗ ಬಂದಿಲಿ ಹುಲಿಗಳ ನೋಡದಾನಂದವಾಯಿತು ||2||

ಎಂಟುಮಂಟಪ ನಡುಗಂಟಿಯ ನುಡಿತಿತ್ತೊ |

ಆ ಗಂಟಿಯ ನಾದ ಮನ ಅಂಟದ ನೆಲೆ

ಮೂಲೋಕುಂಟು ಮಾಡಿತ್ತೋ ಟೆಂಟಿಣಿಸಿ

ಜಂಟಿ ಸ್ವರಗಳಂಟಿ ಮೂಲೋಕುಂಟು ಮಾಡಿತ್ತೋ

ಕುಂಟ ಕಿವಿಲ್ಲದಲುಂಟು ಕೇಳಿ ವೈಕುಂಠಕ್ಹೋಗಿ

ಭವ ಕಂಟದಾಟಿದನು ಭಂಟನಾದ ಕರಿಘೂಳಿ

ನಾಂಟಿಸಿದನುಂಟು ಮಾಡಲು ತನ್ನಂಟಿರುತಿತ್ತು ||3||

ಎಲ್ಲಿ ನೋಡಿದರಲ್ಲಿ ಅಲ್ಲಮನಿರುತಿರೆ |

ಇಲ್ಲಲ್ಲಂಬುವರಿವರ್ಯಾರೊ

ಕಲ್ಲಿನಂತ ಮನ ಬೆಲ್ಲ ಮಾಡಿ

ಶಿವ ನಿನ್ನಲ್ಲಿ ತೋರುವರಿವರ್ಯಾರೊ ||ಪಲ್ಲ||

ವಿಷಯಾಶಿಸಿ ಘಾಶಾಗದು |

ಕಂಡುಪದೇಶಿಸಿ ಬಿಡಸಿದವರ್ಯಾರೊ

ಸೂಸುವ ನಾಶಿಕ ಶ್ವಾಸದಿ

ಈಶನ ಧ್ಯಾಸವ ನಡಿಸುವರಿವರ್ಯಾರೊ ||1||

ಗಂಗೆ ಯಮುನೆ ಸರಸ್ವತಿಯ ಸಂಗ |

ಮಹಾಲಿಂಗ ಸ್ನಾನಗೈಯುವರ್ಯಾರೊ

ಅಂಗಮರಸಿ ನಿಜ ಕಂಗೊಳೊಳಗೆ

ಶಿವಲಿಂಗ ಪೂಜೆಗೈಸುವರ್ಯಾರೊ ||2||

ಅಷ್ಟಮದೇಳ್ವೆಸನ ನಷ್ಟ ಮಾಡಿ |

ಸೃಷ್ಠಿ ಶ್ರೇಷ್ಠ ಕಷ್ಟ ಬಿಡಿಸುವರ್ಯಾರೊ

ಅಷ್ಟದಳದಿ ನಿಜಗೊಷ್ಠಿಯ ಕೇಳಿ ಸದಾ

ಸೃಷ್ಟಿಗೀಶನ ತೋರುವರ್ಯಾರೊ ||3||

ಅರ್ತಿಯಿಂದ ಗುರುಪಾದವನರ್ಚಿಸಿ |

ತೀರ್ಥಪ್ರಸಾದ ಪೂರ್ತಿಪರ್ಯಾರೊ

ಮತ್ರ್ಯದಿ ರಾಜಪುರ ಕರಿಘೂಳಿ ಕರುಣವ

ಅರ್ತು ಧ್ಯಾನಿಸುವರಿವರ್ಯಾರೊ ||4||

ಕರ ತಾರೆ ಕಾಮಿನಿ ಕಮಲನಾಭನ ಪ್ರಿಯನ |

ಮರೆದಿರಲಾರೆನು ತೋರೆ ಸುಮನಾ

ಪರಿಪರಿಯಲಿ ಸ್ಮರಶರ ಬಾಧೆಗೊಳಗಾದೆ

ವಾರಿಗವರಿಗೆನ್ನ ದೂರು ಮಾಡದೆ ಸದಾ ||ಪಲ್ಲ||

ಆರಾರಿಲ್ಲದು ಕಂಡು ಆರಮನಿಯೊಳು ಬಂದು |

ವಾರಿಗಣ್ಣಿಲಿಯೆನ್ನ ಶಿರಿ ನೋಡಿದ

ಬಾರೆನ್ನುತಲಿ ತನ್ನ ಕರದಿಂದ ಕರ ಪಿಡಿದ

ಪರಪರಿಯಲಿ ನಿಜ ಬೋಧರುಹಿ ಮರುಳು ಮಾಡಿದ

ಅರಿಯದವಳು ನಾನು ಕರೆದೊಯ್ದ ಮಾಲಿನೊಳಗ

ಗುರು ಕುಚಕುಗುರೊತ್ತಿ ಪರವಶ ಮಾಡಿದವನ ||1||

ಮೆಚ್ಚಿ ಎನ್ನಯ ರೂಪಯಚ್ಚರಗೊಳಿಸಿದ |

ಹುಚ್ಚನಾದೆನು ಅವನ ಆ ನಿಚ್ಚ ನುಡಿಗೆ

ನಿಶ್ಚಯ ಬಿಡದೆ ಕಣ್ಮುಚ್ಚಿ ನೋಡಂದನೆ

ಗಚ್ಚುಟ್ಟ ಸೀರಿ ಗಂಟುಚ್ಚಿ ಸಡಲಿಸಿದನೆ

ಹಚ್ಚಿಯೆದಿಗೆದಿ ಗಲ್ಲಕಚ್ಚಿ ಅಚ್ಚರಿಗೊಳಿಸಿ

ಎಚ್ಚರತಪ್ಪಿ ಶಿವನೆಂಬ್ಹುಚ್ಚು ಹಿಡಿಸಿದವನ ||2||

ಕೆಂಡನಂದದಿ ಗಂಡ ಭಾವಮೈದುನರವರು |

ತಂಡತಂಡದಿ ಷಂಡನಾಗ್ಹೋದರೆ

ಪಂಡಿತ ಮಾವತ್ತೆ ಮುಂಡೆ ಬೋಳಿಸಿಕೊಂಡರೆ

ಅಖಂಡ ಪುರುಷನ ಕಂಡು ಬೇಗನೆ ಕರ ತಾರೆ

ಕೊಂಡೊಯ್ದೆನ್ನ ಮಹಾರ್ತಂಡ ಮಂಡಲ

ಶಶಿಮಂಡಲದಿ ನಿಜ ಸೌಖ್ಯದೋರಿದ ಘೂಳೀಶನಾ ||3||

ಬಾರೊ ಮುರಹರಿಪ್ರಿಯ ದೂರಲಿರಿಸುವರೇನು |

ಸ್ಮರಶರ ಹರಿಸಿ ಪರಸುರತದೋರೊ

ನೀನಿರದರಘಳಿಗಿರುಲಾರರ ಮನೆಯೊಳು

ಸುರನಾರಿ ಮೊರಿಕೇಳಿ ಕರುಣದಿಂದರ ಮನೆಗೆ ||ಪಲ್ಲ||

ವಾರಿಗಿಯವರೆನ್ನ ಪರಿಹಾಸ್ಯಗೈವರೊ |

ಮೋರ್ಯಾಂಗ ತೋರಲೀಧರೆಯೊಳಿರಲಿ

ಮಾರಮಣಯೆನ್ನ ಮಾರಮಾರನೆ ಬಾರಿಲ್ಲಿ

ಬೆರಿದೆನ್ನ ಬೆದರದಿರೆಂದು ಕರ ಶಿರದಲ್ಲಿ

ಪರಮ ಪರತರನೊಳು ಸೇರಿ ಸುಖಿಸುವೆನೆಂದು

ದೂರದಿರುವಳೆನ್ನಗಾರು ಮಾಡದೆ ಸದಾ ||1||

ಚಿತ್ತದೊಲ್ಲಭ ನೀನು ಇತ್ತಿರದೆ ಅತ್ತಲಿರೆ |

ಹೊತ್ತ್ಯಾಂಗಗಳಿಯಲಿ ಕತ್ತಲೊಳಗೆ

ಮತ್ತೆನ್ನ ಮನದ ಗೊತ್ತು ಬಿತ್ತರಿಸಲಾಗೆ

ಕತ್ತಲ ಹರಿಸಿ ಸೌಖ್ಯದೋರಲಿ ದಾರಿಗೆ

ಮತ್ತು ನೀನಿಲ್ಲದ ಜಾಣಿ ವ್ಯರ್ಥ ಪೃಥ್ವಿಯವಳಗ

ಸಾರ್ಥಕ ಮಾಡು ಜನ್ಮ ಸತ್ತು ಚಿತ್ತಾನಂದ ||2||

ಅಂದ ಚಂದಗಳೆನಗೊಂದು ಬೇಕಾಗಿಲ್ಲ |

ತಂದೆ ತಾಯಿಯು ಬಂಧು ಬಳಗವಿಲ್ಲ

ಬಂಧುರದ ಭಾವ ಮೈದುನರೆಂದಿಗಿಲ್ಲ

ಎನ್ಮಂದಿ ಮಕ್ಕಳು ಮೊದಲೆನಗೆಂದಿಗಿಲ್ಲ

ಹಿಂದೆ ಮುಂದಿಲ್ಲ ಗೋವಿಂದ ನೀನಲ್ಲದೆ

ಅಂದಿಂದೆನ್ನದೆ ಬಾ ಬ್ರಹ್ಮಾನಂದನಂದಾನೆ ||3||

ಎಣ್ಣಿಹೋಳಿಗೆ ಮಾಡಿ ಸಣ್ಣ ಶಾವಿಗಿ ಬಾನ |

ಚಿನ್ನದ ತಳಿಗಿಯಲೆಡಿ ಮಾಡಿದೆ

ಉನ್ನತ ಬೆಣ್ಣಿ ಕಾಸಿದ ತುಪ್ಪ ನೀಡಿದೆ

ಹುಣ್ಣಿವಿಚಂದ್ರ ಬರುತಾನಂತ್ಹಾದಿ ನೋಡಿದೆ

ಬಣ್ಣಗಾರನೆ ನಿನ್ನಧವಳ ಬಣ್ಣೇನು ವರ್ಣಿಸಲಿ

ಕಣ್ಣು ತೆರೆದು ನೋಡಿ ಸಣ್ಣವಳ ಮನೆಗೆ ||4||

ನಿಲಗನ್ನಡಿ ಮೇಲ್ಮಹಲಿನೊಳು ಮಂಚವನ್ಹಾಕಿ

ಮಲ್ಲೀಗಿ ಕಮಲಾಸನ್ಹಾಕಿದ್ದೇನೆ

ಬೆಳಗೂವ ನೀಲ ಜ್ಯೋತೆರಡು ಉಳಸಿದ್ದೆನು

ಸುಳಿಗಾಳಿ ಬರುವೊ ಕಿಡಿಕಿಗಳಿರಿಸಿದ್ದೆನು

ವ್ಯಾಳ್ಯ ವ್ಯಾಳ್ಯದಿ ನಿನ್ನ ಕಳೆಯು ಕಾಣೀಸೊ

ಕರಿಘೂಳೀಶ ಬಾಲಿಯಳೀಗೊಲಿಯೊ ಮರಣ ವಿದೂರ ||5||

ಸುಮ್ಮನಾಗುವದೇನು ನಿಜಮುಕ್ತಿ |

ಸುಜ್ಞಾನ ಸುಭಕ್ತಿ || ||ಪಲ್ಲ||

ಹಮ್ಮಿನ ನುಡಿಗಳು ಒಮ್ಮೆ ನೀ ನುಡಿಯದೆ |

ಒಮ್ಮೆ ಓಂ ನಮಃ ಶಿವಾಯ ಎನದೆ

ಸೋಹಂ ಸೋಹಂಯೆಂದು ಮಂತ್ರ ಯೋಗದಲಿ

ಬ್ರಹ್ಮನಾಗಿ ಪರಬ್ರಹ್ಮನೋಳ್ಸೇರದೆ ||1||

ದಿಟವು ಸಂಸಾರೆಂಬ ಹಟ ಬಿಡಸಿ |

ಕಟಿಕಟೆಯನು ತಟಿಸಿ ದಿಟದಿ ಪಟುತರ ನಿಟಿಲ

ಕಟಿತಟಿಸಿ ಕುಟಿಲ ಕಪಟ ಹಟ ಬುಕುಟಿಯ ಮಾಡದೆ

ತುಟಿ ಮಿಸುಕದೆ ನಿಟಿಲಾಕ್ಷನ ಪಠಿಸದೆ

ನಿಟಿಲ ವಾಯ್ಹಟಯೋಗ್ಹಟವನುಗೈಯದೆ

ನಿಟಿಲದೊಳಗೆ ನಿಟಿಲಾಕ್ಷನ ಮುಟ್ಟಿಸದೆ ||2||

ಮೂರಾರರಿ ಶಿರತರಿಯದಲೆ ಮರಿದು |

ಮೂರಾರು ಸ್ಥಲದೊಳಗಿರುವ ಅರಮನೆ

ಅರಸನೋಳ್ಬೆರೆದು ಪರಮನಾದಬಿಂದು ಕಳೆ

ಪರಪರಮನೊಳು ಪರಿಪೂರ್ಣನಾಗಿರದೆ

ಪರಮ ಪರತರ ಕರಿಘೂಳೀಶನ

ಕರುಣ ಮರೆದ ನರ ಮರುಳನಿಗೆ ||3||

ಧರೆಯೊಳು ಸ್ಥಿರವೇನೀ ಕಾಯ |

ಅರಘಳಿಗೆಯಲಾಗೋದನ್ಯಾಯ

ಧರೆಯೊಳು ಸ್ಥಿರವೆ ನೀರಗುರುಳಿಯಿದು

ಮರುಳಿ ಕನಸಿಲಿ ಶಿರಿ ಕಂಡ ಪರಿಯೊ ||ಪಲ್ಲ||

ಆಗಯೀಗ ಯಾವಾಗೇನೊ |

ನಿನಗೋಗದು ತಿಳಿಯದಿಲ್ಲಿನ್ನು

ಯಾವಾಗದರೇನ್ಹೋಗದು ತಪ್ಪದು

ಬೇಗದಿಂದೆ ಶಿವಯೋಗಿಯಾಗು ||1||

ಅಳಿದು ಬಿಡೊ ದುರ್ಗುಣವ |

ಸದಾ ಕೇಳು ನಾದ ಕೊನಿ ಘನವ

ಮೇಲು ಸದ್ಗುರುವಿನ ಕೀಲು ತಿಳಿಯದಲೆ

ಕಾಲವು ಸುಮ್ಮನೆ ಕಳೆಯುವದೇನೊ ||2||

ಶಾಂತ ಮನವು ಸ್ಥಿರಗೊಳಿಸಿ |

ವೇದಾಂತ ವಿಚಾರವ ನಡಿಸಿ

ಅಂತರಂಗದಿರೊ ಅಂತರಾತ್ಮನ

ಪಾದಂತು ಭಜಿಸೊ ನಿರಂತರದಿರುವಾ ||3||

ಸುಖ ದುಃಖೆಂಬಿವು ಎರಡು |

ಯಾವ ಕಾಲದಿ ಇರುವವು ಜೋಡೊ

ಸುಖದುಃಖಯರಡು ಸ್ಥಿರವಿಲ್ಲ ನೋಡೊ

ಶ್ರೀ ಕರಿಘೂಳಿಯ ಪಾದದೊಳಾಡೊ ||4||

ಜ್ಞಾನಿ ಜೋಡಿಲಿ ಮಿಥ್ಯ ಜ್ಞಾನಿಯಿರಲು ತನ್ನ |

ಹೀನಗುಣ್ಹಳಿದು ಪ್ರಜ್ಞನಾಗಬಹುದೆ

ಕನ್ನಡಿಯದು ಕಣ್ಣು ಕಾಣದವನಲ್ಲಿರಲು

ತನ್ನ ರೂಪವು ಕಾಣಲುಬಹುದೆ ||ಪಲ್ಲ||

ಕಮಲ ಸುವಾಸನಕೆ ಭ್ರಮರ ದೂರದಿ ಬಂದು |

ಕಮಲ ಸಾರವು ಹೀರಿ ವಿಮಲವಾದಂತೆ

ಕಮಲ ಬುಡದಡಿ ಮಹಾ ಮಂಡೂಕ ಸೇರಿರಲು

ಕಮಲ ಸಾರವನುಳಿದ್ಹೊಲಸು ಜಲವ ಸೇವಿಪದೊ ||1||

ಹಾಲಿನೊಳಮೃತವಡಗಿರುವ ಹಾಲನು |

ಬಾಲ ತುರುಕರು ತಾನೊಲಿದು ಸೇವಿಪದೊ

ಹಾಲು ದ್ವಾರದಿ ಮೊಲಿಯ ಮೇಲಿರುವ ಉಣ್ಣಿಯು

ಹಾಲನುಳಿದು ಶೋಣಿತವನುಣ್ಣುತಿಹುದು ||2||

ಕಾಗಿಕೋಗಿಲೆ ಒಂದೆ ಜಾಗದುದಸಿ ಬೆಳಿಯೆ |

ಕೋಗಿಲ್ವನಾಂತರದಿ ಫಲ ಹಾರಿಸುವದು

ಕೋಗಿಲ ಭುಜಿಸುವ ಸುಫಲ ಕಾಗೆ ಅರಿಯುವದೆ

ರೋಗಿ ಭೋಗಿ ಶಿವಯೋಗಿಯನಹುದೆ| ||3||

ಜ್ಞಾನಿ ಅಜ್ಞಾನಿಯು ಖೂನನರಿತು ಜಾಣ |

ಜ್ಞಾನಿ ಸ್ವಾನುಭಾವದನುವಾಗಿರುವದೊ

ಜ್ಞಾನ ಮೂರುತಿ ಕರಿಘೂಳಿಯ ಕರುಣದಿ

ಜ್ಞಾನ ಸುಜ್ಞಾನ ಸರ್ವಜ್ಞ ತಾನಹುದೊ ||4||

ಬ್ರಹ್ಮವು ನೀನೆಲೊ ಸದಾ |

ಪರಬ್ರಹ್ಮವು ನೀನೆಲೊ ||ಪಲ್ಲ||

ಬ್ರಹ್ಮ ನೀನೆಲೊ ಹಮ್ಮೊಮ್ಮಿಗೆ ನೆನಿಯದೆ |

ಸೋಹಂ ಸೋಹಮ್ಮೆಂದು ಸುಮಾನವಿರಲು ||1||

ಆರು ನಾನೆಂದು ವಿಚಾರಿಸಿ ತೋರುವದರಿದು |

ಗುರುವರ ಬರಿದು ಸಾರುವ ಶೃತಿ

ಸುರಪರಮ ಗುರುವಿನೋಳ್ಬೆರೆದು

ಅರುವನು ಅರಿದು ನಾರಿಸುತರು ಸಂಸಾರ

ಸಾರವಿದು ಬರಿದು ಆರಿಲ್ಲಿರೊದು

ಆರುಸ್ಥಲದಿ ಆರೊರ್ಗಗಳರಿದು

ಆರಕ್ಷರವ ನುಡಿದರಮನೆ ಸೇರಲು ಬ್ರಹ್ಮ ||1||

ಆಸನದೊಳು ಕಮಲಾಸನೇಕಾಂತದಿ ಹಾಸಿ |

ಮನ ಸ್ಥಿರಗೊಳಿಸಿ ಸೂಸುವ ನಾಶಿಕ

ಶ್ವಾಸದಿ ಈಶನ ನೆಲಿಸಿ ನಲಿದಾಲೆ ನಿಲಿಸಿ

ಈಶನ ಥಳಥಳ ಬೆಳಗಿಲಿ ಶಶಿಗಾಸಿ ಆಶಿಸುವಾಸಿ

ಹೇಸಿ ಕಾಯಕೆಮಪಾಶ ಪುಸಿಯು ಸಣ್ಣ

ಕೂಸನಾಗಿ ಜಗದೀಶನ ಭಜಿಸಲು ||2||

ಪಕ್ಷವಾಹನ ಪ್ರಿಯ ತಕ್ಷಣ ಭರಣನ ಧ್ಯಾಸೆ

ನುಡಿಸುಪದೇಶ ದಕ್ಷ ಶಿಕ್ಷಪಿತನಾಕ್ಷಣದಿಳಿವನು ಸರಸೆ

ಮರಗಳನಿರಿಸೆ ಚಕ್ಷೂಪದೊಳಗಿರೊ

ನಿಕ್ಷೇಪೇಕ್ಷಿಸಲು ಸೊಗಸೆ ಈ ಕ್ಷಣದೊಲಿಸೊ

ಕಕ್ಷಪೇಕ್ಷದಿ ಮೋಕ್ಷ ಬಿಕ್ಷೆ ಬೇಡುವರೇನೊ

ಸಾಕ್ಷ ಶ್ರೀ ಕರಿಘೂಳೀಗೀಕ್ಷಿಸಲು ||3||

ಕಾಸಿಗ್ಹೋಗ್ವದ್ಯಾಕೊ |

ತೀರ್ಥ ತಂದು ಬ್ಯಾಸರಾಗ್ವದ್ಯಾಕೊ

ಸೋಸಿ ನೋಡಿ ಭವದಾಸೆ ತ್ಯಜಿಸಲು

ಕಾಶಿತೀರ್ಥ ತನ್ನ ಕಣ್ಣೊಳಗಿರುವದು ||ಪಲ್ಲ||

ಅಂಗದೊಳಗ ಹರಿವ |

ನದಿಗಳ ಸಂಗಮ ಸನಿಯಿರುವ

ಗಂಗೆ ಯಮುನೆಗಳು ತುಂಬಿ ಬರುವ ನಡು

ರಂಗುಮಂದಿರದಿ ಮಹಾಲಿಂಗನೆಯಿರಲು ||1||

ಭಾವದೊಳಗಯಿರುವ ಶಿವನ |

ಜೀವ ತಿಳಿಯದಿನ್ನು

ಜೀವಗುಣಗಳ ಭಾವ ಕಳೆದು ಮಹಾ

ದೇವ ಬ್ರಹ್ಮ ಪರಬ್ರಹ್ಮನೆಯಿರಲು ||2||

ನಾಶಿಕ ಶ್ವಾಸದಲ್ಲಿ ಕಾಶಿ ನಿವಾಸ |

ವಾಸಿಸಿರಲು ಹೇಸಿ ಪುಸಿಯು

ಯಮಪಾಶ ಫಾಸಿಪದೆಂದು

ಕಾಶಿಗ್ಹೋಗ್ವಿರಿ ನಿಮ್ಮಲ್ವಾಸವಾಗಿರಲು ||3||

ಬಂಡೆಲಿಂಗಜಾತ ಶಂಕರಗಂಡ |

ವೀರಧಾತ ಪಂಡಿತ ಗುರು

ಮಾರ್ತಂಡ ಕರಿಘೂಳೀಶ

ಖಂಡಿತರಾಮುರಗೀಂದ್ರನೆ ಇರಲು ||4||

ಕಾಮ ಮರಿವದೊಂದು ನೇಮಿರುವದು |

ಶ್ರೀರಾಮ ರಾಮ ರಾಮೆನು ಮನವೆ

ಪ್ರೇಮದಿ ಸದ್ಗುರು ನೇಮಿಸಿದಾಶಿವ

ನಾಮ ನೇಮದಿರು ಎಲೆ ಮನವೆ ||ಪಲ್ಲ||

ಭವಭವದೊಳಗ್ಹುಟ್ಟಿ ನಾನಾವನೆಂಬುವನು |

ಭಾವವು ತಿಳಿಯದಲಿದು ಘನವೆ

ದೇವದೇವ ಮಹಾದೇವ ನಿರಂಜನ

ನಾವಾಗಲಿರುವನು ತನುವಿಲವೆ ||1||

ಧನಧ್ಯಾನ ಗೃಹ ಬೇಡುವದ್ಯಾತಕೆ |

ಘನವೇ ನಿನಗೆ ಬಿಡು ಛೀ ಮನವೆ

ತನ್ನೊಳಿರಾ ತನ್ಮ ಧ್ಯಾನವೇ ತನಗೆ

ಘನ ಧನಗಂಟಿದ ಯಲೆ ಮನವೆ ||2||

ಹೊನ್ನು ಹೆಣ್ಣು ಮಣ್ಣು ಬಣ್ಣವ ಕಾಣ್ವದು |

ಮಣ್ಣೊಳು ಕೂಡುವದಿದು ಮನವೆ

ಹುಣ್ಣಿವಿ ಚಂದ್ರನ ತಣ್ಣನ ಬೆಳಕಿಲಿ

ಕಣ್ಣು ತೆರೆದು ನೋಡೆಲೆ ಮನವೆ ||3||

ಕುಟಿಲ ಕಪಟ ಹಟ ಸಟಿಯನು ಮಾಡು ದಿಟ |

ಸ್ವಟಿಕತೇಜ ನೋಡಲೆ ಮನವೆ

ಘಟಿತದಿ ಶ್ರೀ ಕರಿಘೂಳೀಯ ಚರಣ ಕರುಣವ

ಸಟಿಯಲ್ಲ ಧಿಟ ಧಿಟ ಹಿಡಿ ಮನವೆ ||4||

ಗುರುವು ಬರುತಾನೆ ಶ್ರೀ ಸುರುಗುರುವು ಬರುತಾನೆ |

ಗುರು ತರುತಾನೆ ಸುರಲೋಕದಮೃತವ ಸರ್ವಭಕ್ತರಿಗಿತ್ತು

ಪರಿಪಾಲಿಸುವದಕ್ಕೆ ಇಳಿಯೊಳಗಿರೊ ಕಷ್ಟ

ಕಳೆಯುವ ಕಾಲಕಾಲ ಶ್ರೇಷ್ಠ

ಬೆಳೆಯುವ ಮಾಯಿ ಮಕ್ಕಳ ಜಗಳರಿಸುವ

ಮೂಲೋಕದೊಳಗಾದಿ ಮೂಲವಾದ ||ಪಲ್ಲ||

ಸುಳ್ಳೆ ಸುಳ್ಳೆನ ಬೇಡಿರಾತನ |

ತಾಳಿ ಕಳಿಯೊಳಗಾಡಿ

ಅಲ್ಲಮಹಾಪ್ರಭುಯಲ್ಲರ ಕಾಣುತ

ಖುಲ್ಲ ಜನರ ಸೊಲ್‍ಹಲ್ಲು ಮುರಿವ ಶ್ರೀ ||1||

ಶರಣರ ನಿಂದಿಸುವ ಮರುಳರ |

ಶರೆಹರಿ ಸುರವರನು

ಪರಿಪರಿಯಲಿ ಪರತತ್ವವ ಬೋಧಿಸಿ

ಪರತರ ಬ್ರಹ್ಮನೊಳ್ಸೇರಿ ಸುಖಿಸೊ ಶ್ರೀ ||2||

ಈ ಜಗದೊಳು ಮೆರೆವ |

ರಾಜೋಳಿಯಲಿ ರಾಜಯೋಗದಿರುವ

ರಾಜರಾಜ ಮಹಾರಾಜ ಶ್ರೀ ಕರಿಘೂಳಿ

ತೇಜ ಪ್ರಜ್ವಲಿಪ ಮೂಜಗದೋದ್ಧಾರ ಶ್ರೀ ||3||

ಶ್ರೀನಿವಾಸನ ಧ್ಯಾನವನ್ನು ಮನ್ನಿಸುವಂತ |

ಮಾನವನಾವನ ಎನಗ್ಹೇಳಮ್ಮಾ

ಸ್ವಾನುಭಾವದಿ ಸದ್ಗುರು ಸೇವೆಗೈಯುವ

ಪುಣ್ಯದಿಂದಧಿಕಿಲ್ಲ ಕೇಳಮ್ಮಾ ||ಪಲ್ಲ||

ಗುರುತನರಿತು ಗುರುಚರಣ ಸೇವಿಸಿ ಪರ |

ದಾರಿಗ್ಹೋಗುವ ದಾರಿ ಹ್ಯಾಂಗಮ್ಮಾ

ಸಾರಿ ಸಾರಿ ಘೋರ ನರನಾಗವತರಿಸದೆ

ಧೀರನಾಗಿರೊ ಮಹಾನೀಯಮ್ಮಾ ||1||

ಮಹನೀಯರೆಂಬುವ ಮತವೇನು ತಿಳಿಯದು |

ಮಾನುನಿ ಯೆನಗೆ ಹೇಳಮ್ಮಾ

ಇಹದಿ ಮಾನಭಿಮಾನದಿಹ ಶಿವ ಧ್ಯಾನದಿ

ತನು ಮರಿದರು ಘನ ಮೌನಮ್ಮಾ ||2||

ಗುಣಿಸಬಾರದ ದುರ್ಗುಣ ವಿಷಯಗಣ |

ನಿರ್ಗುಣನಾಗುವದ್ಯಾಂಗಮ್ಮಾ

ಕಾಣುತಾದಿ ಸ್ವರ ಸುರಗುರು ಕರುಣವ

ಕಾಣಲಾಕ್ಷಣ ಮರಣಿಲ್ಲಮ್ಮಾ ||3||

ದೇವಾದಿ ದೇವನುಭವದೊಳಗಾಗುವ |

ಸ್ಥಳದೊಳಗಿರುವನು ಹೇಳಮ್ಮಾ

ಯಾವ್ಯಾಳ್ಯದಿ ನಿಜ ಭಾವದಿರಲು ದೇವ

ಕೇವಲ ನಿನ್ನೊಳಗಾನಮ್ಮಾ ||4||

ಎನ್ನೊಳು ಚಿನ್ಮಯನು ಮನಿ ಮಾಡಿಯಿರುವಂಥ |

ಉನ್ನತಸ್ಥಲವ್ಯಾವದು ಹೇಳಮ್ಮಾ

ಕಣ್ಣಿನ ಕೊನೆಯಲ್ಲಿ ಕನಕ ಪರ್ವತದಲ್ಲಿ

ಚಿನ್ಮಯ ನರಮನಿ ಕಾಣಮ್ಮಾ ||5||

ಭದ್ರಾದ ಷಣ್ಮುದ್ರಿ ಶಶಿಭಾನುದೊಳಗಿದ್ದ |

ಸಿದ್ಧ ಸುದ್ದಿ ಎನಗ್ಹೇಳಮ್ಮಾ

ಕ್ಷುದ್ರ ಗುಣಗಳೆಲ್ಲ ಛಿದ್ರಿಸಿ ಶಿವಯೋಗ

ನಿದ್ರಿಯೊಳಗೆ ರುದ್ರನಾದಮ್ಮಾ ||6||

ಮೂರಾರು ಅರಿದಿಟ್ಟು |

ಮಾರಾರಿ ಪುರಸೇರಿ ಶರೀರಾವು ಮರಿದಿರುವದ್ಯಾಂಗಮ್ಮಾ

ದಾರಿದೋರುವ ಹಂಸನ ಸೇರಿರಲಾಕ್ಷಣ

ಪರಿಪೂರ್ಣ ಪರಬ್ರಹ್ಮ ಸೇರಮ್ಮಾ ||7||

ಧಾತ್ರಿ ಭ್ರೂಮಧ್ಯದಿ ನೇತ್ರ ಜಾತ್ರಿಯೊಳು |

ಕ್ಷೇತ್ರಕಧಿಕದಾತರ್ಯಾರಮ್ಮಾ

ಜಾತ್ರಿಮೂರ್ತಿ ಪರಂಜ್ಯೋತಿ ನಿರೂಪನವ

ಧೂತಕರಿಘೂಳಿ ಪಥ ಹಿಂಗಮ್ಮಾ ||8||

ಭಾವದಿ ಶಿವನೆಂದವ |

ಅವನಿಗಾಗ್ವದು ನಿಜಾನಂದವ

ನಿಜ ಭಾವದಿ ||ಪಲ್ಲ||

ದೇಹದ ಭಯವು ಮಾಯವಾಗುವ ದೃಶ್ಯ |

ಮಾಯ ಭಯಗೊಳಗಾಗದೆ

ಕಾಯರಹಿತ ನಿರ್ಮಾಯನ

ಹೇಯ ಮಾಯ ಮರಣ ವಿದೂರನಾ ನಿಜ ||1||

ಮನದ ಮೈಲಿಗಿ ಕಳೆದು ಸುಮನಗೈದು |

ಕಾಣದಿರು ಅಭಿಮಾನವ

ಸ್ವಾನುಭಾವದಿ ಗುರುವರ ಸೇರಲು

ಘನಚಿನುಮಯ ತಾನೆ ತಾನೆ ತಾ ನಿಜ ||2||

ಪಿತಮಾತೆ ಸತಿಸುತ ಗತಿಗ್ಹಿತರಿವರೆಂದಿ |

ಗತಿಸೊ ಪಥದಿ ಹಿತರ್ಯಾರಿಲ್ಲವೊ

ದೂತ ಬಿಡದಿರವ ಧೂತನಾಗಿ

ಪ್ರಖ್ಯಾತ ಪತಿತ ಪರಮಾತ್ಮನಾ ನಿಜ ||3||

ಹೇಮ ಭೂಮಿಯ ಕಾಮನೇಮದೊಳಿರೆ |

ನಿನ್ನಯ ಕಂಡು ಪ್ರೇಮ ಕಾಮಿಪನೆ

ನಾಮಸ್ಮರಣಿಯ ನೇಮದೊಳುರು

ಕಾಮಹರ ವಾಮದೇವನ ನಿಜ ||4||

ಇಂದು ಈ ಧರಿಯೊಳು |

ಎಂದಿಗೂ ನಂದದ ಬಂಧನದೊಳು ಬಂಧನಾಗದೆ

ಇಂದುಧರನ ಕರಿಘೂಳಿಯ ಸೇರಲು

ನಂದಾನಂದ ಪರಮಾನಂದವಾ ನಿಜ ||5||

ಏನಿದ್ದರೇನು ತನಗಿಲ್ಲದಾ ವಸ್ತು |

ಸನಿಯಿದ್ದರೇನು ಏನಿದ್ದರೇನು

ಸುಜ್ಞಾನವಂದಿಲ್ಲದಿರೆ ಮನಿಯೊಳಗ್ಹಾವಿರಲು

ಮನಗಾಲು ಭಯವೊ ||ಪಲ್ಲ||

ಸತಿಯಿದ್ದರೇನು ಪತಿಗ್ಹಿತವಿರದ ಸತಿ |

ಸತಿಯಿದ್ದರೇನಂತಿ ಅತಿ ಮಂದತಿಯಂತೆ

ಪತಿ ಯಮದೂತ ರತಿ ಕಷ್ಟ

ಮಥಿಸುವರಂತೆ ಗಂಡಿದ್ದರೇನು ||1||

ಹೆಂಡತಿಗಿಲ್ಲದ ಗಂಡಿದ್ದರೇನು |

ಗಂಡಿದ್ದರೇನಂತೆ

ಗಂಡು ಕ್ಯಾದಿಗೆಲಿಯಂತೆ

ಪಂಡೀತಗೀಸಂತೆ ಖಂಡಿತಗಿಲ್ಲಂತೆ ||2||

ಧನವಿದ್ದರೇನು ನಿಧಾನವು ಮಾಡಿದ ಧನ |

ಧನವಿದ್ದರೇನಂತಿ ಹೀನ ಮನುಜನಂತೆ

ಕಣ್ಣುಮುಚ್ಚಲು ಪಾಪ ಪುಣ್ಯಗಳಿಲ್ಲಂತೆ ||3||

ಸುತನಿದ್ದರೇನು ಪಿತ ಮಾತೆಗಿರದ ಸುತ |

ಸುತನಿದ್ದರೇನಂತೆ ಗತಿಗಾಣದವನಂತೆ

ಪತಿತ ಪಾವನ ಕರಿಘೂಳಿಗ್ಹಿತವಿಲ್ಲದಾ ವಸ್ತು

ಏನಿದ್ದರೇನು ||4||

ಏನು ಬೇಡಲಿ ಚಿನುಮಯ |

ಶಿವ ನಿನ್ನೇನು ಬೇಡಲಿ ||ಪಲ್ಲ||

ಏನು ಬೇಡಲಿ ಘನವಾದ ವಸ್ತುಗಳಿಲ್ಲ |

ಅನ್ನವಿಲ್ಲದೆ ಮನಿಮನಿ ತಿರಿದುಣ್ಣುವನಿಗೆ ||1||

ಕರುಣವಿನಿತಿಲ್ಲ ನಿಷ್ಕರುಣಿಯು ಮೊದಲೆ ನೀನಲ್ಲ |

ಕರಿತುರಗರಥಗಳು ಅರಿಯಲೇನೇನಿಲ್ಲ

ಊರ ಹೊರಗೆ ರುದ್ರಭೂಮಿಯೊಳಿರುವಗೆ ||2||

ನಿನ್ನ ನಾಮವನು ಸನ್ಮಾನದಿಂದೆ ನೆನಿಯುವರನ್ನು |

ಇನ್ನು ಭಕ್ತರಿಗೆಲ್ಲ ಯೇನು ಬೇಡಿದ ಸೊಲ್ಲ

ಅನುಮಾನಿಲ್ಲದೆ ಕೊಟ್ಟು ನೆನವು ಮೌನಾದವಗೆ ||3||

ವ್ಯಥೆಯಿಲ್ಲದವನು ಸತಿಸುತರೆಂಬ |

ಮತಿಯವರಿದವನು ಸತಿಸುತ ಧನ ಭೂಮಿ

ಅತಿ ಹರುಷದಿನಿತ್ತು ಪತಿತ ಪಾವನ ಪರಮಾತ್ಮ ನಾ ನಿನಗಿನ್ನು ||4||

ಕಾಣುವದೆಲ್ಲ ನಿನ್ನಯ ಲೀಲೆಯೇನು ಸ್ಥಿರವಿಲ್ಲ

ಜ್ಞಾನ ಮೂರುತಿ ಕರಿಘೂಳೀಶ ಕರಪಿಡಿದು

ಎನ್ನೊಳು ನೀನಾಗಿ ನಾನು ನಿನ್ನೊಳಗಾಗಿನ್ನೇನು ||5||

ಮಾಡಬ್ಯಾಡಲೊ ಖಾಲಿ ಚಿಂತಿ |

ಬಿಡು ಮಾಯದ ಭ್ರಾಂತಿ

ಜಡ ದೃಶ್ಯ ಶರೀರವು ದೃಢವೆಂದು ತಿಳಿತಿ

ಜಡಿದು ಯಮ ಹೊಡೆಯುವ ಮನ ಮಾಡೊ ಶಾಂತಿ ||ಪಲ್ಲ||

ಮೂರು ದಿನದ ಬಾಜಾರ ನಾರಿ ಸುತರು ಸಂಸಾರ |

ಬರಿದು ಬರೊದು ಯಾರಿಗ್ಯಾರ

ಇರೊತನ ಸರ್ವರುಯಿಲ್ಲೊ ಯಾರ್ಯಾರ

ಸ್ಥಿರವಾದ ಪದವಿಯ ಮಾಡೊ ವಿಚಾರ ||1||

ಧನ ಹೇಮ ಭೂಮೆನ್ನದೆನುತಿ |

ಹೀನಗುಣಗಳು ಕಲಿತಿ

ಗಾಣದೆತ್ತಿನ ರೀತಿ ದುಡಿತಿ

ಮೀನ ಗಾಣಕೆ ಬಿದ್ದ ಪರಿಯ ನೀಯಾಗುತಿ

ಚಿನುಮಯನ ಧ್ಯಾನವು ದಿನದಿನ ಮರೆತಿ ||2||

ಡಂಭಾಚಾರದಿ ಫಲವಿಲ್ಲ |

ಶಂಭು ತಿಳಿಯುವನೆಲ್ಲ

ನಂಬಿದವರಿಗೆ ಹಿಂಬಾನಲ್ಲ

ಕುಂಬಿನಿಯೊಳ್ನರನಾಗಿ

ಜನಿಸಿದ ಮೇಲ ಸಾಂಬನ ಸಾಮ್ರಾಜ್ಯ ಸಂಭ್ರಮ ಶೀಲ ||3||

ಸಂಸಾರ ಸುಖವಿರಲೆನುತಿ |

ಸಂಶಯ ಗುಣ ಕಲಿತಿ

ಪುಸಿ ನುಡಿಗಳ ಸದಾ ಆಡುತಿ

ಹಂಸ ಪರಮ ಮಂತ್ರ ಹಂಸದ ರೀತಿ

ಸಂಶಯ ಬಿಡು ಕರುಘೂಳೀಶಾಗಿರುತಿ ||4||

ಹರ ಹರ ಹರ ಶಂಭೊ |

ಸದಾಶಿವ ಗೌರಿಶಂಕರ ಭೋ ಹರ ||ಪಲ್ಲ||

ರಾಘವನು ತಪದ ರಾಜೀವ ವದನ |

ಭವರೋಗ ವೈದ್ಯ ಶಂಭೋ

ಆಗಮವಂದಿತ ಅಮರಾರ್ಚಿತಸುರ

ಭೋಗಿಭೂಷಣ ಶಂಭೋ ||1||

ಪಂಚವದನ ವಿರುಪಾಕ್ಷವರದ |

ದ್ವಿಪಂಚ ಹಸ್ತ ಶಂಭೋ

ವಂಚಕ ದಕ್ಷಾದ್ವರ ವಿಧ್ವಂಸಕ

ಪಂಚ ಶರಾಂತಕ ಭೋ ||2||

ಈ ಸಮಯದಿಯೆಮ್ಮ ಸೂಸಿಲಿ |

ಕಾಯ್ವದೊ ವಾಸುಕಿಧರ ಶಂಭೋ

ವಾಸಭಾಷನಪುರದೊಳ್ಮೆರೆಯುವ

ಈಶ ಕರಿಘೂಳೀಶ ಶಂಭೋ ||3||

ಶ್ರೀ ಗಿರಿಜಾವದನೆ ಮಾಂ |

ಕರುಣದಿ ಕಾಯೊ ||ಪಲ್ಲ||

ಯೋಗಿ ಜನರ ಹೃದಯವಾಸ ನಾಗಭೂಷನೆ |

ನಿಗಮಾಗಮಗೋಚರ ಭವ

ರೋಗ ವೈದ್ಯನೆ ||1||

ಜ್ಞಾನ ಧ್ಯಾನ ಮಾನಪಾನ |

ಮೌನದಿರಿಸೈ ಹೀನಗುಣಗಳೇನಿಲ್ಲದಲೆ

ನಿಜ ವುದ್ಧರಿಸೈ ||2||

ಕ್ಲೇಶನಾಶ ಸತ್ಯ ಸತಸಂತೋಷದಿರಿಸೈ |

ಆಶರಹಿತ ಕರಿಘೂಳೀಶ ಕಾಶಿವಾಸಸೈ ||3||

ಜಗದೀಶ ನಿಗಮ ಮಹೇಶ |

ಶ್ರೀಗುರು ಕ್ಷೇಶನಾಶನೆ ||ಪಲ್ಲ||

ಕರುಣಾ ನಾಗಭರಣಾ |

ಚಂದ್ರಧರಣಾ ನಯನ ಕಿರಣಾ

ಶರಣಾ ಜನರಾ ಪೊರೆಯೊ ಧೀರ

ಗಿರಿವರ ಧೀರ ಜಗದೀಶ ||1||

ಸ್ಮರಶರ ವೈರಿಯೆ ಪುರ ತ್ರಿ ಸಂಹರನೆ |

ಕರಿಕಂಠಸುರ ಭೋಜನೆ

ಗಜಮುಖ ಸುಜನ ಪೂಜಿತ

ಅಜ ಹರಿಹರ ತ್ರೈಜಗಭರಿತ

ನಿಜಸಾಜಸ ಗುಣವ ಬೋಧಿಸೊ

ನಿರ್ವಿಕಾರ ಸರ್ವ ಲೋಕೋದ್ಧಾರ ||2||

ಸೋಮ ಭಕುತರ ಜನ ಪ್ರೇಮ |

ಅಗಣಿತನಾಮ ವಿಶ್ವಾಭಿರಾಮ

ನಿರಾಮಯ ನೀಡೊ ದಯಾ

ಕರಿಘೂಳಿ ಗುರುರಾಯಧೀಶ ||3||

ಬಸವ ಶಿವನು ಶಿವನೆ ಬಸವ |

ಬಸವ ಶಿವನೆಂಬ

ವಿಷಯ ಒಂದಲ್ಲೇನೊ ||ಪಲ್ಲ||

ವಶವಿಲ್ಲ ದಶೇಂದ್ರಿಯಗಳೊಶಗೈಸಿ

ಕೈಲಾಸ ವಾಸನ

ಧ್ಯಾಸದೊಳಿರುವನೊ ||1||

ಸಂಶಯವಿಲ್ಲದ ಸಂಸಾರ ಮಾಡಿ ಸದಾ

ಹಂಸೋಹಂಸೇರಿ ಮಾಯಾ

ಧ್ವಂಸಗೈಯುವನೋ ||2||

ಆರು ಚಕ್ರದ ನೆಲಿಯ ಅರಿತು ಸೇರುನ್ಮನಿ ನಿಲಯ

ಭೋರೆಂಬೊ ನಾದ ಬಿಂದು ಕಳೆಯೊಳಗಿರುವನೊ || ||3||

ಭಕ್ತಿಗೆ ಜ್ಞಾನ ಪರಮುಕ್ತಿ ವೈರಾಗ್ಯದಿ |

ಶಕ್ತನಾಗಿ ಶಿವಭಕ್ತಿಯಲ್ಲಿರುವನೋ

ಆರು ಅಕ್ಷರದರ್ಥ ಎರಡೊಂದರಲಿ ಗುರ್ತ|

ತೋರುವ ಕರಿಘೂಳಿ ಕರುಣಪಡಿದವನೊ ||4||

ಭಯ ಹಾರಿ ಸುರಗುರುದೇವ |

ಬಾಯ ಬಿಡುವೆ ನಾನಭವಾ

ಮಾಯದಿಂ ಜನಿಸಿದ ಈ ಕಾಯಪುರವಾ

ಮಾಯ ಪಂಚಭೂತ ಸಮುದಾಯಸರುವಾ ||ಪಲ್ಲ||

ನೋಡಲಾರೆನು ವಿಶ್ವರೂಪ |

ವಿಶ್ವ ಮಾಡಿಸು ಲೋಪ ಬಿಡದೆ ತೋರಿಸು ನಿಜರೂಪ

ಒಡೆಯನೆ ನೌಖಂಡ ರಾಜರ ಭೂಪ

ಅಡಿಗೆರಗುವೆ ದೃಢದ್ಹಿಡಿಸು ಪ್ರತಾಪ ||1||

ಸಂಸಾರ ಶರಧಿ ಅಪಾರ |

ಪಾರು ಮಾಡಿಸೊ ತ್ವರಾ

ತ್ರಿಂಶಾರು ತತ್ವಕಧಿಕಾರ

ಸಂಶಯ ಸಂತತಿ ಅಗಲಿ ಪಾರ

ಹಂಸೋಹಂಸನೇರಿಸು ನಿರ್ಧಾರ ||2||

ಎಲ್ಲಿ ನೋಡಲು ನೀನೆ ಭರಿತ |

ಸಲ್ಲೀಲೆಯೊಳಿರುತ ಮೂಲೋಕಕಾಧಾರ ಕರ್ತ

ಎಲ್ಲ ಕಾಲದಿಯನ್ನ ಹೃದಯದೊಳಿರುತ

ಯಲ್ಲಮಹಾಪ್ರಭು ಕರಿಘೂಳಿ ಗುರುನಾಥ ||3||

ಆರತಿ ಬೆಳಗಿರಿ ನಾರಿಯರೆಲ್ಲರು |

ಶೌರಿ ಸುಂದರ ಸುಕುಮಾರ ಜನಕಗೆ ||ಪಲ್ಲ||

ಗೋಪಿಯರೆಲ್ಲರು ಆಪತ್ತಿನೊಳಗಿರೆ |

ಕಾಪಾಡಿದ ಶ್ರೀ ಗೋಪಾಲನಿಗೆ ||1||

ಸಂಶಯದಿರುವ ಕಂಸನ ಮದವ |

ಧ್ವಂಸವಗೈಯ್ದ ವಂಶವುದ್ಧಾರಗೆ ||2||

ಮುರಾಸುರ ಮಾರಗೆ ಮುರಲಿಯಧರಗೆ |

ಕರುಣದಿ ಕಾಯ್ದ ಶ್ರೀ ಕರಿಘೂಳಿ ಗುರುವಿಗೆ ||3||

ಸಂತಿಗೆ ಬಂದು ಚಿಂತಿಯ ನೀಗಿ |

ಯೇಕಾಂತದೊಳಗ ನಾನಿದ್ದೇನವೊ

ಭ್ರಾಂತಿಯನಳೀದು ಅಂತರಂಗದಿ

ಗೌರೀಕಾಂತನ ಕಾಣುತಲಿದ್ದೇನವೊ ||ಪಲ್ಲ||

ಶಂಭೊ ಸಾಧುರ ಸಂಗದಿ ಬೋಧವ ತಿಳಿದು |

ಸಾಧನ ಒಂದು ಮಾಡಿದ್ದೇನವೊ

ಆಧಾರದಿ ಚೌದಳದಲ್ಲಿ ಇರುವೊ

ಗಣಪತಿ ಪೂಜೆ ಮಾಡಿದ್ದೇನವೊ ||1||

ಸ್ವಾದ ತಿಳಿದು ಸ್ವಾದಿಷ್ಟ ಚಕ್ರದಿ |

ಆರು ದಳಗಳು ಅರಿತೇನವೊ

ಭೇದವಿಲ್ಲದೆ ಬ್ರಹ್ಮನ ಸಾಧಿಸಿ

ಸಾಧುರೊಳಗ ಕೂಡಿದ್ದೇನವೊ ||2||

ಜಾಣತನದಲಿಂದ ಮಣಿಪೂರಕ ಪೋಗಿ |

ದಶದಳ ಕಣ್ಣೀಲಿ ಕಂಡೇನವೊ

ಮಾಣದೆ ವಿಷ್ಣುವಿನನ್ನು ಪೂಜಿಸಿ

ನಾರಾಯಣನೊಳಗಿದ್ದೇನವೊ ||3||

ರೌದ್ರದಿಂದ ಅನಾಹಾತಕ್ಕೆ ಹೋಗಿ |

ಬಾರಾ ದಗಳಗಳು ಕಂಡೆನವೊ

ಭದ್ರದಿಂದ ರುದ್ರನ ಪೂಜಿಸಿ

ಮುದ್ರಿಯೊಳಗ ನಿದ್ರಾಯಿತವೊ ||4||

ಶುದ್ಧವಾದ ವಿಶುದ್ಧಿ ಚಕ್ರದೊಳು |

ಹದಿನಾರು ದಳಗಳಿದ್ದವವೊ

ಬುದ್ಧಿಯಿಂದ ಸದಾ ಶಿವನ ಪೂಜಿಸಿ

ಸದಾನಂದೊಳಗಿದ್ದೇನವೊ ||5||

ಅಗ್ನಿಚಕ್ರದಲ್ಲಿ ಮಗ್ನನಾಗದೆ |

ದ್ವಿದಳ ಕಣ್ಣಿಲಿ ಕಂಡೇನವೊ

ಅಗ್ನಿ ನಯನ ಪರಮಾತ್ಮನ ಜ್ಞಾನದಿ

ಮಗ್ನನಾಗಿ ಅರಿತಿದ್ದೇನವೊ ||6||

ಮರಿಯದೆ ಅನುದಿನ ಪುರಹರ ಧ್ಯಾನವ |

ಸರ್ವ ಕಾಲದಲಿ ನಡಿವದವೊ

ಮೀರಿದ ಸಹಸ್ರ ದಳದಲ್ಲಿರುವ

ಕರಿಘೂಳೀಶನ ಕಂಡೇನವೊ ||7||

ಪಾಪಲೋಕ ವಿಠಲ ಗೋಪಾಲ |

ನೀ ಪಾರಮಹಿಮಾ ವ್ಯಾಪಕ ನಾಮ

ಆಪದ ದೂರ ಶ್ರೀಪತಿಲೋಲ

ಕಾಪಾಡು ಸುಶೀಲ ||ಪಲ್ಲ||

ಶೇಷಶಯನ ದೋಷವಿಹರಣ |

ಆಶ ದೂರಣ ಶಿಶುಗಳ ಪೋಷಣ

ಕೇಶವ ಪಶುಪಾಲ ಗೋಪಾಲ ||1||

ಮೂಜಗದಿರುವ ರಾಜ್ವಳಿಪುರವ |

ಕರಿಘೂಳಿ ಗುರುವ

ಕರುಣದಿ ಕಾಯ್ವ

ಸಾಜದಿ ಪರಿಪಾಲ ಗೋಪಾಲ ||2||

ಯೋಗಿಗಳೆ ಶಿರ ಬಾಗಿ ನಮಿಸುವೆ |

ಸಾಗಿ ಬರುವದಿಲ್ಲಿಗೆ ಬೇಗದಿ

ನಿಮಗೀಗ ಮಣಿಯುವೆ

ಸಾಗಿಸುವೆ ನಿಮ್ಮಡಿಗೆ ||ಪಲ್ಲ||

ಚಂದ್ರಧರ ಉರಗೇಂದ್ರ ಸಾಂದ್ರ |

ಇಂದ್ರಸಖ ಮಹೇಂದ್ರನೆ

ಸುಂದರ ಗಣವೃಂದ ವಂದಿತ

ಬಂಧುರ ನೌರಂದ್ರನೆ ||1||

ನಿಮ್ಮ ದರುಶನದಿಂದೆಯನ್ಮನ |

ಉನ್ಮಯದಿ ಶಾಂತಾಯಿತೊ

ಸ್ಥೋಮ ನಿರ್ಗುಣ ಧಾಮ ನಿಮ್ಮ

ಪ್ರೇಮ ದಯವು ನಮಗೆ | ||2||

ರಾಜಕಧಿಕ ರಾಜಪುರಕ |

ರಾಜ ಕರಿಘೂಳೀಶನೆ

ಕುಜನ ದೂರ ಸುಜನೋದ್ಧಾರ

ಪೂಜಿಸುವೆ ಚರಣಂಗಳಿಗೆ ||3||

ಸದಾ ಕಾಯೊ ಪಂಢರಪುರ ವಾಸಿ |

ಮುದದಿಂದ ನಮಿಪೆ ವಿಠಲೇಶ ||ಪಲ್ಲ||

ತಿಳಿಯದು ನಿನ್ನಯ ಲೀಲೆಯು ಸದಯ |

ವ್ಯಾಳ್ಯಗೈಯದೆ ಬಾಲ ಪೋಷ ||1||

ಪರಿಕಿಸಲೆನ್ನೆಯ ಈ ರೀತಿಗೈದಿಯಾ |

ಅರಿಯದವನ ಮರಿಯದಿ ಕಾಯೊ ಈಶ ||2||

ಮಾನಪಮಾನವು ನಿನ್ನದೆ ದೇವ |

ಕನಿಕರದಲಿ ಪಾಲಿಶೀಶ ||3||

ಮೂರು ಲೋಕ ನಿಮ್ಮದು ಸಾರ್ವದು ನಿಮ್ಮ ಬಿರುದು |

ಕರುಣದಿ ಕಾಯೊ ಪರಮೇಶ ||4||

ಮೂಜಗದಿ ಮೆರಿವ ರಾಜೋಳಿಲಿರುವ |

ರಾಜಮಹಾರಾಜ ಕರಿಘೂಳೀಶ ||5||

ನಾರಾಯಣ ನಿನ್ನ ಚರಣ ನಂಬಿರುವೆ |

ಕರುಣದಿ ಪಿಡಿ ನಿನ್ನ ತರುಳನ ಕರವಾ ||ಪಲ್ಲ||

ಭವತಾರಣ ಪಾರಾಗುವದ್ಯಾಂಗ |

ಶಿವ ನಿಮ್ಮ ಸ್ಮರಣೆಯೆ ಹಡಗವು ಎಮಗ ||1||

ನಾರಿ ಕುವರ ಬಾಂಧವರು ಅಸ್ಥಿರ |

ಕರಿವರದ ಪೊರಿ ಪರಿಪರಿ ಕರೆಯುವೆ ||2||

ನಂಬಿದ ಭಕುತರ ಸಂಭ್ರಮದಿರಿಸುವ |

ಸಾಂಬನೆ ಸಖ ನೀ ಬೆಂಬಲವಾಗಿರು ||3||

ಬೇಡಿದ ವರ ದಯಮಾಡಿಸು ರಾಯ |

ರೂಢಿಯೊಳಗೆ ಬಿಡದ್ಹಿಡಿವೆ ನಿನ್ನಡಿಗಳ ||4||

ಧರೆಯೊಳು ಮರೆಯುವ ಅರಸನಾಪುರವ |

ಕರಿಘೂಳೀಶ ಗುರುವ ತ್ವರ ಕೊಡಿಸು ವರವ ||5||

ಓಂ ಗುರು ಪರತರ ಪರಮೇಶ |

ಕರುಣದಿ ಶರಣರ ಪೋಷ ||ಪಲ್ಲ||

ಸುರಮುನಿ ಪೂಜಿತ ಹರಿಹರ ಸೇವಿತ |

ದುರಿತದೂರಕರ್ತ ದಾತ

ದುರಿತದೂರಕರ್ತ ಪರಿಪರಿಯಲಿ ನಿಮ್ಮ

ಚರಣ ಸ್ಮರಿಸುವೆನು

ತರುಳರ ಪೊರೆ ಜಗದೀಶ ಓಂ ||1||

ಆದಿ ಅಂತ್ಯ ನಿಶ್ಚಿಂತಾನಂದನೆ |

ವೇದವಾದ ಸದನ ಸುವದನ

ವೇದವಾದ ಸದನ

ನೀ ದಯಗೈದೆಮ್ಮ ನಾದರಿಸುವದು

ಸದಾ ಸುಗುಣ ಹೃದಯ ನಿವಾಸ ಓಂ ||2||

ಅರಸ ಪುರೀಶ ಕರಿಘೂಳೀಶ |

ವರಕವಿ ಗುರು ಮುರುಗೀಶ ಮಹೇಶ

ವರಕವಿ ಗುರು ಮುರುಗೀಶ

ಪರವುಪಗಾರ ಜಗದೋದ್ಧಾರ

ಕರುಣಿಸು ನಡೆಸು ಸುಭಾಷ ಓಂ ||3||

ಪ್ರೇಮಿಯ ಭಕ್ತರ ಪ್ರೇಮದಿ ಕಾಯ್ವ |

ಕಾಮಿತ ಫಲಮೀವ ಚತುರಾ

ಶ್ರಮಿಗಳ ಗತಿಗಳ ತಿಳಿದು ಚತುರ

ಚತುರ ಯೋಗದೊಳುಳಿದು

ಚಾತುರ ಶಿವಪಾದಾತುರನಾದರೆ

ಚತುರದ ಫಲವೀವ ಕಾವ ಕಾಮಿತ ಫಲವೀವ ||ಪಲ್ಲ||

ಆರು ಚಕ್ರಗಳ ಸಾರವನರಿದು |

ಆರು ಗುಣಗಳಳಿದುಳಿದು

ಆರಕ್ಷರಗಳನರುತವನರಿದರೆ

ಮಾರಹರನ ಸೇವ ಕಾವ ||1||

ಪ್ರಾಣಯೋಗನುದಿನ ಸಾಧಿಸೆ |

ಮಿನುಗುವ ತ್ರಿಕೂಟ ಶಿಖರದೊಳೈಸೆ

ಪಾನಗೈಯಲು ಸುಧಾ ಧಾರಾಮೃತವನು

ಘನದ ಸುಖವೀವ ಕಾವ ||2||

ಮೂಲ ಬ್ರಹ್ಮಾನಂದದೊಳು ಲೋಲಾಡುತೆ |

ಶೀಲ ನಿರೀಕ್ಷಿಸು ಪ್ರಾಣಿಗ್ರಹಣಕೆ

ಕಾಲಕಾಲಗೆ ಸರ್ವ ಕರ್ಮ ಸಮರ್ಪಿಸು

ಶೀಲ ಕರಿಘೂಳಿಸೇವ ಕಾವ ಕಾಮಿತ ಫಲವೀವ ||3||

ಮುನಿವರ ಕರುಣಾಕರ |

ಕನಿಕರದಿಂದಲ್ಲಿ ನಿನ್ನ ತನಯನ ಮನ್ನಿಸು ನೀ ||ಪಲ್ಲ||

ನಿತ್ಯ ಅತಿಥಿಗಳ ಪಥವನು ನುತಿಸುವೆ |

ಸತ್ಯದ ಪಥವರಿಸೊ ಅತಿಥಿಯೆ

ಸತ್ಯದೆ ಪಥವರಿಸೊ ಭಕ್ತಿಯ ಸ್ಥಿತಿಗೆ ಜೀಯ

ಮುಕ್ತಿಗೆ ಸದಯಾಕರ್ತನೇ ಮಮಹೃದಯ ||1||

ಎನ್ನಾಶ್ರಮಕೆ ಬಿನ್ನೈಸಿದುದಕೆ |

ಮನಾನಂದವಿದಕೆ ಹೇ ಮುನಿಯೆ

ಮಹಾನಿಂದವಿದಕೆ ದೀನರ ಪಾಲಿಸು ಸದಾ

ಬಿನ್ನವಗೈಯುವೆ ಪಾಲಿಸು ಮುನಿವರ ||2||

ದೇಶಕಧಿಕ ಭಾಷನಪುರಕ |

ಈಶಘೂಳೀಶನಧಿಕ ಮಹೇಶ

ಶಿಶುಗಳುಲ್ಹಾಸದಿ ಕಾಯೊ

ಧ್ಯಾಸದೊಳಿರುವೆನು ಪೋಷ ದಂಪತಿಗಳನು ||3||

ಗುರುವಿನುಪದೇಶವನು ಅರಿರಣ್ಣ |

ಧರೆ ಸರ್ವಜನ ಗುರುವಿನುಪದೇಶವನರಿರಣ್ಣ

ಆರುಮೂರು ಅರಿಯಬೇಕು

ಪಾರಮಾರ್ಥದೊಳಿರಲಿಬೇಕು

ದಾರಿಹಿಡಿದು ನಡೆಯಬೇಕಣ್ಣ ನಾವೆಲ್ಲರಣ್ಣ ||ಪಲ್ಲ||

ಅವನಿಯೊಳಗೆ ಜನಿಸಿದಾರಣ್ಣ |

ಅವರು ಮೂವರಣ್ಣ

ಬ್ರಹ್ಮವಿಷ್ಣು ರುದ್ರ ಸ್ವರೂಪಣ್ಣ

ರಾಜತಾಮಸ ಸತ್ಯ ತತ್ವದ ರಹಸ್ಯವನ್ನು

ತಿಳಿಸುತಿಹರು ಗುಪ್ತದೊಳಗ

ಹಿಡಿಯಬೇಕಣ್ಣ ನಾವಾಪ್ತರಣ್ಣ ||1||

ಕಲಿಯುವಳಗ ಸಣ್ಣ ಹಳ್ಳೆಣ್ಣ ಯಲಿ ರಾಜೋಳೆಣ್ಣ |

ಗುರುವು ಮುರುಗೇಂದ್ರೇಳಿದ ವಚನ

ಬೇಕಾದವರು ಕೊಳ್ಳಿರಣ್ಣ

ಸಾಕಾದವರು ಬಿಡರೆಣ್ಣ

ಅಕಾರುಕಾರ ಮಕಾರಿಡಿರೆಣ್ಣ

ಓಂಕಾರ ಪ್ರಣಮ ||2||

ಪರಮ ಪರಮೇಶಾ |

ತರುಳರ ಪೋಷ ||ಪಲ್ಲ||

ಇಂದು ದಂದುಗದಲ್ಲಿ |

ಬಂದೇನೇತಕ್ಕೆ ದೇವಾ

ನಂದವಿಲ್ಲದ ರೋಷ

ತರುಳಾರ ಪೋಷ ||1||

ಸುಜ್ಞಾನವಿಲ್ಲದ ಅಜ್ಞಾನ |

ರಾಜ್ಯದಿ ಮಗ್ನನಾದೆ

ಈಶ ತರುಳರ ಪೋಷ ||2||

ಸಿಕ್ಕಿದೆ ಲೋಕದಿ |

ಹೊಕ್ಕಿದೆ ದುರಿತದಿ

ದಕ್ಕಿಸಿದೆ ಕರಿಘೂಳೀಶ

ತರುಳಪೋಷ ||3||

ಗುರುವರ ಸುರಪ್ರೇಮ ಸುಧಾಮ |

ಚರಣಕ್ಕೆ ಯೆರಗುವೆ ಶರಣ ನಾಮಧಾಮ ||ಪಲ್ಲ||

ಚಂದಿರ ತೇಜನೆ ಇಂದಿನ ಪೂಜ್ಯನೆ |

ಸುಂದರ ಪಾದಂಗಳಿಗೊಪ್ಪಿಸುವ ನಾ

ಇಂದು ಮದಾಂಧರ ಅಂಧಕಾರ ತರಿ

ಸಿಂಧುದಯಾ ಬ್ರಹ್ಮಾನಂದನಂದನೆ ಧಾಮ ||1||

ಶುದ್ಧವಿಗಾನನೆ ವಿದ್ಯೆ ಪ್ರವೀಣನೆ |

ಸಿದ್ಧನೆ ಪರದಯಾಬ್ಧಿ ವಿಶುದ್ಧನೆ

ಲುಬ್ಧಕರನುಭವಾಬ್ಧಿಯೊಳದ್ದುವೆ

ಪ್ರಸಿದ್ಧ ಸುಸಾಧ್ಯನೆ ಉದ್ಧರಿಸೆಮ್ಮ ಧಾಮ ||2||

ಪರಮ ವಿಲಾಸನೆ ತರುಣಿ ವಿಕಾಸನೆ |

ವರ ನೀಲಕಂಠನ ಶರಣರ ಪೋಷನೆ

ಕರುಣಾಕಾರ ವರಕವಿಗಾರ

ಕರಿಘೂಳೀಶ್ವರ ಜಗದೋದ್ಧಾರ ಧಾಮ ||3||

ಶ್ರೀಗುರುದೇವ ಜೈ ಶ್ರೀದೇವ ಬಾ |

ಈ ಭವಭಯಗಳನು ನಿವಾರಿಸು ಈಕ್ಷಣ

ಜವದಿ ಕಾಯಲು ಬಾ ದೇವ ಜವದಿ ಕಾಯಲು ಬಾ ||ಪಲ್ಲ||

ಅನುದಿನದಲಿ ನಿನ್ನ ಧ್ಯಾನವನೀವ |

ಯೀ ನಿನ್ನ ತನಯನ ಮನ್ನಿಸು ಅರುವ

ಜನನಿ ಜನಕ ಜೀವ ದೇವ ||1||

ಏನು ಬೇಡಲಿ ನಿನ್ನ ಧ್ಯಾನವೆ ಸಾಕು |

ಉನ್ನತವಾದಂಥ ಘನ ಪದವೆದಕೊ

ಘನ ಜ್ಞಾನವನೀವ ದೇವ ||2||

ಗಂಗೆ ಯಮುನೆ ಮಧ್ಯ ಸಂಗವಾಗಿರುವ |

ಸಂಗಮೇಶನೆ ಕಂಗಳದಿರುವ

ಮಂಗಳಾತ್ಮ ಸರುಪಾ ದೇವ ||3||

ತತ್ವ ತಿಳಿಸಿ ಸತ್ಯ ಪಥಗತಿಯರಿಸೊ |

ಪತಿತ ಪಾವನ ನಿನ್ನ ಮತಿಹಿತದಿರಿಸೊ

ಸತತ ಸತ್ಯದಿಯಿರುವ ದೇವ ||4||

ಧರಿಯಲಿ ನೌರಸಪುರದಲಿ ವಾಸ |

ವರಕವಿ ಶ್ರೀಗುರು ಕರಿಘೂಳೀಶ

ಗುರು ಮುರುಗೇಂದ್ರ ಶಿವ ದೇವ ||5||

ಅನುದಿನದಿ ಮನದೊಳೋನ್ನಮಶಿವ |

ಎನುತಲಿರು ಮನ ಪ್ರಣಮಂತ್ರವಿದು ಘನ ||ಪಲ್ಲ||

ತನುಮನಧನ ಗುರುವಿಗಿತ್ತು ಜ್ಞಾನಿಯಾಗಣ್ಣ |

ಘನಪದವಿ ನಿನಗಣ್ಣ ||1||

ಆದಿ ಆಧಾರ ಮೂಲ ಭೇದ |

ಬೋಧನರಿಯಣ್ಣ ಸ್ವಾದಿಷ್ಟ ಬ್ರಹ್ಮನ ||2||

ತಾರಕದನುಪೂರಕದೊಳು |

ಸಾರ ಸುರಿಯಣ್ಣ ಪರಿಪೂರ್ಣ ಪರಮನ ||3||

ಆಶಪಾಶ ಹೇಸಿ ವಿಷಯ |

ಘಾಸಿಪುಸಿಯಣ್ಣ ಶಶಿವಾಸ ನೀನಣ್ಣ ||4||

ಜಪತಪ ವ್ರತವ್ಯಾತಕೆ ನಿನ್ನತ್ತಿರಾನಣ್ಣ |

ಕರಿಘೂಳಿ ಗುರುವಣ್ಣ ||5||

ಶಿವಜ್ಞಾನ ಧ್ಯಾನವದಿಲ್ಲದೆ ಜ್ಞಾನವೆಲ್ಲಿಹದೊ |

ಮನು ಮುನಿಗಳಿಗಾದರು

ಮಾನ್ಯರಿಗಾದರಭಿಮಾನ್ಯರಿಗಾದರು ||ಪಲ್ಲ||

ಮನ್ನಿಸುತನುದಿನ ಚಿನುಮಯ ಧ್ಯಾನವು |

ಮನದೊಳು ಮೌನವಂದಿಲ್ಲದಿರೆ

ಘನ ವೇದ ಸಾರವು ಮನವಗೈಯದೆ

ಘನಪದ ಹೊಂದಬಹುದೆ ||1||

ಜಪತಪ ವ್ರತಗಳು ಉಪವಾಸ ವ್ಯರ್ಥಂಗಳು |

ಪಾಪಕೂಪವ ಕಾಪಾಡ್ಬಹುದೆ ಸರ್ವ

ವ್ಯಾಪನಾದಂಥ ಪರಮಾ ಗೋಚರನು

ಭೂಪತಿಗಳಿಗಾದರು ||2||

ಅಂಡಪಿಂಡ ಬ್ರಹ್ಮಾಂಡಗಳಲ್ಲಿಯು |

ತಾಂಡವಾಡುವ ಮಾರ್ತಂಡನು

ಭಾಂಡ ನೇತ್ರಾಂಡದಿರೊ ಆ ರುಂಡಮಾಲ

ಕಾಣ ಕಂಡ ಪಂಡಿತರಿಗಾದರು ||3||

ಆಶನ ವಿಷಯಕ್ಕಾಗಿ ವೇಷಭೂಷಿತರಾಗಿ |

ಕಾಸಿಸುವದು ಮೋಸಹುದೊ

ನಾಶಿಕ ಶ್ವಾಸೀಶ ಧ್ಯಾಸವದಿಲ್ಲದೆ

ವಿಶ್ವನು ವಶವಹುದೆ ||4||

ಉದರಾಧಾರದಿ ಕವಿ ವಿದ್ಯೆ ಸಾಧಿಸಲದು |

ನದಿಯಂತಾಗಾಧಾಬಾಧಹುದೊ

ಸಾಧು ಸತ್ಪುರಷರ ಬೋಧ ಸಾಧಿಸದಿರೆ

ಸದಾ ಬ್ರಹ್ಮಾನಂದವಹುದೊ ||5||

ಧರೆಯೊಳಗರಸಪುರದಲಿ ವಾಸ |

ಪಾರಮಹಿ ಶ್ರೀ ಕರಿಘೂಳೀಶ

ಪರಮಪಾವನ ಮುರುಗೇಂದ್ರನ

ಸಾರಾಮೃತವು ಸೇರುವದೆ ಆರಿಗಾದರು ||6||

ಗುರುರಾಯರು ಬರುತಾರೇನೆ |

ಭರರರ ಮೋಟಾರದಾಗ

ಕರುಣದಿಂದ ಕರ ಪಿಡಿಯಲು ಶ್ರೀಗುರು ||ಪಲ್ಲ||

ಬಡ ಧೃಢಭಕ್ತರ ನೋಡಿ |

ಸಡಗರದಲ್ಲಿ ಕೂಡಾಡಿ

ಬೇಡಿದ ವರ ದಯ ಮಾಡುವ ಶ್ರೀಗುರು | ||1||

ಬಲ್ಲವರಿಗೆ ಬಲು ಪ್ರೇಮ |

ನಿಲ್ಲದೆ ಸಲಹುವ ನೇಮ

ಎಲ್ಲಿ ನೋಡಲಲ್ಲಿರುವನು ಶ್ರೀಗುರು ||2||

ಆದಿಯಲಿದ್ದಂತಾ ವೇದವ |

ಬೋಧಿಸುವಾತ

ಆದಿ ಅನಾದಿಗಳ್ತಿಳಿಸುವ ಶ್ರೀಗುರು ||3||

ಬಲ್ಲವರಾತನ ಕೂಡಿ |

ಎಲ್ಲ ಸುಖದಿ ಲೋಲಾಡಿ

ಎಲ್ಲಕಾಲ ಸುಶೀಲದ ಶ್ರೀಗುರು ||4||

ಬಳಿಯುವನೆ ಭವರೋಗ |

ಇಳಿದಾನೆ ಕಲಿಯಾಗ

ಇಳೆ ನರಜನ್ಮವು ತಾಳಿದ ಶ್ರೀಗುರು ||5||

ಭಕ್ತಿಗೆ ವಲಿಯುವ ತಾನು |

ಮಿಥ್ಯದಿಂದ ಫಲವೇನು

ಭಕ್ತಿಜ್ಞಾನ ವೈರಾಗ್ಯದ ಶ್ರೀಗುರು ||6||

ಧರಿಯೊಳು ಲಿಂಗದ್ಹಳ್ಳಿ |

ವರಕವಿ ಗುರು ಮುರುಗೀಶ

ಚರಣದೊಳಗೆ ಮಾಣಿಕ್ಯದ ಶ್ರೀಗುರು ||7||

ಶ್ರೀಗುರು ಉಪದೇಶದಿ |

ಭಯವಾದೋ ಅಭಯಾದೋ ಭಯವಾದೋ

ಘೋರ ಸಂಸಾರಿಗೆ ಬಹು ದೂರಾದೊ

ಪಾರಮಾರ್ಥ ಶರೀರದೊಳಾದೊ

ಅರಿತು ನೋಡುವರ ಕರದೊಳಾದೊ

ಮೂರ್ಖ ಮನುಜರಿಗೆ

ದೊರಿಯದೋ ದೊರಿಯದೋ ದೊರಿಯದೋ ||ಪಲ್ಲ||

ಆರು ಬೆಟ್ಟದ ಆಚಿಲಿ ಆದೊ |

ಮೂರು ಕೊಳ್ಳದ ಮಲಕಿನೊಳಾದೊ

ಏರಿ ನೋಡಿದರೆ ಸಣ್ಣ ದ್ವಾರಾದೊ

ಸಾರಿ ಹೋದವರಿಗದು

ದೊರಿಯದೋ ದೊರಿಯದೋ ದೊರಿಯದೋ ||1||

ಏಳುಸುತ್ತಿನ ಕೋಟೆಯೊಳಾದೊ |

ಏಳು ನದಿಯ ಸಂಗಮದೊಳಾದೊ

ಏಳು ಜ್ಯೋತಿಯ ಬೆಳಕಿನೊಳಾದೊ

ತಾಳ ಮರ್ದಲಿ ನಾದದೊಳಾದೊ

ಭಯವಾದೊ ಅಭಯಾದೊ ||2||

ದ್ವಾರ ಒಂಭತ್ತು ಬಾಗಿಲೊಳಾದೊ |

ಎರಡು ಸ್ಥಂಭದ ಗುಡಿಯೊಳಾದೊ

ಸುರಿವ ಅಮೃತದ ಧಾರೆಯೊಳಾದೊ

ಕರಿಘೂಳೀಶನ ಉನ್ಮನಿಯೊಳಾದೊ

ಭಯವಾದೋ ಅಭಯಾದೋ ||3||

ನಳಿನಸುತೆ ಇಳೆಯೊಳಗ ಉದಸಿಹಳೊ |

ಕಳೆದುಳಿದು ನಯನದಿ

ಸುಳುವ ದಳಗಳನಟ್ಟಿ ತಿರುಗುವಳೋ

ನಳಿನ ದಳಗಳು ಹೊಳೆದು ಥಳಥಳ ಕಾಳೀ ತ್ರಿಗುಣದಿ

ಇಳಿದಳಾ ಕ್ಷಣ ಯೋಗ ದಾರಿಲಿ

ನಳಿನ ಕರ್ನಿಕಿಯು ನಡು ನಾಡದಿ ||ಪಲ್ಲ||

ಆರು ವರ್ಣದ ದಾರ ಸೀರಿಯನು |

ಆರಾರ್ಧ ಚಕ್ರವ ಸೇರಿ ನಿರ್ವಯಲಾಗಿ

ತಾರಿಹನು ಅರವಿಯು ಕುಂಡಲಿಯು ಶಂಕರಿ

ತೋರುತಿರ್ದಳಾಗ ತ್ರಿಕೋಣಿ

ಕಾರಣಾತನು ಹಿಡಿದು ತೋರ್ವಳು

ವೀರಗದ್ದಿಗೆ ರಂಗು ನಿಲಯದಿ ||1||

ಜ್ಞಾನ ವಿದ್ಯೆಯು ಚಿತ್ತ ಅಹಂಕರದಿ |

ವಿನಯದಲಿ ಹೃದಯದಿ

ತನುವು ಧನವು ಇತ್ತು ಕಿಂಕರದಿ

ನೆನವಿನೋಳ್ ನೆನವಡಗಿ ಚಿದ್ಘನ

ದನುವರಿತು ವಸವೆನಿಸಿ

ಯವ್ವನ ಕೊನೆಯೊಳಗಿರುವ ಜೀವನ

ಕನಕ ಸಿಂಹವನೇರಿ ಜನನಿ| ||2||

ಧರೆಯೊಳು ಗುರು ರಜತಚಲದಲ್ಲಿ |

ಕರವೆತ್ತಿ ಕರೆಯಲು

ತ್ವರವಗೈದೆ ಸರಸ ದೂಡುತಲಿ

ಕರುಣದ ದೃಷ್ಟಿಯು ತೆರೆದು ನೋಡಲು

ಶರಣು ಎನ್ನುತೆ ಶರಗು ಹಿಡಿದನು

ಕರುಣಹಂಸ ವರವ ನೀಡುತ

ನಿರುತ ಕರಿಘೂಳೀಶಗೊಲಿತಳೊ ||3||

ಪರಮಾತ್ಮ ಹಾನ ಈ ಘಟದೊಳಗ |

ಪರಮಾತ್ಮ ಆನ ಪರಿಕ್ಷಿಸಿ ನೋಡೋ

ತನು ಮಠದೊಳಗ ಪರಮಾತ್ಮ ಆನ ||ಪಲ್ಲ||

ಪೃಥ್ವಿ ಪ್ರಕಾಶ ವಾಯು ಆಕಾಶ |

ತತ್ವ ನಕಾಶ ಗುಪ್ತ ಮಹೇಶ

ಚಿತ್ತಮನ ಕೂಡಿಸೋ ನೋಡದೊಳಗ

ಪರಮಾತ್ಮ ಹಾನ ||1||

ಅಂಗ ಪ್ರತಂಗ ಲಿಂಗ ಸೂಸಂಗ |

ಅಂಗಜನಾಭಂಗ ತುಂಗ ಶಂಭುಲಿಂಗ

ಅಂಗಲಿಂಗ ಶಿವಲಿಂಗ ಪೀಠದೊಳಗ

ಪರಮಾತ್ಮ ಆನ ||2||

ಇಂದ್ರಿಯ ಪಂಚಕ ನೀ ಮದ್ರಿಸೋ ವಂಚಕ |

ಬಂಧುರ ರೇಚಕ ಕುಂಭಕ ಆಚಕ

ಇಂದು ರವಿಕೋಟಿ ಪ್ರಕಾಶದೊಳಗ

ಪರಮಾತ್ಮ ಆನ ||3||

ವಾಸನ ತ್ರಯದೊಳು ಪಾಶಾಣ ತ್ರಯದೊಳು |

ದೋಷಣ ತ್ರಯದೊಳು ಈಷಣ ತ್ರಯದೊಳು

ಕಾಶೀ ಉಪದೇಶದರ್ಭಟದೊಳಗ

ಪರಮಾತ್ಮ ಆನ ||4||

ಸಯ್ಯದ ಮೊಹಮ್ಮದ ಐನೂರೇ ಹೈಮದ |

ತೈಯ್ಯಬ ಕಲ್ಮದ ವೈಲವಪೇಳಿದ

ಅಯ್ಯ ಕರಿಘೂಳಿ ಲಲಾಟದೊಳಗ

ಪರಮಾತ್ಮ ಆನ ||5||

ಹರನ ಭಜಿಸಲಿಲ್ಲ ಮನಸೇ |

ಮನಸೇ ಮನದೊಳಗ ಇರುವನು ಈಶ

ಆರು ಚಕ್ರದ ಮೇಲೆ ಸೊಗಸೆ

ಹರಿ ದೇವತೆಗಳಿಗೆ ಸರಸೆ

ಸೇವ ಮಾಡುತಲಿರು ನೀ ಅರಸೆ

ನಿನಗೇನು ಕಡಿಮೆ ಬಿಡು ಆಸೆ

ಸಾಮಿಪ್ಯ ಪದವಿ ಕೈಲಾಸೆ ಹರ ||ಪಲ್ಲ||

ಬ್ಯಾಡೋ ಬ್ಯಾಡೋ ಬ್ಯಾಡೋ |

ಅವಗುಣಗಳು ನೀ ನಡಿಬ್ಯಾಡೋ

ಗುರುಹಿರಿಯರ ವಾಕ್ಯ ಸಿದ್ಧಿ ಮಾಡೊ

ದುರ್ಮಾರ್ಗ ಸಂಗವು ಬ್ಯಾಡೋ

ಯಮ ಶಿಕ್ಷಿಸುವನು ನೀ ನೋಡೋ ಹರ ||1||

ಆರೋ ಆರೋ ಆರೋ |

ಕಾಮಕ್ರೋಧಗಳಿರುವವು ಆರೋ

ಆರಿಗಿ ಕಾಣವಲ್ಲಾರೊ

ದುರ್ಬುದ್ಧಿಗಿ ಮನಗೊಡುವಾರೋ

ಗುರು ಪುತ್ರರಾದಂಥವರೊ

ಶಾಂತಿ ಖಡ್ಗದಿ ಸಂಹರಿಸುವರೋ ಹರ ||2||

ಆಹೋ ಆಹೋ ಆಹೋ |

ಮಲಮೂತ್ರದಿಂದ ದೇಹವೊ

ನರ ಎಲವು ಚರ್ಮ ಮಾಂಸವೊ

ತುಂಬಿರುವಂಥ ಈ ಘಟವೋ

ಜೀವಿರುವತನಕ ಕ್ಷೇಮವೋ

ಕವಡಿಗೆ ಬಾಳದಿಲ್ಲವೊ ಹರ ||3||

ಅಣ್ಣ ಅಣ್ಣ ಅಣ್ಣ |

ನಿನಗಿಂತ ಹೆಚ್ಚಿಗಿಲ್ಲಣ್ಣ

ಪರಮಾತ್ಮ ನೀನೆ ಕಾಣಣ್ಣ

ಪರಸ್ತ್ರೀಯ ಭ್ರಮಿಸಬ್ಯಾಡಣ್ಣ

ನರ್ಕಿರುವದು ದೂರ್ಮಾಡಣ್ಣ

ನಾನೆಂಬ ಗುಣ ಅಳಿಯಣ್ಣ

ನಾರಾಯಣನಾಗಿ ಇರಣ್ಣ ಹರ ||4||

ಆನೋ ಆನೋ ಆನೋ |

ಎಲಿರಾಜಳ್ಳಿಯಲ್ಲಿ ಇರುವನೋ

ಕಣ್ಣಿನೊಳು ಕಣ್ಣಗಂಡವನೊ

ಸದ್ಗುರುವು ಕರಿಘೂಳೀಶಾನೊ ಹರ ||5||

ಶಿವನ ಭಜಿಸಲಿಲ್ಲ ಜೀವ ಜೀವ |

ಶಿವನ ಸೇವೆಗಯ್ಯಲನುಭಾವ

ಸಾವಧಾನದಿ ತಿಳಿವದು ನಿಜವ

ಭವ ನೆವಗಳು ಜವ ಕಳೆಯುವ

ಆವಾವಗ ಸ್ಥಿರ ಸುಖವೀವ

ಕೈವಲ್ಯ ಕೈ ಸೇರುವ ಶಿವನ ||ಪಲ್ಲ||

ತಡಿಯೋ ಕೆಡಗುಣಗಳು ಬಾರದೆ ತಡಿಯೋ |

ಈಡಪಿಂಗಳ ನಾಡಿಲಿ ನಡಿಯೋ

ನಡುವಿರುವದು ಸುಷುಮ್ನನಾಡಿಯೋ

ಅಡಿಗಡಿಗೆ ಮೃಡನ ನುಡಿ ನುಡಿಯೋ

ಜಡದೇಹ ಬಿಡಿಸಿ ಪಾದ ಪಡಿಯೋ ಶಿವ ||1||

ನೋಡೋ ಬಿಡದನುದಿನ ಸಾಧನ ಮಾಡೋ |

ಎಡ ನೇತ್ರದ ದೃಷ್ಟಿಯ ನೀಡೋ

ಓಡಾಡುವ ಮನ ಸ್ಥಿರ ಮಾಡೋ

ಮೃಡತಾರಕ ರೂಪದಿಗೂಡೋ

ಸಡಗರದಲಿ ಸದಾ ಲೋಲಾಡೋ ಶಿವನ ||2||

ನಾದಾ ಆದಿಯಲಿ ಆಲಿಸು ನಾದ |

ಸದಾ ಸಾಧಿಸು ದಶವಿಧ ನಾದ

ಇದು ಮನವನು ನಿಲಿಸುವದಾದ

ಸದಾಶಿವನ ಪಾದದಲ್ಯಾದ

ಅದರಲ್ಲಿ ಆದ ನಿಜಬೋಧ ಶಿವನ ||3||

ತಿಳಿಯೋ ಥಳ ಥಳಿಸುವ ಬೆಳಗಿಲಿ ಸುಳಿಯೋ |

ಬಿಳಿದ್ಹಳದಿ ನೀಲದೋಳ್ಹೊಳಿಯೋ

ಏಳು ಹೊಳಿ ಸುಳಿ ಮೇಲೇರಿ ಹೊಳಿಯೋ

ಇಳೆಯೊಳು ಅಳಿಯದಂತುಳಿಯೋ ಶಿವನ ||4||

ಸಾಕೋ ಕಾಕುಗುಣಗಳು ಕಡಿಯಲಿ ನೂಕೋ |

ಈ ಲೋಕದ ಜೀವನ ಸಾಕೋ

ಅಕಳಂಕ ಕರಿಘೂಳಿ ಇದಕೋ

ಸಹಕಾರದಿ ವಶಮಾಡಿಕೊ ಶಿವನ ||5||

ಕಾಣೈ ತಾರಕ ಬ್ರಹ್ಮವ ನಿನ್ನಾಂತ್ರದೊಳು |

ಕಾಣೈ ತಾರಕ ಬ್ರಹ್ಮವ

ಕಾಣೈ ತಾರಕ ತೇಜ ಮಾಣೈ

ದುರ್ವೆಸನ ನಿಜ ಕ್ಷೋಣಿಪತಿಯು

ಕುಂಭಕೋಣಿ ಸಂಭ್ರಮವ ಕಾಣೈ ||ಪಲ್ಲ||

ಗದ್ದಿಗಿ ಹಾಕಿ ಕಣ್ಣು ಮಧ್ಯ ಪೀಠಾಗ್ರದಲ್ಲಿ |

ಸದ್ದುಯಿಲ್ಲದೆ ಮನ ಮುದ್ರೆಯ ನೇಮವ ಕಾಣೈ ||1||

ಎಡರು ಮೂರು ಐದು ಹತ್ತು ಆರು ನಾಲ್ಕು ಅಷ್ಟ ಅಪ್ತ |

ಅರವತ್ತರಲಿ ಪತ್ತ ಸಾರುವದು ಗ್ರಾಮವಾ ಕಾಣೈ ||2||

ಸರ್ವಾಂಗ ಲಿಂಗವಾಗಿ ಸರ್ವೆಲ್ಲ ಅಂಗವಾಗಿ |

ಸರ್ವೇಶ ಕರಿಘೂಳಿ ಸರ್ವ ಜಂಗಮವ ||3||

ಮಂಗಳಾಂಗಿ ವರ ಗಂಗಾಧರನ ಲಿಂಗನ ನೋಡೆ |

ಅಂಗವೆಂಬೋ ಆಲಯದಿ ನಿಸ್ಸಂಗನಾಗಿ

ಕೋಟಿ ತಿಂಗಳನಂತೆ ಪಾಡೆ ಮಂಗಳಾಂಗಿ ||ಪಲ್ಲ||

ರೂಪುನಾಮಗಳೇನೇನಿಲ್ಲ ವ್ಯಾಪಿಸಿಹನು ಜಗವೆಲ್ಲ |

ನಿರೂಪಿಯಾಗಿ ಆ ಪರಬ್ರಹ್ಮನು ಸೂಪಿನೊಳಗ ಕಾಣುವಲ್ಲ

ವಿಪರೀತ ವಿಧದಿ ನೋಡಲಿಕ್ಕೇನಳುವಿಲ್ಲ ಗುಪಿತದೀ ಗುರಿಯಿಟ್ಟು

ಜ್ಞಾಪಕದೊಳಿರುಬೇಕು ಆ ಪರಂಜ್ಯೋತಿಯ ಮೇಲೆ ಮಂಗಳಾಂಗಿ ||1||

ಜಪತಪ ನೇಮಗಳು ಜಪಿಸಿದರೇನು ಫಲವಿಲ್ಲ |

ಕೋಪತಾಪ ಅಳಿದು ಮನ ಸಾಪ ತಿಳಿದು

ಇನಸಾಪ ಮಾಡೋ ಜ್ಞಾನದ ಕೀಲ ಈ ಪುಸ್ತಕ

ಪಾಠ ಶಾಸ್ತ್ರ ಪುರಾಣವು ಸುಳ್ಳೊ ಅದು ಸುಳ್ಳೊ

ವಿಪಿತದಿ ಕುಳಿತು ಜಪಮಾಲೆ ಎಣಿಸುವದು ಮಳ್ಳೊ ಅದು ಮಳ್ಳೊ

ಈ ಪ್ರಪಂಚ ನಡಿನುಡಿ ಟಪ್ಪಾಖಾನಿಯಂತೆ ಪಳ್ಳೊ ಅದು ಪಳ್ಳೊ

ಉಪದೇಶ ಪಡೆದು ಗುರುಪಾದ ಪಿಡಿದು ನೀ ನೋಡೆ

ಅಂಗವೆಂಬೊ ಆಲಯದಿ ನಿಸ್ಸಂಗನಾಗಿ

ಕೋಟಿ ತಿಂಗಳನಂತೆ ಪಾಡೆ ಮಂಗಳಾಂಗಿ ||2||

ಆಶ ಪಾಶ ಕ್ಷೇಶ ತಾಮಸದಿ ಬಸಿಯದಿರು ಇಂದ್ರಿ |

ವ್ಯಸನೇಳುವತ್ತಿ ಚಲಿಶಾಡದಂತೆ ಉಲ್ಲಾಸದಿ ಬಿಗಿ ನವರಂಧ್ರ

ಹಸುವಾಗಿ ಕೊಸರಿ ಬುಸುಗರಿದು ಬರುವ ನಾಗೇಂದ್ರ

ವಿಷ ಕಾರುವ ಸಮಯದಿ ಧ್ಯಾಸವು ಸೋಸದೆ

ಹುಸೇರಿನಾಗೊ ದೇವಿಂದ್ರ ನಾಸಾಧನಾದರೆ ನರ್ಕಕ ನೀ ನಡಿಯಂದ

ನಡಿಯಂದ ನೀ ಸಾಧನಾದರೆ ನಿಜ ಸಮಾಧಿ ಪಡಿಯಿಂದ

ಪಡಿಯಂದ ಈ ಹೇಸಿಕೆ ಸಂಸಾರ ಭೋಗ ತ್ಯಾಗ ಮಾಡೆಂದ

ಮಾಡೆಂದ ಹಸುಗೂಸಿನಂತೆ ಸದ್ಗುರುವಿನ ವಶ ನೀ ಮಾಡೇ

ಅಂಗವೆಂಬೋ ಆಲಯದಿ ನಿಸ್ಸಂಗನಾಗಿ

ಕೋಟಿ ತಿಂಗಳಿನಂತೆ ಪಾಡೆ ಮಂಗಳಾಂಗಿ ||3||

ಭವಗೇಡಿಯಾಗಿ ಆ ಗೌರಿಧವನರಿಯದ ತಿರಗಿದ ಹಿಂದೆ |

ಜೀವನೋಪಯಕಾಗಿ ಯಾವಾಗಲು ದುಡಿದು ದುಡಿದು ಬಹಳ ಬೆಂದೆ

ಸಾವಿರಕೋಟಿ ಜನ್ಮದ ಸುಕೃತ ಫಲದಿಂದ

ಶಿವನಾಮ ಬಿಂದು ಭವದೊಳಗ ಬಂದು

ಅವತರಿಸಿ ಹರನು ನರನೆಂದೆ ಆವಾಗ

ತೋರಿಸಿದ ಸಾಂಖ್ಯ ತಾರಕದ ಯೋಗ

ರಾಜಯೋಗ ರವಿಕೋಟಿ ಸೂರ್ಯನ ಪರಮ ಪ್ರಕಾಶದ ಬೆಳಗ

ಜ್ಯೋತಿ ಬೆಳಗ ವಿವೇಕದಿ ಉನ್ಮನಿಯಲ್ಲಿ

ಮರೆತು ಬಂಧುಬಳಗ ಬಂಧುಬಳಗ

ವಿಧವಿಧದಿ ಯವ್ವನದ ಕರಿಘೂಳೀಶನ ನೋಡೆ ಅಂಗವೆಂಬೋ

ಆಲಯದಿ ನಿಸ್ಸಂಗನಾಗಿ ಕೋಟಿ ತಿಂಗಳ ಪಾಡೆ ಮಂಗಳಾಂಗಿ ||4||

ಅರುವಿನ ಅರುವನು ನರರೇನು ಬಲ್ಲಾರು ಮರೆಯಾಗಿರುವನು |

ಪರಬ್ರಹ್ಮ ಗುರು ಕರುಣ ಪಡೆದು ಗುರುಗೂಡಿದವರಿಗೆ

ಸ್ಥಿರವಾಗಿರುವದು ಪರಬ್ರಹ್ಮ ||ಪಲ್ಲ||

ಕರಗದೆ ಮರಗದೆ ಹರಿಯದೆ ಮುರಿಯದೆ |

ತ್ವರಿಯದೆ ಇರುವದು ಪರಬ್ರಹ್ಮ

ನರ ಪಶು ಮೃಗ ಕ್ರಿಮಿ ಜಲಚರ

ಸರ್ವರೋಳ್ನಿರತಾಗಿರುವನು ಪರಬ್ರಹ್ಮ ||1||

ಆಧಾರ ಆದಿಯಾಗಿ ಶೋಧನಗೈಯುತ |

ನಾದನಂದವು ಪರಬ್ರಹ್ಮ

ಆದಿ ದೇವತೆಗಳ ಭೇದನವಾದರೆ

ಮೋದದೊಳಿರುವನು ಪರಬ್ರಹ್ಮ ||2||

ಎರಡೆರಡಾಗಿ ಎರಡು ಹನ್ನೆರಡರೊಳು ಪರಬ್ರಹ್ಮ |

ಎರಡ್ಹತ್ತು ಸಾವೀರ ಎರಡಷ್ಟಮಿಯೊಳು

ಎರಡರವತ್ತುರೊಳು ಪರಬ್ರಹ್ಮ ||3||

ಧರಿಗಿರಿ ಗುಂಹ್ಯಾರ ತಿರುಗಿದರಿಲ್ಲವು |

ತಾರಕದಿರುವನು ಪರಬ್ರಹ್ಮ

ಕರಿಘೂಳೀಶರ ಚರಣ ಸರೋಜದೊಳು

ಪರಿಪೂರ್ಣ ಇರುವದು ಪರಬ್ರಹ್ಮ ||4||

ದೊರಕದು ಮನಸೆ ತರಕವುಗೈದರೆ |

ಪರಮ ಗೌಪ್ಯ ಮಹಾ ಮಂತ್ರವೆಲೋ ||ಪಲ್ಲ||

ಶರಣಾಗತರಿಗೆ ಸ್ಥಿರ ವೈರಾಗ್ಯವು |

ವೀರಶೈವರ ಸ್ವಾಧೀನವೆಲೋ

ಗುರು ಹಿರಿಯರಿಗೆ ಸ್ವಾಧೀನವೆಲೋ

ಇದು ದೊರೆ ಅರಸರಿಗೆ ಅಸಾಧ್ಯವೆಲೋ

ಅರಿಯದೆಲೋ ಅದು ಮರಿಯದೆಲೋ

ಅದು ಮರಗದು ಕರಗದು ಸೊರಗದೆಲೋ ||1||

ಅರವು ಮರವು ಎರಿಡಿಲ್ಲವೆಲೋ |

ಮರವುಗರವು ಕುಲವಿಲ್ಲವೆಲೋ

ಸುರಿಸುವದು ಸಾರೂಪ್ಯವೆಲೋ ಇದು

ಕ್ಷೀರಾಮೃತ ಸವಿ ಸಾರವೆಲೋ ||2||

ಕಾರಣಕರ್ತರು ಇಲ್ಲವೆಲೋ |

ಮಹಾಕಾರಣ ತಾನಾಗಿರುವದೆಲೋ

ಪೂರ್ಣ ಬ್ರಹ್ಮ ಕರಿಘೂಳಿಯಲೋ

ಧ್ಯಾನ ಮೌನದಿ ಧಾರಣಗೈಯುವದೆಲೋ ||3||

ಯಾಕೆ ಸಂಸಾರವ ಬಿಡಬೇಕೊ |

ವೇಷ ಹಾಕಿ ಸನ್ಯಾಸಿಯಾಗುವದ್ಯಾಕೊ

ಅಕಾರ ಉಕಾರ ಮಕಾರ ಸಾಕಾರ

ಓಂಕಾರ ಪ್ರಣಮ ಝೇಂಕಾರವು ತಿಳಿದರೆ ||ಪಲ್ಲ||

ಗುರುವಿನ ಮರ್ಮವು ಗುರುತು ಅರಿತವನಾಗಿ |

ಗುರು ಎರಡಕ್ಷರ ಗುರಿ ಕಲಿತವನಾಗಿ

ಗುರುವರ ಸೇವೆಗೆ ಗುಲಾಮನಾಗಿ

ಗುರುವೇ ಹರನೆಂದು ಗುಟ್ಟು ತಿಳಿದರೆ ||1||

ಮದ ಮತ್ಸರಂಗಳು ಮುರಿದವನಾಗಿ |

ಮತ ಭೇದಂಗಳು ಮರೆತವನಾಗಿ

ಮಂತ್ರ ವಿದ್ಯೆಗೆ ಮರಗದವನಾಗಿ

ಮಾಯಾದ ಸೃಷ್ಟಿಯ ಮೂಲವು ತಿಳಿದಾರೆ ||2||

ರಾಗದ್ವೇಷವು ನಿರಂಜನನಾಗಿ |

ರಾಜಯೋಗದೊಳು ರಂಜಿಪನಾಗಿ

ರವಿ ಶಶಿ ರಚನೆ ನಿರಾಜಿಪನಾಗಿ

ರಾಮ ತಾರಕಬ್ರಹ್ಮರಮ್ಯದಿ ತಿಳಿದರೆ ||3||

ಹಂಸೋಹಂಗಳ ಹಸಿಯು ತಾನಾಗಿ |

ಹಂಸ ವಾಹನರೂಢನಾಗಿ ತಾ

ಹರಿಹರ ಬ್ರಹ್ಮರ ಹಾದಿಯ ತಿಳಿದರೆ

ತಾರಕ ಬ್ರಹ್ಮನ ಜ್ಞಾನವು ತಿಳಿದರೆ ||4||

ಉರಗ ಶಿರೋಮಣಿ ಗುರುತರನಾಗಿ |

ಉರಿವ ಉನ್ಮನಿಗುಪಾಸಿಕನಾಗಿ

ಪೂರ್ವ ಪಶ್ಚಿಮಕ್ಕೆ ಸೇರಿದವನಾಗಿ

ವರ ಕರಿಘೂಳಿಯ ಪರಿಪೂರ್ಣವು ತಿಳಿದರೆ ||5||

ಕನಸು ಕಂಡೆ ಕೇಳೆ ಕಾಮಿನಿಯೇ |

ತನು ಮಂದಿರದೊಳಗೆ ಕನಸು ಕಂಡು

ಕನಸು ಕಂಡೆನಮ್ಮ ಅದರ ದಿನಸು ನಾನೇನ್ಹೇಳಲಿ ನಿನಗೆ

ಕನಸು ಮನಸು ದಿನಸಿನೊಳಗೆ

ಮನಸುಗೊಟ್ಟನು ಮನುಜನಾಥನು ||ಪಲ್ಲ||

ಇರುಳು ಹಗಲು ಎಂಬೋದರಿಯಾನೆ |

ಓರ್ವಳೆ ನಿದ್ರಿಯೊಳಿರಲು ಬಂದು ಹರಳು ಒಗಿದಾನೆ

ಮರುಳನಾಗಿ ನಾನದರ ಮೇಲೆ

ಮರವನೇರಿ ನೋಡುತ ಪೋದೆ

ಮರವ ಮುರಿದು ಧರಣಿಗೆ ಬಿದ್ದಿತು

ಸುರಪರನ ಕಂಡು ಮನ ಹರುಷಳಾದೇನೆ ||1||

ಐದು ಕಾಲಿನ ಮಂಚ ಹಾಕಿದೆನೆ |

ಮೇಲುಪ್ಪರಿಗೆಯಲ್ಲಿ ಸಾಲು ಸಾಲಿಗೆ ಜ್ಯೋತಿ ಹಚ್ಚಿದೆನೆ

ಬಾಲೆ ಬಹುಪರಿನಿದ್ರಿಯೊಳಿರಲು

ಮೇಲಕ್ಹಾರಿತು ಮಂಚವು ಸಹಿತಲಿ

ಆಲಿ ತೆರೆದು ನೋಡೆನೆಂದರೆ

ನೀಲವರ್ಣದ ಬಲಿಯ ಹಾಕಿದನೆ ||2||

ಸ್ವಪ್ನದೊಳಗೆ ಜಾಗ್ರ ಕಂಡೆನೆ |

ಮನ ಜ್ಞಾಪ್ತಿಯಲಿಂದೆ ಜಾಗ್ರದಿ ಸುಷುಪ್ತಿಯೋಳ್ಸೇರಿದೆನೆ

ಆಪ್ತಹಿತರು ಬಾಜಾಬ್ತಯಲ್ಹಾರ್ವರು

ಹಪ್ತಗಿರಿ ಕೊಡೆ ಹಿಡಿದರೆನಗೆ

ಗುಪ್ತದಿ ಜಾಂಗುಡಿ ತಾಳ ನಾದ ಮನ

ದೀಪ್ತಿಲಿ ಕೇಳುತ ಜಾಗ್ರದೊಳಾದೆನೆ ||3||

ಮೂರಾವಸ್ಥೆ ಏಕ ಕಾಲದಲಿ |

ಬ್ಯಾರೆ ಬ್ಯಾರೆ ಗುಣಿಸಿ ಸಾರಿಸಾರಿಗೆ ಹಂಚಿ ಹಾಕುತಲಿ

ಪಾರುವಾರಿಧಿ ಪಾರುಗಾಣಿಸೊ

ಪಾರಮಹಿಮ ಕರಿಘೂಳೇಶ್ವರ

ಧೀರ ನಾಗೆಂದಮೃತಪ್ಯಾಲಿ ಕುಡಿಸಿ

ಕೊರಳಿಗೆ ಹಾಕಿ ಪೋದಾನೆ ||4||

ಗುರುಲಿಂಗ ಜಂಗಮರು ನಾವು |

ಗುರುತು ಹಿಡಿಯಿರಿ ನೀವು

ಅರವಿನರುವನು ಗುರುತು ಪೇಳುವೆವು ||ಪಲ್ಲ||

ಗುರುವು ಲಿಂಗ ಜಂಗಮರು |

ಹರನರನ ಅವತಾರದಲಿ ಮತ್ರ್ಯದಿ

ಕುರುಹು ತೋರಲಿ ಭರದಿ ಬಂದೆವು

ಹಿರಿಕಿರಿಯರೆನ್ನದಲೆವರಿವೆವು ||1||

ಮೂರು ಮೂರ್ತಿಯ ಮೂಲಿ ತೋರಿಪೆವು |

ಮೂರು ತೆರದಲಿರ್ಪೆವು

ಮೂರು ಸ್ಥಲ ದೇಹದಲಿ ಸಾರಿಪೆವು

ಮೂರು ಕರಣವು ಮೂರು ವರಣವವು

ಮೂರು ಸ್ಥರಣವು ಮೂರು ಭರಣವು

ಮೂರು ಶರಣವು ಮೂರು ಮರಣಗಳರಪುತಿರ್ಪೆವು ||2||

ನಾಲ್ಕು ಸಾಧನಗೈದ ಸಂಪನ್ನ ಸಿಲ್ಕಾದೆ ಅನುದಿನ |

ಪಾಲ್ಕಿಯೋಳ್ಮೆರೆಯುವನು ಭೂಪ ತಾನ

ನಾಲ್ಕು ಭೋಗವು ನಾಲ್ಕು ಭಾಗ್ಯವು

ನಾಲ್ಕು ಯೋಗವು ನಾಲ್ಕು ತ್ಯಾಗವು

ನಾಲ್ಕು ಹಾದಿಯು ನಾಲ್ಕು ಬೀದಿಯು

ನಾಲ್ಕು ವೇದಗಳೊಪ್ಪಿಸುತಿರ್ಪೆವು ||3||

ಪಂಚಭೂತಗಳಂಶ ತಿಳಿಸುವೆವು |

ಪಂಚಾಂಗ ಪೇಳೆವು ಪಂಚವಿಂಶತಿ

ತತ್ವವ ಹೊಳಿಸುವೆವು ಪಂಚಕ್ಲೇಶವು

ಪಂಚಕೋಶವು ಪಂಚಶವು ಪಂಚಪಾಶವು

ಪಂಚಪ್ರಾಣವು ಪಂಚ ಪ್ರಣಮವು

ಪಂಚಬಾಣವು ಪೇಳುತಿರ್ಪೆವು ||4||

ಆರುಸ್ಥಲದಳ ಚಕ್ರವಧಿಪತಿಗಳ್ ಆರಾರು |

ಮೂವತ್ತಾರು ಅಂಗಗಳಾರು ದೇವತೆಗಳ್

ಆರು ಗಂಗೆಗಳಾರು ಲಿಂಗಗಳಾರು

ಸಂಗಗಳಾರುರಗಂಗಳ್ ಆರು ಯುಕ್ತಿಯ

ಆರು ಶಕ್ತಿಯು ಆರು ಭಕ್ತಿಗಳರವುತಿರ್ಪೆವು ||5||

ಏಳು ಋಷಿ ವ್ಯಸನೇಳು ಸಾಗರವು |

ಏಳೇಳು ಮನ ತಳವಳು ಪದ ಲೋಕೇಳುವಳ್

ಸ್ವರವು ಏಳು ವಾರಗಳೇಳು ತಾರಗಳೇಳು

ದ್ವಾರಗಳೇಳು ಪುರಗಳ್ ಏಳು ನೆಲೆ

ಕಲಿ ಏಳು ತಲಿಬಲಿ

ಏಳು ಫಲಗಿರಿ ಹೇಳುತಿರ್ಪೆವು ||6||

ಅಷ್ಟಸಿರಿ ಸಿದ್ಧಿಯಾ ಅಷ್ಟ ಮದ

ತನುಕೂಟ ನಟ್ಟಿಪೆವು |

ಅಷ್ಟವದಾನವು ಅಷ್ಟ ವಿಧಾನವು

ಅಷ್ಟ ಸತಿ ಸುತರ್ಹಿತರು ವಾರ್ದನ

ಅಷ್ಟ ತಿಥಿ ಅಷ್ಟ ಮತಿ ಗುರು

ಅಷ್ಟ ವಸು ಪಶು ಪ್ರಕಟಿಸುತಿರ್ಪೆವು | ||7||

ನವ ದರವಾಜ ತಲಪ ತೆರಿದಿಸುವೆವೊ |

ನೌಮಿರುಳು ಶ್ರೀ ರತನ್ ನೌ

ನೌಮೂರ್ತಿ ನಿಧಿ ಗ್ರಹ ಧ್ಯಾನ್ಯ ರಸ ಭೂ

ನೌಪ್ರಣಮ ದ್ವಯವು ಸಕೀಲಾ

ನೌಸತ್ಯ ಗುಣ ಶರಣಾರ್ಪಿತಾರ್ಪೆವೊ ||8||

ಹತ್ತು ಇಂದ್ರಿಗಳದರ ಸ್ಥಾಪನವೊ ಹತ್ತತ್ತು ವಿಷಯವೊ |

ಹತ್ಹೆಸರು ನರಶಿರ ಗಂಧಲೇಪನವೊ

ಹತ್ತು ನಾಡಿಗಳ್ಹತ್ತು ಘಾಳಿಗಳ್ಹತ್ತು

ನಾದಗಳ್ಹತ್ತು ಕಳೆಗಳ್ಹತ್ತು

ರಥ ಅಂಗ ಹತ್ತು ಸಾತ್ವಿಕ ಹತ್ತು

ಶತದಳಗೊತ್ತು ತೋರ್ಪೆವೊ || ||9||

ಒಂದೆ ಹನ್ನೊಂದಾಗಿ ಹೊಂದೆಪೆವೊ |

ಹನ್ನೊಂದರೊಳು ಮತ್ತೊಂದು ಗುಣಿಸಿನ್ನೊಂದು

ಪರಸವಿ ಉಣಿಸುತಿರ್ಪೆವೊ ||10||

ದ್ವಾದಶ್ಯಾತ್ಯಾತ್ಮ ಬೋಧಿಪೆವೊ |

ದ್ವಾದಶಿಯ ತಿಥಿಗಳ ಜ್ಯೋತಿ ಉತ್ತಮನೆ

ದ್ವಾದಶಿ ವ್ರತವು ಜಪವು

ತ್ರಯೋದಶಿ ಗಣಾಧೀಶ ದೇವರು

ಚತುರ್ದಶ ಮನು ಭುವನ ತಿಥಿಗಳ

ಪಂಚದಶ ತನು ಪೌರ್ಣಮಮವಾಸಿ

ಘೋಢಷುಪಚಾರ ಕಳೆಯಾ ಹೊಳೆಪೆವೊ ||11||

ನಮ್ಮ ನಿಮ್ಮಗೆ ಸಾಕ್ಷಿ ವಮ್ಮನವೊ |

ನಿಮ್ಮೊಳಗೆ ನಿಮ್ಮ ಬ್ರಹ್ಮ ಕಾಣ್ವದಕ್ಯಾಕೆ ಇಮ್ಮನವೊ

ಬ್ರಹ್ಮಜ್ಞಾನಕೆ ತನುಮನವು ಧನ

ಸುಮ್ಮನರ್ಪಿಸಿ ಪಡಿರಿ ತ್ರಿವಿಧವು

ಬ್ರಹ್ಮದುನ್ಮನಿಯ ಕರಿಘೂಳಿಯ ಪರ

ಬ್ರಹ್ಮ ಬಿಂದಿನೋಳೈಕ್ಯ ತೋರ್ಪೆವೊ ||12||

ಚಂದ್ರಾರ್ಕ ಕೋಟಿ ತೇಜಾ |

ಬಂದಾ ನವಾಜ ಖಾಜಾ

ಮಂದರಾ ಪುಷ್ಪಪೂಜಾ

ರಾಜಾಧಿರಾಜ ಖಾಜಾ ||ಪಲ್ಲ||

ಆಧಾರ ಲಿಂಗಾಚಾರ |

ಸ್ವಾದಿಷ್ಟದೋಳ್ವಿಚಾರ

ನಾದೋಂಕಾರಮುಚ್ಚಾರ

ವೇದಗೊಚಾರ ಖಾಜಾ ||1||

ಮಹಿ ಜೈಸಿದೈ ಖೇಚಾರ |

ಇಹಪರಕೆ ನಿಜ ಭೂಚಾರ

ಸಹದೇವನ ಸಾಚಾರ

ಸೋಹಂ ಉಚ್ಚಾರ ಖಾಜಾ ||2||

ತನುಗುಣದ ಗ್ರಹಚಾರ |

ಮನ ಬೆಳಿಕಿಯು ವ್ಯಭಿಚಾರ

ಘನಶಾಂತಿ ಚರಾದ್ವಿಚಾರ

ಜನಮೋಪಚಾರ ಖಾಜಾ ||3||

ತಿರುತಿರುಗಿ ಬರುವ ಗಾಚಾರ |

ಪರಿಹರಿಸೋ ನಾ ಲಾಚಾರ

ಪರಿಚಾರಕರ ತಾಚಾರ

ವೀರಶೈವಚಾರ ಖಾಜಾ ||4||

ಪರಬ್ರಹ್ಮಗೊಳಿಸು ವಿಚಾರ |

ನಿರಬೈಲಿನ ಸಮಾಚಾರ

ಕರಿಘೂಳಿಯ ಗುಣಾಚಾರ

ಗುರುಹಾರ ಚಾರ ಖಾಜಾ ||5||

ಕಣ್ಣಿನೊಳಿರುತಿಹನೊ ಕಾರಣ ದೇವ |

ತನ್ನಂತೆ ಕಾಂಬುವನೊ ಕಣ್ಣಿನೊಳಗಣ

ಕಣ್ಣ ತೆರೆದು ಕಾರಣಾತ್ಮಕನನ್ನು

ಸಣ್ಣ ದ್ವಾರದೊಳಾಡಿ ಬ್ರಹ್ಮನು ||ಪಲ್ಲ||

ಇನ್ನು ತಿರುಗಿ ನೋಡಲು |

ನೋಡಲು ಗುರು ಗೌಪ್ಯದಿಂದಿರುವನೆಲೊ

ಇನ್ನು ಕುಮದಾಗ್ನಿ ಬೀದಿಯೊಳು

ತಾನೆ ತನ್ನನು ಹಾದಿ ಹಿಡಿಸಿ

ಪೌರ್ಣಿಮಿ ಅಮವಾಸ್ಯಮಧ್ಯದಿ

ಅನಘ ಅನುಪಮ ಆನಂದೀಶನು ||1||

ಆಧಾರ ಹಾದಿಯಲೋ ದಳ ಕಮಲ ಸ್ಥಲವೊ

ಶೋಧಿಸಿ ಸಾಧಿಸೆಲೊ

ಭೇದಿಸಿ ತ್ರಿಕೂಟದೊಳನುಮೋದಿಸಿ

ಜ್ಯೋತಿಯನ್ನು ಮುಡಿಸಿ

ನಾದದಶಗಳ ಕೇಳಿ ತಾಳುತ

ಆದಿ ಮೂಲಮಂತ್ರ ಒಡಿಯನು ||2||

ಗಂಗೆ ಯಮುನೆ ದಾಟಿಲೊ |

ಸರಸ್ವತಿಯ ಮುಟ್ಟಿ ಶೃಂಗಾಟಕ ಮೀಟೆಲೊ

ರಂಗು ಪಂಚಬಣ್ಣ ತಾರದಿ

ಮಂಗಳಹ ಮಲ್ಲಿಗೆಯ ಮಳೆ ಹನಿ

ಲಿಂಗಮಜ್ಜನಗೈವ ಕರಿಘೂಳಿ

ಜಂಗಮಾರ್ಯ ಸಂಗಮೇಶನು ||3||

ಅಂಬಾ ನೀ ದಯಪಾಲಿಸೆ |

ಶಾಂಭವಿದೇವಿ ಸಾಂಬನೊಳಗೆ ಕಲಿಸೆ

ಅಂಬಾಪಾಲಿಸೆ ದಯ ನಂಬಿದ ಭಕುತರಿಗೆ

ಅಂಬರಾಗ್ರದಿ ಪ್ರೀತಿ ಬಿಂಬಾಧಾರ ತೋರಿ ||ಪಲ್ಲ||

ಒಂದೊಂದು ಸ್ಥಲ ಭೇದಿಸಿ |

ಒಂದರೊಳೊಂಭತ್ತು ವಿಧ ಭೇದಿಸಿ

ಒಂದೆ ಒಂದೆರಡಾಗಿ ಒಂದೆ ಮೂರನುವಾಗಿ

ಒಂದು ನಾಲ್ಕೈದಾರು ಏಳು ಎಂಟನು ತೋರಿ ||1||

ನೋಟ ನೋಟದಿ ಕೂಡಿಸೆ |

ತ್ರಿಕೂಟದಿ ಆಟವಾಟವನಾಡಿಸೆ

ಕೋಟಿ ಸೂರ್ಯನ ಪ್ರಕಾಶ ತಟದೊಳು

ನಾಟ್ಯವಾಡುತ ಶುಭ ಪಾಠ ಪಾಡುತ ಗೌರಿ ||2||

ಈಡಪಿಂಗಳ ಜೋಡಿಸಿ ನಡುನಾಡಿಯ

ಗುಡಿಯೊಳು ಮನಗೂಡಿಸಿ

ನೋಡೈ ನಿನ್ನಯ ರೂಪ

ಮಾಡೈ ಸೋಹಂ ಜಪ

ಬೇಡೈ ನಿಜವರವ

ಮೃಡಾನಿ ಸಮರಸವ ತೋರಿ ||3||

ಗಂಗೆ ಯಮುನೆ ಸರಸೆ |

ತುಂಗಭದ್ರ ಸಂಗಮದೋಳ್ಮಲರಿಸೆ

ಕಂಗಳ ಕಮಲದಿ ರಂಗುಮಂಟಪದೊಳು

ಮಂಗಳಾಂಗ ಕರಿಘೂಳಿ ಲಿಂಗನ ತೋರಿ ||4||

ಸಾಕು ಮಾಡೊ ಜನ್ಮ ಸಾಕು ಮಾಡೊ |

ಸಾಕುಮಾಡೊ ಜನ್ಮ ಮುನ್ನ

ಬೇಕು ಪಾದಮೃತವನು ||ಪಲ್ಲ||

ನೂರು ವರುಷ ಬಾಳಿ ತನ್ನ |

ಸೇರಿ ನಲಿವ ರಾಶಿ ಇಹನು

ನೀರು ಗುರುಳಿಯಂತೆ ನಿಮಿಷದಿ

ತೋರಿ ಅಡಗುವ ತನುವನಿದನು ||1||

ಅಂಗನೆಯರ ಹಂಬಲದಿಂದೆ |

ಭೃಂಗನಾಗಿ ಕೀಟಕದಂತೆ

ಮಂಗಳಾಂಗಿಯ ಮೋಹದಿ ಸಿಲ್ಕಿ

ಭಂಗಪಡುವ ಅಂಗವಿದನು ||2||

ಅಲ್ಲಿ ಇಲ್ಲಿ ಎಂದು |

ತಿರುಗಿ ಬಲ್ಲೆ ಬಲ್ಲೇನೋ

ನಾನೆಂದು ಮರಗಿ ಕ್ಷುಲ್ಲ ಗುಣದಲಿ

ಚರಿ ಮಾಡುವ ಬೆಲ್ಲದಂಥ ಕಾಯವಿದನು ||3||

ಪರಮ ಪರತರ ಪರಶಿವ ನೀನೆ |

ನಿರಘ ನಿರುಪಮ ನಿಷ್ಕಳಂಕ

ಮರವು ಅರಿಸಿ ಅರವುತೋರೊ

ಹರನೆ ಶ್ರೀಗುರು ಕರಿಘೂಳೇಶ ||4||

ಕೂಡಬಾರದೆ ಸುಮ್ಮನೆ ಕೂಡಬಾರದೆ |

ಕೂಡಬಾರದೆ ನಾಡಿನೊಳು

ರೂಢಿಗೀಶನ ಕೃಪೆಯ ಪಡೆದು

ಮಾಡುವವರ ನೋಡಿ ನೀನು

ನೋಡಿ ನೋಡಲದಂಗೆ ಸುಮ್ಮನೆ ||ಪಲ್ಲ||

ಅಲ್ಲದದನು ಅಹುದು ಮಾಡಿ |

ಇಲ್ಲದುದನು ಹುಸಿಯ ಮಾಡಿ

ಎಲ್ಲರೊಳಗೆ ಬಲ್ಲಿದನೆನಿಸಿದ

ಅಲ್ಲಮಹಾಪ್ರಭು ತಾನೆಂದು ||1||

ಎಷ್ಟು ಹೇಳಲು ಕೇಳದ್ಹೋದಿ |

ಭ್ರಷ್ಟ ಸಂಗವ ಹಿಡಿದು ಕೆಟ್ಟಿ

ಸೃಷ್ಟಿಗೊಡೆಯ ಕರಿಘೂಳೀಶನ

ಘಟ್ಟಿಯಾಗಿ ಪಾದ ಪಿಡಿದು ||2||

ನೂರೇನ ಬಿರುಸು ಅಲ್ಲಾ |

ಭಗವಾನಪಾರ ಮಹಿಮೆಯ ಶೀಲಾ

ಮಹಾ ಸತ್ಯವಾನ ||ಪಲ್ಲ||

ಶೂನ್ಯದ ಆಚೀಲಿ ಶೂನ್ಯದಿಚೀಲಿ |

ಹನ್ನೊಂದು ರುಚಿಯಲ್ಲಿ ಶಿವ ಮಾನ್ಯವಾನಾ ||1||

ಏಳು ಅಂಡಾಂಡಕ್ಕೆ ಏಳು ಪಿಂಡಾಂಡಕ್ಕೆ |

ಏಳು ಬ್ರಹ್ಮಾಂಡಕ್ಕೆ ಅಖಂಡವಾನ ||2||

ನಿಮ್ಮ ಪುಣ್ಯದ ಕಿರ್ತಿ ಇನ್ನೇನು ಹೇಳಲಿ ವಾರ್ತಿ |

ಧನ್ಯ ಸರ್ವೇಶಮೂರ್ತಿ ಸಂಪನ್ನವಾನ ||3||

ಎರಗುವೆ ಶರಣರಿಗೆ ಸ್ಮರಿಸುವೆ ಮನದೊಳಗೆ |

ಕರಿಘೂಳಿ ಧ್ಯಾನದೊಳಗೆ ಮಾಡೊ ಧ್ಯಾನ ||4||

ವೀರಶೈವನಾಗೊ ಮನವೆ |

ಪಾರವಾರುಧಿ ನೀಗೊ

ಭಾರಿ ಲಿಂಗವನು ಧರಿಸಿರು ಪರತರ

ಸಾರಾಮೃತ ಸವಿ ಜ್ಞಾನ ವೈರಾಗ್ಯದಿ ||ಪಲ್ಲ||

ಮಾಸಪಕ್ಷ ತಿಳೀಯೊ |

ಧನದ ಆಸೆಗಳನು ಕಳಿಯೊ

ವಿಶ್ವ ಸ್ವರೂಪ ಮಹೇಶ ಜಂಗಮನೊಳು

ಲೇಸ ಭಕ್ತಿಯಿಂದ ದಾಸನೀನಾಗೊ ||1||

ಹರಕೆ ನೇಮ ಮಾಡಿ ಒಂದಿನ |

ನರಕಕ್ಕೆ ಹೋಗುವಿ ಖೋಡಿ

ಪರಮ ಪುರುಷನೊಳು ಪರಿಪೂರ್ಣದಿ ಮನ

ಬೆರೆದು ಅರಿದು ವರ ಪ್ರಸಾದ ಕರಕೊಂಡು ||2||

ಮೂರು ದಾರವ ಕಡಿದು ಮನವೆ |

ಆಧಾರವ ಪಿಡಿದು ಮಾಧವಗ ನೋಡಿ

ಶಿವದಾರದಲ್ಲಿ ಕೂಡಿ

ಭೂಧಾರಧರನೆನ್ನ ಉದ್ಧಾರ ಮಾಡೆಂದು ||3||

ಒಂದರಿಂದನೇಕ ಮನವೆ |

ಒಂದಗಣಿತ ಲೆಕ್ಕ

ಚಂದಾಗಿ ಇನ್ನೂರದ್ಹದಿನಾರು ಸಾವಿರ

ಒಂದರೊಳಡಗಿಸಿ ಮುಂದೆ ಶೂನ್ಯ ನೋಡಿ ||4||

ಪಂಚಸೂತಕ ಕಳೆದು ಪ್ರಪಂಚ |

ಪಂಚಗುಣನಳಿದು ಮಿಂಚಿನಂತೊಳಿಯುವ

ಕರುಘೂಳೀಶನ ಪಂಚಾಮೃತ ಪ್ಯಾಲಿ

ಮುಂಚೆ ಕುಡಿದು ನೀ ವೀರಶೈವನಾಗೊ ||5||

ಧ್ಯಾನ ಮಾಡು ಮನವೆ ಗುರುವಿನ |

ಧ್ಯಾನ ಮಾಡು ಮನವೆ

ಧ್ಯಾನ ಮಾಡು ನೀ ಹೀನ ಗುಣವ ಬಿಟ್ಟು

ಮಾನಸದೊಳು ಪ್ರಜ್ಞಾನಂ ಬ್ರಹ್ಮೆನ್ನುತ್ತ ||ಪಲ್ಲ||

ಉತ್ತಮ ಕೋಶ ಬೆಳೆದು ವಳಗಿನ |

ಮುತ್ತಿನ ನೆಲೆ ತಿಳಿದು ಹತ್ತು ಇಂದ್ರಿಯ

ಅಷ್ಟ ಮದಗಜಗಳ ಸುಟ್ಟು

ತತ್ವಮಸಿಯ ಸತ್ಯ ಸುಗುಣ ಬ್ರಹ್ಮೆನ್ನುತ ||1||

ಕಾಮ ಕ್ರೋಧ ಅಳಿದು |

ಸುಳಿಯುವ ಕಾಮನೋಟ ಕಳಿದು

ನಾಮರೂಪು ಜಗನೇಮ ಮಿಥ್ಯವೆಂದು

ಪ್ರೇಮದಿ ಅಯಂ ಬ್ರಹ್ಮವು ಎನ್ನುತೆ ||2||

ಹಮ್ಮು ಬಿಮ್ಮು ಹರಿದು |

ಲಿಂಗದ ಸಾರವ ಸುರಿಸುರಿದು

ಬ್ರಹ್ಮಜ್ಞಾನಿ ಕರಿಘೂಳಿ ಬೈಲಿನೊಳ

ಗಮ್ಮನೆ ಅಹಂ ಬ್ರಹ್ಮವು ಎನ್ನುತ ||3||

ಏನು ಹೇಳಲಯ್ಯೋ ಬ್ರಹ್ಮ ಜ್ಞಾನಿಗಳಿಗೆ ಇದರ ಮಹಿಮ |

ನಾನು ನೀನು ಎಂಬ ಭೇದಭಾವ

ತಾನೆ ತೋರುವದು ಓಂ ಸುಜ್ಞಾನಿಗಳಿರಾ

ಮಾನವ ಜನ್ಮದೊಳಗೆ ಬಂದು ಕೂನ ತಿಳಿಬೇಕೊ ||ಪಲ್ಲ||

ಏಳು ಕಿಟಕಿ ಬಂಗ್ಲಾದಿ ರತಿ ಕೇಳಿ ಸಂಗ್ರಹವಾಗುವದು

ಇಳೆಯ ಆಸೆ ತ್ಯಜಿಸಿದ ಅಂಗನೆ ಇರುವವಳು

ಓಂ ಸುಜ್ಞಾನಿಗಳಿರಾ ಕಾಲು ಮೂರುಳ್ಳ

ಮಂಚದ ಮೇಲೆ ಕರೆಯುತಿರ್ಪಳೊ ||1||

ಭಾನು ಶಶಿಯ ತೇಜ ಇರುವದು |

ಹಾನಿ ಇಲ್ಲದ ಕನ್ಯೆ ಒಂದು

ಜ್ಞಾನಿ ಬದಿಯಲ್ಲಿ ತಾನೆ ಬಂದು ಮಲಗುತಿರುವಳು

ಓಂ ಸುಜ್ಞಾನಿಯಗಳಿರಾ ಕನ್ಯೆ ಸ್ನೇಹವು

ಆನಂದವಾಗಿ ಕಾಣುತಿರುವದು ||2||

ಕಣ್ಣು ಇಲ್ಲದೆ ನೋಡುವದು |

ಕಾಮ ಇಲ್ಲದೆ ಕಲಿಯುವದು

ಕರ್ಣವಿಲ್ಲದೆ ಎಲ್ಲ ಮಾತು ಕೇಳುತಿರುವದು

ಓಂ ಸುಜ್ಞಾನಿಗಳಿರಾ ಕನ್ಯೆ

ನಿಜ ಪುರುಷರಿಗೆ ಮೋಹಿಸುವದು ||3||

ಬಿಂದು ಎಂಬ ಹಾಸಿಗಿ ಹಾಕಿ |

ನಾದವೆಂಬ ತಲೆದಿಂಡುನಿಕ್ಕಿ

ಸಂದು ಇಲ್ಲದೆ ಕಳೆಯೆಂಬ ದುಶ್ಯಾಲ ಹೊದಿಸಿರುವದು

ಓಂ ಸುಜ್ಞಾನಿಗಳಿರಾ ಅಂದವನು ಬಂದು

ಮೋಕ್ಷ ನಿರ್ಗುಣರಿಗೆ ||4||

ಹನ್ನೆರಡು ವರುಷದ ಕನ್ಯೆಯ ಕೂಡಿ |

ಬಣ್ಣ ಬಿಳಿದು ಸಿರಿಯ ವಗೆದು

ಪುಣ್ಯ ಪಾಪದ ಮಹಿಮೆ ಅರಿತೇನು

ಓಂ ಸುಜ್ಞಾನಿಗಳಿರಾ ಅಣ್ಣ ಕರಿಘೂಳಿ

ತಾನೆ ಹೇಳಿದ ಬೈಲಿನೊಳಗೆ ||5||

ಕೆಟ್ಟು ಹೋಗುತಿದ್ದಿ ಹುಚ್ಚುಮುಂಡೆ ಗಂಡ |

ಪೋರಬಟ್ಟೆತನ ಬಿಟ್ಟುಬಿಡು ತಾಯಿಗಂಡ ||ಪಲ್ಲ||

ಕೆಟ್ಟುಹೋಗತಿದ್ದಿ ನೀನು ದುಷ್ಟರ ಸಂಗದಿ |

ಸುಟ್ಟು ಹೋಗುವಿ ಪಂಚ ಇಂದ್ರಿಯ ವಿಷಯದೊಳು ||1||

ಆಶಿಸಿ ಮಾಂಸಕ್ಕೆ ಮೋಸದಿಂದ ಮೀನ ಪಾಶ |

ಗಾಣವ ನುಂಗಿ ನಾಶ ಹೊಂದಿದಂತೆ ||2||

ವಿಮಲ ಸುಗಂಧಕ್ಕೆ ಭ್ರಮರವು ತಾವರೆ |

ಕಮಲದೊಳಗೆ ಸಿಲ್ಕಿ ಶ್ರಮವಾಗಿ ಹೋದಂತೆ ||3||

ನಾಗಸ್ವರವು ಕೇಳಿ ನಾಗೇಂದ್ರ ಹರುಷ ತಾಳೀ |

ವೇಗದಿ ಗಾರುಡಿ ಕೈಯೊಳು ಸಿಕ್ಕಂತೆ ||4||

ಉರಿವ ಜ್ಯೋತಿಯ ಕಂಡು ಹಾರಿ ಪತಂಗದ್ಹುಳು |

ಬೋರಿಯ ಹಣ್ಣೆಂದು ಪ್ರಾಣ ಕಳಕೊಂಡಂತೆ ||5||

ಇಷ್ಟೆಲ್ಲ ಹೇಳಿದ ಶ್ರೇಷ್ಠ ಕರಿಘೂಳಿಯ ಪಾದ |

ನಿಷ್ಠಿಯಿಂದಲಿ ನಂಬು ಅಷ್ಟದಿಕ್ಕು ಬಂದು ಮಾಡಿ ||6||

ಬಾಯಿಲಿಂದ ನುಡಿವರು ಬ್ರಹ್ಮಜ್ಞಾನ |

ಅವರು ಕೈಲಿಂದ ಮಾಡುವರು ಗುಡಮತನಾ

ದೇಹದಿಂದ ನಡಿವರು ಕಮ್ಮತಾನ

ಇವರು ಸಾಯತಾನ ಕಾಣುದಿಲ್ಲ ಆತ್ಮನ ಕೂನಾ ||ಪಲ್ಲ||

ಸಾಧು ಸಂತರೊಳು ಕೂಡಿ ಮಾಡುವರು ಭಜನಾ |

ಕಾನೂನು ಓದಿ ಓದಿ ಮಾಡುತಾರ ಯೋಜನಾ

ತಮ್ಮ ಮನಕ್ಕೆ ಅಂತಾರ ತಾವೆ ಸಜ್ಜನ

ಇಂಥ ಚುಮ್ಮಮುಂಡೆ ಗಂಡರಿಗೆ ಇರುವದೆ ಬ್ರಹ್ಮನ ಕೂನ ||1||

ವಿಚಾರದಿಂದ ನ್ಯಾಯವನ್ನು ಹೇಳುವರಣ್ಣ |

ಮನಿ ಖರ್ಚಿಗಾಗಿ ಸುಳ್ಳು ಸಾಕ್ಷಿ ನುಡಿಯೋಣಾ

ಬಿಚ್ಚಿ ಬಿಚ್ಚಿ ಮಂದಿಗಿ ಪುಸ್ತಕ ತೋರಿಸೋಣ

ಇಂಥ ಹುಚ್ಚುನಾಯಿಗೆ ಏನು ಗೊತ್ತು ನಿಶ್ಚಲ ಜ್ಞಾನ ||2||

ಕಚ್ಚೆ ಪಂಚಿ ಹಾಕಿ ಧೋತರ ಉಡೋಣ |

ಅವರು ಮುಚ್ಚಿ ಮ್ಯಾಲೆ ನಿಲಿಗಿಗಳು ಬಿಡೋಣ

ಅಚ್ಚವುಚ್ಚ ಮಾತುಗಳು ಕಲಿಯೋಣ

ಹೀಂಗೆ ಉಚ್ಚಿ ಕುಣಿಗೆ ಆಸಿಬಿದ್ದು ಆಗುವರು ಮಣ್ಣಾ ||3||

ಸಾವಿರ ಕೊಟ್ಟರೆ ಇಂಥವರ ಸಂಗವನಾ |

ಅನುಭಾವದ ಮಾತುಗಳನು ತಿಳಿಸಬಾರದಿನ್ನಾ

ಕಿವಿಲಿ ಕೇಳೀ ಕೋವಿದರು ಆಗ್ಯಾರೂ ಇನ್ನಾ

ದೇವ ಕರಿಘೂಳಿ ಪಾದಕ್ಕೆ ಇವರು ದೂರವಣ್ಣಾ ||4||

ಶ್ರೀ ಗುರುವರ ಪರತರ ಶಂಕರ ಓಂ ಸೋಂ ಸಾರದ ಫಲವೊ |

ಆಧಾರದೊಳು ತನು ಭೇದಿಸು ಮನವು

ಸ್ವಾದಾದಿ ರುಚಿಯೊಳು ನಾದದ ಜ್ಞಾನವೊ

ಸ್ವಾದಿಷ್ಟದಲಿ ಬಾಗಿ ಆನನ ಓಂ ಸೋಂ ಸಾರದ ಫಲವೊ ||ಪಲ್ಲ||

ಜಾಣತನದಿ ಮಣಿಪುರದಾಲಯವೊ |

ಕೇಣಯಿಲ್ಲದೆ ಮಣಿ ಮುತ್ತಿನ ಮಾಲವೊ

ಶೋಣಿತ ಅದ್ವೈತದ ನೀಳ ಓಂ ಸೋಂ ಸಾರದ ಫಲವೊ ||1||

ಮಾಣಿ ತಾನಾಗಿ ನೋಡೊ ಅನಾಹುತವೊ |

ಸ್ವಾನುಭಾವ ಶಿವಜ್ಞಾನದ ಪಥವೊ

ಶೂನ್ಯ ನಿಶೂನ್ಯದ ಮೌನವೃತ ಓಂ ಸೋಂ ಸಾರದ ಫಲವೊ ||2||

ಶುದ್ಧ ವಿಶುದ್ಧಿಯ ಬೌದ್ಧ ಅವತಾರವೊ |

ವಿದ್ಯ ಅವಿದ್ಯ ಸಾಧ್ಯ ಶಬ್ದಾಕಾರವೊ

ಶುದ್ಧ ಪ್ರಸಿದ್ಧ ಪ್ರಸಾದ ಉದ್ಧಾರ ಸೋಂ ಸಾರದ ಫಲವೊ ||3||

ಅಕಚಟತಪಯಶ ಕರ್ಕಟ ವಿಷವೊ |

ವಿಕಟದಿ ಮನಮುನಿ ಆರ್ಕಟವಾಸವೊ

ಶಕಟದಿ ಕುಕ್ಕುಟ ಆಸನದಿಟ್ಟ ಓಂ ಸೋಂ ಸಾರದ ಫಲವೊ ||4||

ಆರು ಸ್ಥಲವು ಮೀರಿ ಭಾರಿವುನ್ಮನಿಯೋ |

ಸಾರಾಮೃತ ಸವಿಸಾರದ ಘನವೊ

ವೀರಾಸನ ಕರಿಘೂಳೀಶ ಸ್ಥಾನವೊ ಓಂ ಸೋಂ ಸಾರದ ಫಲವೊ ||5||

ಶ್ರೀ ಸದಾಶಿವ ಪಾದ ಧ್ಯಾಸದಿ ಪಿಡಿಯೊ |

ಸೂಸುವ ಶ್ವಾಸದಭ್ಯಾಸದಿ ತಡಿಯೊ ||ಪಲ್ಲ||

ಆಸನಬೆಸಿ ಸುವಿಲಾಸವ ತೊಡಿಯೊ |

ಈಶನ ಸಖ ಸೂಷುಮ್ನ ನಾಶಿಕ ಕುಡಿಯೊ ||1||

ದೋಷಣ ಪೋಷಣ ಸವನಿಸಿ ನಡಿಯೊ |

ವಾಸನ ಶಾಸನ ಕ್ಲೇಶವ ಕಡಿಯೊ

ಮಾಸದಿ ಬಸಿವ ಸುರಸ ಆಶಿಸಿ ಕುಡಿಯೋ ||2||

ಹೇಸಿಕಿ ಲಾಸಿಕೆ ಬೇಸಿಕೆ ಎಡಿಯೊ |

ಆಸಿಕ ವಾಸಿಕ ಕಿಸುಕುಳ ಪುಡಿಯೊ

ಮೋಸಕರಾಸಿಕ ಮಸಣಿಸಿ ಜಡಿಯೊ ||3||

ಆಶಿಸು ವಿಶ್ವಾಸ ಹಸನಾಗಿ ಪಡಿಯೊ |

ಕಸಿಬಿಸಿ ಹುಸಿಬಾಸಿ ಕಾಸಿಲಿ ಹೊಡಿಯೊ

ಹೇಸುವ ಕಾಸುವ ವಶಮಾನಸದಿ ಹಿಡಿಯೊ ||4||

ವಸುಧಿಯೊಳೆಸೆವ ಶ್ರೀಭಾಷನ ಗಡಿಯೊ |

ಭಾಶುಪದೇಶ ಪಾಲಿಸುವ ನುಡಿಯೊ

ಬೇಸರಿಸದೆ ಸ್ಮರಿಸು ಕರಿಘೂಳಿ ಅಡಿಯೊ ||5||

ಭಜಿಸುವೆ ನಿಜಪದ ಅಜಕುಟ ರೂಪನೆ |

ಸುಜನ ಮನೋಂಬುಜ ತೇಜ ಪರಿತಾಪನೆ

ಭೂ ಜಗಭೂಷಣ ಮೂಜಗದುದ್ಧಾರನೆ

ಸುರಜಿಸು ನಿಶಿತ ಶಶಿ ತೇಜದೊಳಪನೆ ||ಪಲ್ಲ||

ಪ್ರಜ್ವಲಿಸುವ ತವ ವಜ್ರ ಸ್ತಂಭಿತನೆ |

ನಿರ್ಜರ ಪೂಜ್ಯನೆ ದುರ್ಜವಗೋಪನೆ

ದುರ್ಜನ ಸಮೂಹದ ಗರ್ಜಿಸಿದಾತನೆ

ತರ್ಜಿನಿ ಭರ್ಜಿಸಮಾಜಿಲೋಪನೆ ||1||

ಕಂಜನಾಭನ ಕುರಂಜನ ಶಾಪನೆ |

ಕಂಜದಳಾಕ್ಷನಿರಂಜ ಕೇಳಿಪನೆ

ಕುಂಜರ ಉಡಿಗಿ ಕೆಂಜಡಿಯ ರೂಢನೆ

ನಂಜು ಭುಜಿಸಿ ಪರಂಜ್ಯೋತಿ ಭೂಪನೆ ||2||

ಅಂಜನ ತಾರನೆ ಗಾಂಜಿವಿಹಾರನೆ |

ಮಂಜನಕಳೆ ಸುರ ರಂಜನ ಕೂಪನೆ

ಅಂಜಿಸಿದರೆ ನಾನಂಜ ಬಲ್ಲನೆ

ಮಂಜುಳ ಕರಿಘೂಳಿ ಮಂಜನ ಲೋಪನೆ ||3||

ಹೇ ಸಂಶಯ ಸುಮ್ಮನ್ಯಾತಕೆ ಭವ |

ನೇಮದೊಳಿರುವಿ ಶಿವ

ನಾಮದಿ ನಿಜ ಸುಖವೊ ||ಪಲ್ಲ||

ಕಾಮದಂಡಾಂಡವಾಯ್ತು |

ಕಾಮ ಪಿಂಡಾಂಡವಾಯ್ತು

ಕಾಮ ಬ್ರಹ್ಮಾಂಡವಾಯ್ತು

ಕಾಮ ಖಂಡಿತವಾಯ್ತು

ಖಂಡದಿ ಮಂಡಲದೊಳಾನಾಥ

ಕಂಡುಕೊಳ್ಳೊ ನೀಡಿ ಮನವಾ

ಖಂಡನ ನಿಜ ಸುಖವೊ ||1||

ಕಾಮ್ಯದಿ ಬ್ರಹ್ಮನಾದ |

ಕಾಮ್ಯದಿ ವಿಷ್ಣುವಾದ

ಕಾಮ್ಯದಿ ರುದ್ರಪೂರ್ಣ

ಕಾಮ್ಯದಿ ನೀನಾದಿ

ನಿಃಕಾಮ್ಯದಿ ಉನ್ಮನಿವಾಸನು

ಚಿನುಮಯನಿರೊ ಹೃದಯ

ಕಮಲದಮಲ ಸುಖವೊ ||2||

ನಿನ್ನ ಬಿಟ್ಟು ಒಂದು ಇಲ್ಲ |

ನಿನ್ನಿಂದೊಂದು ಬರುವದಿಲ್ಲ

ನಿನ್ನ ನೀ ತಿಳಿದ ಮೇಲೆ

ಯಾನಾದ ಯೇನಿಲ್ಲ

ನೀನಾಗುವ ಕೂನವ

Wಳಿಸುವ ಶ್ರೀಕರಿಘೂಳೀಶ

ಚರಣನುದಿನ ದಿನ ಸ್ಥಿರ ಸುಖವೊ ||3||

ಮರುಳು ಮಾಡಿದ ಮನಸಿಗೆ ಗುರುರಾಯ |

ರಮ್ಮೀಸಿ ಎನ್ನ ಕರೆದಾ ರಂಭೇಯ ನೀನಾಗೆಂದ

ಹಂಬಲ ಬಿಡು ಎಂದ ನಂಬಿರು ಯನ್ನಗೆಂದ

ಶಂಭೊ ಪೀತಾಂಬರುಡಸಿದ ಅಘಹರಾಯ ||ಪಲ್ಲ||

ಬಿಡಿಸಿದನು ಭೂತವೆಲ್ಲ |

ಹಿಡಿಸಿದನು ಜ್ಞಾನಕೀಲ

ಕೆಡಿಸಿದನು ಮಾಯಜಾಲ

ಕುಡಿಸಿದನಮೃತ ಪ್ಯಾಲ

ಬಿಡದೆ ನುಡಿಯಂದ ಮೃಢ ನುಡಿಯನ್ನ ವಡೆಯ ||1||

ಮುಚ್ಚಿದೆ ಮರವಿನೊಳಗ |

ಎಚ್ಚರವಾಯಿತಾಗ ಪಚ್ಚ ಕರ್ಪುರ ಜ್ಯೋತಿಯವಳಗ

ಸ್ವಚ್ಛ ತೋರಿದನೆನಗ ಹುಚ್ಚನಾದೇನು

ನಿಚ್ಚ ಶಿವನ ಧ್ಯಾನದೊಳಗ ||2||

ಮುಂಡಿಗಿ ಮಾತು ಹೇಳದು ಕೇಳಿದೆನೊ |

ಈ ಮಂಡಲದೊಳಗೆ

ಖಂಡಿತ ವಾಕ್ಯ ಕಂಡು ಬಂದೆನೊ

ಅಂಡಪಿಂಡ ಬ್ರಹ್ಮಾಂಡ ವಿಭಾಗಿಸಿ

ತುಂಡು ಖಂಡನೆಯು ಕಡೆಯಲ್ಲಿಗಿರಿಸಿ

ಷಂಡಪೋಗಿ ಪ್ರಚಂಡನ ಸೋಲಿಸಿ

ಝಂಡೆ ನಡೆಸಿ ನವಖಂಡ ವ ಮೆರಿದನು ||ಪಲ್ಲ||

ನಿಗಮ ವೋದುವ ಸುಗುಣಿ ಹೆಣ್ಣಂತೆ

ಬಣ್ಣಿಲ್ಲದ ಸೀರಿ ಬಿಗಿದು ಹುಟ್ಟಳ ತಲಿಗೆ ಗುಣವಂತೆ

ಮಗ್ಗಿಯ ಕುಬಸ ಮೈಗೆ ತೊಟ್ಟಳ ಕೈಗಳಿಲ್ಲಂತೆ

ಆಕಿಯ ನಾಮ ಸುಗುಡಿ ಸುಂದರಿ ಸೂಳಿ ಗರ್ತಿಯಂತೆ

ಮೂಗಿಲ್ಲದೆ ಮೂಗತಿಯಿಟ್ಟು ವೊಗತನಿಲ್ಲದ ಮುಂಡನ ಕೂಡಿ

ಸಾಗಿ ಪೋಗುವಾಗ ಮೂಗ ಮುರಿಯುತ

ಕೂಗಿ ಹೇಳಿದಳು ಜಗವಿಲ್ಲದೂರಾಗ ||1||

ಕೋತಿ ಒಂದು ಹೋತಿನ ಹಿಡತಂತೊ |

ಮುತ್ತಿನ ಲಗಾಮ ಹೋತಿನ

ಬಾಯಿಗೆ ಕೋತಿಯು ಹಾಕಿತ್ತೊ

ಆ ಹೋತಿನ ಮ್ಯಾಲ ಸ್ವಸ್ಥವಾಗಿ ಎತ್ತು ಕೂತಿತ್ತು

ಆ ಎತ್ತಿನ ತೊತ್ತು ಹೋತಿ ಕಾಟ ಮುಂದೆ ನಡದಿತ್ತೊ

ಬಾತು ಕೋಳಿ ಈ ಮಾತು ಕೇಳಿ ಜತಿಯ ಮಾಡಿತ್ತೊ

ಹತ್ತು ಸೊಳ್ಳಿ ಆತುರದಿ ಅತಿ ಕೋಪದಿ

ಎತ್ತಿಗೆ ಮುತ್ತಿಗ್ಹಾಕಿದ್ದವೊ ಪೃಥ್ವಿ ಕೆಳ ||2||

ಕಪ್ಪಿ ಸರ್ಪಗೆ ಕದನ ನಡದಿತ್ತೊ |

ಬಹಳ ಕೋಪದಿಂದ ಸರ್ಪನು

ಹಿಡಿದು ಕಪ್ಪಿ ನುಂಗತ್ತಿತ್ತೊ

ಆಪೇಕ್ಷದಿಂದ ತಾಪ ತಾಳಿ ಗರುಡ ಬಂದಿತ್ತೊ

ಸರ್ಪನು ಬಿಡಿಸಿ ಕಪ್ಪಿಯ ಸಂಗಡ ನ್ಯಾಯ ಮಾಡಿತ್ತೊ

ವಿಪರೀತವು ಕೇಳಿ ಕುಪಿತದಿ ಮಿಂಚಿ

ಪಾಪ ಪುಣ್ಯ ಇನ್ಸಾಪವು ಸೂಚಿಸಿ

ಕಪ್ಪೆಯ ಕಾರವಾಯಿ ಪೈಸಲ ಹೊಡದಿತ್ತೊ

ಲೋಪ ನಿರ್ಲೆಪ ನಿಶ್ಯೂನ್ಯ ಕಚೇರಿಯೆನ್ನಿ ||3||

ತುರ್ಕುರ ಪೋರಿಯ ತೂತ ಹರದಿತ್ತೊ |

ಹಾರರ ಪೋರಿ ಹರ್ಕ ತೂತಿಗೆ ಹರ್ಕಿಯ ಬೇಡಿತ್ತೊ

ಅಯನೋರ ಲಿಂಗಿ ಶಿರವ ಬಾಗಿ ಕರವ ಮುಗದಿತ್ತೊ

ಜಾರಣಿಯ ಗಂಗಿ ವೀರ ಸಂಗನಬಸವನ ಕೇಳಿತ್ತೊ

ಆ ವೀರನು ತಾನು ನೀರಿನ ಔಷಧ ಹಾಕಿದನೊ ನಿಂತೊ

ಮಾರಮಾರನಿಗಳವಲ್ಲವು ನೀರಿನ ಸವಿರುಚಿ ಸಾರದ ಮಹಿಮ

ಭೇರಿ ದುಂದುಭಿ ಕಿನ್ನುರಿ ನಾದಕೆ

ಪೋರಿ ಮುದುರಿತ್ತೊ ನಿರ್ಗುಣ ಹಾದಿಲಿ ||4||

ಅಂಗಲಿಂಗಕ್ಕೆ ಕೂನ ತಪ್ಪಿತ್ತೊ |

ಮೃದಂಗ ಶಬ್ದಕ್ಕೆ ಲಿಂಗ ಹೋಗಿ ಜಂಗಮನಳಕಿತ್ತೊ

ಅಂಗನಿಯರೆಲ್ಲ ಲಿಂಗ ಕಾಣದೆ ಭಂಗ ಕೆಟ್ಟಿತ್ತೊ

ಬಂಗಾಲಿ ವಿದ್ಯೆದಿ ಭಂಗಗೆಟ್ಟು ಮಂಗನಾಗಿತ್ತೊ

ನಂಗಾರತಿಯೊಳು ಲಿಂಗವು ನುಂಗಿಸಿ

ಹಿಂಗಿಸಿ ಭವ ಪಿಂಗಿಸಿ ಭಂಗಿ ಮುಖ ಕರಿಘೂಳಿ

ರಾಮಲಿಂಗ ಸಿತಾಂಗ ವಿಹಂಗ ಬೈಲಿನೊಳು ||5||

ಏನು ಮಾಡಿದರು ಏನೂ ಇಲ್ಲ |

ನಿನ್ನ ಮನದವಗುಣ ಒಂದು ಮಾಡಿಲ್ಲಾ

ಕಾಶಿ ತೀರ್ಥ ತಂದೆನಂದಿ

ರಾಮೇಶ್ವರದೊಳು ಸ್ನಾನಮಾಡಿ ನೀ ಬಂದಿ

ದೇಶ ದೇಶ ತಿರಿಗಿ ನೀ ನೊಂದಿ

ಧ್ಯಾಸವಿಲ್ಲದೆ ಸನ್ಯಾಸಿ ವೇಷದೊಳೊಂದಿ ||ಪಲ್ಲ||

ಸತಿಸುತರನು ತ್ಯಾಗ ಮಾಡಿ ಮುಂದ |

ಗತಿಗೆ ಹೊಂದುವೆನೆಂದು ಕೀರ್ತಿಕೊಂಡಾಡಿ

ಹಿತದಿಂದೆ ಯತಿಯರೊಳು ಕೂಡಿ

ಚಿತ್ತಮತಿಗೆಟ್ಟು ಹೋಗತಿರಿ ಯಮಪುರಕಡಿ ||1||

ಜಂಭತನವ ನಿನಗ್ಯಾಕೊ ಹಾಳ |

ಹಂಬಲ ಬಿಡು ಶಾಸ್ತ್ರ ಹೇಳದು ಸಾಕೊ

ತುಂಬಿದ ದುರ್ಗುಣ ನೂಕೊ

ನೀಲಂಬ ಮಾಣಿಕ್ಯ ಮುತ್ತು ತಿಳಿದರೆ ಸಾಕೊ ||2||

ಎರಡು ಜ್ಯೋತಿ ಒಂದಾಗಿ |

ಗುರಿ ನಿರುತಾಗಿ ತಪ್ಪದೆ ಅರವಿನೊಳಾಗಿ

ಭೇರಿ ಕಿನ್ನುರಿ ತಾಳ ಸಾಗಿ ಶ್ರೀ

ಕರಿಘೂಳೀ ಪಾದಕೆ ಶಿರಸಾವು ಬಾಗಿ ||3||

ಜಂಗಮ ಜಂಗಮ ಜ್ಯೋತಿ ಜಯಮಂಗಳಾರ್ತಿ |

ರಂಗು ಮಂಟಪದೊಳು ಲಿಂಗ ಪೂಜೆ ಮಾಡುವಾಗ

ಜಂಗಮಯ್ಯ ಜಾರಿ ಬಿದ್ದ ಲಂಗೋಟಯ್ಯ ಹಾರಿ ಬಿದ್ದ ||ಪಲ್ಲ||

ತುಂಗಭದ್ರ ಕ್ಷೇತ್ರ ಅಂಗಕ್ಕೆ ಪವಿತ್ರ |

ಗಂಗೆಯ ದಡದ ಮೇಲ ತೆಂಗಿನ ವನಾಂತರದೊಳು

ಕಂಗಳಯ್ಯಾ ನಾಟಚಪ್ಪರ ಪಲ್ಲಂಗ ಮಂಚದ ಅತ್ತರ ||1||

ಚಾಂಗುಣಿಯ ಭಕ್ತಿ ಭಂಗಿ ಮುಖರಯುಕ್ತಿ ಹಾಂಗೆ ಹಿಂಗೆ ಮಾಡಿ ಮುಕ್ತಿ |

ಅಂಗನಿಯ ಕೂಡಿ ಎಂದು ನಂಗಾನು ಶಿರಕೆ

ಗುಂಗಾ ಏರಿ ಮಂಗನಂತೆ ಆಯಿತು ವಿರಕ್ತಿ || ||2||

ಜಂಗಿನ ನುಡಿ ಕೇಳಿ ಜಾಂಗುಟಿ ಸಪ್ಪಳ ಹೇಳಿ |

ಅಂಗದೊಳು ಕುಣಿಯುತ್ತ ಮೃದಂಗ ತಾಳ ಬಡಿಯುತ

ಟಂಗಾ ಟಂಗಾ ಹಾರಿ ಪಾದ ಉಂಗುಷ್ಠ ಮೊಂಡಾಯಿತೊ ||3||

ಹಿಂಗಿಣಿಲಾಗ ಸ್ವತಂತ್ರ ಮುಂಗಾಣಿ ಲಾಗ ಹೊಡಿ ಅಂತ್ರ |

ಶೃಂಗಾರವಾದ ಮಂದಿರದಲ್ಲಿ ಬಂಗಾರವಾದ ಹಂದರದೊಳು

ಸಂಗಮ ಕರಿಘೂಳಿರಾಮಲಿಂಗ ಇಬ್ಬರು ಕೂಡಿದರತಿ ||4||

ಒಗಟ ಹೇಳತಿನಿ ನಾಲ್ಕು ಒಗಟ ಹೇಳತಿನಿ |

ಪುಗುಟಿ ಮಾತಲ್ಲಿದು ಅಗಟವಲ್ಲ

ಗುರುಸಾರ ಸಗಟ ಜಾಡಿಸುವ ||ಪಲ್ಲ||

ಕಿಂಕರನಾಗ್ಯಾದೊ ಭಕ್ತರಿಗೆ ಶಂಕರನಾಗ್ಯಾದೊ |

ಅಂಕಡೊಂಕದ ಕಾಯಿ ಶಂಖುಬಾಳಿಯ ಕಾಯಿ

ಡೊಂಕ ಮ್ಯಾಲ ಕುಂತುಕೊಂಡು ಬಿಂಕದ

ಬುರುಗ ತೆಗೆಯುತಾದ ||1||

ಅಡ್ಡಗೋಡೆಯ ಮ್ಯಾಲ ಬುಡ್ಡ ಬಸವ ದಡ್ಡಾಗಿ ಮಲಗ್ಯಾನಲ್ಲಾ |

ದಡ್ಡ ಹೋಗಿ ಶಾಣೆನಾದ ದೊಡ್ಡ ಮನುಷ್ಯ ಹೆಡ್ಡನಾದ

ಅಡ್ಡದಿಡ್ಡಿ ಬಾಗಿಲ ನಡುವ ಗುಡ್ಡ ಕುಣದಾಡುತಾದ ||2||

ಜಾಲಗಾರ ಹೆಣ್ಣ ಜೋಲಿ ಬಿದ್ದ ಮೊಲಿಯ ಕೈಯಲ್ಲಿ ಹುಣ್ಣ |

ನೀಲಿಬಣ್ಣ ಸೀರಿ ಉಟ್ಟು ಹೊಲಿಗೆ ಏರಿಯಿಂದ ಮೊಳವನಾಕಿ

ಹಲ್ಲು ಕಿಸ್ತು ನಾಲಿಗಿ ತೆರೆದು ಜೋಲಿ ಜೋಲಿ ಹೋಗತಾದ ||3||

ನಮ್ಮಕಿ ಸೋಮವ್ವ ಒಪ್ಪತಿಗೆ ವಮ್ಮನ ನೇಮವ್ವ |

ಗಮ್ಮತ ಮಾತುಗಳು ಆಡೋಣಿಲ್ಲಾ

ಸುಮ್ಮನೆಂದಿಗಿ ಇರೋಣಿಲ್ಲಾ ಕಾಮನ ಮಗನ

ಪ್ರೇಮದಿಂದ ಭೂಮಿಗೆ ಬಾರದಂಗಾದಳಲ್ಲಾ ||4||

ಕೋತಿಮಗ ಹನುಮಂತ ಲಂಕವ ಸುಟ್ಟ |

ನೀತಿಯಲಿಂದ ಗುಣವಂತ ಮಾತಿನೊಳಗ ಮಾತು

ನೀರಾ ಜ್ಯೋತಿಯೊಳಗೆ ಜಾತ ಮುತ್ತು ಯಾತರೊಳಗ

ಏನುಯಿಲ್ಲ ತೂತಿನೊಳಗೆ ಕರಿಘೂಳಿಲ್ಲ ||5||

ಬ್ರಹ್ಮನ ಹೊಡದೆನೊ |

ಗುರುತನಿಟ್ಟು ಬ್ರಹ್ಮನ ಹಿಡದೇನೊ

ಹಮ್ಮಿಲಿ ಹಿಮ್ಮಡಿ ದ್ವಾರಕ್ಕೆ ವೊತ್ತಿ

ಜಮ್ಮಿಸಿ ವಾಮಪಾದ ಬ್ರಹ್ಮನಿಗೊತ್ತಿ ||ಪಲ್ಲ||

ಏಳು ಕೋಟಿಗಳ ತಲವನೆ ಹಚ್ಚಿ |

ಏಳು ಕಿಡಿಕಿ ಕವಾಟವ ಮುಚ್ಚಿ

ಏಳು ನೆಲಿಗಳನ್ನು ಏಳಿಸಿ ಬಿಡಿಸಿ

ಏಳು ವಾರದೊಳು ಸೋಹಂ ವಾರದೊಳು ||1||

ಎಂಟು ಗೇಣಿನ ಟುಬಾಕಿ ಪಿಡಿದು |

ಅಂಟಿಸಿ ಮೂರು ಗುಂಡನು ಹಿಡಿದು

ಭಂಟ ಸುಜ್ಞಾನ ಗಜವನು ಜಡಿದು

ಹಣಿ ಗಂಟಾಕಿ ಕಣ್ಣುಬ್ಬಿಗಂಟಿಸಿ ಗುರಿಯೊಳು ||2||

ಊರೊಳಗಿನ ತಳವಾರನ ಸವನಿಸಿ |

ಪಾರೆ ತಿರುಗು ವಾಲೆಕಾರನ ಮಲಗಿಸಿ

ಉರಿವ ಜಾವಿಗೆಯ ಬೆರಳಿಗೆ ಹೊತ್ತಿಸಿ

ಸರರ ಸರಕ ಮೂಗಿನ ಮನಿಯೊಳು ||3||

ಬೆಂಕಿ ಹತ್ತಿ ಬತ್ತಿ ಸುಡುತಲ್ಲಿ ಬರಲಾಗ |

ಟಂಕವಿಲ್ಲದೆ ನಿರಾತಂಕ ಕಿಂಕರನಾಗಿ

ಕಿಂಕಿಣಿ ಕಿಣಿಕಿಣಿ ಕಿಡಿಯನ್ನು ಹಾರಲು

ಜಿಂಕೆಗಳಾರನು ಶಂಕಿಸಿ ಹೊಡೆದೆನು ||4||

ಗಬರಾಸಿದೈದ್ಹುಲಿ ಶಬ್ದವು ಮಾಡದೆ |

ನಿಬ್ಬೆರಗಿಲಿ ಹತ್ತು ಶಾರ್ದೂಲಾ ಮಡಿದವು

ಗರ್ಭ ಪತನವಾಗಿ ಹೋಯಿತು ಹೆಬ್ಬುಲಿ

ಸಬ್ಬನೆ ಮಲಗಿತು ಗುಬ್ಬಿ ಗೂಡಿನೊಳು ||5||

ವಕ್ಷಸ್ಥಳದ ಮುಂದ ಕುಕ್ಷೆಯ ಬಿಗಿದು |

ಅಕ್ಷೆಯ ಕಡಲ ಮುದ್ದಿನೊಳ ಜಿಗಿದು

ಮೋಕ್ಷ ಕೊಡುವ ಅಪರೋಕ್ಷ ಕರಿಘೂಳಿ

ನಾಮಾಕ್ಷರ ಧ್ಯಾನಿಸಿ ಈಕ್ಷಿಪ ಬೈಲಿನೊಳು ||6||

ಶಿವ ಶಿವಯೆನು ಮನವ ಮಹ ಘನವ |

ಭವಮಾಲಿಯ ಜವಕಳಿವ ಬಂಧನವ | ||ಪಲ್ಲ||

ಕರ್ಮೇಂದ್ರಿಯಂಗಳ ಮರ್ಮದಿ ಅತಿಗಳಿ |

ಧರ್ಮದ ಮರ್ಮ ತಿಳಿ ದುರ್ಮತಿ ತನುವ ||1||

ಮಾಣಿಯ ಬಂಧಿಸಿ ವಾಣಿಯ ಸಂಧಿಸಿ |

ಪಾಣಿಯ ನೊಂದಿಸಿ ಗುಣಿಸು ಅಪಾನವಾ ||2||

ತತ್ವದೊಳಗೆ ಮಹಗೋಪ್ಯ ತತ್ವದೊಳಿಹ ಸತ್ಯ |

ನಿರ್ಗುಣ ಸೋಹಂ ಅಮೃತ ಪಾನವ ||3||

ಆರಾರೊಳಿರುವ ಹಾರಿಸು ಸಾರವ |

ಬಾರಿಸು ಸುಸ್ವರವ ಭೇರಿ ಝಂಜನವಾ ||4||

ಕಲುಷ ವಿರಹಿತ ಮಲತ್ರಿ ಸಂಹರಿತ |

ಛಲದಿ ಘೂಳೇಶಗೆ ಸಲಿಸೊ ನೀ ಧನವಾ ||5||

ಮಿಥ್ಯವು ನಕಾರಾ ಆಕಾರಾ |

ಸತ್ಯದಿ ತೋರುವ ಬ್ರಹ್ಮ ವಿಕಾರಾ ||ಪಲ್ಲ||

ವನಿತೆ ಧನ ಸುತ ಜನಿತ ಘನವೃತ |

ವನು ನಡಿಸಲು ಮನಸಿಜನ ಮಕಾರಾ ||1||

ಮನದಿ ಮಾಡಿದ ಭ್ರಮೆಯನು ತೊರಿಯಲು |

ಮನ ಜನಿತನಿಗಳವೆ ಉನ್ಮನಿ ಶಿಕಾರಾ ||2||

ಕಾಮ ಕ್ರೋಧಾದಿಯ ಪ್ರೇಮದೊಳ್ ಹೃದಯ |

ನೇಮವ ಗೈಯುವದು ಭೂಮಿ ವಕಾರಾ ||3||

ಹೇಮ ಸೀಮೆ ಮುದ್ಧಾರ ಮನೆಯೊಳ |

ಭ್ರಮಿಸುವ ತಮಗುಣ ಯಮನ ಯಕಾರ ||4||

ಪರಧನ ಪರಸ್ತ್ರೀಯನು ವಶ ಕರಿಸದೆ |

ಕರಿಘೂಳಿಗೆ ಕೇಳು ಆರೇಳೋಂಕಾರ ||5||

ಶಂಕರ ಕರ ಶಂಖಾ ತ್ರಿಣಾಂಕ |

ಓಂಕಾರಾಶ್ರಮ ಮೃದು ಪರಿಯಂಕಾ ||ಪಲ್ಲ||

ಪಂಕಜ ಭವ ಮುಖ ಕಿಂಕರ ಪಾಳಕ |

ಸಂಕಟ ಹರ ಚಂದ್ರಾಂಕಿತ ಮಸ್ತಕ ||1||

ಸುರಮುನಿ ಪೋಷಕ ದುರಿತ ವಿನಾಶಕ |

ಮುರಹರಪ್ರಿಯ ಸಖ ಸ್ಮರಶರ ಭೂಷಕ ||2||

ಭವ ಪರಿಹಾರಕ ಕವಿ ಜನ ರಕ್ಷಕ |

ಶಿವ ಕರಿಘೂಳಿ ಸುಖ ಸವಿ ಸಾರಾಮೃತ ಪಾಕ ||3||

ನಮಃ ಶಿವಾಯ ಎನು ಮನ |

ಓಂ ಸೋಹಂ ನಮಃ ಶಿವಾಯ

ಓಂ ಶಿವ ಶಿವ ಶಂಕರ ಶಿವಶಂಕರ ಹರ ||ಪಲ್ಲ||

ಶಿವಶಿವ ಹರಹರ ಪಾರ್ವತಿ ಪತಿ ಹರ |

ಶಿವ ಮಹಾದೇವ ಭಾವ ಸಂಜೀವ

ಭುವನೇಶ್ವರ ಗಿರಿಧರನಿಗೆ ನಮಿಸಿ ಓಂ ನಮಃ ||1||

ಶಿವ ಧ್ಯಾನದಿ ಶಿವ ರೂಪವ ನೋಡುತ್ತ |

ಶಿವಯೋಗವ ನೀ ಸದಾವ ಮಾಡುತ್ತ

ದಿವ ರಾತ್ರಿಯೊಳು ಭವಗುಣ ಕೆಳಸದೆ

ಜೀವನು ಜಪಿಸುವ ಹಂಸವ ಭಾವಿಸಿ ಓಂ ||2||

ಮಿಥ್ಯ ಆಕಾರ ವ್ಯರ್ಥ ಸಂಸಾರ |

ಸತ್ಯವು ತೋರುವ ಎಲ್ಲ ವಿಕಾರ

ಸತ್ಯ ಸದ್ಗುರು ಭೃತ್ಯನಾಗಿರುತಿರು

ಉತ್ತಮ ಮುಕ್ತಿಗೆ ಚಿತ್ತವತ್ತಿಸಿ ಓಂ ನಮಃ ||3||

ಅನುದಿನ ಶಂಕರ ಪ್ರಣಮ ಪಂಚಾಕ್ಷರ |

ವನು ಮನ ಗುಣಿಸುತಲಿ ಅನುಮನ

ಸನುಮನ ದಿನಮನ ಇನಿತು

ಘನ ಗುರುವಿನ ಚರಣವ ಸೇವಿಸು ಓಂ ||4||

ಆಸನ ಬಿಗಿದು ವಿಲಾಸದಿ ನಿನ್ನೊಳು |

ನಾಸಿಕ ತುದಿಗೂಡುತಲಿ ಘೋಷವ

ಕೇಳುತ ಈಶನ ಕಾಣುತ

ಧ್ಯಾನಿಸು ಉಶ್ವಾಸ ಬಲಿಸಿ ಓಂ ನಮಃ ||5||

ಪರತರ ಪರಮ ನಿರಘ ನಿರುಪಮ |

ನಿರಾಮಯ ನಿರ್ಬೈಲಿನಲಿ ಮಾರಹರ

ಪುರಹರ ಸುರಚಿರ ಶ್ರೀಧರ ಗುರುವರ |

ಕರಿಘೂಳೀಶನ ಸೇವಿಸಿ ಓಂ ನಮಃ ಶಿವಾಯ ||6||

\

ಹರ ಹರ ಹರ ಶಂಭೋ ಸದಾಶಿವ ಗೌರಿ ಶಂಕರಭೋ |

ರಾಘವನು ತಪದ ರಾಜೀವದನ ಭವರೋಗ ವೈದ್ಯ ಶಂಭೋ ||ಪಲ್ಲ||

ಆಗಮ ವಂದಿತ ಅಮರಾರ್ಚಿತಸುರ |

ಭೋಗಿ ಭೂಷಣ ಶಂಭೊ ||1||

ಪಂಚವದನ ವಿರುಪಾಕ್ಷವರದ ದ್ವಿಪಂಚಹಸ್ತ ಶಂಭೋ |

ವಂಚಕ ದಕ್ಷಾದ್ವರ ವಿಧ್ವಂಸಕ ಪಂಚ ಶರಾಂತಕಭೋ ||2||

ಪಂಕಜಾಕ್ಷ ಶಶಿ ಪಾವಕಾಕ್ಷ ಅಕಲಂಕ ಚರಿತ ಶಂಭೋ |

ಕಿಂಕರ ಮಹಮುದ್ರಾಜಿಪಾ ಶಕ ಅಭಯಂಕರ ಶಂಕರಭೋ ||3||

ಭೋಳಶಂಕರ ಸಮ್ಯಾಳದಿ ಸುಖ ಕರಧೂಳಾಂಕಿತ ಶಂಭೋ |

ಭಾಳಾಕ್ಷನ ಪ್ರಿಯ ಗೆಳೆಯನೆ ಕರಿಘೂಳೀಶ್ವರ ಶಂಭೊ ||4||

ಬಸವ ಪ್ರಮಥ ಶಿವಶರಣರ ಭಾವವು |

ರುಚಿಕರ ಸಾರ ಶಿವ ಭಜನ ಪರಾತ್ಪರ ||ಪಲ್ಲ||

ವೇದ ಪುರಾಣ ಬಾದರಾಮಾಯಣ |

ಮಾಧವ ವಂದಿತ ವಿಧುಕಿಲ ಕಿರಣಯಾಲ ಮಾಲ ||1||

ಕಾಲಕಾಲ ಲೋಲ ಶೀಲ ಭಕ್ತವತ್ಸಲ ದೀನ |

ದಯಾಳು ಈ ಬಾಲಕರನು ಪಾಲಿಸು ದೇವ ||2||

ಅಖಿಲ ಬ್ರಹ್ಮಾಂಡ ದಿನಕರ ಕೋಟಿ ಸುಖಕರ |

ಶಂಕರ ಕರುಣಾ ಭರಣ ಮಾಧವ ದೇವ ದೇವ ||3||

ಭಾವ ಭಾವ ಶಿವಜೀವ ಪಾವನ ಚರಿತ |

ಭಾವನ ಭರಿತ ಸೇವಿಪ ಭಕ್ತ ದಯಾಕರ ದೇವ ||4||

ನುತಿಪರ ಮನ ಯಥೇಷ್ಟ ಪ್ರದಾತ |

ಸ್ತುತಿಪ ಶಾಂತಿ ಶಿವಭಕ್ತರ ಪ್ರೀತ ||5||

ಭಕ್ತಿಮೂಲ ಯುಕ್ತಿ ಶೀಲ ಶಕ್ತಿ ಲೋಲ |

ಮುಕ್ತಿ ಮಾಲ ಮಂಗಲದಾಯಕ ಮುನಿಜನ

ಪಾಲಕ ಜಂಗಮ ಕರಿಘೂಳಿ ದೇವರ ದೇವ ||6||

ಹಾಂಗ್ಯಾಕ ಹೀಂಗ ಬರ್ರಿ ನೆಟ್ಟಕ |

ಸಂಗಮ ಮೇಲಿನ ಬಾಟಕ

ತ್ರಿಕೂಟಕ ಮಲದ ಘಾಟಕ

ಬ್ರಹ್ಮನ ಐಶ್ವರ್ಯ ನೋಡದಕ

ಉತ್ತರ ಕಿಡಿಕಿ ಕೋಲ್ಯಾಕ ||ಪಲ್ಲ||

ಒಂದು ಒಂದು ಪೈರಿಯ |

ಮುಂದಕ ಚಂದನ ಚೌಕಿ ಆಚಕ

ಗುಡ್ಡದ ನಡುವಿನ ಗುಮ್ಮಟಕ

ಮಹಲಿಂಗ ಸ್ವಾಮಿಯ ಮಠಕ ||1||

ನಿಧಾನ ಮಾಡಬೇಕು ನಿಜಕ |

ಸಾಧನ ಮಾಡಬೇಕು ನಾಜೂಕ

ಶೋಧನ ಮಾಡಬೇಕು ಸುಮ್ಮಕ

ಓಂ ನಮಃಶಿವಾಯ ಪ್ರಣಮಕ ||2||

ಜಪ್ಪಿಸಿ ಹೋಗಬೇಕು ವಳಿಯಾಕ |

ತಪ್ಪಿ ಬಿದ್ದರೆ ಆಗುತ್ತಿ ತೆಳಿಯಾಕ

ಏರಿಸಿ ನೋಡರಿ ತಾರಕ

ಚಿತ್ತ ಚಿನ್ಮಯ ಬೆಳಕ ||3||

ಮೀರಿದ ಮಾರ್ಗವು ಮುಂದಕ |

ಕತ್ತಲ ಕಾಲ ಕಳಿಲಾಕ

ಚೌಕಾಸಿ ಬರುತಾವ ತಾರಕ

ಪಶ್ಚಿಮ ದಿಕ್ಕಿಗೆ ನೋಡದಕ ||4||

ಅರಸ ಯೋಗದೊಳು ನೇಮಕ |

ಕರಿಘೂಳೀಶನ ಸೇವಕ

ಕರೆದರೆ ಬರುವನು ಭಾವಕ

ಸುಲಭದಿ ಕೊಡುವನು ಬ್ರಹ್ಮಸುಖ ||5||

ಆರತಿ ಎತ್ತಿರೆ ಮಾರಮರ್ಧನಿಗೆ |

ಗೌರಿವರಗೆ ಶಿರ ಗಂಗಾಧರನಿಗೆ ||ಪಲ್ಲ||

ಕರಿ ಚರ್ಮಾಂಬರ ಉರಗಾಭರಣ |

ಕರಿಗೊರಳಲಿ ಶಿರಹಾರ

ಪರಮ ಪರತರಿಗೆ ||1||

ಶಕ್ತಿಯಲ್ಲಿರುವಗೆ ಭಕ್ತರಿಗೊಲಿದವಗೆ |

ಭಕ್ತಿ ಜ್ಞಾನದಿ ಮುಕ್ತಿ

ಶಕ್ತಿ ತ್ರಯನಿಗೆ ||2||

ಅರಸಪುರೀಶ ಕರಿಘೂಳೀಶ |

ವರಕವಿ ಶ್ರೀಗುರು ಮುರುಗೇಂದ್ರನಿಗೆ ||3||

ಶ್ರೀಗುರುವಿನ ಪಾದ ಯುಗಳ ಭಜಿಸಿ |

ಅಗಣಿತಾನಂದದೊಳು ಕೂಡಾನವೋ

ಭೋಗ ಭಾಗ್ಯಗಳು ತ್ಯಾಗ ಮಾಡಿ

ವೈರಾಗ್ಯದಿ ಯೋಗವ ಮಾಡಾನವೋ ||ಪಲ್ಲ||

ಗುರು ಎಂಬ ಎರಡಕ್ಷರ ಮೊದಲಿಗೆ |

ಅರಿಯದೆ ಪರಿಭವ ತಿರಿಗಿದೆನವೋ

ಅರಿವು ಇರಿಸದೆ ಮರವಿನೊಳಾದೆ

ಪರಿಪರಿ ಸುಖ ದುಃಖದೊಳಿನೆವೊ ||1||

ಓದಿ ಶಾಸ್ತ್ರ ಪುರಾಣ ಮೀಮಾಂಸ |

ಹಾದಿ ತಿಳಿಯದೆ ಬಿದ್ದೇನವೊ

ವಾದದಿ ಭೇದದಿ ಶೋಧನಗೈದು

ಯಮ ಬಾಧೆಯ ಬಡುತಾಲಿದ್ದೆನವೊ ||2||

ವಿನಯದಿ ಸುನಯದಿ ಮಾನಿನಿಯರ ನುಡಿ |

ಸ್ವಾನನ ಪರಿ ತಿರಿಗ್ಯಾಡೆನವೊ

ಅನುಭವ ಸಾದ್ರುಶ ಮನನವು ಇಲ್ಲದೆ

ಕಾನನದೊಳು ಮುಖ ಬಾಡ್ಯಾದವೊ ||3||

ಅಂಡಪಿಂಡ ಬ್ರಹ್ಮಾಂಡವೆಂದರೆ |

ಖಂಡಿತ ಸಟಿ ಎಂದಾಡ್ಯಾನವೊ

ಖಂಡ ಸೇವಿಪ ಮದ ಭಂಡರ ಸಂಗದಿ

ಬಂಡಾಟವ ನಾ ನಾಡೆನವೊ ||4||

ಮೂಲಮಂತ್ರದಿ ಕೀಲನು ಸುಲಭದಿ |

ಆಲಯದೊಳು ನಿಜ ಕಂಡೇನವೊ

ಬಾಲಲೀಲೆಯಲಿ ತಾ ಹಾಲು ಕಲಿಸಿ

ಮುಕ್ತಿ ಬಾಲಿಯ ಮೊಲಿ ಹಾಲುಂಡೇನವೊ ||5||

ಅಂಗಲಿಂಗ ಸಮರಂಗ ಭಾವದಿ |

ಕಂಗಳ ಮಧ್ಯದಿ ತೋರ್ಯನವೊ

ಮಂಗಳ ಮೂರುತಿ ಕರಿಘೂಳೇಶನ

ಅಂಗುಷ್ಟ ನಂಬಿ ಪಾರಾದೆನವೊ| ||6||

ಹುಸೇನ ಸಾಹೇಬರ ಸೋಬತಿ ಮಾಡಿ |

ಹಸನಾಗಿ ನಾ ಬಂದಿದ್ದೆನು

ಆಶಾನಳಿದು ಉಪವಾಸದಿ ಪೀರಗೆ

ಲೇಸದಿ ವಶಮಾಡಿಕೊಂಡಿದ್ದೆನು ||ಪಲ್ಲ||

ಪಂಚ ಕ್ಲೇಶಗಳು ಪಂಚಕೋಶ |

ಏಳಿಂಚಿನ ಬುನಾದಿ ಹಾಕಿದ್ದೆನು

ಪಂಚಭೂತವೆಂಬ ಕಲ್ಲನೆವಡ್ಡಿ

ಪಂಚವೀಸ ತತ್ವ ಕಂಬನಡಿಸಿದ್ದೆನು

ಚಂಚಲಮಂಚಲ ಹೊದಿಕಿಯ ಮಾಡಿ

ಹಂಚಿಕಿ ಮಸೂದಿ ಕಟ್ಟಿದ್ದೆನು ||1||

ತನು ಎಂಬ ಮಸೂದಿ ಬೊಳಿಸಿ |

ಮನವು ಎಂಬ ಪಂಜಾ ಕೂಡಿಸಿ

ಅನುಮಾನ ಎಂಬ ಮುಲ್ಲನ ಮಾಡಿ

ದಿನಮಾನೆಂಬ ಧೂಪಾರ್ತಿ ಜೋಡಿ

ನಾನೆಂಬ ಅಗ್ನಿಯೊಳು ಜ್ಞಾನ ಊದನ್ನೆ ಹಾಕಿ

ನೀನೇ ನೀನೆ ಎಂದು ಧೀನ ಹೊಡಿದೆನು ||2||

ಬುದ್ಧಿ ಸಗುಣವೆಂಬ ಅಲಾಯಿ ಮಾಡಿ |

ಕುದ್ದಲ ಗುಣವೆಂಬ ಕಟಿಗಿ ಹಾಕಿ

ಸಿದ್ಧ ನಡಾವಳಿ ಎಣ್ಣಿಯ ಹಾಕಿ

ಶಬ್ದಸೂತಕ ಗುಂಪುಗೂಡಿಸಿ

ಸಿದ್ಧಾಸನ ಚಿತ್ತ ವುರಿಯನು ಹಚ್ಚಿ

ಇದ್ದು ಇಲ್ಲದಂತೆ ಭವಸೈ ಆಡಿದೆನು ||3||

ಈಷಣ ತ್ರಿದೂಷಣ ತ್ರಿವಾಸ |

ನತ್ರಿಯ ಕುಡಿಸಿ ಲಾಡಿ ಹಾಕಿದೆನು

ಆಶಪಾಶ ತಾಮಸ ಬೇಸರಕಿ

ಹೇಸಿಕಿ ಕುರಿಯ ತಂದಿದ್ದೆನು

ನಿರಾಶ ನಿರ್ಗುಣ ಚೂರಿ ಹಾಕಿ

ಲೇಸದಿ ಕಂದುರಿ ಮಾಡಿದೆನು ||4||

ಕಾರ ಹುಣ್ಣಿವಿಯಾದ ಆರನೆ ದಿನಕ್ಕೆ |

ಪೀರನ ಸವಾರಿ ಮಾಡಿದೆನು

ತಾರಮಂಡಲ ಪರಿಪರಿಹುವ್ವಾ

ಬಾಣ ಹಾರಿ ಹಾರಿ ಮೇಲಕೆ ನೋಡಿದೆನು

ಭೇರಿ ದುಂದುಭಿ ನಗಾರಿ ನೌಬತ

ಬಾರಿಸುತ ಮೆರವಣಿಗೆ ನಡಿಸಿದೆನು ||5||

ಅದರ ಹಿಡಿದು ಶರಬತ ತುಂಬಿ |

ಮೋದದಿಂದ ಫಾತೆ ಕೊಡಿಸಿದೆನು

ಸಾಧುಸತ್ಪುರುಷರಿಗೆ ಹೇಳುತ ಕೇಳುತ

ಬೀದಿವಳಗೆ ಬಂದು ನಿಂತಿದ್ದೆನು

ಬೋಧ ಕೊಟ್ಟ ಶ್ರೀಕರಿಘೂಳೇಶನ

ಪಾದ ಪಿಡಿದು ನಾ ಫಕೀರನಾದೆನು ||6||

ಗುರುರಾಜ ಸುರಭೋಜ್ಯ ನೀ ಸಹಜ |

ಪರಮ ದಯಾಕರನೆ ನಿಗಮಾಗಮಗಳಿಗೆ ನೀ ವೇದ್ಯ ||ಪಲ್ಲ||

ಅಗಣಿತಾ ಸುಗುಣ ಮಹಿಮಾ ಸಾಧ್ಯಾ |

ಜಗದೀಶ ಅಘನಾಶ ನೀ ಮಹೇಶ

ಪರಮ ದಯಾಕರನೆ ||1||

ಮಂದಾರಗಿರಿ ವೇದ್ಯ |

ಸುಂದಾರ ಮಂದಿರದಲ್ಲಿ ಚೋದ್ಯ

ಚಂದಿರವಾಸ ಕಂಧರ ವಿಷ ನಂದೀಶ ಪರಮ ||2||

ಮೂಲಮಂತ್ರ ಆದ್ಯ ಭಕ್ತಿ ಜ್ಞಾನ ವೈರಾಗ್ಯ ಮಧ್ಯ |

ಶ್ರೀಶೈಲೇಶ ಭೂಕೈಲಾಸನೇ ವಿಲಾಸ ಪರಮ

ಆಧಾರದಲ್ಲಿ ಆದ್ಯ ಭೇದಿಸಿ ಸ್ವಾದಿಷ್ಟ ಮಧ್ಯ

ನಿಧಿ ಧ್ಯಾಸವಿಧು ಪ್ರಕಾಶ ನೀ ಬೋಧ್ಯ ||3||

ಮಂಡಲತ್ರಯ ವಿದ್ಯ |

ಡಿಂಡಿಮಡೌಡಿ ಡಂಡಣವಾದ್ಯ

ಮಂಡಲೇಶ ಬ್ರಹ್ಮಾಂಡ ಪೋಷಾ ಅಖಂಡೇಶ ||4||

ಭಾರ್ಗವ ಅಘ್ರ್ಯಪಾದ್ಯಾಮೃತ |

ವರ್ಗಳನೈವೇದ್ಯ ಸ್ವರ್ಗ ಸುರೇಶ

ನಿರ್ಗುಣೇಶನೆ ಕರಿಘೂಳೇಶ ಪರಮ ದಯಾಕರ ||5||

ಬ್ರಹ್ಮ ವಿದ್ಯೆ ಹಿಂಗ ಕಲಿ ಜಾಣ |

ಸುಮ್ಮನೇಕೆ ಆಗುವಿ ಹೈರಾಣ ಕೋಣ ||ಪಲ್ಲ||

ಆಧಾರ ಮೊದಲನೆ ಚಕ್ರ |

ಆಧಾರ ಗುದಸ್ಥಾನ ಅದರ ಮಂದಿರ

ಕಾಂಚನ ವರಣದಾಕಾರ

ಪದ್ಮವು ನಾಲ್ಕು ದಳ ಪೂರಾ

ವಶಷಸ ಅಕ್ಷರ ಆದಿ ಗಣಪತಿ

ಆದಿದೇವರ ಜಪ ಮಾಡಬೇಕು

ಆರುನೂರ ಓಂ ಎಂಬೊ ಬೀಜ ಅಕ್ಷರ

ಆಚಾರ ಲಿಂಗ ಸುವಿಚಾರ

ನಾಶಿಕದ್ವಾರಕ ಎದರಾ

ಪೃಥ್ವಿಯ ತತ್ವ ಭರಪೂರ

ದೀಡತಾಸಿನೊಳು ಗುಣಾಕಾರ ||1||

ಸ್ವಾದಿಷ್ಟ ಎರಡನೆಯ ಚಕ್ರ |

ಸ್ವಾದಿಷ್ಟ ಗುಹ್ಯ ಸ್ಥಾನದಲಿ ಪ್ರಥಿಷ್ಟ

ಆರು ದಳಗಳು ಇರುವವು ಸ್ಪಷ್ಟ

ಬಭಮಯರಲವ ಷಷ್ಟ ಕೆಂಪು

ವರ್ಣವಳಿವದು ಕಾಷ್ಟ

ಜಲತತ್ವ ಸೇರಿಹುದು ನಿಷ್ಟ

ಅಧಿಪತಿ ಬ್ರಹ್ಮದೇವ ಶ್ರೇಷ್ಠ

ಗುರುಲಿಂಗ ನಿವಾಸ ಪೀಠ

ನಾನೆಂಬ ಬೀಜಕ್ಷರ ಮಾಟ

ಆರು ಸಾವಿರ ಜಪ ಉತ್ಕೃಷ್ಟ

ಜೀವಕ್ಕೆ ಕಾರಣ ವೋಷ್ಠ

ಹದಿನಾರು ಘಳಿಗಿ ತಕೋಷ್ಟ ಪೂರಾ ||2||

ಮುಂದಾದ ಮಣಿಪುರಕ ನಾಭಿಯ ಸ್ಥಾನ |

ಇರಲಿಕ್ಕ ದಶದಳ ಪದ್ಮ ಆದರೀಕ

ಡಢಣತಥದಧನಪಫ ಅಕ್ಷರ ಸಾಕ

ಪೀತ ವರ್ಣದ ಬೆಳಕ ಅಗ್ನಿಯ ತತ್ವ ನೋಡದಕ

ಅಧಿಪತಿ ವಿಷ್ಣು ತಾನಧಿಕ

ಕಾರಣವು ಕೇಳು ನಯನಕ

ಶಿವಲಿಂಗದೇವರ ಜಳಕ

ಮಾ ಎಂಬ ಬೀಜವು ಬೇಕ

ಆರು ಸಾವಿರ ಜಪಮಣಿ ಸಾಕ

ಹದಿನಾರುವರಿ ಯಾಳ್ಯಕ ||3||

ಅನಾಹುತಾ ನಾಲ್ಕನೆ ಚಕ್ರ |

ಅನಹಾತ ಎದಿ ಹೃದಯ ಸ್ಥಾನಕ್ಕೆ ನಿರುತ

ಹನ್ನೆರಡು ಎಸಳಿನ್ಹುವ್ವಾಯಿತ

ಕಖಗಘಙಚಛ ಮತ್ತ ಜಝಞಟಠ

ಮುಗದಿತ್ತು ಬಾರಕ್ಷರ ಕಮಲ

ಸುನಾಥ ಸುಣ್ಣದ ಬಣ್ಣ ಬಿಳಿ ಶ್ವೇತ

ತತ್ವವು ಅದಕ್ಕೆ ಮಾರುತ

ರುದ್ರನು ಅಧಿಪತಿ ಕರ್ತ ತ್ವಕ್ಕಿಗೆ

ಕಾರಣಭೂತ ಜಂಗಮ ಲಿಂಗ ಪೂಜೀತ

ಶ್ರೀ ಎಂಬ ಬೀಜ ನುಡಿಯುತ್ತ

ಆರು ಸಾವಿರ ಜಪ ಮಾಡುತ್ತ

ಕರ ಮುಗಿದು ಆರುತಾಸೊತ್ತ ||4||

ಶುದ್ಧಿ ಅನಹಾತ ಮ್ಯಾಲ ವಿಶುದ್ಧಿ |

ಸ್ಥಾನವು ಕಂಠವು ಬುದ್ಧಿ

ಹದಿನಾರು ಪುರಾಣದ ಗದ್ದಿ

ಅಆಇಈಉಊಋ ಶುದ್ಧಿ

ಅಲ್ಲಿ ಎಐಒಔಅಂಅಃ ದಿ ಹದಿನಾರು

ಅಕ್ಷರ ಬೋಧಿ ನೀಲವರ್ಣ

ಬಣ್ಣದ ಮುದ್ದಿ ಆಕಾಶ

ತತ್ವದ ಗಾದಿ ಜೀವೇಶ ವಾ ಎಂಬ

ಬೀಜವನು ಓದಿ ಒಂದು ಸಾವಿರ

ಆಪದ ಶಿದ್ಧಿ ವಂದೊಂದು ಅರ್ಥದೊಳ ಸೇರಿ ||5||

ಅಗ್ನಿಕಂಗಳ ನಡುವೆ ಅಗ್ನಿ |

ಭೂಮಧ್ಯ ಸ್ಥಾನದ ಸೌಗ್ನಿ

ದಳ ಜೋಡಿಲಾವಪ್ರಾಜ್ಞ

ಹಂ ಕ್ಷಂ ಅಕ್ಷರ ಮೂಲಗ್ನಿ

ಮಾಣಿಕ್ಯ ವರ್ಣ ಚಂ ಕಾಗ್ನಿ

ಅಂತಃಕರುಣ ತತ್ವ ವಿಮಲಾಗ್ನಿ

ಆದಿದೇವತ ಶಿವ ಸರ್ವಾಜ್ಞೆ

ಜ್ಞಾತ್ರಕ್ಕೆ ಕಾರಣ ನಿರ್ವಿಘ್ನ

ಮಹಲಿಂಗ ಸ್ವಾಮಿ ಮಹದಾಗ್ನಿ

ಯ ಎಂಬೀಜಾಕ್ಷರ ಪ್ರತಿಜ್ಞ

ಒಂದು ಸಾವಿರ ಜಪ ವಡಬಾಗ್ನಿ

ಮುಕ್ಕಾಲು ಮಾಡು ಕಾಲಾಗ್ನಿ ||6||

ವೀರಾಮ್ಯಾಲೀನ ಚಕ್ರ |

ಸಾವೀರ ಬ್ರಹ್ಮ ರಂಧ್ರಸ್ಥಾನ

ವಿಸ್ತಾರ ಸಾವೀರ ಕಿರಣದಳ ಭಾರ

ಓಂ ಎಂಬೊ ಒಂದೇ ಅಕ್ಷಾರ

ಕೋಟಿ ಸೂರ್ಯ ಕಾಂತಿ ಭರಪೂರ

ಮನ ಬುದ್ಧಿ ತತ್ವದ ಸಾರ

ಆತ್ಮಕ್ಕೆ ಕಾರಣಕಾರ

ಗುರುಮೂರ್ತಿ ಅದಕ್ಕೆ ಅಧಿಕಾರ

ನಿಷ್ಕಳಲಿಂಗ ದೇವರಲ್ಲಿ ಜಪಮಾಡೊ ಸಾವಿರ

ಓಂ ಸೋಹಂ ಅಮೃತಾಧಾರ

ಎರಡರ್ಧಾಕಾರ ವಿಹಾರ ||7||

ಅಲ್ಲಿ ಶಿಖಾಚಕ್ರ ಸುಳಿಯಲ್ಲಿ |

ತ್ರಿಕೋಣಿ ಉನ್ಮನಿಯಲ್ಲಿ

ತ್ರಿದಳ ತ್ರಿವೇಣಿ ಮಾಲಿ

ಆ ಉ ಮ ಅಕ್ಷರ ಮೂಲಿ

ಝಗಝಗ ಹೊಳಿವ ಜಾಗಲ್ಲಿ

ಪ್ರಾಣಲಿಂಗ ವಾಸ ಅದರಲ್ಲಿ

ಮೂರುಲಕ್ಷ ಎಣಿಸೊ ಜಪಮಾಲಿ

ನಾದ ಬಿಂದು ಕಳೆಯ ಸೂಸುತ್ತಲಿ

ಸದಾವಕಾಲದಿ ಲಾಲಿ ||8||

ಹಿಂದೆ ಮೇಲಗಿರಿ ಶಿಖರದ ಹಿಂದೆ |

ಪಶ್ಚಿಮ ಚಕ್ರ ಅದು ಚಂದೆ

ದಳ ಪದ್ಮ ಏನುಯಿಲ್ಲಂದೆ

ನಿರಂಜನಲಿಂಗ ವಂದೆ

ನಿಶ್ಯೂನ್ಯ ನಿರೂಪಮ ಬಿಂದೆ

ನವರಂಗದಿಂಗ ವಿಸ್ರಂದೆ

ಒಂದಕ್ಕೆ ಒಂದು ಇಲ್ಲಂದೆ

ಇಷ್ಟ ಪ್ರಾಣ ಭಾವ ಇಲ್ಲ ಮುಂದೆ

ಇಷ್ಟೆಲ್ಲ ತಿಳಿಯೊ ಗುರುವಿಂದೆ ||9||

ಬೈಲು ನವಚಕ್ರದ ಆಚಕ |

ಬೈಲಿಬೈಲಾಚಿಗೆ ಆದ ನಿರ್ಬೈಲು

ಬೆನ್ನಿನ ಮ್ಯಾಲ ಆದ ವೈಲು

ಪರಬ್ರಹ್ಮನಿರುವ ಸಕೀಲು

ಗುರುಪಾದಕ್ಕೆ ನೀ ಮನ ಸೋಲು

ಪರಿಭಾವ ಹರುಹರಿಪ ಜಾಲು

ಕರಿಘೂಳಿ ತೋರಿಸಿದ ಕೀಲು

ರಾಮಲಿಂಗ ಎಂಬುವ ಮೋಕ್ಷದಾ

ಸೋಹಂ ಶಾಂತಿಯ ಸಾಲು ||10||

ಜೀವ ಶಿವಯೋಗದಿ ಶಿವ ಧ್ಯಾನವ ಮಾಡದಕ |

ಅನುಭಾವಿಗಳ ಸಂಗ ಬೇಕ

ಕೇವಲ ಪ್ರವಿಮಲ ಭಾವ ಭಕುತಿಯಲಿ

ಸಾವಧಾನದಿ ಗುರು ಸೇವದೊಳು ಇರಬೇಕ ||ಪಲ್ಲ||

ಮುಂದಕ ಒಂದೊಂದು ಹೆಜ್ಜಿ ಮುಂದಕ |

ಚಂದನ ಚೌಕಿ ಹಿಂದಕ ಬಿಂದು ಮಂದಿರ ಸಂದುಕ

ಸಂದಿನೊಳಿರುವ ಕಂದಕ ಕಂದಕದೊಳಿರುವ ಗಂಧಕ

ಗಂಧ ಧರಿಸೊ ನಿರ್ಬಂಧಕ ಮಂದಿ ಸಂದಣಿಯ ಚಂದಕ

ಹೊಂದಿದೆ ನಿಂದೆವಂದನಿಗೆ ಕುಂದದೆ ನೊಂದದೆ ||1||

ನೀಜಕ ನಿಧಾನ ಮಾಡೊ ನೀಜಕ ಸಾಧನ ಮಾಡೊ |

ನಾಜುಕ ಶೋಧನ ಮಾಡೊ ಜ್ಞಾನ ತೇಜಕ ಸ್ವಾಧೀನ ಮಾಡೊ

ಮನಪೂಜಕ ಭೇದನಹರ ಸಮಾಜಿಕ ಬೋಧನದೊಳಿರು ಸೂಜಿಕ ||2||

ಗಾದಿ ವಿದ್ಯೆವನು ಓದುತ ಸರ್ವದಿ |

ವಾದಿಸಿದರೆ ಯಮಬಾಧೆ ವದಗುವದು

ಕ್ರೋಧವ ಕಳಿ ಮದವಳಿ ಏಕಾಂತದಿ | ||3||

ನಾಟಕ ತುಂಗಭದ್ರೆಯ ಘಾಟಕ |

ಲಿಂಗಮುದ್ರಿ ತ್ರಿಕೂಟಕ ಕಂಗಳ ನಡು ಗುಮಟಕ

ಸಂಗಮ ಕ್ಷೇತ್ರ ನಿಟಕ ಜಂಗಮನ ಲಲಾಟಕ

ಮಹಾಲಿಂಗ ಸ್ವಾಮಿ ಮಠಕ ರಂಗಮಂಟಪ ಶೃಂಗಾಟಕ ||4||

ಹಾಂಗೆ ಕೇಳೊ ಮೃದಂಗ ಜಾಂಗುಟಿ |

ದಿಂಗು ಹಿಡಿಸಿ ಭವ ಭಂಗ ಕೆಡಿಸುವ

ಮಂಗಲಾಂಗ ಕರಿಘೂಳಿ ಉಂಗುಷ್ಟದ ಧೂಳಿ

ರಾಮಲಿಂಗ ತಾಳಿ ಬೈಲಿನೊಳು ಬೆಳೆದ ||5||

ಕರುಣೀಸೊ ಪರಿತಾಪವ ಮಾಣಿಸೊ

ನಿರುತದಿ ಪರತತ್ವ ಶ್ರವಣಿಸೊ ||ಪಲ್ಲ||

ಸುರಿತ ಸುಖವ ಸುರಿಸುರಿ |

ಸುರಿದೇನದರ ಸಾರವರಿಯದೆ

ಮರವಿಲಿ ಮರತೆ ಘೋರ ತರದ ಸಂಸಾರದ

ಶರಧಿಯೊಳುರುಳುತಿರುವೆ ಹರ ಪಾರುಗಾಣಿಸೊ ||1||

ತ್ವರಿತದಿ ನರನವತಾರ ದಣಿಸೋ |

ಅಮೃತಾವನುಣಿಸೋ ಕರತಲದಿ ಚರಲಿಂಗ ಕಾಣಿಸೋ

ಭರಿತಾನಂದ ಸಾವಿರ ತಾರಕ ರವಿ

ಗುರುತ ತೋರಿಸಿ ಅರವಿನೊಳಿರಿಸೋ

ಶರತ್ತ ಹರಿಸಿ ಗಣಪೂರಿತ ಕರಿಸಿ

ಜ್ಞಾನ ಆರತಿವಿರಿಸಿ ಹಾರ ಕೊರಳಿಗೆ ಪೋಣಿಸೊ ||2||

ಸ್ಮರತಾಮಸ ನಾರಿ ಮೋಹ ಮಾಣಿಸೋ |

ಪೋರತನ ಮಸಣಿಸೊ ತಾರತಮ್ಯ

ದುರಿತಗುಣ ಕ್ಷೀಣಿಸೋ ವುರತರದ

ಭೇರಿ ಕಿನ್ನುರಿ ನಾದ ಇರುತಿರುತ

ಸುಸ್ವರ ದಾರಿಯೊಳಗೆ ನಿನ್ನ ಹೊರತು

ಇನ್ನಾರು ಘನಚರಿತ ಸಾರುತ ತುರ್ತದಿ ಕುಣಿಸೊ ||3||

ದೊರಿತನದ ವರ ಯೋಗ ಬ್ರಹ್ಮುಣಿಸೊ |

ಕಿರಿ ತರುಳನೆಂದೆಣಿಸೊ ಸುರತರು

ನೀನೆಂದು ಬಂದೆನೊ ಪ್ರಮಾಣಿಸೊ ಸ್ಥಿರ

ತನುವಿನಲ್ಲಿ ಶಿರ ತಗ್ಗಿಪೆ ಕಾಲ ಮೊರೆ ತಪಿಸುವ್ಯಾಲ್ಯ

ಮೀರುತದೆ ಮಂದಮಾರುತ ಮಕರಂದ ಬೀರುತ

ಅರವಿಂದ ತೋರುತ ಕರಿಘೂಳಿ ಪ್ರೀತಿ ಕರುಣಿಸೊ ||5||

ಬಾರವ್ವ ನೆಂಬೆವ್ವ ತಾರವ್ವ ನೀರ ತುಂಬಿ ತಾರೆ ತಂಬಿಗಿ |

ವಾರಿಗಿ ನಾರೇರು ಹೊರಕಡಿ ಹೋಗತಾರ ತಾರೆ ತಂಬಿಗಿ ||ಪಲ್ಲ||

ಕಂಚಗಾರ ಮಾಡಿದ ಪಂಚ ಬಣ್ಣದೊಂದು ತಾರೆ ತಂಬಿಗಿ |

ಸಂಚಗಾರಕೆ ಮೂರು ಕುಂಚಿಗಿ ಕೊಟ್ಟೀನಿ ||1||

ಕಂಚಿನ ತಂಬಿಗಿ ಪಂಚೇರಿಂದಾದವ್ವ ತಾರೆ ತಂಬಿಗಿ |

ಮುಂಚೆ ನೀ ತಾರವ್ವ ಕಂಚೇರು ಕರಿತಾರ ||2||

ಜತಿ ಗೆಳತಿಯರೆಲ್ಲ ಮಾತಾಡುತ್ಹೊಂಟಾರ ತಾರೆ ತಂಬಿಗಿ |

ನೀತಿವಂತಿ ತಾಸು ಹೊತ್ತು ಏರುತ ಬಂತು ತಾರೆ ತಂಬಿಗಿ ||3||

ವೈಮಾಲಿ ಮಾತಲ್ಲ ಬೈಲಿಗಿ ಹೋಗುವೆ ತಾರೆ ತಂಬಿಗಿ |

ಬೈಲಿನೊಳಗೆ ನಿರ್ಬೈಲೊಳು ಯಾರಿಲ್ಲ ತಾರೆ ತಂಬಿಗಿ ||4||

ಕೈಲಿಂದ ಬಾಯಿ ಬಂದ ನಯನ ಮುಂದಾದವ್ವ ತಾರೆ ತಂಬಿಗಿ |

ಜನ್ಮ ಮೈಲಿಗಿ ತೊಳೆದು ಸೈಯೆನಿಸಿಕೊಂಬುವೆ ತಾರೆ ತಂಬಿಗಿ ||5||

ರಾಮಲಿಂಗ ಅವಧೂತಸ್ವಾಮಿ ಹೆಣ್ಣಾದ ಕೇಳೆ ತಾರೆ ತಂಬಿಗಿ |

ನೇಮರಹಿತ ನಿರ್ಮಾಯನ ಪೂಜಕ್ಕೆ ತಾರೆ ತಂಬಿಗಿ ||6||

ತಂಬಿಗಿ ಇದ್ದರೆ ನಂಬಿಗಿ ಇದ್ದಂತೆ ತಾರೆ ತಂಬಿಗಿ |

ಶಂಭೋಕರಿಘೂಳಿ ಪಾದಾಂಬುಜ ಹಂಬಲಿಸಿ ತಾರೆ ತಂಬಿಗಿ ||7||

ಎನಗೆ ಕವಿ ಎಂಬುವ ನಾಮ ಇನ್ಯಾಕ |

ಜನ ಕರಿವದು ಸಾಕ

ತನುಗೊನಿ ಗುಣದಲ್ಲಿ ಮರುಳಾದೆ ಮನಕ

ವನಿತೆಯ ಸ್ತನಕ

ಅನುದಿನದೊಳು ಘನ ಗುರುವಿನ

ಧ್ಯಾನವು ನೆನಿಯುತೆ ಮನದೊಳಿರುತಿರಲೊಂದಿನ

ಮಾನಿನಿಯಳಿಗಾಗಿ ಮನುಮಥ ವಶನಾಗಿ

ಅನುಮಾನಿಸದೆ ಮನ ಮೋಹಿಸಿದ ಬಳಿಕ ||ಪಲ್ಲ||

ಕೋಮಲೆಯರ ಕಮಲದ ವಾರಿ ನೋಟಕ ಭ್ರಮಿಸಿದೆನು ಘಟಕ |

ಪ್ರೇಮದಲ್ಲಿ ಕರಸಿದನೊ ಕಾಮರತಿಕೂಟಕ

ಸುಮನಸದಲ್ಲಿ ಅಮನಸ್ಕ ಯೋಗ

ತತ್ವಮಸಿ ಪ್ರಣಮ ನೇಮದಲ್ಲಿ ಇರುತಿರಿ

ವಮ್ಮನ ಅತಿ ಗಳಿಸಿಮ್ಮನ ಬಿಡಿಸಿ

ಸುಮಶರಘ ಮನುಪ ಕ್ರಮಿಸಿದ ಬಳಿಕ ||1||

ಅಂಗದೊಳು ಮಹಲಿಂಗನ ಬೆಳಕ ಸಂಗಮದಲ್ಲಿ ಝಳಕ |

ಕಂಗಳ ನಡುರಂಗದೊಳ ಜುಳಕ ಮಂಗಳಾಂಗಿಯ ಥಳಕ

ಜಂಗಮ ರೂಪ ರಾಮಲಿಂಗ ಅವಧೂತ ಮುಕ್ತಿ

ಅಂಗನಿ ಚುಂಬನಿ ಲಿಂಗನ ಸೇವಿಸಿ

ಹಂಗುದೊರೆದು ಅಭಯಂಗಳ ಅರಿದು

ಶುಭ ಮಂಗಳ ಮುರಿದು ಹಿಂಗ ತಿರಗಿದ ಬಳಿಕ ||2||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಸಕಲಕ್ಕೆ ಗುಣದಾಯಕ |

ಗೋಕುಲಕ್ಕೆ ಕರ್ತ ಸಹಾಯಕ ಶ್ರೀಕೃಷ್ಣನು ಮಾಯಕ

ಗೋಕುಲದೊಳು ಸೋಳ ಸಾಸಿರ

ನಾರೆರ ಮನ ವ್ಯಾಕುಲ ಹರಸಿದ ಏಕಾಂತವನು

ಭಕ್ತಿಗಿಡಿಸಿ ಜ್ಞಾನಶಕ್ತಿಯ ಕುಡಿಸಿ ಮನ ಉಕ್ತಿಯ ನಡಿಸಿ

ಶ್ರೀ ಕರಿಘೂಳಿಯಾದ ಬಳಿಕ ||3||

ಹ್ಯಾಂಗೆ ಮಾಡಲೆಮ್ಮ ಅಂಗನ ತಾಪ ಹ್ಯಾಂಗೆ ತಾಳಲೆಮ್ಮ |

ಹ್ಯಾಂಗ ಮಾಡಲೆಮ್ಮ ತಂಗಿ ರಂಗಮಂಟಪದೊಳಗೆ ಮೊನ್ನೆ

ಮಂಗಳವಾರ ದಿನ ಬಂದು ಗುಂಗ ಹಿಡಿಸಿ ಪೋದನಮ್ಮ

ಮಂಗಳಾಂಗಿ ಕರೆದು ತಾರಮ್ಮ ರಾಮಲಿಂಗಮ್ಮ ||ಪಲ್ಲ||

ಭಾನುವಾರ ರಾತ್ರಿ ನಾನ್ಹೋಗಿದ್ದೆ ಕಾನಾಗಡ್ಡಿ ಜಾತ್ರಿ |

ಯನ್ನ ಮುಂದ ಬಂದು ನಿಂತಾ ನಿಜನೇತ್ರಿ

ಇನ್ನೇನು ಹೇಳಲಿ ಅತನಂದ ಗಾತ್ರಿ

ತನ್ನ ಮನಸಿಗೆ ಮಾಡಿಕೊಂಡೆ ಖಾತ್ರಿ

ಸೊನ್ನಿಯಾ ಮಾಡಿ ತೋರಿಸಿದ ಪಾತ್ರಿ ಮುಗಸಿದೆ ಯಾತ್ರಿ

ಕಣ್ಣು ಸೊನ್ನಿಯ ಖೂನ ಹಿಡಿದು ಚನ್ನಿಂಗ ಬಂದು ಯನ್ನ ಕರಿದ

ತಣ್ಣಗಾಯಿತು ತನುವು ಅದರ ಉನ್ನತದ ಆನಂದವಾಯಿತು

ಮನಿಗೆ ಬಾರಂತ ಹೇಳಿದನಮ್ಮ ಕೂನಿಲ್ಲವಮ್ಮ ||1||

ಒಬ್ಬರಿಲ್ಲದು ನೋಡಿ ದೀಪಾವಳಿ ಹಬ್ಬದ ದಿವಸ ಬಂದ ಓಡಿ |

ಹುಬ್ಬಳ್ಳಿ ಸೀರಿ ಉಡಸಿದ ನಿಲಿಗಿ ಮಾಡಿ

ನಿಬ್ಬೆರಗಾದೆ ನಲ್ಲಾ ಮಾಡದು ನೋಡಿ

ಇಬ್ಬರು ನಡದೆವು ಮೇಲು ಮಂದಿರ ಕಡಿ

ಒಬ್ಬರಿಗೊಬ್ಬರು ನಿಲವುಗನ್ನಡಿ ನೋಡಿ ಗಲಬಲಮಾಡಿ

ಉಬ್ಬಿ ಉಬ್ಬಿ ಕುತ್ತಿಗೆ ತಬ್ಬಿಕೊಂಡೆ ತೆಕ್ಕೆಯೊಳಗೆ

ಮಬ್ಬು ಹರಸಿದ ಕಾಮ ಭರದಿ ಗುಬ್ಬಿಯಂತೆ ಮುಟ್ಟಿ ಮುದುರಿದ

ಎದಿ ಭುಗಿಲು ಬಿಡವಲ್ಲ ದೇಳಮ್ಮ ನೀ ಕೇಳಮ್ಮ ||2||

ಮೋಹಿನಿ ರತಿಕೇಳಿ ಸಡಗರದಿಂದ ಕಟ್ಟಿಕೊಂಡೆ ತಾಳಿ |

ತಾ ತೊಡಿಸಿದ ವಂಕಿ ಬಿಂದುಲಿ ಕಾಲಕಡಗ ಪಿಲ್ಲೆಹಾಕಿಕೊಂಡೆರುಳಿ

ಉಡಕಿಯ ಗಂಡ ಪುಂಡ ಕರಿಘೂಳಿ

ನಡೆನುಡಿ ಕೊರಳೀಗೆ ಹಾಕಿ ದೇಕಾವಳಿ

ಆತನ ಅಡಿಗೆ ಜನ್ಮ ನಿವಾಳಿ ಫಲವೇನು

ಬಾಳಿ ಪೊಡವಿಯೊಳಗಿರು ಬಾರದಮ್ಮ

ಇಂತ ಕಡುಕಷ್ಟದ ಜನ್ಮ ಕೋಡಿ ಬ್ರಹ್ಮ ಬರದಾನಮ್ಮ

ಅವನ ಶಿರ ಕರ ಕಡಿಯಲಮ್ಮ ಮಿಡಕಿದರು

ಇನ್ನೇನು ಹಡದಮ್ಮ ಅಗಡಾದೆನಮ್ಮ ||3||

ಬಿಂದು ಬೀಜದ ಭೇದವಾಯಿತು

ಮಂಗಲವಾಯಿತೊ ಜಯ ಜಯ ||ಪಲ್ಲ||

ನಾದ ಬಿಂದಾಯಿತು ಬಿಂದು ನಾದಾಯಿತು |

ಬಿಂದು ಬೀಜದ ನಡು ಭೇದವಾಯಿತು

ಬಿಂದು ಬೀಜ ಇರುವ ಭೇದವು ತಿಳಿದರೆ

ಸಂದೇಹವಿಲ್ಲದೆ ಸರ್ವವು ತಾನಾಯಿತು ||1||

ಸತ್ತು ತಾನಾಯಿತು ಚಿತ್ತು ತಾನಾಯಿತು |

ಸತ್ತು ಚಿತ್ತುಗಳೆರಡು ಸಮರಸವಾಯಿತು

ಸತ್ತು ಚಿತ್ತುಗಳ ಸಮರಸ ತಿಳಿದಾರೆ

ಬತ್ತಿಯಿಲ್ಲದೆ ಜ್ಯೋತಿ ಬೆಳಗು ತಾನಾಯಿತು ||2||

ಕ್ಷರವು ತಾನಾಯಿತು ಅಕ್ಷರವು ತಾನಾಯಿತು |

ಕ್ಷರ ಅಕ್ಷರ ಎರಡು ಶಾಶ್ವತವಾಯಿತು

ಕ್ಷರ ಅಕ್ಷರ ಯರಡು ಅರ್ಥವು ತಿಳಿದಾರೆ

ಅರವಿಲಿ ಅಮನಸ್ಕ ಆತ್ಮ ತಾನಾಯಿತು ||3||

ಮಾಯಕ್ಕೆ ಒಳಗಾಯಿತು ಮಾಯಕ್ಕೆ ಹೊರಗಾಯಿತು |

ಮಾಯ ಇಪ್ಪತೈದು ತತ್ವವಾಯಿತು

ಮಾಯ ಇಪ್ಪತೈದು ಮರ್ಮವು ತಿಳಿದಾರೆ

ಮಾಯ ನಿರ್ಮಾಯ ಮತ್ತೇನು ಇಲ್ಲದ್ಹೋಯಿತು ||4||

ನೀನೋಗಿ ನಾನಾಯಿತು ನಾನೋಗಿ ನೀನಾಯಿತು |

ನಿನ್ನ ನಾಮ ಮಂತ್ರ ನಿಜ ಭೋಧವಾಯಿತು

ನಿನ್ನ ನಾಮ ಮಂತ್ರ ನಿಜವನ್ನು ತಿಳಿದಾರೆ

ಮಾನಭಿಮಾನವು ಮನಕಿಲ್ಲದಾಯಿತು ||5||

ಅಂಗ ಲಿಂಗವಾಯಿತು ಲಿಂಗ ಅಂಗವಾಯಿತು |

ಅಂಗಲಿಂಗಸಂಗ ಅನುಭವವಾಯಿತು

ಅಂಗಲಿಂಗಸಂಗ ಅನುಭವ ತಿಳಿದಾರೆ

ಮಂಗಳಾಂಗ ಮಹಲಿಂಗ ರೂಪಾಯಿತು ||6||

ಗುರುವು ಶಿಷ್ಯನಾದನು ಶಿಷ್ಯ ಗುರುವಾದನು |

ಗುರುವು ಶಿಷ್ಯರ ನಡುವೆ ಗುರುತು ತಾನಾಯಿತು

ಗುರುವರ ಕರಿಘೂಳಿ ಇರವನು ತಿಳಿದಾರೆ

ಅರಿವು ಮರವು ಸುರಧೇನು ತಾನಾಯಿತು ||7||

ಜಯಮಂಗಳಂ ನಿತ್ಯ ಶುಭಮಂಗಳಂ |

ಜಯಜಯತು ಜಗದೀಶ ಗುರುರಾಯಗೆ ||ಪಲ್ಲ||

ಆರು ಚಕ್ರಂಗಳನು ಮೀರಿ ಸಾವಿರ ದಳದಿ |

ಭೋರೆಂಬ ನಾದವ ಕುಡಿಕಿಯ ಮಾಡಿ

ಸಾರಿಸಾರಿಗೆ ಪವನ ಧಾರಣ ರವಿಚಂದ್ರ

ತಾರಕಾಮೃತ ಸಾರ ಸವಿದಾತಗೆ ||1||

ತ್ರಿವಿಧ ಪ್ರಸಾದ ಧುರೀಣನು ಒಳ ಹೊಳಗೆ |

ತ್ರಿಗುಣಕ್ಕೆ ಮೀರಿದ ವಿಮಲನಿಗೆ

ಅವಿರಳ ಸ್ವಯಂಜ್ಯೋತಿ ದೇವ ನರಹರಿ ಕೀರ್ತಿ

ಭವಹರ ಅಮನಸ್ಕ ಪೂರಿತಗೆ ||2||

ಒಂಟಿ ದೃಷ್ಟಿಯ ಸೂಕ್ಷ್ಮ ಮೀಂಟಿ ಸುಷುಮ್ನದೊಳು |

ನಾಂಟ್ಯವಾಡುವ ನೀಲಕಂಠನಂ ನೋಡಿ

ಅಂಟು ಮುಟ್ಟಿಲ್ಲದೆ ಆನಂದ ಶರಧಿಯೊಳ

ಜಂಟನಾಗಿರುವ ನೀಲಕಂಠನಿಗೆ ||3||

ಗುರುವು ಕರಿಘೂಳೀಶ ಕರ ಮುಗಿದು ಚರಣಗಳ |

ವಿರಸವಿಲ್ಲದೆ ಮುಗಿದು ಸ್ಮರಣೆ ಮಾಡಿ

ಮರಳಿ ಭವ ಜನ ಮನಿಗೆ ಹೊಂದದೆ

ಧೀರ ಸದ್ಗುಣ ಸಾರ ನಿರ್ಮಾಯಗೆ ||4||

ಭವಾನಿ ಭವಭಯ ನಿವಾರಣೀ |

ಕಾವುದಮ್ಮ ದೇವನ ರಾಣಿ

ಮಹದೇವನ ರಾಣಿ ಜ್ಞಾನಿ ||ಪಲ್ಲ||

ಆದಿ ಶೋಧನಿ ವಿಧಿ ಬೋಧ ಧುರೀಣಿ |

ವಿಧಿ ಮಾಧವ ಸದಾಶಿವಾದಿ ಉದಯಿಸಿ

ಮಧುಕೈಟಭ ಮದ ಮರ್ಧಿನಿ

ಪದ್ಮಿನಿ ಜ್ಞಾನಿ ಭವ ಭಯ ನಿವಾರಿಣಿ ||1||

ಮಹಿಷ ಮರ್ಧಿನಿ ಮಹಿನೀ |

ಆ ಮಹ ಸುರ ನಿಕರ ಆಹಾ ಪಾಹಿನೀ

ಮಹ ಮಧುಪಾನಿ ಮಹಾ ಮಾಯಿನೀ

ಜ್ಞಾನಿ ಭವಭಯ ನಿವಾರಿಣಿ ||2||

ಧೂಮ್ರ ಲೋಚನಿ ಧೂಮ್ರರಾಕ್ಷಸನ |

ಹೇಮಶಂದನ ಧೂಮ ನಿಃಕಾಮಿನಿ

ಕಾಮಿತ ಜನಿ ಪ್ರೇಮ ಕರುಣಿ

ಜ್ಞಾನಿ ಭವಭಯ ನಿವಾರಿಣಿ ||3||

ಚಂಡಮುಂಡಸಿರ ರುಂಡಮಾಲಿನಿ |

ದಂಡಿ ರಕುತ ಬೀಜಾ ಖಂಡ ಖಂಡಿನಿ

ತಾಂಡವಾಯಿನಿ ಖಂಡರೂಪಿಣಿ ಜ್ಞಾನಿ ಭವ ||4||

ಅಂಬಾ ಶಂಭು ನಿಶುಂಬ ಜಂಭಿನೀ |

ಶಂಭು ಕರಿಘೂಳೀಶನ ರಾಣಿ

ಸಂಭ್ರಮದ ನಿರಾಲಂಬ ವದನಿ ಜ್ಞಾನಿ ಭವಾನಿ ||5||

ಒಪ್ಪನಪ್ಪಿಕೊಳ್ಳೊ ನೀ ಪರಮಾತ್ಮ

ಆತ್ಮದೊಳಾನಾ ಪರಮಾತ್ಮ ಜೀವಾತ್ಮ ಆತ್ಮ ||ಪಲ್ಲ||

ಆತ್ಮದೊಳಗೆ ಪರಮಾತ್ಮನ ಶೃತಿಸಿದ |

ಪಥಗತಿ ಹತ್ತಿಸಲು ವ್ಯಥೆ ಸತಿಸುತರದು

ಅತಿ ಹಿತದಲ್ಲಿ ಸತ್ಯ ಪತಿತನ ಸ್ತುತಿಸಲು

ಜಾತಿ ಅಜಾತಿ ಸುಜಾತಿಲಿ ಮಥಿಸುವ ||1||

ಅಣುರೇಣು ತೃಣ ಧಣಿಯಾಗಿರುವ |

ಅಣು ಮಾಯ್ಮಲ ಕಾರ್ಮಿಕದಿ ಕಾಣುವ

ತನು ಮನ ಧನವನು ನೆನಿಸದೆನುಣಿಸಲು

ಕಣ್ಣಿನೊಳಗೆ ಪರಿಪೂರ್ಣ ಕಾಣಾತ್ಮ ||2||

ಸದಾ ಸದ್ಭಕ್ತರ ಹೃದಯದೊಳಿರುವ |

ವೇದದೊಳುದಿಸಿದ ಬೋಧನೋದಿಸುವ

ಸದಾ ನಾದದ ಆಧಾರದೊಳಿರುವ

ಸಾಧಿಸೊ ಸ್ವಾದಿಷ್ಟ ಮಣಿಪೂರದಿರುವ ||3||

ಅಷ್ಟವರ್ಣಷ್ಟದಳನಟ್ಟು ನಟ್ಟಿರುವ ವಿಷ್ಣು ಜೇಷ್ಠರ |

ಸುರ ಸೃಷ್ಟಿಯೊಳಿರುವ ತುಟಿ ಮಿಸುಕದೆ

ನಿಟಿಲಾಕ್ಷನ ಪಠಿಸಲು ನಿಟಿಲದೊಳಗ

ನಿಟಿಲಾತ್ಮನು ನಟಿಸುವ ||4||

ನೃಪಲತೆಯಲ್ಲಿ ತಪವ್ಯಾಪಕನರುವ |

ಅಪ್ಪ ಕರಿಘೂಳೀಶ ಕೃಪಾಕರ

ಗುಪಿತದಿ ಜಪಿಸುವ ಜಪತಪ ತಪಿಸುವ

ಒಪ್ಪನಪ್ಪಿಕೊಳ್ಳೊ ನೀ ಪರಮಾತ್ಮ ||5||

ಶಿವೋಹಂ ಸದಾ ಸೋಹಂ ಸೇವೆಯೊಳಿರಿಸೋ |

ದಯದಿಂದಲಿ ಎನ್ನಯ ಭವಭಯ ತವಿಸೊ ||ಪಲ್ಲ||

ಮನುಮುನಿ ಸುರಗಣ ಘನಕೆಲ್ಲ ಘನವಾದ |

ಅಣುರೇಣು ತೃಣದೊಳು ಪೂರ್ಣನೆ ಪರಮ ||1||

ಕನ್ನ ಬೇಡನು ಕಾಲಿಲೊದೆಯಲು ಮನ್ನಿಸಿ |

ಉನ್ನತವಾದಂಥ ಘನ ಪದವಿಯನಿತ್ತೆ ||2||

ತತ್ವ ತತ್ವದಿ ಸತ್ಯ ತತ್ವವ ಹತ್ತಿ |

ತತ್ವದಿ ತತ್ವಮಸಿ ಸತ್ಯದಿ ಸ್ಥಿತನೆ || ||3||

ಧರಿಯೊಳರಸಪೂರ ಕರಿಘೂಳಿ ಗುರುವರ |

ಕರುಣಾದಿ ತರುಳರಿಗೆ ಚರಣಾಮೃತುಣಿಸೊ ||4||

ಶಿವಾಯ ನಮಃ ಓಂ ಶಿವಾಯನಮ ಓಂ |

ಶಿವಾಯನಮ ಓಂ ನಮಶ್ಯಿವಾಯ ||ಪಲ್ಲ||

ಶಿವ ಮಹಾದೇವಾಯ ಶಿವಶಂಕರಾಯ |

ಶಿವ ಸರ್ವಭರಿತಾಯ ಗೌರೀಧವಾಯ

ಶಿವನಂದಿವಾಹಾನಾಯ ಶಿವದೇವನುತಾಯ

ಶಿವದಕ್ಷನಾಶಾಯ ನಮಶ್ಯಿವಾಯ ||1||

ನಾಗೇಂದ್ರಧರಾಯ ನಗಚಾಪಕರಾಯ |

ಅಘಹರ ಮಾರಾಯ ಸುಗನಿರ್ಮಲಾಯ

ನಿಗಮಾಗಮಾಶಾಯ ಯೋಗಿ ಜನಾಯ

ಸಾಗರ ಕರುಣಾಯ ನಮಃ ||2||

ಶ್ರೀ ನೀಲಕಂಠಾಯ ಶ್ರೀ ನತಜನಪಾಲಾಯ |

ಶ್ರೀ ಗೌರಿವರ ಧಾರ ಗಣನಾಥಾನಾಯ

ಶ್ರೀ ಭುವನೇಶಾಯ ಶ್ರೀ ವೇದಾಂಗಾಯ

ಶ್ರೀ ಸುಖಸದಾಯ ನಮಃ ||3||

ಶಿವ ಧನ ಸಖಾಯ ಶಿವಮನ ಸುಖಾಯ |

ಶಿವ ಭವಭಯ ಮಾಯ ಶಿವಸಾಕ್ಷಾತಾಯ

ಶಿವ ಪಶುಪತಿಯಾಯ ಶಿವ ಪಂಚಮುಖಾಯ

ಶಿವ ಸಹಸ್ರಾಕ್ಷಾಯ ನಮಃ ||4||

ಭವಭರ್ಗಭಸಿತಾಯ ಬಾಳ ಲೋಚನಾಯ |

ಭವ ಮೇರುಕಾರಣ ಕಪರ್ದಿಯಾಯ

ಶಿವಸೋಮ ಶಾಂತಾಯ ಶಿವ ಅಭಯಾಯ

ಶ್ರೀ ವಿರೂಪಾಕ್ಷಾಯ ನಮಃ ||5||

ವಿಶ್ವಾಭಿರಾಮಾಯ ಶಿವಗಂಭೀರಾಯ |

ಶಿವಕಾಲ ಕಾಂತಾಯ ಶಿವಲೋಲುದಾಯ

ಶಿವಭವ ಭರಿತಾಯ ಶಿವದೈವರಾಯ

ಶಿವ ಶಾಂತಿ ದಾಂತಾಯ ನಮಃ ||6||

ಭುವ ವಾಮದೇವಾಯ ಶಿವ ಅಘೋರಾಯ |

ಶಿವ ಓಂಕಾರಾಯ ಶಿವರುದ್ರಭದ್ರಾಯ

ಶಿವತತ್ವ ಪುರುಷಾಯ ಶಿವ ಪಂಚಾಕ್ಷರಾಯ

ಶಿವಮಂತ್ರ ಪಾಠಾಯ ನಮಃ ||7||

ಶಿವ ಸದ್ಯೋಜಾತಾಯ ಶಿವ ಭೀಮರಾಮಾಯ |

ಶಿವ ಮೃಢಮಹಾಯ ಶಿವಕಾಲರಾಯ

ಶಿವ ಕಾಮಜಿತಾಯ ಶಿವ ಮೃತ್ಯುಂಜಯಾಯ

ಶಿವಪುರನಾಥಾಯ ನಮಃ ||8||

ಶಿವ ಪರಾತ್ಪರಾಯ ಶಿವ ಅನಂತಾಯ |

ಶಿವ ತೇಜೋರಾಶಾಯ ಶಿವ ನಿರ್ಮಯಾಯ

ಶಿವ ಸರ್ವಜ್ಞಾಯ ಶಿವ ಶಾಶ್ವಿತಾಯ

ಶಿವ ಬ್ರಹ್ಮಬ್ರಹ್ಮಾಯ ನಮಃ ||9||

ಶಿವ ಸುರಪಾಲಯ ಶಿವ ರುಂಡಮಾಲಾಯ |

ಶಿವ ದಂಡಕರಾಯ ಶಿವ ಕಪಾಲಾಯ

ಶಿವ ತ್ರಿಶೂಲಧರಾಯ ಶಿವಬಾಂಧವಾಯ

ಶಿವ ನಿಜವಾಸಾಯ ನಮಃ ||10||

ಶಿವ ಸದಾಶಿವಾಯ ಶಿವ ಚಂದ್ರಮೌಳ್ಯಾಯ |

ಶಿವ ಮಹಿಮೋಗ್ರಜಾ ಚರ್ಮಾಂಬರಾಯ

ಶಿವ ಅಸುರ ಶಿರಾಯ ಶಿವ ಧರಮಾಲಾಯ

ಶಿವ ಮಂದಾಕಿನೀ ದಾಯ ನಮಃ ||11||

ಶಿವ ಮಹೇಶ್ವರಾಯ ಶಿವ ಮೇಘವಾಹಾಯ |

ಶಿವ ಯೋಗಮಂದಿರ ಶಿವ ಜೀವವಾಸಾಯ

ಶಿವ ನೀಲಹಿತಾಯ ಶಿವ ಲೋಹಿತಾಯ

ಶಿವ ಪಾರಿಜಾತಾಯ ನಮಃ ||12||

ಶಿವ ಪಾವನಾಯ ಶಿವ ಲೋಕಪಾಲಾಯ |

ಶಿವ ವಾಸ ಕೈಲಾಸ ಉಮೆಸುತ ಸಹಿತಾಯ

ಶಿವ ಮಂತ್ರಭರಿತಾಯ ಶಿವ ಭಕ್ತಿದಾಯ

ಶಿವ ಪಂಚಬ್ರಹ್ಮಾಯ ||13||

ಶಿವ ಪರನಾದಾಯ ಶಿವಪರಬಿಂದಾಯ |

ಶಿವ ಪರಮಾತ್ಮಾಯ ಶಿವ ಈಶ್ವರಾಯ

ಶಿವ ಪುರಹರಾಯ ಶಿವ ಸಂಪದಾಯ

ಶಿವ ಇಂದ್ರಮಿತ್ರಾಯ ನಮಃ ಶಿವಾಯ ||14||

ಶಿವ ವಧುವರಾಯ ಶಿವ ವಾಗೀಶಾಯ |

ಶಿವ ವರ್ಣಾತೀತಾಯವಂದ್ಯ ಜಯಾಯ

ಶಿವಪರತರಾಯ ಪರಂಜೋತ್ಯಾಯ

ಶಿವ ಪರಮಾನಂದಾಯ ನಮಃ ||15||

ಶಿವ ನಿರಘ ನಿರೂಪಾಯ ಶಿವ ನೀರವರ್ಣಾಯ |

ಶಿವ ನಿರಲೇ ಪಾಯ ನಿರವಯಾಯ

ಶಿವ ನಿತ್ಯ ತೃಪ್ತ್ಯಾಯ ಶಿವ ನಾಗಭೂಷಾಯ

ಶಿವ ವಿಶ್ವಬ್ರಹ್ಮಾಯ ನಮಃ ||16||

ಶಿವ ವಿಶ್ವತಾತ್ಮಾಯ ದಿವಪೂಜಿತಾಯ |

ಶಿವ ಗಣಾರ್ಚಿತ ಸನಾತನಾಯ

ಶಿವ ಸದಾಗತಿಯಾಯ ಶಿವಸೋಹಂ ಸದಾಯ

ಶಿವ ಗಿರೀಶಾಯ ನಮಃ ||17||

ಶಿವ ಪಿತ ಗಾಂಗೇಯ ಶಿವಗಣನಾಥಾಯ |

ಶಿವ ಜಗದೀಶ್ವರ ಶಿವ ವಿಷಧರಾಯ

ಶಿವ ಮಧುಮಧುರಾಯ ಶಿವ ಪಿನಾಕಾಯ

ಶಿವ ಸದಾಪಾಲಾಯ ನಮಃ ||18||

ಶಿವ ರಾಜಪುರಾಯ ಶಿವ ರಾಜಯೋಗ್ಯಾಯ |

ಶಿವ ಕರಿಘೂಳೀಶ ಗುರು ಕರುಣಾಯ

ಶಿವ ಯೋಗಿ ವರಕವಿ ಮುರುಗೇಂದ್ರ ಗುರುವಾಯ

ಶಿವಾಯ ಶಿವಧೋಂ ನಮಃ ||19||

ದೇವ ದೇವ ಆವಾಗಲು ಶಿವ |

ಸೇವೆಲಿರಿಸಿ ಕಾವುದೈ

ಜೀವ ತ್ರಿಗುಣವಾ ವಿರಹಿತನೆ

ಸಾವಧಾನವೀವುದೈ ದೇವ ||ಪಲ್ಲ||

ಅಂಗಜನ ವಧ ತುಂಗ ಸಿರದೊಳು |

ಗಂಗಾಧರ ಧವಳಾಂಗನೆ

ಸಂಗ ಶರಣ ಸುಸಂಗವಾ ಶಶಿ

ಕಂಗಳಲಿ ನೋಡ್ಲಿಂಗನೆ ದೇವ ||1||

ಇಷ್ಟದಾಯಕ ನಿಷ್ಠರಿಗೆ |

ಸುಖ ಕೊಟ್ಟು ಸಲಹುವ ಧಿಟ್ಟನೆ

ನೆಟ್ಟನಂಧಕ ದುಷ್ಟಸುರನ್ಹೆದಿ

ಕುಟ್ಟಿ ತುಳಿದಾ ಸಂತುಷ್ಟನೆ ದೇವ ||2||

ಅಷ್ಟ ದಳಗಳನಟ್ಟಿ ಸುಳಿದು |

ನಟ್ಟನಡುನಾಳಿಷ್ಟನೆ ಸೃಷ್ಟಿ

ಶ್ರೇಷ್ಠ ಕಷ್ಟಕಳಿ ಉತ್ಕೃಷ್ಟ

ಕರಿಘೂಳೀಶನೆ ದೇವ ||3||

ಸದಾ ರಾಮನಾಮ ಸ್ಮರಿಸೊ |

ಪ್ರೇಮವಾದ ಭವ ನೇಮವ ಹರಿಸೊ ಸದಾ| ||ಪಲ್ಲ||

ಸತಿಸುತರು ಹಿತ ಬಾಂಧವರೆಲ್ಲ |

ಹಿತದಿರಲು ನಿನಗಿಂದಿವರೆಲ್ಲ

ಗತಿಸುವಾಗಾರಿಲ್ಲ ಸುಪಥ ಅನುಸರಿಸೊ ಸದಾ ||1||

ಧನಕನಕವ ನನ್ನದೆಂದು ನಂಬಿರುವಿ |

ನಾನೆಂಬ ಮಮಕಾರದಿಂದ ತುಂಬಿರುವಿ

ತನುಮನ ಧನ ಗುರುವಿನ ಧ್ಯಾನದಿರಿಸೊ ಸದಾ ||2||

ಆರು ನಾನೆಂಬ ವಿಚಾರ ವಿಚಾರಿಸೊ |

ಘೋರ ತರದ ಸಂಸಾರವ ಹರಿಸೊ

ಕರಿಘೂಳಿ ಚರಣಾಮೃತವನು ಪೂರಿಸೊ ಸದಾ| ||3||

ಅನುದಿನ ಓಂ ನಮಃ ಶಿವಯೆನು ಮನವೆ |

ಹೀನ ಗುಣಗಳಿಸು ತಿಳಿ ತಿಳಿದು ತಿಳಿದು ಅನು | ||ಪಲ್ಲ||

ಶಿವನಾಮ ಸ್ಮರಿಸಲು |

ಭವ ಭಯವೆಲ್ಲಿಹದು

ಜಡಜೀವಾದು ಭಾವಾದು ಕಳೆದು ಕಳಿದು ಅನು| ||1||

ಯಾವ ಶಿವನ ಓಂ |

ಶಿವಾಯನಮ ಓಂ ಕಾಣುಮ

ಓಂ ನಮಶಿವಾಯ ಶಿವಾಯ ಅನು ||2||

ಉದಯದಿ ಆ ನಾಮ |

ಮಧುರ ಮ ಮಧ್ಯನಾಮ

ಆದಿ ಮಧ್ಯಾಂತ ಮನಾಮ ಓನಾಮ ಅನು ||3||

ರಜತಾದ್ರಿಲಿರುವ ರಾಜ ಯೋಗುಸುರುವ |

ರಾಜಮಹಾರಾಜ ಸುಪೂಜ

ಕರಿಘೂಳೀಶಜಾ ಅನು ||4||

ಜತನ ನೋಡಾತ್ಮ ಜತನ ಮಾಡಾತ್ಮ |

ಮಥನದಿ ಪೃಥುವಿಯಲ್ಲಿ ಪತನವಾಗುವದಯ್ಯೊ ||ಪಲ್ಲ||

ಎಲ್ಲಿ ನೋಡಲಲ್ಲಿ ಕಲಿ ಖುಲ್ಲ ಸ್ತ್ರೀಯರೆಲ್ಲ ಬಂದು |

ಬಲಿಮೆಯಿಂದಲಿ ನಿನ್ನ ಬಲಿಯೊಳಗ್ಹಾಕುವರಯ್ಯೊ ||1||

ಮೋಹಿನಿ ರೂಪದಿಂದ ಇಹದೊಳು ಜನಿಸಿ ಬಂದ |

ಮೋಹಿಸಿ ವಿಧವಿಧದಿಂದ ಮಹ ನರ್ಕದ್ಹಾಕುವರಯ್ಯೊ ||2||

ಮಾಯದಿಂದ ಜನಿಸಿದ ಬಳಗ ಕಾಯದಿಂದ ತುಂಬ್ಯಾದ ವಳಗ |

ಆಯಸಿಲ್ಲ ಬೇಗು ಬೆಳಗ ಕಾಯ ಜೀವಗಳಿಯುವದಯ್ಯೊ ||3||

ಹತ್ತೊಂಬತ್ತು ಎಂಟೇಳಾರು ಮೇಲೈದುನಾಲ್ಕು ಮೂರು |

ಸುತ್ತಮುತ್ತ ಸುತ್ತಿ ವಿಷಯ ತುತ್ತು ಮಾಡಿ ವುಣಿಸುವದಯ್ಯೊ ||4||

ಮರುಳು ಮಾಡಿ ಘೋರ ನರಜನ್ಮದಿರಿಸುವರ |

ಕರಿಘೂಳಿಚರಣಸೇವೆ ಮರಿಸುವರುವಿರಲಯ್ಯೊ ||5||

ಪರಿಶುದ್ಧಾತ್ಮ ತಾಯಿರುವನೊಬ್ಬ ತಾ |

ಪ್ರಾರ್ಥಿಸಿರಿ ಆತನಿರುವಾ

ಪರಿಪರಿಯಲಿ ಸ್ಮರಣೆಗೈಯ್ಯುತ

ಬೇರೆ ದೇವರಿಲ್ಲೆನುತಾ ||ಪಲ್ಲ||

ಪ್ರೇಮಭರಿತ ಕಾಮಿತಾರ್ಥ |

ನೇಮದಿಂ ನಡಿಸುವಾತ

ಪಾಮರರಿಗಿ ತಾ ಸ್ವಾಮಿಯಾದಾತಾ

ನೇಮಿಸಿದ ಸುಭಾಷಿತ ||1||

ಸರ್ವಕರ್ತ ಸರ್ವಧಾತ |

ಸರ್ವರಲಿ ಬೆರಿಯುವಾತ

ಪೂರ್ವದಲಿ ತಾ

ಸರ್ವೇಶನುತ ಸರ್ವದೊಂದಾಗಿರುತ ||2||

ತಂದಿ ತಾಯ್ಮನ ನೊಂದಿಸದೆ ದಿನ |

ವಂದನೆಯ ಮಾಡು ಸತತಾ

ಬಂಧನರಿ ತಾನಂದದಿರುತಾ

ಇಂದುಧರ ನಾನಂದತಾ ||3||

ಜೀವಘಾತಗೈವದಿರುವಾತ |

ಭಾವಭರಿತ ಕರುಣಿತ ಆವ ಕಾಲದಿ

ಮೋಹ ತ್ಯಜಿತ ಜೀವಿಗನ್ನ

ಜಲ ಕೊಡುವಾತ ||4||

ಪರಸ್ತ್ರೀ ಮಾತೆ ಸರಿಯೆಂದೆನ್ನುತ |

ಪರಧನವ ಮೃತ್ತಿಕೆನ್ನುತ

ಧರಿಯೊಳಗೆ ಕಳವರಿಯದಿರುತ

ನಿರುತ ಸುಬೋ ಧರಿಸುತ ||5||

ಸತ್ಯ ವಚನಗಳ್ನಿತ್ಯನಾಡುತ |

ಸತ್ಯ ಪಥಗತಿಯನ್ನುವಾತಾ

ಸತತ ಸತ್ಯವೇದವ್ಯಾಖ್ಯಾತ

ಸತ್ಯಕರಿಘೂಳೀಸುತಾ ||6||

ಗೋಪಿ ತಾಪವಿದೂರ ಭವಸಾರ |

ಸುವಿಚಾರ ಆಪದ್ಬಾಂಧವ ಬಾ ಬಾರ ||ಪಲ್ಲ||

ಅನುದಿನದೊಳು ನಿನ್ನ ಧ್ಯಾನದೊಳಿರುವೆ |

ಕನಿಕರದಿಂದಲಿ ಬಾರೊ ಸುಖದೋರೊ

ಮಾನಿನಿಯಳ ಮನ ಸಾರೊ ||1||

ಖಗಪತಿ ಮೋಹನ ನಿಗಮಾಗಮನೆನ್ನ |

ಆಘಹರಿಸಲು ಬಹದ್ದೂರ ದಯಾಪೂರ

ದ್ವಾಪಾರ ಯುಗಯುಗದಲಿ ಅವತಾರ ||2||

ದುಷ್ಟರ ದೂರ ಶ್ರೇಷ್ಠರುದ್ಧಾರ |

ಕಷ್ಟವ ಕಳಿಯಲು ಶೂರ

ಶ್ರೇಷ್ಠರ ಈಕ್ಷಿಪರ ಕೃಷ್ಣನೆ ಅಷ್ಟವತಾರ ||3||

ಮಾಯ ಸಂಸಾರ ಆಯಾಸ ನೀರ |

ಕಾಯಲು ಬಾ ಗುರುವರ ಘೂಳೇಶ್ವರ

ಕರುಣಾಕರ ಮಾಯವಿಜಿತ ಕಾಮಾರ ||4||

ಕರುಣಿಸಬಾರದೇನು ಶ್ರೀ |

ಗುರುದೇವ ಕರುಣಿಸಬಾರದೆ

ಧರುಣಿ ನರರು ಗೈವ ಕಿರಿಕಿರಿ

ಹರಿಸೆಂಬ ತರುಳನ ಮೊರಿ ಕೇಳಿ ||ಪಲ್ಲ||

ನಿನ್ನ ವಾಚವ ನಂಬರು |

ಅನುದಿನ ನಿನ್ನ ಧ್ಯಾನ ಮನದೋಳ್ಮಾಡರು

ಧ್ಯಾನಗೈವರಿಗಪಮಾನಗೈಯುವರಯ್ಯೋ

ಜ್ಞಾನ ಮೂರುತಿ ನಿನ್ನ ಜ್ಞಾನವನೆಲ್ಲರಿಗು ||1||

ಮಹಾತ್ಮೆಯ ತೋರೆಂಬುವರು |

ಇಹದೊಳಗವರೆ ಬಹಳವಾಗಿರುತಿಹುರು

ಕುಹಕ ಗುಣಗಳಿಂದೆ ಮಹನೀಯರನು ಕಂಡು

ಗಹಗಹಿಸಿ ನಗುವರು ಮಹದೇವ ನಿನಗಿನ್ನು ||2||

ಮುಂದಿನ ಭಕುತರೆಲ್ಲ |

ಬಂಧನದಿರಲು ಬಂದು ರಕ್ಷಿಸಿದಿಯಲ್ಲ

ಇಂದುಧರನಂದದಿಂದ ಬಂದು ನಿನ್ನ

ಕಂದನೆಂದು ದಯಾಸಿಂಧು ಇಂದೀಕ್ಷಿಸಿ ||3||

ದುರುಳರಘವ ಮನ್ನಿಸಿ |

ಧರೆಯೊಳು ನಿನ್ನ ಶರಣಾಗತರ ರಕ್ಷಿಸಿ

ಬೆರಿಯೊ ಭಕ್ತಪರಾಧೀನೆಂಬೊ ಬಿರುದ ಮೋಹಿಸಿ

ಪರಮ ಪಾವನ ಕರಿಘೂಳೇಶ ನಿರುತದಿ ||4||

ಮಹಾಂಕಾಳಿ ಮಹದೇವಿಯೆ ಮಾತೆ ಮಂಗಲಂ |

ಮಹಾಂಕಾಳಿ ಮನೋಹರಿ ಶ್ರೀದಾತೆ ಮಂಗಲಂ

ಮಹಾ ಮಾಯಿಯೆ ಮಾತಾಂಗಿ ಮಂತ್ರಾದಿ ಶಕ್ತಿದೇವಿ

ಮಹನೀಯಳೆ ಮಹದಯಳೆ ಮಹಿತೆ ಮಂಗಲಂ ||ಪಲ್ಲ||

ಮಹಾಂಕಾಳಿ ಮಧುಕೈಟಭ ಗೌರಿ ಮಂಗಲಂ ಮಹಂಕಾಳಿ |

ಮಧುಸೂಧನಕಾರಿ ಮಂಗಲಂ ಮಧು ಅಮೃತೆ ಮದ್ಯಪಾನಿ

ಮದ ಮಹಿಷಾಸುರ ಮರ್ಧಿನಿ ಮದನ

ರಕ್ಷಮದನ ಭಕ್ಷ ಮಹಿತೆ ಮಂಗಲಂ ||1||

ಮಹಾಂಕಾಳಿ ಮರಕತಮಣಿ ಮಾತೆ ಮಂಗಲಂ |

ಮಹಾಂಕಾಳಿ ಮದನಯ್ಯನಲೀಲೆ ಮಂಗಲಂ

ಮಹಾರಾಜ್ಯಳೆ ಅಮರ ಪೂಜ್ಯಳೆ ಮರೆಯದಿರು ಮಮ ಕಾಯ್ವಳೆ||

ಮರಿಸು ಅಮಳಳೆ ಮರಣಜರ ಸಮಾಪ್ತಿ ಮಂಗಲಂ ||2||

ಮಹಾಂಕಾಳಿ ಮನು ಮುನಿಜನಪಾಲೆ ಮಂಗಲಂ |

ಮಹಾಂಕಾಳಿ ಮಾನಹೀನರ ಲೀಲೆ ಮಂಗಲಂ

ಮಾಣನಿತರರು ಮನ್ನಿಸು ಶ್ರೀ ಮಾನವಂತಿ ಮಾನ್ಯಳೆ ಪೊರಿ

ಮನದನುವಳೆ ಉನ್ಮನಿಯಳೆ ಮನುತೆ ಮಂಗಲಂ ||3||

ಮಹಾಂಕಾಳಿ ಮಾರುತ ಸಂಜೀವಿ ಮಂಗಲಂ |

ಮಹಾಂಕಾಳಿ ಮರುತನ ಸದ್ಭಾವಿ ಮಂಗಲ

ಮಾರುಗೊಂಬೆ ಮಾರಿ ನಿನ್ನ ಮರ ಮರಿಯದೆ ಮರತೆ ಘನ

ಮಾರುದ್ರ ಕರಿಘೂಳಿಗೆ ಮನ ಸೋತೆ ಮಂಗಲಂ ||4||

ಅಜಹರಿಸುರಂ ಮೂಜಗ ಪೂಜಿತಂ |

ವಿಜಯ ಶಿವಲಿಂಗ ಭಜೇಹಂ

ಭುಜಗಭೂಷಂ ಭಜಕ ಪೋಷಂ

ಸುಜನ ಶಿವಲಿಂಗಂ ಭಜೇಹಂ ||ಪಲ್ಲ||

ಅಂತಕಾಂತಂ ಅಂತಃಕರುಣಂ |

ಶಾಂತಿ ಶಿವಲಿಂಗಂ ಭಜೇಹಂ

ಭ್ರಾಂತಿರಹಿತಂ ತಂತಂರಾತ್ಮಂ

ಸ್ವಾಂತ ಶಿವಲಿಂಗಂ ಭಜೇಹಂ ||1||

ನಂಜುಗೊರಲಂ ಕುಂಜತಾವರಂ |

ಸಂಜ ಶಿವಲಿಂಗಂ ಭಜೇಹಂ

ಅಂಜನೇಶಂ ಮಂಜುಘೋಷಂ

ಕೆಂಜಡಿಯ ಲಿಂಗಂ ಭಜೇಹಂ ||2||

ಸಂಗ ರಹಿತಂ ಸಂಗ ಸಹಿತಂ |

ಸಂಗ ಶಿವಲಿಂಗಂ ಭಜೇಹಂ

ಅಂಗಜನಮಂ ಮಂಗಲಾತ್ಮಂ

ತುಂಗ ಶಿವಲಿಂಗಂ ಭಜೇಹಂ ||3||

ಧರಿಯೊಳಧಿಕಂ ಅರಸಪುರಕಂ |

ಧೊರಿಯು ಶಿವಲಿಂಗಂ ಭಜೇಹಂ

ಕರಿಯ ತಾತಂ ಕರಿಘೂಳೀಶಂ

ಕರುಣ ಶಿವಲಿಂಗಂ ಭಜೇಹಂ ||4||

ಸತ್ಯ ಬ್ರಹ್ಮವಿದ್ಯೆವೊ ಇದರರ್ಥವೆ ಪರಬ್ರಹ್ಮವೊ |

ಆಹಾ ಮತ್ರ್ಯದ ಮನುಜರಿಗರ್ಥವಾಗಿರುವಂತ

ಅರ್ಥಭಿಮಾನ ಪ್ರಾಣನಾತ್ಮನ ತೋರುವಂತ ಸತ್ಯ ||ಪಲ್ಲ||

ಶಾಸ್ತ್ರದೊಳಗಿಲ್ಲವೊ ಮಾತ್ರೆ ಗಾತ್ರವಾದುದಿಲ್ಲವೊ |

ನೇತ್ರೆರಡರ ನಡು ಜಾತ್ರಿ ತೋರುತಲಾದೆ

ಸೂತ್ರ ತಿಳಸಿ ಪರಮಾತ್ಮನ ತೋರುವಂತ ಸತ್ಯ ||1||

ಎತ್ತ ನೋಡಲಿಹುದು ಸುತ್ತಮುತ್ತಲಿ ತಾನಿಹುದು |

ಗುರ್ತು ತಿಳಿದವರ ಹತ್ತಿಲಿರುವದು ಸಪ್ತ

ಪಾತಾಳದೊಳು ಗುಪ್ತವಾಗಿರುವದು ಸತ್ಯ ||2||

ವೇದಾದಿ ಮೂಲಾಗ್ಯಾದೋ ಭೇದ ಭೇದಾಗೆ ಸಾಧ್ಯಾಗ್ಯಾದೋ |

ವಾದಿಪರಿಗೆ ಕಾದ ಬೂದಿಯಂತಾಗ್ಯಾದೊ

ಸಾಧಿಪರಿಗೆ ಸದಾ ಸುಖದೊಳಿರಿಸುವಂತ ಸತ್ಯ ||3||

ಅಣುರೇಣುವಾಗಿಹದೊ ಸಣ್ಣ ರಾಜಹಳ್ಳಿರುವದೊ |

ಅಣ್ಣ ಕರಿಘೂಳಿ ಗುರು ಪಾದದೊಳಿರುವದು

ಸಣ್ಣ ಮುರುಗೇಂದ್ರನ ಕರದೊಳಗಾಡ್ವದು ಸತ್ಯ ||4||

ಶಾಂತಿಯ ನೀಡೊ ಸತತಾ |

ಸಿದ್ಧಾಂತ ಶಾಂತಿ ಶಾಂತಿಯ ನೀಡೊ ಭವ

ಭ್ರಾಂತಿಯನಿಲ್ಲದೆ ಅಂತರಂಗದಿ ನಿಂತ

ಅಂತನಾಂತಕಾಂತ ಶಾಂತಿ ||ಪಲ್ಲ||

ಉಡುವಾ ಗುಣುವಾಗಲು ಶಾಂತ |

ಕೊಡುವಾಗ ಕೊಂಬಾಗಲು ಶಾಂತ

ಅಡಿಗಡಿಗಾಶಾಂತ ಮೃಢನುಡಿ

ನುಡಿಯಲು ಶಾಂತ ||1||

ಸ್ನಾನ ಧ್ಯಾನದಿ ಶಾಂತ |

ಮಾನಪಮಾನದಿ ಶಾಂತ

ಮಾನು ನಿಯರ ಮನ ಶಾಂತ

ತಾನೆಲ್ಲಿರಲಲ್ಲೆ ಶಾಂತ ಶಾಂತಿ ||2||

ರಜತಮ ಸತ್ವದಿ ಶಾಂತ |

ತೇಜಭೂಧನ್ಹೆಣ್ಣಿಲಿ ಶಾಂತ

ರಜತಾದ್ರಿ ಕರಿಘೂಳೀಶ

ರಾಜಯೋಗದಿರಿಸೊ ಶಾಂತ ||3||

ಶಿವ ಸೇವೆಗೈಯಲಿಲ್ಲ

ಶಿವ ಸೇವೆಗೈಯಲಿಲ್ಲ ಜೀವ ಜೀವ ||ಪಲ್ಲ||

ಶಿವ ಸೇವೆಗೈಯಲನುಭಾವ |

ಸಾವಧಾನದಿ ತಿಳಿವದು ನಿಜವ

ಭವ ನೆವಗಳು ಜವ ಕಳಿಯುವ

ಆವಾಗಲು ಸ್ಥಿರ ಸುಖ ವೀವ

ಕೈವಲ್ಯವು ಕೈಸೇರುವ ಜೀವ ||1||

ತಡಿಯೋ ಕೇಡ ಗುಣಗಳು ಬಾರದೆ ತಡಿಯೊ |

ಈಡಪಿಂಗಳ ನಾಡಿಲಿ ನಡಿಯೊ

ನಡುವಿರುವದು ಸುಷುಮ್ನಿಡಿಯೋ

ಅಡಗಡಿಗೆ ಮೃಡ ನುಡಿ ನುಡಿಯೊ

ಜಡದೇಹ ಬಿಡಿಸಿ ಪದ ಪಡಿಯೋ ಜೀವ ||2||

ನೋಡೊ ಬಿಡದನುದಿನ ಸಾಧನೆ ಮಾಡೊ |

ಎಡನೇತ್ರದಿ ದೃಷ್ಟಿಯನೀಡೊ

ಓಡ್ಯಾಡುವ ಮನ ಸ್ಥಿರಮಾಡೊ

ಧೃಡ ತಾರಕ ರೂಪನಗೂಡೋ

ಸಡಗರದಲಿ ಸದಾ ಲೋಲ್ಯಾಡೊ ಜೀವ ||3||

ನಾದ ಆದಿಯಲಿ ಸಾಧಿಸುನಾದ |

ಸದ ಸಾಧಿಸಿ ದಶ ವಿಧನಾದ

ಯಿದು ಮನವನು ನಿಲಿಸುವದಾದ

ಸದಾಶಿವನ ಪಾದದಲ್ಯಾದ

ಇದರಲ್ಲಿ ಆದ ನಿಜ ಬೋಧ ಜೀವ ||4||

ತಿಳಿಯೊ ಥಳಥಳ ಬೆಳಗಿಲಿ ಸುಳಿಯೊ |

ಬಿಳಿದ್ಹಳದಿ ನೀಲದೋಳ್ಹಳಿಯೊ

ಕಳಿಕಳೀದು ಪುನಃ ನೀವುಳಿಯೊ

ಏಳು ಸುಳಿಗಳ ಮೇಲೇರಿ ಹೊಳಿಯೊ

ಇಳಿಯೊಳಗೆ ಅಳಿಯದಂತು ಳಿಯೊ ಜೀವ ||5||

ಸಾಕೊ ಕಾಕು ಗುಣಗಳು ಕಡಿಯಲಿ ನೂಕೊ |

ಈ ಲೋಕದ ಜೀವನ ಸಾಕೊ

ನೇಕಿಯೆಂಬುದು ನಿಜ ತಿಳಿಬೇಕೊ

ಅಕಲಂಕ ಕರಿಘೂಳಿ ಪಾಕೊ

ಬೇಕಾದರೆ ವಶ ಮಾಡೀಕೊ ಜೀವ ||6||

ಆಗೋ ಶರಣಾಗತ ಶರಣರಿಗಾಗೋ ಶರಣಾಗತ |

ಯೋಗಿಗೆ ಬಾಗು ಶಿರ ನಿತ್ಯ ನೀಗಿಸುವನು ಅಘಸತ್ಯ

ಸಾಗರ ವಿಷಯದ ಭೋಗವು ತ್ಯಾಗಿಸು

ಆಗಮ ವಚನಾವಾಗಲು ಆಲಿಸು

ಸಾಗುವ ಮನ ಶಿವಯೋಗದಿ ನಿಲ್ಲಿಸಿ

ಆಗೀಗೆನ್ನದೆ ಇರುಳ್ಹಗಲಲಿ ತ್ವರಿತ ಆಗೊ ||ಪಲ್ಲ||

ಹೇಸಕಿ ಪುಸಿಯು ವಿಷಯಾಸಿ |

ಮೋಸದಿ ವಶವನಾದಿ ಘಾಸಿ

ಯೇಸೇಸು ಜನುಮದಿ ಕೂಸಾಗಿ ಜನಿಸಿದಿ

ಈಶನಾಶಿಸದೆ ವಸುಧಿಲಿ ಅಸಮದಿ

ಕಸಿಬಿಸಿಯಲಿ ತಾಮಸದಲಿ ಮಸಗುತ

ಈ ಸಮಯ ಈಶನ ಆಶಿಸು ನಿರುತಾ ಆಗೊ ||1||

ಪೃಥವಿಯಲಿ ವ್ರತಗಳನು ಮಾಡಿ |

ವೃಥಾ ಪಥ ವ್ಯರ್ಥವಾಗಬೇಡಿ

ಅತಿ ಹರುಷದಿ ಸತ್ಯ ಸತತದಿ ಮಥಿಸುತ

ಗತಿಗಾಣುವ ಪಥ ಮತ್ತೆ ನಿತ್ಯವೆನಿಸುತ

ಪತಿತ ಪಾವನ ಕರಿಘೂಳೀಶನ ಮತ

ಪಥತೋರಿ ಸದ್ಗತಿ ಹತ್ತಿಸುವ ಪುರತ ಆಗೊ ||2||

ಸುಡಗಾಡ ಇದೆ ನೋಡು |

ಗಡಿಬಿಡಿಜಡ ಅಡಿಯೇನಿಲ್ಲ

ಮೃಢನಡಿಗಳು ಹಿಡಿ ಅವನಲ್ಲಿ

ಜಡ ದೇಹಬಿಡು ಪಡಿ ಮೋಕ್ಷಲ್ಲಿ ||ಪಲ್ಲ||

ನಿರುತೊಳಗ್ಹೊರಗೊಂದೆ |

ಪರಿಯಲ್ಲಿ ಉರಿಯುತ್ತಿಹುದು

ಧರಿ ನರರಿಗೆ ಆರಿಗೆ ಬಿಡದು

ಶರಣರಿಗೆ ಆರಮನಿಯಹುದು ||1||

ಕೈಲಾಸ ವಾಸನಲ್ಲಿ |

ಲೀಲೆಯೊಳಿರುವನಲ್ಲಿ

ಕಾಲಕಾಲ ಕಾಲನಲ್ಲಿ

ಕಲಿಯುಗವೆ ಜನಿಸಿಹುದಲ್ಲಿ ||2||

ಸತ್ಯವಂತರಿಗೆ ಕಾಡು |

ಸತ್ಯಶಾಂತರಿಗೆ ಜೋಡು

ಮಿಥ್ಯ ಸುಟ್ಟು ಮಾಡ್ವದು ಬೀಡೊ

ಎತ್ತ ಹೋದರ್ಹತ್ತಿರ ಬಿಡದು ||3||

ಧರಿಸಲರಸಪುರದಲ್ಲಿಹುದು |

ಕರಿಘೂಳಿ ಗುರುವಾಗಿಹುದು

ಮುರುಗೇಂದ್ರ ತಾನಾಗಿಹುದು

ಚರಣದಿ ಮಾಣಿಕ್ಯಹುದು ||4||

ಶಿವ ಸೇವೆ ನೆನವಿರಲಿ |

ಆವಾಗಲೂ ಶಿವ ಸೇವೆ ನೆನವಿರಲಿ

ಭವಬಾಧೆ ತ್ಯಜಿಸಲಿ

ಜವ ಪಾಶ ಜವದರಿ ಝಾವ ಝಾವಕೆ ಶಿವ ||ಪಲ್ಲ||

ಸ್ನಾನದಿ ಧ್ಯಾನದಿ |

ಮೌನದಿ ಜ್ಞಾನದಿ

ಅನ್ನಪಾನಾದಿ ಗಾನ

ಅನುದಿನ ದಿನದಿ ||1||

ಮಾತುಕಥೆ ಶ್ರವಣದಿ |

ಸತಿರತಿ ಸುತರದಿ

ಪಥದಿತ ದ್ವೈತದಿ

ಸೂತಕ ಪಾತಕದಿ ||2||

ದಿನಸಿಲಿ ಕನಸಿಲಿ |

ಮನಗಿರೆ ಮನಸಿಲಿ

ವನಸಿರಿ ಮೃಗ ರೋಗ

ಹನಿಗಾಳಿ ಬಿಸಲಲಿ ||3||

ಅಂತ್ಯದಿ ಭ್ರಾಂತದಿ |

ಚಿಂತದಿ ಶಾಂತದಿ

ಅಂತಕಾಂತ ಕರಿಘೂಳಿ

ಶಾಂತನ ಶಾಂತಿಲಿ ||4||

ಪತ್ರವು ಬರೆದಿದ್ದನು ಸದ್ಗುರುರಾಯ

ಪತ್ರವು ಬರೆದಿದ್ದನು ಸದ್ಗುರುರಾಯ ಉತ್ರವು ಬರೆದಿದ್ದನು ||ಪಲ್ಲ||

ಪತ್ರವು ಬರೆದಿದ್ದ ಇತ್ತ ನಿ ಬಾರೆಂದು |

ಯತ್ತ ಹೋದರು ಮನ ಗೊತ್ತಿನೊಳಿರಲೆಂದು ||1||

ವಾಸನ ಅಳಿಯಂದನು ಸದ್ಗುರುರಾಯ ಆಸನ ಹಾಕೆಂದನು |

ಸೂಸದೆ ದೃಷ್ಟಿಯು ನಾಶಿಕಾಗ್ರದಿ ನಿಲಿಸಿ

ಧ್ಯಾಸದಿ ದಶವಿಧ ನಾದವು ಕೇಳೆಂದು ||2||

ಆಡುತಲಿರು ಯೆಂದನು ಸೋಹಂ ಜಪ ಮಾಡುತಲಿರು ಯೆಂದನು |

ರೂಢಿಯೊಳಗೆ ನೀ ಜೋಡಿಲ್ಲದಿರಬೇಡ

ಜೋಡು ನಿನ್ನಗ ಬೇಡ ಕೇಡು ಬರುವದೆಂದು ||3||

ಕತ್ತಲ ಕಳಿಯಂದನು ಸದ್ಗುರುರಾಯ ಬತ್ತಲಿಯಾಗೆಂದನು |

ಕತ್ತಲೊಳು ಬೆಳಕಾದ ಬೆಳಕಿನೊಳು ಬೈಲಾದ

ಬೈಲೊಳು ನಿರ್ಬೈಲಾದ ಗುರು ಕರಿಘೂಳೀಶ ||4||

ಮಂಗಲಂ ಸದಾಶಿವನಿಗೆ |

ಶಶಿಧರ ಹರಶಿವ ವಿಷಕಂಧರನಿಗೆ ||ಪಲ್ಲ||

ಕರಿ ಚರ್ಮಾಂಬರ ಉರಗ ಭೂಷಿತಹರ |

ಶಿರ ಗಂಗಾಧರ ಧೀರಗೆ

ಗಿರಿಸುತೆವರ ಆ ಹರಿಣ ಧಾರನಿಗೆ ||1||

ಆಶರಹಿತಗೆ ಶೇಷಭೂಷಗೆ |

ಕಾಶೀವಾಸ ವಿಶ್ವೇಶನಿಗೆ

ಶಿಶುಗಳ ಪೋಷಿಪ ವಾಸುಕಿ ಧರನಿಗೆ ||2||

ಕನ್ನಬೇಡನು ಕಾಲಿಲಿ ಒದಿಯಲು |

ಮನ್ನಿಸಿ ಪದವಿತ್ತಾತಗೆ

ಸನ್ನುತಾಮಲ ಕರುಣಾಕರನಿಗೆ ||3||

ದಾಸಜನವಳಿ ಪೋಷಿಸು ಬೇಗನೆ |

ಕ್ಲೇಶನಾಶ ಮಹೇಶನಿಗೆ

ವಾಸಭೂಷಣ ಪುರೀಶ ಘೂಳೀಶನಿಗೆ ||4||

ಕರ್ಪುರಾರುತಿ ಸರ್ಪಭೂಷಣನಿಗೆ |

ದರ್ಪಣ ವಾಸನಿಗೆ ಮುಪ್ಪುರಹರಗೆ ||ಪಲ್ಲ||

ಹಾಲ ಕುಡಿಸ ಬಂದ ಬಾಲಕಿಯಳಲಿ

ಸುಶೀಲನೆನಿಸಿದವಗೆ ಮಲ್ಲೇಶಗೆ ||1||

ಬಂಧನ ಬಿಡಿಸುವ ಕಂದುಗೊರಳನಿಗೆ |

ಇಂದುಧರ ಶಿವಗೆ ಮಂದಾರಧರಗೆ ||2||

ನಾಶಿಕ ಶ್ವಾಸದಿ ವಾಸ ಮಾಡಿರುವಂಥ |

ಶೇಷಭೂಷಣಿಗೆ ಶಶಿಧರಗೆ ||3||

ಪರಮ ಪರತರ ಪರಿಪೂರ್ಣ ಬ್ರಹ್ಮನಾದ |

ಶ್ರೀ ಕರಿಘೂಳೀಶಗೆ ಗುರುವರಗೆ ||4||

ಜಯಮಂಗಲ ಮಾಯವಿದೂರಗೆ |

ಜಯಮಂಗಲ ಭಯ ನಿವಾರಣಗೆ

ಕಾಯ ರಹಿತ ಕರಿಕಂಠನಿಗೆ

ನಯದ್ವಯದಲಿ ಕೋಟಿ ಪ್ರಕಾಶನಿಗೆ ||ಪಲ್ಲ||

ಭೀಮಾ ಶಾಮ ಕಾಮ ಹೋಮನಿಗೆ |

ಸೋಮ ನೇಮ ಪ್ರೇಮ ಉಮಾ ರಮಣನಿಗೆ

ಹೇಮ ಧೂಂ ನಾಮಸ್ವಾಮಿಗೆ

ಭೂಮಿ ನಿರ್ಮಾಣ ಕಮಲಜ ಮರ್ಮನಿಗೆ ||1||

ಮಾರ್ಗಣ ಸೇವಿತ ಭಾರ್ಗನಿಗೆ |

ದುರ್ಗುಣಗಳು ನಂದಿಪ ನಿರ್ಗುಣಗೆ

ಭೋರ್ಗರಿಪನಾದ್ವರ್ಗನಿಗೆ

ಸ್ವರ್ಗಾಧಿಪ ಕರಿಘೂಳೀಶನಿಗೆ ||2||

ಶರಣು ಶರಣು ಶರಣು ಶರಣು ಗಣನಾಥ |

ನಿಮ್ಮ ಚರಣ ಕಮಲ ಭಜಿಸುವೆನಯ್ಯ ಗಣನಾಥಾ

ಮೊದಲಿನ ಪೂಜೆ ನಿಮ್ಮದಯ್ಯ ಗಣನಾಥಾ

ಪಾದ ಪದ್ಮಂಗಳಿಗೆ ಪೂಜಿಸುವೆನಯ್ಯ ಗಣನಾಥಾ ||ಪಲ್ಲ||

ತಾಯಿ ನೀನೆ ತಂದೆ ನೀನೆ ಗಣನಾಥಾ |

ಬಂಧು ನೀನೆ ಬಳಗ ನೀನೆ ಗಣನಾಥಾ

ದೇವರೊಳು ದೇವ ನೀನು ಗಣನಾಥಾ

ದಿವ್ಯ ಚರಣರ ಜನರಿಗೆ ವರವನೀವ ಗಣನಾಥಾ ||1||

ಭಜನಿಗೆ ವಿಘ್ನ ಬಾರದಂತೆ ಗಣನಾಥಾ |

ಸುಜನರ ಹೃದಯ ಕಮಲದಲ್ಲಿರುವ ಗಣನಾಥಾ

ಧರಿಯೊಳು ನಿರ್ಮಲ ಗಿರಿವಾಸ ಗಣನಾಥಾ

ಗುರು ಮುರುಗೇಂದ್ರ ವರಪುತ್ರ ಗಣನಾಥಾ ||2||

ಗುರುವರ ಚರಣವ ಸ್ಮರಣಿಯ ಮರೆಯದೆ |

ಮನದೊಳಗನುಗುಣವಾ ಪ್ರಾಣಯಾಮ ಮರಿಯದೆ

ಅನುದಿನವ ಸಾರ ಸಜ್ಜನರ ಸಂಗವ ಮಾಡುತ

ಪರಭವದೊಳು ಸುಖವ ||ಪಲ್ಲ||

ಮಾರನ ವೈರಿಯನಪ್ಪಿಕೊಂಡು ತಾ ಯಿರುವದು |

ತನಗ್ಹಿತವ ಮುರಹರಿ ಧ್ಯಾನವೆ ತನಗ್ಹಿತವ

ಪರರು ತನ್ನಂತೆ ಭಾವಿಸಿ ಮನದೊಳು

ಹರ್ಷವಾಗುವದು ಸೌಖ್ಯವಾ ||1||

ತನಗಪಕಾರ ಮಾಡಿದವರಿಗುಪಕಾರ ನೀಡುವದೆ |

ಸತ್ಯ ಧರ್ಮವು ದಯ ಗುಣವೇ ಸತ್ಯ ಧರ್ಮವು

ಮಾನಭಿಮಾನವನುಳಿದು ಗಂಜುಗಲಿಗೆಳಸದಿಹುದೆ

ಮನು ಜನ್ಮವ ತನು ಗುರುವಿಗೆ ಮನ ಲಿಂಗಕರ್ಪಿಸಿ

ಪ್ರಾಣ ಧನ ಕೊಟ್ಟು ಪಡಿ ಜಂಗಮವಾ ಸನ್ಮತ ದಿನದಲ್ಲಿ

ಮನ್ಮಥನಗಲದೆ ಫಣಿ ಪತೀಶನ ಕೂಡಿ ಆಡು ಮನವಾ ||2||

ಜನನಿ ಜನಕರಂತೆ ಜನರನ್ನು ಭಾವಿಸುತ್ತ |

ಜನನ ಮರಣ ಭಯ ನೀಗುವ ಹೀನ

ವಿಷಯದಭಿಮಾನಕೆಳಿಸದೆ ಪ್ರಣಮ ದೃಷ್ಟಿ ಪಾವನ

ಮನಕೆಳಿಸುವಾ ಷಣ್ಮುಖ ಮುದ್ರಿ ಸಾಧಿಸಿ ಕಾಣುವಾ

ಭಾನುಕೋಟಿ ಪ್ರಕಾಶವಾ ಸಣ್ಣ ದ್ವಾರ ಹುಣ್ಣಿವಿ ಚಂದ್ರನು

ಕಣ್ಣಿನೊಳಗಾತ ಕಾಣುವಾ ||3||

ತಾಕರಬ್ರಹ್ಮನು ತೋರುವಾ |

ಆತ್ಮನ ಮೀರಿದ ಉನ್ಮನಿ ಸ್ಥಾನವಾ

ಪರಬ್ರಹ್ಮನ ಉನ್ಮನಿ ಸ್ಥಾನವಾ

ಆರಾರರಿಯದ ಅರಮನೆಯೊಳಗಿರುವಾ

ಅರಸನೋಲಗದೊಳಗಾಡುವಾ

ಪರಕಾಯ ಪ್ರಕಾಶ ಪರಮ ಭಕ್ತಜನಾಶ್ರಮದೊಳುಗೂಡುವ

ಪರಮಾಶ್ರಯದೊಳಗೂಡುವಾ

ಸಾರದ ಸವಿಯುವ ಧೀರ ಕುವರನಿಗೆ

ಇಷ್ಟ ಐಶ್ವರ್ಯ ತನಗರ್ಪುವಾ ||4||

ಎರಡ ಗುಡ್ಡದ ನಡುವಿರುವ ನಿರ್ಮಲಗಿರಿ |

ಪರಮ ಪಾವನ ಪ್ರಕಾಶವಾ

ಶಿವ ಪರಮ ಪಾವನ ಪ್ರಕಾಶವಾ

ವರ ಶ್ರೀಗುರು ಮಹಾಲಿಂಗ ಮುರುಗೇಂದ್ರನು

ಕರುಣಿಸಿ ಪೇಳಿದ ವಚನವಾ

ಆರು ಸ್ಥಲದಲ್ಲಿರುವಾಕ್ಷರ ಮೂಲದ

ಅರುವಿಸಿ ಕೊಟ್ಟು ಪಿಂಡಾಡವಾ

ಬ್ರಹ್ಮಾಂಡದ ಮೂಲ ಪಿಂಡಾಂಡವಾ

ಸಾರಿ ಹೇಳಿದ ಮೂರು ಮಲವದೊಳೆದ

ಬೈಲು ನಿರ್ಬೈಲೊಳಾದ ನಿನ್ನ ನಿಜ ಅರುವಾ ||5||

ಎಂಥಾದೊ ನರಜನ್ಮ ಎಂಥಾದೊ |

ಎಂಥಾದ್ದು ನರಜನ್ಮ ಅಂತ್ಯ ಜನ್ಮ ಕಡಿಯದಮ್ಮ

ಕಂತುಹರನ ಅಂತು ತಿಳಿದರಂತು ಜನ್ಮಕ್ಕೆ ಪಾವನವಮ್ಮ ||ಪಲ್ಲ||

ಅರುವಿಗೆ ಮರಿ ಮಾಡಿತು ಮರವು |

ಮರವಿನೊಳಗೆ ಮನಿ ಮಾಡಿತು ಮನವು

ಅರುವರಿಯದೆ ಪರದೊರಿವದು ದುರ್ಲಭ

ಅರಿವೆ ಜನ್ಮಕ್ಕೆ ಪಾವನವಮ್ಮ ||1||

ತೀರ್ಥ ಯಾತ್ರೆಗಳಿಗೆ ತಿರುಗಿದಡಿಲ್ಲ |

ವ್ರತ ಜಪತಪ ನೇಮಾ ಮಾಡಿದಡಿಲ್ಲ

ಪಥವರಿಯದೆ ಹಿತ ದೊರಿಯದು ತಪಸಿಗೆ

ಪಥವರಿಯದ ಜನ್ಮಕ್ಕೆ ಪಾವನವಮ್ಮ ||2||

ಬುಡ ಮೇಲ್ಮಾಡಿಕೊಂಡು ಬುಡಸಿನ ಗಿಡವು |

ಗಿಡದಡಿ ಕಡಿನುಡಿ ತೊಡಸಿದ ಅರವು

ಸಡಗರ ಸಂಪತ್ತು ದುಡಿದುಕೊಂಡು ಬಾ

ತಡವಿಲ್ಲ ಮೋಕ್ಷ ಜನ್ಮಕ್ಕೆ ಪಡದ್ಹಡದಮ್ಮ ||3||

ಪೊಡವಿಗಧಿಕವಾದ ನಿರ್ಮಳಪುರವು |

ಒಡಿಯ ಶ್ರೀಗುರು ಮುರುಗೇಂದ್ರನ ಪಾದವು

ಬಿಡದಡಿಪಿಡಿ ಕಡಿದಾಟುವ ದೃಢವಿಡಿ

ಗಾಢ ಪದವಿ ನೀಡುವ ಮೃಢರೂಢ ನಡಿ ||4||

ಬೈಲು ಕಂಬಾರ ಬಂದನೊ ನಮ್ಮೂರಿಗೊಬ್ಬ |

ಬೈಲು ಕಂಬಾರ ಬಂದನೊ ||ಪಲ್ಲ||

ಬೈಲು ಕಂಬಾರ ಬಂದಾನ ಭಲೆಭಲೆ ಸಾಮಾನು ಮಾಡ್ತಾನ |

ಬಿಲ್ಲುಬಾಣ ಬರ್ಚಿ ತಲ್ವಾರ ಬಂದೂಕ ತಯಾರ ಮಾಡ್ತಾನ ||1||

ತಿತ್ತಿ ತಾನೆ ಊದೂತಾನೊ ಸುತ್ತಿಗೆ ದೆಬ್ಬಿ ಎತ್ತಿ ತಾನೆ ಹಾಕುತಾನೊ |

ಒತ್ತಿ ಹಣ್ಣು ಮಾಡುತಾನೊ ತುತ್ತು ಮಾಡಿ ಉಣುಸುತಾನ

ಇತ್ತ ಹಗಲಿರುಳೆನ್ನದೆ ಕಷ್ಟ ನಿಲುಕಡಿಲ್ಲದೆ ನಡಿಸುತಾನ ||2||

ಕಾಲುಗಾಲಿಲ್ಲದೆ ನಡಿಸುವನೊ |

ಕೀಲು ಕುದುರಿ ಮಾಡಿ ಬೈಲೊಳೋಡಿಸುವನು

ಮೇಲು ಮಾಲಿನೊಳು ಸಾಲು ಜ್ಯೋತಿಗಳಲ್ಲಿ

ಕೀಲಿ ತೆರೆದು ಕಾಲಹರನಲ್ಲಿರುವಂಥವನು ||3||

ನಾನಾ ವರ್ಣ ರೂಪದವನೊ |

ಎನ್ಮನಿತನ ಮನಿ ಮಾಡಿಕೊಂಡವನೊ

ಉನ್ಮನೆಲ್ಲವ ತಿರುಗಿ ತನು ಪ್ರಾಣ ಮನಸಿಗಿ

ಘನ ಪರಂಜ್ಯೋತಿ ಸ್ವರೂಪನೆ ತಾನಾಗಿ ||4||

ಕಣ್ಣಿಗಿ ಮರುಳಾಗಿರುವಾ ಕಾಣಲ್ದವನು |

ಕಂಡಾನು ನಿರ್ಮಳವಾ ಬಣ್ಣ ವರ್ಣವ

ನುಂಗಿ ನುಣ್ಣಗಿರುವದು ಅಂಗಿ ಚೆನ್ನ ಗುರು

ಮುರುಗೇಂದ್ರವತಾರೆತ್ತಿ ಬಂದಾಂಗೆ ||5||

ಕಾಶಿಗ್ಹೋಗಬೇಕು ಕಾಶಿ ತೀರ್ಥ ಸೇವಿಸಬೇಕು |

ಹೇಸಿ ಗುಣಗಳ ನಾಶ ಮಾಡಿ ಶಿವ ಧ್ಯಾಸದೊಳಿರಬೇಕು ||ಪಲ್ಲ||

ಆಶೆ ಅಳಿಯಬೇಕು ಆಶಿಯ ಮೂಲವು ತಿಳಿಬೇಕು |

ಆಶರಹಿತ ಪರಮಾತ್ಮನ ಧ್ಯಾನದೊಳು ಮಗ್ನನಾಗಿರಬೇಕು ||1||

ಹಮ್ಮು ಅಳಿಯಬೇಕು ತಮ್ಮಾ ಬ್ರಹ್ಮಾನಾಗಬೇಕು |

ಸುಮ್ಮನಿದ್ದು ಶಿವನಾಮ ಸ್ಮರಣಿಯೊಳು ಅನುಗಾಲದಿನದಲ್ಲಿರಬೇಕು ||2||

ಸತ್ಯ ನುಡಿಯಬೇಕು ಸತ್ಯದ ಸುಳುವಿನಲ್ಲಿರಬೇಕು |

ಸತ್ಯ ನಡೆಯ ಸಾಲೋಕ್ಯ ಪದವಿಯ ಪಾವನದೊಳಿರಬೇಕು ||3||

ಕಾಯಪುರದ ನಾಡು ಬೈಲೊಳು ನಿರ್ಮಳಗಿರಿ ನೋಡು |

ಮಾಯರಹಿತ ಶ್ರೀಗುರು ಮುರುಗೇಂದ್ರನ ಹೃದಯದೊಳಿರಬೇಕು ||4||

ಏಸು ದಿವಸಲಿಂದ ಈಸುತ್ತಲಾದ |

ಬ್ಯಾಸರಿಕಿಲ್ಲವ್ವ ಈ ಸಂಸಾರ

ಬ್ಯಾಸರಿಕಿಲ್ಲವ್ವ ಈ ಸಂಸಾರವು

ಸಾರವ ಸುಖ ನೋಡೆ ತಂಗಿ ||ಪಲ್ಲ||

ಹೇಸಿಕೆಯೊಳು ಬಿದ್ದು ಕಾಶಿಗೆ ಹೋದರೆ |

ಮಾಸಿದ ಮೈಲಿಗಲ್ಲಮ್ಮ ತಂಗಿ

ಮೀಸಲ ಮನವಾಗೆ ಸೂಸುವ ಶ್ವಾಸದಿ

ಈಶಾನೊಳು ಸೂಸುವ ತಂಗಿ ||1||

ಬಸವಾದಿ ಪ್ರಮಥರು ಪುಸಿಯೆಂದು ಕಸಹೊಡೆದು |

ಬಿಸಟಿ ಬೈಲಾದರೊ ತಂಗಿ

ಹಸನಾದ ಸಂಸಾರ ಬಿಸಿ ಮಾಡಿ ರಸವುಂಡು

ಬಸವನೊಳಡಗಿದರು ತಂಗಿ ||2||

ಕಾಯ ಕರಗಿಸಿ ಜೀವಮಾಯ ಮರ್ಧಿಸಿ |

ಶಿವರಾಯನೊಳು ಬೆರೆತರೊ ತಂಗಿ

ಆಯಾಸವಿಲ್ಲದುಪಾಯಾಸ ಪೇಳುವ

ತಾರಕಬ್ರಹ್ಮ ನೋಡು ತಂಗಿ ||3||

ಕಾಲನಿಲ್ಲದ ಬೈಲೊಳಿರುವ |

ನಿರ್ಮಳಗಿರಿ ನಿರ್ಬೈಲೊಳಾಡಮ್ಮ ತಂಗಿ

ಮಲಹರ ಶ್ರೀಗುರು ಮುರುಗೇಂದ್ರ

ಸಾಲೋಕ್ಯ ಪದವಿ ಕೈವಲ್ಯವೇ ತಂಗಿ ||4||

ಯಾವೂರಲಿಂದ ಬಂದಿರಪ್ಪ ಈ ಊರಲ್ಲಿಗಿ |

ಈ ಊರಲಿಂದ ಮುಂದಕ್ಯಾವೂರಿಗಿ ಹೋಗುತೀದೆಲ್ಲಿಗಿ

ದಾರಿಯೊಳಗೆ ಏನು ಕಂಡಿರಪ್ಪ ಬೈಲಿಗಿ

ಬರೆ ಬತ್ತಲಾಗಿ ಓಡಿಬರುತಿದ್ದಿ ಹಾಯಿಕೊಂಡು ಜೋಳಿಗಿ ||ಪಲ್ಲ||

ಊರ ಬಿಟ್ಟರೆ ಮುಂದ ಗುಡ್ಡ ಅಡವಿ ಅರಣ್ಯ |

ಅರಣ್ಯದೊಳಗೆ ಹುಲಿ ಕರಡಿ ಭಯ ಬಾಳಣ್ಣ

ಆರು ವರಣ ವಿಕಾರ ರೂಪದವರು ನೋಡಣ್ಣ

ಕಾರಭಾರ ಚಚ್ರ್ಯಾ ಅವರದು ಆದೊ ಬಾರಣ್ಣ ||1||

ಆಶ ತೊಳಸಿ ಮೋಸಗೊಳಿಸಿ ಪಾಸಿ ಮಾಡಿದರು |

ಪಾಸಿ ಮಾಡಿ ಮ್ಯಾಲೆ ಅವರು ಘಾಸಿ ಮಾಡುವರು

ಏಸು ಮೊಳ್ಳರನ್ನು ಕಂಡು ನಾಶ ಮಾಡುವರು

ನಾಶಮಾಡಿದಮೇಲೆ ಪಾತಾಳಕ್ಹಾಕಿ ತುಳಿಯುವರು ||2||

ಸಾರವಸ್ತು ನಿರ್ಮಳಗಿರಿ ಆದಪ್ಪ ಬೈಲಿಗಿ |

ನಿರ್ಬೈಲೊಳಗೆ ಮುರುಗೇಂದ್ರ ಸ್ವಾಮಿ ಶಿವಯೋಗಿ

ದರ್ಶನ ಮಾಡಿಕೊಂಡರೆ ಭಯ ಇಲ್ಲೊ ಯಾರಿಗಿ

ಊರಕೇರಿ ಗುಡ್ಡಯೆಲ್ಲ ತನ್ನವರ್ಯಾರಿಗಿ ||3||

ಎಂಥಾ ಊರಿಗಿ ನಾನು ಹೋಗಿ ಬಂದೆನಪೊ |

ಅಂಥಾ ಊರು ಜನ್ಮಕ್ಕೆ ನಾ ಕಂಡಿಲ್ಲ ನೋಡಪೋ

ಕುಂತೇನಂದ್ರೆ ಕುಂದ್ರಾಗುಡಲ್ರು ನಿಂತೇನಂದ್ರೆ ನಿಂದ್ರಗುಡಲ್ರ

ನೆತ್ತಿ ಮ್ಯಾಲೀನ ಬುತ್ತಿ ಪತ್ತೆಯಿಲ್ಲದೆ ಹಾರಿಸಿದರಪೋ| ||ಪಲ್ಲ||

ಹತ್ತು ಮಂದಿ ಯನ್ನ ಸುತ್ತ ಮುತ್ತಿಗ್ಹಾಕಿದರಪೋ |

ಮತ್ತೇ ಆರು ಮಂದೆನ್ನ ವತ್ತಿ ಹತ್ತಿ ಇಟ್ಟಾರಪೋ

ಭತ್ತ ಬಂಗಾರೆಲ್ಲ ಸುಲಿದು ಮುತ್ತು ರತ್ನ ಮಾಣಿಕ್ಯ ಸೆಳೆದು

ನೆತ್ತಿಮ್ಯಾಲೆಣ್ಣಿ ಒತ್ತಿಹಾಕಿ ಕೋತಿಯಂತೆ ಕುಣಿಸಿದರಪೊ ||1||

ಕಣ್ಣೀಗಿ ಒಬ್ಬರಾದ್ರು ಕಾಣದಿರುವರಪೋ |

ಕಾಣಲ್ದವರು ಯೆನೆಗೆ ಈಪರಿ ಮಾಡಿದರು ನೋಡಪೋ

ಉಟ್ಟು ದಟ್ಟಿ ಬಿಡಸಿಕೊಂಡರು ತೊಟ್ಟ ಕುಪ್ಪಸ ಕಳೆದುಕೊಂಡರು

ನಟ್ಟನಡುವೆ ಊರವಳಗೆ ಬಟ್ಟಾಬಯಲೇ ಮಾಡಿದರಪೋ ||2||

ನನ್ನೂರಂತೆ ನನ್ನ ಊರಿಗೆ ನಾನು ಹೋದೇನಪೋ |

ನನ್ನೂರಲ್ಲ ಇವನೂರಂತೆ ಹಚ್ಚಿಬಿಟ್ಟಾರಪೋ

ನಾನು ನೀನು ಇಬ್ಬರೊಂದು ಭಿನ್ನ ಭೇದವಿಲ್ಲದ್ದೊಂದು

ಬಣ್ಣದ ಮಾತುಗಳಾಡಿ ಸುಣ್ಣಹಚ್ಚಿ ಬಿಟ್ಟಾರಪೋ ||3||

ಕಾಯಪುರದೊಳು ಮಾಯವಾಯ್ತು ನಿರ್ಮಳಪೊ |

ಶಾಯಪುರುಷನೊಳು ಮುರುಗೇಂದ್ರ ಬೈಲಾದನಪೋ

ಮಾಯ ಪುರುಷ ಆದರ ಮಾಡಿ ಕಾಯ ಪುರುಷನನ್ನು ನೋಡು

ಭಯಪಟ್ಟು ಓಡಿಬಂದು ನನ್ನೊರೊಳು ನಾ ನಿಂತೇನಪೊ ||4||

ಬಿಡದಣ್ಣಾ ಇಂದುಧರನ ಪ್ರಮಾಣ

ಎಂದಿಗಾದರು ಬಿಡದಣ್ಣಾ ಇಂದುಧರನ ಪ್ರಮಾಣ ||ಪಲ್ಲ||

ಪಾವನ ಮೂರ್ತಿಯ ಪಡಕೊಂಡೆ ಶರಣಾ |

ಭವದೊಳಗ್ಹುಟ್ಟಿ ಅನಿಸಿದ್ಯೊ ಶರಣಾ

ಶಿವನಾಮ ನಡಿನೋಡಿ ಮ್ಯಾಲಿಲ್ಲೊ ಕರುಣಾ

ಮೋಹ ಪಾಶದೊಳು ಉರುಳಾಡುವರಿಗಣ್ಣಾ ||1||

ಕಾಲನ ಮನಿತನ ಕರೆಯುವರಣ್ಣಾ |

ಕಾಲನ ದೂತರಿಗೆರಗುವರಣ್ಣ

ಕಾಲನದೊಳಗೊಶವಾಗುವರಣ್ಣಾ

ಮಲನಾಡ ದೇಶನೋಡಿ ಮರಗುವರಿಗಣ್ಣ ||2||

ಆರು ಶಾಸ್ತ್ರಗಳು ಓದುವರಣ್ಣಾ |

ಪುರಾತನರ ವಚನವು ಪೇಳುವರಣ್ಣಾ

ಬೆರಳೋಳು ಜಪಮಾಲಿ ಎಣಿಸುವರಣ್ಣಾ

ಪುರುಷರಾಗಿ ಪುರದೂರವರಿಗಣ್ಣಾ ||3||

ನಿರ್ಮಳಪುರದೊಳು ನೆಲಸಿದ ಶರಣಾ |

ಮರಣರಹಿತ ಮುರುಗೇಂದ್ರನ ಚರಣಾ

ಮರೆಯದೆ ಸ್ಮರಿಸಿದವರಗಿಲ್ಲಪ ಮರಣಾ

ಮರ್ತವರಿಗೆ ನರಕದ ಭೋಗಣ್ಣಾ ||4||

ದಾರಿಯ ನೋಡಿದ್ದೆನೋ |

ಗುರುರಾಯರು ಬರುವ ದಾರಿಯ ನೋಡಿದ್ದೆನೋ

ದಾರಿಯ ನೋಡಿದ್ದೆ ಮೇರು ಶಿಖರವನ್ನೇರಿ ಧೀರ

ಶರಣರಿನ್ಯಾರು ಬರಲಿಲ್ಲವೆಂದು ದಾರಿ ||ಪಲ್ಲ||

ಎನ್ನ ಮನಸ್ಸೇನು ಕದಲಿತ್ತೋ |

ಗುರುರಾಯರೆನ್ನ ಮ್ಯಾಲಿನ ದೃಷ್ಟಿಯಿಂದಗಿತ್ತೊ

ಕಣ್ಣಿನೊಳಗ ನಿನ್ನ ರೂಪ ಕಾಣುತ್ತಲಿತ್ತು

ಸಣ್ಣ ದ್ವಾರ ಹುಣ್ಣಿವಿ ಚಂದ್ರ ಬರಲಿಲ್ಲವೆಂದು ದಾರಿ ||1||

ಸಣ್ಣಕ್ಕಿಬೋನಾ ಪಾಯಾಸ ಮಾಡಿದ್ದೆ |

ಚಿನ್ನದ ತಳಗಿಯೊಳಗನ್ನಾ ಎಡಿ ಮಾಡಿದ್ದೆ

ಉನ್ನತದ ಬೆಣ್ಣಿಕಾಸಿದ ತುಪ್ಪವು ನೀಡಿದ್ದೆ

ಪನ್ನಂಗಧರನಾಡಿ ಓಡಿಬಂದು ಉಣವುವನೆಂದು ದಾರಿ ||2||

ಮನಗನಸಿನೊಳು ಕಂಡಂಗಾಯಿತೋ |

ಭಾನುಕೋಟಿ ತೇಜ ದಿವ್ಯ ಹೃದಯದೊಳು ಬೆಳಗಿತ್ತು

ಭಿನ್ನವಿಲ್ಲದೆ ಮನಾನಂದದೊಳು ಆಡುತಲಿತ್ತು

ಉನ್ಮನಿ ಸ್ಥಾನದ ಚಿನ್ಮಯ ಮೂರ್ತಿಯು ದಾರಿ ||3||

ಪರಿಪೂರ್ಣನಂದರಾಜಾ ತಾರಕತೇಜ |

ನಿರ್ಮಳಗಿರಿ ಮೋಜಾ ಅರುವಿನ ಅರಮನಿಯೊಳಿರುವ

ಮುರುಗೇಂದ್ರನ ಪೂಜಾ ಅರಿತು ಸಾಧಿಸಿದವರಿಗೆ

ದರ್ಶನವಾಗುವದೆ ನಿಜಾ ದಾರಿ ||4||

ಬಿಡು ಬಿಡು ಬಿಡು ಮನದಾಸಿ |

ಹಿಡಿ ಸದ್ಗುರುವಿನ ಪಾದ ಒಡಲೊಳಗಾಸಿ ||ಪಲ್ಲ||

ಜಗದೀಶ ಶರೀರವು ಬಿಡಿಸುವ ಮೃಢ ಗುರು |

ಸಡಗರದಿಂದಲ್ಲಿ ಪೊಡವಿ ಪಾಲಕನೆಂದು ||ಅ.ಪಲ್ಲ||

ನಿಜಭಕ್ತರೊಳು ವಾಸಗೈವಾ |

ಭಜಿಸುವ ಭಕ್ತರೊಡಲೊಳಾಡುವಾ

ಮೂಜಗದೊಡೆಯನು ಬಿಡದೆ ರಕ್ಷಿಸುವನು

ಕಾಜಿನ ಮನೆಯೊಳು ಸೇರಿದಾತನನ ಬಿಡು ||1|

ಮನದೊಳಗೆ ಮನಿಯ ಮಾಡಿಹನು |

ಮನದಾಟವೆಲ್ಲ ನೋಡುತಿಹನು

ಮನದಾಣ್ಮ ಮೋಹರಾಜನ ಬಳಗವನೆಲ್ಲ

ಕೂನವಿಲ್ಲದೆ ಅಗಲಿಸಿದಾತನೆ ನಂಬು|| ಬಿಡು ||2||

ಮೋದದಿಂ ಕಳೆ ಬಂದು ದೂರಿ |

ಸಾಧನ ಚತುಷ್ಟಯ ಅದನು ಮೀರಿ

ಆಧಾರ ಸ್ವಾದಿಷ್ಟ ಮಣಿಪುರದಲ್ಲಿರುವ

ಸಾಧಿಸುವವರಿಗೆ ಸಕಲ ಐಶ್ವರ್ಯ ನಂಬು ಬಿಡು ||3||

ಧಾತ್ರಿಯೊಳಗೆ ನಿರ್ಮಳಗಿರಿಕರ್ತ |

ಶ್ರೀಗುರು ಮುರುಗೇಂದ್ರನು ಪೇಳಿದನು ಸಾರಿ

ಗುರುತಿನೊಳಗೆ ಗುರ್ತು ಅರ್ಥ ಮಾಡಿಕೊ ತುರ್ತು

ಯಾರಿಲ್ಲೊ ನಿನ್ನ ಹೊರ್ತು ಪರತತ್ವ ಬೆರೆತು|| ಬಿಡು ||4||

ಭವಸಾಗರ ದಾಟಿಸುವ ಜೀವ ತ್ರಿಗುಣವಾ |

ಪಾವನಾತ್ಮಕನ ಹೃದಯ ಬಿಡದೆ ಭಜಿಸುವಾ

ಅವ ಭವಭಯ ಪರಿಹರಿಸುವ ಶಿವಾನುಭಾವ

ಜಾವಜಾವಕೆ ಶಿವ ಸೇವೆಗೈಯುವಾ

ತ್ವರಿತದಿ ಪೋಗುವದು ಜೀವ ತ್ರಿಗುಣವಾ ||ಪಲ್ಲ||

ಅಷ್ಟಾವರಣ ನಿಷ್ಠಿಲಿಂದೆ ಮಾಡೊ ಶ್ರೇಷ್ಠವಾ |

ಸೃಷ್ಟಿಗೀಶ ಧ್ಯಾನ ಹೃದಯದೊಳು ನಟಿಸುವಾ

ಕಷ್ಟ ಕಪಟ ಕುಟಿಲ ಕುಯುಕ್ತಿ ನಷ್ಟಗೈಯುವಾ

ತುಟಿ ಮಿಸುಕದೆ ನಿಟಿಲಾಕ್ಷನ ಬಿಡದೆ ಪಠಿಸುವಾ

ಪಟದ ಗಾಳಿಯಂತೆ ಹಾರಿ ಹೋಗುವದೀ ಘಟವಾ ||1||

ಸತ್ತು ಬಿಡದೆ ಮುಕ್ತಿ ಮಾರ್ಗವನ್ನು ಬಯಸುವಾ |

ಚಿತ್ತದೊಳಗೆ ಚಿನ್ಮಯಾತ್ರ ರೂಪ ತೋರುವಾ

ಹುತ್ತು ಕೆಡಿಸದಂತೆ ರತ್ನ ಜತನ ಮಾಡುವಾ

ಅತ್ತ ಇತ್ತ ಹೊತ್ತು ಗಳಿಯಬ್ಯಾಡೊ ವ್ಯರ್ಥವಾ

ಸತ್ತು ಚಿತ್ತಾನಂದ ಮೂರ್ತಿ ಹಂತಿಲಿರುವಾ ||2||

ತನುಮನ ಧನದಾಸೆ ಮೂಲ ವಾಸನಳಿಯುವಾ |

ಅಣುಮಾಯಾ ಕಾರ್ಮಕ ಮಲತ್ರಯ ದೋಷ ತೊಳೆಯುವದು

ಪುನರ್ಜನ್ಮದಲ್ಲಿ ಮಾಡಿದ ಕರ್ಮ ಹರಿದು ಪೋಗುವದು

ಫಣಿಪತಿ ಗುಣಮಣಿವೆಂದೆನಿಸುವದು

ಕಣ್ಣಿನೊಳಗೆ ಕಾಣು ಆತ್ಮ ಒಂದೆ ರೂಪೆಂದು ||3||

ಧರೆಯೊಳು ನಿರ್ಮಲಗಿರಿಪುರನಿವಾಸವಾ |

ಪರಮ ಪಾವನಾತ್ಮ ಅಂಗಲಿಂಗ ಸಂಗಮವಾ

ಅರುವಿನ ಹರಗೋಲದೊಳು ರಕ್ಷರೂಢವಾ

ಮರಿಯದೆ ಗುರುಲಿಂಗ ಮುರುಗೇಂದ್ರ ರಂಧ್ರವಾ

ಸೇರಿ ಸುಖಿಸೊ ಬಿಡದೆ ಮೂಲ ಅದರ ಪ್ರಸಾರವಾ ||4||

ಗುರುವಿನ ವಚನಾಮೃತ ರಸವೊ ಶರಣರಿಗೆ ಹಿತಕರವೊ |

ಅರಿಯದ ದುರಳರಿಗೆ ಗರಳದಂತೆ

ದೂರಿಕರಿಸುವವರಿಗೆ ಗುರುಪಾದವೊ

ದೊರೆಯದು ದುರ್ಲಭವೊ ||ಪಲ್ಲ||

ಯುಕ್ತಿಲಿ ವಿರಕ್ತ ಶಕ್ತಿ ತಾ ಬೆಳಗುವಾ |

ಮುಕ್ತಿ ಮಾರ್ಗ ಅರಿಯದವರಿಗೆ ಗುರು ಪ್ರಸಾದವೊ

ದೊರಿಯುವದು ದುರ್ಲಭವೊ ||

ದೊರಿಯುವದು ದುರ್ಲಭವೊ ||1||

ತ್ರಿಪುರವ ಧೀರ ನಿರ್ಮಳಗಿರಿವಾಸವಾ |

ತ್ರಿನಯನ ಮೂರ್ತಿ ಗುರುಲಿಂಗ ಮುರುಗೇಶ

ತ್ರಿಮಲವದೊಳೆದು ಪೂಜಿಸುವ ಗುರುಪಾದವೊ

ದೊರೆವದು ದುರ್ಲಭವೊ ||2||

ಶಿವನಾಮವ ನುಡಿಗಡಿಗಡಿಗೆ ಹರುಷಾ |

ಭವಪಾಶವ ಪರಹರಿಸುವ ಈಶಾ

ಶ್ರವಣ ಮನನ ಮಾಡೊ ನಿಜಧ್ಯಾಸ

ಸುವಿವೇಕದೊಳಗೆ ಮಹಾ ಪ್ರಕಾಶಾ ||ಪಲ್ಲ||

ಅಷ್ಟಾಂಗಯೋಗ ಸಾಧನವ ಮಾಡೊ |

ನಿಷ್ಠಿಲಿ ಅಷ್ಟಾವರ್ಣ ಸಾಧನಗೂಡೊ

ಅಷ್ಟದಳ ಸಹಿತ ಪರಮನೊಳು

ಇಷ್ಟ ಪ್ರಾಣ ಭವ ದೃಷ್ಟಿಸಿ ನೋಡೋ ||1||

ಸಾಧನದಲ್ಲಿ ಸಾಧಿಸಿ ನೋಡೊ |

ಷಣ್ಮುಖ ಭೇದಿಸಿ ಲೋಲ್ಯಾಡೊ

ಆಧಾರ ಸ್ವಾದಿಷ್ಟ ಮಣಿಪುರನಾಹತ

ಶುದ್ಧ ಬ್ರಹ್ಮಾಜ್ಞಾನ ಶಾಂತನಗೂಡೊ ||2||

ಕಣ್ಣಿನೊಳಗೆ ನೋಡೋ ಕೈಲಾಸಾ |

ನಿನ್ನ ಕಣ್ಣಿನಲ್ಲೆ ನಿರ್ಮಲಧೀಶ

ಸಣ್ಣದ್ವಾರ ಹುಣ್ಣಿವಿಚಂದ್ರ ಪ್ರಕಾಶ

ಬೆಳಗಿನೊಳಗೆ ಮುರುಗೇಂದ್ರ ನಿವಾಸಾ ||3||

ಹೋಗನು ನುಡಿಯಮ್ಮ ತಂಗೀ |

ನಾಗಲಿಂಗ ದೇವನ ಜಾತ್ರೀಗಿ

ಹೋಗನು ನಡಿಯಮ್ಮ ನಾಗಲಿಂಗೇಶನಿಗೆ

ಕೂಡಲಸಂಗಮನ ಪಾದಕ್ಕೆರಗಿ ಬರುವೆ ||ಪಲ್ಲ||

ಗಂಗ ಯಮುನಾ ಸರಸ್ವತಿ |

ಈಡಪಿಂಗಳ ಸುಷುಮ್ನಾಕೃತಿ

ಕಂಗಳ ಮಧ್ಯದಿ ರಂಗು ಮಂಟಪದೊಳು

ತಿಂಗಳ ಪ್ರಭೆ ಧವಳಾಂಗ ರೂಪೇಶ್ವರಗಾ ||1||

ಯೋಗ ಮಂಟಪದ್ಹಾದಿ ಹಿಡಿದು |

ಕೂಗುವ ಶಂಖು ಜಾಗುಟಿ ಭೇರಿವಾದ್ಯ ನುಡಿಯುವದು

ಸಾಗುವ ಸ್ವನಾದಿ ನೌಬತ್ತು ಬಾಜಗಳಿಂದೆ

ಸೂರ್ಯ ಚಂದ್ರನ ಕಾಂತಿ ಪ್ರಕಾಶ ಬೆಳಗುವದು ||2||

ಅರವೀನ ಹರಗೋಲ ಹಾಕಿ |

ಹಿರಿ ಹೊಳಿದಾಟಿ ಆಚಿಲಾದ ನಿರ್ಮಲ ಜ್ಯೋತಿ

ಹರಿಹರ ಬ್ರಹ್ಮದ ಅಳವಳದ ಹರಕಿ

ಪರಾಕು ಹೊಡಿಯುತ ಮುರುಗೇಶಗೆ ಅರ್ಪಿಸಿಬರುವೆ ||3||

ಶರಣರ ಮಹಿಮವನರಿಯದೆ |

ಮರುಳರು ದುರಳತನದಿ ವ್ಯಾಳೆ ಕಳಿಯುವರು

ಕಾಳ ಕತ್ತಲದಾ ಕರ್ಮವ ತೊಳಿಯದೆ

ಹಾಳು ವಿಷಯದೊಳು ಮುಳುಗುವರು ||ಪಲ್ಲ||

ಕಾಮಿನಿ ರೂಪವು ಕಾಮಿಸಿ ಮನದೊಳು |

ತಾಮಸ ಗುಣ ಚರಿಶಾಡುವರು

ಪಾಮರದಿಂದೆ ಪರತತ್ವ ವಿಚಾರವು

ಶೋಮರ ಭೂತದೋಳಡಗುವರು ||1||

ವೇದದ ಮೂಲವು ಹಾದಿಯ ತಿಳಿಯದೆ |

ವಾದ ಭೇದಗಳು ಮಾಡುವರು

ಮೇದಿನಿಯೊಳು ತಾ

ಭೇದವು ಮಾಡಲು ಬಾಧೆಯಾಗುವದು ಶಾಶ್ವಿತವು ||2||

ತನ್ನ ತಾನರಿಯದೆ ಅನ್ಯರ ಗುಣಗಳು |

ಶ್ವಾನನಂತೆ ತಾ ಬೊಗುಳುವರು

ಗಾಣಕ್ಕೆ ಕಟ್ಟಿದ ಕೋಣನ ಪರಿಯಂತೆ

ಬಾರಿಬಾರಿ ಭವ ಸುತ್ತುವರು ||3||

ಧರುಣಿಯೊಳು ನಿರ್ಮಳಗಿರಿ ಪುರವರ |

ಕರುಣಾಕರ ಶ್ರೀಗುರು ಮುರುಗೇಶ್ವರ

ಮರ್ಮವರಿಯದೆ ಧರ್ಮವು ತಿಳಿಯದೆ

ಸುಕರ್ಮ ಧರ್ಮವ ಅರಿಯದ ಅಧಮರಿಗೆ ||4||

ಏನು ಬರದಿದ್ದ್ಯೋ ಬ್ರಹ್ಮ |

ತಿಳಿಯದಂಥ ಮಾಯದ ಮರ್ಮ

ಮನವಳಿದಾಟಾದಯ್ಯೋ ಆವ ಜಲ್ಮ ಕರ್ಮ ||ಪಲ್ಲ||

ನಾನೊಂದು ಮಾಡಂದರೆ |

ತಾನೊಂದು ಮಾಡುವದಮ್ಮ

ಏನು ಹೇಳಲಿ ಮನವು

ತನ್ನ ಗುಣ ಬಿಡದಮ್ಮ ||1||

ಬ್ಯಾಡೆಂದ ಮಾತು ತಾನು |

ತಡವಿಲ್ಲದೆ ಮಾಡುವದಮ್ಮ

ಪಡೆದು ಬಂದದ್ದು ಭೋಗ

ಬಿಡದು ಎಂದಿಗಿ ಭವರೋಗ ||2||

ತನ್ನ ತಾನು ತಿಳಿಯದಮ್ಮ |

ಅನ್ಯರ ಉಸಾಬಾರಿ ಅದಕೇನಮ್ಮ

ತಾನು ಬಂದ ದಾರಿಯ ಮರವು

ಮರವಿನೊಳಗ ಮುಳುಗುವದಮ್ಮ ||3||

ಅರವುಳ್ಳ ನರಜನ್ಮ |

ಮರವಿನೊಳಗೆಳೆದಾಡುವದಮ್ಮ

ಮರವು ಮರೆತಾರೆ ಅರವು

ಸ್ಥಿರವಾಗಿ ತೋರುವದಮ್ಮ ||4||

ಜ್ಯೋತಿ ಪ್ರಕಾಶ ರೂಪ ತೋರುವದು ನಿರ್ಮಲ ದೀಪ |

ದಾತ ಪ್ರಖ್ಯಾತ ಗುರು ಮುರುಗೇಂದ್ರನಪರೂಪ

ನೇತಿಗಳೆದ ಪಾಪ ಭೃತ್ಯಾಚಾರದಿಂದ ಲೋಪ ಪತ್ರ ಬರೆದಾ

ಬ್ರಹ್ಮಲಿಖಿತ ಸೂತ್ರ ಬಿಡಿಸಿ ಇಡಿಸಿದನೊ ಸ್ತೋತ್ರ ||5||

ಬೇಡಿಕೊಂಡರೆ ದಯವಿಲ್ಲೊ |

ಬೇಡದಿದ್ದಾರೆ ನೀಡುವನಲ್ಲಾ

ಅಡಿಗಳಿಗೆರಿಗಿದರೆ ಕರುಣ ಬರುವದಿಲ್ಲ

ಪಡೆದು ಬಂದುದಕೆ ದುಡದುಂಬುದೆ ಫಲ ಬೇಡಿ ||ಪಲ್ಲ||

ದೃಷ್ಟಿಟ್ಟು ನೋಡೊ ನಿನ್ನಲ್ಲಿ |

ಅಷ್ಟೈಶ್ವರ್ಯ ಕಾಣುವದಲ್ಲಿ

ನಿಷ್ಠಿಯಿಲ್ಲದೆ ನಿಜ ಅಷ್ಟ ತನುವಿನಲ್ಲಿ

ಸೃಷ್ಟಿಗೀಶನ ಬೇಡಿಕೊಂಡರೇನಾದಲ್ಲಿ ||1||

ಆತ್ಮನಾ ನಿಜ ಗಾಣಲಿಲ್ಲ |

ಜೀವಾತ್ಮನ ನೆಲಿ ತಿಳಿಲಿಲ್ಲ

ಪರಾತ್ಮ ಸಂಗಮೇಶ್ವರನ ನಾಮ

ಪವನ ದೃಷ್ಟಿಗೆ ಮನ ಎಳಿಸದೀರವನಲ್ಲಿ ||2||

ನಿನ್ನೊಳ ನೀ ತಿಳಿದು ನೋಡೋ |

ನಿನ್ನೊಳಡಗಿರ್ದವನ ಕೂಡೊ

ನಿನ್ನ ಬೆನ್ನತ್ತಿರುವನವನ ಬೆನ್ನು ಬಿಡಬೇಡ

ಮಾಣಿಕ ಸರ್ಪನೊಳಡಗಿರ್ಪುದು ನೋಡಲ್ಲಿ ||3||

ನಾಡಿನೊಳಗ ನೆಲಿಸಿರುವ ನೋಡು |

ಕಾಣುಸ್ತಾದೊ ನಿರ್ಮಳ ಪುರವಾ

ಒಡೆಯ ಶ್ರೀಗುರು ಮುರುಗೇಂದ್ರನ ಪಾದವ

ಬಿಡದಡಿವಿಡಿದು ಪಡೆದು ದುಡಿಯದವನಿಲ್ಲಿ ||4||

ಸುಮ್ಮನ್ಯಾಂಗ ಆದಿಯೋ ಬ್ರಹ್ಮ |

ಹಮ್ಮು ಮದ ಮತ್ಸರಂಗಳಿಯದೇ ಸುಮ್ಮ ||ಪಲ್ಲ||

ಯಮ ನೇಮ ತತ್ವ ತಕ್ಕಡಿ ಪಿಡಿಯದೆ |

ಒಮ್ಮನಾಗದೇ ಮನ ಇಮ್ಮನೊಳುಗೂಡದೆ

ಕೋಹಮ್ಮಿಗೆ ಸಿಲುಕಿ ನುಸಿ ಮುಸಿ ಬುಸಿಯಾದಿ

ಸೋಹಂ ಬ್ರಹ್ಮ ನಾನಾದೆನೆಂಬ ಹಮ್ಮಿಗೆ ಸುಮ್ಮ ||1||

ತನು ತ್ರಯಗಳ ಗಣ ಗುಣ ಮೂರು ಮುಟ್ಟದೇ |

ಅಣುಮಾಯಾ ಮಲ ಕಾರ್ಮಿಕಗಳಿಗಂಟದೆ

ಹೀನ ವಿಷಯ ಗುಣಗಳಿಗೆ ಮನ ಸಿಲ್ಕದೆ

ಕಣ್ಣಿನೊಳಗೆ ಪೂರ್ಣಾತ್ಮನ ಕಾಣದೆ ಸುಮ್ಮ ||2||

ನಾ ನೀನು ಒಂದಾಗೆ ನಾನತ್ವದು ಉಳಿವದೇ |

ನಾನ್ಯಾರೆಂಬುವ ಅರಿವನ್ನು ಅರಿಯದೆ

ನಾನೀನನುಭವ ಸಾರವ ಸವಿಯದೇ ಸುಮ್ಮ ||3||

ರೂಪು ನಿರೂಪಾಗದೇ ನಿರೂಪು ರೂಪಾಗದೆ |

ನಿರೂಪು ರೂಪಾದ ಆತ್ಮ ಸ್ವರೂಪ

ತನ್ನ ತಾ ಮರತರುವಿನ ಅರವು ಸುಮ್ಮ ||4||

ಮೂರು ಪುರಗಳ ಮೀರಿದ ನಿರ್ಮಲ |

ಆರ್ಯಾಡುವ ಮೇಲಾಡುವ ನಿರ್ಬೈಲ

ಪರಬೈಲಿನೊಳಗಿರುವ ಗುರು ಮುರುಗೇಶ್ವರ ಸ್ಥಲ

ಅರಿತು ಸೇರಿಕೊಂಡರೆ ಪರಬ್ರಹ್ಮನಿರುವನಾತನಲ್ಲಿ ಸುಮ್ಮ ||5||

ಗುರುವಿನ ದರ್ಶನಕ್ಹೋಗನು ಬಾ |

ಅರುವಿನ ಮನಿಯೊಳಗಾಡನು ಬಾ ||ಪಲ್ಲ||

ದೂರ ದುರ್ಜನರ ಸಂಗ ದೂಡನು ಬಾ |

ಸಾರಸಜ್ಜನರ ಸಂಗ ಲೇಸೆನ್ನುತಾ ಬಾಬಾ ಗುರು ||1||

ತಾಳ ತಂಬೂರಿ ತಂತಿ ಮೇಳದಿಂದೊಡಗೂಡಿ |

ಭಾಳಾಕ್ಷ ಗುರುವಿನ ಭಜನೆ ಮಾಡನು ಬಾ ಗುರು ||2||

ಕಳೆಯೊಳು ಕಳೇಶ್ವರ ಬೆಳೆಯುಳ್ಳ ಮಹೇಶ್ವರ |

ಆಳಾಗಿ ದುಡಿವವರ ಆಳಿಗಾಳಾಗನು ಬಾಬಾ ಗುರು ||3||

ಮೂರು ದಿನದ ಸಂತಿ ಬಿಡವಿಲ್ಲದೀ ಭ್ರಾಂತಿ |

ಮರವಿನ ಮನೆಯೊಳಗೆ ಚಿಂತೆ ಮಾಡುತ್ತೆ ಕುಂತಿ

ಆರಿಗಿ ಆರಾರ ಎರವರ ಸಂಸಾರ

ಪರತತ್ವ ಪರಮಾತ್ಮಗರ್ಪಿತ ಮಾಡನು ಬಾಬಾ ಗುರು ||4||

ಕಾರಮಿಂಚಿನ ತೆರದಿ ತೋರಿ ನಿಮಿಷದಿ ತನುವು |

ನೀರು ಗುರುಳಿಯ ತೆರದಿ ಮಾಯವಾಗುವದು

ಬರೆ ಚೀಲದೊಳು ಕೈಯ ಹಾಕಿದರುರುಳಿಲ್ಲ

ಪರದೇಶ ಪರ ತತ್ವಕ ಆಶ್ರಮಕ್ಹೋಗನು ಬಾಬಾ ಗುರು ||5||

ನಿರ್ಮಳ ಗಿರಿವಾಸ ಪೂರ್ತಿಗೆ ಕೈಲಾಸ |

ಪರಮ ಮುರುಗೇಂದ್ರ ನುಡಿಲೇಸು

ಸಾರಿ ಪೇಳಿದ ಪಂಚಾಕ್ಷರಿ ಮಂತ್ರದ

ಮೂಲ ಆಧಾರ ತಿಳಿಸಿ ಭವದೊಳು ಬೈಲಾದ ಗುರು ||6||

ಬಾ ಬಾರೊ ಮುರಹರಿ ಬಾಯೆನ್ನ ಮಾರನ ವೈರಿ |

ವನಿತಾದಿತಾಪದಿ ಮನವ ಮರಗುತಲಿಹುದೊ ||ಪಲ್ಲ||

ಆರು ವರ್ಗಗಳೆನ್ನ ಆರು ಮಾಡುತಲಿಹರು |

ಧೀರನವರ ಗೆಲಿಸಿ ಪಾರು ಮಾಡುವರೊಬ್ಬರ ಕಾಣೆ ||1||

ಸುರದಿ ಚಿಂತಾಮಣಿಯೆನಿಸಿರುವದೀ ಕಾಯ |

ಅರಬಿಯಂತೆ ಮಾಡಿಯನ್ನನು ಮಾಯ

ಸಾರ್ಥಕ ಮಾಡುವ ಜಗದೊಳಬ್ಬರ ಕಾಣೆ || ||2||

ಮೊರೆ ಹೊಕ್ಕ ಶರಣರನು ಪೊರೆವನೆಂಬ ಬಿರದು |

ಧರಿಸಿ ಧರಿಯೊಳಗೆ ಅವತರಿಸಿದಿ ದೇವಾ

ಗುರುತು ತೋರಿ ನಿಮ್ಮ ಅಡಿದಾವರಿಗಳಿಗೆರಗಿ

ಬೇಡುವೆನಭವಾ ಕಾಯೊ ಮಹಾನುಭಾವಾ ||3||

ವಸುಧಿಯೊಳಗ ನೆಲಸಿರುವ ನಿರ್ಮಲಗಿರಿ |

ವಾಸ ಶ್ರೀಗುರು ಮುರುಗೇಶ್ವರ ತಾ ಬಂದು

ಆಶ ಹರಿಸಿ ಹರುಷವೇರಿ ಈಶ ಪದವಿ

ಸಾರಿ ಪೇಳಿ ತಾನು ಬಾರೆಂದು ಪೋದಾನು ||4||

ಏನಾಟ ಏನಾಟವೋ ಸದ್ಗುರುನಾಥ |

ಏನಾಟ ಏನಾಟವೋ ಏನಾಟ ಜಿಗದಾಟ

ಹೀನ ವಿಷಯ ಕೂಟ ಮನಮಯ

ಮರ್ಕಟಾ ತನುವಿನ ಸುಖದುಃಖದೂಟ ||ಪಲ್ಲ||

ಕಾಲಾನ ಕಲಿಯಾಟವೋ |

ಕಲಿಯ ಜನರ ಕಲಿಕಿನ ಕಲಿಕಾಟವೋ

ಜಾಲಗಾರನ ಬಲಿಯೊಳಗೆ ಸಿಲುಕಿ ಭವ

ಗಾಲಕ್ಕೆ ವಶವಾಗಿ ಶೂಲಕಿಳಿಯುವ ಜೀವಾ ||1||

ಮಾತಿನೊಳಗೆ ಮಾತಿಲ್ಲವೊ |

ಪಿತಮಾತೆಯರ ಸತಿಸುತ ಹಿತರಿಲ್ಲವೋ

ಅರಿ ಹರುಷದಿ ಸತತ ಪರಸತಿಯರನ್ನು ಒಲಿಸಿ

ಗತಿಗಾಣದೆ ದುರಿತ ನರಕಕ್ಕಿಳಿಯುವ ಜೀವಾ ||2||

ಮಾಯ ಮೋಹಕ್ಕೆ ವಶವಾಗಿ |

ಸಾವು ಪುಟ್ಟುವ ಪಾಯಗಳೆರಡಕ್ಕೆ ಭಾಗಿ

ಆಯಾಸವಿಲ್ಲದುಪಾಯವ ಪೇಳುವ

ತಾರಕ ಬ್ರಹ್ಮನ ಕಾಣವಲ್ಲದು ಜೀವಾ ||3||

ದುರಳರಿಗೆ ದೂರವಾಗಿರುವ |

ಯೇ ಮರುಳೆ ದೊರೆಯದು ನಿರ್ಮಲವಾ

ಆರು ವರ್ಗ ಗೆಲಿಯದೆ ಮೂರು ಮಲದೊಳೆಯದೆ

ಪರಮ ಶ್ರೀಗುರು ಮುರುಗೇಂದ್ರನ್ಯಾಂಗ ಕಂಡೀಗಿ ಜೀವಾ ||4||

ಓಂ ಸದಾಶಿವ ನಾಮವ ಭಜಿಸೋ |

ಸೋಮಧಾಮ ಸುಖ ಸಂಪದ ಸ್ಥಿರಪಡಿಸೋ || ||ಪಲ್ಲ||

ಜಗಕೆ ಶ್ರೀಯು ಸತಿಸುತ ಹಿತಕರು |

ಜಗದೊಳು ತಮ್ಮವರೆಂದು ನಂಬಿರುವರು

ಜಗದೊಳಿರುವರವರು ಅಗಲಿ ಪೋಗುವರು

ಜಗದೊಳಗೆ ಜಗದೀಶನ ಸೃಜಿಸೋ ||1||

ಮಾಯ ಪ್ರಪಂಚಕೆ ಮೋಹಿಸಿ ಮನವು |

ಆಯಾಸಗೊಳಿಸುತ್ತಿರುತಿಹದು ಕಾಯವು

ಪಾಯವು ಪೇಳಿ ಲಯ ಮಾಡುವ ಮಹಾ

ಬಯಲು ಬ್ರಹ್ಮನಡಿವಿಡಿದು ಮಾಡೊ ಸೃತಿ ||2||

ಕಾಲಕಾಲ ಸುಶೀಲನಾಗಿ ಶಿವಾ |

ಲೀಲೆಯೊಳಾಡು ಬಾಲನಾಗಿ ನೀ ಚಲನವ ತಡೆದು

ಅಚಲನವದ ಮಾರ್ಗದೊಳು

ಫಾಲನಯನ ಪಾವನಾತ್ಮದೊಳೈಕ್ಯಾಗಿ ||3||

ದೇಶಕಧಿಕವಾದ ಲೇಸ ನಿರ್ಮಲಗಿರಿ |

ವಾಸ ಶ್ರೀಗುರು ಮಹಾಲಿಂಗವಾಗಿರುವಂಥ

ಆಶಾರಹಿತ ಶಂಭೋ ಈಶಾ ಮುರುಗೇಂದ್ರೀಶಾ

ಧ್ಯಾಸವಗಲದಿರು ಸೂಸುವಾಗ್ರದೊಳು ||4||

ಮಾಡೋ ಗುರುಸೇವಾ ಜೀವಾ |

ಭವಭಯ ಪರಿಹರಿಸುವ ಶಿವರಾಯ ||ಪಲ್ಲ||

ಸುರಮುನಿಜನ ಪಾಲಾ ವರಗುಣ ಸುಶೀಲಾ |

ಕರುಣಾಕರನ ಚರಣವ ಸ್ಮರಿಸುತ ಜೀವಾ ||1||

ತನುಮನ ಧನವನು ಅನಂಗನಿಗರ್ಪಿಸಿ |

ಮನ ಮುನೀಶನ ಕೂಡಿ ಅನುದಿನ ನೆನೆಯುತ ||2||

ಈಷಣ ತ್ರಯದ ಆಶೆಯ ತ್ಯಜಿಸಿ |

ಸೂಸುವ ನಾಶಿಕ ಶ್ವಾಸದಿ ಈಶನೊಳು ||3||

ಧರಿಯೊಳು ನಿರ್ಮಲಗಿರಿಪುರ ವರಸುರಾ |

ಹರ ಶ್ರೀಗುರು ಲಿಂಗ ಮುರುಗೇಂದ್ರನ ಪಾದವ ಪಡೆದು ||4||

ಎಂಥ ಗಂಡನ ಮಾಡಿಕೊಂಡೆನೊ |

ಮುಪ್ಪಿಲ್ಲ ಪ್ರಾಯದವನ ಯಂಥ

ಯಂಥ ಗಂಡನ ಮಾಡಿಕೊಂಡೆ

ಅಂತರಂಗದಲ್ಲಿ ಯನ್ನ ಚಿಂತೆ ಬಿಡಸೀ

ಅಂತು ತೋರಿ ಸಂತೋಷಗೊಳಿಸಿದನಮ್ಮಾ ||ಪಲ್ಲ||

ಆರು ಮುಟ್ಟಗೊಡಬೇಡೆಂದಾ |

ಚರಿಶಾಡುವಂಥ ಕೀಳರ ನೆರಳು ಬೇಡೆಂದಾ

ಸೇರಗೊಡದಿರು ಅಷ್ಟ ದುಷ್ಟರ

ನಷ್ಟ ಮಾಡಿ ಕುಟ್ಟಿ ತುಳಿದು

ಶ್ರೇಷ್ಠವಾದ ಸೃಷ್ಟಿಯೊಳಗೆ

ಗುಷ್ಟಿಯೊಳಗಿರುವಂಥವನ ||1||

ಬಾಗಿಲೊಂಭತ್ತು ಮನಿಯ ತೋರಿದಾ |

ಜಗಜಗ ಹೊಳಿವದು ಆರು ಕಂಬದ

ಜೋತಿ ನಿಲಿಸಿದ ಗಗನದೊಳಗೆ

ಮೇಲು ಮಾಲಿನೊಳಗ ಎನ್ನ ಕರದೊಯ್ದು

ಅಷ್ಟಗ್ರಹ ಮಂಟಪದೊಳಗೆ

ಬಟ್ಟಬಯಲ್ನೋಡಿ ಬೆರಗಾದೆ ||2||

ಚಿತ್ರವಿಚಿತ್ರವು ಕಂಡೇನೆ ಧಾತ್ರಿಯೊಳಗಾ |

ಇಲ್ಲದ ತ್ರಿನೇತ್ರಧಾರನ ಕೂಡಿಕೊಂಡೇನೆ

ಕ್ಷಿತಿಯೊಳಗೆ ಲೇಸು ನಿರ್ಮಲಪುರಕ ಒಡಿಯನಾದ

ಕರ್ತ ಶ್ರೀಗುರುಲಿಂಗ ಸಂಗನ

ಮುರುಗೇಂದ್ರನ ಕೂಡಿಕೊಂಡೇನೆ ||3||

ನೋಡೊ ನೋಡೊ ನೋಡೊ ಜಗದಾಟ |

ಮಾಯದ ಮಾಟ ಕೂಡಿಕೊಂಡರೆ ಬಿಡದು ಜಂಜಾಟ

ಕಾಡ ಅಡವಿ ಸೇರಿದೆ ಬಿಡದು

ಗುಡಿಯ ಗವಿ ಹೊಕ್ಕರೆ ಬಿಡದು

ನಾಡು ನಾಡುಗಳ ಅರಸಿ

ತೊಳಲಿ ಬಳಲಿದರೆ ಭಯ ಬಿಡುವದುಂಟೇ ||ಪಲ್ಲ||

ಹೊನ್ನು ಹೆಣ್ಣು ಮಣ್ಣು ಬಯಸುವದು |

ಮುನ್ನಿನ ಜನ್ಮದಲ್ಲಿ ಮಾಡಿದ ಕರ್ಮ ತಿಳಿಯದು

ಹೀನ ದೆಶೆಯಿಂದೆ ತನುವವಳಿದು

ಗಾಣ ಸುತ್ತುವ ಕೋಣನಂದದಿ

ಜ್ಞಾನವರಿಯದೆ ಹೀನ ಮನುಜನು

ಶ್ವಾನ ಜನ್ಮ ಎತ್ತಿ ಬರುವನು | ||1||

ತನ್ನರವಿನ ಅಭಿಮಾನ ತನಗಿಲ್ಲಾ |

ಅನ್ಯರ ಗುಣಗಳು ಎಣಿಸಿ ಅಣಕ ಮಾಡುವರಲ್ಲಾ

ನಾನು ನೀನು ಎಂತೆಂಬ ಭೇದವು

ಕೂನವರಿಯರು ಕುಲಜ ಮತವು

ಯೋನಿಯೊಳಗೆ ಉದ್ಭವಿಸಿ

ಯೋನಿ ಮರ್ಮವರಿಯದ ಮರುಳು ಮಾನವಾ ||2||

ತಿರುಕರಂತೆ ತಿರುಪಿಸದನವನು |

ಪರಮಾನುಭವ ಬೋಧಿಸುವ ನೆಲೆಯ ಗಾಣದವನು

ಕಾರಮಿಂಚಿನ ತೆರೆದ ತನುವಿದು

ತೋರಿ ಅಡಗಿ ಮಾಯವಾಗುವದು

ಘೋರ ನರಕದೊಳಗೆ ಬಿದ್ದು

ಉರುಳಿ ವುರುಳ್ಯಾಡುವರು ಗಣರು ||3||

ದೇಶಕಧಿಕ ನಿರ್ಮಳಗಿರಿ ವಾಸವ |

ಸೂಸುವ ನಾಶಿಕ ಶ್ವಾಸದಿ

ಈಶನೊಳು ಮೆರೆವ ಮುರುಗೇಶ

ಭಾಷೆ ಪಾಳಿಪನೆಂಬ ಬಿರುದನು

ಧರಿಸಿ ಧರಿಯೊಳಗೆ ಅವತರಿಸಿ

ಪಾಶ ಪರಿಹರಿಸು ಈಶ ಧ್ಯಾಸವದೀಸಿ ಪೋಷಿಪ ಜಗದೀಶ ||4||

ಬಿಡಿಸೊ ಬಿಡಿಸೊ ಭವಬಂಧನವಾ |

ನಿನ್ನಡಿಗೆರಗಿ ಬೇಡುವೆನಭವಾ

ನೀಡು ನಿನ್ನ ಪಾದಮೃತವಾ

ತಡೆಯಲಾರದೈಯೆನ್ನ ಮನವಾ ||ಪಲ್ಲ||

ಕಾಳಕೂಟ ವಿಷದಮೃತವಾ |

ಸೆಳೆ ಮಿಂಚಿನ ಗುಡುಗಿನರ್ಭಟವಾ

ಕಳವಳಿಸುವದು ಇಳಿಯೊಳು ಬಳಲುವ

ಕಳವಳಗೊಳ್ಳುವದೀ ಮನವಾ ||1||

ಮಲತ್ರಯಂಗಳು ಮುಸಕಿರುವಾ |

ಸಿಲಿಕಿದ ಮನ ಸುಳಿ ತೊಳಿ ಕಲಕಿರುವಾ

ಥಳಥಳಸಿರುವದು ಕಳೆ ಬೆಳಗು ಪೊಳಿವವದು

ಸುಳಿದಾಡುವ ಜೀವ ಬಲಿಯಪಳಗಿರುವದು ||2||

ಭವ ಗುಣಗಳು ಮಾಯವಾಗಿರುವಾ |

ಭವ ಭಯ ಪರಿಹರಿಸೋ ಮಹಾದೇವಾ

ಶಿವ ಅವತಾರದಿ ಬಂದು ಪಿಡದಿದಿ ಕರವಾ

ಪಾವನ ಮಾಡೋ ಜನ್ಮೋದ್ಧಾರವಾ ||3||

ಕಾಣದು ನಿಜವಿಲ್ಲದ ನಿರ್ಮಲವಾ

ಕಣ್ಣಗಂಡವರಿಗೆ ಮುರುಗೇಂದ್ರ ಹಂತಿಲಿರುವಾ

ಪ್ರಾಣಾಪಾನ ವಾಯುವು ಜೋಡುಗೂಡಿರುವಾ

ಸ್ಥಾನವರಿತು ಸ್ನಾನ ಮಾಡೋ ಬಂಧನ ಬಿಡಿಸೋ ದೇವಾ ||4||

ಬೈಲೂರಲಿಂದ ಬಂದಾನ ಒಬ್ಬ ಜಂಗಮ ಯೋಗಿ |

ಲಿಂಗದ ಕೂನ ಗುರುತು ಏನೇನರುವಿಲ್ಲವನಿಗಿ

ಸಂಗಾ ಮಾಡಿ ಸಂಗನಬಸವಗ ಧರಿಸಿದ ಲಿಂಗಾಂಗಿ

ಮಂಗಳಾತ್ಮಗ ಪೂಜಿಸಿ ಧವಳಾಂಗದ ಶಿವಯೋಗಿ ||ಪಲ್ಲ||

ಜಂಬೂದ್ವೀಪದೊಳುದ್ಭವಿಸಿದ ಸದ್ಭಕ್ತರ ಸಲುವಾಗಿ |

ಶಂಭೋಶಂಕರ ದ್ವಿತಿಯ ಸಾಂಬ ಎನಿಸಿದ ಪೃಥ್ವೀಗಿ

ಕಾಂಬೊ ಹಂಬಲುಂಬುವರೆಲ್ಲುರುಳಿದರು ಧರುಣಿಗಿ

ನಂಬಿದ ಭಕ್ತರಿಗಿಂಬುಗೊಂಡನು ಸಾಂಬ ಶಿವಯೋಗಿ ||1||

ಲಕ್ಷದಮ್ಯಾಲ ತೊಂಭತ್ತಾರು ಸಾವಿರ ಗಣಂಗಳಿಗಿ |

ಮೋಕ್ಷಾಪೇಕ್ಷ ಪರೋಕ್ಷ ಪರುಷಾಗಿ

ತಕ್ಷಕ ಭೂಷಣ ಸಾಕ್ಷಾತ ಅನಿಸಿಕೊಂಡನು ಶಿವಯೋಗಿ ||2||

ಕಲ್ಯಾಣ ಶಿವಾಲಯ ಮಂಟಪಕೆ ಪ್ರಭು ಬಂದನು ತಾನಾಗಿ |

ಕಲ್ಯಾಣ ಸಮಾಪ್ತವಾಯಿತು ತೆರೆಳೆಂದು ಪೇಳಿದ ಶರಣರಿಗಿ

ಮಲ್ಲಿನಾಥ ಶ್ರೀಶೈಲ ಪರ್ವತದೊಳು ಬೈಲಾದ ಪ್ರಭುಯೋಗಿ

ಕೇಳಿದಾಕ್ಷಣಕೆ ಬಿಜ್ಜಳ ಶಿರತರಿದು ಪೋದರು ಬೈಲಾಗಿ ||3||

ಪೊಡವಿಗಧಿಕವಾದ ನಿರ್ಮಲಕೆ ಬಂದರೊ ಶರಣರು ಅಲ್ಲಿಗಿ |

ಒಡೆಯ ಶ್ರೀಗುರು ಮುರುಗೇಂದ್ರನು ಒಡಲೊಳಗಡಗಿಸಿಕೊಂಡ ಬೇಗಿ

ಗಡಿಬಿಡಿ ಎದ್ದಿತೋ ಕಲ್ಯಾಣ ಪೂರ ಗಾಢಂಧಕಾರವಾಗಿ

ತಡಬಡಿಸುತ ಹಾ ಬಸವ ಬಸವ ಎಂದು ಒದರುತಾರೋ ಕೂಗಿ ||4||

ಎಚ್ಚರಿಲ್ಲಾದವರಿಗೆ ಎಚ್ಚರ ಮಾಡಿದರೆ ಎಚ್ಚರವಾಗರವರು |

ಹುಚ್ಚು ಮರುಳರಿಗೇಳಿದರೆ ಕೇಳುವಲ್ಲರು

ತನ್ನ ಇಚ್ಛೆ ಬಂದಂತೆ ನಡಿಯುವರು ||ಪಲ್ಲ||

ಕಣ್ಣೀಗಿ ಕಂಡದ್ದು ಮನ ಉಂಡು ಹಾರ್ಯಾಡುವದು |

ವರ್ಣ ಏನು ಹೇಳಲಿ ವಿಸ್ತಾರಾ

ತನ್ನರವಿನ ಅರವು ತನಗಿಲ್ಲೋ ಎಚ್ಚಾರ

ಮುನ್ನ ಆಗುವದು ಮಾಡಲಿಲ್ಲ ವಿಚಾರ ||1||

ಪಂಚಭೂತದ ದೇಹ ಪಂಚಲಿಂಗದ ಕಾಯ |

ಪಂಚಸೂತ್ರದ ಕಳೆಯಾ

ಹಂಚಿಕಿಲಿಂದ ಮಾಡಿದ ಮಹಾರಾಯ

ಬಚ್ಚಲದೋಳು ಬಿದ್ದು ಮಾಡಿಕೊಂಡಿತು ಘಾಯ ||2||

ಘಾಯದ್ಹೊಲಸು ನಾತ ಗಾಳಿಗೆ ನಾರುತೈತೆ |

ಘಾಯ ಕಟ್ಟದಕಿಲ್ಲಾ ಬಾಯಿ ತೆರೆದರೆ

ಕರುಣ ಆರಿಗೆ ಬರೋಣಿಲ್ಲಾ

ಜನ್ಮಟೀಪಿ ಬರದು ಹಾಕಿದ ಗುಲ್ಲಾ ||3||

ಎಲ್ಲಿ ಹುಡುಕಿದರಿಲ್ಲ ಬಲ್ಲೇ ಆದೋ ನಿರ್ಮಲಾ |

ಮಲಹರ ಮುರುಗೇಂದ್ರನೇ ಬಲ್ಲಾ

ಮಲಾಮು ಆತನ ಹೊರ್ತಾರಲ್ಲಿಲ್ಲಾ

ತಿಳಿದು ಕಟ್ಟು ಆಗುವಿ ಮೀಸಲಾ ||4||

ನೋಡು ನೋಡುತಾನಯ್ಯೋ ಯಮನು ನೋಡುತಾನೆ |

ಒಡಲು ಇಚ್ಛಿಸುವದು ಮನವು ಪರರನ್ನು ನೋಯಿಸಿ ಗಳಿಸಿದ ಧನವು

ಮಡದಿ ಮಕ್ಕಳ ಒಡಲಿಗೆ ಸಂಶಯವು ಹಡದಂಥ ಜನನಿಯ ಕಷ್ಟವು ||ಪಲ್ಲ||

ದೃಢವುಳ್ಳ ಶರಣರ ನೋಡಿ ಕೈಯ ಹೊಡೆದು ಹಾಸವು ಮಾಡಿ |

ಕೇಡಿಗೀಡ್ಯಾಡುವ ಮನವು ಜಡಮತಿಹೀನರಿಗೆ ನೋಡು ||1||

ಧನವಂತರನು ಕಂಡು ಮನದೊಳಗ ಕಳವಳಗೊಂಡು |

ಅನ್ಯಾಯದಿ ಬಡಿದಾಡಿಕೊಂಡು ಹಣವುಳ್ಳವನ್ಹಾಳು ಮಾಡುವನನ್ನು ನೋಡು ||2||

ಒಬ್ಬರ ಮನಿ ಕದನವನು ಮತ್ತೊಬ್ಬರ ಮನಿಗಿ ಹಚ್ಚುವನು |

ಇಬ್ಬರ ಜಗಳವ ನೋಡುತ ಕುಳಿತು ಉಬ್ಬಿ ಹಿಗ್ಗಿ ನಗುವನನ್ನು ನೋಡು ||3||

ಆಶೆಯೇ ಬಲು ಮೋಸವಾಗಿ ಮೋಸವೇ ಯಮಪಾಶವಾಗಿ |

ಪಾಶದೊಳಗೆ ಉರುಳ್ಯಾಡುವ ಹೇಸಿ ಮೂಳರನ್ನು ಕಂಡು ನೋಡು ||4||

ಕಲ್ಲು ಎದೆಯ ನಿರ್ಮಲ ಪುರವಾಗಿ

ಅಲ್ಲಮಪ್ರಭು ಗುರು ಮುರುಗೇಂದ್ರ ಯೋಗಿ |

ಮಲೆನಾಡ ದೇಶ ನೋಡಿ ನಡಿನುಡಿಗಳಿಗೆ

ಅಲ್ಲಮಪ್ರಭು ಯಮನ ರೂಪಾಗಿ ನೋಡು ||5||

ತಿಳಿಯಬಾರದೇ ಜನ್ಮಾ ತಿಳಿಯಬಾರದೇ ||ಪಲ್ಲ||

ತಿಳಿ ಉಳಿ ಮುಟ್ಟಲಾರದ ಲಿಂಗ |

ಉಳುಮೆ ಶಿವಶರಣ ಸಂಗದೊಳು

ಪರಮಾನಂದ ಸುಖ ಸಾಗರದೊಳಗೆ ಮುಳುಗಾಡೆಂದು ತಿಳೀ ||1||

ಇರಿವೆ ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಿಲ್ಲೋ ದೀಕ್ಷಾ |

ನರ ಜನ್ಮಕ್ಕಾದೆಮನ ಶೀಕ್ಷ

ಸಾರ ಸಜ್ಜನಕ ಪರಮ ಮೋಕ್ಷ ತಿಳಿ ||2||

ಕಾಯದೊಳು ಜನಿಸಿ ಬಂದಿ |

ಮಾಯ ರೂಪದಿಂದೆ ಬೆಳದಿ

ಛಾಯ ತೋರಿ ಮಾಯವಾದಿ ||3||

ಬಾಹ್ಯದೊಳಗೆ ಬಯಲಾಗಿ ಪರಿಪೂರ್ಣಾನಂದರಾಜ |

ತಾರಕರೂಪ ನಿರ್ಮಲತೇಜ ಪರಮಗುರು ಮುರುಗೇಂದ್ರನ ಪೂಜಾ

ಅರಿತು ಭಜಿಸು ನಿರ್ಗುಣ ಸಹಜಾ ತಿಳಿ ||4||

ಭವಬಾಧೆಯ ಮೀರಿದವರಿಗಾವುದು ಅಂಜಿಕಿಲ್ಲವೋ |

ಅಂಜಿಕಿ ನಾಚಿಕಿ ಹೇಸಿಕಿ ಮೂರು ಮಲಾ

ಸಂಜೆ ಮಬ್ಬುಗತ್ತಲಾ ಭುಂಜಿಸಿದವನಿಗೆ ಮಂಜಿನ ಮನಿಯೋಳು

ಕುಂಜರನ ಮರಿಕೂಸಿವಡಿದವನಿಗಾವದು ಅಂಜಿಕಿಲ್ಲವೊ ||ಪಲ್ಲ||

ಆಣಮಲ ಮಾಯ ಕಾರ್ಮಿಕ ಮಲತ್ರಯಗಳ |

ಅನುಮಾನಿಸದೆ ಮನಗಲಿ ಘನ ಗುರುವಿನೊಳು

ಮನಸಿಜ ಮನಮುನಿ ಸನ್ಮತ ದಿನದೊಳು

ತನುಮನ ಧನವಾಸನಳಿದವನಿಗಾವುದು ಅಂಜಿಕಿಲ್ಲವೋ ||1||

ತತ್ವ ತತ್ವದಿ ಸತ್ಯ ತತ್ವ ತಿಳಿದು |

ಸತ್ಯ ಮಿಥ್ಯ ರಾಗದ್ವೇಷಗಳಳಿದು

ನಿತ್ಯ ಆತ್ಮನ ಪ್ರಭೆಯೊಳು ಸುಳಿದು

ಕಾತ್ಯಾಯನ ಶರಣರಿಗತೀತನಾದನಿಗಾವುದು ಅಂಜಿಕಿಲ್ಲವೊ ||2||

ಬೈಲಿಗೆ ಬೈಲು ಬೈಲು ಆಕಾರ |

ಬೈಲೆ ಬ್ರಹ್ಮ ನಿರ್ಬೈಲು ಸಾಕಾರ

ವೈಲುದೋರಿ ಕೈವಲ್ಯವ ಸೇರಿ

ಕಾಲಕಾಲ ಸುಶೀಲನಿಗಾವುದು ಅಂಜಿಕಿಲ್ಲವೊ ||3||

ಪರಮನಿರಘ ನಿರುಪಮ ನಿಷ್ಕ್ರಿಯ |

ಪರಮ ಪಾವನ ನಿರ್ಮಲಗಿರಿವರ

ಸುರಗುರು ಮುರುಗೇಂದ್ರನ ಚರಣವ

ಮರಿಯದೆ ಸ್ಮರಿಸುವ ನರಹರನಿಗೆ ಆವುದು ಅಂಜಿಕಿಲ್ಲವೊ ||4||

ಕೂಡು ಕೂಡನು ಬಾ ಬಾ ಕೂಡಾಡನು ಬಾ |

ಕೂಡು ಕೂಡಾಡನು ಬಾ ಬಾ

ಕೂಡಲಸಂಗನ ಶರಣರೊಡಗೂಡಿ

ಆಡನು ಬಾ ಬಾ ಕೂಡು ||ಪಲ್ಲ||

ಆಧಾರ ಸ್ವಾದಿಷ್ಟ ಒಲಿದು ನಾದಬಿಂದು ಕಳೆಯೊಳು ಮಿಂದು |

ಸದಾ ಬ್ರಹ್ಮನೊಳು ಬೆರೆದು ಸದಾಶಿವನೊಳು

ಕೂಡಾಡನು ಬಾಬಾ ||1||

ಆರು ಚಕ್ರ ಮೂರು ನೆಲಿಯ ಬೇರೆ ಎನಗೆ ಹೇಳಿದ ಗುರುವು |

ಆರು ವರ್ಣದ ಛಾಯಾವನ್ನುಟ್ಟು ಪರಬ್ರಹ್ಮನೊಳು

ಕೂಡಾಡನು ಬಾಬಾ ಕೂಡು ||2||

ಅಕಟಕಟ ಮಾಟದೊಳು ದಿಟವಾದ ನಿರ್ಮಲಪುರ ಕುಟಿಲಭಂಗ |

ಹರ ಮುರುಗೇಂದ್ರೇಶನ ನಿಟಿಲಾಕ್ಷನೊಳು

ಕೂಡಾಡನು ಬಾ ಬಾ ||3||

ಈಶ ಯಮಗೆ ಧ್ಯಾಸಗೈಯುವ |

ಪೋಷಿಸು ಪರಮೇಶನೆ

ಪೋಷಿಸು ಪರಮೇಶನೆ ಕೇಶವ ಜಗದೀಶನೆ ||ಪಲ್ಲ||

ಕ್ಲೇಶನಾಶ ಶೇಷಭೂಷ ಶಶಿಧರ ಶೂರೇಷನೇ |

ಶಶೀಧರ ಶೂರೇಷ ಭೂಕೈಲಾಸಪತಿ ವಾಸನೆ ||1||

ಶೂಲಪಾಣಿ ಕಾಲನಮಿತ ನೀಲ ಕಂಠಾಭರಣನೆ |

ನೀಳಕಂಠಭರಣನೆ ತ್ರಿನೇತ್ರಧರ ಫಾಲಾಕ್ಷನೆ ||2||

ಮರಣ ರಹಿತ ಶರಣಭರಿತ ಧುರಿಣ ದುರಿತ ನಿವಾರಣ |

ಧುರಿಣ ದುರಿತ ನಿವಾರಣ ಕರುಣಾಭರಣ ಭೂಷಣ ||3||

ಕರಪುರಿ ನಿರ್ಮಲಗಿರಿ ವರಗುರು ಮುರುಗೇಂದ್ರನು |

ವರಗುರು ಮುರುಗೇಂದ್ರನು ಪರಮ ಪಥ ತೋರಿದನು ||4||

ಗುರುವರ ಕರುಣಿಸೋ ವರವಾ |

ಇಷ್ಟೆ ಬೇಡುವೆನಭವಾ ಪರತರ

ಪಾವನ ಪ್ರಕಾಶ ಕಾಯೋ ಸರ್ವೇಶಾ ಜಗದೀಶಾ ||ಪಲ್ಲ||

ದುರಿತ ದುರ್ಗುಣಗಳು ನೀಗಿಸು ಶರಣರ ಸಂಗದೊಳಗ್ಹರುಷಾ |

ಪರಮ ಭಕ್ತ ಜನವಾದ ಇಷ್ಟೇ ಬೇಡುವೆನಭವಾ ||1||

ಗಂಗಾ ಯಮುನ ನಡುಮಧ್ಯೆ ತುಂಗ ಶ್ರೀರಂಗು ಮಂಟಪ ಭ್ರೂಮಧ್ಯ |

ಮಂಗಳಾತ್ಮನನ್ನು ಬೆರೆವ ಇಷ್ಡೇ ಬೇಡುವೆನಭವಾ ||2||

ಪರತರ ನಿರ್ಮಳಗಿರಿ ವಾಸಾ ಪ್ರಕಾಶ ಗುರುಲಿಂಗ ಉರಗಭೂಷಾ |

ಚರಣವ ಸ್ಮರಿಸೋ ಭವನಾಶಾ ಪರಮನಂತಿಷ್ಟ ಜಗದೀಶಾ ||3||

ಶಿವ ಶಿವ ಶಿವ ಎನು ಮನವೇ |

ಭವಭಯ ಪರಿಹರಿಸೋ ಮಹಾದೇವಾ

ಶಿವನಾಮೆಂಬೊ ಎರಡಕ್ಷರವಾ

ಸೇವೆ ಮಾಡಿ ಪಡಿಯೋ ಗುರುವಿನ ಪಾದವಾ ಶಿವ ||ಪಲ್ಲ||

ಹಿಂದೆ ನಾನಾ ಜನ್ಮವ ತಿರುಗಿ |

ಬಂದೆನು ಕಾಲನ ವಶವಾಗಿ

ಬಂದನು ಕಂದನು ಬೈಲು ಸಲುವಾಗಿ

ಇಂದುಧರನು ತಾ ಬಂದನು ಮರಗಿ ಶಿವ ||1||

ಮೂರರ ಆಸೆಯನ್ನು ಬಿಡಿಸಿದ |

ಆರೂಢ ಮಾರ್ಗವು ಹಿಡಿಸಿದಾ

ಆರು ಏಳು ಎಂಟು ಪರಿಹರಿಸಿದಾ

ತಾರಕ ಬ್ರಹ್ಮನೊಳು ಉಳಸಿದಾ ||2||

ತತ್ವವ ತಿಳಿಸಿದ ಸತ್ಯವ ಎಣಸಿದ ಮತ್ತು ಆತ್ಮನಿಗಹುದೆನಿಸಿದಾ |

ಸತ್ತು ಚಿತ್ತಾನಂದ ನಿತ್ಯ ನಿರ್ಮಲ ಸದಾ

ಅಂತು ತಿಳಸಿ ಮುರುಗೇಂದ್ರ ಬೈಲಾದ ಶಿವ ||3||

ಶಿವ ನಾಮಾಮೃತ ರಸವು |

ಭವರೋಗಕ್ಕೆ ಔಷಧವು

ಸವಿಯುವ ಭಕ್ತರ ಹೃದಯ ನಿರಂಜನ

ಜೀವದ ಪವಿತ್ರವು ||ಪಲ್ಲ||

ಕಷ್ಟ ಕರ್ಮಗಳು ಜರಿವ |

ಇಷ್ಟರ್ಥವ ಜವದಿ ಪಾಲಿಸುವಾ

ಸೃಷ್ಟಿಕರ್ತನ ಧ್ಯಾನ ಮನದೊಳು ಸ್ಮರಿಸಲು

ಅಷ್ಟೈಶ್ವರ್ಯ ಇಷ್ಟಾರ್ಥವನೀವಾ ಶಿವ ||1||

ಮೂಲ ಪ್ರಣಮಗಳಲ್ಲಿರುವಾ |

ಸಾಲು ಜ್ಯೋತಿಗಳಲ್ಲಿ ತಾ ಬೆರೆವಾ

ಬೈಲಿನೊಳೂದಸಿದ ಬೈಲೆ ಬ್ರಹ್ಮನು ತಾನು

ಬೈಲಿಗೆ ಬೈಲು ನಿರ್ಬೈಲಾಗುವಾ ||2||

ಧರಿಯೊಳು ನಿರ್ಮಲಗಿರಿ ವಾಸಾ |

ಪುರದೊಳು ಮೆರೆವ ಉರಗವೀಶಾ

ಚರಣ ಸ್ಮರಣೆಯ ಮರೆಯದೆ ಮನದೊಳು

ಚರಿಸುವ ಜೀವರೂಪಳಿದು ಅರ್ಚಿಸುವ

ಶಿವನಾಮಾಮೃತ ರಸವು ||3||

ಓಂ ನಮಃ ಶಿವಾಯ ಓಂ ನಮಃ ಶಿವಾಯ |

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಓಂ ನಮಃ ಶಿವಾಯ ನುಡಿದ ಸಾನಂದರಾಯ

ಕರ್ಮ ಕಳೆದು ಪ್ರಳಯ |

ಖೊಟಿ ಸಟಿ ಸತ್ಯ

ಮಿಥ್ಯ ಭೃತ್ಯ ಭೃತ್ಯರೊಳು

ಶಿವ ಹನ ನಮ್ಮ ಗೆಳೆಯ ||1||

ಶಿವನಾಮವನು ನುಡಿಯದ ಮಾನವ |

ಬಚ್ಚಲ ಕುಣಿಯಂತೆ

ಹರನಾಮವನು ನುಡಿಯದ ಮಾನವ

ಹಾಳು ದೇಗುಲದಂತೆ ||2||

ದೇಶದೊಳಗೆ ನಮ್ಮ ವಾಸ ಸಿರಗಾಪೂರ |

ಈಶ ವೀರಣ್ಣ ದೇವರ

ಮರಳು ಮಾನವ ಜನ್ಮ ಮರಳಿ ಬಾರದಂತೆ

ಕರ್ಮ ಕಳಿಯೊ ಪೂರ ||3||

ಹೆಂತಾ ಗಾರುಡಿ ಗಗನೇಶಾ |

ಮಮ ಅಂತರ ತೋಶಾ

ಅಕ್ಷಯಾಂಬರ ಅಗಣಿತ ಅಮರೇಶಾ

ಅದ್ವೈತದ ವೀಶಾ ||1||

ಭೃಕುಟ ಸ್ಥಾನದಿ ಭವಳೇಶ |

ಈ ಭವಕ ವಿನಾಶ

ಏಕಟ ಮಾನಸದಿಂ ಬಸವೇಶಾ

ಕಂಡಿದ ಸಂಗಮೇಶಾ ||2||

ದೇಶದೊಳಗೆ ಸುವಿಲಾಶ |

ಸಿರಗಾಪೂರ ವೀಶ

ವೀರೇಶ್ವರ ಮಾಡೆನ್ನಾಶಾ

ಕಡೆಗಾಣಿಸೊ ವೀಶಾ ||3||

ಹರ ಹರ ನಿನ್ನಾ ಹರುಷದಿ ಧ್ಯಾನಾ |

ಕೊಡು ನಿನ್ನ ದರುಶನಾ

ದೇವಾ ಕೊಡು ನಿನ್ನಾ ದರುಶನಾ ||ಪಲ್ಲ||

ಹೊತ್ತು ಹೊತ್ತಿಗೆ ನಿನ್ನ ಸುತ್ತಲು ಸುಳಿಯುವೆ |

ತತ್ವದಮೃತ ಕುಡಿಸೆನ್ನಾ ||1||

ಕಿವಿ ಇದ್ದು ಕಿವುಡ ಕಣ್ಣಿದ್ದು ಕುರುಡ |

ಕರುಣಿಟ್ಟು ಕಾಪಾಡು ವೃಷಭರೂಢ ||2||

ಧಾತ್ರಿಯೊಳಗೆ ಶಿವರಾತ್ರಿ ಸಿರಗಾಪೂರ |

ರಾತ್ರಿ ಹಗಲು ವೀರೇಶನ ಭಜನಾ ||3||

ಗುರುದೇವ ಪಾಲಿಸೊ ದಯದಿ |

ಪರದೈವ ಇಲ್ಲವೊ ಜಗದಿ ||ಪಲ್ಲ||

ಬೇಕಾಗಿರುವಿ ಜನರಿಗೆ ಮುದದಿ |

ಗುರು ಆಗಿ ಜಗದೊಳು ಮೆರದಿ ||1||

ಎನ್ನಯ ಅಪರಾಧ ಕ್ಷಮಿಸಿ |

ಕುನ್ನಿಯ ಗುಣವನು ತ್ಯಜಿಸಿ

ಅನ್ಯಾಯ ಮಾರ್ಗವನು ಬಿಡಿಸಿ |

ಮನ್ನಿಸಿ ಜಗದೊಳು ಇರಿಸಿ ||2||

ಸಲ್ಲೆ ಸುಂದರ ಸಿರಗಾಪೂರವಾಶ |

ನಂದ್ಯಾಡದ ಗುರು ವೀರೇಶ

ಆನಂದದಿ ಕೊಡು ಉಲ್ಲಾಸ

ಸಂದಿಲ್ಲದೆ ಕೊಡು ಸಂತೋಷ ||3||

ಹರ ಹರ ಗುರುವಿನ ಧ್ಯಾನ |

ಈ ಧರಣಿಯೊಳು ಕಹಿ ವಿಷ ಕಡಿತಾನಾ ||ಪಲ್ಲ||

ಶಿವನೆ ಶಿವನೆ ಎಂದು ಭವದಿ ಬಳಲುತ ಬಂದು |

ಇವನ್ಯಾರೆಂಬುದರಿತು ತಿಳಿದುಕೊಳ್ಳೊ ನಿಂದು ||ಅ. ಪ||

ಆದಿಯಿಂದಲತ್ತತ್ತ ನಿನ್ನ ನಾಮ |

ಈ ಮೇದನಿಯೊಳು ಕಂಡಿಲ್ಲ ಪರಬ್ರಹ್ಮ

ಕಂಡಿದ್ದೆ ಬ್ರಹ್ಮವ ನೆನಸಿ ಕಾಣದ ಕಲ್ಯಾಣವ ಸ್ಮರಿಸಿ

ಕ್ಷೋಣಿಯೊಳು ಹೋಗ್ಯಾರ ಹೀಗೆ ನೆನಿನೆನಿಸಿ ||1||

ನೆನಿದರೆ ನೆನಪಿನೊಳಿರುತಿಹುದೊ |

ನಿನ್ನರತಿರೆ ಎನಗೇನು ಮಾಡುವದೊ

ನಾನೇ ನೀನಾದ ಮೇಲೆ ಕಡಿಮಿಲ್ಲ ಲೋಕದ ಮೇಲೆ

ಬುಡಮೇಲಾಗಿ ನಡದಾದ ಲೋಕ ಶಿವನಲ್ಲೆ ||2||

ದೇಶದೊಳು ವಾಸಾದ ಸಿರಗಾಪೂರ |

ಈಶ ವೀರೇಶ್ವರ ದೇವರ

ದಾಸನ ನುಡಿಗಳಿಗೆ ಲೇಸು ಪಾಲಿಸೊ ಎನ್ನ ಪೊರೆಯಯ್ಯಾ

ಪೋಷಿಸಿ ನೀ ನನ್ನ ಬೇಸರಿಸದೆ ಬಂದು ||3||

ಶಿವಾ ನಿನ್ನಾಟಾ ಸೆನಿಯಕಿನ್ನಾ ನೇಟಾ |

ತಿಳಿಯದೆ ಅಕಟಕಟ ||ಪಲ್ಲ||

ಭಿಕುಟ ತಿಳಿಯದೆ ಕೆಟ್ಟೆನಟಕ |

ರವಿ ಶಶಿಗಳ ಪ್ರಭೆಯೇನು ||1||

ಮೂರು ಬಣ್ಣದಿ ಕಾಣುವದು

ನಿನ್ನಾಟ ತಿಳಿಯದೆ ಕೆಟ್ಟೆನಕಟ ||2||

ಕಡಿ ನರ ಜನ್ಮಿದು ಪೊಡವಿಯೊಳುದಿಸಿ |

ಪಡಿ ಪರಮಾಮೃತವಾ ಏ ಮಾನವಾ ||3||

ದೇಶದೊಳಗ ಸುವಿಲಾಸ ಸಿರಗಾಪೂರ |

ಈಶ ವೀರಣ್ಣ ದೇವರ ಮಹಾವೀರ ||4||

ಪ್ರಭು ನಿನ್ನ ಪಾದವ ನಂಬಿರುವೆ |

ಪರತತ್ವದಮೃತವ ಕುಡಿಸೆನಗೆ ತಂದೆ ||ಪಲ್ಲ||

ಪರ ಹಿತಕ ದುಡಿಕೊಂಡವರ |

ಪರಿಯಂತು ಹೇಳಲಿ

ಎನ್ನ ಹಿತಕ ದುಡಿಕೊಂಡವರ

ಯಾರಂತ ತಿಳಿಯಲಿ ||1||

ಹಲವರು ಕೆಲವರೊಳು ಉಂಡಿದ್ದೆನಗೆ |

ಸಲಹುವವರ್ಯಾರೆಂದು ಚಿರ ಕಾಲಗಳದೆ

ಹಲವರ ಹಂತಿಲಿ ದುಡಿದು ಹಾರಿ ನಡದೆ

ಹಸಿಗುಸಿ ಹುಸಿ ಬಿಡಸಿ ಪೂಜೆಗೊಳ್ಳೋ ಪ್ರಭುವೆ ||2||

ಸಾಕಾಯಿತೊ ಶಿವಾ ಎನಗೀ ಲೋಕ |

ಎನಗೆ ಏಕಾಗ್ರ ಎಡಿ ಮಾಡಿ ನಡಿ ಸನಿಕಾ

ದೇಶದೊಳಗ ಸುವಿಲಾಸ ಸಿರಗಾಪೂರ

ವೀಶ ವೀರೇಶನ ಕರ ಪಿಡಿಯೋ ||3||

ಮಾಡನು ಬಾ ಮಹಾದೇವ ಸಭಾ |

ಬಹುಭಜನಾಮೃತದೊಳು ದುಡಿ-ದುಡಿ ||ಪಲ್ಲ||

ಭವದೊಳು ಹುಟ್ಟಿ ಬಹು ಕರ್ಮಕೆ ತಟ್ಟಿ |

ಭವಳೇಶನ ಪಾದ ಹಿಡಿ ಹಿಡಿ ||1||

ನಶ್ವರ ಕಾಯಾ ಬಿಡದಿದು ಮಾಯಾ |

ಈಶ್ವರನೊಳು ಮುಕ್ತಿ ಪಡಿ ಪಡಿ

ಸೆಡಗರ ಸೊಡರು ಸುಖ ಸ್ವಲ್ಪಿಡರೊ

ಸುಖ ದುಃಖ ಸಮವೆಂದು ನಡಿ ನುಡಿ ||2||

ಕಡಿ ನಮ ಜನ್ಮ ನುಡಿ ಶಿವನಾಮ |

ಪೊಡವಿಗಧಿಕ ಸಿರಗಾಪೂರ ಗ್ರಾಮ

ಒಡೆಯ ವೀರನಡಿ ಕಡು ತವಕದಿ ಹಿಡಿ

ಕರುಣಾಮೃತ ನೀ ಕುಡಿ ಕುಡಿ ||3||

ಜ್ಞಾನದಿಂದೆ ಶಿವನ ಧ್ಯಾನವು ಮಾಡಣ್ಣ |

ಒಲಿವನು ಮುಕ್ಕಣ್ಣ ||ಪಲ್ಲ||

ಅಡಿಗಡಿಗೆ ಶಿವನಾಮ ನುಡಿ |

ಸಂಪೂರ್ಣ ಕೆಡಿಲ್ಲದ ಸ್ತವನ ||ಅ. ಪಲ್ಲ||

ಬಂಧು ಬಾಂಧವರೆಂದು ಬಂಧನಕ ಭದಗೆಟ್ಟಿ |

ಸತ್ಯಕ ಬಿಟ್ಟುಕೊಟ್ಟಿ

ಸತ್ವ ಇದ್ದಷ್ಟು ಆಗ್ತಾದಪ್ಪ ನಿನ್ನ ರೊಟ್ಟಿ

ಸತ್ಯಕ ಸಟ ಎಂದು ದೇಶದಾಗೆ ಹುಸಿಗೆಟ್ಟಿ

ಖರೆ ಖೋಡಿ ನಿನ್ನ ರಟ್ಟಿ ||1||

ಮಾದೇವ ಮರಿ ಹಾನ ಎಂದು |

ಮನಸಿಗ ಬಂದ್ಹಂಗ ಮಾಡತಿ ಕದ್ದ

ನಿನ್ನೊಳಗಹನ ಖುದ್ದ

ಕೆಟ್ಟ ಕೆಲಸ ಮಾಡುತ ನಡದರ ಬಂದು ನಿಂದರ್ತಾನ ಎದ್ದ

ಮಳ್ಳ ಮನಸ ಕಳ್ಳ ಗುಣಕ ಆಗೋದಿಲ್ಲಪ್ಪ ಸುದ್ದ

ಮಾಯ ಮಾತ್ಮರಿಗೆ ಮದ್ದ ||2||

ದೇಶದೊಳಗೆ ನಮ್ಮ ವಾಸುಳ್ಳ ಸಿರಗಾಪೂರ |

ವೀರೇಶ್ವರ ದೇವರ

ದಾಸನ ಮ್ಯಾಲ ದಯ ಇರಲಯ್ಯೊ ಭರಪೂರ

ಖಾಸ ಶಿವನ ಮಗ ರಾಜಕಿ ನಿನ್ನ ಹೆಸರ

ರಾಮ ನಾಮಲಿಂಗ ಧರ ||3||

ಎಂಥಾ ಮಾಯಾ ಮಾಡಿದಿ ಮಹಾರಾಯ |

ತಿಳಿವಲ್ಲದು ಸದಯ

ತ್ರಿಲೋಕದ ಒಡೆಯನೆ ಎನ್ನ ಹೃದಯ ||ಪಲ್ಲ||

ಕೋಟಿಗೊಬ್ಬ ನೇಟಿಯಂವ ಶರಣ |

ಸತ್ಯಕ ತಾ ಕೊಟ್ಟಿದ ಪ್ರಾಣ

ಸರ್ವ ಸಾಧು-ಸಂತರ ಭೋಜನ

ಸಾಗಿತು ಶಿವ ಸಾಂಭ ಕೀರ್ತನ ||1||

ಕೊಟ್ಟಿದಿ ನೀ ನಾಥ ಕುಬೇರಗ |

ಕಾಡಿದಿ ಪರಪರಿಲಿ ಕಬೀರಗ

ಸಂತರೂಟ ಸಂತುಷ್ಟಿ ಅವರಿಗ

ಕಳ್ಳೆಂದು ಕೊಳ್ಳ ಕೊಯ್ಸಿ ಕಮಲಗ ||2||

ಕಡ ತಾಗಿದ ಕಮಲನ ಥಂಡ |

ಕರ ಜೋಡಿಸಿದು ನೋಡಿ ಶಿವಥಂಡ

ಕಣ್ಣಿಲ್ಲದಂವ ಕಂಡಿದ ಶಿವ ಪುಂಡ

ಖರೆ ಅನಬೇಕೊ ಕಲಿ ಪ್ರಚಂಡ ||3||

ಸತ್ಪುರುಷರ ಸಂಗನಾಶಕ |

ಸಂಕೋಚಿತ ಸಂತರೂಟಕ

ಸತ್ತ ಕಮಲ ದಂಡ ರುಂಡಕ

ಕಲಿಸಲು ಜೀವ ಬಂತೊ ಹಿಂದಕ ||4||

ದೇಸಕ ಸಿರಗಾಪೂರ ವಸ್ತಿ |

ವೀಶ ವೀರೇಶನ ಗಸ್ತಿ

ಇಕ್ಕಟಕೀಡಾದಾಂವ ದೋಸ್ತಿ

ಖರೆ ಅನಬೇಕು ಕಡಿ ಖಡೇ ಕುಸ್ತಿ ||5||

ಹಾಲಿನಗಾರಿಗೆ ಹಸಿಕುಳ್ಳ ಹಾಕಿದ |

ಹೊಗೆ ಮುಸಕಿತು ಮನಿಯೊ ||ಪಲ್ಲ||

ಬಗೆ ತಿಳಿಯದೆ ಭವಳೇಶನ ನೆನೆದರೆ |

ಏನಂದಾನ ಧನಿಯೋ ||ಅ. ಪ||

ಹಾಲ ಹರವಿಯನು ಹೊರಗಿಟ್ಟುಕೊಂಡು |

ಒಳಗ ಹಚ್ಚಿದ ಉರಿಯೊ

ಉರಿಯುವ ಜ್ಯೋತಿಯ ಮರಿ ಮಾಡಿತು

ಈ ಗಡಿಗೆ ಒಯ್ದು ಹೊರಗ್ಹೊಡಿಯೊ

ಗಡಿಗೆ ಒಯ್ದು ಹೊರಗ್ಹೊಡಿಯೊ ||1||

ಕುಲಿಗೇಡಿ ಕರಿಬೆಕ್ಕೂ |

ಮಿಡಿ ಮಿಡಿ ಮಿಡುಕುವ ನಡೆ ನುಡಿಗಳ ನೋಡಿ

ಕಿಡಿಗೇಡಿ ಶಿವನಕ್ಕೊ

ಕಿಡಿಗೇಡಿ ಶಿವನಕ್ಕೊ ||2||

ಪಾಲಿಗೆ ಬಂದದ್ದು ಪಾಲಗಾರನೆಂದು |

ಪಡಿ ನಡಿ ಸನಿಕೊ

ಪಡಿ ನಡಿಸನಿಕೊ

ಧರಿಯೊಳು ಸಿರಗಾಪೂರ ಗುರು ವೀರೇಶ್ವರ

ಗಡ ಗಡ ತಾ ನಕ್ಕೊ

ಗಡಗಡ ತಾನಕ್ಕೊ ||3||

ನಗೆ ಬರುತಾದ ನಿನ್ನಾಟವ ನೋಡಿ |

ನಗೆ ಬರುತಾದ ನಿನ್ನಾಟವ ನೋಡಿ

ನಗೆ ಬರುತಾದ ಈ ಜಗ ಮಹಿಮೆಯ ನೋಡಿ

ನಿಗಮಾಗಮ ತ್ರಿಜಗ ಪಾಲಕನೆ ||ಪಲ್ಲ||

ಅಕ್ಷರದೊಳೆರಡಕ್ಷರ ಮೇಲ |

ಚಕ್ಷು ಮಧ್ಯದಲ್ಲಿ ಆದ ಶಿವಲೀಲ

ಸಾಕ್ಷಿ ಹೇಳುತಾರೆ ಸರ್ವರೆಲ್ಲ

ಸಂಕ್ಷಿಪ್ತದಿಂದಿದು ದೊರಕುವದಿಲ್ಲ ||1||

ಪಂಚ ತತ್ತ್ವ ಪುಟ್ಟಿಸಿದಿ ಪಿಂಡ |

ಪಿಂಡಕ ಮಾಡಿದಿ ನವಖಂಡ

ಇರುವತನಕ ಈ ಬ್ರಹ್ಮಾಂಡ

ಸರಿಹೋದ ಮ್ಯಾಲ ಸರ್ವೆಲ್ಲ ದಂಡ ||2||

ನಗೆ ಬರುತಾದ ನಿನ್ನಾಟವ ನೋಡಿ |

ಅವಿರಳ ದೇವರ ಹಾನ ಗುರು ವೀರೇಶ

ಪದವು ಕೇಳಿದರೆ ಪಾಪವು ನಾಶ

ಪೊರೆಯಂವ ಹಾನ ಶ್ರೀಗುರು ವೀರೇಶ ||3||

ಎಷ್ಟು ಹೇಳಿದರೆ ಮನಸು |

ಏನು ಹೇಳಿದರೆ ಮನಸು

ಸುಖವು ಬಿಡಲಿಲ್ಲವೊ |ಪಲ್ಲ||

ಸಕಲ ಸಾಮ್ರಾಜ್ಯವೆಲ್ಲವು ವಹಿಸಿ |

ಬಳಲಿ ಬಳಲಿ ಭವದೊಳು ತೊಳಲಿ

ಮುಂದೆ ಊಹಿಸುವುದೋ ||1||

ಯತಿಯ ರೂಪ ವರಿಸಿ ಮಾತೆ |

ಕ್ಷಿತಿಯನಾಳ್ಪ ನಾಗಭೂಷಿತೆ

ಸತತ ಸಂಗ್ರದೊಳು ದುಡಿದು ದುಡಿದು

ಸುಖವು ಬಿಡಲಿಲ್ಲವೊ ||2||

ಪುರಾಣ-ಪುಣ್ಯ ಕಥೆಗಳು ಮಾಡುತ ನಡೆದರೆ |

ನರರಂಜಿಕಿ ತೋಲೋ

ಪರಬ್ರಹ್ಮನಲ್ಲಿಲ್ಲ ಖ್ಯಾಲೋ

ದೇಶದೊಳಗೆ ಮೇಲ ವೀಶ ವೀರೇಶನ ಲೀಲ

ಹಗಲಿರುಳು ಉಳಿಲಿಲ್ಲವೊ ||3||

ನಿನಗೆ ಏನು ಹೇಳಲಿ ಗುರುರಾಯ |

ಎನಗೆ ನುಡಿನುಡಿ ಒಡಗೂಡದಯ್ಯ ||ಪಲ್ಲ||

ಆಶೆ ಎಂಬೊ ಬ್ರಹ್ಮನ ಬಿಂದು ಬಲಿದು |

ಕಾಶಿ ಎಂಬೊ ತಾಯೊಳು ಬಂದು ಬೆಳೆದು

ಹೇಸಿ ಮಲ-ಮೂತ್ರ ಕೆಲದಿನ ಸವಿದು

ಪಾಶಿ ಸೆರಮನೆಯೊಳು ಸಿಲ್ಕಿ ನವಮಾಸಗಳದು ||1||

ತಾಯಿ ಉದರದಿಂ ಜನಿಸಿ ನಾ ಬಂದು |

ಬಾಯಿ ಬಿಡುತಿದ್ದೆ ಹಸಿದು ಹಾಲೆಂದು

ಮಾಯ ಮುಸುಕಿತ್ತು ಮಲಿಹಾಲ ಕುಡಿದು

ಪ್ರಾಯ ನೆನಪೋಯ್ತು ಎನಗೆ ಅಂದೆ ನಿಂದು ||2||

ಹೊನ್ನು ಹೆಣ್ಣು ಮಣ್ಣಿಗಿ ಮೆಚ್ಚಿ ಮಾಯ |

ಸುಣ್ಣದ ಹರಳ ಕರಗಿದಂತೆ ಕರಗ್ಹೊಯ್ತು ಕಾಯ

ಕಣ್ಣು ಕಿವಿ ಹಲ್ಲಿಗ ಆಯ್ತ್ರಿ ಅಪಾಯ

ಗುರುವೆ ಇಷ್ಟಾದ್ರು ಮಾಡಿಕೊಳ್ಳಲಿಲ್ರಿ ಉಪಾಯ ||3||

ಹಲವು ಯೋಚಿಸಿ ಹಳಬನಾಗಿದ್ದ |

ಮಡದಿ ಮೋಹಕ್ಕೆ ದುಡಿದಾದೇನು ಹದ್ದ

ಎನಗೆ ನಡಿಲಾಕೆ ಬರಲೊಲ್ಲದು ಎದ್ದ

ಗುರುವೆ ಇಷ್ಟಾದರು ಬರಲಿಲ್ಲ ಎನ ಬಾಯ್ಲಿ ಶಿವಶಬ್ದ ||4||

ದೇಶಕಧಿಕ ಸಿರಗಾಪೂರ ವಾಸ |

ಈಶ ವೀರೇಶನ ಕರುಣಾಮೃತ ಪುರುಷ

ಭಾವ-ಭರಿತದಿಂಗೊಳ್ಳನು ಮನುಷ

ಇನ್ನು ಭವಬಾಧೆಯೊಳು ಬಿದ್ದು ಮುಳುಗೊ ಖಾಯೇಸ ||5||

ಪಾಪಿಯ ಮನಸಿಗೆ ಪರಿಪರಿ ವ್ಯಸನ |

ಪರಿಹರಿಸಯ್ಯೊ ನನ್ನ

ಹರ ಹರ ಶಂಭೋ ನೀ ಭಗವಾನ

ಶಿವ ಶಿವ ಶಂಭೋ ನೀ ಭಗವಾನ ||ಪಲ್ಲ||

ಹಗಲಿರುಳು ಹರದೇರ ವ್ಯಸನಾ |

ಹರಿಗೊಡದೆನ್ನ ಮಾಡ್ಯಾರೊ ಮೌನ

ಪರಿಪರಿ ರೀತಿಲಿ ನಡಸ್ಯಾರೊ ಕವನಾ

ಮಕ್ಕಳ ಮರಿಗಳ ಮದುವೆಯ ನೆವನ

ಇಷ್ಟಾದರೂ ಇದು ಬಿಡದಿದು ಸುಮ್ಮನಾ

ಬಡತನ ದೊರೆತನ ಎಂಭೊ ವ್ಯಸನ

ಎಂಬತ್ತು ಲಕ್ಷ ಜನ್ಮದ ವೃಕ್ಷಾ

ಕೊನೆಗಾಣಿಸೊ ಮೋಕ್ಷಾ

ಹರಹರ ಶಂಭೋ ನೀ ಭಗವಾನ

ಶಿವಶಿವ ಶಂಭೋ ನೀ ಭಗವಾನ ||1||

ಅವ್ವ ಅಕ್ಕ ಮಮ ಬಾಂಧವ ಬವಣಿ |

ಬರಗೊಡೆದೆನ್ನ ಬಿಗಿದು ಹೊರಸ್ಯಾರ ಗೋಣೆ

ಸಲಿಗಿ ಕೊಟ್ಟ ಸೊಣಗನಂತೆ ಸುತ್ತುವುದಾಯ್ತೊ ಕ್ಷೋಣೆ

ಪಾರಮಾರ್ಥಿಕ ಸುಖ ಎಳ್ಳಷ್ಟು ಕಾಣೆ

ಬಡತನ ಭಾವನಾ ನೋಡದಿರೊ ನೀನಾ

ಕೊಡು ಸತ್ಯ ಸನ್ಮಾನಾ

ಹರಹರ ಶಂಭೋ ನೀ ಭಗವಾನ

ಶಿವಶಿವ ಶಂಭೋ ನೀ ಭಗವಾನ ||2||

ಮಾಯ ಮೋಸ ಎಂಬೊ ಕಾಯದ ಬಾಜಾರ |

ಬೇಕಿದ್ದ ಮಾಲ ಬೇಡಿದಷ್ಟು ಕೊಡುವರು ತಯ್ಯಾರ

ಆರು ಮಂದಿಗಿ ಮೀರಿದವರು ನಡಸ್ಯಾರ ಭರಪೂರ

ಅವರಿಗಿ ಮೀರಿದವರು ನೋಡದರೊಳಗ ಕಾಣದಿಲ್ಲ ಯಾರ್ಯಾರ

ದೇಶದೊಳಗ ಸಿರಗಾಪೂರ ವೀಶ ವೀರಣ್ಣ ದೇವರ

ಸೋಸಿ ಮತಿ ಕೊಡುವೊ ಭರಪೂರ

ಹರಹರ ಶಂಭೋ ನೀ ಭಗವಾನ

ಶಿವಶಿವ ಶಂಭೋ ನೀ ಭಗವಾನ ||3||

ಚಂಚಲ ಮನಸಿಗಿ ಚಟುವಟಿ ತೋಲ |

ಶಿವ ನಿನ್ನಲ್ಲಿದೆ ಖ್ಯಾಲ

ನೀ ವಲಿ ಕೇವಲ ವಲಿ ಕೇವಲ ||ಪಲ್ಲ||

ನಿನ್ನ ಹೊರತು ಮುನ್ನ್ಯಾವ ದೇವರಿಲ್ಲ |

ಮುಪ್ಪುರರಸ ಮಿಗಿಲ

ಸತ್ಯ ಮಾತು ನಾ ಸಾಕ್ಷಿ ಹೇಳತೀನಿ

ಎದಿ ಅಂತಾದ ಭುಗಿಲಾ

ಧನ್ಯ ಧನ್ಯ ನಿನ್ನ ಧ್ಯಾನಕ್ಕೆಣೆಯಿಲ್ಲಾ

ಎಲ್ಲರೊಳಗೆ ಮಿಗಿಲಾ ನೀ ವಲಿ ಕೇವಲ ||1||

ಜನನ ಮರಣ ಜಗ ಬ್ರಹ್ಮ ಸ್ವರೂಪ |

ಪರಬ್ರಹ್ಮ ಭೂಪ

ಪರಿಪರಿ ಭಕ್ತರ ಪಾವನ ಮಾಡಿದಿ

ತೋರೊ ದಿವ್ಯ ರೂಪ

ತ್ವರಿತದಿ ಹೇಳುವೆ ತೊದಲ ನುಡಿಗಳಿಂದ

ಸುಡು ಎನ್ನ ಕಡು ಕೋಪ

ನೀ ಕಳಿಯೊ ಪಾಪ ಕಳಿಯೊ ಪಾಪ ||2||

ದೇಶದೊಳಗೆ ಸುವಿಲಾಶ ಸಿರಗಾಪೂರ ವೀಶನ ಉನ್ಮನಿಯೊ |

ನೀರಿನಿಂದೆ ನಿಜರೂಪ ತೋರಿದ ವೀರಭದ್ರ ದೊರೆಯೊ

ಪಾರಮಾರ್ಥಿಕದ ಪಂಥದ ದಾರಿಲಿ

ಪರಮಾಮೃತದ ಹನಿಹನಿಯೊ

ಸುರದ್ಹಂಗೆ ಸ್ವಾತಿ ಹನಿಯೊ ಸುರದ್ಹಂಗ ಸ್ವಾತಿ ಹನಿಯೋ ||3||

ಚಿಂತಿ ಪರಿಹಾರ ಮಾಡೋ ಪ್ರಭುರಾಯ |

ಪರಬ್ರಹ್ಮ ಸದಯ

ಚಿಂತಿ ಪರಿಹಾರ ಮಾಡೊ ಪ್ರಭುರಾಯ ಪರಬ್ರಹ್ಮ ಸದಯ ||ಪಲ್ಲ||

ಚಿಂತಿ ಪರಿಹಾರ ಮಾಡು ಪ್ರಭುವೆ |

ಅಂತರಾತ್ಮದ ಕಲ್ಪತರುವೆ

ಭವದಿ ಬಬಲಾದಿ ಚೆನ್ನವೀರನೆ

ಕುನ್ನಿ ಮಾನವರನ್ನು ಪೊರೆಯೊ ||1||

ಜನಿಪ ದುಧನಿಯ ಜನ್ಮ ಎಳಸಂಗಿ |

ಅಲ್ಲಿ ದಿಲ್ಲಿಗೆ ಭೃಂಗಿ

ಭವಳೇಶನೆ ನೀ ಬಂದೆ ಬಬಲಾದಿಗೆ

ಭಕ್ತನೈ ನಿನ ಸತ್ತ ಶಿಸುವಿನ

ವಿಷಯದಾಸೆಯ ಹರಿದು ಪೊರೆಯೊ ||2||

ಚಿನ್ನಯಾತ್ಮಕ ಚೆನ್ನ ಚೆನವೀರ |

ಶಿವಮತದ ಧೀರ

ನಿನ್ನ ಹೊರತಿನ್ನಾರು ಕಾಯುವರ

ಇದನರಿಯದಿರಲ್ ಬದ್ಧ ಭವಿಗಳ

ಹದ್ದು ಕಾಗೆಗಳಿಗಧಿಕ ಕಡೆಯೊ ||3||

ಅಂಗ ಲಿಂಗದ ಸಂಗ ಸಮಾಗಮ |

ಸಿರಗಾಪೂರದ ಗ್ರಾಮ ವೀಶವೀರೇಶನ ಖಾಸ ಮಗ ಕವಿ ನಾ

ಆಸೆ ಹರಿಯುತ ಲೇಸು ಪೊರೆಯುತ

ಈಶನ ಅಡಿಗಡಿಗೆ ನೆನೆಯೊ ||4||

ನೀ ಎನ್ನ ಜೀವನ ಜಗತ್ಪಾಲನ |

ಓ ಓ ಓಂ ಭಗವಾನ ಕೊಡು ಜ್ಞಾನ

ಕಡು ಬಡವಗ ಒಲಿ ನೀನ

ಕೈಲಾಸನಾಥ ಕರುಣ ಪ್ರಖ್ಯಾತ

ಕರ ಮುಗಿವೆನೊ ದಾತ ಕರ ಮುಗಿವೆನೊ ದಾತ ||ಪಲ್ಲ||

ಬಡವರ ಅರಸ ನಿಂದಾದ ಭರೋಸಾ |

ಓ ಓ ಓಂ ಪರಮೇಶಾ ಸುವಿಲಾಶ

ಸರ್ವಕಧಿಕ ಸರ್ವೇಶ

ಸರ್ವರ ಸಿಂಧು ಜಗಾನೆ ನಿಂದೆ

ನಿಗಮಾಗಮದ ತಂದೆ ನಿಗಮಾಗಮದ ತಂದೆ ||1||

ಮಳೆ ಬೆಳಿ ನಿಂದು ಕಳಿ ಊಳಿ ತಂದು |

ಓ ಓ ಓಂ ಅಹುದುಹುದು

ನೀನುಹುದು ಜಗದೊಳಗೆ ನೀನುಹುದು

ದೇಶದೊಳಗ ಸುವಿಲಾಶ

ಸಿರಗಾಪೂರ ವೀಶ ವೀರಣ್ಣ ದೇವರ

ವೀಶ ವೀರಣ್ಣ ದೇವರ ||2||

ಬೇಗ ಬನ್ನಿ ಭಕ್ತರೆಲ್ಲ ಕೂಡಿ ಭಜಿಸುವ |

ರಾಗದಿಂದೆ ಬಸವನನ್ನು ಹಾಡಿ ಹರಿಸುವ ||ಪಲ್ಲ||

ತರಳ ಭಕ್ತರನ್ನು ಸಲುಹಿ ಪೊರೆಯುವಾತನು |

ಪರಮ ಮುಕ್ತಿ ಮಾರ್ಗವನ್ನು ತೋರುವಾತನು ||1||

ಪಾಪಿ ಇದ್ದ ಸ್ಥಾನದಲ್ಲಿ ನಿಲ್ಲಲಾರನು |

ಪಾಪಿ ಜನರ ಸಂಗಕೆ ತಾ ಸೇರದಾತನು ||2||

ದೇವಲೋಕದಿಂದ ಸಿರಗಾಪೂರಕೆ ಬಂದನು |

ಪುಣ್ಯಸ್ಥಳವು ಇರುವುದೆಂದು ವಾಸವಾದನು ||3||

ಶ್ರೀಗುರು ವರನೆ ಭವಳಾಶಂಕರನೆ |

ಭಕ್ತವತ್ಸಲನೆ ಬಂಧನ ಬೈಲ ಮಾಡೊ ಹರನೆ ||ಪಲ್ಲ||

ಆಲ ಮಾಲ ಬಾಲನೆ ಶೂಲಪಾಣಿ ವಲ್ಲಭನೆ |

ತ್ರಿಪುರ ಸಂಹರನೆ ತ್ರಿಶೂಲ ಪಿಡಿದಾತನೆ ||1||

ಜಡೆಯಲಿ ಗಂಗೆಯ ಧರಿಸಿದ ಹರನೆ |

ತೊಡೆಯಲ್ಲಿ ಪಾರ್ವತಿಪತಿ ಶಿವಹರನೆ ||2||

ದೇಶದೊಳಗೆ ನಮ್ಮ ವಾಸುಳ್ಳ ವೀರೇಶನ |

ಈಶ ವೀರೇಶನ ಧ್ಯಾಸ ಮರಿಲಾರೆ ನಾ ||3||

ಜಪಿಸೊ ಜಪಿಸೊ ಜಗನಾಥನನೊ |

ಜಗಪಾಲಕ ಪರಮಾತ್ಮನನೊ ||ಪಲ್ಲ||

ಜಗಲಾಲ ಬೈಲದಲ್ಲಿ ಇಹನೋ |

ಜನನಕ ಜನನ ಮರಣಕ ಮರಣ

ಸದಾ ಸಾಧು ಶಿವಶರಣರ ಸ್ಮರಣ ||1||

ಜಗ ಒಳ ಹೊರಗೊಂದಾಗಿಹನೊ |

ಬಂಧುರ ಭೃಕುಟ ಜನಿಸಿದಿ ದೃಷ್ಟ

ಕಿಂಚಿತ ನೋಟ ನುಡಿ ಅಕಟಕಟ || ||2||

ದೇಶದೊಳಗೆ ಸಿರಗಾಪೂರ ವೀಶ ವೀರೇಶ್ವರನೊ |

ದಾಸಗೆ ಕರುಣ ಇರಲ್ಲಯ್ಯೊ

ಪೂರ್ಣನಾಮದುಚ್ಚರಣ ||3||

ಪಾದ ಪೂಜೆಯ ಮಾಡುವೆ ಪರಬ್ರಹ್ಮ ಮೂರುತಿ |

ಪಾದ ಪೂಜೆಯ ಮಾಡುವೆ ||ಪಲ್ಲ||

ಪಾದ ಪೂಜೆಯ ಮಾಡುವೆ ಪಾಕ ಮನಸದಿಂದ |

ನೇಕ ದೃಷ್ಟಿಯು ಬಲಿದು ಅನೇಕ ಬೆಳಕಾದಂತೆ ||1||

ಸದಮಳ ಸಂಪದಕ ಅಧಿಕ ಹಾನೊ |

ನಿರ್ಗುಣವಾದ ನೀರೆರದು ಬಸಿತ ತಿಳಿದೆನೊ

ಪ್ರಣಮಾ ಪಂಚಾಕ್ಷರಿಯೂ ಪಾದಂಗುಲಿಗೆ ಬರಿದು

ಬಸವಲಿಂಗಾ ಓಂ ಎಂದು ಹನ್ನೊಂದು ಹಾದಿಗೆ ಹಿಡಿದು ||2||

ಒಳ ಹೊರಗೆ ಬಂದಿರುವ ಚಿನ್ನದ ಮೂರ್ತಿ |

ಚಿನ್ನ ಚೆನ್ನವೀರ ಮಹಾದೇವ

ಧನ್ಯ ನಿನ್ನಯ ಪಾದ ಎನ್ನ ಕರದೊಳು ಪಿಡಿದು

ಬನ್ನಿ ಬಿಲ್ವಗಳಿಂದ ಪೂಜೆಗೈಯುವೆ ತಂದೆ ||3||

ಗಂಧ ಅಕ್ಷತ ಮೇಲಿಟ್ಟು |

ಗಂಭೀರವಾದ ಘಮಘಮಿಪ ವರವೀರ ಘಂಟಾ

ಎತ್ತ ನೋಡಿದತ್ತ ಸೋಹಂ ಭಾವದ ಪ್ರಕಟ

ಮುತ್ತಿನಾರುತಿ ಎತ್ತಿ ಬೆಳಗುವೆ ಕರ್ಪುರ ಜ್ಯೋತಿ ||4||

ನಗರಕಧಿಕ ನೈವೇದ್ಯ ಅರ್ಪಿಸಿದೆನೊ |

ಕಾಯಿವಡಿದು ಕಡಿಪದ ಪದ್ಯಾ

ದೇಶದೊಳಗ ಸುವಿಲಾಶ ಸಿರಗಾಪೂರ ವಾಶ

ವೀಶ ವೀರೇಶ್ವರ ಮಾಡೆನ್ನ ಉದ್ಧಾರ ||5||

ಎಂಥ ಪರಿಕಷ್ಟ ಪಡೆದೆ ಪರಬ್ರಹ್ಮ |

ಶಿವ ನಿನ್ನ ನಾಮ ಹರ ನಿನ್ನ ನಾಮ ಅಗಲದಂಥ ಪಿಡಿಸೆನಗ ನೇಮಾ

ಹರಪೂಜೆ ಗುರು ಸೇವಾ ನೇಮ

ಇದರಿಂದ ಹಾರಿ ಹೋದಾಂವ ಹಾನೊ ಗುರುವಿನ ಗುಲಾಮ ||1||

ಇಷ್ಟ ಪ್ರಾಣ ಎಂಬೊ ವಿಷಯದ ತೇರು |

ಹಮ್ಮಗಮ್ಮೆಂಬೊ ಮಿಣಿ ಹಚ್ಚಿ ಎಳೆದಾರರೆಲ್ಲರು

ತೇರು ಮುರಿದು ಆಗಿ ಹೋಯ್ತೊ ಚಿದರು

ಸತ್ಯ ಚಿತ್ತಾನಂದೆಂಬದು ಇಡಲಿಲ್ಲವರು ಕದರು ||2||

ಉಂಡಿದ್ದು ಉಂಡೆಪ್ಪ ನೀ ದಿನ್ನ ತೊಳೆದೂ |

ಕಂಡಿದ್ದೆಲ್ಲ ನೂಕಲಿ ಕತಿಸಿ ಹೊಡಿ ಧೂಳಿ ಜಿಗಿದು

ಸೆಂಡಿಗೆ ಸಿರಗಾಪೂರಕೊಗೆದು

ದಂಡನಾಯಕ ವೀರನಾ ಪಾದವ ಮೆರದು ||3||

ಸತ್ಯ ಶರಣರ ನೆಲಿಯೊ ಮುತ್ತಿಗಿ ಮುಂದಾಗಿದ ಬೆಲಿಯೊ |

ನೆಲಿಗಾಣದು ನಾಳಿಂದೆಲ್ಲ ಸುಳ್ಳೆ ಸುಳ್ಳೆ

ಇದು ಆದಿಯಿಂದ ಬೆಳಿಯುತ ಬಂದದ ಯಾದಿ ಬೆಳ್ಳಿ

ಕಡಿ ಜನ್ಮಕ ಬಾರದು ಮನುಜ

ಕಂಡು ಹಿಡಿ ಶಿವಶರಣರ ಪೂಜಾ

ಪತ್ರಿ ಪುಷ್ಟ ಸುಗಂಧ ಲೇಪನ ಹೊಗಿ ಹೊಗಿ ||1||

ಬಂಧು ಬಳಗ ಸ್ವಾರತ ನಂಬಿ ಉಬ್ಬಿ ಉದುರಿ ಆಗುತಿ ಗೊಂಬಿ |

ಉಡುರಾಜ ಗುರುವಿನ ಪಾದಕ ಬಾಗಿಬಾಗಿ

ಕಡು ಶಡಗರದಿ ಪೂಜಾ ಮಾಡುದಕ ಹೋಗಿ ಹೋಗಿ

ಅರ್ಧ ಹೊತ್ತಿಗಾಗುವ ಪೂಜಾ

ಅನುದಿನ ಸವಿ ಅಮೃತ ಭೋಜಾ

ಹೊತ್ತಿನೊಳಗೆ ಗೊತ್ತಿ ಹಿಡಿಕೊಳ್ಳೊ ಭೇಗಿ ಭೇಗಿ|| ||2||

ನಾಶವಾಗುವ ದೇಹ ಹೇಸಿ ವಿಷಯಕ್ಕೆ ಮೆಚ್ಚಿ |

ಕಾಶಿನಾಶಿ ಕಡಿಗ ಹತ್ತುವದಿಲ್ಲೊ ಆಗಿ ಹೋಗಿ

ಹೀಗೆ ಭಾಷೆಗೆಟ್ಟ ಬಳಲುವರ ಹರ ಯೋಗಿಯಾಗಿ

ದೇಶದೊಳಗ ನಮ್ಮ ವಾಸ ಸಿರಗಾಪೂರ ಗ್ರಾಮ

ವೀಶ ವೀರಣ್ಣನ ಪಾದ ಹಿಡಿ ನೀಗಿ ನೀಗಿ || ||3||

ನೀನೊಲಿದರೆ ಕಲ್ಲು ಕನಕವಯ್ಯ |

ಕರುಣಾತ್ಮಕ ಜೀಯಾ

ಕೊರಡು ಕಾಷ್ಟ ಮರಿ ಮಾಡಿದಿ ಮಹಾರಾಯ ||ಪಲ್ಲ||

ಬರಡ ಆಕಳ ಸುರದ ಹೈನ ಮಾಡಿದಿ |

ಕಲ್ಲೊಳು ಕಪ್ಪಿಗೆ ಉಣುಸಿ ಸಲಹಿದಿ

ಭಕ್ತಿಗೆ ಭಯಗೊಂಡು ಪೀಠವನಾಳದಿ

ಆಸೇಕ ಬಿದ್ದಿದಿ ಹರಕ ದೋಷಕಾಗಿ ಕೆರೆಮಣ್ಣು ಹೊತ್ತಿದಿ ||1||

ಕುಟಿಲರಿಗಂಜಿ ಕೆಟ್ಟ ಕಾನನ ಸೇರಿದಿ |

ನಿಟಿಲಾಕ್ಷ ಜವದಿ ನಿರುಪಮರಿಗೆ

ನಿಜ ರೂಪದ ತೋರಿದಿ

ನರರೊಳು ಅಧಿಕನೆಂದು ಬಿರದ ಸಾರಿದಿ

ನರರಿಗಂಜಿ ಶ್ರೀಶೈಲ ಸೇರಿದಿ

ನರರು ಹುಡುಕಿ ಹಾಕ್ಯಾರಯ್ಯೊ ಅಲ್ಲಿ ಹಾದಿ

ಅಲ್ಲಿಂದ ನೀ ಹೋದಿ

ಕದಳಿಯ ಬನ ಕಮರಿ ಮಠಕ್ಹೋಗಿ ಸೇರಿದಿ ||2||

ಕದಳಿಯ ಬನ ಕಮರಿ ಮಠ ಅದೊ ತನ್ನಲ್ಲಿ |

ಭಾವದಿಂದ ತೆರಿ ಖೊಲ್ಲಿ ಇಷ್ಟಾದ ಮ್ಯಾಲ ಇಸಕೊಳ್ಳಪ್ಪ ಗುರುಕೀಲಿ

ಗುರುವಿನ ಗುಲಾಮ ಆಗೋತನಕ

ಗುರು ಹೇಳಿದ ಗುರಿ ಹೊಡೆಯೋತನಕ

ಗುರುರಾಯನ ಮುಟ್ಟಿ ಗುರು ಆಗೋತನಕ

ಅರುವು ಬರುವೋತನಕ

ಅರಿವಿನಾಲಯದೊಳು ಚರಿಸ್ಯಾಡೋತನಕ ||3||

ನಂಬಿದ ಮನುಜಗಂಬಲಿ ಉಣಸಿದಿ |

ಅನುದಿನ ದುಡಿಸಿದಿ

ಆಶೆ ಅಳಿದಮ್ಯಾಲಮೃತ ಕುಡಿಸಿದಿ

ಆಶೆ ಎಂಬೊ ಮನ ಅಲ್ಲಲ್ಲೆನಸಿದಿ

ಆಶೆ ಅಳಿದು ಶಾಶ್ವತ ತೋರಿದಿ

ಆಶೆ ಅಳಿವುದಕ್ಕ ಈಶನ ವರ ಬೇಕೊ

ಸಿರಗಾಪೂರಕ್ಹೋಗಬೇಕೊ

ವೀಶವೀರೇಶ್ವರನ ಕೂಸಾಗಿ ದುಡಿಬೇಕೊ ||4||

ಪಾರಮಾರ್ಥಿಕ ಎಂಬೊ ಪರದಾರಿ ಈ ಪೃಥ್ವಿಯಲಿ |

ಪ್ರತಿಯೊಬ್ಬರಿಗಾದ ನಾ ಎಂಬುದು ಭಾರಿ ||ಪಲ್ಲ||

ಹಮ್ಮದಿರು ಕಿಮ್ಮದಿರು ಒಮ್ಮನದಿ ಒಲತ ಗುರು |

ಉನ್ಮನಿಯೊಳಿರುವ ಓರ್ವನಾ ಚಿನ್ಮಯನೆಂದು ಮಾಡರಿ ಸಾಧನಾ ||1||

ನನಗಾದರ ಹೊಳಿತೈತೊ ನಿನಗಾದರ ಹೊಳಿತೈತೊ |

ಕಳಹಂಸ ಗುರುವಿನಾ ಸುಳು ತಿಳಿದರೆ ಹೋಯಿತೊ ||2||

ದೇಶದೊಳಗ ನಮ್ಮ ವಾಸ ಸಿರಗಾಪೂರ ಗ್ರಾಮ |

ಈಶ ವೀರೇಶನ ನಾಮ ನಡಿನುಡಿ ನಿನಗೇನದಾ ಕಮ್ಮಾ ||3||

ಭೋ ಜನನಿ ಭವಾನಿ ಬೇಡುವೆ ವರ |

ನೀ ಪಾಲಿಸು ಸಾಂಬನ ರಾಣಿ ||ಪಲ್ಲ||

ಸರ್ವಕಧಿಕ ಸತ್ಯ ಶರಣಿ |

ವ್ಯಾಘ್ರ ವಾಹನನೆ ಖಡ್ಗಾಭರಣಿ

ಶುಂಭ ನಿಸುಂಭರ ವಧ ಮಾಡಿದಿ

ಮಹಾನ್‍ದೃಷ್ಟ ನೀ ಶ್ರೇಷ್ಠ ಪಾಲಿನಿ ||1||

ಮೊದಲಿಗೆ ಮಧು ಕೈಟಭ ವದನೀ |

ಭಸ್ಮಾಸುರನ ವಿಕೃತಿ ದನಿ

ಮುಕ್ತರನು ಪೊರದಿ ಕೃಪಾಣಿ

ಮೀರಿದವರಿಗೆ ಆದಿ ಮರ್ಧಿನಿ ||2||

ಪುರ ನಿವಾಸ ತುಳಜಾಪೂರದಿ |

ಸ್ಥಳದೊಳುಳಿದಿ ಕವಿ ಭರದಿ

ಬಡವನಿಗೆ ಹಿಡಿಸವ್ವ ಹಾದಿ

ಪೊಡವಿಗಧಿಕ ಪಾರ್ವತಿ ಮೇದಿ ||3||

ಧರಿಯೊಳಧಿಕ ಸಿರಗಾಪೂರ |

ಮೆರಿವ ಮಹಾದೇವ ವೀರೇಶ್ವರ

ಉರಿನೇತ್ರ ಶಿವಪುತ್ರ ಧೀರ

ಪೊರೆದು ಪಾಲಿಸು ಮಾಡೆ ನನ್ನ ಉದ್ಧಾರ ||4||

ತನ್ನಾತ್ಮದಂತೆ ಪರ ಆತ್ಮವು ಬಯಸಿದರೆ |

ತನ್ನೊಳಿಲ್ಲಯ್ಯಾ ಕಡಿಮೆ ||ಪಲ್ಲ||

ದೇವಾಧಿದೇವ ತನ್ನೊಳಿಲ್ಲಯ್ಯ ಕಡಿಮೆ |

ತಾನೆ ತಾನಾದಡೆ ತನಗೇನು ಕಡಿಮೆಯ್ಯೊ ||1||

ನಾ ನಾನೆನ್ನುತೆ ನಾನಾ ನಿನ್ನಗಾಣೆನಯ್ಯ |

ನಾ ನಾನೆಂದೊಡೆ ನನ್ನ ನೆತ್ತಿ ಬಡಿದರಯ್ಯೊ

ನೀ ನೀನೆಂದರೆ ಎನ್ನ ಎತ್ತಿ ಹಿಡಿದರಯ್ಯೊ

ನೀ ನೀನೆಂದರೆ ಎನ್ನ ಎತ್ತಿ ಹಿಡಿದರೆ ಎತ್ತಿ ಹಿಡಿದರಯ್ಯೊ ||2||

ತನು ಮನ ಧನವನು ತನ್ನದೆನ್ನುತ |

ತನುವು ತಾನಾಗಿ ಬೆಂದೆನೈ ದೇವಾಧಿದೇವ

ತನುವು ತಾನಲ್ಲದಿರೆ ತಾನೇ ತಾನಾಗುತಿಹೆ

ತನುವಿನ ನೆನಹಿನೊಳು ಸಿಲ್ಕಿ ನಿನಗಾಣೆನಯ್ಯ ||3||

ದುಶಕ ನಾಶಿಗ ದೇಶವ ಕೊಟ್ಟಿದಡೆ ದೇಶ ದೇಶೆ ದಹಿಸಿ |

ದೇವಾಧಿದೇವಾ ದೇಶ ದೇಶೆಲ್ಲ ದಹಿಸಿ

ದೇಶದೊಳಗ ಸುವಿಲಾಶ ಸಿರಗಾಪೂರ

ವೀಶ ವೀರೇಶ್ವರ ನಾ ಕರವಿಡಿಯುವೆ ತಂದೆ ||4||

ಬಬಲಾದಿ ಚೆನ್ನಬಸವಸ್ವಾಮಿ |

ಭಾಳ ಮಂದಿ ಭಕ್ತರ ಪ್ರೇಮಿ

ಬ್ಯಾಸರಾದ ಬಬಲಾದಿ ಊರಿಗಾ

ಕಂಕ ರೊಟ್ಟಿ ತಂದು ಹಾಕಿದ ತಿಂಬಲ್ದ ಮಂದಿಗ

ಹೊಟ್ಟಿಕಿಚ್ಚ ಖೋಡಿ ಅಂತಾರ ತಿಳಿಯಲದವರಿಗ ||ಪಲ್ಲ||

ಯಾವದು ಮಾತಿಗಾದರು ಹಿಂಗೆ |

ಎಬ್ಬಡ ದಬ್ಬಡ ಹುಚ್ಚನಂಗೆ

ಏನಂತ ತಿಳಿದಿದಿ ಈ ನನ್ನ ಗುರುವಿಗಿ

ಇವನ ರೂಪ ಶಿವನ ಸ್ವರೂಪ ಕಂಡೀತು ಕಣ್ಣೀಗಿ

ಕುಲದ ಕಟಗಿ ಕುಂಡ್ಯಾಗ ಸೇರಿ ಕುಟಿಲ ಗುಣಕಾಗಿ ||1||

ಜಾತಿಗಿ ಹುಟ್ಟಿದ ಬಳಿಕ ನಾವು |

ನೀತಿಗಿ ಹಚ್ಚಿ ನಡಿಬೇಕು

ನೀಚ ಮಂದಿಗಿ ನಿಗದಾಗ ತುಂಬಿಲ್ಲಾ

ಆ ಹುಚ್ಚ ಮೂರ್ತಿಗಿ ಎಷ್ಟ ಬೈದರು ಮನಸಿಗ ಸಿಟ್ಟಿಲ್ಲ

ದೇಶಕ್ಕಧಿಕ ವೀಶ ವೀರನ ಪಾದ ಬಿಟ್ಟಿಲ್ಲ ||2||

ಶರಣು ಶರಣು ಶರಣ ಶಿವಶರಣರ ಚರಣ |

ಶರಣು ಶರಣಾ ||ಪಲ್ಲ||

ಪಾದಕ ಶರಣಾ ಗುರುವಿನ ಸ್ಮರಣ |

ಲಿಂಗಕ್ಕೆ ಮರಣ ಶಿವ ನಿನ್ನ ದಯ ಕರುಣ ||1||

ಬಬಲಾದಿ ಚನ್ನವೀರ ಭಕುತ ದಯಾಧೀರ |

ಇದ್ದಾನು ದೂರಾ ಎನ್ನ ಹೃದಯದಿ ಅಜರಾಮರ ||2||

ಮಾಡಬ್ಯಾಡೊ ಪ್ರೇಮ ಕಾಡು ಕಲಿ ಭೀಮ |

ರೂಢಿಯೊಳಗ ಗಾರುಡಿ ನಿನ್ನ ಆಟ ಬೇರೆ ಭಗವಾನ ||3||

ಪಾರಮಾರ್ಥ ಪರಮಾತ್ಮ ಪಂತರ ಸಿರಗಾಪೂರ ಸ್ವಾತ್ಮ |

ಕರುಣದಿಂದ ಕಾಯೊ ಎನ್ನ ಕಾಡಿ ಕಾಯೋ ಮಹಾತ್ಮಾ ||4||

ಶಿವ ಶಿವ ಹೆಂತ ಚಮತ್ಕಾರ ಸರ್ವೆಲ್ಲಾನು ಆದ ದೇವರ |

ನಿಜ ನೋಡಲು ನೀರ ಬೆಂಕಿ ದೇವರ

ಆದಿಯಿಂದಲಿ ಆಧಾರಕ ಹತ್ತಿ ಆದ್ರೊ ಸರ್ವರ ||ಪಲ್ಲ||

ಸೊನ್ನಲಪೂರದ ಸಿದ್ದರಾಮನ ಘೂಳಿ |

ಸದ್ಯದ ಕರ್ಮ ಹೆಗಲಿಗ ಬಂದಿತೊ ಧಾಳಿ

ಹರೆಹಾರಿ ಹೊಲಸಗೇರಿ ಸೇರಿ

ಹೊಲೆರ ಕೊಯ್ಸಲಾಕೆ ತಯ್ಯಾರಿ

ಶಾಂತಲಿಂಗನ ಸಮಾಧಿ ಸುತ್ತ ಹೊಡೆಯುತ್ತ ಫೇರಿ ||1||

ಗದ್ದಿಗಿ ಸುತ್ತ ಗಗನದ ಜ್ಯೋತಿ |

ಗೆದ್ದು ಹೋಯಿತೊ ಶಿವಪುರ

ಸದ್ಯ ಕಲಿಯುಗದ ವೃಷಭರೂಢ

ಸಿದ್ಧನಾ ಗೂಳಿ ನಾಮವ ತಾಳಿ

ಚನ್ನವೀರ ಶಿವಯೋಗಿ ಕೇಳಿ

ಸಂಕರಾತ್ರಿಗಿ ಜಾತ್ರಿ ಆಗತಾದ ಶರಣರ ಫೋಳಿ ||2||

ಗಂಭೀರ ಮೂರ್ತಿ ಗಗನದ ಸ್ಫೂರ್ತಿ |

ಗುರು ಚನ್ನವೀರ ಮೂರ್ತಿ

ನಂಬಿಗದಿಂದ ನಡೆಸಿದರೊ ಸಿದ್ಧನ ಜಾತ್ರಿ

ದೇಶಕಧಿಕ ಸಿರಗಾಪೂರ ವೀಶ ವೀರೇಶ್ವರ ದೇವರ

ದಾಸನನ್ನು ಖಾಸ ಮತಿಯ ಕುಡುವೊ ಭರಪೂರ ||3||

ಯಾಕ ಬಂದಿದಿ ನೀ ಇಹಲೋಕಕ |

ಸಾಕು ಸಾಕಾಯ್ತು ನೀನೇಕದಿಂದೆ ನಡೆದರ

ಸಂಸಾರ ನೂಕಿ ಬಿಡತಿತ್ತು ||ಪಲ್ಲ||

ಸತ್ಯವಂತರು ನಡೆದ ದಾರಿ ಸದ್ಯ ಬೇಕಾಯ್ತು |

ಸತ್ಯ ಮತ್ತೆ ಗೊತ್ತುಗಾಣದೆ ಚಿತ್ತ ಲಯವಾಯ್ತು ||1||

ಓದಿ ಓದಿ ಮೇದಿನಿಯೊಳು ನಾದ ಬ್ರಹ್ಮಾಯ್ತು |

ಇದರ ಹಾದಿ ತಿಳಿಯದೆ ವಾದ ಚಿತ್ಕಳೆ ಛೇದ ನಡೆಸಿತ್ತು ||2||

ಸೃಷ್ಟಿಯೊಳು ಸಿರಗಾಪೂರ ವಾಸ ಶ್ರೇಷ್ಠ ಕವಿನೇಟ |

ಇದರಿಷ್ಟ ತಿಳಿಯದೆ ಸೃಷ್ಟಿಯೊಳು ತಾ ಕಷ್ಟ ಬಲು ಪಟ್ಟ ||3||

ಮುಪ್ಪಾದ್ಯೋ ಬಂಡ್ಯಾ ಮನಗಂಡ |

ಚಿಲಮಿ ಸೇದದು ಕಲ್ತಿ

ಸುಟ್ಟ ಶರೀರ ಸಣ್ಣಾಗೈತಿ

ನೀ ನಡದಿದ ನಡ್ತಿ ಗಲ್ತಿ ||ಪಲ್ಲ||

ಅಮಲಿನಾನಂದ ಅಂದಾಧುಂದ |

ಚಾರಣೆ ಕೊಂದ ಸೇದಿ ಕೆಲಸ ಬಂದ

ಸ್ವತಾ ಶಿವನೆ ತಂದ ನೀ ಕುಡೊ ನಿನ ಕೈಲಿಂದ

ಆಮೇಲೆ ಬ್ರಹ್ಮಾನಂದ

ಆಗುವುದು ಅಂದಾಧುಂದಾ ||1||

ಉಷ್ಣತಲಿಂದ ಉಬ್ಬಸ ಜೋರ |

ನಿದ್ರೆ ಇಲ್ಲೊ ಕಣ್ಣಿಗಿ ಠಾರ

ನೀ ಕೊಟ್ಟಿದ ಮತಿಯೊ ನೀನೇ ಮಾಡು ಉದ್ಧಾರ

ನಿನ್ನ ಹೊರತ ಕಾಯುವರ್ಯಾರ

ದಿಕ್ಕಿಲ್ಲದ ಎನ್ನ ಹಣಿಬಾರ ||2||

ಇಷ್ಟಾದರೂ ಶರಮಿಲ್ಲ ಜಿಂವಕ |

ಈ ಕಟ್ಟಿಗಿ ಹೊಡಿತದ ಝೋಕ

ದೇಶಕಧಿಕ ಸಿರಗಾಪೂರ ಈಶನ ಪಾದಕ

ಮುಟ್ಹೇಳ್ತಿನಿ ಮನಸಾ ಪೂರ್ವಕ

ನೆನಪ ಬರ್ತದ ಮತ್ತ ಜಂವ ಜಂವಕ ||3||

ತಂಬಾಕ ಸೇದವನಿಗಿ ತಂಬೂರಿ ಹಿಡಿದವನಿಗಿ |

ತದ್ರೂಪ ತಾರ್ತಮ್ಯ ಜ್ಞಾನ ಸುಳ್ಳೆ ಸುಖವಿಲ್ಲ

ಸಂಸಾರ ಹೀನ ||ಪಲ್ಲ||

ಸುಡು ಚಿಂತಿ ಕಡು ಭ್ರಾಂತಿ |

ನಡು ಮಧ್ಯ ವಡಲಂತಿ

ಒಡಗೂಡಿ ನಡೆದರೆ ಧ್ಯಾನ ಪರಶಿವನ

ವಲಿದೆ ವಲ್ಲಭನೆಂದು ಭಲಿರೆ ಬಲ್ಲವನೆಂದು

ಭವಗೆಟ್ಟು ನಡದ್ಯೋ ನೀ ಸ್ವಾನ ಇಲ್ಲೊ ಖೂನಾ ||1||

ನರಜನ್ಮ ದೊರೆಯದೆಂದು ಹೆರರಿಗೆ ಹೇಳುತ ಬಂದು |

ಪೂರಗಾಣಲಿಲ್ಲ ಪಕ್ಕಾಸ್ಥಲವಾ

ಎನಗೆ ಚಿರಕಾಲ ಚರಿಸುವ ಯೋಚನವ

ಚರರು ಚೆನ್ನವರೆಂದು ಚಮ್ಮ್ಮಡಿಯ ಚಲಿಸುತ್ತ

ಚಲನ ಮಾಡಿದಿ ವ್ಯಾಖ್ಯಾನವ ವ್ಯಕ್ತಿ ಘನವಾ

ಗಾಳಿಗೆ ಹೋಗುವ ದೀಪ

ಮಾಳಗಿ ಏರಿ ಇಟ್ಟಂತೆ ನಾಳಿಂದೆ ನಿಜವಿಲ್ಲ ತನುವ ಸುಳ್ಳೆ ನೆನವ ||2||

ಪೃಥ್ವಿ ಅಪ್ಪು ತೇಜ ವಾಯು ಆಕಾಶಂಬೊ ಪಂಚತತ್ವ |

ಪೊಡವಿಯೊಳು ಉದಿಸಿ ಪಂಚಮುಖದ ಪರಮೇಶ್ವರನೆನಿಸಿ

ಶುಕ್ರ ಶೋಣಿತದಿಂದ ಸಂಘರ್ಷ ಸಮಸೃಷ್ಟಿ ಸರಿ ಬಂದು

ಹಿರಿದೆಂಬುವದ್ಯಾಕ ಮಾನವ ಜನ್ಮಕಾ

ತಂಬಾಕ ಸೇದವನಿಗಿ ತಂಬೂರಿ ಹಿಡಿದವನಿಗಿ

ತದ್ರೂಪ ತಾರ್ತಮ್ಯ ಜ್ಞಾನ ಸುಳ್ಳೆ ಸುಖವಿಲ್ಲ ||3||

ಚಂಚಲ ಮನವಿದು ಮುಂಚಿಕ ಎಲ್ಲಿತ್ತು |

ನಿನ್ನ ಚಕಮಕಿ ಚೀಲ ||ಪಲ್ಲ||

ನಿರಂಕಾರದೊಳಗೆ ಆಗಿತ್ರಿ ಗೋಲ |

ಆಕಾರದೊಳಗೆ ಮಾಡ್ರಿ ಖ್ಯಾಲ ||ಅ. ಪಲ್ಲ||

ಭಾವ ಎಂಬುದು ಬಹುವಿಲ್ಲ ಮೇಲ |

ಪಂಚತತ್ತ್ವ ಕೂಡಿಸಿ ಹೊಲಿಸಿದ ಚೀಲ

ರಜತಮ ಗುಣದಿ ಉಕ್ಕಿನ ಗೋಲ

ತೊಳೆದುಕೊ ನಿನ್ನ ಚಕಮಕಿ ಚೀಲ

ಮಾಡಿ ನೋಡ್ರಿ ಖ್ಯಾಲ ||1||

ಯಾರ ಹೊಲಿಸ್ಯಾರ ತಂಗಿ ಚಕಮಕಿ ಚೀಲ |

ಮುನ್ನೊರದರವತ್ತು ಕರಿ ಎಳಿ ನೂಲ

ಅದರಾಗ ಸೇರ್ಯಾತಿ ಘಂಟೆಳಿ ನೂಲ

ಬ್ರಹ್ಮ ನೂತಿದಾನ್ರಿ ರಾಟಲ ಮ್ಯಾಲ

ಮಾಡಿ ನೋಡ್ರಿ ಖ್ಯಾಲ ||2||

ಧರಿಯೊಳು ಸಿದ್ಧ ಸಿರಗಾಪೂರ |

ನೂರು ವರ್ಷಾಯ್ತ್ರಿ ಚೀಲದ ಕೌಲ

ಯಮನಾರು ಬಂದು ಹಾಕ್ಯಾರ ಜಾಲ

ಹಾರಿಸಿ ಬಿಟ್ಟಾರನಿನ್ನ ಚಕಮಕಿ ಚೀಲ

ಮಾಡಿ ನೋಡ್ರಿ ಖ್ಯಾಲ ||3||

ಮಲ್ಲಿನಾಥನ ಮತ್ತೊಬ್ಬ ನೆನಕೊಂಡ್ಯಾ |

ಇದು ಸುಳ್ಳದು ಬಂಡ್ಯಾ

ಮಲ್ಲಿನಾಥನ ಮತ್ತೊಬ್ಬ ನೆನಕೊಂಡ್ಯಾ ||ಪಲ್ಲ||

ಗೋಸಿ ವೇಷ ತಾಳಿ ನಾ ಕಾಶಿಗೆ ಹೋಗಿದ್ದಾ |

ವೀಶನ ಕಾಣಲಿಲ್ಲ ಕಣ್ಣ ಮುಟ್ಟ

ನಾ ಘಾಸಿ ಹೇಳಿದರೆ ನಂದು ಹೋಗಲಿ ಘಟ

ದೇಶದೊಳಗ ನಾ ವಾಸಾಗಿ ಇರೋತನ

ಈಶನ ನಾಮ ನುಡಿ ಪಟಪಟ ||1||

ಶಿವಯೋಗಿ ಸಂಸ್ಥಾನ ಶ್ರೀಶೈಲಕ ಹೋಗಿದ |

ಸಿಗಲಿಲ್ಲ ಶ್ರೀಶೈಲ ಮಲ್ಲಿನಾಥ

ಎಂದಾದರ ಆದ ಘಾತ ಇಂದಾದ್ರ ಬರಲಿ ಮತ್ತ

ಸಂದೇಹವಿಲ್ಲದೆ ನಾಮ ನುಡಿ ಮತ್ತೊಮ್ಮೆ ಮತ್ತ ||2||

ದೇಶದೊಳಗ ನಮ್ಮ ಖಾಸ ಸಿರಗಾಪೂರ |

ವೀಶನ ನಾಮ ನುಡಿ ಜಟಜಟ

ಫಾಸಿ ಕಟ್ಟಿದ ಪಾಮರ ಜನಕ

ದೇಶ ಹರಿದು ಹೋಗತಾದ

ತಾಸಿಗೊಮ್ಮೆ ನುಡಿತಾದ ಕಟಕಟ ||3||

ಮಾದಲಾಂಬಿಕೆ ಉದರದಿ ಉದಿಸಿ ಮಲಿಹಾಲ ಮೆರೆಸೀದ

ಮಲಿಹಾಲ ಮೆರೆಸೀದ ||ಪಲ್ಲ||

ಜಾತವೇದ ಮುನಿ ಸೂತಕರಹಿತದೆ ಆ ದಿವಸ ಆಗಮಿಸಿದ |

ನೀತಿಲೆ ಲಿಂಗ ಕಟ್ಟೊ ಮಾತಿಗೆ ಹೇಳಿದ ನಿತ್ಯ ಪೂಜೆ ಮಾಡಂದಿದ

ನಿನ್ನ ಕಂದನ ಕಂಟಕ ಕಡಿದು ಹೋಗತದ ಖರೆನುಡಿ ಅಂದಿದ ||1||

ಸಪ್ತ ವರುಷ ಸರಿಹೋದವು ಬಸವಾ ಸಾಲಿಗೆ ಹೋಗಿದ |

ಗುಪ್ತದಿಂದ ತನ್ನ ತಾಯಿಗೆ ಕೇಳಿದ ಗಡಬಡ ಏನಾದ

ಮೋರ್ತಮುಂದ ನಿನ್ನ ಮುಂಜಿ ಬಂಧನದ ಅನಾಜ ನಡದಾದ

ಅಮರ ಭಟರು ಕೂಡಿ ಅಧಿಕ ಪ್ರಸಂಗ ನಡಿವದು ನಾಳೀದ

ನಡಿವದು ನಾಳೀದ ||2||

ಕೇಳಿ ಬಸವ ಸಂತಾಪ ತಾಳಿದಾನು ತಾಯಿಗೆ ಹೇಳಿದ |

ನಂದಿ ನೇಮಕಾಗಿ ಹೊಂದಿ ಬದುಕಿದನು ಬ್ರಾಹ್ಮಣ ಅಗಲಂದ

ಭಾಗ್ಯವಾಡಿ ಬಿಟ್ಟು ನಡದಾನೋ ಬಸವಣ್ಣ ಕಲ್ಯಾಣ ಹಾದಿ ಹಿಡಿದ

ಹಾದಿಯಲ್ಲಿ ಹರಿದ್ಹೋಗುವ ಹಾವಿಗಿ ಅಕ್ಕಂದು ಕರದೀದ

ಅಕ್ಕಂದು ಕರದೀದ ||3||

ಅಕ್ಕ ತಮ್ಮ ಅವರೀರ್ವರು ಕೂಡಿ ಹೋದರು ಕಲ್ಯಾಣಕ್ಕ |

ಅಕ್ಕರದಿಂದೆ ಬರೆದ ಶಿಲಾಲಿಪಿ ಓದಿದ ಬೇಶಾಕ

ಚಿಕ್ಕಮಗನ ಕಂಡು ತಕ್ಕ ಮನ್ನಣೆ ಮಾಡಿ ಕರದಾರ ಒಳಿಯಾಕ

ಲೆಕ್ಕವಿಲ್ಲದಷ್ಟು ರೊಕ್ಕವಿರುವುದು ಕುಡು ಬಟ್ಟಲುಳ್ಳಾಕ

ಕುಡು ಬಟ್ಟಲುಳ್ಳಾಕ ||4||

ಪರುಷ ಬಟ್ಟಲು ತಾ ಹರುಷದಿ ಪಡೆದನು ಶರಣರ ಸಾಕದಕ |

ಲಕ್ಷತೊಂಬತ್ತಾರು ಶರಣರ ಪಡೆದನು ಅಕ್ಷಯೆನ್ನುವದಕ

ದೇಶಕಧಿಕ ಸಿರಗಾಪೂರ ವೀಶನ ವಾಸದ ಬಲುಠೀಕ

ಖಾಸಮಗನ ಕವಿ ತ್ರಾಸ ಬರಿಯದು ಕಂಡು ಸಾಕಾಯಿತು ಮನಕ ||5||

ಓ ಓ ಬಾರೊ ಬಾರೊ ಬಾರೊ ಮಲ್ಲಯ್ಯ |

ಬಾರೊ ಮಲ್ಲಯ್ಯ ಮುಖವ ತೋರೋ ಮಲ್ಲಯ್ಯ ||ಪಲ್ಲ||

ಶ್ರೀಶೈಲಕ ಶಿವಶಂಕರ ನೀನಾದಿ |

ಸಿದ್ದರಾಮೇಶಗ ಸಾಕ್ಷಿಯ ತೋರಿದಿ

ಸತ್ಪುರುಷರ ಗಂಡ ಸಿದ್ಧನ ಬೆಂಕಿಯ ಖೆಂಡ

ಸುಳ್ಳೆ ದುಡಕೊಂಡವ ಶಂಡ ||1||

ಸಾತ್ವಿಕಳ ಮಲ್ಲಮ್ಮನ ವರನಿಧಿ |

ಅಕ್ಕಮಹಾದೇವಿಗಿ ಮರಿಯಾದಿ ಉಳಸೀದಿ

ದಾಸಾದಂವ ದಾಸಾ ಧಾತ್ರಿಗ ಅಧಿಕ್ಷನ ಪರಮೇಶ

ಖಾತ್ರಿ ಹೇಳಿದ ಕವಿತೋಶ ||2||

ಭುವಿಯೊಳು ಸುವಿಚಾರ ಸಿರಗಾಪೂರವಾಶ |

ಅಲ್ಲಿ ಅವಿರಳ ದೇವರ ಹಾನ ಗುರುವೀರೇಶ

ಸೋತವನಿಗಿ ಗೆಳೆಯ ಬಿದ್ದವನಿಗೆ ಇಳಿಯ

ಖರೆ ಕಾಣಿಸು ನಿನ್ನ ಕಳೆಯ ||3||

ಸಿರ ಬಾಗುವೆ ಶ್ರೀಶೈಲೇಶ ಹಸುಳನಿಗ ಹಾಲೂಣಿಸೊ |

ನಿರ್ಗುಣದಲಿ ನಿಲಿಸೊ ದುರ್ಗುಣ ಸಂಹರಿಸೊ ||ಪಲ್ಲ||

ಅರುವು ಮರುವು ಅನುದಿನ ಕರಿಸು |

ನಿಲಿಯ ಸಖಾ ತನು ಜೀವೇಶ

ಮಾರ್ಮಿಕ ಮಾಡಯ್ಯ ನಿರಾಶ

ಕಾರ್ಮಿಕ ಕಡಿಗಾಣಿಸು ಈಶ ||1||

ಎಂಬತನಾಲ್ಕು ಯವನಿಯ ಅಂಶ |

ತಿರುಗಾಣಿಸು ತ್ರಿಪುರೇಶ ಪಾತಾಳದಲ್ಲಿ ಜಂಗಮ ಶೇಷ

ಮೋದದಿ ಮಮಲಿಂಗದಿ ಘೋಶ

ಶ್ರೀಶೈಲದ ಶ್ರೀಶಿಖರೇಶ ಗುರು ಆಗಿದಿ ಜೀವೇಶ ||2||

ಭುವಿಯೊಳು ಕವಿ ತತ್ವದ ಭರಣ |

ರವಿ ಶಶಿದಲ್ಲಿ ಬಿದ್ಹಂಗ ಕಿರುಣ

ಸುಧೇನು ಸುರಮುಖಿ ಕರುಣ

ವೀರೇಶ್ವರ ಹಾನ ಶಿವಶರಣ ||3||

ಸುತನ ಸ್ತುತಿಗತಿ ಹಿತದಿ ನೀ ಬೆರಿಯೆ |

ಶಿಶು ಎಂದು ಜರಿಯೆ

ಸತತ ತವಕದಿ ಸಗುಣವಂ ಪೊರೆಯೆ ||ಪಲ್ಲ||

ತುಳಜಾಪೂರ ಸ್ಥಲ ತುಕಾಬಾಯಿಯೇ

ಹಂಬಲ ಹರಿದುಬಿಡುವೆ ಬಾಯಿ

ಅಂಬ ನೀ ಎನ್ನನು ಕಾಯೆ ||1||

ನಂಬಿದವರಿಗೆ ನಂಬಿ ನಡೆದೀದಿ |

ನಗರಕಧಿಕವಾದಿ

ನಿಂದಕರಿಗೆ ನರ್ಕಕಿಳಿಸಿದಿ

ಎನ್ನ ಅಪರಾದವನು ಕ್ಷಮಿಸಿ

ಮೋಕ್ಷ ಮಾರ್ಗದಲ್ಲಿ ಇರಿಸಿ

ತತ್ವದಮೃತಜ್ಞಾನ ಬೆರಸಿ

ಜನ್ಮ ಸಾರ್ಥಕ ಮಾಡೆ ಕಾಶಿ ||2||

ನಗರಕಧಿಕ ನಿಪ್ಪಾಣಿಗೆ ಬಂದಿ |

ನಿನ್ನುದರ ಶಿಸುವಿನ ಸದರ ಸನ್ಮಾತ ಸಾಕ್ಷಿ ಕೋರಿದಿ

ದೇಶಕಧಿಕ ಸಿರಗಾಪುರಕ

ಈಶ ವೀರೇಶ್ವರನ ಪಾದಕ

ದಾಸನಾದರೆ ಲೇಸು ದೊರೆಯುವದು

ವಾಸಿ ಪೇಳೆ ಭೂ ಭವಾನಿ ||3||

ಮಲಿ ಬಂದ ಮ್ಯಾಲ ನೆಲ ನೋಡಲಿಲ್ಲ |

ಮೂಗ ಮುರಕೊಂಡೆನವ್ವ

ಮುದಕ ಗಂಡನ ಮ್ಯಾಲ ಮಣ್ಣ ಹೊಯ್ಯಲೆವ್ವ

ಮೂರು ಮಕ್ಕಳ ಹಡೆದೇನವ್ವ ||1||

ಮಕ್ಕಳ ಒಯ್ದು ಮಣ್ಣಾಗ ಇಡ್ಲಿ |

ಕಿಟಿ ಕಿಟಿ ಹ್ಯಾಂಗ ತಾಳಲೆವ್ವ

ಅತ್ತು ಕರೆದರೆ ಇವರ ಕೈ ಹಿಡಿದು ನಾನು

ಜ್ವಾಕಿ ಹ್ಯಾಂಗ ಮಾಡಲೆವ್ವ ||2||

ಉಳ್ಳಾಕ ತುಸು ಹೊತ್ತಾದರ |

ಎಡ್ಡಿಟ ಆಗಿ ಹೊಯೊಕೊತಾರವ್ವ

ದೇಶದೊಳಗ ಸುವಿಲಾಶ ಶಿರಗಾಪೂರ

ವೀರನ ನಡಕೊಂಡವ್ವ

ಗುರು ಬಂಡ್ಯಾ ನನಗ ಹೇಳಿದನವ್ವ ||3||

ಭಂಡ ರಂಡಿಯ ಗಂಡ ಬಲು ಪುಂಡ ಜಗಶಂಡ |

ಜಗದೊಳು ಜನಸಿದನೆಂಬೊ ಆಸಿ ಹಿಡಕೊಂಡ ||ಪಲ್ಲ||

ಜಗವು ದಗ ಎಂದು ನಗುತ ಹೇಳ್ತಾನ |

ನಿತ್ಯ ನಿನ್ನ ಹತ್ತಿರಲೆ ಸಾವುತಾನ

ಗೊತ್ತು ತಿಳಿಯದೆ ಕತ್ತಿ ಸುಳ್ಳೇನ

ಸತ್ತು ಹುಟ್ಟಿದ ಸಹಸ್ತ್ರ ಜನ್ಮ ||1||

ಹೊನ್ನು ಹೆಣ್ಣಿಗೆ ಮಣ್ಣು ಮುಚ್ಚಂದ |

ಸಣ್ಣಕಿನ ಕಂಡು ಸೆರಗ ಹಿಡಿದು ಒಯ್ದು ಎಳಕೊಂಡ

ಮಾಯ ದ್ವಾರವು ಮುಚ್ಚದೆನ್ನ

ಪ್ರೇಮ ಮೋಹಕ ಮೆಚ್ಚತಾನ

ಹೊತ್ತು ತಿಳಿಯದೆ ಹೊಲ್ತಿ ಅಕ್ಕ

ಜ್ಯೋತಿ ಹೊಯ್ದರೆ ಬೆಳಕೆ ಬೆಳಕ ||2||

ಮೂರ್ಖ ಮನುಷ ಮರು ದಿವಸ ನಾನಿದ್ದ |

ಇಂದು ಒಂದಿನ ಬಂದು ಹೋಗಂದ

ಅಂದಗಾಣದ ಆಶಿ ಖೂಳಿ

ಚಂದ ಶಿವಶರಣಯ್ಯನ ಕೇಳಿ

ಅಂದು ಕಟ್ಟೇನಿ ಮಾಸ ತಾಳಿ ||3||

ದೇಶಕಧಿಕ ಸಿರಗಾಪೂರ ಶಿಸ್ತ |

ಶಿವತತ್ವದಮೃತ ಸಾರ್ಥಕೆನಿಸಿದ ಸ್ವಾಮಿ ವಿರಕ್ತ

ಹರುಷದಿಂದಲಿ ಹರನ ಸುತ್ತಿಯು

ಸ್ಮರಿಸಲುಚಿತವು ಸಾಧ್ಯವೆನಿಪನು

ತರಳನಿಗೆ ತರತರದ ಜ್ಞಾನವು

ಹರಳ ಹರಿಗೊಡದಂತೆ ಸಲವು ||4||

ಕೈಲಾಗಲಾರದ ಎತ್ತ ಕಡಕೊಂಡು ಹಾರ್ತಾದ |

ಹಿಡಕೊಂಡು ಹಳ್ಳಕ ನಡಿಯಿರೊ

ಸಗ್ಗಲಗೇಡಿ ಸತ್ತಾತೆಪ್ಪ ಹೊಡಿಯಬ್ಯಾಡರೊ

ಕಟ್ಟಿ ಮೈಸಿ ಕಾರ್ಹುಣಿಗೊಮ್ಮೆ ಕರಿಯ ಕಡಿಯಿರೊ ||1||

ಮುಂಚಿನ ಹರ್ತಿ ಹೊಡದೇನಂದರ ||

ಮುಂಗಾಲ ಮುಕೊಂಡು ಬೀಳ್ತಾದ

ಮಳಕಾಲ ಕಿತ್ತಿ ಆಗ್ಯಾವ ಹುಣ್ಹುಣ್ಣ

ಮುಂಜಾನಿ ಹಿಡ್ದು ಮೇಂವ್ ನೀರಿಲ್ಲದೆ ಬಾಡ್ಯಾದ ಮೈಬಣ್ಣ

ಕಟುಗರಿಗಿ ಕುಡ್ಲಿ ಖೊಟ್ಟಿ ಹಿಡದೆ ಹೀಂಗ ನಡಸ್ಯಾದ ಹೈರಾಣ ||2||

ದೇಶದೊಳು ಸಿರಗಾಪುರ ಸಿಸ್ತ |

ಈಶವೀರನ ಕಿರುಕುಳ ಎತ್ತ

ಕೆಲೆಸಿಗ ಬಾರದ ಕಡಿಗ್ಹೋಗಿತು ಸತ್ತ

ಈ ಕಲಿವಿಕಿದೊಳಗ ಖರೆಖರೆ ಮುಕ್ತ

ಹೆಗಲಿಗಿ ಬೆನ್ನಿಗಿ ಹೈರಾಣ ಇಲ್ಲದೆ ಹಾರಿ ಹೋಯ್ತು ಮುತ್ತ ||3||

ಕರಿಯ ಘೂಳಿ ಕಾಲ ಕೆದರಿ ಹೊಡೆತೊ ಢುರಕಿ |

ಬೇಖೂಬದ ಬೆರಕಿ

ಹಗಲು ರಾತ್ರಿ ಹೊಲ ತಿಂದು ಮಾಡಿತೊ ಫರಕಿ ||ಪಲ್ಲ||

ಉಪಗಾರಕೊಪ್ಪಿಕೊಂಡು ಒಮ್ಮ ಕುಡಲಿಲ್ಲ ಸುಡಲಿ ಕೊಳ್ಳ |

ತೆಲಿಗೇರ್ಯಾದೊ ಮಳ್ಳ ||1||

ಯಾಳ್ಯಾದಿತೆಂದು ಎಬ್ಬಸಿಲ್ಲ ಕುಂತಿದಕ |

ಬಂದಾದಪ ಮದಕ

ಭಾಳ ಮಂದಿಯಾಗಿ ಬಂಧಿಸಿರೆಪ್ಪ ಇದಕ

ಖೊಟಿಗ ಹೂಡಿದರ ಸತ್ತು ಹೋಗತಾದ ಬಂದುದಕ

ಉಪಗಾರಿಲ್ಲ ಇದಕ ||2||

ಎಷ್ಟು ಹರಕಿ ಮಾಡಿ ಬಿಟ್ಟಿದ ದೇವರಿಗಿ |

ವೀರನಡಿಗೆರಗಿ

ಅಷ್ಟು ಇಷ್ಟು ಸ್ಥಿರವಿಲ್ಲದು ಯಾರಿಗಿ

ಬೇಸದಾಗಿ ಬಗಿಹರಿಯದು ನನ್ನ ಕವಿಗಿ

ಸಿರಗಾಪೂರ ಕವಿಗಿ ||3||

ಪಾಪಿಷ್ಟ ಕ್ವಾಣಿಗಿ ಪಾಪಸಲಿ ಹೊಡಿರೆಪ್ಪ |

ಫಲವಿಲ್ಲ ಖೋಡಿ ಕ್ವಾಣಾ ಹುಟ್ಟಿ

ಮೈಸಿ ಮಾಯಿ ದೇವಿಗಿ ಬಲಿ ಬಿಟ್ಟ

ಧ್ವಂಸಾಗದು ಒಂದಿನ ಸಂಶಯವೆ

ಅನುದಿನ ಸಂಶೋಧನದೊಳು ಸಿಲುಕಿ ಕೆಟ್ಟ

ತಾಳೆನೊ ಕಷ್ಟ ||1||

ನಾಲ್ಕು ಕೊಡದ ಲಗಳಿ ನಾ ಹೊಡೆವ ಕಾಲಕ್ಕ |

ನನ್ನ ಬಾಧಿ ಬಿಡಿಸೊ ಬ್ರಹ್ಮೇಶ

ಭವಳೇಶಗ ಕಾಡಿದಿ ಶನಿ ಮಹೇಶ

ಸಾಧಿಸಿ ಶಿವಕವಿ ತೋಶ ಆದದ್ದು ಅಮರೇಶ

ವಾದಿನೊಳು ಹೋಯಿತೆನ್ನ ಪ್ರಾಣ ಖೋಡಿಕ್ವಾಡಿ ||2||

ಗಾದಿ ಮಾತಿನ ಸುದ್ದಿ ಓದಿಗರಿದ್ದೀರಿ |

ಬುದ್ಧಿಯಿಂದಲೆ ಮುಂದೆಂಟು ಹೇಳಕಿ

ಮುಂದೆ ಮುಂದಂದು ಉರುಳಿತ್ತು ಉಳಕಿ

ದೇಶದೊಳಗ ಸುವಿಲಾಶ ಸಿರಗಾಪೂರ

ಈಶ ವೀರನ ಕ್ವಾಣಿನ ಹೇಳಕಿ ತಿಂದ್ಹಂಗ ಕಳಕಿ ||3||

ನಾನೆಂಥ ಪಾಪಿ ನಾಗೂರಿಗಿ ಹೋಗಿ |

ಮಾಡಿದ ಕಳತಾನ

ತಂದ್ಯೋ ಭಗವಾನ

ಮಾಡಲಾರದ ಈ ನಮ್ಮ ಮನಿತಾನ ||ಪಲ್ಲ||

ಏನು ಹೇಳಲಿ ಅದರ ವರ್ಣನಾ |

ನನಕ ಮೊದಲೆ ಮಾಡಿ ಬಿಟ್ಟಾನ

ಕಳತಾನ ಹೊರಿಸಿ ಹುಡುಕಿ ನೋಡ್ಯಾನ

ಕಂಬಳಿ ಕದ್ದು ಖರೆ ಮಾಡಿ ಹಾಡ್ಯಾನ

ನಂದಂತ ನಮ್ಮೂರಂವ ವೈದಾನ ||1||

ಉಂಡು ಹೋಗಿದ ಊರ ಗುಂಡಿಗಿ |

ಕಳಕೊಂಡವ್ರು ಬಂದ್ರು ಅಲ್ಲಿಗಿ

ಹಾಸಿಗಿ ಹಾಸಿ ಮಲಗಿಸಿ ಹೋಗಿ

ನೋಡಿದ ಕಂಬಳಿ ಇಲ್ಲೊ ಪಾಲಿಗಿ

ಕರಣ ಕೇಳಿ ನಿಂತಿತೊ ಶಿರ ಬಾಗಿ ||2||

ಶೀಘ್ರದಿ ಸಿರಗಾಪೂರಕ ಹೋದ |

ಕದ್ದ ಕಂಬಳಿ ಕಣ್ಣಿಲಿ ನೋಡಿದ

ಎದ್ದ ಕೂಡಲೆ ಕಿಸೆ ಹುಡುಕಿದ

ಕಳದ ಸಿದ್ದ ಖರೆ ಆಗಿದ

ಮುಟ್ಟಿ ಹೇಳತಿನಿ ಶ್ರೀ ವೀಶನ ಪಾದ ||3||

ಕಲ್ಲು ಪೂಜೆಯ ಮಾಡಬಾರದೊ |

ಕಲ್ಲೆಂದು ನುಡಿದರೆ

ಕಲ್ಲು ಕಲ್ಲೆ ಕಲ್ಲೆ ಆಗುವದೊ ||ಪಲ್ಲ||

ಕಲ್ಲು ಕಲ್ಲೇ ಎಂದರವನಿಗೆ ಇಲ್ಲಿ ಎಲ್ಲಿ ದೊರಿಯನಣ್ಣ |

ಇಲ್ಲಿ ಎಂದರೆ ಎಲ್ಲಿ ಹೋಗನು

ಬಲ್ಲೆ ಇರುವನು ಮಲ್ಲಿನಾಥ ||1||

ಕಠಿಣ ಗುಣವೆಂಬ ಕೆಟ್ಟ ಪಾಶಾಣ |

ಕಲುಕುಟಿಗರಣ್ಣನ ಕರೆಸಿ ಮಾಡಿಸು ಕಟಿಸಿ ಬಸವಣ್ಣ

ಬಸವ ಭಾಗ್ಯದ ಭವದ ಶರಣ

ಶರಣು ಶರಣೆಂದವನ ಪ್ರಾಣ

ಆಸೆ ಅಳಿದ್ಹಿಡಿ ಅವನ ಚರಣ

ಆಗ ನಿನಗಿಲ್ಲ ಜನನ-ಮರಣ ||2||

ಪಿಡಿದ ಕಲ್ಲೆಲ್ಲ ಒಡಿದು ಗುಡಿ ಕಟ್ಟೊ |

ವರ ಹಸ್ತ ಗುರುಮುಖ ಪಡೆದ ಮೂರ್ತಿನ ದೃಢದಿ ಮನಸಿಟ್ಟು

ಅಂಗ ಲಿಂಗದೊಳೈಕ್ಯ ಮಾಡೊ

ಸಂಗನೊಳು ಏಕಾಗಿ ಕೂಡೊ

ದೇಶಕಧಿಕ ಈಶ ಈರನ

ಧ್ಯಾಸದೋಳು ಹಗಲಿರುಳು ಆಡೊ ||3||

ಕಲ್ಲು ಕಲ್ಲಿಗೆ ಜಗಳ ನೋಡಣ್ಣ |

ಕಲ್ಲೋಳಗೆ ಜನಿಸಿದ ಜಡದ ಮೂರ್ತಿಗೆ ಜಗದ ಅಭಿಮಾನ ||ಪಲ್ಲ||

ಜಡವು ಸೂಕ್ಷ್ಮವಾದ ಬಳಿಕ |

ಜಗದ ಅಭಿಮಾನ ಹೊರವುದ್ಯಾಕ

ಜಗವು ತನ್ನನು ಜರಿದು ನುಡಿದರೆ

ಹಿರಿದು ಕಿರಿದಂತನ್ನುದ್ಯಾಕ ||1||

ಸಾಧು ಸಂಗದ ವಾದ ನೋಡಣ್ಣ |

ಗುರು ಹಾದಿ ತಿಳಿದರೆ ಗುಡಿಸಲಿದ್ದರೆ ಗೋಪಿ ತನಗಣ್ಣ

ಗುಡಿಯ ಕಟ್ಟಿಸಿ ಒಡಿಯನಾದೊಡೆ

ಗುಡಿಯ ಗುಡಿಸಲದೆಡಿಯ ಇಡುವನು

ಕಡಿಗೆ ಆಗಿದ ಕಡು ಮೃಗ ತಾ

ನಡಿಗೆ ಬಂದರ ನರ್ಕ ತಪ್ಪದು ||2||

ಸುಖವು ಸಿಗದಯ್ಯ ಸುಡು ಈ ಲೋಕದಿ |

ಸುಖಗಳೆ ಆದರೆ ಸೋತು ಸ್ವರ್ಗಕೆ ನಾಕದೊಳು ಮೇದಿ

ಸೃಷ್ಟಿಯೊಳು ಸಿರಗಾಪೂರ ವಾಸ

ಶ್ರೇಷ್ಠ ವೀರನ ಪಾದದಾಸ

ಇಷ್ಟೆ ಹೇಳಿದೆ ಗುರು ವೀರೇಶ ||3||

ಹ್ಯಾಂಗ ಮಾಡಲೆ ನಾ ಹ್ಯಾಂಗ ಮಾಡಲೆ |

ಮನವೆಂಬೊ ಮರ್ಕಟನೇನು ಬಂದಾಂಗ ನಡಿತಾದೊ ||ಪಲ್ಲ||

ಮಾಡತಾದ ಮಡಿತಾದ ಮಡಿ ಮಡಿದು ಪಡಿತಾದ |

ಪೊಡವಿಯೊಳಗೆ ಬಂದು ದುಡ ದುಡದು ಸಾಯತಾದ ||1||

ಪಂಚೇತಿ ನುಡಿತಾದ ಪರಪಕ್ಷ ಪಿಡಿತಾದ |

ಪರಕೆ ಪಾವನ ಮೂರ್ತಿ ಖರೆ ಆದರ ಬಿಡತಾದ ||2||

ಕತ್ತಲಿ ಬೇಡತಾದ ಕಳತಾನ ಮಾಡತಾದ |

ಬೆಳಕಾದರ ಭವಳೇಶನ ಬೆಳಕಿಗಂಜಿ ಓಡತಾದ ||3||

ಅನ್ಯರನ್ನು ಬಯ್ತಾದ ಕನ್ಯಾರನ ಕರಿತಾದ |

ಅನ್ಯರ ಕಂಡರ ಆತಗ ಹೇಳ್ಯಾರಂತ ಅಂಜತಾದ ||4||

ದೇಶದೊಳಗ ನಮ್ಮ ವಾಸುಳ್ಳ ಸಿರಗಾಪೂರ |

ವೀಶ ವೀರೇಶನ ದಾಸಗ ಇಷ್ಟಂತ ಹೇಳ್ತಾದ ||5||

ಮುಕ್ತಿ ದೂರಿಲ್ಲಾ ಮನುಜನಿಗೆ |

ಮೂರ್ಗುಣ ರಹಿತನಿಗೆ ||ಪಲ್ಲ||

ಹೊನ್ನಿಗಾಗಿ ಸಂಸಾರಿ ಕೆಟ್ಟ |

ಹೆಣ್ಣಿಗಾಗಿ ಸಂನ್ಯಾಸಿ ಕೆಟ್ಟ

ಮಣ್ಣಿಗಾಗಿ ಹೊಡೆದಾಡಿ ರಾಜಕಿ ಬಿಟ್ಟ ||1||

ಮಂದಮತಿಯ ನಿಂದಿಪ ನಿಷ್ಟ |

ಒಂದಿನ ಆದ ಈ ದೇಹ ನಷ್ಟ

ಸಂದುಸಂದಿಗೆ ಬರದಿದೆ ಸ್ಪಷ್ಟ

ನಾ ತಿಳಿಯದೆ ಕೆಟ್ಟ ||2||

ಸೃಷ್ಟಿಯೊಳು ಸಿರಗಾಪುರ ಶ್ರೇಷ್ಠ |

ಸತ್ಯ ವೀರನ ಸತ್ಯ ಸುಪ್ರಕಟ

ಕಾಣದಾತ್ಮ ಈ ತರ ಕಷ್ಟ

ಕಂಡವನೆ ಭಾಪು ವರಿಷ್ಟ ||3||

ವೇದ ಸಾಧನ ಮಾಡಿದರೇನು |

ಯೋಗಿಯಾಗಿ ತಿರುಗಾಡಿದರೇನು

ಮೂಜಗದೊಡಿಯನ ರಾಗದಿ ಭಜಿಸುತ

ಹಗಲಿರುಳು ಹೊಗಳ್ಯಾಡಿದರೇನು ||1||

ಸತಿ ಸುತ ಹಿತರನು ಅರಿತಿದರೇನು |

ಯತಿವರನಂತೆ ತಿರುಗಾಡಿದರೇನು

ವೇದಪ್ರಿಯನೂ ಅಲ್ಲ ನಾದಪ್ರಿಯನೂ ಅಲ್ಲ

ಭಕ್ತಿಪ್ರಿಯ ನಮ್ಮ ಶಂಕರನೊ ||2||

ಧರಿಯೊಳು ಪರತರ ಸಿರಗಾಪೂರ |

ಅಲ್ಲಿ ಒಲಿಯಾಂವ ಹಾನ ಬಲು ಬಂಧುರ

ಭಾವ ಭಕ್ತಿಲಿಂದೆ ಸೇವಕನಾದರೆ

ಒಲಿಯಾಂವ ಹಾನ ಗುರುವೀರೇಶ್ವರ ||3||

ಜ್ಞಾನಿಗಿ ಗುರುತವಾಗುವದೊ |

ಅಜ್ಞಾನಿಗಿ ಗುರುತವೆಲ್ಲಿಹುದೊ ||ಪಲ್ಲ||

ಸುಜ್ಞಾನ ಸುತ್ತಲು ಸುಳದಾಡುತಿಹುದೊ |

ಸುಜ್ಞಾನ ಎಂಬುವ ಗುರ್ತ ಹಿಡಿಯುವದ್ಯಾವದೋ

ಸತ್ತವನಿಗೆ ಸ್ವರ್ಗ ಸ್ವಂತ

ಸ್ವರ್ಗದನುಭಾವದೊಳು ಪೊಕ್ಕು ಆದ ನಿಶ್ಚಿಂತ ||1||

ಕೆರೆ ನೀರಿನೊಳು ಕಪ್ಪೆ ಕಮಲಗಳು ಇರುತಿಹವೊ |

ಕಮಲದ ಸುಖವರಿತು ಕೆಸರೇ ತಿಂಬುವದೊ

ಹಸುವಿನ ಹಾಲಿನ ಕೆಚ್ಚಿಗೆ ಹಾಲುಣ್ಣೆ ಹತ್ತಿದರೆ

ಹಾಲಿನ ಸುಖವರಿತು ರಕ್ತ ಹೀರುವದೊ ||2||

ದೇಶದೊಳಗೆ ನಮ್ಮ ಖಾಸ ಸಿರಗಾಪೂರ ಗ್ರಾಮ |

ವೀಶ ವೀರೇಶನ ಮಹಿಮಾಧ್ಯಾಸದೊಳಿರಬಹುದೊ

ಜ್ಞಾನಿಗಿ ಗುರುತವಾಗುವುದೊ

ಅಜ್ಞಾನಿಗಿ ಗುರುತವೆಲ್ಲಿಹದೊ ||3||

ಎಂಥ ಜೇನ ತೋರಿಸಿಕೊಟ್ಟ ನಮ್ಮಾಂವ |

ಜೇನಿಗಿ ಹೊಡಿದು ತಂದು ತಿಂದಿದ ತುಪ್ಪ ಕೊಟ್ಟನ್ಯಾವ

ಜೇನಿಗಿ ಜತನೆಂದು ಮಾಯದ ಮಟ್ಟ ಇಟ್ಟನ್ಯಾಂವ ||ಪಲ್ಲ||

ಜೇನ ಹೊಡೆಯೊ ಜಾಣರು ಜಗದೊಳು ಹಾರಮ್ಮಾ |

ಜೇನಿಗಿ ಅಂಜಿ ಪಂಜ ಹಚ್ಚಿ ಹೊಡಿತಾರೊ ದುಮ್ಮ ದುಮ್ಮ

ಜೇನಿನ ಹಂತಿಲೆಂತ ಹೇಳ್ತಾರೋ ಪರಬ್ರಹ್ಮ ||1||

ಜಗದ ಮಂದಿ ಜೇನಿಗೆ ಹೊಡಿತಾರೊ ತುಪ್ಪದಾಶಾಕಾ |

ಸುಟ್ಟತುಪ್ಪ ತಿಂತಾರಯ್ಯೊ ಸತ್ವ ಇಲ್ಲದಕಾ

ಸತ್ಯ ಶಾಶ್ವತವೆಂಬೊ ಸಾವಿರ ನೊಣಕ ಸುಟ್ಟ ಪಾತಕ ||2||

ಜೇನ ಹೊಡಿಯೊ ಜನರೆಲ್ಲ ಬರ್ರಿ ಸಿರಗಾಪೂರಕ |

ಅಲ್ಲಿ ಖೊಟ್ಟಿ ಗುಣದ ಎಟ್ಟ ಜೇನಿಗಿ ಮೆಟ್ಟಲಿ ಹೊಡೆಯೊದಕ

ಘಟ್ಟಿ ಘಟ್ಟೆಂದು ಗುರುವಿನ ಪಾದಕ ಮುಟ್ಟಿಸಿ ಹೋಗುದಕ ||3||

ನಾಯಿ ಬರುತಾದೊ ಯಪ್ಪಾ ಬಾಯಿ ಬರುತಾದೊ |

ನನಗೆ ನುಂಗಿ ನಿನಗೆ ಸಹಿತ ನುಂಗಿ ಬಿಡತಾದೊ ||ಪಲ್ಲ||

ಉಳಿದ ಮಂದಿಗಿ ಉಚ್ಚಿ ಹೊಯ್ದು ತುಚ್ಛ ಮಾಡ್ತಾದೊ |

ನಮ್ಮ ಮಳ್ಳಗೇಡಿ ಮನಿಯ ನಾಯಿ ಏನು ಹುಚ್ಚಾದೊ ||1||

ಮೈಗಿ ಬಂದು ಮಾಂಸ ತಿಂದು ಮದ ಸೊಕ್ಯಾದೊ |

ನಮ್ಮ ಹುಚ್ಚ ನಾಯಿ ನುಚ್ಚ ತಿಂದು ಅದು ಎಚ್ಚರಿಟ್ಟಾದೊ ||2||

ಅನ್ನಕಾಸೆ ಮಾಡಿಕೊಂಡು ನಾಯಿ ಹೊನ್ನ ಕಾಯ್ದಾದೊ |

ಪರಬ್ರಹ್ಮ ರೂಪಿ ಆದ ನಾಯಿಗಿ ಏನು ಕಮ್ಮದೊ ||3||

ದೇಶಕಧಿಕ ದಾಸ ನಮ್ಮ ಖಾಸ ಸಿರಗಾಪೂರ ಗ್ರಾಮ |

ವೀಶ ವೀರನ ದಾಸ ನಾಯಿಗಿ ಏನ ಹಮ್ಮಾದೊ ||4||

ಬೀಜ ಬಿತ್ತಿ ಬೆಳಕೋತಿರಿ ಅಂಶ |

ಬೀಜದ ಒಂದು ದಿನಸ | ||ಪಲ್ಲ||

ಬೀಜದೊಳಗ ಬಂದಿದ ಬೀಜ |

ಬೆಲೆ ಇಲ್ಲದದ ನರಮನುಜ ||1||

ಬೀಜ ಮುಂಚ ಬೆಳಿಯ ಮುಂಚ |

ಬೇಗ ಹೇಳರಿ ಬೆಡಗಿನ ಇಚ್ಛ

ಗಾಳಿ ಮಿಂಚು ಸಿಡಿಲಿನ ಮಿಂಚು

ಹೇಳರಿ ಶಿವ ಹ್ಯಾಂಗನ ಪಂಚು ||2||

ಭಕ್ತ ಅಧಿಕ ಭವದೊಳು ಮುಂಚೋ |

ಮಾಯಸ್ಥಳ ಮೊದಲಿನ ಇಚ್ಛೊ

ಮುಂದರಿದು ಕೇಳಲು ಗಚ್ಛೊ

ನಮ ನಿಮಗಾಗತದ ಹುಚ್ಚುಚ್ಚೊ || ||3||

ಸೃಷ್ಟಿಯೊಳು ಸಿರಗಾಪೂರ ಗ್ರಾಮ |

ಶ್ರೇಷ್ಠ ವೀರನ ಪಾದದ ಮಹಿಮಾ

ಬೇಸರಿಲ್ಲದೆ ನುಡಿ ಕಡಿನಾಮಾ

ಮರಳಿ ಬಾರದೀ ನಮ್ಮ ಜನ್ಮ ||4||

ನಾ ಮಾಡಿದ ಧರ್ಮ ಬಲವಂತನಾದೊಡೆ |

ನೀ ಮಾಡುವದೇನೊ

ನಗರಕಧಿಕವಾದವ ನೀನೊ ||ಪಲ್ಲ||

ಹಸಿವು ತೃಷೆಗಳಿಗಧಿಕನಾದವನೆ |

ವ್ಯಸನ ಎಸೆದು ಎಸೆದೊಗೆದವನೆ

ಭಸಿತ ಧರನೆ ಭವದೊಳು ನಿನ್ನಾ ಬಂಧಿಸಿದರೆ

ಮಾಡುವುದೇನಾ ||1||

ಹರನೆಂದರೆ ಹರಿಸೋದಿಲ್ಲ |

ನರನೆಂದರೆ ಸ್ಮರಿಸೋದಿಲ್ಲ

ಹರನರ ತಾನಾಗಿ ಹೋದ ಮ್ಯಾಲ

ಹರಿಹರ ಹೊಡಿಬೇಕಾಯಿತೊ ಡೋಲ ||2||

ಸತ್ಯಕ ಸನಿ ಹೋಗೋದಿಲ್ಲ |

ಪಾತಕದೊಳು ನಡೆಸಿರಿ ಡೌಲ

ಯಾತರಂವಾ ನೀ ಆಗಿ ಹೋದಮ್ಯಾಲ

ಸಿರಗಾಪೂರ ವೀರೇಶನೆ ಬಲ್ಲ ||3||

ನೌಕರು ಮಾಡಬೇಕಪ ನಗುನಗುತ |

ಮಾಲಿಕನ ಮಾತ

ಮೀರಲಾರದೆ ದುಡಿಯಪ ಮನಪೂರ್ತ ||ಪಲ್ಲ||

ನೌಕರಿ ಮುಗಿಸಿದಿ ನೂರ ವರುಷ |

ನಡಿನುಡಿ ಎರಡಿಡು ವಳೆ ಸೊಗಸ

ಮಾಲಿಕನಿಗೆ ಆಗತಾದ ಉಲ್ಲಾಸ

ತನ್ನ ಮಗನೆಂದು ತಿಳಿದು

ಹೆಚ್ಚು ಕಡಿಮಿ ಹೇಳೋದಿಲ್ಲ ಕೆಲಸ

ನೆರೆಹೊರಿ ಅವರು ಹೇಳಿದ ಮಾತಾ

ಕೇಳಿದರೆ ಆಗತಾದ ಘಾತ ||1||

ಆರು ಮಂದಿ ಹರ ನಿನ್ನ ಅಣ್ಣ ತಮಕಿ |

ಅವರು ಹರ ಈ ಊರಿಗೆ ಬೆರಕಿ

ಅವರ ಕಡಿ ನೋಡಬಾರ್ದಪ ನೀ ಹಣಕಿ

ಖರೆ ದುಡಿ ನೀ ನೇಕಿ

ನೂರ ವರಸಿಂದು ಸಿಗತಾದಪ ಪಾಕಿ

ಲಕ್ಷ ಯವನಿಯ ತಿರಗೀದಿ ವ್ಯರ್ಥ

ಕಡಿಜನ್ಮಕ ಬಂದಿದಿ ಸೋತ ||2||

ಖರೆ ದುಡಕೊಂಡು ಹಾಯ್ಕೊಳ್ಳೊ ನಿನ್ನ ಹೊತ್ತ |

ಜನ್ಮದಾತು ಸಾರ್ಥ

ನಾ ನಾ ಅಂಬುವುದು ಅಳಿ ಭ್ರ್ರಾಂತ

ಲೋಕದ ಒಡೆಯಾಗಲಿ ಬ್ಯಾಡ

ನಾಕದ ನಾಯಿ ಆಗ್ವದು ಪಾಡ

ಭುವಿಯೊಳು ಸಿರಗಾಪೂರ ಶಾಂತ

ಕವಿಗಳು ಅಲ್ಲಿ ಆಗ್ತಾವ ತುರ್ತ

ಬಲ್ಲವನಿಗೆ ಆಗ್ತಾದ ಇದರರ್ಥ

ವೀರೇಶನ ಹೊರತ ||3|

ಕಾಬಿಸ್ ಕಾಬಿಸ್ ಕಾಬಿಸ್ ಮ್ಯಾಂವ್ ಮ್ಯಾಂವ್ ಮ್ಯಾಂವ್ |

ಹಾಲ ಗಡಗಿಗಿ ಹಾರೊ ಬೆಕ್ಕ ಸ್ವರ್ಗಕ್ಕಿಟ್ಟದ ಧಾಂವ ಧಾಂವ ||ಪಲ್ಲ||

ಹಾಲ ಗಡಗಿಗಿ ಹಾರೊ ಸೊಕ್ಕ ಹಾರಿ ಹಾರಿ ಬಿತ್ತು ನೆಲಕ |

ನೆಲವಿಗ ಹಾರುವಷ್ಟೆ ಸೊಕ್ಕ ಸ್ವರ್ಗಕ್ಕೆ ಹ್ಯಾಂಗ ಹಾರಿತ ಬೆಕ್ಕ ||1||

ಕಾಶಿಗಿ ಹೋಗಾ ಕವನ ಹೇಳಿ ವೇಷ ಸಾಧುರ್ಹಂಗೆ ತಾಳಿ |

ಮೋಸ ಗಿಳಿಗಳಿಗ ಆಸಿ ಹೇಳಿ ದೇಶಕ ಹರಕೊಂಡು ತಿಂತಿತು ಕೇಳಿ ಕೋಳಿ ||2||

ಆವ ದಾರಿಗಾಣದ ಬೆಕ್ಕ ಭಾವ ಸ್ವರ್ಗಕ ಹಾರುವ ಸೊಕ್ಕ |

ವೀರೇಶದಾಸ ಆಗುವ ತನಕ ಮುಕ್ತಿ ಹ್ಯಾಂಗ ದೊರಕಿತ ಹೇಳದಕ ||3||

ಅಜ್ಯಾತ ಮಾಸದ ಪೋರಿ ಹಾಳೊ |

ಆನಂದ ಗುರುವಿನ ಅಧಿಕ ಹಾಳೋ ||ಪಲ್ಲ||

ತ್ರಿಕೂಟ ತ್ರಿನಯನಿ ಪೋರ್ಹ್ಯಾಳೊ |

ತ್ರಿಲೋಕಕ ಬುಡಮೇಲ ಮಾಡ್ಯಾಳೋ ||ಅ. ಪಲ್ಲ||

ಕನಕ ಕಾಂಮಿನಿ ಕಣ್ಣೊಳ ಹಾಳೊ |

ದಿನಕ ದಿನಕ ದಿನ ಸಾಗತಾಳೊ

ಸನಕ ಸಾನಂದರಿಗೆ ಮೀರ್ಯಾಳೊ

ತನ್ನ ಮನಕ ಬಂದವನ ಮದ ತೋರ್ಯಾಳೋ ||1||

ಭದ್ರಕಾಳಿ ಭವಲೋಕದ ಜನನಿ |

ಛಿದ್ರ ಗುಣಕ ಸಿಗಸ್ಯಾಳೊ ಕ್ಷೋಣಿ

ದೇಶಕ ಸಿರಗಾಪೂರ ಶೂಲಪಾಣಿ

ನಮ್ಮ ವೀಶ ವೀರೇಶನ ಅಕ್ಕ ಖಟವಾಣಿ ||2||

ಸುಳ್ಳೆ ಸುಳ್ಳೆ ಚಿಂತನಾ ಆಲೋಚನಾ ಅನುದಿನ |

ಅಭಿಮಾನಕ ಸಾವದು ಬಂತೊ ನಾನಾ ಹೈರಾಣ ||ಪಲ್ಲ||

ಸಂಸಾರಂ ಸ್ವಾರ್ಥ ಅಭಿಮಾನ ಸಾಧುರಂತೆ ಸತ್ಯ ಶೋಧನ |

ದ್ವಿಜ ಮಾರ್ಗಂ ರಚಿತೊ ಸತ್ಯ ವಚನ ||1||

ಅರುವಿಲ್ಲದೆ ಮರುವಿನ ಮನಕ ಡಾಂಭಿಕ ಒಳೆ ತೋರ್ತದ ಜನಕ |

ಶಂಭೊ ಹ್ಯಾಂಗ ಸಿಕ್ಕಾನ ಇದಕ ಬುಟ್ಟಿ ಜಾತ್ರಿ ಬೇಖೂಬಕ ||2||

ಮರಗಮ್ಮನ ಜಾತ್ರಿಯ ಗಂಟು ಎಲ್ಲ ಅಡಗಿ ನೀರೊಳಗುಂಟು |

ಮೈಗ ಹತ್ತದ ಮಹಿಮಾಶಾಲಿಗಿ ಅನಬೇಕೋ ಪರಿಪೂರ್ಣ ||3||

ಒಂದಕ ಎಷ್ಟಾಗೆದ ಮನಸ ದ್ವಂಭಾವದಿ ಬೀಳತಾದ ಕನಸ |

ಶಂಭೊ ಹ್ಯಾಂಗ ಸಿಕ್ಕಾನಿದಕ ಶಿವ ಶಾಶ್ವತ ಪ್ರಶಂಸ ||4||

ದೇಶಕ ಸಿರಗಾಪೂರ ವಾಸ ಈಶ ಶ್ರೀ ವೀರನ ಧ್ಯಾಸ |

ಬ್ಯಾಸರಿಲ್ಲದೆ ಕವಿ ಬರದಿದ ಕೂಸ ಸತ್ಯಕ ಹ್ಶೆರಾಣಾ ||5||

ಕಾಯದ ಮಾಯಾ ಕಳಿಲಿಲ್ಲ ನ್ಯಾಯದ ಮಾರ್ಗ ತಿಳಿಯಲಿಲ್ಲ |

ಬಣ್ಣದ ಮಾತಿಗೆ ಮೆಚ್ಚಿ ನೀವು ಸಾಯತೀರೊ ||ಪಲ್ಲ||

ಆಸಿ ಜನ್ಮಕ ಹೇಸಿಕೆ ಇಲ್ಲ ಮಾಸಿ ನ್ಯಾಯ ಸೋಲಲಿಲ್ಲ |

ಖಾಸ ಗುರುವಿನ ಧ್ಯಾಸದೊಳಗ ಈಸಲಿಲ್ಲವೊ ||1||

ಆರು ಮಂದಿ ಮೀರಿದವರು ಯಾರ ಮಾತ ಕೇಳ್ದವರು |

ಊರ ಮಂದಿ ಅಂಜಿಕಿ ಹಾಕಿ ದೂರಗೈದಿದರೊ ||2||

ಒಬ್ಬರಕೊಬ್ಬರು ಸೇರಲಿಲ್ಲ ಇಬ್ಬರೂ ಸಹನ ಮಾಡಲಿಲ್ಲ |

ಅಬ್ಬರದಿಂದಲಿ ನಡದರ ಒಬ್ಬರು ಉಳಿಲಿಲ್ಲವೊ ||3||

ಆದಿ ಅಂತ ತಿಳಿಯಲಿಲ್ಲ ನ್ಯಾಯದ ಮಾರ್ಗ ಹಿಡಿಯಲಿಲ್ಲ |

ಮೇದಿ ವೀರನ ಪಾದ ಪಡಿದು ದುಡಿಯಲಿಲ್ಲವೊ ||4||

ಯಾರಗೂಡ ಮಾತಾಡಿದರೇನಿಲ್ಲ |

ಯಾರ ದೊಡ್ಡಸ್ತಿನಕಿ ಅವರೇ ನುಡಿವರಲ್ಲ ||ಪಲ್ಲ||

ವ್ಯಕ್ತಿಗತ ಎಲ್ಲರ ಮಾತು |

ಮುಕ್ತಿಗಿ ಮುಂದುವರಿದವ ಸೋತ

ಭಕ್ತಿದಿಂದೆ ನಡಿದಾಂವ ದಾತಾ

ಮೂಕಾದಂವ ಜಗಪ್ರಭೃತ ||1||

ಹಮ್ಮಂಬೊ ಹೈರಾಣ ಸಂತಿ |

ಹರ್ ವ್ಯಕ್ತಿಗೆ ಮಾಯದ ಭ್ರಾಂತಿ

ನಾ ಎಂಬೊ ನಾಮಿಷ ಚಿಂತಿ

ನಡಿ ನುಡಿಗದು ಮಾಡ್ಯಾದ ಕೊರತಿ || ||2||

ದೇಶಕಧಿಕ ಸಿರಗಾಪೂರ ವಾರ್ತಿ |

ವೀರ ವೀರೇಶನ ಕೀರ್ತಿ

ಜಗದೊಳಗೆ ಹರಿದಿತು ಪೂರ್ತಿ

ದಾಸ ಹೇಳಿದ ಮಾಡುತ ಆರ್ತಿ ||3||

ವಿಷವು ಅಮೃತದೊಳಿದ್ದೇನು ಫಲ |

ವ್ಯಾಘ್ರ ವ್ಯಾಲನ ಸಲಹಲೇನು ಫಲ ||ಪಲ್ಲ||

ಕಸವಿಸಿಗೊಳ್ಳುವ ವ್ಯಸನದೊಳು ಬಳಲುವ |

ಯತಿವರರಿರುವದು ಏನು ಫಲ ||1||

ಲೋಕದ ಮನುಜರು ನೇಕತೆಗಳ ನುಡಿದು |

ನೂಕುತ ನೂಕುತ ನಾಕ ತನ್ನಡಕ ಮಾಡಿ

ಕಾಕು ಗುಣಗಳೆಂಬು ಕಲಿಯುಗದೊಳಿದ್ದೇನು ಫಲ ||2||

ಸಕಲ ಸಮದೃಷ್ಟಿಗಳೆಲ್ಲ ಅಖಿಲ ಚೈತನ್ಯದ ಮೂಲಕೊಯ್ಯುತ |

ಕೊರೆಯುತ ಕೊಲಿ ಹೊಲೆವ ಒಡಿಯರಿದ್ದರೆ

ಜಡದೇಹದ ಜನ್ಮವ ತಾಳಿದ್ದೇನು ಫಲ ||3||

ದಕ್ಷದಾಯಕ ವಿರೂಪಾಕ್ಷ ಸಿರಗಾಪೂರ ವಾಸ ರಕ್ಷಕ |

ರಕ್ಷಕಾ ರಾತ್ರಿ ಹಗಲು ನಾಮುಚ್ಚರಿಕ

ಪಕ್ಷವಿಲ್ಲದ ಪೊಡವಿಯೊಳಿದ್ದೇನು ಫಲ ||4||

ಜೀವದ ಹೊರತ ದೇವರಿಲ್ಲೊ ಜಗಕ |

ಜಗಮೈ ಜೈ ಜೀವಕ

ಜನ್ಮ ಜನ್ಮ ತಿರುಗಿತು ಇಲ್ಲೊ ತರಕ ||ಪಲ್ಲ||

ಎಂಬತ್ತು ನಾಲ್ಕು ಯೋನಿಯೊಳು ಜನಿಪ |

ಎಳ್ಳಷ್ಟಾದ್ರೂ ಇಲ್ಲೊ ನೆನಪ

ಕಂಡು ಹಿಡಕೊಂಡು ಹೇಳ್ತಾರ ಡಾಂಭಿಕ

ರೊಕ್ಕ ಕೊಚ್ಚಿಕೊಂಡು ಹೋಗುದಕ ||1||

ಜಾಸ್ತಿ ಮಾತು ಜರಿದಾಡುವುದ್ಯಾಕ |

ಜೈಶಾಲಿ ಆಗದಕಾ

ನಂದು ಹೇಳತೀನ ಛಂದ ಕೇಳಿರಿ ಮುಂದಕ

ಕವಿತ ಕಟ್ಟಿ ಹಾಡುವ ಖ್ಯಾಲ

ಅದರಿಂತಿದ ಕುಂತಿರಿ ಎಲ್ಲ

ಅಂಜಿಕಿ ಅದ ಅನುದಿನ ತೋಲ

ಹುಟ್ಟುವುದಕ ಅದೇನು ಹುಲುಬೀಜಲ್ಲ ||2||

ಅಂಗದ ಮೇಲೆ ಲಿಂಗದ ದೇವರು |

ಒಳಗಿದ್ದವರ್ಯಾರು

ಒಳ ಹೊರಗೊಂದಾಗಿದ್ದ ಒಡಿಯರೊ

ಲಿಂಗದಷ್ಟು ದೇವರು ಹಾನ

ದೇವರಷ್ಟು ಧರಣಿ ಉಂಟೊ

ಸಿರಗಾಪೂರ ವೀರನ ಮುಟ್ಟೊ

ಕದ್ದು ಹೊಗ್ತಾದ ನಮ್ಮ ನಿಮ್ಮ ಕಟ್ಟೊ ||3||

ಪ್ರಪಂಚದೊಳಗೇನು ಕಳವಿಲ್ಲಾ |

ಇದು ತಿಳಿದು ಮಾಡಿದವನೆ ಬಲ್ಲ

ಪ್ರಪಂಚ ಬಿಡು ಅಂತ ಅನ್ನೊದ್ದಿಲ್ಲ

ಪ್ರಪಂಚ ಪಿಡಿದು ಆಗೋ ಗುರು ಚೇಲಾ ||ಪಲ್ಲ||

ತಾರಾ ತಿಗಡಿ ತಾಯಿಗಂಡರಿರುತಾರೊ |

ತಮ್ಮಾ ತಾಯಿಗೆ ಹೋಗಿ ತಂದಿ ತೆಲಿ ಬಡಿತಾರೊ

ಇಂಥಾ ಕೆಟ್ಟ ಕೆಲಸಮಾಡಿ ಬಚ್ಚಿ ಇಡುತಾರೊ

ಮತ್ತ ಮಂದಿ ನಿಂದೆದೊಳೆಗ ಹೊತ್ತಗಳಿತಾರೊ ||1||

ಹೆಂಡರು ಮಕ್ಕಳು ಕಂಡವರು ಮನಿ ಸೇರ್ಯಾರೆಲ್ಲ |

ತಮ್ಮ ಹೊಟ್ಟೆಗಾಗಿ ಕುಟ್ಟಿ ಬೀಸಿ ಬದಕ್ಯಾರಲ್ಲ

ಮಕ್ಕಳ ಕೈಯಾಗ ತಿಲ್ಲಾಕ ಕೊಟ್ಟು ನೋಡಲಿಲ್ಲ

ರಂಡೆರಿಗಾದರ ಉಂಡಿ-ಖೊಬ್ಬರಿ ಕೊಡತಾರಲ್ಲ ||2||

ಸೂಳ್ಯಾರ ಮನಿ ಸೇರಿಕೊಂಡು ಕೂಡತಾರೊ |

ಸೂಳೆರ ಎಮ್ಮಿ ಕುಡೋತನ ಕರ ಬಿಡುತಾರೊ

ಪ್ರಾಯ ಇರೋತಾನ ಕೂಳ ಹಾಕುತಾರೊ

ಪ್ರಾಯ ಹೋದಮ್ಯಾಲ ಒದ್ದು ಹೊರಗ ನೂಕುತಾರೊ ||3||

ಸೂಳೇರ ಮನ್ಯಾಗ ಇದ್ದೇನಂದರ ಜಾಗಿಲ್ಲ |

ಹೆಂಡರ ಮಕ್ಕಳ ಬಲ್ಲಿ ಹೋದೇನಂದರ ಭಾಗಿಲ್ಲ

ಏಕತಾರಿ ದಮಡಿ ಕೈಯಾಗ ಹಿಡದಾರಲ್ಲ

ಕಾವಿ ಭಗವಾ ಹಾಯ್ಕೊಂಡು ಮತ್ರ್ಯಾದ ಮ್ಯಾಲ ನಡದಾರಲ್ಲ ||4||

ಸುಮತಿ ಕೊಡು ಎನ್ನ ದಾಸನಾ |

ಅವಮತಿ ಬರುಬಾರದಯ್ಯ ಕಡಿತನಾ

ದೇಶದೊಳಗೆ ಸುವಿಲಾಸ ಸಿರಗಾಪೂರ

ವೀಶ ವೀರೇಶನ ಮರಿಲಾರೆ ನಾ ||5||

ಸುಳ್ಳೆ ಸಂಸಾರದ ಭ್ರಾಂತಿ ಬಿಡದಿದು ಕಡಿತಾನ |

ಭೇಗು ಬೆಳಗ ಬೇಮಾನ

ಬ್ಯಾಸರಿಲ್ಲದೆ ಮಾಡಿಟ್ಟಾನ ಭಗವಾನ

ನಾಳೆ ನಾಡದ ನಾ ಇರ್ತಿನಿ ಅಂಬಾದಿಲ್ಲ ಖೂನ

ದುಡಿದು ದುಡಿದು ಸತ್ತೆ ಶ್ವಾನ ||1||

ಹುಟ್ಟುತೆ ಹುಸಿಯಾದ ಘಟ್ಟಿಲ್ಲದ ಖಾಯ |

ಮಣ್ಣೀನ ಮಡಕಿಯಂತೆ ಮಾಯ

ಮೋಹಕ್ಕಾಗಿ ಮುಕ್ತಿ ತೋರ್ಯಾನೊ ಶಿವರಾಯ

ಪಾಪ-ಪುಣ್ಯಕ ಕುಸ್ತಿ ಹಚ್ಚಿದಿ ಶಿವರಾಯ

ನಾ ಮುಗಿವೆನೊ ಕೈಯ | ||2||

ಅರುವು ಮರುವು ನಮಗನುದಿನ ಇರುತಿರಲು |

ಅದು ಅರಿತವನಿಗೆ ಬಯಲು

ಅದಕಾಗಿ ದುಡಿದಾಂವ ಅರಿತು ಕುಡಿದಾನು ಹಾಲು

ರುಚಿ ಗೊತ್ತಿಲ್ಲ ಕುಡಿದಂಥವನಿಗೆ ಮೊದಲು

ನೀ ತಿಳಿ ಇದರ ಹೊಯಿಲು ||3||

ಕಳವು ಕಳ್ಳನ ಕೊಂದಿದಂತೆ ಈ ಸಂಸಾರ |

ಖೋಡಿ ಕೊಲ್ಲ ಈ ದರ್ಬಾರ

ತಿಳಿದು ತೀರ್ಥವು ಮಾಡಿಲ್ಲ ಮನಪೂರ

ದೇಶದೊಳಗ ನಮ್ಮ ವಾಸುಳ್ಳ ಸಿರಗಾಪೂರ

ಅಲ್ಲಿ ವೀರೇಶ್ವರ ದೇವರ ||4||

ಹ್ಯಾಂಗ ನುಡದಿದಿ ಹಾಂಗೆ ನಡಿಯಣ್ಣ |

ಈ ಜಗ ರಂಗ ಭೂಮಿಯ ಭೃಂಗಕೂಟದ ಖೂನ ಹೇಳಣ್ಣ ||ಪಲ್ಲ||

ತಾ ಜನನಾಗುದ್ದು ತನಗಿಲ್ಲೊ ಖೂನ |

ತನಗಿರಲೆಂದು ತಳಿ ಹಾಕಿತೊ ಮನಾ

ತಳ್ಳಿಕೋರ ಯಮ ಬಂದು

ಹೊಳ್ಳಿಸಿ ಒಯ್ಯುವಾಗ ನೀರಗುರಳಿಗಿ ನೆನಪಿಲ್ಲಣ್ಣ ||1||

ಎಂಬತ್ತು ನಾಲ್ಕು ಯವನಿಯ ವಡಕಿಚ್ಚೊ |

ಏಕಾಂತಕ ಅಚ್ಚು ಎರಡಾದರೆ ಕ್ರೀಡಾಗದು ಜಗಮೆಚ್ಚೊ

ನೀರು ಆಹಾರ ದಿನಾ ನೆನಿಸಿ ನೋಡಿದರೆ

ನನ್ನಂಜಿಕೆ ನನಗ ಬಿಡದಣ್ಣ ||2||

ಸಟೆಯು ಶಾಶ್ವತ ಖೊಟಿಯು ಭೂಮಧ್ಯ |

ಮಮಹೃದಯದ ವಿದ್ಯೆ

ಎಷ್ಟು ಓದಿದರೆ ಮುಗಿಯದು ಈ ಅಧ್ಯ

ಸೃಷ್ಟಿಯೊಳು ಸಿರಗಾಪೂರ ಶರಣ

ಶ್ರೇಷ್ಠ ಈಶನ ಪಾದದ ಮಹಿಮ

ಎಷ್ಟು ತೊಳಿದರೂ ಇಲ್ಲೊ ಕರುಣ ||3||

ಏ ಮನುಜ ಹೊಲವು ಹಸನ ಮಾಡೊ |

ಏ ಮನುಜ ಹೊಲವು ಹಸನ ಮಾಡೊ ||ಪಲ್ಲ||

ಸತ್ಯ ಬೀಜವನೆ ಬಿತ್ತಿ |

ಕೊರತಿಲ್ಲದೆ ಬೆಳೆಯೊ ಭರತಿ

ನಿತ್ಯ ಈ ಶರೀರಕ ಚೈತನ್ಯದ ವರತಿ ||1||

ನೂರು ವರುಷದ ಕವಲ |

ಮೂರುವರಿ ಎಕರೆದ ಹೊಲ

ಬರೆ ಆದ ಹಂಬಲ

ಹರಿದು ಹೋಗುವದೆಲ್ಲ ||2||

ವಾಸ ನಿಪ್ಪಾಣಿ ವೀಶನ ರಾಣಿ |

ಪೋಷಿಸು ಭಕ್ತರನ ಕರುಣಾ ಭರಣಿ ||3||

ಏನು ಗಮ್ಮತ್ತಾದ ಈ ಜಗದಾಟ |

ಇದು ತಿಳಿದರ ತಿಳಿತಾದ ತಿಳದಷ್ಟ

ತಿಳಿವಳಿಕಿಲ್ಲಪ್ಪ ಎಳ್ಳಷ್ಟು

ತಿಳಿಗೇಡಿತನಕ ಬಿದ್ದಾರೊ ಸಗಟ ||ಪಲ್ಲ||

ಮುಕ್ಕಣ್ಣ ಮಾಡಿದ ಮಾಯಿಂಬೊ ಮಡಕಿ |

ಮೂಜಗಕೆಲ್ಲ ಮುಸುಕಿತೊ ದುಡಕಿ

ಅಳಿದರ ಹಳಿತಾದ ಬಲು ಹಡಕಿ

ಹರಿ-ಹರರಿಗೆಲ್ಲ ಹಾರಸಿತೊ ಫಡಕಿ ||1||

ಮಮತೆ ಎಂಬೊ ಮಾಯಿಯ ಬಲಿಯೊ |

ಬಲಿಯೊಳು ಬಂದು ಬಿದ್ಹಂಗ ಹುಲಿಯೊ

ತಿಳಿದಿಲ್ಯಾರಿಗಿ ಮಾಯಿಯ ನೆಲಿಯೊ

ತಿಳಿಲಾರದವನಿಗಿದು ಯಮ ಝೋಲಿಯೊ ||2||

ಸೃಷ್ಟಿಗಧಿಕ ಶರಧಿಯ ಥಡಿಯೊ |

ಸಿರಗಾಪುರೊಳು ವೀರನ ಗುಡಿಯೊ

ಶೀಘ್ರದಿಂದೆ ಶಿವನ ಪಾದ ಹಿಡಿಯೊ

ಶಿವ ಶಿವ ಎಂದು ಸ್ಮರಿಸುತ ನಡಿಯೊ ||3||

ಆತ್ಮದೊಳಗೆ ಆಡುವ ಪಗಡಿ |

ಮನಿಯು ಆದೊ ತಿಗಡಿ ಬಿಗಡಿ

ಆಶೆ ಅಳಿದು ಹಾಸನ ಗೊಂಗಡಿ

ನಿರಾಶೆ ಎಂಬೊ ಮ್ಯಾಲ ಮನಿ ಹೂಡಿ ||ಪಲ್ಲ||

ಆರು ಅಳಿದು ಆರು ಹಿಡಿ ಕವಡಿ |

ಮೂರು ತಿಳಿದು ವಗಿ ಗುಳಸ್ಯಾಡಿ

ಅಷ್ಟಮದದ ಪಗಡಿ ಮನಿ ಮಾಡಿ

ನಿಷ್ಠಲಿಂದ ವಗಿ ಗುಳಸ್ಯಾಡಿ ||1||

ಅಂಗದ ಅವಗುಣ ಅಳಿ ಖೋಡಿ |

ಲಿಂಗದೊಳು ಮನ ಸುಳಿದಾಡಿ

ಲಡ್ಡು ಬರುತಾದೆಂದು ಸುಳ್ಳಾಡಿಗೀಡಿ

ಬಂದರ ಕೂಡ ಪರವಾ ಇಲ್ಲ ಖರೇ ನಡಿ ||2||

ಪೊಡವಿಗಧಿಕ ಸಿರಗಾಪೂರ ಶ್ರೇಷ್ಠ

ಅಲ್ಲಿ ಅವಿರಳ ದೇವರು ಹಾನ ಸುಪ್ರಕಟ

ತಾ ತಿಳಿದಾಡಿದ ಪಗಡಿಯ ಆಟ

ತಿಳಿದರ ತಿಳಿದಾದ ತಿಳಿದಷ್ಟ ||3||

ನೆರಳುವದ್ಯಾತಕೊ ಈ ದೇಹಕೊ |

ನೆರಳುವದ್ಯಾತಕೊ ಈ ದೇಹಕೊ

ನೆರಳಿ ನೆರಳಿ ಒಂದಿನ ಉರಳಿ ಹೋಗುವ ಕಾಯ

ತರಳತನದಿಂದೆ ಸರಳಾಗಿ ನಡಿಯಲಿಲ್ಲ ||ಪಲ್ಲ||

ಹತ್ತು ಹಾದರ ಮಾಡಿ ತೊತ್ತಿನಂತೆ

ದುಡಿದುಕೊಂಡೆಲ್ಲೊ ಖೋಡಿ

ಹೊತ್ಹೋಗೋ ಯಾಳ್ಯಾಕ ಹೊಡಿದೆಳಿದು

ಒಯ್ಯುವಾಗ ಹಿಡಿಕೊಳ್ಳುವರಿಲ್ಲೊ

ಕಾಗಿಯಾಗಿ ನಡದೆಪ್ಪ ನೆಲಮನಿಗಿ ||1||

ಹತ್ತು ನನ್ನವರಂದಿ ಹೊತ್ತಿಗಾದಾರೆಂದು |

ದುಡಿದುಕೊಂಡೆಲ್ಲೊ ಖೋಡಿ

ಸತ್ತ ಚಿತ್ತಾನಂದ ನಿತ್ಯ ಪರಿಪೂರ್ಣ

ಗೊತ್ತು ಗಾಣದೆಗಳದಿ ಇಹಲೋಕದೊಳಗುಳದಿ ||2||

ಮೋಹಕ ಆದಿ ಮುದುಕ ಮರಸ್ಯಾಳೊ |

ಮಹಾಗುರು ಪಾದೋದಕ

ಮಾಯಾ-ಮೋಹ ನಿನಗ ಸಾಯಾತಾನ ಬಿಡೊದಿಲ್ಲ

ಸಾಕು ನಡಿಯೋ ನೀ ಸಿರಗಾಪುರಕ

ಶ್ರೀಗುರು ವೀರೇಶನ ಪಾದಕ ||3||

ಏ ಮನುಜ ಅಂಗಿರುತನ ಜಗವೊ |

ಜೀವ ಹೋದ ಮ್ಯಾಲ ಲಿಂಗಕ್ಕೆಲ್ಯಾದ ನಿಗವೊ ||ಪಲ್ಲ||

ಈ ಲೋಕ ಆದ ಬಲು ಬಲು ಡಾಂಭಿಕ |

ಆದಿಯಿಂದ ಬಂತಪ್ಪ ಇಲ್ಲಿತನಕ

ಇಷ್ಟಾದ ಮ್ಯಾಲ ನಾಳಿಂದ ನುಡಿತ್ಯಾಕ

ಅಂಜದೆ ನಡಿ ಯಮಸದನಕ ಹೋಗುವದ್ಯಾಕ ||1||

ಮಹನೀಸಯರು ಹೇಳುತಾರ ಒಂದೊಂದು ಬರೆಯೊ |

ಮಾನವ ತಿಳಿಯದಿದರ ಧಗಿಯೊ

ಧರುಣಿ ಧನ ಕದ್ದಾದರು ಎಲ್ಲಿಗಿ ಹೋದಿಯೊ

ನೀ ಹೋದ ತಾನಾ ಬಿಡಲಾರದು ಈ ಭುವಿಯೊ ||2||

ದೇಶದೊಳು ವಾಸದ ಸಿರಗಾಪುರ |

ವೀಶ ವೀರೇಶ್ವರ ದೇವರ

ದಾಸನ ಮಾಡಯ್ಯ ನೀ ಉದ್ಧಾರ

ಒಡೆಯನೆ ಅರಿವು ಕೊಡು ಭರಪೂರ ||3||

ನುಡಿ ನೇಕಿ ನಡಿರಿ ಶಾಕಿ |

ನುಡಿ ತಪ್ಪಿದುರುಳಿವದು ಬೋಕಿ ||ಪಲ್ಲ||

ಹಿಂದಿನ ಶರಣರು ಹೀಂಗಿದ್ದಿಲ್ಲ |

ಭಂಡ-ಹೆಂಡ ಅವರು ಕಂಡುಂಡಿಲ್ಲ

ಬಿತ್ತಿದ ಬೆಳಿಯಷ್ಟು ಬೀಜ ಹಿಡಿದಿಲ್ಲ

ಬೇಖೂಬರ್ಹಂಗ ನೀವು ಮಾಡ್ತಿರಿ ಡೌಲ ||2||

ಹಿಂದು-ಮುಸಲ್ಮಾನ ಭೇದ ಎಲ್ಯಾದೊ |

ದೇವ-ದೈತ್ಯರಲ್ಲಿ ಜಗಳ ಬಿದ್ದಾದೊ

ಅಂದಿಗಿಂದಿಗೆಂದೆಂದಿಗಿ ಮುಗಿಯದು

ರುಚಿಗೊಂಡಿಹ ಜಗ ಶುಚಿಯಾಗದೊ ||3||

ದೇಶದೊಳದ ನಮ್ಮ ವಾಸ ಸಿರಗಾಪೂರ |

ವೀಶವೀರನ ಧ್ಯಾಶದೊಳಿರಬಹುದೊ

ಖಾಸ ಮಗನ ಉಲ್ಲಾಸದಿ ಕಂಡು

ಬೇಸರಿಲ್ಲದೆ ತಾ ಬರದಿರಬಹುದೊ ||4||

ಅಂಗದೊಳಗ ಶಿವಲಿಂಗ ಮೂರ್ತಿಹಾನ |

ಸಜ್ಜನ ಶಿವಜ್ಞಾನ

ಮಂಗಲಾತ್ಮ ಮಹನಿಯರಲ್ಲಿರುತಾನ ||ಪಲ್ಲ||

ಅಂಗಲಿಂಗದನುಭಾವಿಲ್ಲದವನ |

ನಿನಗಿಲ್ಲಿದು ಖೂನ ||1||

ಮಲಮಜ್ಜನದಿ ಆರರಿತವಗ್ಹನ ಖೂನ |

ಅಮೃತ ಸರಿಸವನ

ಅರ್ಧ ತಿಂದು ರುಚಿ ಹೇಳಪ ಖರೆ ನೀನ

ನಾದ ಬ್ರಹ್ಮಗೆ ನಡಸಿದೆಪ್ಪ ನಿನ್ನ ಭಜನ

ನಿನಗಿಲ್ಲಿದು ಖೂನ ||2||

ದೇಶಕಧಿಕ ಸಿರಗಾಪೂರ ಎಡತಡಿಯೊ |

ವೀರೇಶನ ಗುಡಿಯೊ

ವಾಸನರಿದು ಶ್ರೀ ಈಶನ ಪಾದ ಹಿಡಿಯೊ

ದಾಸನೆಂದು ನನ್ನ ಶಿರಸಿಗ ಕರಹಿಡಿಯೊ

ಈ ಜನ್ಮಕ ಕಡಿಯೊ ||3||

ಸದಿ ಹೊಡಿಲಕ ಶಿವನ ಹೊಲಕ ಹೋಗಿದಾ |

ಬದಿಗಿರಲಿ ತಂಬಿಗಿ ಇಟ್ಟರ ಇಡಲಿಲ್ಲ ನಂಬಿಗಿ ||ಪಲ್ಲ||

ಯಾರರೆ ಒಯ್ದರೆಂಬ ವ್ಯಸನ |

ವ್ಯಸನದಿಂದ ಹೊಲ ಆಗದು ಹಸನ

ಸಂಗಟ ಒಯ್ದು ಸದಿ ಹೊಡಿಲ್ಹ್ಯಾಂಗಪ ನಾನ ||1||

ನಿಗಕಿಟ್ಟರ ನಡಿ ಹಿಂದಕ ಬೀಳತಾದ |

ನಿಗಮಾಗಮದ ಸದಿಯೊ

ದ್ವ್ಯೆತ ಗುಣ ಆದ ಎಮಗೆದಿಗುದಿಯೊ

ಕಾಯ ಸುಟ್ಟು ಕರಕಾದರ ತೀರದು ಹೇಯ

ಮಾಯವಿದು ಮುಗಿಯದು ಎಮಗಿದು ||2||

ದೇಶದೊಳಗ ನಮ್ಮ ವಾಸ ಸಿರಗಾಪೂರ |

ವೀಶನ ದಯವಿರಲಿ

ಬರದಿದು ಹಣೇಬಾರಕ ಬರಲಿ

ಮನ ಮಲ್ಲನ ಘನ ಪವನವನರಿಯದೆ

ಏಸುಕಾಲ ಎಡತಾಕಿದರೇನು ||3||

ಶಂಭೊ ನಗರದಲ್ಲಿ ಕುಂಬಾರನಿರುವನು |

ನಂಬಿಗಿ ನಾವೊಂದು ಬ್ರಹ್ಮ

ನಿತ್ಯ ಗಡಿಗಿ ಮಾಡೋದವನ ನೇಮ ||ಪ||

ಮಮಕಾರ ಮಣ್ಣು ತಂದು ನಿರಂಕಾರ ನೀರ್ಹಾಕಿ

ಅಹಂಕಾರ ಎಂಬುವ ಸಲಕಿ ಹಿಡಿದಿದ್ದ

ಮತ್ತು ಹಮ್ಮೆಂಬ ಹೆಂಟಿಗೆ ಹೊಡದಿದ್ದ

ಹೊಡಿದು ಹೊಡಿದು ನೀರ ಬಡಿದು ಮಿದು ಮಾಡಿದ್ದ

ತುಳಿ ತುಳಿದು ಮಾಡ್ಯಾನೊ ಕೆಸರ ಇಲ್ಲೊ ಕಸರ ||1||

ತಿಗರಿ ಗೂಟಕ ತಿರುವಿ ಕೆಸರೊಯ್ದು ಬಡದಿದ್ದ |

ಹೆಸರಿಲ್ಲದೆ ಮಾಡ್ಯಾನೋ ಗಡಗಿ ಮಾಡಿಲ್ಲ ಅಡಗಿ

ತಿಗರಿ ತೂತಿಗಿ ಕಟಗಿ ತುದಿ ಹಚ್ಚಿ ತಿರವಿದ

ತಡಿಯಾದೆ ಮಾಡ್ಯಾನೊ ತರತರ

ತನಗ ದಮ್ಮ ಬಂದರ ಬಿಡತಿದ್ದ ಕುಂಬಾರ

ಕುಲಕೊಂದು ಗಡಗಿಯ ಮಾಡಿ ಕುದಿಯಿಲ್ದೆ ತುಂಬಿಟ್ಟಿ

ಸದಿಯಿಲ್ದಂಗಾಯ್ತವಕ ಸುಡಲಕ

ಖಟಪಿಟ ಕಟಿಗಿಯ ತಂದು ಕಡಿ ಆವಿಗಿ ಸುಟ್ಟಿದ್ದ

ಕಡೆಗಾಣಲಿಲ್ಲ ನನ್ನ ಮನಸ ಇನ್ನೂ ಧ್ಯಾಸ ||2||

ಹಳ್ಳಿಗ್ಹೋಗುವೆನೆಂದು ಡೊಳ್ಳ ತಾ ತುಂಬಿದ |

ಕುಳ್ಳಿಗಳೊಯ್ದಿದ್ದ ನೂರಾರ

ಅಲ್ಲಿ ಕೊಳ್ವರ ಬರುತಾರ ನಾರೇರ

ಬ್ಯಾಳಿ ಕುಳ್ಳಿಗಳೆಂದು ಬೆಲೆಯಿಲ್ಲದೆ ಬಡಿತಾರ

ನೆಲಿಗಾಣಲಿಲ್ಲ ನೋಡ ಖೋಡಿ ಬಂದಿಲ್ಲ ಬೇಡಿ

ಒಂದ್ಹಾಕಿ ಒಂದೊಯ್ಯಿರಿ ಛಂದಿಲ್ದಿದ್ರ ಕೆಳಗಿಡ್ರಿ

ತೆಲಿಸಂದ ಬಿಡಸಬ್ಯಾಡರಿ ತಂಗಿ ಆಗಿಲ್ಲ ಭೋಣಿಗಿ

ದೇಶದೊಳಗ ನಮ್ಮ ವಾಸುಳ್ಳ ಸಿರಗಾಪೂರ

ವೀಶ ವೀರೇಶನ ದೇಣಿಗಿ ಹಣಿಬಾರ ಹಣಿಗಿ ||3||

ಏಕತಾರಿ ಕಾಯಿ ಹಿಡಿಬಾರದಣ್ಣ |

ಹಿಡಿದರ ಹಿಡಿರೆಣ್ಣ

ಗುರುವಿನ ಮುಟ್ಟಿ ಗುರುವಾಗಿ ಹಿಡಿರೆಣ್ಣ ||ಪಲ್ಲ||

ಏಕ್ತಾರಿ ಎಂಬೊ ಮಾತ |

ಏಕಾಂತ ಏಕೊ ಚಿತ್ತ ||ಅ.ಪಲ್ಲ||

ಗುರು ಹೇಳಿದ ಗುಪ್ತದ ಗುಂಡಾ |

ಅರು ಆದವನೆ ಕಾಯ್ಕೊಂಡಾ

ಗುರಿ ಹೊಡಿದವನಿಗದು ಬೆಂಕಿಯ ಕೆಂಡ

ಸುಳ್ಳೆ ದುಡಿದಂವ ಶೆಂಡ

ಎಷ್ಟು ದುಡಿದರ ಫಲವಿಲ್ಲಪ ದಂಡ

ಒಳಹೊರಗಾಗಬೇಕಪ ಏಕ

ಏಕಾಗಿದಂವ್ನ ಮನಪಾಕ ಏಕತಾರಿ || ||1||

ಬ್ರಹ್ಮಂಬೊ ಕುಂಬಾರ ಗಡಿಗಿ |

ಬೆಳೆಸಿದ್ದೆ ಬೆಳಿತಾದ ಅಡಗಿ

ತಪ್ಪಿದರೆ ಬೀಳ್ತಾದ ಯಮಬಡಿಗಿ

ತಗದೊಗಿತಾರ ಕಡಿಗಿ

ಹಾಗೀಗಕ ಹತ್ತುದಿಲ್ಲ ಧಡಿಗಿ

ಅನುಭವ ಎಂಬೊ ಮಾಡಪ ಅಡಗಿ

ಅಟಿಗ್ಯಾಗಿದ್ದಟು ಶಿವನೆಡಿಗಿ ಏಕತಾರಿ ||2||

ಹಸುಳ್ಹಾಲುಂಡಿರುವದೆ ಕಷ್ಟ |

ವಿಷ ಕುಡಿದು ಹ್ಯಾಂಗ ಆಗತಾನ ಶ್ರೇಷ್ಠ

ಬಾಯಲಾಡಿ ಆಗಬಾರದಪ್ಪ ಅಪಭ್ರಷ್ಟ

ದೇಶದೊಳಗೆ ನಮ್ಮ ವಾಸ ಸಿರಗಾಪೂರ ಗ್ರಾಮ

ಏಕತಾರಿ ಕಾಯಿ ಹಿಡಿಬಾರದಣ್ಣ ||3||

ನೀನು ಕುಂಟ ನಾನು ಕುರುಡ |

ನಾ ನೀ ಕೂಡನು ಬಾ

ನಮ್ಮ ನಿಮ್ಮ ವರಗಳ ಬೇಡನು ಬಾ

ಒಡಿಯನ ಅಡಿಗೆರಗಿ ಹೋಗನು ಬಾ ||ಪಲ್ಲ||

ಕುರುಡ ಕುಂಟ ಈರ್ವರು ಕೂಡಿ |

ಕೂಡಲ ಸಂಗಮ ದೇವನ ಪಾಡಿ

ಕೂಡಲಕ ಹೋದರೆ ಸಲುವನು ಕೂಡಿಸಿ

ಕೂಡಿಕೊಂಡಿರುವಾನು ಬಾ

ಕೊಡಿದ್ದೇ ಕೂಡಲ ಅನ್ನೋನು ಬಾ

ಈ ಭವದ ಹಂಗು ಬಿಡುವನು ಬಾ || ||1||

ಅಂಗ ಎಂಬೊ ಗಡಗಿಯ ತೊಳಿದು |

ಲಿಂಗ ಎಂಬೊ ನಿಜ ರೂಪವ ತಿಳಿದು

ಸಮರಸ ಎಂಬೊ ನಿಜ ಸಾಂಭನ ಪೂಜಿಸಿ

ವ್ಯಾಳೇ ಹಿಂಗದೇ ಮಾಡನು ಬಾ

ಈ ಭವ ಭಸ್ಮವ ಧರಿಸನು ಬಾ

ತ್ರಿಗುಣ ಪತ್ರಿಯ ಪಡಿಯನು ಬಾ

ಶಮೆ ದಮೆ ಧೂಪನ ಹಾಕನು ಬಾ ||2||

ಭುವಿಯೊಳು ಸುವಿಚಾರ ಸಿರಗಾಪುರ ವಾಸ |

ಅವಿರಳ ದೇವರ ಹಾನ ಗುರು ವೀರೇಶ

ಕುರುಡನ ಕೈಯೊಳು ಕನ್ನಡಿ ಕೊಟ್ಟರೆ ಕಂಡಿತು ಪ್ರಕಾಶ

ಕುಂಟಗ ಕುಣಿಸಿದಿ ವೀರೇಶ

ಪರಮ ಸುಖ ಪಡೆದಂವ ಪರಮೇಶಾ

ಪರಮ ಸುಖ ಪಡೆಯಲು ಹೋಗುನು ಬಾ ||3||

ಶಿಸ್ತಿನಂಗಿ ಶಿವರಾಯ ಬೆಳಸಿದನು |

ಬೆಲೆಯಿಲ್ಲ ಅಂಗಿಗ

ಬರಲಾರದು ಸಿಂಪಿಗ್ಯಾಗ ||ಪಲ್ಲ||

ತೊಗಲಿನಂಗಿ ಹಗಲಿರಳು ಬೆಳೆಸಿದಾನೊ |

ಹರಿದರ ಹೊಲಿಯದಂಗ

ಅನ್ನ ನೀರಿನ ಆಧಾರ ಮಾಡಿದಾನೊ

ದಾರ ಸೂಜಿ ಹಂಗ

ಆಯುಷ್ಯ ಮುಗಿದರಾಯಿತೊ ಕಡಿಗಾ

ಅನುಮಾನದ ಮನಸಿಗ

ಅನುಮಾನದ ಮನಸಿಗ ||1||

ಯತೋ ಬ್ರಹ್ಮಾಂಡ ತತೋ ಪಿಂಡಾಂಡ |

ಶಿವ ಶಿಂಪಗ್ಯಾಗ ಸರಿಹೊಲಿಸಿ

ಅಗ್ಗದರಬಿ ಬಹು ಮಗ್ಗದಲಿ ಮಾಡುವನು

ಮಾನವನಿಗ ಮರುವಿನ ಘಾಸಿ

ಮಾನವನಿಗೆ ಮರುವಿನ ಘಾಸಿ ||2||

ಮಾನವಗ ಮಹಾದೇವಗ ಮುಗಿಲುದ್ದಫೇರ |

ಮಳೆ ತಂದವ ಮಹಾದೇವರ

ಪಾತಾಳ-ಪರ್ವತ ಭೂಮಿ ಭೂತಾಳ

ಬ್ರಹ್ಮಾಂಡ ಸೀಮಿ ಮಾಡಿದವರ್ಹಾರ ಯಾರ್ಯಾರ

ದೇಶದೊಳಗೆ ನಮ್ಮ ವಾಸ ಸಿರಗಾಪೂರ

ವೀಶ ವೀರೇಶ್ವರ ದೇವರಾ

ವೀಶ ವೀರೇಶ್ವರ ದೇವರಾ ||3||

ಬುಡದಾನ ಬೇರು ಫಂಟ್ಯಾಕ ಹೋಗಿ |

ವಡದಾದ ಮೈತುಂಬ

ಜಡಕಾಯಕ ಈ ಜಗದೊಳು ಬಂದು

ಜೈಗುರು ನುಡಿ ಸಾಂಬ ||ಪಲ್ಲ||

ಜಗವು ಮಿಥ್ಯಾ ಅಂದರ ನಿತ್ಯ |

ಅನ್ನ ಸಿಗುವುದು ಹೈರಾಣ

ಸತ್ಯ ಶಾಶ್ವತ ಶಿವನ ಭಜನ

ಮಾಡಾನು ಬರ್ರೆಣ್ಣಾ ||1||

ತೊರಿಧಡಿಗಿ ಇದ್ದ ಆಲದ ಮರವು |

ಬೆಳೆದೀತು ಭೂಭಾರ

ಅವ್ವ ಅಕ್ಕ ಎಂಬೊ ಬೀಜಿಲಾದಿ ಜೆಡೆಯ ದೇವರ

ಮಾನವರಿಗಿ ಮಾಯದ ಪಾಶಾ

ಮಾಡಿತೊ ಮನೋಹರಾ

ಮರ್ಗಿದುರ್ಗಿ ಮರದಲ್ಲಿ ಉಂಟು

ದೆವ್ವ ಗಿಡದಾಗ ಜೋರ ||2||

ದೇಶದೊಳು ಸಿರಗಾಪುರ ಊರ |

ಶರಧಿ ಥಡಿಸದೆ ಕವಿಗಳ ಜೋರ

ಕರಿವೀರೇಶ್ವರ ಕಾಯಂವ ಹಾನ

ಕಷ್ಟ ಪರಿಹಾರ

ಅವಿರಳ ನಡಿದರ ಸವಿನುಡಿ ನುಡಿಯುತ

ಅವಿರಳ ಪದಕ ಹೊಂದಿದ ಜೋರ || ||3||

ಗಿಡದ ಬುಡಕ ನಾ ಹಾಸಿಗಿ ಹಾಕಿದ |

ಗಿಡ ಕಡಿಯುವ ನೆನಪೊ

ಗಿಡದ ಬುಡಕ ಬುಡ ಮೇಲಾಗಿ ಹೋದರ

ಮುಂದೆ ಸುಳಿತಪ್ಪೊ ||ಪಲ್ಲ||

ಮುಗಲ ಕೆಳಮನಿ ಮಾಡಿತೊ |

ಮನವಿದು ಮಾಯದ ಮುದಿಕತ್ಯೊ

ಹೆಗಲಬಿದ್ದ ಹೇರೆತ್ತಿನ ಮಗನಿಗಿ ಇದು

ಅವಗೇನ ಗೊತ್ತೋ ||1||

ಉರಿಗಿಚ್ಚಿನ ಮನಿ ಉರಿದ್ಹೋಗುವುದೆಂದು |

ಸ್ಥಿರವಿಲ್ಲಯ್ಯ ಮನಕೊ

ಜರ ತಿಳಿಯದೆ ಆ ಪರಶಿವ ಮೂರ್ತಿನ

ಕೈ ಮಾಡ್ತಿರಿ ಮ್ಯಾಲಕೊ ||2||

ಭುವಿಯೊಳು ಸಿರಗಾಪೂರ ಗುರು ವೀರೇಶ್ವರ |

ಗುರು ರಾಜಕಿ ಪೀಠೊ

ಗುರು ಮುನಿದರೆ ಈ ನರ ಮನುಜನಿಗ

ಏನು ತಿಳಿದಪೊ ಹಾಟೊ ||3||

ಮಂಗಲ ಮಹಾದೇವ ನಿನ್ನ ಸ್ಮರಣೆಗೈವೆ ನಾ |

ಶರಣ ಕುಲಕ ಸ್ತುತಿಸುವೆನು

ಕರುಣಾ ಶಾಂತ ಕಾಯಯ್ಯ ನೀನಾ ||ಪಲ್ಲ||

ಮರಣರಹಿತ ಮೃತ್ಯುಂಜಯನೆ |

ಕರುಣವಿಟ್ಟು ಕಾಯಯ್ಯೊ ಶಿವನೆ ||1||

ಪರ್ವತೇಶ ಪಾರ್ವತೀಶ ಪರತರ ಮುಕ್ತಿ ತೋಶಾ |

ಮರುಳ ಮಾನವ ಜನ್ಮಕ್ಕಾಗಿ ಮರತಾಗಿದಿ ಮಲ್ಲೇಶ ||2||

ದೇಶಕಧಿಕ ಸಿರಗಾಪುರ ವೀಶ ವೀರೇಶ್ವರ ದೇವರ |

ದಾಸನನ್ನು ಮಾಡೊ ಉದ್ಧಾರ

ಭಾಷಿಪಾದಿಪ ಶ್ರೀ ಪರಮೇಶ್ವರ ||3||

ಕರ್ಪುರಾರುತಿ ಸರ್ಪಭೂಷಣಗೆ |

ಕಂದ ದರ್ಪಭೂಷಿತ ಭವ ಭಸಿತ ಲೇಪಗೆ ||ಪಲ್ಲ||

ಕರುಣಾಸಾಗರ ನಿನ್ನ ಸ್ಮರಣೆಯೊಳಿರುಹುವೆನಾ |

ಕರುಣದಿ ಪಾಲಿಸೊ ಕರ್ತ ಸಮರ್ಥಗೆ ||1||

ಕಪ್ಪುಗೊರಲ ನಿನ್ನ ಭಕ್ತವತ್ಸಲ ನಾನ |

ಮುಕ್ತಿಯಿಂದಲಿ ಎನ್ನ ಪರಿಹರಿಸೊ ನೀನ ||2||

ಬೋಧನ ವೀಶನೆ ಗುರು ಮಹಾಂತೇಶನೆ |

ದಾಸನ ನುಡಿಗಳಿಗೆ ಪಾಲಿಸೊ ನೀನೇ ||3||

ಜೈ ಚೆನ್ನಬಸವೇಶ ಧೀರ ರಕ್ಷಕ ಪೋಷ |

ಎನ್ನೊಳು ಇನಿತಿಲ್ಲದಷ್ಟು ಐಶ್ವರ್ಯದ ಅನುಮೋಕ್ಷ ||1||

ಭಾವದೊಳು ಬಬಲಾದಿ ಮಠಕಧಿಪತಿಯಾದಿ |

ನಿನ ಗುಣ ಗಗನದಿ ಪತಿಗೆ ಮಿಗಿಲಾದಿ ||2||

ಜಟ ಮುಕುಟದ ವರ್ಣ ಕಾಯ ಶಾಂತಿಯ ಬಣ್ಣ |

ಕೈಲಾಸದಿಂದ ಬಂದು ಕಪ್ಪು ಕಂಧರನ ||3||

ದೇಶದೊಳಗ ನಮ್ಮ ವಾಸ ಸಿರಗಾಪುರ ಗ್ರಾಮ |

ವೀಶ ವೀರೇಶನ ಸ್ತವನ ಸ್ಮರಿಸುತ ಅನುದಿನ ||4||

ತೇರು ಸಾಗಿತಮ್ಮ ನೋಡಿರೆ |

ತೇರಿನ ಹಿಂಬಲ

ಊರು ಸಾಗಿತಮ್ಮ ಪಾಡಿರೆ ||ಪಲ್ಲ||

ತೇರು ಸಾಗಿತು ತೆಂಕಣಕ್ಕ |

ಊರು ಸಾಗಿತು ಕೊಂಕಣಕ್ಕ

ಬಡವಲ ದಿಕ್ಕಿನ ತೇರಿಗಿ ಪಡವಲಕ್ಕ ಬಳಸ್ವಾರಮ್ಮ ||ಅ.ಪಲ್ಲ||

ಉದರದುದ್ಭವ ಉದಿಪ ತೇರಮ್ಮ |

ಉಡುರಾಜ ಒಡಿಯನ ಸಡಗರ ಹೇಳಲು ಸಾಧ್ಯವಿಲ್ಲಮ್ಮ

ಹಲವು ಜನರೊಳು ಗೆಲುವು ಎನಿಸಿ

ನಿಲಿಯ ತೇರಿಗಿ ಹಗ್ಗ ಬಿಗಿಸಿ

ಹರಹರ ಎಂದು ಹರಕೆ ಹಾರೈಸಿ

ಹಾದಿ ಬೀದಿಗಿ ಮೆರಸಿ ತೇರ ||1||

ಅಂಗತೇರಿಗೆ ಲಿಂಗದಾಕಾರ |

ನಡುರಂಗ ಬಾಜಾರ

ಸಂಗ ಸರ್ವರ ಕೊಂಗದ್ಯಾಪಾರ

ದೇಶದೊಳು ಸಿರಗಾಪೂರ ಊರ

ವೀಶ ವೀರೇಶ್ವರ ದೇವರ

ದಾಸನನ್ನು ಮಾಡೊ ಉದ್ಧಾರ ಉಡುರಾಜ ಧೀರ ||2||

ಹೊಂದಿಕಿಲಿಂದ ಹೊಲವನು ಮಾಡಣ್ಣ |

ಹೊಲದಭಿಮಾನಿಟ್ಟು ಹೊಲಬನರಿತು

ಹೊಲದೊಳು ದುಡಿಯಣ್ಣ ||ಪಲ್ಲ||

ಕಾಕು ಗುಣಗಳೆಂಬೊ ಕವಿಗಳ ಹಿಂಡ ಬರತಾವಣ್ಣ ||ಅ.ಪಲ್ಲ||

ಆರು ಹಾದಿಯ ಹೊಲ ಮೂರು ಬೀದಿಯ ಹೊಲ |

ಆರು ಮೂರವ ನೀ ಮುಗಿಸಣ್ಣ

ಮೂರಕ್ಷರದ ಮೂಲ ಮಂತ್ರವ ನೀ ಬಲಿಸಣ್ಣಾ

ಮೂರು ಎಂಬೊ ಹೊಲದೊಳು ಆರು ಎಂಬೊ

ಕುಂಟಿಗಳ ಹೊಡಿಯಣ್ಣ

ಹದನಗೊಳಿಸಿದ ಮ್ಯಾಲ ಹೃದಯ ಶಿಖರದೊಳು ಕುಳಿತು

ಶೀಘ್ರದಿಂದ ಶಿವನೊಳು ಬೆರಿಯಣ್ಣ ||1||

ಅಷ್ಟವರ್ಣದ ಹೊಲದೊಳು ನಿಷ್ಠಿಲಿಂದ ಕೂರಿಗಿನಿಟ್ಟು |

ರಜತಮ ಎಂಬೊ ಎತ್ತಗಳ ಹೂಡಣ್ಣ

ಮಂಡಿ ಚಡ್ಡಿ ಕೋಲೆಂಬೊ ತ್ರಿಕೂಟದಲಿ ಲಿಂಗದ ಪೀಠಣ್ಣ

ಮುಕ್ಕಣ್ಣ ಶಿವನೊಳು ಮುಕ್ತಿ ಪದವಿ ಬೀಜನೆ ಬೇಡಣ್ಣ

ಹತ್ತು ಬೀಜವ ನೀ ಬಿತ್ತು ಮುತ್ತು ರಾಶಿಯ ಮಾಡೊ

ಹನ್ನೊಂದಕ ಹರಕಿಯ ಮಾಡಣ್ಣ ||2||

ಹದಿನಾರಂಬೊ ಹಾಳಿನೊಳಗ ಬೀಳಲು ಬೇಕಣ್ಣ |

ಹತ್ತು ಹನ್ನೊಂದರ ಮ್ಯಾಲ ಮತ್ಯಾವ ರಾಶಿಗಳುಂಟು

ಹತ್ತು ದಿಕ್ಕಿನೊಳಗೆ ಹುಡುಕಣ್ಣಾ

ಹದಿನಾರೆಂಬೊ ಹಾಳಿನೊಳಗ ಬೀಳಲು ಬೇಡಣ್ಣ

ದೇಶದೊಳಗ ನಮ್ಮ ಖಾಸ ಸಿರಗಾಪುರ ಗ್ರಾಮ

ಈಶ ವೀರೇಶನ ಭಜಿಸಣ್ಣ ||3||

ಎಚ್ಚರದಿಂದ ಯಾಪಾರ ಮಾಡಣ್ಣ |

ವ್ಯಾಪಾರದೊಳು ಇಹಪರ ಎಂಬ ಖೂನ ನೀ ಹೇಳಣ್ಣ ||ಪಲ್ಲ||

ವ್ಯಾಪಾರವು ಮಾಡೆ ಮಾಡೊ |

ಇಹಪರದೊಳು ದೃಢವಿಟ್ಟು ನೋಡೊ

ಎಚ್ಚರದಿಂದ ವ್ಯಾಪಾರ ಮಾಡಣ್ಣ ||ಅ.ಪಲ್ಲ||

ಲಾಭಾದರ ನಗದಿರೊ |

ಲುಕ್ಸಾನಾದರ ನುಗ್ಗದಿರೊ

ತತ್ಸಮವೆಂಬ ತಕಡಿ ಪಿಡಿಯಣ್ಣ

ಅಷ್ಟಮದ ಎಂಬೊ ಕಲ್ಲು ತಕ್ಕಡಿಗ ಹಚ್ಚಿ

ತಾರಿಪ ನೋಡಣ್ಣ

ಮರು ಎಂಬೊ ಮಣಗಲ್ಲೀಗಿ

ಅರು ಎಂಬೊ ಅನಾಜ ಹಾಕಿ

ಜ್ವಾಕಿಲಿಂದ ಜೋಕಾಲಿ ಹೊಡಿಯಣ್ಣ

ವ್ಯಾಪಾರದೊಳು ಇಹಪರವೆಂಬ ಖೂನ ನೀ ತಿಳಿಯಣ್ಣ ||1||

ನಾಜೂಕಲಿಂದ ಮಾಡಪ ಸಂತಿ |

ನಾಸಿಕ ಕೊನಿಯೊಳು ಇಡು ಚಿಂತಿ

ತ್ರಿಕೂಟ ತಣಿಸಿ ಪಿಡಿಯಣ್ಣ

ಈ ತಕ್ಕಡಿಯೊಳು

ಧರ್ಮ ಎಂಬೊ ಧಾನ್ಯವ ತೂಗಣ್ಣ

ಸುಳ್ಳೆಂಬುವದರಿತು ಸತ್ಯಕ ನೀ ಸಾಯಲು ಬೇಕಣ್ಣ

ಖರೆ ಎಂಬುದು ಬೂದ್ಯಾನ ಬೆಂಕಿ

ಎಚ್ಚರಲಿಂದ ಯಾಪಾರ ಮಾಡಣ್ಣ || ||2||

ತಕ್ಕಡಿ ಎಂಬಾದೊಂದು ಹಾದಿ |

ತತ್ಕಾಲ ತಿಳಕೊ ಗುರು ಬೋಧಿ

ಗುರುವಿನ ಹೊರ್ತು ಗತಿ ನಿನಗಿಲ್ಲಣ್ಣಾ

ನಗುರೋರ್ವಧಿಕೆಂದು ಜಗದೊಳಗ ಜಾತುರಿ ಮಾಡಣ್ಣ

ದೇಶದೊಳಗ ನಮ್ಮ ವಾಸ ಸಿರಗಾಪೂರ ಗ್ರಾಮ

ವೀರ ವೀರೇಶನ ಭಜಿಸಣ್ಣ ||3||

ಶಾರದೆ ಕೊಡು ಜ್ಞಾನವ ದೇವಿ ಕೊಡು ಜ್ಞಾನವ ||ಪಲ್ಲ||

ಕೊಡು ಜ್ಞಾನವ ಹಾಕಬೇಡ ಮರವ|

ಬಡವ ನಿನ್ನಡಿಗೆ ನಾ ಮುಗಿವೆ ಕರವ

ಕೆಂಪು ಗುಲಗಂಜಿ ಬಣ್ಣ ಬಿಳುಪು ವಿಭೂತಿ ವರ್ಣ|

ಕುಂಕುಮ ಚಂದನ ಲೇಪಿಸಿ ನಿನ್ನ ಫಣಿಗೆ ||1||

ತಂಪತಿ ಉಳ್ಳಾಕಿ ನೀ ತುಳಜಾಭವಾನಿ |

ದುರ್ಗ ಶೂರದೈತ್ಯನ ಮರ್ದ ಮಾಡಿದಿ ನೀ ||2||

ಸಾಂಬನ ಸತಿ ದೇವೀ ಪಾರ್ವತಿ ನೀ

ಜಂಬಗಿ ಶರಣರ ಭಾವಕ ವಲಿತಿ ನೀ ||3||

ನಿನ್ನೊಳು ನೀ ತಿಳಿದರೆ ನಿಜ ಸುಖವೋ |

ನಿನ್ನೊಳು ನೀ ತಿಳಿದರೆ ಬಹು ಸುಖವೋ ||ಪಲ್ಲ||

ತಿಳಿಯದಿದ್ದರೆ ಈ ಜನ್ಮವು ಯಾಕೋ |

ಆತ್ಮದ ಅಂತ ತಿಳಿಯದ ಮೂರ್ಖೋ

ತಿಳಿದು ನಡದವನ ಜನ್ಮ ಚಂದ್ರನ ಬೆಳಕೋ ||1||

ಶರೀರಕ ಸುಖ ಶಿವ ಕೊಟ್ಟಾನ ತಿಳಕೋ |

ಕೋತಿಗಳಿಗೆ ನೀತಿ ಮಾರ್ಗವೊ ಯಾಕೋ ||2||

ಭೀಮಾಶಂಕರ ಗುರು |

ವರವಾದ ಶರಣಯ್ಯನ ಗುಣಕೋ

ಭಕ್ತನ ಹಿಂಬಾಲ ಬಾ ಗಣಪತಿ |

ಕೊಡು ಎನಗ ಮತಿ

ಭಕ್ತನ ಹಿಂಬಾಲ ಬಾ ಗಣಪತಿ ||ಪಲ್ಲ||

ಬಿಡದೆ ಮಾಡುವೆ ನಿನ್ನ ಸ್ತುತಿ |

ನಿನ್ನ ಬಿಟ್ಟಿನ್ಯಾರಿಲ್ಲ ಗತಿ

ಪೊಡವಿಗಧಿಕ ಒಡೆಯ ಮೃಡಹರನ

ಉಡಿಯಲ್ಲಿ ನಡಸೀದಿ ಜಾಗೃತಿ ||1||

ವಿಭೂತಿ ಗಂಧ ಕುಂಕುಮಾಕ್ಷತಿ |

ಕರಕಿ ಪತ್ರಿ ಕಾಯಿ ಊದ್ಬತ್ತಿ

ಅಷ್ಟಾವರಣ ಪೂಜಿ ನಿಷ್ಠಿಲಿ ಮಾಡುವೆ

ಮುಟ್ಟಿ ಬೆಳಗುವೆನು ಕರ್ಪೂರಾರುತಿ ||2||

ದರ್ ವರುಷ ಚತುರ್ದಶಿ ಚೌತಿ |

ಇಲಿ ಮೇಲೆ ನಿನ್ನ ಸವಾರಿ ಭರ್ತಿ

ನಂದಿ ಮೇಲೆ ಶಿವ ಪಾರ್ವತಿ ಬಂದು

ನೋಡಲ್ಲಿ ಈ ಬಡವನ ಭಕ್ತಿ ||3||

ಭಾಸಗಿ ಊರ ಬಸವನ ಬಸ್ತಿ |

ಮುತ್ಯಾ ರೇವಣಸಿದ್ದನ ವಸ್ತಿ

ಗುರು ಭೀಮಾಶಂಕರನ ಶಿಸುಪುತ್ರ

ಶಿವಶರಣ ಸಾರಿದ ನುಡಿ ಸಭಿಕರಿಗೆ ಸನ್ಮತಿ ||4||

ಭಕ್ತನ ಹಿಂಬಾಲ ಬಾ ಗಣಪತಿ

ಭಕ್ತನ ಹಿಂಬಾಲ ಬಾ ಗಣಪತಿ

ಕೊಡು ಎನಗ ಮತಿ ||5||

ಕೊಡು ಕೊಡು ವರವ ಮುಮ್ಮಾಯಿ ತಾಯಿ

ಕೊಡು ಕೊಡು ವರವ ಮುಮ್ಮಾಯಿ ||ಪಲ್ಲ||

ಅಂಗನಾದ ಸಂಗಮೇಶ್ವರಗ |

ಗಂಗಾ ಆಗಿ ಕೂತಿ ಜಡಿಯೊಳಗ

ತುಂಗಭದ್ರೆ ನಿಮ್ಮ ನಾಮ ಬಿಡದೆ

ಸ್ಮರಿಸುವೆನು ಬಾ ತಾಯಿ ಬಾ ||1||

ಸಹಸ್ರನಾಮ ಜನನಿ ನಿಮ್ಮಗ |

ಬ್ರಹ್ಮಾಂಡೆಲ್ಲ ತಮ್ಮ ಒಡಲೊಳಗ

ಮೂತ್ರದಾಟಿ ಬಂದ ಮೇಲ ಕಡಿಗ

ಮಲಿಹಾಲ ಕುಡಸಿದಿ ಸರ್ವರಿಗೆ ||2||

ಮೀರಿದ ನೌಕೋಟಿ ಸಿದ್ದರಿಗ

ಮಾಯಾಗಿ ಕಾಡಿದಿ ಬಲ್ಹಂಗ

ಸ್ಥಾಪನ ರೇವಗ್ಗಿ ಗುಡ್ಡದ ಮ್ಯಾಗ

ಮೊದಲ ಪೂಜೆ ಮಾಡುವರು ನಿಮ್ಮಗ ||3||

ನೀರಾಗಿ ಹರದಿ ನದಿ ಒಳಗ

ಪವಿತ್ರ ಮಾಡಿದಿ ಮಾನವಗ

ಲಕ್ಷ್ಮೀ ಆಗಿದಿ ಜಂಬಿಗಿ ಊರಾಗ

ಅಕ್ಷಯಾದಿ ಭೀಮಾಂಶಂಕರನ ತಾಯಿ ||4||

ನಮಿಸುವೆ ಪ್ರಭುದೇವಾ ನಾ ನಿಮಗೆ

ನಮಿಸುವೆ ಪ್ರಭುದೇವಾ ||ಪಲ್ಲ||

ಸದಾಶಿವ ನಮಿಸುತೆ ನಿಮಗೆ ನಾ

ಸದಾಶಿವ ಅನ್ನುವೆ ಉದಯ ಕಾಲದಲ್ಲೆದ್ದು ||1||

ತೊಡಿಯಲ್ಲಿ ಪಾರ್ವತಿ ಉಡಿಯಲ್ಲಿ ಗಣಪತಿ

ಜಡಿಯಲ್ಲಿ ಗಂಗಾ ಏಳ್ಹೆಡಿ ಸರ್ಪ ಕೊರಳಲ್ಲಿ ||2||

ನಂದೀ ಅವತಾರ ನಿಮಗೆ ವಂದಿಸುವೆ ದೇವಾ

ಬಂಧನ ಬಿಡಿಸೊ ಈ ಬಂದ ಭಕ್ತಾದಿಗಳಿಗೆ ||3||

ಭಾಸಿಗಿ ಮಠದಲ್ಲಿ ವಾಸ ಮಾಡಿದಿರಿ ಅಲ್ಲಿ

ಕೂಸು ಶಿವಶರಣರ ಗುರು ಭೀಮಾಶಂಕರ ನಿಮ್ಮ ಉಡಿಯಲ್ಲಿ ||4||

ಪ್ರಸನ್ನಾಗೋ ಶ್ರೀ ಪಾರ್ವತಿ ತನುಜಾ

ಮಾಡುವೆ ಪೂಜಾ ||ಪಲ್ಲ||

ಗಂಧ ಕಸ್ತೂರಿ ಪೂಜಕ ತರುಸೊ |

ವಿಭೂತಿ ನಿನ್ನ ಅಂಗಕ ದರುಸೊ

ಪತ್ರಿಪುಷ್ಪ ಮುಕುಟಕೇರುಸೊ

ಭಕ್ತಗ ನೋಡಿ ಪಡಿಬೇಕು ಹರುಸಾ ||1||

ಬಡವನ ಹತ್ತಿರ ಬಾ ಗಣರಾಜಾ |

ನನ್ನ ಗೂಡ ನಿಂದ್ಯಾತರಕಜಾ

ಕರುಣೆಟ್ಟು ಕೇಳೋ ಬಾಲನ ಅರುಜಾ

ಶಾಂತದಿ ಕಾಪಾಡು ಮಹಾರಾಜಾ ||2||

ಜಂಬಿಗಿ ಊರಾಗ ಮಾಡಿದೀ ವಾಸ

ಸಾಧು ಶಿವಶರಣಗಾದಿ ಕೈವಶ

ಸಾಧು ಶಿವಶರಣಗಾದಿ ಕೈವಶ

ಮರ್ತಿಲ್ಲ ನಿಮ್ಮ ಪಾದದ ಆಶಾ || ||3||

ಪ್ರಾರ್ಥಿಸುವೆ ಪಾಲಿಸೊ ಯೆನಗೆ |

ನಿಮ್ಮ ಪಾದತೀರ್ಥವ ಸುರಿವೆ

ಸದ್ಗುರುವೆ ಪ್ರಥಮದಿ ನಿಮ್ಮ ಪಾದತೀರ್ಥ ಸುರಿವೇ ||ಪಲ್ಲ||

ಸತತ ನಿಮ್ಮ ಸೇವೆಯಲ್ಲಿರುವೆ |

ಪತ್ರಿಪುಷ್ಪ ನಿಮ್ಮ ಪೂಜಕ ತರುವೆ

ಸರ್ವ ಮಲ್ಲಿಗೆ ಪಾದಕ ಸುರಿವೆ

ಕರವ ಪಿಡಿದು ಶಿರವ ಬಾಗುವೆ ||1||

ಗುರುವೆ ಯೆನಗೆ ತೋರಿದ ದಾರಿ |

ಗುರ್ತು ನಿಮ್ಮ ಆಜ್ಞೇಯ ಮೀರಿ

ಅರ್ತು ನೀಡು ಜ್ಞಾನಾಮೃತ ಝರಿ

ರಿವಿನೊಳಗೆ ನೀರಿನ ತಿಳಿರಿ ||2||

ನೀಡು ಗುರುವೆ ಬೇಡಿದ ವರವ |

ಮೂಢ ಭಕ್ತಗ ಮಾಡು ಉದ್ಧಾರವ

ಪಾಡುವೆ ನಿಮ್ಮ ನಾಮ ಲಕ್ಚರವ

ಮೂಢ ಭಕ್ತಗ ಮಾಡು ಉದ್ಧಾರವ ||3||

ಮುತ್ಯಾ ರೇವಣಸಿದ್ದನ ಚರಣ |

ಭೀಮಾಶಂಕರ ಗುರು ಅಂತಃಕರುಣ

ಪಾದಸೇವಕ ಸಾಧು ಶಿವಶರಣ

ದುಡಿದವರಿಗೆ ಶಿರವ ಬಾಗೋಣ ||4||

ಗುರುವೆ ನಿಮ್ಮ ನಾಮಸ್ಮರಣೆ |

ಮರೆಯಲಾರೆ ದೇವಾ ಬೇಡುವೆನು ||ಪಲ್ಲ||

ತನುಮನಧನ ಗುರು ಪಾದಕರ್ಪಿಸಿ |

ಒಂದೇ ಲಿಂಗದಲ್ಲಿ ಮನವ ನಿಲ್ಲಿಸಿ

ನಿಮ್ಮ ಮರೆಯಲಾರೆನು ದೇವಾ

ಗುರುವೆ ನಿಮ್ಮ ನಾಮಸ್ಮರಣೆ ಮರೆಯಲಾರೆನು ||1||

ಎನ್ನ ಕರದಲ್ಲಿ ಇಷ್ಟಲಿಂಗವ ಕೊಡಿಸಿ |

ಕರಣದಲ್ಲಿ ಶಿವಮಂತ್ರವ ಬೋಧಿಸಿ

ಆರು ಇಲ್ಲದ ಅಜ್ಞಾನ ಗುಣಗಳ ಬಿಡಿಸಿ

ಶಿಶು ಎಂಬ ಶಿವಗುಣ ದಾರಿಯ ಹಿಡಿಸಿ ||2||

ಲಿಂಗ ಕೊಟ್ಟು ರುದ್ರಾಕ್ಷಿ ಭಸ್ಮವ ಧರಿಸಿ |

ಕಾವಿ ಲಾಂಛನ ಭಿಕ್ಷೆ ಜೋಳುಗಿ ಹಿಡಿಸಿ

ಭಾಸಗಿ ಊರಲ್ಲಿ ರಥ ಉಚ್ಚಯ ಎಳಸಿ

ಗುರು ಭೀಮ ಶಂಕರನ ಜೈಭೇರಿ ಹೊಡಿಸಿ ||3||

ಗುರುವೆ ನಿಮ್ಮಯ ಪಾದ |

ಮರೆಯಲಾರೆನೋ ದೇವಾ

ಮರ್ಯಾದಿ ಕಾಯೊಯೆನ್ನ

ಗುರು ಭೀಮಾಶಂಕರನ ||ಪಲ್ಲ||

ಜಾಲವಾದಿಪೂರ ನಿಮ್ಮ ಮೇಲೆ ಸಿಂಹಾಸನ |

ಗಾದಿ ಮಾಲೀಕನೊ ನೀನಾ

ಗುರು ಭೀಮಾಶಂಕರನ

ನಾಮ ಸುಗಂಧ ವಾಸಾನಾ ||1||

ಬಿಟ್ಟಿದಿ ನೀ ಜನ್ಮಸ್ಥಾನ |

ಇಟ್ಟಿದಿ ಭಕ್ತಗೆ ಮನ

ತೊಟ್ಟಿದಿ ಕಾವಿ ಲಾಂಛನ

ಗುರು ಭೀಮಾಶಂಕರನ ||2||

ರುದ್ರಾಕ್ಷಿ ಭಸ್ಮಲೇಪನ |

ಮೂರೂ ಹೊತ್ತು ಲಿಂಗಾರ್ಚನ

ಅವತಾರ ತಾಳದಿ ಶರಭನ

ಗುರು ಭೀಮಾಶಂಕರನ ||3||

ಮಾಡುತ್ತೆ ಶಿವಧ್ಯಾನ |

ಹಾಡುತ್ತೆ ಮಾಡಿ ವಂದನ

ಕವಿತೆ ಮಾಡಿದ ಜಂಬಗಿ ಶರಣ

ಹಾಡುತ್ತ ಭೀಮಾಶಂಕರನ ||4||

ಗುರುಧ್ಯಾನ ಮರಿಬ್ಯಾಡರಿ

ಗುರುಪಾದವನ್ನು ಹಿಡಿರಿ |

ಗುರುತಿಟ್ಟು ನಡಿರಿ ಮರಿಬ್ಯಾಡ್ರ್ರಿ

ಶಿವಶರಣರ ಭಜನ ಮಾಡಾನು ಬರ್ರಿ ||ಪಲ್ಲ||

ತಾಯಿಲ್ಲ ತಂದಿಲ್ಲ ಬಂಧು ಇಲ್ಲ ಬಳಗಿಲ್ಲ |

ಗುರುವಿನ ಹೊರ್ತ ಮತ್ತ್ಯಾರಿಲ್ಲ

ಗುರುವಿನ ಭಜನಿ ಮಾಡಾನು ಬನ್ನಿರಿ

ಗುರು ಧ್ಯಾನವ ಮರಿಬ್ಯಾಡರಿ ||1||

ಗಿಡದಾಗ ಗಿಡ ಹುಟ್ಟಿ |

ಗಿಡಕೆ ತೊಟ್ಟಿಲ ಕಟ್ಟಿ

ಮಹಾಲಿಂಗ ಹುಟ್ಟಿ ಮಠಕಟ್ಟಿ

ಶಿವಶರಣರ ಭಜನ ಮಾಡಾನು ಬರ್ರಿ ||2||

ಮಹಾಲಿಂಗ ಹುಟ್ಟಿ ಮಠ ಕಟ್ಟಿ |

ಕಲಬುರ್ಗಿ ಶರಣಯ್ಯಾ ಹುಟ್ಟಿ ಗರಿ ಕಟ್ಟಿ

ಶರಣರ ಭಜನ ಮಾಡಾನು ಬನ್ನಿರಿ ||3||

ಹಾಸಗಲ್ಲಿನ ಮ್ಯಾಲ |

ಹಾಯ್ದು ಹೋದವರ್ಯಾರು

ಪಾದ ಮೂಡ್ಯಾವ ಪರಿಪರಿ

ಶರಣರ ಭಜನ ಮಾಡಾನು ಬನ್ನಿರಿ ||4||

ಪಾದನೆ ಮೂಡಿದಾವ ಪರಿಪರಿ |

ಶರಣರ ಹಾಯ್ದು ಹೋಗಿದಾರ ಜಳಕಕ |

ಶರಣರ ಭಜನೆ ಮಾಡಾನು ಬನ್ನಿರಿ

ಗುರು ಧ್ಯಾನವ ಮಾಡಾನು ಬನ್ನಿರಿ ||5||

ಗುರು ಭೀಮಾಶಂಕರ ಹುಟ್ಟಿ |

ಭಕ್ತರಿಗೆ ಲಿಂಗವ ಕಟ್ಟಿ

ಸಾಧು ಶಿವಶರಣರ ಕವಿ ಕಟ್ಟಿ

ಶರಣರ ಭಜನವ ಮಾಡಾನು ಬನ್ನಿರಿ ||6||

ಗುರು ಸಿಕ್ಕರ ಬಿಡಬ್ಯಾಡ |

ಗುರು ಸಿಗಬೇಕಾದರೆ ದುರ್ಲಭ

ಬಿತ್ತಿ ಬೆಳಿರಿ ಶಿವತತ್ವದ ನುಡಿಗಳ

ಭಕ್ಷಿಸಿದವನಿಗೆ ಬಹು ಲಾಭ ||ಪಲ್ಲ||

ಗುರುತಿಟ್ಟು ನಡಿ ಗುರುಪಾದವೆ ಶ್ರೇಷ್ಠಾದ |

ಗುರು ಇಲ್ಲದೇನೆ ಮಾಡತೀರಿ ಹಬ್ಬ

ಕುರು ಆದ ಅಲ್ಲೊಂದು ಗುರು ಇಲ್ಲದಿರಬಾರದು

ಸರ್ವ ಕಾರ್ಯಕ ಗುರು ಬೇಕೊಬ್ಬ ||1||

ಸುಖ ಆದ ಇದರೊಳು ಸರ್ವರ ಹಣೆಯ ಮೇಲೆ |

ಮೂರು ಬಟ್ಟು ವಿಭೂತಿ ಶೋಧ

ಮಾತೇನು ಸುಳ್ಳಲ್ಲ ಮಂತ್ರದ ಅಲ್ಲೊಂದು

ಮನ್ನಿಸಿ ನಡದವನಿಗೆ ಲಾಭ | ||2||

ಅಲ್ಲ ಹೌದು ಬಲ್ಲವನಿಗೆ ತಿಳಿತಾದ |

ಮಲ್ಲಿಗಿನಾಥಗ ಹೋಗಾನು ಬಾ

ಹಲ್ಲಿಲ್ಲದವನ ಮುಂದ ಹೇಳಿದರೇನು ಸುಖ

ಮೆಲ್ದಾನೇನು ಗಾಣದ ಕಬ್ಬ ||3||

ಕವಿ ಶಿವಶರಣ ಕಟ್ಯಾನ ಲಿಂಗದ |

ನೆಲಿ ತಿಳಿದಂವ ಶಂಕರನೊಬ್ಬ

ಬಿತ್ತಿ ಬೆಳಿರಿ ಶಿವತತ್ವದ ನುಡಿಗಳ

ಭಕ್ಷಿಸಿದವನಿಗೆ ಬಹು ಲಾಭ ||4||

ಬರತಿ ಬರತಿ ಬರತಿ |

ಒಂದಿನ ಗುರುಪಾದಕ ಬರತಿ ||ಪಲ್ಲ||

ಗುರು ಕೊಟ್ಟ ಮಂತ್ರ ಯಾಕ ಮರತಿ |

ಗುರು ಇಲ್ಲದೇ ಇನ್ನು ಏಸು ದಿನ ಇರತಿ ||1||

ಮಠದಲ್ಲಿ ಗುರು ಇದ್ದರ ಭರ್ತಿ |

ಗುರುಪಾದ ಸೇವಾದಲ್ಲಿ ನುರ್ತಿ ||2||

ತನುಮನಧನ ಗುರುಪಾದಕ ತರ್ತಿ |

ಸಗುಣ ನಿರ್ಗುಣ ನೀ ಗರ್ತಿ ||3||

ಗುರುವಿನ ಶಿಶು ಆಗಿ ಕೀರುತಿ |

ನಿತ್ಯ ಪೂಜಿಸು ತ್ರಿಮೂರ್ತಿ ||4||

ಶಿವಶರಣ ಬೆಳೆಗೆಂದ ಪಂಚಾರುತಿ |

ಗುರು ಭೀಮಾಶಂಕರನ ಪಾದಕ ಬರತಿ ||5||

ಪಾದಪೂಜೆ ಮಾಡಾನು ಬನ್ನಿರಿ |

ಸದ್ಗುರುವಿನ ಪಾದಪೂಜೆ ಮಾಡಾನು ಬನ್ನಿರಿ ||ಪಲ್ಲ||

ಪೈಲೆ ಪದ್ಯದರ್ಥವ ತಿಳಿರಿ |

ಗುರುಪಾದಂಗುಷ್ಟ ತೊಳಿರಿ

ಜಲಮಂತ್ರ ಉಚ್ಛರಿಸುತ

ಐದು ಬೆರಳಲಿ ಉದಕವ ಎರೀರಿ ||1||

ಮೂರು ಬೆರಳಲಿ ಮೂರು ಸಾರಿ |

ಭಸ್ಮಲೇಪಿಸಿ ಬೆರಳು ಎಳಿರಿ

ಗಂಧ ಕುಂಕುಮ ಹಾಲು ಸಕ್ಕರೆ

ಗೋಮೂತ್ರ ತುಪ್ಪದಲೆರೀರಿ ||2||

ಸದಾ ಮಲ್ಲಿಗಿ ಪುಷ್ಪ ಬಿಲ್ವಪತ್ರಿ |

ತ್ರಿದಳ ತಿರವಿಟ್ಟು ನಮಿಸಿರಿ ||3||

ಧೂಪದೀಪ ಊದಬತ್ತಿ ಉರಿ |

ಮಂಗಲಾರುತಿ ಎತ್ತಿರಿ

ಕಾಯಿ ಒಡದು ತೀರ್ಥ ಸೇವಿಸಿರಿ

ನೆನಪಿಡು ಪಾಮಾರಿ ಮರ್ತೀರಿ ||4||

ಮಂಗಳಾರುತಿ ಮನದಿ ಬೆಳಗಿರಿ |

ಮನದಾನ ಅವಗುಣಗಳ ಅಳಿರಿ ||5||

ಬಸವನಹಳ್ಳಿ ಭಾಗಿಸಿ ಕೆರಿ |

ಮುತ್ಯಾ ರೇವಣಸಿದ್ದನ ಜಾತ್ರಿ

ಭೀಮಾಶಂಕರನ ಗುರುವಿನೈಸಿರಿ

ಕಂದ ಶಿವಶರಣ ಹೊಡೆಸಿ ಜೈಭೇರಿ ||6||

ಬ್ಯಾಡೋ ಕರ್ಮ ಮಾಡೋ ಧರ್ಮ |

ನೋಡೋ ನಿನ್ನಲ್ಲಿ ಪರಮಾತ್ಮ ||ಪಲ್ಲ||

ಭಕ್ತಿಯಿಲ್ಲದೆ ನಿತ್ಯ ಭಜನ ಮಾಡುದ್ಯಾಕ |

ಶೀಕ್ಷಾ ಆಗೋದಮ್ಮ ಗುರುವಿನ ಶಿಕ್ಷಾ ಆಗೋದಮ್ಮ

ಗುರುತ್ಹ್ಯಾಂಗಾದಾತೋ ಮೂಢಗಾಗದ್ಲೆ

ಗುರುವಿನ ಗುಲಾಮ ಬ್ಯಾಡೋ ಕರ್ಮ ||1||

ಆಡೋದೆಲ್ಲ ಹುಸಿ ನುಡಿದರೇನು ಫಲ |

ಬ್ಯಾಡೋ ನಿನ್ನ ಹಮ್ಮು ಮೂಢ ಬಿಡೊ ನಿನ್ನ ಹಮ್ಮು

ಅರ್ಥ ತಿಳಿಯಲಾರದೆ ಆಡಂವಗ ಅಕ್ಷರ

ಬರಲಾರದೊ ಸೂಕ್ಷ್ಮ ಬ್ಯಾಡೋ ಕರ್ಮ ಮಾಡೋ ಧರ್ಮ ||2||

ಬೇಡೊ ಗುರುವಿನಲ್ಲಿ ನೀಡುವನು ವರ |

ಸುದ್ದಾಗುವುದೋ ನಿನ್ನ ಜನ್ಮ ಪವಿತ್ರ ಆಗುವುದು ನಿನ್ನ ಜನ್ಮ

ಹಿಡಿದ ಚರಣ ನುಡಿಯುತೇ ಶರಣ ಗುರುಭೀಮಾಶಂಕರನ ನಾಮ ||3||

ಮಾಡೊ ಮಾಡೊ ಸದ್ಗುರುವಿನ ಸಂಗ |

ಮರ್ತರ್ಹ್ಯಾಂಗ ಸಿಕ್ಕೀತು ಮಂಗ ||ಪಲ್ಲ||

ಹ್ಯಾಂಗ ಬಂದೀ ಬರೊ ಯಾಳ್ಯಾಕ |

ನಿನಗ್ಯಾರು ಇದ್ರೂ ಅಲ್ಲಿ ಬಂಧುಬಳಗ

ಖೂನಾ ಹಿಡಕೊ ಯಾರು ಇಂದಿನವರು

ತುಸು ಖಾತ್ರಿ ಬರಲಿ ನಿನ್ನ ಮನಸಿಗ ||1||

ಕಣ್ಣು ಕಿವಿ ಮೂಗು ಬಾಯಿ ಮಾಡಿದವ |

ಎಲ್ಲ್ಯಾನ ಹುಡುಕರಿ ಒಳಹೊರಗ

ಕಣ್ತೆರೆದು ನೋಡು ಅಲ್ಹೇನು ಹೌದು

ಎಲ್ಲರು ಬಂದರ ನಿನ್ಹಂಗ ||2||

ಹಾದಿ ತೋರಿಸಿದವನ ಹೆಸರ್ಹ್ಯಾಂಗ ಮರತಿ |

ಓದೋ ವೇದ ಬರೀದದ ಹಿಂಗ

ಹೊತ್ತು ಹೋಗುತದ ಗೊತ್ತು ನೀ ಮಾಡಿಕೋ

ಮತ್ತ ನೀ ಹೋಗಾದು ಬಂದಾಗ ||3||

ಬಿತ್ತಿ ಬೆಳೆದ ಮುತ್ತು ಕಳದಲ್ಲಿ ಸಿಕ್ಕಿತ್ತು |

ಬ್ರಹ್ಮಪೂರ ಶರಣನ ಫೌಳ್ಯಾಗ

ಚನ್ನಬಸವ ಗುರು ಭೀಮಾಶಂಕರ

ಗುರು ಬೋಧಿಸಿ ಜಂಬಿಗಿ ಶಿವಶರಣಗ ||4||

ದೇವಾ ಹೆಂತಾದು ನಿನ್ನಾಟ |

ಗುರುರಾಯ ದಾವಲ್ಲಿ ನಿನ್ನ ಮಠ ||ಪಲ್ಲ||

ಹ್ಯಾಂಗ್ಹಿಡಿಯಲಿ ಗುರು ನೀನೆಂಬೊ ಗುರುತ |

ಅಜ್ಞಾನಿ ನಮಗಷ್ಟು ತಿಳಿಯಲಿಲ್ಲ ಅರ್ಥ

ಮಾಯಕ ಮೆಚ್ಚಿ ಕುಂತೇವು ನಿನ್ನ ಮರತ

ದೇವಾ ಎಂಥಾದೊ ಎಲ್ಲ್ಯಾದೊ ನಿನ್ನ ಮಠ ||1||

ಸಾಸ್ವಿ ಕಾಳಷ್ಟು ತೋರಿಸೋ ನಿನ್ನ ಹೆಜ್ಜಿ |

ಗುರ್ತಿಟ್ಟು ಮಾಡಂಗ ನಿನ್ನ ಪೂಜಿ

ದೇವರಂಥ ಜನ ನಡಿಯಲಿ ಅಂಜಿ

ಎಲ್ಲ್ಯಾದ ನಿನ್ನ ಮಠ ಎಂಥಾದೊ ದೇವಾ ||2||

ಹೆಣ್ಣು ನೀನಲ್ಲ ಹೆಣ್ಣಿಗೆ ಗಂಡು ನೀನಲ್ಲ |

ಮಕ್ಕಳು ಅಲ್ಲ ಮಕ್ಕಳಿಗೆ ತಂದೇ ನೀ ಅಲ್ಲ

ಏನೂ ನೀನಲ್ಲ ನಿನ್ನನ ಬಿಟ್ಟು ಜಗವಿಲ್ಲ

ಎಲ್ಲ್ಯಾದ ನಿನ್ನ ಮಠ ಎಂಥಾದು ದೇವಾ ||3||

ಅರಿಯದವರಿಗೆ ನೀನಾಗೀದಿ ಕಲ್ಲ |

ಬಲ್ಲಂತ ಜ್ಞಾನಿಗಳಿಗೆ ಸಕ್ಕರಿ ಬೆಲ್ಲ

ನಿನ್ನ ಬಿಟ್ಯಾಂವ ಅರಘಳಿಗಿರೋದಿಲ್ಲ

ಎಲ್ಲ್ಯಾದ ನಿನ್ನ ಮಠ ಎಂಥಾದು ದೇವಾ ||4||

ಜಂಬಗಿ ಶರಣರ ಸತ್ಯ ಈ ನುಡಿ |

ಬಾಯಿಯೊಳು ಸದಾ ಶಿವನಾಮವ ನುಡಿ

ಗುರು ಭೀಮಾಶಂಕರೆಂದು ಜೈಭೇರಿ ಹೂಡಿ

ಎಲ್ಲ್ಯಾದ ನಿನ್ನ ಮಠ ದೇವಾ ಹೆಂತಾದು ನಿನ್ನಾಟ ||5||

ತಮ್ಮಾ ಮುಂಜಾನೆದ್ದು ನಿತ್ಯ ಮಾಡು ಸ್ನಾನ |

ಮಾಡೋ ಪ್ರಾರ್ಥನಾ ಹಿಂಗಲಿ

ಹಳಿ ಹಿಂದಿನ ಬಡತನ ||ಪಲ್ಲ||

ಶುದ್ಧ ವಾಚ ರಚಿತ ಗಾನ |

ಎದ್ದು ಒಮ್ಮೆ ಮಾಡು ಸಾಧನ

ಗದ್ದಗಿ ಮ್ಯಾಲ ಸಿದ್ಧಾಸನ

ವಿದ್ಯಾ ಬರಿಸೋ ಸುವಾಸನ ||2||

ಹಗಲು ರಾತ್ರಿ ಎರಡೂ ಒಂದಿನ |

ವ್ಯರ್ಥ ಕಾಲಗಳದೇ ಸುಮ್ಮನ

ಮರ್ತು ಕೂಡಾ ಮಾತಿಲ್ಲ

ಇದನ್ನ ತುರ್ತು ಮಾಡಿಕೋ ಮಂತ್ರ ಸಾಧನ ||3||

ಪೂರ್ವ ಪಶ್ಚಿಮ ಉತ್ತರ ದಕ್ಷಿಣ |

ನೀ ಗಟ್ಟಿ ಮಾಡಿಕೋ ಅಷ್ಟಾವರ್ಣ

ಪಟ್ಟನೇ ಎದ್ದು ಹಿಡಿ ಭೂದೇವಿಯ ಚರಣ

ಬೇಡಿಕೋ ವರವಾ ಮಾಡಿಕೋ ಪ್ರಾರ್ಥನಾ ||4||

ಜಂಬೀಗಿ ಊರ ದೇವಸ್ಥಾನ |

ಅಂದೇ ಹೋಯಿತು ಅದು ಇದ್ದ ಅಜ್ಞಾನ

ಉತ್ತಮ ನುಡಿ ಅಂದ ಕವಿ ಶರಣ

ಶ್ರೀಮಂತ ಮಾಡಿದ ಇದು ಶೋಧನ ||5||

ಹಿಡಕೊಳ್ಳೂ ಬಿಡಬ್ಯಾಡ ದುಡಕೊಳ್ಳೊ ಸಿಗತಾದ |

ಪಡಕೊಳ್ಳೊ ನಾಮಕರಣ ಬೇಡಿಕೊಳ್ಳೊ ಸದ್ಗುರುವಿನ ಚರಣ ||ಪಲ್ಲ||

ಮಾಡಿಕೊಳ್ಳೊ ಹಿಂತಾ ವಡವಿ ಸ್ವಚ್ಛವಿದ್ರ ಭೂಷಣ |

ನೋಡಿಕೊಳ್ಳೊ ಕನ್ನಡಿ ಹಿಡಿದು ನಿನ್ನ ಮುಖ ಲಕ್ಷಣ

ನಿನ್ನೊಳು ನೀ ತಿಳಿಯದೆ ಹೇಳಿ ಆದಿ ಅವಲಕ್ಷಣ

ಜಟ್ಟಾನೆ ತಿಳಿದು ಮಾಡಿಕೊಳ್ಳೋ ಗುರು ಶಿಕ್ಷಣ ||1||

ನೋಡಿಕೊಳ್ಳೋ ಮುಂದ ಹೆಚ್ಚಿಗ್ಹೇಳೋದೇನ ಕಾರಣ |

ಕಡಕೊಳ್ಳಬೇಡ ಕಟ್ಟಿಥೇರಿಗೇಳ ಕಂಕಣ

ಹುಡುಕಿಕೊಳ್ಳೋ ಈ ತತ್ತಿಯಲ್ಲಿ ಮುತ್ತಿನ ತೋರಣ

ಈ ಮಡಕಿಯಲ್ಲಿ ಮಲ್ಲಿಗಿನಾಥ ತೋರತಾನ ಪೂರ್ಣ ||2||

ಕಿಡಕಿ ಅವ ಥೇರಿಗೊಂಬತ್ತು ಹುಡುಕಿದವನೇ ಜಾಣ |

ಬುಡಕ ನಾಲ್ಕು ಚಾಕೆರಡು ಅಚ್ಚಿಂದ ಕಾರಣ

ಬುಡ ಬಿಚ್ಚಿ ನೋಡೋ ಬ್ರಹ್ಮಪೂರ ಜಾಗದಲ್ಲಿ ವರ್ಣ

ದೃಢದಿಂದೆ ದುಡಿದು ಅಲ್ಲಿ ಆಗೋ ಉದ್ಧರಣ ||3||

ಸಡಕಿನ ಮ್ಯಾಲ ಗುಡಿ ಬ್ರಹ್ಮಪೂರ ಬಸವಣ್ಣ |

ಒಡೆಯ ಕಾಳಿಂಗ ಅಲ್ಲಿ ಇರುವ ಠಿಕಾಣ

ಹಿಡಿದು ಭೀಮಾಶಂಕರ ಗುರು ಮಾಡಿದ ಲಿಂಗಾಧಾರಣ

ಪಾದ ಮುಟ್ಟಿ ಕವಿತಾ ಮಾಡ್ಯಾರ ಜಂಬಿಗಿ ಶರಣ ||4||

ಸಜ್ಜನರ ಮಾತು ಸರ್ವರಾತ್ಮದಲಿ ಸೇರಿಕಾಯ್ತು |

ಸುಚಿರ್‍ಭೂತ ನಡದಂವಗ

ಅರಳಗುಂಡಗಿ ಶರಣನಂಗ ದುಡದಂವಗ

ಆತನ ಪಾದತೀರ್ಥ ಮಾಡಿ ಕುಡುದಂವಗ ||ಪಲ್ಲ||

ಬಾಯ್ಲಿ ಬರೇ ಶಾಸ್ತ್ರ ಹೇಳಿ ಬಲ್ಹಾಂಗ ನಡಿಯವಂಗ |

ಇಲ್ಲದೊಂದು ತೊಂದರಿ ಬರುವದು ಭಿಕ್ಕಿ ಬೇಡಂವಗ

ಹಂದಿ ಜನ್ಮ ತಪ್ಪದು ಸಾಧುರ ನಿಂದ್ಯಾ ಆಡಂವಗ

ಗಾಂಧಿ ಟೊಪಿಗಿ ತಲಿ ಮ್ಯಾಲಿಟ್ಟು ಸಿಂದಿ ಕುಡಿಯಂವಗ ||1||

ಶುಭ್ರ ಕಡ್ಡಿ ಧೋತರ ಉಟ್ಟು ಸೋಕಿ ಮಾಡಂವಗ |

ಪಾನಪಟ್ಟಿ ಸಿಗರೇಟ ಬಾಯಿದೊಳು ಹಿಡಿಯಂವಗ

ಬರಲಾರದೆ ಪದ ಬಾಯಿಲಿ ಅಲಲ ಅನಂವಗ

ಮಾನ್ಯ ಕೊಟ್ಟು ಕರಿಲಾರದೆ ಊಟಕ ಹೋಗಂವಗ

ಶಟಗಾರನ ಮಗಾ ಅಂತ ಅಂದಾರೇನೋ ಅಂವಗ ||2||

ತನ್ನ ಬಾಯಿಲಿಂದ ತಾನೇ ಪಂಡಿತ ಅನಂವಗ |

ಬರಲಾರದು ಮಾಡೇನಂದರ ಹಿಂತಾದ್ಯಾರ್ಯಾರೀಗ

ಇರಲಾರದು ಬುದ್ಧಿ ನಮ್ಮ ಗಾಂಧಿ ಮುತ್ಯಾನಂಗ

ಬರಲಾರದು ನಿಮಿತ್ಯ ಬಹಳ ಬಂದವ ಅವನೀಗ

ಮೀರಿದ ಮಹಾತ್ಮಾಗಾಂಧಿ ಸಾವು ಗೋಳಿವೊಳಗ ||3||

ಗಾಂಧಿ ಟೊಪ್ಪಿಗಿಟ್ಟು ನಡಿದಿ ಗಾಂಧಿ ಮುತ್ಯಾನಂಗ |

ಅವರ ಮಕ್ಕಳೆಲ್ಲಕೆಲ್ಲ ಗಾಂಧಿ ಮೊಮ್ಮಕ್ಕಳನಂಗ

ಗುರು ಭೀಮಾಶಂಕರ ಸ್ವಾಮಿ ಹೇಳಿದರೊ ಹಿಂಗ

ಜಂಬಿಗಿ ಶರಣ ಸಭಾದಲ್ಲಿ ಇಲ್ಲದರನು ಇದ್ದಂಗ

ಪದಾ ಮಾಡಿ ಹೇಳಿದಾರೋ ಭಜನಾ ಮಂಡಳೀಗ ||4||

ಓ ಓ ಓ ಓದಾನು ಬನ್ನಿರಿ ಈ ಸಾಲಿ |

ಓಂನಾಮ ರಾಗದಲಿ ಮುಂಜಾನೇಳುತಲಿ ||ಪಲ್ಲ||

ಓ ಓ ಓ ಅನ್ನುತ ಒಂದಕ್ಷರ ಓದುದ ಕಲಿ |

ಮೂರು ಮೂಲಾಕ್ಷರ ಮಂತ್ರ ಮುಪ್ಪಟ್ಟಾಗಿ ತನ್ನತ್ತಿರದಲಿ ||1||

ಓಂ ನಾಮ ಮೂರಾಕ್ಷರಲಿ ಅವು ಮೂರಾಕ್ಷರ ನಿನ್ನಲ್ಲಿ |

ಆ ಉಮ ಓಂ ಆರಕ್ಷರ ನಿನ್ನ ಕಂಠದೀ ಮುಪ್ಪಟ್ಟಾಗಿರಲಿ ||2||

ಸರಿಗಮಪದ ನಿನ್ನಾಶ್ರಯದಲ್ಲಿ ಸಪ್ತೇಳು ಸ್ವರ ಜರಿವುತ ಸುರಿಲಿ |

ಭೀಮಾಶಂಕರ ಗುರು ಚರಣದಲಿ ಬಕ್ಷೀಸ ರುದ್ರಾಕ್ಷಿ ಜಪಮಾಲೆ ||3||

ಶರಣು ಶರಣು ಶಿವಶರಣರಿಗೆ |

ಶಿವ ಶರಣು ಶರಣಾರ್ಥಿರಿ

ಶರಣಬಸವ ನಾಮವ ಜಪಿಸುತ

ಹಿಡಿ ಶರಣ ದಾರಿ ||ಪಲ್ಲ||

ಗುರುವಿನಂತಃಕರಣದ ಶಿವಶರಣರು |

ಹಿಡಿವರು ಏಕತಾರಿ

ಬತ್ತೀಸರಾಗ ಬಗಿ ತಿಳಿಯದ

ಕತ್ತಿಗ್ಯಾಕ ತಂಬೂರಿ

ಮಾತು ಮರಿಯದೆ ತುತ್ತಿಗೊಮ್ಮೆ

ಶಿವನಾಮವ ಸ್ಮರಿಸಿರಿ ||1||

ಶಿವಶಿವ ಎಂದು ಶಿವನಾಮವ ಉಚ್ಚರಿಸೋಣ |

ನೂರಾ ಎಂಟು ಸಾರಿ

ಶಿವಾರ್ಚನ ಲಿಂಗಾರ್ಚನ ಮೂರ್ಹೊತ್ತು

ಮಾಡಿದ್ದು ಪರಬಾರಿ

ಅಡಿಗಡಿಗೆ ಬಿಡದೆ ಸ್ಮರಿಸುತ

ಜಡೆಯಲಿ ಜ್ಞಾನದ ಝರಿ ||2||

ದೃಢವಂದನಾ ಮಾಡಿ ಮೃಢಹರನ

ನೆನಿದಡೆ ಅಲ್ಲೇನದರಿ

ಬಡಾನೆ ಬಾವಿಗ್ಹೋಗಿ ಕೊಡ ತುಂಬಿ

ತರೋ ನೀರ ಬಸವಣ್ಣ ಬಡು ಏನರಿ

ಶರಣು ಹರಳಯ್ಯಗ ಬಸವಣ್ಣ ಅಂದಿದ

ಶರಣು ಶರಣಾರ್ಥಿರಿ ||3||

ಶುದ್ಧ ನಡಾನುಡಿ ಇದೇ ಜನ್ಮಕಡಿ

ಪರ ಹಿತಕಾಗಿ ಗುಡಿದು

ಅವಗುಣ ಹಾರ್ಹೊಡಿ ಶಿವಗುಣ ದಾರಿ ಹಿಡಿ

ಬಿಡಬ್ಯಾಡ ಅತ್ತಿತ್ತ ನೋಡಿರಿ

ಗುರು ಭೀಮಾಶಂಕರನ ಚರಣಕ ಶಿರ ಬಾಗಿ

ಶರಣೆಂದು ಜೈ ಹೊಡಿರಿ ||4||

ಕೇಳಿರಣ್ಣ ಕೇಳಿರಣ್ಣ ನಾಳಿಗಿ ಹುಟ್ಟಿ |

ಬರತಾನಂದಿ ಚನ್ನಬಸವಣ್ಣ ||ಪಲ್ಲ||

ಕಲ್ಲಕೋಳಿ ಕೂಗತಾದಂತೆ ಮುಲ್ಲಾ ಆಗಿ |

ಚೂರಿ ಹಾಕತಾನ ನಿಂತ

ಬಲ್ಲವರಿಗೆ ತಿಳಿತಿದರರ್ಥ

ಅರಿದವರಿಗೆ ಏನು ಮಾಹಿತ ||1||

ಕಲ್ಲಕೋಳಿ ಆದವರೂ ನೀವೇ |

ಮುಲ್ಲಾ ಆಗಿ ಚೂರಿ ಹಾಕಿದವರು ನೀವೇ

ಇಲ್ಲದ ಶಾಸ್ತ್ರ ಹೇಳುವರು ನೀವೇ

ಬಲ್ಲಂಗ ಮಾತ ಆಡಾವರು ನೀವೇ

ಕಾಡಿಗಲ್ಲಿಗೆ ಕಟದವರು ನೀವೇ ||2||

ಕೋಡ ಕಿವಿ ಮಾಡಿದವರು ನೀವೇ |

ದುಷ್ಟರಿಗ್ಹಚ್ಚಿ ಶರಣನ ಗುಡಿ ಮುಂದ

ಬಸವಣ್ಣಗ ಒಡಿಸಿದವರು ನೀವೇ ||3||

ಶ್ಯಾಣ್ಯಾರಿಗ ಶಾಣ್ಯ ಅನ್ನುವರು ನೀವೇ |

ಶಾಣೇರಿಗೆ ಹುಚ್ಚನ್ನವರು ನೀವೇ

ಹೆಚ್ಚಾದ ನಮ್ಮ ಮಹಾತ್ಮ ಗಾಂಧಿಗಿ

ಹುಚ್ಚಂತ್ಹೇಳಿ ಹೊಡಿಸಿದವರು ನೀವೇ ||4||

ಸತ್ಯ ನುಡಿ ಅನ್ನವರು ನೀವೇ |

ಅತ್ಯಾಚಾರ ಮಾಡುವದು ನೀವೇ

ಮುತ್ಯಾ ಚನ್ನಬಸವ ನಾಮ

ಸರ್ವಜನರಿಗೆಲ್ಲ ಪ್ರೇಮ ||5||

ಭೀಮಾಶಂಕರ ಗುರು ನಾಮಕರಣ |

ಭಕ್ತರಿಗೆ ಮಾಡಿ ಉದ್‍ರ್ಧಣ

ಪಾದ ಮುಟ್ಟಿ ಆದ ಪಾವನ

ಕವಿಮಾಡಿದ ಜಂಬಗಿ ಶರಣ ||6||

ಕುಲಕುಲವೆಂದು ಕೂಗುತ್ತೀರಿ |

ನಿಮ್ಮ ನಿಜಕುಲ ಯಾವುದಣ್ಣ

ಸಾರಿ ಹೇಳ್ಯಾನ ಕಲ್ಯಾಣ ಬಸವಣ್ಣ

ಮಾನವ ಜಾತಿ ತಾನೊಂದೇ ವರ್ಣ ||ಪಲ್ಲ||

ಶೂದ್ರ ವೈಶ್ಯ ಕ್ಷೇತ್ರ ಬ್ರಾಹ್ಮಣ |

ಬರೆದಿಟ್ಟಾದ ಇವ ನಾಲ್ಕು ವರ್ಣ

ಹೆಣ್ಣು ಗಂಡು ಎರಡೂ ಕೂಡಿದರ

ಜಗವಾಯಿತು ನಿರ್ಮಾಣ ||1||

ಮೇಲುಕೀಳು ಎಂಬುದೇನ ಕಾರಣ |

ಹೊಲಿ ತುಂಬಿದ ಗಡಿಗಿದು ಪೂರ್ಣ

ಮಲಮೂತ್ರದಲ್ಲಿ ಹುಟ್ಟಿದ ಚರ್ಮದಂಗಿಗೆ

ಚೆಲು ನಾ ಅನಬೇಡಿರಣ್ಣ

ಮಾನವನಲ್ಲಿರಬೇಕು ಅಂತಃಕರಣ ||2||

ದಯಾ ಧರ್ಮದ ಮೂಲ ತಿಳಿರಣ್ಣಾ

ದಯಾ ಧರ್ಮ ಅಂತಃಕರಣ ಇವ

ಮೂರು ತಿಳಿದವನೆ ನಿಜ ಶರಣ ||3||

ಗುರುಪಾದಕ ಬಾಗವ ಶರಣ |

ಗರವಿಲಿ ತಿರಗಂವ ರಾವಣ

ನೆರೆದ ಸಭಾದಲಿ ನಾ ರಾವಣನೆಂದು

ಎದೆ ಮೇಲೆ ಹಾಯ್ಕೊಂಡ ಬಾಣ ||4||

ಮಾನವರೊಂದೆನ್ನವನೆ ಜಾಣ |

ಕಾನೂನು ಹೀಂಗೈತಿ ರಾಜಕಾರಣ

ಒಂದೇ ಮಾತಿಗೊಪ್ಪಿ ಕಂದ ಭವಾನಿಗೆ

ಹಾಡೆಂದ ಜಂಬಿಗಿ ಶಿವಶರಣ ||5||

ಮಿತ್ರೇರೆಲ್ಲರು ಕೂಡಿ ಜಾತ್ರಿ ಕಣ್ಣಲಿ ನೋಡಿ |

ಜಾಗೃತ ಮಾಡೋಣ ಬಾ

ಜನನಿಯ ಸ್ತೋತ್ರವ ಮಾಡೋನು ಬಾ

ಕಾಶಿ ಯಾತ್ರವ ಮಾಡೋನು ಬಾ ಬಾ ||ಪಲ್ಲ||

ಸುಮ್ಮೆ ಈ ಲೋಕದೊಳಗ ಹುಟ್ಟಿ ಕೆಟ್ಟೇವರಿ |

ಸುಖವಿಲ್ಲ ಗಂಡನ ಸಂಗತಿ ಬಿಡರಿ

ಬ್ಯಾಸರಾಗೇತವ್ವ ಬೀಸಿ ಬೀಸಿ ಏಸೊರ್ಷರಿ

ಹ್ಯಾಂಗ ಇನ್ನ ಇವನಲ್ಲಿ ದುಡಿಯಲಿರಿ ||1||

ಆರು ಮಂದಿ ಅಕ್ಕ ತಂಗೆಂದಿರರೆ |

ಅತ್ತಿ ಮಾವನಾಜ್ಞಾದೊಳು ದುಡಿರೇ

ಕಡಿಗಾಗೋದಿಲ್ಲ ಗಂಡ ಕಡದಾಡಿ ಹೋಗ್ತಾನ

ಸುಡರಿವನ ತಳ್ಳಿ ನಾಳೆನಬೇಡಿರೇ ||2||

ಕಾಕಗುಣದ ಕಾಲುಂಗರಿಡಬೇಕರಿ |

ಕುಬ್ಜವ ಎಂಬೊ ಕುಪ್ಪಸ ಕಳದಿಡರಿ

ಪಾತಗುಣದ ಒಂದು ಪಂಜಿಯ ತಂದು

ನಂಬಿಗಸ್ತನಂತ ಒಂದು ಕಾವಿಯ ತೊಡರಿ ||3||

ಭಕ್ತಿಯೆಂಬೊ ಭಸ್ಮವ ಧರಿಸಿರಿ |

ಸದ್ಭಾವೆಂಬೊ ಜೋಳಗಿ ಹೊಲಿಸಿರಿ

ಧರ್ಮೆಂಬೊ ದಂಡುಕೋಲ ಕೈಯಲ್ಹಿಡಿದು

ಜ್ಞಾನೆಂಬೊ ಧ್ಯಾನ ಭಿಕ್ಷೆ ಬೇಡಿರಿ ||4||

ಚಂದ್ರಭಾಗದಲ್ಲಿ ಸ್ನಾನ ಮಾಡಿರಿ |

ಮಾಡಿದಂತಾ ಕರ್ಮಗಳ ತೊಳಿಯಿರಿ

ಜಂಬಗಿ ಶರಣನ ಗಾನವ ಕೇಳಿ

ಮುಪ್ಪಾಗದಂಥ ಮುತ್ತೈದಿತನ ಪಡೆಯಿರಿ ||5||

ದೇವನೊಬ್ಬ ನೋಡಾನು ಬಾ |

ಮಾಡಾನು ಸ್ತುತಿ ಪ್ರಾರಂಭ ||ಪಲ್ಲ||

ನೆಲ ಒಂದೆ ಜಲ ಒಂದೆ ಕುಲವು ಒಂದೇ |

ಕೂಡಾನು ಬಾ ಕೂಡಾನು ಬಾ ||1||

ಮಾನವ ಜನ್ಮವೊಂದು ನಾಮ ಬೇರೆ |

ಬ್ರಹ್ಮ ನೀ ತೋರು ಬಾ ||2||

ಧರಣಿಯೊಳೊಬ್ಬ ಬಾಬಾ ಸಾಹೇಬ |

ಅವನ ಹಬ್ಬ ಮಾಡೋನು ಬಾ ||3||

ಗುರುದೇವ ಭೀಮಾಶಂಕರ |

ಶರಣೆಂದು ಪಾದಕ್ಕೆ ಹೊಂದಾನು ಬಾ ||4||

ಮಾಡಬೇಡೆಲವೋ ಮನವೆ |

ಸುಮ್ಮನೆ ಕೂಡಬೇಡೆಲವೊ

ಮಾಡಬೇಡ ಮಾಡಲದಿ ಇರಬೇಡ

ಕಂಡದ್ದೆಲ್ಲಾ ನೋಡಿ ಬೇಡಲು ಬೇಡ ||ಪಲ್ಲ||

ಇದು ನೆಲಿ ಇಲ್ಲದ ಮರವೊ ಮನವೆ |

ನೀನು ಏರಬೇಡೆಲವೊ

ಕಂಡದೆಲ್ಲ ನೋಡಿ ಚೋರ ಗುಣವ ಮಾಡಿ

ಸುಮ್ಮಕಿದ್ದವರಿಗೆ ಬಯಲಿಗೆ ತರಬೇಡ ||1||

ಆಸೆ ಮಾಡಲು ಬೇಡ ಪರರಿಗೆ |

ದೂಷಿಸಿ ನುಡಿಯಲು ಬೇಡ

ಸಾಕು ಮಾಡು ಈ ಕಾಕ ಗುಣಗಳೆಲ್ಲ

ಜ್ವಾಕಿ ಮಾಡು ಶಿವತತ್ವದ ನುಡಿಗಳನ ||2||

ಸುಳ್ಳ ಆಡಲು ಬೇಡ ಸುಳ್ಳರ ಸಂಗತಿ ಮಾಡಬೇಡ |

ಸುಳ್ಳಾಡಿ ಬ್ರಹ್ಮ ತಾ ಶಿರವ ಕಳಕೊಂಡ

ಕಳವು ಮಾಡಲು ಬೇಡ ಕಳ್ಳರ ಸಂಗತಿ ಮಾಡಬೇಡ

ಕಳವ ಮಾಡಿ ಕಬೀರ ಕಮಲನ ಸಿರಕೊಯ್ದ ||3||

ಹಾದರ ಮಾಡಿಲ್ಲವೊ ಆ ಚಂದ್ರ ಕಪ್ಪಾಗಿರಲು |

ಶ್ರೇಷ್ಠಾದ ಇಂದ್ರನು ಗೌತಮನ ಶಾಪಕೆ

ಕೆಟ್ಟು ಕುಂತವ ಯಾತಕ ಬರಲು

ಅಂಥವನು ಸಂಗತಿ ಮಾಡಲು ಬೇಡ ||4||

ಬಾಸಿಗಿ ಊರ ಸ್ಥಲವೊ ಶಿವಶರಣನ ವಾಸ ತ್ರಿಕಾಲ |

ಶಿವಶರಣರ ನೆರೆಸಿ ಥೇರವ ಎಳಸಿ

ಗುರು ಭೀಮಾಶಂಕರನ ಶರಣ

ಜೈಭೇರಿ ಹೊಡಿಸಿ ||5||

ಏನಿದು ಏನಿದು ಖಟಪಿಟಿ ತಿಳಿದು |

ವ್ಯಾಪಾರ ಮಾಡಿಕೊ ಝಟಪಿಟಿ ||ಪಲ್ಲ||

ಸತ್ಯವ ನುಡಿ ಶರಣರ ಆಟ |

ಸದಾ ಶಿವ ಶಿವ ಮಾಡೋದು ಬಾಯಿಪಾಠ

ಶಿವಶರಣರ ವಾಸ ಬಾಳಿಯ ತೋಟ

ಶಿವಶರಣರುಂಬುದು ಬಂಗಾರ ತಾಟ ||1||

ಸತ್ಯದ ಎಡಿ ಮುತ್ಯಾನ ಊಟ |

ಅಸತ್ಯದ ನುಡಿ ಘುಕ್ಕಟ

ಮುತ್ಯಾ ಮಲ್ಲಯ್ಯನ ತೋಟ

ಇದು ನಾಗನಟ್ಟಿ ಬಿದರಿನ ಬೆಟ್ಟ ||2||

ಬಾಲ್ಕಿಯ ಕಲ್ಯಾಣ ಕೊಳ್ಳಿಮಠ |

ನಾಗನಹಳ್ಳಿಯಲ್ಲಿ ಲಿಂಗದ ಪೀಠ

ಕಂದ ಶಿವಶರಣನ ಕವಿಗಂಟ

ಗುರು ಭೀಮಾಶಂಕರಲಿಂಗ ಕೊಟ್ಟ ||3||

ಶಿವಾಚಾರ ಧರ್ಮಕ ಸರಿಯಾಗಿ ನಡಿ |

ಶಿವ ಮೆಚ್ಚಿರುವನು ನಿಮಗ

ಸದಾ ಶಿವನಾಮ ನುಡಿ ಬಾಯೊಳಗ

ಸಾರ ತಿಳಿಸುವೆ ಶಿವಶರಣರಿಗ ||ಪಲ್ಲ||

ಅರು ಬರತಾದ ಆಚಾರ ಮಾಡಂವಗ |

ವರ ಕೊಡತಾನ ಶಿವ ತಿಳಿಯದ್ರೊಳಗ

ಗುರು ಇರುದಿಲ್ಲ ಸತ್ಯ ಶರಣರಿಗ

ಗುರು ಬರತಾನ ಅಂಥವರ ಮನಿಗ ||1||

ಮರಿಬ್ಯಾಡರಿ ಶಿವನಾಮ ಅಡಿಗಡಿಗೆ |

ನಿನ್ನಲ್ಲೆ ಶಿವ ನಿನ್ನ ಬಿಟ್ಟಿಲ್ಲ ಕಡಿಗೆ

ನೀನಾಗಿ ದುಡಿ ಮತ್ಯಾರಗೊಡಿ ನಿನಗೆ

ಶಿವ ಶಿವ ಅನ್ನು ಶಿವ ಹಚ್ಚತಾನ ದಡೀಗೆ ||2||

ಶಿವ ಮೆಚ್ಚಿದ ಮೋಳಿಗಿ ಮಹಾರಾಯಗ |

ಭಿಕ್ಷಕೋದ ನುಚ್ಚಿನಂಬಲಿಗ

ಹುಚ್ಚ ಶರಣ ಜಂಬಗಿ ಊರಾಗ

ಇಚ್ಚಾ ಇಟ್ಟ ಗುರುಶಂಕರನ ಚರಣಿಗ ||3||

ಮಾಡೋ ನೀ ಶಿವಮಂತ್ರ ಸಾಧನ |

ಹಾಕೊ ನೀ ಉದಯಾಸನ ||ಪಲ್ಲ||

ಎದ್ದು ಉದಯದಲಿ ಹಾಕೊ ಸಿಂಹಾಸನ |

ಸಿದ್ಧಾಸನ ಶುದ್ಧೋ ಮುದ್ದು ಮಗನ

ಜಲಸಿದ್ಧಿ ಮಂತ್ರ ಜಪಿಸೋ ನೀನ

ಮೊದಲ ಶಿವಪೂಜಿ ಆಮೇಲೆ ಲಿಂಗಾರ್ಚನ ||1||

ಅರುಣೋದಯದಿ ಎದ್ದು ನೀ ಮುನ್ನ |

ಗಂಗಾನದಿಯಲ್ಲಿ ಮಾಡಿ ಸ್ನಾನ

ಕರ ಮುಗಿದು ಮಾಡೋ ನೀ ಪ್ರಾರ್ಥನಾ

ಸರಸ್ವತಿ ಗಂಗಾ ಯಮುನಾ ||2||

ಸಪ್ತೇಳು ಸಮುದ್ರದಲಿ ಘನ |

ಬಲಿಸೊ ಯೋಗಾಸನ ಸ್ಥಾನ

ಗುರು ಧ್ಯಾನದಿಂದ ಮುಕ್ತಿ ಸಾಧನ

ಅರು ಇಲ್ಲದೆ ಮಾಡು ಹರನ ಧ್ಯಾನ ||3||

ಶುದ್ಧ ಶಿವಾಚಾರ ಇದನ್ನಾಚರಿಸಿದವನ |

ಮಂತ್ರ ಲಕ್ಷಣ ಮುಖ ಚಿನ್ನ

ಥಳಥಳಿಸುವ ಸೂರ್ಯಜ್ಯೋತಿ ಪ್ರಕಾಶನ

ಹೊಳಪು ಮುತ್ತು ರತ್ನ ||4||

ಎಂದೊ ಏನೊ ಅಂದು ಇಂದಿನವನ |

ಅಜ ಹರಿ ಸುರರೆಲ್ಲಾ ಹಾಕಿ ಸಿದ್ಧಾಸನ

ತಪ್ಪಿಲ್ಲ ಇಪ್ಪತ್ತೆಂಟು ಆಸನ

ಒಪ್ಪಿಕೊಂಡು ಕಂಡೆ ಮುತ್ತೈದಿತನ ||5||

ಮೊದಲೈದಕ್ಷರ ಅವು ಉತ್ಪನ್ನ |

ಇದಲ್ಲದೆ ಇಪ್ಪತ್ತೈದು ತತ್ವ ಸಿಂಹಾಸನ

ಜಾಗ್ರದಲ್ಲಿಟ್ಟು ಜಪಿಸಯ್ಯಾ ನೀನು ಸಿದ್ಧಾಸನ

ಜಪ್ಪಿಸಿ ಸೇವಿಸೊ ಸದ್ಗುರು ವಚನ ||6||

ಅರ್ತು ಆಚರಿಸೊ ಮರ್ತಿರಬೇಡ ನೀ |

ತುರ್ತು ಆಚರಿಸೊ ಸಪ್ತೇಳು ಆಸನ

ವ್ಯರ್ಥಾದೀತೊ ಮತ್ರ್ಯರ ಗುರುಧ್ಯಾನ

ಒಂದೆರಡು ಮೂರು ಮೂಲ ತಿಳಿಬೇಕ ನೀನ ||7||

ನೋಡೋ ನಿನ್ನಲೆ ದೇವರ್ಹನ |

ಗುರು ತೋರುಸ್ತಾನ

ಬ್ರಹ್ಮ ವಿಷ್ಣು ರುದ್ರರಿರುವ ಸ್ಥಾನ

ಮೂರು ತಿಳಿಬೇಕ ನೀನ ||8||

ತಿಳಿಯೋದಿಲ್ಲ ಗುರುಪುತ್ರರಾಗೋತನ

ಆತ್ಮಾರಾಮ ತನ್ನಲ್ಲಿರುತಾನ

ಶರಣು ಹೋಗೊ ಗುರು ಭೀಮಾಶಂಕರನ

ಸೂಕ್ಷ್ಮ ನುಡಿ ಜಂಬಗಿ ಶಿವಶರಣ ||9||

ರಾಮ ರಾಮ ನಿಮ್ಮ ನಾಮ |

ಎಲ್ಲರಲಿ ನೀನೆ ಆತ್ಮಾರಾಮ ||ಪಲ್ಲ||

ಮೂರು ಲೋಕದ ಮಾಲಕ ನೀನೆ ಪರಮಾತ್ಮ |

ನಿನ್ನ ಭಜನೆ ಮಾಡದವರು ಪಶುವಿನ ಜನ್ಮ ||1||

ದಶರಥನ ಸತಿ ಕೌಶಲ್ಯಾಗೆ ಸುತನೇ ನೀ ರಾಮ |

ಸೀತಾದೇವಿಗೆ ಪತಿ ನೀನೇ ರಾಮ ||2||

ಭಜನೆ ಮಾಡೊ ಭಕ್ತರು ನಿನ್ನಲ್ಲಿ ಬಂದ್ರೋ ತಮಾಮ |

ಆಶೀರ್ವಾದ ಕೊಡು ದೇವಾ ಇರಲೆಂದು ಕ್ಷೇಮ ||3||

ಜಂಬಿಗಿ ಗ್ರಾಮದಲ್ಲಿ ಆಗೊ ಆರಾಮ |

ಭೀಮಾಶಂಕರನ ಚರಣನ ಶರಣ ||4||

ಶಿವ ಅನ್ನು ಪ್ರಾಣಿ ಬೇರಿಲ್ಲ |

ತನ್ನಾತ್ಮದಲ್ಲಿ ಹನ ದೂರಿಲ್ಲ

ಶರಣಂದವರಿಗಿ ಮರಣಿಲ್ಲ

ಮಹಾತ್ಮಿಕರ ಮಾತು ಸುಳ್ಳಲ್ಲ ||ಪಲ್ಲ||

ಸಂತ ತುಕಾರಾಮ ಶಿವನಲ್ಲಾ |

ತಿಳಿಲಾರದೆ ಭಜನೆ ಮಾಡ್ತೀರಿ ಫುಜಲ

ತಿಳಿದು ನಡಿರಿ ತುಕಾರಾಮನಂತೆ ನಾವು ನೀವು

ತೆರಿತದ ಜ್ಞಾನದ ಬಾಗಿಲ ||1||

ಶಿವನೊಲಿಸುವುದು ಸುಮ್ಮಿಲ್ಲ |

ಶಿವಾ ನರರ ಕೈಯಾಗ ತಾ ಸಿಕ್ಕಿಲ್ಲ

ನರರ ನಡೆ ನೋಡಿ ನಕ್ಕ ನಾರಾಯಣ

ಬಿಡಸ್ಯಾನೊ ಮಾರ್ಕಂಡೇನ ಸೂಲ ||2||

ಶಾಸ್ತ್ರ ಪುರಾಣೋದಿರಿ ಫುಜಲ |

ಮಸ್ತಕದಾಗ ತುಂಬಿಟ್ಟೇರಿ ಕಲ್ಲ

ಆತ್ಮದಂತೆ ಪರ ಆತ್ಮ ತಿಳಿದಾವ ಶ್ರೇಷ್ಠಾಲಾ

ಕಬೀರನ ಸುತ ಕಮಲ ||3||

ಜಾತಿ ಭೇದ ಮಾಡೊ ಘಾತಕ ಮನುಜನ |

ಸಂಗತಿ ಬ್ಯಾಡಬಿಡು ಸುಖವಿಲ್ಲ

ಸಾಧು ಸಂತರ ಸದಾ ನಿಂದಾ ಆಡಾಂವ

ಮುಂದ ಹಂದಿ ಜನ್ಮ ತಪ್ಪೋದಿಲ್ಲ ||4||

ಆರಗುಣ ಅಳಿ ಮೂರಗುಣ ತಿಳಿದಿರು ನೀ |

ದೊರಿತಾದೊ ಸದ್ಗುರುವಿನ ಪ್ಯಾಲ

ಜಂಬಗಿ ಶರಣನ ಭಾವಕ ಗುರು ಭೀಮಾಶಂಕರ

ಹಸ್ತ ಇಟ್ಟ ಮಸ್ತಕದ ಮ್ಯಾಲ ||5||

ಮಾಡೊ ಸಜ್ಜನರ ಸಂಗ ಸದಾ ನೀನು |

ಮಾಡೊ ಸಜ್ಜನರ ಸಂಗ ||ಪಲ್ಲ||

ಸಜ್ಜನರ ಸಂಗ ಭಾವಿಸಿದವರ ಭಕ್ತಿಲಿ |

ಮನವೊಪ್ಪಿ ಮಾಡೊ ಸಾಷ್ಟಾಂಗ ||1||

ಮಾಡಿದಿರಿ ಫಲ ಬೇಡಿದವಗ |

ನೀಡುವನೋ ಗುರು ಗಾಢ ಪದವಿ ||2||

ಕೂಸು ಶಿವಶರಣನ ಭಾಷಣ ಕೇಳುತಾ |

ಗುರು ಭೀಮಾಶಂಕರನ ಪಾದಕೆ ನವಿಸುತ || ||3||

ಜಾಣತನದಿಂದ ಜಗದಲ್ಲಿ ಬಾಳ್ವೆ |

ಮಾಡೋ ಮಾಡೋ ಮಾಡೋ

ಜಾಗ್ರದಿಂದ ನೋಡೋ ನೋಡೋ ನೋಡೊ

ಜಾರಕರ್ಮ ಮಾಡಬ್ಯಾಡೊ ಬ್ಯಾಡೊ ಬ್ಯಾಡೊ ||ಪಲ್ಲ||

ಪರನಾರಿ ಸಂಗ ಪಾಪಕ ಈಡೊ |

ಪರಸತಿಗೆ ಬಯಸಂವಗಾಗುವದು ಕೇಡೊ

ದುರಾಚಾರದಿಂದ ದ್ರೋಪತಿ ಕೆಣಕಿ

ಕೀಚಕ ಸತ್ತ ನಮ್ಮ ನಿಮ್ಮದೇನು ಪಾಡೊ ||1||

ಪ್ರೀತಿಯಿಂದ ತನ್ನ ಸತಿಯೊಡಗೂಡೊ |

ಪರಮಾನಂದ ನಿನಗ ಮಾಡಿದ ಜೋಡೊ

ಪರಮಾನಂದದ ಅರಮನಿ ಬಿಟ್ಟು

ದುರ್ಮರಣ ನರಕದಲ್ಲಿ ಬೀಳಬ್ಯಾಡೋ ||2||

ಧರ್ಮಕರ್ಮ ನಿನ್ನಲ್ಲಿ ಹುಡಕ್ಯಾಡೊ |

ತೆರಿ ಜ್ಞಾನದ ಕಣ್ಣು ಆಗಬೇಡ ಕುರಡೊ

ದರುವಿಗಚ್ಚಿ ಶರಣಂದ ಭವಾನಿಗಿ

ಘಾತಕ ಮನುಜರ ಎದುರಿಗೆ ಹಾಡೊ ||3||

ಏಕವೋ ಈ ಲೋಕವನ್ನು |

ಮೂಕನೊ ಮಹಾದೇವನೊ ||ಪಲ್ಲ||

ಏಕ ಸೂರ್ಯ ದೋ ಚಂದ್ರನೋ |

ಸೌಲಾಕ ಚುಕ್ಕಿ ನಾಮೊಂದಲ್ಲೇನೋ

ಬೇಕಾಗಿ ಬರೆದಿಟ್ಟ ಬ್ರಹ್ಮನೋ

ಮೂರು ಲೋಕದೊಡೆಯ ಒಬ್ಬ ವಾಯುದೇವನೋ ||1||

ಲೋಕದ ಧರುಣಿ ಏಕಲ್ಲೇನೊ |

ಆ ಏಕಲಿಂದೆ ಮೂರು ಲೋಕಲ್ಲೇನೋ

ಪಾರು ಮಾಡೊ ಮನಪಲ್ಲಕ್ಕಿದೊಳ್ಳ ಕುಳಿತು

ತೂಕಕ್ಕೆ ತಂದು ತಾನೇ ತೂಗುವನೋ ||2||

ಸ್ವರ್ಗ ಮತ್ರ್ಯ ಪಾತಾಳೊಂದಲ್ಲೇನೊ |

ಆ ಸೀತಳ ಗಂಗಾನ ಹೆಸರೇನೊ

ಬಸಿರಾದಳೊ ಬಸವಣ್ಣನಕ್ಕ ನಾಗಮ್ಮ

ಹುಟ್ಟಿ ಬರುವನೋ ಚೆನ್ನಬಸವನೋ ||3||

ಬಸವ ಎಂಬುವ ನಾಮೊಂದಲ್ಲೇನೋ |

ಬಾಗೇವಾಡಿ ಬಸವನ ಸ್ಥಳ ಕಲ್ಯಾಣೋ

ಕುಲಚಲಾರಿಸುವ ಜಂಬಗಿ ಶರಣನ ಗುರು

ಜಗದೊಡೆಯ ಸೋಹಂ ಬ್ರಹ್ಮ ತಾನಕೆ ಬಲ್ಲನೊ ||4||

ಬರುವಿರೇನ ಚಂದ್ರಭಾಗದ ಸ್ನಾನ ಮಾಡೋದಕ |

ಬಹಳ ದಿನದಿಂದ ಬಲ್ತಾದ

ನಮ್ಮ ಕರ್ಮ ತೊಳಕೊಳ್ಳದಕ ||ಪಲ್ಲ||

ಬಾಯಿಯೊಳು ಬಸವನ ನಾಮವ |

ನುಡಿ ಸದಾ ಭವ ದಾಟೋ ತನಕ

ಬಸವ ಅನ್ನು ಮುಂದೆ ಬಂದಿದ

ವಿಘ್ನ ಬಯಲಾಗುವ ತನಕ

ಶಿವನಾಮವ ನುಡಿ ಮರಿಬೇಡ

ಈ ನಾವ ನದಿ ದಾಟೋ ತನಕ ||1||

ಬನ್ನಿರಿ ನೀವೆಲ್ಲರು ಮತ್ತೇನು ಮಾಡೋಣ |

ನದಿ ದಾಟಿದ ಬಳಿಕ

ಈ ಭಾರತ ಮೇಲೆ ನಿಂತು ಭಜನೀ

ಮಾಡೋಣ ಶಿವ ಭೆಟ್ಟಿ ಆಗುವ ತನಕ

ಬಾಗುವೆನು ಸಿರ ಬಾಗಿ ಭಾರತಿ

ಆನನಿಗೆ ಗಾಂಧೀ ಬೇಡೋದಕ ||2||

ಕೇಳರಿ ಹೇಳುವೆ ಬಹಳೇನು |

ಮಾತಿದು ನಾಳೆನ್ನುವದ್ಯಾಕ

ಆಳಾಗಿ ದುಡಿರಿ ಬೀಳದ ಹೊಲ

ಬಿತ್ತಿ ಬೆಳೆದಿದ್ದರೆ ಸುಖ

ಸಜ್ಜನರ ಸ್ತುತಿಸುತ ಭಜನೆ ಮಾಡೋಣ

ಭವಬಾಧಿ ಕಡಿಮೆಯಾಗೋ ತನಕ ||3||

ಶಿವಶರಣನ ನುಡಿ ಸಾಕ್ಷಿಯುಳ್ಳವರಾಗಿ |

ಒಪ್ಪಿಕೊಂಡರದಕ

ಶಿಕ್ಷಕ ಶರಣಯ್ಯ ಎರಗಿದ ಗುರು

ಭೀಮಾಶಂಕರನ ಚರಣಕ

ಸುಖಿಯೊಳು ಶರಣ ಅಧ್ಯಕ್ಷರಾದರು

ಕೆರಿಭಾಸಗಿ ಮಠಕೆ ಬರುವಿರೇನ ||4||

ಶುದ್ಧ ಶಿವಶರಣಿಯರೆ ಮುದ್ಧಾಮ ಹೋಗಾನು ಬರ್ರೇ |

ಶಿವಮಂತ್ರ ಬಲಿಸೋದಕ್ಕ ಶಿವಮಂತ್ರ ಬಲಿಸೋದಕ್ಕ

ಉಡುತಡಿ ಗ್ರಾಮದಲ್ಲಿ ಜನಿಸಿದಂತಹ

ಶಿವಶರಣೆ ಅಕ್ಕಮಹಾದೇವಿಯ ದರ್ಶನಕ ||ಪಲ್ಲ||

ಚಿಕ್ಕ ವಯಸ್ಸಿನೊಳು ಅಕ್ಕಮಹಾದೇವಿ |

ಧಿಕ್ಕರಿಸಿದಳು ಈ ದೇಹಕ್ಕ

ಎಂದಿಗಾದರು ಬಿಟ್ಹೋಗುವುದು ಸವಿಸುಖ

ಮನಿಮಾರ ಇದಕ್ಯಾಕ

ಅಕ್ಕನಾಳಾಗಿ ಮುದ್ದಾಮ ಹೋಗಾನು

ಬರ್ರಿ ಶಿವಮಂತ್ರವ ಬಲಿಸೋದಕ ||1||

ಅಕ್ಕಮಹಾದೇವಿ ಆರಕ್ಷರದ ಅನುಭವ |

ಅರ್ಥ ಮಾಡೋದಕ ಅರ್ತಿಲಿಂದೆ

ಅವ್ವ ಅಪ್ಪ ಪ್ರೀತಿಲೆ ಮಗಳ ಹಡದು

ಮುಂದೆ ಹಾರ್ಹೊಡಿತಾರ ಇದಕ

ಮುಂದ ಮೂರಕ್ಷರ ಮೂಲ ತಿಳಿದು

ಬರ್ರಿ ಶಿವಮಂತ್ರವ ಬಲಿಸೋದಕ ||2||

ಗುರುವಿನ ನಾಮಕರಣ ಗುರುಲಿಂಗ ಸ್ವಾಮಿ |

ಗುರುಯಿಲ್ಲದ ಜಲ್ಮ ಯಾತಕ

ಮರ್ತಿರಬಾರದೆಂದು ಅರಿತು ಸೇವಿಸಿದಳೊ

ಗುರುವಿನ ಪಾದೋದಕ

ಸಾರ್ಥಕ್ಕಾಗಲಿ ಜನ್ಮ ತುರ್ತು ಹೋಗಾನು

ಬರ್ರಿ ಶಿವಮಂತ್ರ ಸಲಿಸೋದಕ ||3||

ಗುರುಮಂತ್ರ ಜಪಿಸುತ ಗುರ್ತಿಟ್ಟು ಮಹಾದೇವಿ |

ಮಲ್ಲಿಕಾರ್ಜುನನ ಧ್ಯಾನಿಸೋದಕ

ಅಕ್ಕಮಹಾದೇವಿ ದೃಷ್ಟಿ ಅತ್ತ ಇತ್ತ ಇಲ್ಲ

ಚಿತ್ತ ಇಟ್ಟಿದಾಳೊ ಶಿವಲೋಕಕ

ತನ್ನ ತನುವಿನ ಆಶೆ ತನಗಿಲ್ಲ ತಾ

ನಿಂತಳೋ ಶಿವಮಂತ್ರ ಬಲಿಸೋದಕ ||4||

ಅಕ್ಕಮಹಾದೇವಿ ನಾಮಾಮೃತ ಅರಿತೊಮ್ಮೆ |

ಸೇವಿಸಿರಿ ಶುದ್ಧೋದಕ ಶುದ್ಧೋದಕ

ಜಂಬಗಿ ಶಿವಶರಣ ಪದ್ಯ ಮಾಡಿ

ಹೇಳ್ಯಾರ ಜಗತಿ ಅಕ್ಕನ ಬಳಗಕ

ಗುರು ಭೀಮಶಂಕರನ ಚರಣದಲ್ಲಿ

ನಿಂತು ಶಿವಮಂತ್ರ ಬಲಿಸೋದಕ ||5||

ಶಿವ ಶಿವ ಅನ್ನು ನಾಲಿಗಿ ಯಾವತ್ತೂ |

ಸದಾ ಶಿವ ಶಿವ ಅನ್ನು ನಾಲಿಗಿ ||ಪಲ್ಲ||

ಶಿವ ಅನ್ನು ಶಬ್ದ ನುಡಿಯದೇ ಗುಪ್ತಾಗಿ |

ಚೋರ ಗುಣವ ಮಾಡಿ ಯಾರಿಗೂ ತೋರದೆ

ಮುರಿದು ಬಿದ್ದೊ ಮೂಲಿಗಿ ||1||

ಜಗದಲ್ಲಿ ಬಾಳ್ವೆ ಮಾಡೋ ಬಡವ ನೀನಾಗಿ |

ಬಗಲಿಗಿ ಹಾಕೀದಿ ಜೋಳಗಿ

ಭಿಕ್ಷದ ಸಲುವಾಗಿ ಭಕ್ತರ ಮನಿಗೆ ಹೋಗಿ ||2||

ಈ ಭವಕ ಬಂದು ಏಸೋ ಜನ್ಮವ ತಿರುಗಿ |

ಸ್ವರ್ಗ ಮತ್ರ್ಯ ಪಾತಾಳ ಮೂರು ಏಕಾಗಿ

ತನ್ನೊಳು ತಾನಾಗಿ ಮಾನವಗ ಮೂಕಾಗಿ

ಬಲ್ಲಂತ ಜ್ಞಾನಿಗಳಿಗೆ ಬೆಲ್ಲಾದ ಹೇರಾಗಿ ಸದಾ ಶಿವಶಿವನ್ನು ||3||

ಬಾಯ್ಲೀ ಕೆಟ್ಟ ಶಬ್ದ ಬೈದ್ಹೇಳವರಿಗಿ |

ಅಪ್ಪಂತ ತಿಳಿದು ಉತ್ತರ ಕೊಡಬೇಡೊ ತಿರುಗಿ

ತಪ್ಪವಿಲ್ಲದೆ ತಪ್ಹಚ್ಚಿ ಬೈಯುವನೆ ಯೋಗಿ

ಅಪ್ಪ ನೀನೆಂದು ಬಾಯ್ಲೀ ತುಪ್ಪ ಸಕ್ಕರೆ ಉಂಡು ಶಿವಶಿವ ಅನ್ನು ||4||

ದೇಶಕ ಅಧಿಕ ಶ್ರೇಷ್ಠವುಳ್ಳ ಜಂಬೀಗಿ |

ಗುರುಪಾದಕ ಶರಣ ಇಟ್ಟಾ ಒಳ್ಳೆ ನೆಂಬಿಗಿ

ಮುತ್ಯಾ ರೇವಣಸಿದ್ದ ಗುರು ಭೀಮಾಶಂಕರನ ಪಾದಕ ನೀನಂಬಿ

ಗುರುವಿಗೆ ಶಿರಬಾಗಿ ಶಿವಶಿವನ್ನು ||5||

ಬಾ ಬಾರೋ ಕೃಷ್ಣ ಗೋಪಾಲ |

ನಿಮ್ಮ ನಾಮವು ತ್ರಿಜಗವೆಲ್ಲಾ ||ಪಲ್ಲ||

ಪಾಂಡವರಿಗಿ ತೋರಿದಿ ಲೀಲಾ |

ಬಿಡಸೀದಿ ಅವರಿಗಿ ಬಂದಿದ ಶೂಲ

ದ್ವಾರಕಾನಗರಕೆ ನಿಮ್ಮದೇ ಪ್ರಬಲ ||1||

ಧೀರ ವಾಸುದೇವ ದೇವಕ್ಕಿ |

ನಿಮಗೆ ತೂಗ್ಯಾರ ಕಟ್ಟಿ ತೊಟ್ಟಿಲ

ಜೋ ಜೋ ಎಂದ್ಹಾಡಿ ದೇವತೆಯರೆಲ್ಲ ||2||

ತಾಯಿ ಉಡಿಯೊಳಗಾಡಿದಿ ಮೊದಲ |

ಆನಂದಾಗಿದಿ ಕುಡಿದು ಮೊಲಿಹಾಲ

ಮುರಲೀಧರ ನೀನೇ ವಿಠ್ಠಲ ||3||

ಜಂಬಿಗಿ ಹುಡುಗರ ದೃಢ ನಿಮ್ಮ ಮೇಲ |

ಭಜನಾ ಮಾಡತಾರ ರಾತ್ರಿ ಹಗಲ

ಬಂದು ಹಸ್ತ ಇಡು ಅವರ ತಲಿಮ್ಯಾಲ ||4||

ಶುದ್ಧವಿಟ್ಟು ಭಾವನಾ ಮಾಡೊ ಗುರು ಸಾಧನಾ |

ನಿನ್ನಲ್ಲಿ ಭಗವಾನ ಇರುತಾನ ಕರದಲ್ಲಿ ಬರುತಾನಾ ||ಪಲ್ಲ||

ಸಾಧು ಸಂತರ ನಿಂದೆ ಬ್ಯಾಡೋ |

ಮುಂದೆ ನಿನ್ನ ಜನ್ಮಕ್ಕೆ ಕೇಡೋ

ಪ್ರಾಯ ದೇಹವ ಕದಿಯಲು ಬೇಡೋ

ತುಂಬ ಬೇಡವೊ ಪಾಪದ ಕೊಡ

ಅನಿಸಿಕೊರ ಸಜ್ಜನ ಮಾಡಿ ಗುರು ಭಜನ ||1||

ಹೊಲಿಯೊಳು ಈ ಹೊಲಿ ಅಂದಿ

ಹೊಲಿಯೊಳು ನೀ ಹುಟ್ಟಿ ಬಂದಿ

ಕುಲಗೋತ್ರ ತಿಳಿಯದೆ ಹೋದಿ

ಪರಸ್ತ್ರೀಯರ ನೋಡುತ ನಡದಿ

ಬ್ಯಾಡೋ ದುಷ್ಟ ವಾಸನಾ ಯಾಕೋ ಇಂಥ ವ್ಯಸನ ||2||

ದೇಶದೊಳು ಜಂಬಿಗಿ ಗ್ರಾಮ

ಚನ್ನಬಸವ ತೋರಿದ ಮಹಿಮ

ಸರ್ವರಿಗು ಸಲುವ್ಯಾನ ತಾನ

ಪರಮಾತ್ಮನ ದಯಾ ಇರುತನ

ಹಸ್ತಿಟ್ಟು ಬೇಡಿದ ಶರಣ ಮರೆತಿಲ್ಲ ನಿಮ್ಮ ಪಾದವ ಚರಣ ||3||

ಬಸವಣ್ಣ ಬರುತಾನ ಕಲ್ಯಾಣಕ |

ಭಕ್ತಾದಿಗಳರೇ ತಿಳಿಕೊಳ್ಳಿರಿ ಮುಂದಾಗುವದು ಶಿವಲೋಕ

ಬರುತಾನ ಗುರು ಶಿಕ್ಷೆ ಕೊಡುವದಕ

ಭಿನ್ನವ ಮಾಡಿ ಭಕ್ತಲಿಂದೆ ತಕ್ಕೊಳ್ಳಿ ಪಾದೋದಕ ||ಪಲ್ಲ||

ಭಕ್ತಿಲಿಂದೆ ಒಲಿಸೋ ಗುರುವಿನ |

ಪಾದ ಬಿಡಬ್ಯಾಡ ಬಿಟ್ಟರೇ ಮರಣ

ಗಟ್ಯಾಗಿಡಿ ಗುರುವಿನ ಚರಣ

ಇಡುತಾನ ಗುರು ಅಂತಃಕರುಣ ||1||

ಈ ಬಿದ್ದ ಕಲ್ಲು ಶುದ್ಧ ಮಾಡೋದಕ |

ಸದ್ಗುರುವಿನ ಪಾದಲಿಂದೇ ಈ ಜಗ ಉದ್ಧರಾಗೋದಕ

ಸದ್ಯ ಶಿವ ಶರಣಯ್ಯ ಸ್ವಾಮಿ

ಬುದ್ಧಿ ಕರೆದು ಹೇಳಿದ ನಮಗ ||2||

ಗುರುರೇವಣಸಿದ್ದನ ಆಜ್ಞೆ |

ಮೀರಿ ನಡೆದರ ಯಮಲೋಕ

ಮನ್ನಿಸಿ ನಡೆದರ ಮಾನ್ಯ

ದೊರಿತಾದ ಜನ್ಮ ಇರುವತನಕ ||3||

ಶ್ರೇಷ್ಠವಾದ ಗುರು ಭೀಮಾಶಂಕರ ಕಟ್ಟ್ಯಾನ |

ಕೊರಳಲ್ಲಿ ಲಿಂಗಾಕಾರ

ಇಟ್ಟಾರ ಶಿಷ್ಯ ಶಿವಶರಣರಿಗೆ ಅಧ್ಯಕ್ಷ

ಮಾಡಿ ಕೆರಿಭಾಸಗಿ ಮಠಕ ||4||

ಭಜನೆ ಮಾಡೋನು ಬರ್ರೀ ಭಯ |

ನಮಗ್ಯಾತಕ ಬರುತಾನ ಬಸವಣ್ಣ

ನಾಳೆ ಹುಟ್ಟಿ ಬರತಾನ ಬಸವಣ್ಣ

ಭಕ್ತರು ನಾವು ಬಾಗಿ ಹಿಡಿಯನು

ಮನವಪ್ಪಿ ಚನ್ನಬಸವ ಚರಣ ||ಪಲ್ಲ||

ಮಾದಲಾಂಬಿಕೆ ಮಧುವರಸನ ಸತಿ |

ಭಾಗ್ಯವಾಡಿ ಬಸವಣ್ಣ

ಮಾತು ತಿಳಿದು ಮಲಿ ಕುಡಿಲಿಲ್ಲ

ಮೂರು ದಿನ ತಿಳಿರಿ ಇದರ ವರ್ಣ

ಬರೆದಿಟ್ಟಾರು ಬಸವ ಪುರಾಣ

ಒಂದೇ ಮನಲಿಂದೆ

ಓದಿರಿ ಚರಿತ್ರೆ ಒಂದು ತಿಂಗಳ

ಶ್ರಾವಣ ಒಂದು ತಿಂಗಳ ಶ್ರಾವಣ ||1||

ಮಗುವು ಬಸವಣ್ಣಪ್ಪಾ |

ಮಾತ ಪಿತರಿಗೆ ಮಾಡಿಸಿ ಲಿಂಗಧಾರಣ

ಭಾಗ್ಯವಾಡಿ ಬಿಟ್ಟು ಬಂದು

ಬಸವ ಸೇರಿಕೊಂಡಾನ ಕಲ್ಯಾಣ

ಜನರಿಗೆ ಹೇಳಿದ ಸುಧಾರಣ

ಮಿಕ್ಕ ಪ್ರಸಾದ ಉಂಡು

ಅಕ್ಕ ನಾಗಮ್ಮ ಆಗ್ಯಾಳ ಗರ್ಭಿಣಿ ||2||

ಚನ್ನಯ್ಯಾ ಮಾಚಯ್ಯಾ ಹರಳಯ್ಯಾ |

ಕಕ್ಕಯ್ಯಾ ನಿತ್ಯ ನಿಜ ಶರಣ

ನಿತ್ಯಾನ ಕಾಲದಲ್ಲಿ ನೇಮಿತ್ತೋ

ಲಿಂಗ ಪೂಜೆ ಮಾಡುವ ಪ್ರಮಾಣ

ತಪ್ಪಿದ್ರ ಆಗುವದು ಅವರ ಮರಣ

ಒಪ್ಪಿ ಅರವತ್ತಾರು ಮಂದಿ ಪುರೋಹಿತರು

ಮಾಡಿ ಸಹಭೋಜನ ಮಾಡಿ ಸಹ ಭೋಜನ ||3||

ಬಿನ್ನಹ ಹೇಳಿದ್ರ ಬರಲಿಲ್ಲ |

ಬಸವಣ್ಣ ಆಗಿತ್ರಿ ಮದ್ಯಾಹ್ನ

ಬಾಗಿಲ ತಟ್ಟಿ ಮುಚ್ಚಿ ಭಸ್ಮ ಧರಿಸುತೆ

ಮಾಡುತ್ತೇ ಲಿಂಗಾರ್ಚನ

ಝಂಗುಟಿ ನುಡಿಸುತೆ ಝನನ

ಬಾಗಿಲ ಕಾಯ್ದಾನೋ

ಬಸವಣ್ಣಪ್ಪ ಅವರ ಪೂಜ ಮುಗಿಯುತನ ||4||

ನಿತ್ಯ ಒಬ್ಬರಲ್ಲಿ ನಡೀಲಂತ |

ದಾಸೋಗ ಮರಿಯಬೇಡಿರಣ್ಣ

ಗುರುಪಾದಲ್ಲಿಳಿದ ಶಿಕ್ಷಣ ಮರತೊಂದು

ಯಕ ಸಿಗಲಿಲ್ಲ ಪ್ರಸಾದ

ಬಂತು ಯಾಳ್ಯಾ ಕಠಿಣ ಬಂತು ಯಾಳ್ಯಾ ಕಠಿಣ

ಭಜನೆ ಮಾಡೋನು ಬರ್ರಿ ||5||

ಗುರು ಮುಟ್ಟಿದ ಬಳಿಕ ಆರು ಇರಬೇಕು |

ಎಷ್ಟು ಗರು ಇರಬಾರದಣ್ಣ

ಗುರು ಮೊದಲೇಳಿದ ಶಿಕ್ಷಣ

ಗುರುವಿನ ಪಾದೋದಕ ಪ್ರಸಾದ

ಶರಣರು ಮಾಡಿದರು ಭಕ್ಷಣ

ಮಾಡಿದರೋ ಭಕ್ಷಣ ಮಾಡೋನು ಬರ್ರಿ ||6||

ಬೇಕಾಗಿದ್ದ ಮಿಕ್ಕ ಪ್ರಸಾದ

ಬಸವಣ್ಣ ಮಾಡಿದ ಆಲೋಚನಾ

ಎಲ್ಲರಲ್ಲಿರಬೇಕ್ರಿ ಇಂತಹ ಮನಃ

ನಮ್ಮ ನಿಮ್ಮಂತವರ ಪಾಡೇನು

ಕವಿ ಮಾಡಿ ಹೇಳಿದ

ಶಿವಶರಣ ಹೇಳಿದ ಶಿವಶರಣ

ಭಜನೆ ಮಾಡೋನು ಬರ್ರಿ ||7||

ಭಾಗ್ಯವಾಡಿ ಸ್ಥಳದಲ್ಲಿ ಬಸವಣ್ಣಪ್ಪ ಹುಟ್ಯಾನಂತ |

ಬರುವಿರೇನು ಭಯವಿಲ್ಲದಕ

ಬಸವಣ್ಣಪ್ಪಾ ಬರುತಾನಂತ ಕಲ್ಯಾಣಕ

ಪುಣ್ಯವಂತರು ಬರ್ರೀ ಪುರಾಣ ಕೇಳುದಕ ||ಪಲ್ಲ||

ತರುವಿರೇನು ಕಾಯಿ ಪತ್ರೀ ಅಪ್ಪನ ಪಾದ ಪೂಜಕ |

ಇರುವಿರೇನು ತಿಂಗಳ ಶ್ರಾವಣ ಆಗಿ ಅವನ ಸೇವಕ

ಆಗ ಸುರುವಿರೇನು ಥೇರೀಗಿ ತೆಂಗ ಬಾಳಿಹಣ್ಣ ಖಾರೀಕ

ಸಾರುವಿರೇನು ನಂದಿಕೋಲು ಮೆರಿಲಿ ಏಳುಲೋಕ ||1||

ಬಾವನ ವೇಷ ತೊಟ್ಟು ಬಸವ ಬಂದಾನು ಭಿಕ್ಷಕ |

ಬಜಾರದಲ್ಲಿ ಭಿಕ್ಷೆ ಬೇಡಿ ತಿರಿಗಿ ಸಾಯಂಕಾಲಕ

ಭಕ್ತರಲ್ಲಿ ಉಂಡಿರುತಾನ ಇದು ಯಾರೀಗಿಲ್ಲ ಧ್ಯಾನಕ

ಬಹಳ ಮಾಡಿ ಬಂದಿರಬೇಕು ಇದು ಯಂಥ ಸೇಜೀಕ ||2||

ಉಣ್ಣುವಂತ ಜಂಗಮ ಬಂದರ ಭಿಕ್ಷೆ ಇಲ್ಲನ್ನುವದ್ಯಾಕ |

ಪುನಹುಟ್ಟಿ ನಿಂಬಲ್ಲಿ ಚನ್ನಬಸವ ಬರುವ ಕಾಲಕ

ಹಣ ಕೊಟ್ಟು ಹೋಗುತಾನ ಹುಚ್ಚ ಮೆಚ್ಚಿ ನಿಮ್ಮ ಭಾವಕ

ಮುಚ್ಚಿಟ್ಟುಕೊಳ್ಳಬೇಡ ಬಿಚ್ಚಿ ಹೇಳೋ ಮುಂದಕ ||3||

ಬಲ್ಲವ ಬಸವನ ಮಹಿಮ ಬಹಳ ಸಣ್ಣ ಬಾರೀಕ |

ನಿನ್ನಲ್ಲಿ ಹಾನ ನೋಡು ಬಸವ ಮಾರಿ ಎತ್ತಿ ಮೇಲಕ

ಕಲ್ಲೀಗಿ ಬಾನ ಉಣ್ಣಂತ ಅನ್ನುವನೇ ಮೂರ್ಖ

ಬಸವಣ್ಣ ಯ್ಯಾರು ಭಕ್ತರ್ಯಾರು ಬಲ್ಲವಗ ಧ್ಯಾನಕ ||4||

ಭಕ್ತಿ ನೋಡುವ ವ್ಯಾಳ್ಯಾ ಇದು ಬಂದಾನ ನಿಮಿತಕ |

ಬಾಯ್ಲಿ ಭಿಕ್ಷೆ ಇಲ್ಲಂದ್ರ ಬಟ್ಟಾ ಶಿವಮತಕ

ಮುಟ್ಟೀ ತೋರತಾನ ಗುರುಕೊಟ್ಟು ಪಾದೋದಕ

ಘಟ್ಯಾಗಿ ಶಿವಶರಣ ನಂಬಿ ಶಂಕರನ ಪಾದಕ ||5||

ಜನಿಸಿದ ಸ್ಥಳ ಉಡತಡಿ ಗ್ರಾಮ

ಅಕ್ಕಮಹಾದೇವಿ ನಿಮ್ಮ ನಾನು ||ಪಲ್ಲ||

ಬಸವಣ್ಣ ಕೇಳತಾನ ಮುದ್ಧಾಮ |

ಈಗ ಯಾವಲ್ಲಿ ನಿಮ್ಮ ಆಶ್ರಮ

ನಿಮ್ಮ ನಡೆನುಡಿ ಶಿವಭಕ್ತ ಧರ್ಮ

ಮೈಯಲ್ಲ ಧರಿಸಿದಿ ಭಸ್ಮ ||1||

ಬೆಳಸಿದಿ ಇಷ್ಟುದ್ದ ಮೈರೋಮ |

ತೋರದಂಗ ಮುಚ್ಚಿದ್ದಿ ಚರ್ಮ

ಯಾರಿಗೂ ತಿಳಿಯದು ನಿನ್ನ ಮೈಮ

ನಿನ್ನೊಬ್ಬಕೀನ ಹಿಂಗ ಹುಟ್ಟಿಸಿದ ಬ್ರಹ್ಮ ||2||

ತಾಯಿ ತಂದೆ ಅಣ್ಣ ತಮ್ಮ |

ಹುಟ್ಟಿದ ಮನಿ ಬಿಟ್ಟು ಬಂದಿಯಮ್ಮ

ಶ್ರೇಷ್ಠ ಮಾನವ ಜನ್ಮ

ಶ್ರೇಷ್ಠಿಯೊಳು ಹುಟ್ಟಿ ಬಂದಿಯಮ್ಮ ||3||

ಘೋರಾರಣ್ಯದೀ ಸೇರಿದಿಯಮ್ಮ |

ಇದ ಹೆಂತಾದು ನಿನ್ನ ನಿಷ್ಠಿ ನೇಮ

ಜಂಬಿಗಿ ಶಿವಶರಣ ಅಂದ ಶಿವಾಯ ನಮಃ

ಭೀಮಾಶಂಕರನ ಸದ್ಗುರುವಿನ ನಾಮ ||4||

ಅಕ್ಕಮಹಾದೇವಿ ನಿಮ್ಮ ನಾಮಾಮೃತವ ತೋರಿದಿ ಮಹತ್ವ |

ಅಕ್ಕ ನೀ ಬೆಳಿಸಿ ಶಿವಮತವ ||ಪಲ್ಲ||

ಉಡತಡಿ ಸಂಸ್ಥಾನ ಸುಖ ಶ್ರೀ ಸಂಪತ್ತವ |

ಅಷ್ಟೈಶ್ವರ್ಯ ಬಿಟ್ಟು ನಡದೀ ಅನ್ನುತ ಶಿವಶಿವ

ನಿಮ್ಮ ನಿಷ್ಠೆಗೆ ಬೆರಗಾದ ಭಾಗ್ಯವಾಡಿ ಬಸವ ||1||

ಶ್ರೀಶೈಲ ಬೆಟ್ಟ ನೀ ಏರೀದಿ ಸುರವ |

ಮಲ್ಲಿಕಾರ್ಜುನ ಮುಖದಿ ಪಡಕೊಂಡಿದಿ ವರವ

ಮಾಯಾದ ಮರವ ಆಗತೈತಿ ಜ್ಞಾನದರುವ | ||2||

ಅರಣ್ಯವಾಸ ಅಕ್ಕಮಹಾದೇವಿ ಸ್ಥಳವ |

ಹುಲಿ ಕರಡಿ ಸಿಂಹ ಕಾಡಮೃಗದ ಉಲವ

ವನದೊಳು ದಿನಗಳಿದೀ ಉಂಡು ವೃಕ್ಷದ ಫಲವ ||3||

ತರುಣ ವಯಸ್ಸಿನೊಳ ಗುರುಶರಣ ನೆನವ |

ಜಂಬಿಗಿ ಶರಣ ಗುರು ಭೀಮಾಶಂಕರನ ಶಿಸುವ

ಅಕ್ಕಮಹಾದೇವಿ ಪದ್ಯ ಹಾಡಿ ಹರಸುವ ||4||

ಅಕ್ಕಮಹಾದೇವಿ ನಿಮ್ಮ ನಾಮ |

ಪ್ರೇಮಾ ಶಾಂತೀ ಸರ್ವಾತ್ಮ ||ಪಲ್ಲ||

ತಾಯಿ ತಂದೀ ಅಣ್ಣ ತಮ್ಮ ಬಂಧು ಬಳಗದವರು |

ನಿಮ್ಮ ನಾಮ ಕೊಂಡಾಡುವವರಮ್ಮ

ಮಹಾದೇವಿಯ ನುಡಿಯು ಸೂಕ್ಷ್ಮ ||1||

ಸುರು ಸಾಲಿ ಕಲ್ತೀ ಓ ನಾಮಃ ಮುಂದೆರಡಕ್ಷರ ಸೀದಮ್ಮ |

ನುಡಿದಿ ಪಂಚಾಕ್ಷರಿ ಪ್ರಥಮ ಶಿವಾಯನಮಃ

ನಾದವೇ ಬ್ರಹ್ಮ ||2||

ನೋಡುವಳೋ ಎಲ್ಯಾನ್ ಪರಮಾತ್ಮ |

ನುಡಿವಳೋ ಮಲ್ಲಯ್ಯನ ನಾಮ

ನುಡಿಯುತ ಹೆಜ್ಜಿಗೆ ಒಮ್ಮೊಮ್ಮೆ

ಜಪಮಣಿ ಬೆರಳಲಿ ಮುದ್ದಾಮ ||3||

ಹಡದವರೀಗಿ ತಿಳಿಲಿಲ್ಲ ಮಹಾದೇವಿ ಮಹಿಮ |

ಬಾಯಿ ಮಾತ ಆಡುವರು ಸುಮ್ಮಸುಮ್ಮ

ಮಹಾದೇವಿ ಮದುವೇ ಮಾಡಬೇಕಂತ ನೇಮ

ಫಣಿಗೆ ಬಾಸಿಂಗ ದಂಡಿ ಕುಂಕುಮ ||4||

ಬಂಧು ಬಳಗದವರೆಲ್ಲ ತಮಾಮ |

ಮಹಾದೇವಿ ಮದುವೆ ಆಗದಿರು ಬಾರದಮ್ಮ

ಪುರುಷ ಇಲ್ಲದ್ಯಾತರ ಜನ್ಮ ಶುದ್ಧ

ಶಿವಾಚಾರ ನಮ್ಮ ಧರ್ಮ ||5||

ಮಹಾದೇವಿ ಅಂದಾಳೋ ದೇವರೇ ನೀವಮ್ಮ |

ನಿಮ್ಮೊಳು ಇರುವನೋ ಆತ್ಮರಾಮ

ಆತನ ಆಳು ನಾವು ನೀವಮ್ಮ

ಬಾಳು ಆಳು ನೀ ಹೇಳಮ್ಮ ||6||

ದೇಶದೊಳು ಆ ಜಂಬಿಗಿ ಗ್ರಾಮ |

ಶಿವಶರಣರ ವಾಸ ಮುಕ್ಕಾಮ

ಭೀಮಾಶಂಕರ ಗುರು ನಾಮ

ಶರಣೆಂದ ಸದಾ ಶಿವಾಯ ನಮಃ ||7||

ಶರಣು ಬಸವ ನಿಮ್ಮ ನಾಮ |

ಪ್ರೇಮ ಶಾಂತೀ ಸರ್ವಾತ್ಮ ||ಪಲ್ಲ||

ಜಟ್ಟಾನೇ ಆಗಲಿ ನಿಮ್ಮ ಹುಕುಮ |

ಬ್ರಹ್ಮಪೂರದಲ್ಲಿ ಮುಕ್ಕಾಮ

ಭಕ್ತರು ಬಂದರು ತಮಾಮ

ಭಜನಾ ಮಾಡೋದಕ ಮುದ್ದಾಮ ||1||

ಸಾಧು ಸಂತ ಜಂಗಮ |

ನುಡಿವರೋ ಬಸವ ನಿಮ್ಮ ನಾಮ

ಮೂರ್ಹೊತ್ತು ಪೂಜ ನಿತ್ಯ ನೇಮ

ಪತ್ರಿ ವಿಭೂತಿ ಕುಂಕುಮ ||2||

ಕೊಟ್ಟೀದಿದೇವಾ ಇರಲೆಂದು ಜನ್ಮಜನ್ಮ |

ಸರ್ವರೀಗಿ ಇಡುವೋ ನೀ ಕ್ಷೇಮ

ಸುಖದಿಂದುಂಡಿರಲಿ ಆರಾಮ

ಜಂಬಿಗಿ ಊರೀಗಿ ಬಾ ವಮ್ಮಾ ||3||

ಕರ್ನಾಟಕ ಸಗರ ನಾಡಗ್ರಾಮ |

ಅರಳಗುಂಡಗಿ ಶಿವನಾಮ

ವಾಚ್ ಶುದ್ಧ ಸತ್ಯ ಶರಣರೂ

ಗುರುವಿನ ನಾಮಕರಣ ಉಜ್ಜನಿ ಸಿಂಹಾಸನ

ಗಾದಿ ಅಧಿಕಾರಸ್ಥರು ಮರುಳಾರಾಧ್ಯರು ||ಪಲ್ಲ||

ಹೆಂತಾದು ಗುರು ಅಂತಃಕರಣ ಅಂತ ಹತ್ತಲಿಲ್ಲ |

ಅಂಥ ಮಾತು ಶರಣರು ತಿಳಿಸ್ಹೇಳಿದರು

ಕಲಿಯುಗದಾಗ ದೇವರಾಗಿ ಕಲ್ಬುರ್ಗಿಗ್ಯಾಗಿರು

ಹೋಗಿ ಉದ್ಧಾರಾಗಲಿ ನಾಡಿನ ಭಕ್ತರು

ಶುದ್ಧ ಪಾದೋದಕ ಸವಿದು ಸಾವಿರ ಜಪ

ತಪ್ಪದೇ ಒಮ್ಮ ನೇಮ ಹಂತಂತ ಮಹತ್ಮರು

ಕರ್ನಾಟಕ ಸಗರ ನಾಡು ಗ್ರಾಮ ||1||

ಹಿಡಕೊಂಡ್ರು ಗುರು ಚರಣ ಪಡಕೊಂಡ್ರು ನಾಮಕರಣ |

ಶರಣರ ಮಹಿಮೆ ಬಲ್ಲವರೇ ಬಲ್ಲರು

ಗುರುತಿಲ್ಲದವರಿಗೇನು ಗೊತ್ತ ಅರ್ಥವರಿಗೀಮಾತ

ಮಂತ್ರ ಮರ್ತಿರಬಾರದು ಹರನ ಭಕ್ತರೂ

ಒಪ್ಪತ್ತಾದ್ರು ಪೂಜಾ ತಪ್ಪದೇ ಮಾಡಂತ

ಅಪ್ಪ ಸದ್ಗುರುನಾಥ ಹಿಂಗೇಳಿದರು ||2||

ಕೃತಾಯುಗ ತ್ರೇತಾಯುಗ ದ್ವಾಪರ ಕಲಿಯುಗ |

ಅಂದಿನ್ಹಿಡಿದು ಗುರುಗಳಿದ್ದೆ ಇದ್ದರೂ

ಗುರುವಿನಿಂದಷ್ಟೈಶ್ವರ್ಯ ಗುರುವಿನಿಂದ ಶುದ್ಧ ಕಾರ್ಯ

ಗರು ಇಲ್ಲದಿರಬಾರದು ನಾವು ನೀವೆಲ್ಲರೂ

ಗುರುವಿನಲ್ಲಿ ವರ ಪಡಕೊಂಡ್ರು ಸಾಧು ಸತ್ಪುರುಷರು

ಯೋಗ ಬಲಿಸಿದಂತ ಮಹಾತ್ಮರು ||3||

ಗುರು ಪಾದಲಿಂದೇ ಶರಣರಾದರೋ |

ಶರಣರು ಮುಂದೆ ದೇವರಾದರೋ

ಬಂದವರವರ ಪಾದಕ್ಕೆರಗುವರೋ

ಅಂದಿಲ್ಲ ಇಂದಿಲ್ಲ ತಂದಿಲ್ಲ ತನ್ನ ಬಿಟ್ಟು ದೇವರಿಲ್ಲಂದ್ರು ಬಲ್ಲವರೋ

ಸತ್ಯ ಗುರು ಭೀಮಾಶಂಕರನ ನಾಮ ನಿತ್ಯ ನುಡಿ ಬೇಕಂತ

ಜಂಬಿಗಿ ಶಿವಶರಣ ಈ ಪದ್ಯ ಹಾಡಿದರು ||4||

ಸತ್ಯುಳ್ಳ ಶರಣಬಸವೇಶ ಮಹತ್ವ ತೋರಿದಿ |

ಶರಣ ಮಹತ್ವ ತೋರಿದಿ

ಶಂಭೋ ಮಹತ್ವ ತೋರಿದಿ ||ಪಲ್ಲ||

ಅರಳಗುಂಡಗಿ ಮೊದಲಿನ ಸ್ಥಳ |

ಬಿಟ್ಟು ಬಂದೀದಿ ಕಟ್ಟಿದ ಮಹಲ

ಎಷ್ಟ ವರ್ಣ ಮಾಡಲಿ ಶರಣ

ಕಷ್ಟ ಕಳದಿದಿ ನೀ ಎಷ್ಟೋ ಕಾಲ

ಅಷ್ಟಾದರೂ ನಿಷ್ಠಿ ಬಿಟಿಲ್ಲ

ಗಟ್ಟಿ ವರವ ಕೊಟ್ಟ ಕೇವಲ ||1||

ಕಟ್ಟಕೊನಿಯ ಕಂಟಿಯ ಹೊಲ |

ಜೇಕು ಕರಕಿ ಕಣಗೇನ ಹುಲ್ಲ

ಪಾಕ ಮಾಡಿದಿ ಅಲ್ಲೇನೋ ಇಟ್ಟಿಲ್ಲ

ಬ್ರಹ್ಮಪೂರದಲ್ಲಿ ತೋರಿದಿ ಲೀಲ

ಭಕ್ತರ ಪ್ರೀತಿ ನಿಮ್ಮೇಲ

ಗುಡಿ ಕಟ್ಟಿಸಿದ್ರು ಕಳ ಸೇರಿದಿಲ್ಲ ||2||

ಕಸಕಸಿ ಟಾಕಿಯ ಗುಡಿಕಲ್ಲ |

ಉತ್ತರ ದಿಕ್ಕಿಗಿ ತಗಿಸಿ ಬಾಗಿಲ

ತೇರ ಪಲ್ಲಕ್ಕಿ ನಂದಿಯ ಕೋಲ

ಇನ್ನು ಬರುವ ಫರಿಸಿ ಕಟ್ಟಿಲ್ಲ

ಬಿಡದೇ ದಾಸೋಹ ರಾತ್ರಿ ಹಗಲ

ಪಡದಿ ಹೆಸರ ದೇಶದ ಮ್ಯಾಲ ||3||

ಮಹಾತ್ಮಾಗಾಂಧಿ ಮುತ್ಯಾನ ಲೀಲ |

ಅಟ್ಟಾವನ್ ಫಸಲಿಯ ಸಾಲ

ಕಳಸೇರಿ ಶರಣನ ಗುಡಿಯ ಮೇಲ

ಮಹಾತ್ಮಾ ಚನ್ನಬಸವಣ್ಣನ ಕೋಲ

ಭೀಮಾಶಂಕರ ಗುರು ಕೇವಲ

ಬಂದ ಬೇಗಿ ಶರಣನ್ಹಿಂಬಲ ||4||

ಶ್ರೀ ಜಗದೀಶ ಮಾಡಿದೀ ವಾಸ |

ಶರಣ ಬಸವೇಶ ದೇವಾ ಶರಣ ಬಸವೇಶ

ಜೈ ಜೈ ಅನುಶಾ ಶರಣ ಬಸವೇಶಾ ||ಪಲ್ಲ||

ಬ್ರಹ್ಮಪೂರದಲ್ಲಿ ಶರಣ ಮಾಡಿದಿ ವಾಸ |

ಬಂಜೆಯರಿಗೆ ಫಲಸಕೊಟ್ಟು ತೀರಿಸಿದ ಆಕಾಂಕ್ಷ

ಭಕ್ತರ ಮನಸ ಮಾಡಿರಿ ಸಂತೋಷ

ಜೈ ಜೈ ಅನುಶಾ ಶರಣ ಬಸವೇಶಾ ||1||

ವರ್ಷ ತಿಂಗಳ ಶ್ರಾವಣ ಮಾಸ |

ಭಜನಮಾಡಿರಿ ಭಕ್ತಿ ಇಟ್ಟು ಮನಸ

ಸಂತರ ಕರೆಸಿ ಝಂಗುಟಿ ನುಡಿಸಾ

ಜೈ ಜೈ ಅನುಶಾ ಶರಣ ಬಸವೇಶಾ ||2||

ಭಕ್ತರು ಕರಿತಾರ ಬಾ ಬಸವೇಶ |

ಮಹತ್ವ ತೋರೊ ಬಂದು ಇರು ನೀ ಹಮೇಶಾ

ಭೀಮಾಶಂಕರನ ಶಿಸು ಶಿವಶರಣ ಆಶಾ

ಜೈ ಜೈ ಅನುಶಾ ಶರಣ ಬಸವೇಶಾ ||3||

ಶರಣಬಸವ ನಿಮ್ಮ ನಾಮ ಜಪಿಸುವೆನು |

ಮಹತ್ವ ತೋರಿದವನೋ ಶರಣ

ಮಹತ್ವ ತೋರಿದವನೋ ಶರಣದೇವಾ ||ಪಲ್ಲ||

ಅರಳಗುಂಡಗಿ ನಿಮ್ಮ ಸ್ಥಳ ಮೊದಲಿಗಿ |

ಬ್ಯಾಸರಾದಿ ನಿಮ್ಮ ಬಾಂಧವರೀಗಿ

ಬಲು ಪ್ರೇಮದಿ ನಿಮ್ಮ ಖಾಸ ಗುರುವಿಗಿ ||1||

ಅಣ್ಣ ತಮ್ಮರು ನಿಮಗ್ಹಾಕ್ಯಾರ ಕಡಿಗಿ |

ನಿಮ್ಮ ಪಾಲಿಗಿ ಒಡಕ ಅಡಕೀಲ ಗಡಿಗಿ

ಬೀಳದ ಹೊಲ ಬಂತು ನಿಮ್ಮ ಪಾಲಿಗಿ ||2||

ಬೀಳ ಹೊಲದಾಗ ಸರ್ವ ಕೊನಿಕಂಟಿ |

ಪಾಳಿಗಿ ಹೊಲ ಹಚ್ಚಿ ಹೊಡಸೀದಿ ಕುಂಟಿ

ಬಿದ್ದ ಬೀಳ ಬೆಳದೈತ್ರಿ ಗ್ಯಾರಂಟಿ ||3||

ಶರಣಬಸವ ಹೊಲ ನೋಡದಕ್ಹೊಂಟಿ |

ಭರಚಕ್ ಸೀತನಿ ಬಾಹಳಿಲ್ಲ ಬಾಟಿ

ಹೊಲದ ಸುತ್ತಮುತ್ತ ಬಹಳ ಗಿಡಗಂಟಿ ||4||

ಗಿಡಕ ಕುತ್ತಾವ ಸಾವಿರ ಹಕ್ಕಿಯ ಹಿಂಡ |

ಶರಣಬಸವ ಹಕ್ಕಿ ಮೈಯ್ಯುವದ ಕಂಡ

ನೋಡಿ ತನ್ನಾತ್ಮಕ ತಾ ತಿಳಿಕೊಂಡ ||5||

ಪಾಲಕಾರಗ ಹಕ್ಕಿ ಹೊಡೆವುದ ಬಿಡಿಸಿ |

ತೆನಿ ತಿಂದ ಹಕ್ಕಿ ಸತ್ತವ ನೀರಡಿಸಿ

ನೀರ ತರಸಿ ಹಕ್ಕಿಗಳಿಗೆ ಕುಡಿಸಿ ||6||

ಮರುದಿನ ನೀರಿನ ಅರಟಿಗಿಡಿಸಿ |

ಗಿಡದ ಪಂಟೀಗಿ ಮಗಿ ಮುಚ್ಚಳ ಕಟ್ಟೀಸಿ

ನೀರು ಕುಡಿಸಿ ಹಕ್ಕಿಯ ತೃಪ್ತಿ ಬಡಿಸಿ ||7||

ಹೊಲ ಮಾಡಿದ ಪಾಲಕರಂವಗ ತಿಳಿಸಿ |

ಕಟ್ಟೀದ ಡಬಲ್ ಖರ್ಚವ ಕೊಡಿಸಿ

ಪಾಲಗಾರಗ ಮಾಡಿದ ಹೊಲ ಬಿಡಿಸಿ ||8||

ಮುಂದು ಬೆಳೆವ ಕೊಯ್ದು ಬಣವಿಯ ಒಟ್ಟಿಸಿ |

ಕೈಲಿಂದ ಕೂಲಿ ಕೊಟ್ಟು ಗೂಡವ ಮುರಿಸಿ

ಹಕ್ಕಿತಿಂದ ಕಂಕಿಯ ಹಂತಿಯ ತುಳಿಸಿ ||9||

ಹಂತಿ ಹಚ್ಚಿ ಐದು ಪಂತೀ ಮದನ ತೂರಿಸಿ |

ಧಾನ್ಯಕೊಟ್ಟು ಮುಗಸ್ಥಾನ ಜಂಗಮ ರಾಶಿ

ಶರಣರಿಗಿ ಶಿವ ಕೊಟ್ಟ ಸವಿಲಾರದ ರಾಶಿ ||10||

ಬ್ರಹ್ಮಪೂರಕ ಬಂದು ಮಹತ್ವ ತೋರಿಸಿ |

ಪಾಲ್ಗುಣ ಪಂಚಮಶುದ್ಧ ನಿಮ್ಮ ತೇರ ಎಳಸಿ

ಅಂದಿನಿಂದ ನಿಮ್ಮ ದಾಸೋಹ ನಡೆಸಿ ||11||

ವೀರಶೈವರಿಗಿ ಶಿವಶರಣ ನೀ ಅನಸಿ |

ಮಕ್ಕಳೀಗಿ ಕರಿತಾರ ನಿಮ್ಮ ಹೆಸರಿಡಿಸಿ

ಜಂಬಿಗಿ ಭಕ್ತರಿಗುಂಡಂಗ ಹಂಬಲಿಸಿ ||12||

ಮಿತ್ರೆರಿ ತಿಳಕೊಳ್ಳರಿ ಮನಕ |

ಮತ್ಯಾರಿಲ್ಲವ್ವ ಇದಕ

ಖಾತ್ರಿ ಇದ್ದ ಮ್ಯಾಲಕ ||ಪಲ್ಲ||

ಕಡದಾಡಿ ಹೋದ ಸರರ |

ಮಾಯಾಗಿ ಹೋದ

ಅಂತರ ಮೋಟಾರ ಜೀ ಜೀ ||1||

ಈ ಮನಸೆ ಕಲ್ಲಾದ ಬಳಿಕ |

ಮನಿಮಾರ ಇದ್ದು ಯಾತಕ

ಹೋಗೋನು ನಡಿರಿ ಪಂಢರಪುರಕ ||2||

ಮಾಡರಿ ಚಂದ್ರಬಾಗಾದ ಜಳಕ |

ಪಕ್ಕಾ ನದಿಯಲಿ ನೀರ

ಖೊಟ್ಟಿಗುಣ ಬಟ್ಟು ಬರ್ರಿ ಜರೂರ ||3||

ಸಾಧು ಶರಣ ಹೋದ ಹಟಕ |

ಗಾಡಗೆ ಬಾವಾನ ಮಠಕ

ಅನ್ನಪ್ರಸಾದ ಉಂಡ ತಟಕ ||4||

ತೀರ್ಥ ಕುಡದಾನ ಗುಟಕ |

ತೊಟ್ಟ ಸಾಧು ಅವತಾರ

ಮಾಡುತೆ ಹೊಂಟಾನ ದೇಶ ಸಂಚಾರ ||5||

ಅಂತಃಕರಣ ಇಲ್ಲದವನೋ

ಸ್ವಂತ ರಾಜಕೀಯ ಮಾಡಿದರೇನೋ

ಶ್ರೀಮಂತ ಇದ್ದರ ಸುಖ ನಮಗೇನೋ

ಭಾವ ಭಕ್ತಿ ಇಲ್ಲದವನ ಬಾಳುವೆ ಕುರಿ ಕೋಳಿ ಸಮಾನ

ಜ್ಞಾನ ಇಲ್ಲದವನು ನಮ್ಮ ಧೊರಿ ಏನೋ ||

ಮಧು ವರಸ ರಾಜ ಬಿಜ್ಜಳನೋ ಶತಕೋಟಿ ಸೈನಿಕನೋ

ಒಬ್ಬವರಲ್ಲಿ ಇಲ್ಲ ಶಿವ ಶಿವ ನಾಮವನೋ

ಮಧು ಅರಸ ಬಸವಣ್ಣನ ತಂದೆ ಮಾದಲಾಂಬಿಕೆ ಅವರ ತಾಯಿ

ಭಾಗ್ಯವಾಡಿ ಬಿಟ್ಟು ಕಲ್ಯಾಣವೋ ||

ವಂದಿಪೆನು ವಂದಿಪೆನು ತಂದೆ ಗಜಮುಖನೆ |

ಇಂದೆನಗೆ ವರನೀಡು ನಂದೇಶ ಸುತನೆ ||ಪಲ್ಲ||

ಆದಿ ಪೂಜ್ಯನೆ ಶ್ರೀ ಆಧಾರ ನಿಲಯನೆ |

ಆದಿ ದೇವನೆ ದೇವದಾನವರ ಸ್ತವನೇ

ಚೌಷಷ್ಠಿ ವಿದ್ಯಕ್ಕೆ ಶ್ರೇಷ್ಠನಾದವನೆ

ನಾಗಭೂಷಣ ಸತಿ ಪಾರ್ವತೀ ಸುತನೆ ||1||

ಮಂದರೋದ್ಧಾರಕನೆ ಉಂದುರಾ ವಾಹನನೆ |

ಇಂದಿರಾ ಚಂದಿರಾ ಕರಿಕರ್ಣನೆ

ಇಂದುಧರ ಕಂದಹರ ಮಂದಹರ ಮಾಣಿಕನೆ

ಮಂದಹಾಸದಿ ಮೇರು ವಾಸಿಪನೆ ||2||

ಶ್ರೇಷ್ಠ ಕುಲದವನಲ್ಲ ಶಾಸ್ತ್ರ ಕಲಿತವನಲ್ಲ |

ಶಾರದಾಂಬೆಯ ಕರುಣೆ ಕೃಪೆಯೆನಗೆ ಇಲ್ಲ

ಶಾಮಸುಂದರ ನಮ್ಮ ಗೊಲ್ಲಕುಲ ಗೋಪಾಲ

ಗೋತ್ರದೋಳು ಜನಿಸಿದೆನು ಜಗದಾಂಬೆ ಸುತನೆ ||3||

ಯತಿಯು ಮತಿಯಲ್ಲಿಲ್ಲ ಗಣದ ಗುಣ ಗೊತ್ತಿಲ್ಲ |

ಪ್ರಾಸ ಧ್ಯಾಸದಲ್ಲಿಲ್ಲ ಏಕದಂತನೆ

‘ಅಕಚಟತಪ’ವೆಂಬ ಆತ್ಮ ಪರಿಚಯವಿಲ್ಲ

ಅಗಣಿತ ಗುಣಗಣ ನೀನೆ ಪ್ರೇರಕನೆ ||4||

ಧರೆಯೊಳು ಕೊನೆಪುರಗಿರಿಯೊಳು ನಿನ ದ್ವಾರ |

ಕರದೊಳು ಮೋದಕವ ಭಕ್ಷಿಪನೇ

ಭರದೊಳು ಬರುವಾಗ ಧರೆಯೊಳುರಳಿ ಬಿದ್ದು

ಚವತಿ ಚಂದ್ರಿಗೆ ಶ್ರಾಪ ಕೊಟ್ಟಾತನೆ ||5||

ನಮೋ ಶಾರದಾಂಬೆ ನೀನೆ ಶಾಂತರೂಪಿ ಕಾಶ್ಮೀರ ಸದನೆ |

ಬೇಡುವೆನು ವರವನು ನಾನು ನುಡಿಸಿದಂತೆ ನಡೆಸು ನನ್ನ ||ಪಲ್ಲ||

ಲಂಕೆಯಲ್ಲಿ ಶಂಕರಿ ನೀನೆ ಕಾಮಾಕ್ಷಿ ಕಂಚಿ ಸದನ |

ಕೊಲ್ಲಾಪೂರದ ಮಹಾಲಕ್ಷ್ಮೀ ಕ್ರೌಂಚದಲಿ ಚಾಮುಂಡಿ ನೀನು ||1||

ಅಷ್ಟಭುಜಾದೇವಿ ನೀನು ಅಷ್ಟದಳಾ ಪೀಠಳೆ ಘನಾ |

ಇಷ್ಟಪೂರ್ಣ ಮಾಡಿಸು ನನ್ನ ಕೊಡು ಇಂದು ಒಂದೇ ವಚನ ||2||

ಆದಿಯಲ್ಲಿ ತಾಯಿಯಾಗಿ ನೀನು ಗಂಡನಿಗೆ ಸತಿಯಾಗಿ ಸವನ |

ಮಾಯಾಸೃಷ್ಟಿ ನಿರ್ಮಿಸಿ ನೀನ ಮನಸಿನಂತೆ ಬೆಳೆಸಿದಿ ಭುವನಾ ||3||

ಈಶ ಕೊನೆಪುರದಲ್ಯಾನ ಶೇಷಶೈಲ ನಿಜವಾಗಿ ತಾನ |

ವಾಸಕೇಶ ವೆಂಕಟರಮಣ ವಾಮಭಾಗ ಪೀಠಳೆ ನೀನು ||4||

ಓಂ ನಮಃ ಶಿವಾಯಾ ನುಡಿ |

ಒಡಲಾಗ್ನಿಯ ಅದ್ಭುತ ಕಿಡಿ

ಗುರು ನುಡಿದ ನುಡೀ ಕಡಿ ಬಿಡದೆ ಹಿಡಿ

ಪಡಿ ಓಂ ನಮಃ ಶಿವಾಯಾ ನುಡಿ ||ಪಲ್ಲ||

ಅಡಿಗಡಿಗೆ ನುಡೀ ನುಡಿ ನುಡಿಗೆ ಪಡಿ |

ಆಡಿ ಬಿಡದೆಡೆ ನಡಿ ಗುರು ಹಿಡಿ

ಗುರುಮಂತ್ರ ಪಡೀ ಹರಮಂತ್ರ ನುಡಿ

ಪಡಿ ಓಂ ನಮಃ ಶಿವಾಯಾ ನುಡಿ ||1||

ಎಡಬಿಡದೆ ದುಡೀ ನುಡಿದಂತೆ ನಡಿ |

ಕಡಿ ಹಿಡಿದೊಡಿ ಬ್ರಹ್ಮನ ಬೇಡಿ

ಭಯವ್ಯಾಕೊ ನಡೀ ಭವಬಾಧೆ ಕಡಿ

ಪಡಿ ಓಂ ನಮಃ ಶಿವಾಯಾ ನುಡಿ ||2||

ಮುಂದಿಟ್ಟ ಅಡಿ ಹಿಂದಕ್ಕೆ ನೋಡಿ |

ಖೋಡಿ ಹಿಂದ ಮುಂದ ಬೆಂದಸಂದ ಮಾಡಿ

ಮಂದ್ಯಾಕ ನಡೀ ಸಂದ್ಯಾಗ ನುಡಿ

ಪಡಿ ಓಂ ನಮಃ ಶಿವಾಯಾ ನುಡಿ ||3||

ಮೂಕನಂತೆ ನಡೀ ತುಟಿ ಬಿಗದ ಹಿಡಿ |

ನೀ ವಟವಟ ಒದರೀ ಮಂದಿ ನೋಡಿ

ಅದು ಒಂದೇ ಅಡೀ ಅಂತರಗದಿಡಿ

ಪಡಿ ಓಂ ನಮಃ ಶಿವಾಯಾ ನುಡಿ ||4||

ಕೊನೆಪೂರ ನಡೀ ಕೋಮತಿಯ ಪಡಿ |

ನೀ ಕೊಂಚ ಮುಂಚ ಹಿಂಚ ಲಂಚ ಬಿಡಿ

ಗುರು ನುಡಿದ ನುಡೀ ಮರಿಲಾರದಿಡಿ

ಪಡಿ ಓಂ ನಮಃ ಶಿವಾಯಾ ನುಡಿ ||5||

ಮನಮೋಹನ ಭಜಿಸೋ ಮನುಜನೆ |

ಮನಮೋಹನ ಭಜಿಸೊ ||ಪಲ್ಲ||

ಅನುದಿನದಲಿ ಘನ ಮೂರುತಿ ಗುರುಲಿಂಗ |

ಹರಿಹರ ಬ್ರಹ್ಮಾದಿ ಪರಿಸಿದ ಪರಂಜ್ಯೋತಿ ||1||

ಕುಟಿಲ ಪ್ರಪಂಚವು ನಿಟಿಲವಲ್ಲೆಂದರಿತು |

ಅಟಲಯೋಗದಿ ಮನ ಧ್ಯಾನದಲ್ಲಿರಿಸಿ ||2||

ವಟವಟ ಒದರುತ್ತ ಹೊತ್ತುಗಳೆಯಲು ಬೇಡ |

ಕಷ್ಟಪಟ್ಟು ದಿಟವಾದ ಹಾದಿ ಹಿಡಿದು ||3||

ನಾಳೆ ಎನಲು ಬೇಡ ವೇಳೆ ಕಳೆಯಲು ಬೇಡ |

ನಾಳೆ ತಾನಿರುವುದು ನಿಜವಲ್ಲೆಂದರಿತು ||4||

ಶ್ರೀಶ ಶ್ರೀ ವೆಂಕಟ ಕಳೆಯಲು ಸಂಕಟ |

ವಾಸ ಕೊನೆಪೂರ ಈಶನಲ್ಲೆ ಕುರಿತು ||5||

ಮೌನದಿಂದ ಗುರು ಧ್ಯಾನವ ಮಾಡು |

ಮೌನದಿಂದ ಮನೆ ಸಂಸಾರ ನೋಡು

ಹಾನಿಯಾಗದ ವ್ಯವಹಾರ ಮಾಡು

ಜ್ಞಾನಿ ಜನರ ಸಹವಾಸದಿ ಕೂಡು

ಬಾನಿ ಕಳೆವ ಬಡಿವಾರವ ಬೇಡಣ್ಣ

ಕೇಳೋ ಜಾಣ ಏ ಜಾಣ ಮೌನದಿಂದ ||1||

ತಂದೆತಾಯಿಗಳ ಸೇವೆಯ ಮಾಡು |

ಮಂದಿ ಮಕ್ಕಳಲಿ ಮಮತೆಯ ನೀಡು

ನಂದಿಕೇಶನಲಿ ನಲಿದಾಡಿ ಬೇಡು

ವಂದಿಸಿ ಶರಣರ ಮರಿಯಾದೆ ಮಾಡು

ನೊಂದಿಸಿ ಪರನನು ಕಾಡಿಸಬೇಡಣ್ಣ

ಕೇಳೋ ಜಾಣ ಏ ಜಾಣ ಮೌನದಿಂದ ||2||

ನ್ಯಾಯ ಬಂದರದು ಶೋಧಿಸಿ ನೋಡು

ಕಾಯ ವಾಚದಿಂದ ಸರಿಯಾಗಿ ಆಡು

ಬಾಹ್ಯಾಂತರದಲಿ ಒಂದೇ ನೋಡು

ಬಡವ ಶ್ರೀಮಂತರ ಭೇದವ ಬಿಡು

ಬಡಿವಾರತನದಿಂದ ಬಡಾಯಿ ಬೇಡಣ್ಣ

ಕೇಳೋ ಜಾಣ ಏ ಜಾಣ ಮೌನದಿಂದ ||3||

ದನಕರುಗಳ ದಯಾವ ಮಾಡು

ದಂಡಿಸಿ ಬಂಡಿಯ ಕಟ್ಟದೆ ಬಿಡು

ಮಂಡಿಸಿ ಸರಿಯಾಗಿ ಮೇವನು ನೀಡು

ಬಂಧಿಸಿ ಉಪವಾಸ ಇಟ್ಟಿಗಿ ನೋಡು

ಮಂಡಿಯ ಕೂರಗಿ ಮದ್ದತು ಮಾಡಣ್ಣ

ಕೇಳೋ ಜಾಣ ಏ ಜಾಣ ಮೌನದಿಂದ ||4||

ಪಶುಪಕ್ಷಿಗಳ ಪಾಲನೆ ಮಾಡು

ಪರಿಪರಿ ವಿಧದಲಿ ಪರಕಿಸಿ ನೋಡು

ಪರಮ ಭಾಗ್ಯ ಸಿಗಲಾರದು ನೋಡು

ಪರದಲಿ ಪಾಡವ ಕಟ್ಟಿಗಿ ನೋಡು

ವರ ಶ್ರೀ ವೆಂಕಟ ಕೊನೆಪುರದಲ್ಲೆಣ್ಣ

ಕೇಳೋ ಜಾಣ ಏ ಜಾಣ ಮೌನದಿಂದ ||5||

ಗುರುದೇವನೆ ದಯಮಾಡೋ ಕಾಪಾಡೋ |

ಅಂತಃಕರುಣದಿ ನನ್ನ ಮನದೊಳಗಾಡೋ ||ಪಲ್ಲ||

ಮಾಯಾಸಾಗರ ಪಾರ ಮಾಡೋ ಮೋಹ ಬ್ಯಾಡೋ |

ಮೋಹ ರಹಿತನೆ ಎನಗೆ ಮೋಕ್ಷಾವ ನೀಡೊ ||1||

ಹೇಮಾತೀತನೆ ಎನ್ನ ನೋಡೋ ಒಡಗೂಡೋ |

ತಡವ್ಯಾತಕೆ ತಕ್ಷಣ ಮುಕ್ತನ ಮಾಡೋ ||2||

ಭೂಷಿತ ಭಾಸ್ಕರ ಮೂಡೊ ಬೆಳಕ ಮಾಡೋ |

ಬಟ್ಟಬೈಲೊಳಗೆ ಎನ್ನ ಎಳೆದೊಯ್ದು ಬಿಡೋ ||3||

ಹೊಳೆಯುವ ಬ್ರಹ್ಮನ ಜೋಡೋ ಎನ್ನ ಮಾಡೋ |

ಕಟ್ಟಕಡಿತನಕ ಹುಟ್ಟಿ ಬರದಂತೆ ಮಾಡೋ ||4||

ಧರೆಯೊಳು ಕೊನೆಪುರ ನೋಡೋ ಎನ್ನ ಬೀಡೋ |

ಎಲೆ ರಾಜೋಳಿ ವಾಸಿಪ ಗುರು ಕಣ್ಣ ತೆರೆದು ನೋಡೊ ||5||

ಏನು ಮಾಡಲೀ ಸದ್ಗುರುವೆ |

ನಿನ್ನನ್ನೇನು ಬೇಡಾಲೀ ಶ್ರೀಗುರುವೆ

ನಿನ್ನನ್ನೇನು ಬೇಡಾಲೀ

ನಿತ್ಯ ನಿರ್ಮಲ ನಿಗಮ ನಿಶ್ಚಲ ಚಿತ್ತನಿರುಪನು

ಸತ್ತು ಚಿತ್ತಾನಂದ ಭರತದಿ

ವಿತ್ತವಳಿದೂ ಬತ್ತಲಾದವಗೇ ||1||

ಆದಿ ಜಂಗಮನೂ ಅನಾದಿಯಾಗಿ ಅಡ್ವಿ ತಿರುಗುವನೂ

ಕಾಲ್ಹಾದಿಯಾಗಿ ಪೊಡ್ವೀ ಚರಿಸವನೊ

ಪೊಡ್ವಿ ಬುಡ ಕಡೆವ ವಡಿಯನಾಗಿ

ಹಿಡಿಯ ಭಿಕ್ಷಕೆ ಬಿಡದೆ ಹೋಗೀ

ವಡಿಯನಾದರು ಮಡದಿ ಕಾಣದೆ

ಕಡಿಗೆ ಕಾಯಕ ಹಿಡಿದು ಬಡದವಗೇ ||2||

ದೀಕ್ಷಾ ಬಳಿಕವನೂ ದಕ್ಷದಿ

ಶೀಕ್ಷಾ ಮೋಕ್ಷಾ ಕೊಡುವವನೂ

ರಕ್ಷಿಸೆ ಅಕ್ಷೀ ಸಾಕ್ಷೀ ಭೂತನೂ

ಸೂಕ್ಷ್ಮವನು ಆಪರೋಕ್ಷ ಜ್ಞಾನದಿ ಲಕ್ಷದಿ ಘನ

ದಕ್ಷಯಕ್ಷದಿ ಪಕ್ಷಿ ರಕ್ಷಿಸಿ

ಕುಕ್ಷಿ ರಕ್ಷಣೆ ಮಾಡುವಾತನಿಗೆ ||3||

ಅಮರ ಬಲ್ಲವನೂ

ಅಗಣಿತ ಗಣಿತ ಲೆಕ್ಕಾ ಮಾಡವನೂ

ಆರು ಶಾಸ್ತ್ರ ಆಗಮ ತಿಳಿದವನೂ

ಆರೂ ಅರಿತವನು ನೀನೂ

ಅಣ್ಣ ತಮ್ಮರ ಅಗಲಿದವನೂ

ಅನ್ನವಸ್ತ್ರದ ಆಶೆಬಿಟ್ಟು

ಹೊನ್ನು ಹೊಲ ಮನೆ ಬಿಟ್ಟು ಬಂದವಗೆ ||4||

ವೇಷಗಾರನೂ ದಾಸಾರ ಹಿಂದೇ ದೇಶಾ ತಿರಗವನೂ

ವೇಶ್ಯಾರ ಮನೀ ವಾಸ ಮಾಡವನೊ

ಏಸೊ ಜನ್ಮದಿ ಈಶ ಧ್ಯಾನಿಸಿ ನಾಶನಾಗದ ಆಶೆ ಆಸಿಸಿ

ಪೋಷ ಕರಿಘೂಳಿವಂದಿಸಿ

ಈಶ ಗುರು ಮೃಗರಾಜನಾದವಗೇ ||5||

ಕರುಣಾ ಬಾರದೆ ನಿನಗೇ |

ಸದ್ಗುರು ಮನಮಂದಿರದಿರುಬಾರದೇ

ಶರಣು ಬಂದೆನು ನಿನ್ನಾ

ಚರಣ ಕಮಲಕೆ ನಂಬಿ

ಸ್ಮರಣಾ ಭಜನ ಸ್ತವನಾ

ಮನನ ಮಾಡಿಸು ತಂದೆ ||1||

ಸೇವೆ ಮಾಡುವೆ ನಿನಗೇ |

ಸದ್ಗುರು ಸದಾ ಠಾವಿನೋಳಿರುಬಾರದೇ

ಜಾವ ಜಾವಕೆ ನಿನ್ನಾ

ಭಾವ ಭಕ್ತಿಲಿ ನಂಬೀ

ಸಾವನರಿಯದೆ ಮೋಹ

ಪಾಶದೊಳಾದೆ ತಂದೆ ||2||

ಪೂಜಾ ಮಾಡುವೆ ನಿನಗೇ |

ಸದ್ಗುರು ಮನಾ ಮೋಜಿನೊಳಿರುಬಾರದೇ

ನಿಜಾ ನಿರ್ಗುಣ ನಿತ್ಯಾ

ನಿರಾಲಂಬನನೆ ನಂಬೀ

ಸಹಜವಾಗಿಹ ಮಾರ್ಗಾ

ಅರಿಯಾದ್ಹೋದೆನೊ ತಂದೆ ||3||

ಲಂಚಾ ಕೊಡುವೆ ನಿನಗೇ |

ಸದ್ಗುರು ಮನ ವಂಚಿಸದಿರುಬಾರದೇ

ನಿನ್ನ ಪಂಚಕೇಶದಿ

ಪರವಶನಾದೆ ನಿನ್ನ ನಂಬೀ

ಸಂಚಿತಾರ್ಥದ ಪಾಪ

ಪಾರು ಮಾಡಯ್ಯಾ ತಂದೆ ||4||

ಕೊನೆಪೂರಾ ಊರೊಳಗೇ |

ಸದ್ಗುರು ತನುಮನದೊಳಿಗಿರಬಾರದೇ

ಕಾಮಾಪೂರವ ನೋಡೀ

ಮಾಯಾಪೂರವ ನಂಬೀ ರಾಜಾಪೂರದ ಗುರು

ಮೃಗರಾಜ ಬಾ ತಂದೆ ||5||

ಗುರುಬೋಧೆಯೆ ಸರಿ ಎಂಬುವದೇಕೋ |

ಗುರುಮಂತ್ರದ ಜಪ ಮನದಲಿ ನಿಲಿಸದೇ

ಘನವಸ್ತುವು ತನುವೆನಿಸುದ್ಹೇಗೋ ಭರವಸಿಲ್ಲೆನಗೇ ||1||

ಶಿವನಾಮವೆ ಸಾಕೆಂಬುವದೇಕೋ |

ಶಿವ ಶಿವನೆಂಬುವ ಭಕ್ತಿ ನೀನರಿಯದೇ

ಅನುಷ್ಠಾನ ಮಾಡುವದು ಹೇಗೋ ||2||

ಯಾತ್ರೆ ತೀರ್ಥವೆ ಸಾರ್ಥಕೆಂಬುವದೇಕೋ |

ಯಾತ್ರೆ ಜಾತ್ರೆ ಮಹತ್ಕಾರಣವನರಿಯದೇ

ಕ್ಷೇತ್ರಜ್ಞನ ಕಾಣುವದ್ಹೇಗೋ ||3||

ಜಗಸಾಧನ ಸುಖವೆಂಬುವದೇಕೋ |

ಜಪತಪ ಉಪನಿಷದವನರಿಯದೇ

ಉಪವಾಸಕೆ ಸುಖ ಸಿಗುವದ್ಹೇಗೋ ||4||

ಕೊನೆ ಪೂರವೇ ಖರೇವೆಂಬುವದೇಕೋ |

ಕಾಯಪೂರದ ಕರೀಮುಖಸ್ಥನನರಿಯದೆ

ರಾಜಪೂರದ ಗುರು ಮೃಗಸಿಗದ್ಹೇಗೋ ||5||

ಗುರುಬೋಧೆಯು ಪಡಿ ಪರಮಾಮೃತವಾ |

ಗುರುತಿಲ್ಲದ ನಾಯಿಗೆ ಇದು ಕಡು ವಿಷವಾ

ಎಚ್ಚರಿಲ್ಲದೆ ನಾಯಿ ಎಲುಬನೂ ಕಡಿವಾ

ತನ್ನ ನಾಲ್ಗೀಯ ರಗ್ತ ತಾನೆ ರುಚಿಸುವಾ

ನಾಲಿಗೆಯೇ ನನ್ನದೆಂಬೋ ಇಲ್ಲದ ಕರುವಾ

ಅಜ್ಞಾನ ಅವಿದ್ಯೆಯು ಹಾಕಿತು ಮರುವಾ ||1||

ಹೊನ್ನು ಹೆಣ್ಣೂ ಮಣ್ಣು ಮೂರೆ ಮೂಲವಾ |

ಕೋಪ ತಾಪ ಪಾಪ ಬೀಜ ಹುಟ್ಟಿಸುವಾ

ಅಗಣಿತ ಪಂಡಿತರು ಶಾಸ್ತ್ರ ಬೊಗಳುವಾ

ಮೂರರಲ್ಲೇ ಆಗಿಹೋಗ್ಯಾರೋ ವಶವಾ

ಭೋಗಿ ತ್ಯಾಗಿ ಶಿವಯೋಗಿ ಸಾಧುವಾ

ಬೇಗನೇ ತಿರಿವರೋ ಫೇರಿರಾಟಳವಾ ||2||

ಬಂದಿತೆ ಬಾಯಿಗೆ ಸುಮನೆ ಶಿವನಾಮವಾ |

ಹೊಂದಿತೆ ಮನಕೆ ಪರವಸ್ತಿನ ಸುಖವಾ

ಏಸೋ ಕಾಲದಿ ಭ್ರಮೆಗೊಳ್ಳಿಸಿತು ಜೀವವಾ

ಈಸೋಲಾರದೆ ಭವಸಾಗರ ಸಂಸಾರವಾ

ಆಶೆ ನಿರಾಶದಿ ಈಶನ ನೆನಿವಾ

ಉಪದೇಶವೆ ಗುರು ಮೃಗರಾಜನ ಪಡೆವಾ ||3||

ಗುರುಪೂಜೆಯ ಮಾಡಬೇಕಮ್ಮಾ |

ಗುರುತರಿದು ಗುಪ್ತದಿ ಗೂಢ ಪೂಜೆಯ ನಡಿಸಬೇಕಮ್ಮಾ

ಗೂಢಪೂಜೆಯ ನಡಿಸಬೇಕೂ

ಹಂಸೊನೊಹಂಸ್ವರವನೂದುತ

ನಾಶಿಕಾಗ್ರದಿ ದ್ರಿಸ್ಪಿನಿಕ್ಕುತ ||1||

ಚಂದ್ರಸೂರ್ಯದ ಮಧ್ಯ ಭಾಗಮ್ಮಾ |

ಮಧುಪರ್ಕಸೇವಿಪ ಮಂದಹಾಸನ ಮಂಟಪಾದಮ್ಮಾ

ಎಂಟಹಂದರಗುಂಜಿನಟ್ಟಿಸಿ

ಹದನೆಂಟು ಅಡ್ಡದ ಬೆಳೆವ ಹೊಂದಿಸಿ

ಆರು ಅಂಕಣ ಐದು ನಿಲುಗಣ

ಮೂರು ಮಜಲಿನ ಆಸ್ನಾಕುತ ||2||

ಗಂಗೆ ಸರಸ್ವತಿ ಜಮುನೆ ನೋಡಮ್ಮಾ |

ತ್ರಿವೇಣಿ ಸಂಗಮ ನಟ್ಟ ನಡುವೇ ಬೈಲು ನೋಡಮ್ಮಾ

ಹೂಸಿ ಸಾರಿಸಿ ರಂಗೋಲ್ಹಾಕಿಸಿ

ಒಳ ಕಂಗಳಿಂದಲೆ ಸ್ಥಲವ ಶೋಧಿಸಿ

ಪಿಂಗಳಾ ಶುಶುಮ್ನ ಹಾದಿಲಿ

ಮಂಗಳಾರುತಿ ಪಿಡಿದು ಪಾಡುತ್ತ ||3||

ಮಂಗಳಾಂಗನ ಅಂಗಿ ಬಿಡಿಸಮ್ಮಾ |

ಕಂಗೆಳಿಪ ದೇಹಕೆ ಲಿಂಗಸಂಗ ಸುಗಂಧವೇರಿಸಮ್ಮಾ

ಅಂಗನಿಯ ಆಶ್ರಮವ ಕಡಿದೂ

ಲಿಂಗ ಮುದ್ರಾಧಾರ ತಿಳಿದೂ

ಅನಹುತೆಂಬೋ ಹರನವಲಿದೊ

ಮಣಿಪೂರದುಚ್ಚಿಸ್ಟ ಇಛಿತ ||4||

ಅಂಗ ಸಮೆದು ಕಂಬ ಮಾಡಮ್ಮಾ |

ಅರುವೆಂಬ ಐದೂ ರಥವ ಬತ್ತಿಯ ದೀಪ ಹಚ್ಚಮ್ಮಾ

ಸಂಗದ್ರೋಹಿಗಳೆಂಬ ದುಸ್ವರ

ತರಂಗವನ್ನೆ ವನ್ಹಿಗೂಡಿಸಿ

ಇನ್ನುಉಳಿಯದಲನ್ನ ತುಪ್ಪದ

ಘನ್ನ ಕರ್ಪೂರದಾರುತೆತ್ತುತ ||5||

ಎಂಟು ವೈಖರಿ ಸಿದ್ಧಿ ಯಾಕಮ್ಮಾ |

ಇನ್ನೆಂಟು ಯೋಗದ ನೆಂಟಸ್ತಾನವೆ ಯಾಕ ಬೇಕಮ್ಮಾ

ಏಳು ಪಾಂವಟಿಗೇರಿ ನೋಡುತ

ಹಾರಿ ಆಚೆಗೆ ಹೋಗಿ ಕೂಡುತ

ಜ್ಞಾನ ಜ್ಯೋತಿಯ ಬೆಳಕು ಬೆಳಗೂತ

ಬೆಳಕಿನೊಳು ನೀ ಕುಡಿಯೆನಾಗೂತ ||6||

ಹಗಲು ಇರುಳೂ ಗುರುವೆ ನೆನಿಯಮ್ಮಾ |

ಗುರುಮಂತ್ರ ಮದೊಳು ನಿಲುಕ ನಿಲ್ಲದೆ ಜಪಿಸು ನೋಡಮ್ಮಾ

ನಿಲುಕನಿಲ್ಲದ ಮಾಯ ಸಂಸಾರ

ಅಳುಕಲಾರದೆ ಇದ್ದದಿರಲೀ

ಇದ್ದ ಕೊನೆಪೂರ ಗೆದ್ದ ಗುರುವರ

ಸಿದ್ದ ಮೃಗರಾಜ ವರಕವಿಯನೆನುತ ||7||

ಸತ್ಯಕ್ಕಾಗಿ ಸಾವೂ ಬರಲೀ |

ವಿತ್ತವಳಿದು ಕಾಡು ಸೇರಲೀ

ಗೊತ್ತುನರಿಪ ಗುರುವಿನ ಕರುಣಾ

ಎತ್ತ ಹೋದರು ಸುತ್ತಲೆ ಬರಲೀ ||1||

ಹೊತ್ತು ಮುಳುಗಿ ಕತ್ತಲೆ ಬೀಳಲೀ |

ಮತ್ತೆ ಊರು ಸಿಗದಂತಾಗಲೀ

ಅತ್ತಲಿತ್ತ ಆಶೆಯನಳಿದೂ

ಹೆತ್ತ ತಾಯಿ ನೆನಪಿಗೆ ಬರಲೀ ||2||

ಕಷ್ಟವೆಂಬುದು ಕಡೆತನವಿರಲೀ |

ನಿಷ್ಠೆವೊಂದೆ ನಿಜವಾತ ಬಲಿಲೀ

ಇಷ್ಟಲಿಂಗ ಭವಿಯಲಿ ಬೆರತೂ

ಭಂಜಿಯೆಂಬೊ ಸೂತಕ ಬರಲೀ ||3||

ಎಂಟು ಮಂದಿಯ ತಂಟೆ ಹರಿಲೀ |

ತುಂಟರೈದ ಕಂಟ ಕಡಿಲೀ

ಸುಂಠರಾರ ಭಂಟರು ಮೂರಾ

ನೆಂಟಸ್ತಾನ ಕಡದೇ ಹೋಗಲೀ ||4||

ಮೂರು ಕಳಿದು ಮೂರೇ ಉಳಿಲೀ |

ಮೂರ ಆರವಂಭತ್ತು ಬೆಳಲೀ

ಮೂರನೂರಾ ಅರವತ್ತನರಿದಾ

ಧೀರನಾಗಿ ಮರೆಯುತೆ ಇರಲೀ ||5||

ಎಲ್ಲಾ ಕಳೆದು ವಂದೇ ಬರಲೀ |

ವಂದು ಕಳಿದು ಬಿಂದೂ ಉಳಿಲೀ

ವಂದಕೊಂದು ಕುಂದೂ ಬರದೇ

ಹೊಂದಿ ಹೋಗುವದೊಂದೇ ಸಿಗಲೀ ||6||

ಕೊನೆಪೂರ ಕಟ್ಟಾ ಅರಲೀ |

ಬಂದದ್ದು ಎಲ್ಲಾನೂ ಬರಲೀ

ಗುರುವು ನಮ್ಮ ಮೃಗೇಶ್ವರನಾ

ಅಂತಃಕರಣ ಪರಿಪೂರ್ಣಿರಲೀ ||7||

ನರನೆ ತ್ರಿಪುರಹರನೆಂದೊದರೀ ಹೇಳಿದ |

ಗುರುವಿನ್ನರಿಯಾದೆ

ಜರಿಯುವರಿಗೇನು ಹೇಳಾಲಿ

ಬ್ರಹ್ಮನ ನೆಲಿ ಹೇಗೆ ತಿಳಿಸಾಲಿ | |1||

ಅನ್ನಮಯ ಕೋಶಾದ ದೇಹವೆ ದಿವಿಟಗೀ ||

ಬಹಿರಿಂದ್ರಯಗಳು ಹಣತಿಯಾಗಿ ಮಾಡೀ

ಗಣತೀಲೆ ಪ್ರಾಣ ಅಪಾನ ಉದಾನ ಯಾನ

ಸರಿ ಸಮಾನ ಐದು ತೈಲ ಮಾಡಿ ||2||

ಕಂಡು ಕಾಣದಿರುವ ಸೂಕ್ಷ್ಮ ಶರೀರವೇ |

ಮೂರು ಗುಣದ ಮೂರೆಳಿಯ ಬತ್ತಿ ಮಾಡಿ

ಅದರಲ್ಲಿರೋ ದೇಹೀ ಚಿತ್ತೆಂಬ ದೀಪ್ಹಚ್ಚೀ

ಜ್ಯೋತಿಯೇ ನಾನೆಂದೂ ನಂಬಿ ಗಿ ಮಾಡೀ ||3||

ನಾಡಾ ತಿರಗಿದರಿಲ್ಲಾ ಮೂಢತನ ಕಳದಿಲ್ಲಾ |

ನೋಡೇನಂದರೆ ನಿನಗೆ ಸಿಗೋದೆ ಇಲ್ಲಾ

ಗಾಡಾ ಶ್ರೀಗುರು ಸೇವೆ ಮಾಡಾದೆ

ಮರವೀಲಿ ಅರವನಿಲ್ಲದೆ ತಿರಗಾಲೇನು ಇಲ್ಲಾ ||4||

ಹುಟ್ಟಿದ್ದು ಕೊನೆಪೂರ ತಟ್ಟಿದ್ದು ಕಾಯಾಪೂರ |

ಘಟ್ಟಿದ್ದು ನಿಜಪೂರ ನೆನವ ಮಾಡೀ

ಕಟ್ಟಿದ್ದು ದೊರಿಪೂರ ಮುಟ್ಟಿದ್ದು ಗುರುದ್ವಾರ

ಕೊಟ್ಟಿದ್ದು ಮೃಗಸೂರ ಜಪವ ಮಾಡಿ ||5||

ಯಾರಿದ್ದಾರೇನೂ ಭವಬಾಧೆಯ ಬಿಡದಾ |

ಯಾರಿದ್ದಾರೇನೂ ಭವಬಾಧೆಯ ಬಿಡದಿದು

ಪಾಯದಿ ಕಳಿಯಾಲು ಕಡಿಗೊಂದೇ ಗುರು ಕರುಣಾ ||ಪಲ್ಲ||

ಸಾಧಿಸಿದ್ದಾರೇನೂ ಜಗದಾ ಆಶೆಯಾ ಬಿಡದಾ |

ಸಾಧಿಸಿದ್ದಾರೇನೂ ಘನಶಾಸ್ತ್ರಿದ್ದಾರೇನೂ

ಸಾಧಿಸೀಕೊಳ್ಳಲು ಬೇಕೂ ಶ್ರೀಗುರು ಕರುಣಾ ||1||

ಯೋಗಿದ್ದಾರೇನೂ ಬರಿದಾ ಸೋಗನು ಬೈಸೀ |

ಯೋಗಿದ್ದಾರೇನೂ ಬರೆ ಯೋಗಿದ್ದಾರೇನೂ

ನಿಜನ ಅರಿಯಲು ನಿನಗೆ ಬೇಕೂ ಶ್ರೀಗುರು ಕರುಣಾ ||2||

ಗುರುವಾದರೇನೂ ಅರಿದಾ ಅರುವನು ಕೊಡದಾ |

ಗುರುವಾದರೇನೂ ಮುರಹರನಾದರೇನೂ

ಗುರುವಿನ ಗುರು ಕಾಣಲು ಬೇಕಯ್ಯಾ ಗುರು ಕರುಣಾ ||3||

ದಾರಿದ್ದಾರೇನೂ ಭವ ದಾಟಿ ಹೊಗುವ ಸುಖದಾ |

ದಾರಿದ್ದಾರೇನೂ ಭವ ದಾಟುವ ಸುಲಭದ

ದಾರಿ ತೋರಲು ಬೇಕು ಧೀರಗುರು ಮೃಗ ಕರುಣಾ ||4||

ಕಣ್ಣಿನಲ್ಲಿಯೆ ಕಾಶಿ ಕಾಣಿರೋ |

ಕಾರುಣ್ಯ ಕಾಂತೀ ಶಾಂತಿ ಸುಂದರ ಲಿಂಗ ನೋಡಿರೋ

ಶಾಂತಿಸುಂದರ ಲಿಂಗ ನೋಡಿರಿ

ಭ್ರಾಂತಿಗಳಿದು ಭಕ್ತಿ ಮಾಡಿರಿ

ವಿಶ್ರಾಂತಿ ಪಡೆವಾ ವರವ ಬೇಡಿರಿ

ಅರುವು ತೋರುವ ಗುರುವನ್ಹಿಡಿಯಿರೀ ||1||

ಸಪ್ತ ಪದರಿನ ಗುಡಿಯ ನೋಡಿರೋ |

ಗುಡಿ ಗುಮಟ ಮಧ್ಯದಿ ಗುಪ್ತದಿರೊ ಗುರುಸ್ಥಲವ ಕಾಣಿರೋ

ಗುಪ್ತದಿರೊ ಗುರುಸ್ಥಲವ ಕಾಣಿರಿ

ಸಪ್ತ ಪಾಂವಟಿಗೇರಿ ನೋಡಿರಿ

ಕ್ಲಿಪ್ತದಿಮ್ ಕೈಲಾಸ ಕಾಣಿರಿ

ಶಪ್ಥದಿಮ್ ಶಿವಶರಣರಾಗಿರಿ ||2||

ಹರಿವ ಮನಸಿನ ತೊರಿಯ ನಿಲ್ಲಿಸಿರೋ |

ಹರಿ ಮೂರು ನದಿಯಾ ಸ್ನಾನದಿ ತನು ಶುದ್ಧಗೊಳಿಸಿರೋ

ಸ್ನಾನದಿ ತನು ಶುದ್ಧಗೊಳಿಸಿರಿ

ಧ್ಯಾನದಿ ಮನಬುದ್ಧಿ ಬೆಳೆಸಿರಿ

ಹೀನ ಮನ ತನು ಖೂನನರಿಯದ

ಸ್ವಾನಿನಂತೆ ಒದರಬ್ಯಾಡರಿ ||3||

ಆರು ಸ್ಥಲಗಳ ಅರ್ಥ ಮಾಡಿರೋ |

ಆ ಮೇರು ಶಿಖರದ ಮೂಲಪುರುಷನ ಮಹಲ ಕಾಣಿರೋ

ಮೂಲ ಪುರುಷನ ಮಹಲ ಕಾಣಿರಿ

ಮೇಲಕೇರುವ ದ್ವಾರ ತಿಳಿಯಿರಿ

ದ್ವಾರ ಸೇರುವ ಧೀರನಾಗಿರಿ

ಭಾರವಹಿಸಿ ಘೋರ ದಾಟಿರಿ ||4||

ಬರುವ ಹೋಗುವ ದಾರಿ ನೋಡಿರೋ |

ಬದಿಯಲ್ಲಿ ಎರಡೂ ಆಜುಬಾಜಿನ ಬತ್ತಿ ಹಚ್ಚಿರೋ

ಆಜುಬಾಜಿಗೆ ಬತ್ತಿ ಹಚ್ಚಿರಿ

ಕತ್ತಲದ ಕೋಣೀಯ ಬಿಚ್ಚಿರಿ

ಹತ್ತಿಲಿರೊ ಕೊನೆಪೂರ ಮರತಿರಿ

ಸತ್ಯಗುರು ಮೃಗೇಂದ್ರನ್ಹಿಡಿಯಿರಿ ||5||

ಶಿವ ನಿನಗ್ಹ್ಯಾಂಗ ಸಿಕ್ಕಾನೋ ಸುಳಿಗೇಡಿ ಮನುಜಾ |

ಶಿವ ನಿನಗ್ಹ್ಯಾಂಗ ಸಿಕ್ಕಾ ಭಕ್ತಿ ಭಾವ ಇಲ್ಲದೆ ಪಕ್ಕಾ

ದಾನದಲ್ಲಿ ವಂಚಿಸಿ ರೊಕ್ಕಾ ಮನಿಯಲ್ಲಿ ಹೊಳಿಟ್ಟ ಮ್ಯಾಕಾ ||1||

ಗುರು ನಿನಗ್ಹ್ಯಾಂಗ ಸಿಕ್ಕಾನೋ ಗುರ್ತರಿಯದ ಮನುಜಾ |

ಗುರು ನಿನಗ್ಹ್ಯಾಂಗ ಸಿಕ್ಕಾ ಗೂಢವನರಿಯಾದೇ ಪಕ್ಕಾ

ಗುರುಪುತ್ರರೋಳ್ ಸಿಕ್ಕಾ ಗುಜರಾಣಿ ಮಾಡಿದ ಮ್ಯಾಕಾ ||2||

ದೇವ ನಿನಗ್ಹ್ಯಾಂಗ ಸಿಕ್ಕಾನೊ ದಯವಿಲ್ಲದೆ ಮನುಜ್ಯಾ |

ದೇವ ನಿನಗ್ಹ್ಯಾಂಗ ಸಿಕ್ಕಾ ದಯಧರ್ಮ ಮಾಡದೆ ಪಕ್ಕಾ

ಮಾಯಮೋಹ ಬಲಿಯೊಳು ಸಿಕ್ಕಾ ಗುರು ಮೃಗೇಂದ್ರನ ಮರ್ತಮ್ಯಾಕಾ ||3||

ತಿಳಿಯದ್ಹೋದೇ ತಿಳಿಯದ್ಹೋದೇನೋ |

ಶ್ರೀಗುರು ದೇವಾ ಎನ್ನ ಗುರುದೇವಾ

ತಿಳಿದು ಕ್ರೋಧವ ಕಳಿಯದ್ಹೋದೆನೋ

ಕಾಮ ಕ್ರೋಧವ ಕಳಿಯಾದ್ಹೋದೆ

ಧಾಮ ನಿನ್ನಯ ಸೇರಾದ್ಹೋದೆ

ನಾಮ ಚಿನ್ಮಯ ಜಪಿಸದೆ ನಿತ್ಯದಿ

ಸೋಮಶೇಖರನಾ ಮರಿಗಾದೆ ||1||

ತೊಳಿಯದ್ಹೋದೆ ತೊಳಿಯದ್ಹೋದೆ |

ಶ್ರೀಗುರು ದೇವ ಎನ್ನ ಗುರುದೇವ

ಮನದ ಮೈಲಿಗೆ ಕಳಿಯದ್ಹೋದೆನೋ

ಮನದ ಮೈಲಿಗೆ ಕಳಿಯದ್ಹೋದೆ

ಜನರ ಸಂಘವ ತೊರಿಯದ್ಹೋದೆ

ಈ ನರದೇಹದ ಭ್ರಾಂತಿಯೋಳಾದೆ

ಇಹಪರ ಸುಖವ ಪರಕಿಸದ್ಹೋದೆ ||2||

ಅಳಿಯದ್ಹೋದೆ ಅಳಿಯದ್ಹೋದೆ |

ಶ್ರೀಗುರು ದೇವ ಎನ್ನ ಗುರುದೇವ

ದುರಾಶೆಯಿಂದಲೆ ಮುಳಗಿ ಹೋದೆ

ಆಶೆ ಬಲಿಯಿಂದ ಉಳಿಯದ್ಹೋದೆ

ಕಳೆದ ಕಾಮದ ಕರ್ಮದೋಳಾದೆ

ಹೊಳೆವ ಸ್ತ್ರೀಯರ ಲೀಲೆಯೋಳಾದೆ

ಮೊಳೆವ ವೈರಾಗ್ಯದ ವೈರಿಯಾದೆ ||3||

ಕಳೆಯದ್ಹೋದೆ ಕಳೆಯದ್ಹೋದೆನೋ |

ಶ್ರೀಗುರು ದೇವ ಎನ್ನ ಗುರುದೇವ

ಕಳ್ಳರಿಪುಗಳ ತುಳಿಯದ್ಹೋದೆ

ಕಳ್ಳರಿಪುಗಳ ಕಳೆಯದ್ಹೋದೆ

ಸುಳ್ಳೆ ವಿಷಯಲಂಪಟ ಬಿಡದೆ

ಸುಳಿವ ಮರವಿನ ಮಾಯದೊಳಾದೆ

ಮರವಿನ ಕುರುಹು ಅರಿಯದೆ ಜರಿದೆ ||4||

ಉಳಿಯದ್ಹ್ಯೋದೆ ಉಳಿಯದ್ಹ್ಯೋದೇನೋ |

ಶ್ರೀಗುರು ದೇವ ಎನ್ನ ಗುರುದೇವ

ಇಳಿಯ ಹೊಳಿಯದೆ ಉಳಿಯದ್ಹೋದೆ

ಇಳಿಯ ಹೊಳಿಯಲಿ ಉಳಿಯದ್ಹೋದೆ

ಮುಳುಗಿ ಮುಳುಗಿ ಮಿಡುಕುತ ನಡೆದೆ

ಕೊಳೆಯ ದೇಹದ ದಾಸರಾಮನ

ವ್ಯಾಸ ಗುರು ಮೃಗೇಂದ್ರರ ಮರ್ಮವ ||5||

ಪಾವನಾದೇ ಪಾವನಾದೇನೋ |

ಪಂಚಾಮೃತ ಕುಡಿದೂ ಪರಾಮೃತ ಸವಿದೂ ||ಪಲ್ಲ||

ಕರುಣಿಸಿಯೆನ್ನ ಗುರು ಕಡಿಯಿಲಿ ಕರಿದು ಕರ್ಣದೊಳೂದೀದಾ |

ಕಲಿ ಮರಿಯಬ್ಯಾಡಂದಾ ಕರ್ಣದೊಳೂದೀದಾ

ಕಾಯ ವಾಚಾ ಮನದಿಂದ ಮಂತ್ರದಾ

ಮನ್ನಣೆ ಮಾಡಂದಾ ಮರಿಯಾದೆ ಅಂದಾ ||1||

ದೇಹ ಧರ್ಮಕೊಳಪಡದೇ ಜಪಿಸುತ |

ನಡಿನುಡಿ ಒಂದಂದಾ ಭೇದ ಬ್ಯಾಡಂದಾ

ನಡಿ ನುಡಿ ಒಂದಂದಾ ಕಾಮಕ್ರೋಧಮದಮತ್ಸರ

ಅಳಿದು ನಿಚ್ಚಲವಾಗಂದಾ ತಲಿ ಬಾಗಂದಾ ||2||

ಸಾಕು ಬೇಕೂ ಬೇಕೂ ಸಂಸಾರ ಸಾಕು ಮಾಡಂದಾ |

ಇನ್ಯಾಕಂದ ಸಾಕು ಮಾಡಂದಾ ಸಕಲವು

ಅರಿಯಲಿ ಅಲಿಪ್ತನಾಗಿ ಅನುಭವ

ಮಾಡಂದಾ ಆಗಿ ಕುಂಬರ ಹುಳವಂದಾ ||3||

ಸರ್ವಕಧಿಕವಾದ ಸಂತರ ಸಂಗಮ |

ಒಂದೆ ಮೊದಲಂದಾ ಗುರುಪಾಠಂದಾ

ಇದು ಒಂದೇ ಮೊದಲಂದಾ ಶರಣರ

ಸೇವೆಗೆ ಹೋಗಲು ತಡವ್ಯಾಕಂದಾ ||4||

ನಾನು ನೀನೆ ನೀನೆ ನಾನು ನನ್ನನರಿಯಂದ |

ಮರಿಬೇಡಂದಾ ನನ್ನನರಿಯಂದಾ

ನಾನು ನೀನೋ ನೀನು ನಾನೋ

ನನ್ನನ್ನ ನಾನೆಂದಾ ನಂಬಬೇಡಂದಾ ||5||

ನನ್ನನಗಲೀ ನಿನ್ನಾ ಬದಲೀ ಮತ್ಯಾರ ಬ್ಯಾಡಂದಾ |

ಇರು ಏಕಾಂತವಂದಾ ಮತ್ಯಾರ ಬ್ಯಾಡಂದಾ

ನೋಡಿ ದ್ರಿಷ್ಠಿಸಿ ಗುರುವಿನ ಗುರ್ತಿಸಿ

ಗುಜುಗುಜು ಆಡಂದಾ ಆ ಗೂಢವರಿಯಂದಾ ||6||

ರಾಮಾ ರಹಿಮಾ ಕರೀಮಾ ಕೇಶವ |

ಕಾಯಕ ಒಂದಂದಾ ಕಡಿಗಲ್ಲೆಂದಾ

ಮಜ್ಜಿದ ಮಂದಿರ ವೇದ ಖುರಾನದ

ಮಾರ್ಗವಾ ಒಂದಂದಾ ವನಗೂಡಂದಾ ||7||

ಮಂಗಳಾಂಗ ಶ್ರೀಗುರು ಮೃಗೇಂದ್ರರ |

ಕಂಗಳ ಕಾಣಂದಾ ಕಡಿ ದಾಟಂದಾ

ಮಂದಹಾಸದಿ ಮನ ಚಂಚಲವಾಗದ

ಹಂಚಿಕಿ ರಾಮಂದಾ ಪದ ಮಾಡಂದಾ ||8||

ನರನಾಗಿ ಬಂದ ಮೇಲೆ |

ಹರಪುರವನ್ನು ಅರಿಯಬೇಕೋ

ಗುರುವಿನಗೂಡಬೇಕೊ

ಗುರುತರಿದಾತ್ಮ ಕಾಣಬೇಕೋ ||1||

ಅಷ್ಟಾಂಗ ಯೋಗವ್ಯಾಕೋ |

ಅಷ್ಟಸಿದ್ದಿಯು ಮಾಡೋದ್ಯಾಕೋ

ಅಷ್ಟೊಂದು ಕಷ್ಟವ್ಯಾಕೋ

ನಿಜ ನಿಷ್ಟೇಲಿದ್ದರೆ ಸಾಕೋ ||2||

ಬೀಜಾವ ಕಾಣಬೇಕೋ |

ಬೀಜ ಮೊದಲಿಂದು ತಿಳಿಯಬೇಕೋ

ಬೀಜವ ಅಳಿಯಬೇಕೋ

ಮುಂದೆ ಉಳಿಯೋದು ತಿಳಿಕಬೇಕೋ ||3||

ವ್ಯರ್ಥಾತಿ ಜಪವ್ಯಾಕೋ |

ನಿನ್ನ ಕರ್ತಾದ ತಪವ್ಯಾಕೋ

ಗುರುತಾದ ಗುರುವಿನ ಹಿಡಕೋ

ಆತನರ್ತೀಸಿ ತಿಳಿಕಬೇಕೋ ||4||

ಕೊನೆಪೂರದಿರು ಬೇಕೋ |

ಕಾಶಿ ಕಾಳಾಕ್ಷಿ ಹೋಗದ್ಯಾಕೋ

ಕರಿಘೂಳಿ ನೆನಿಯಾಬೇಕೋ

ಗುರು ಮೃಗರಾಜನಡಿಯೆ ಸಾಕೊ ||5||

ನೀ ದಯಮಾಡೋ ಶ್ರೀಗುರು ಲಿಂಗಾ ನೀ ದಯಮಾಡೋ |

ನೀ ದಯಮಾಡೋ ನಿರ್ಮಲಚಿತ್ತ ಅನಾಹುತ

ದ್ವಾದಶ ದಳಪತಿ ಮತಿ ಕೊಡೋ ಗತಿ ಲಿಂಗಾ ||1||

ಕಣ್ಣೀಲೆ ನೋಡೋ ಕಾರುಣ್ಯ ಲಿಂಗಾ ಕಣ್ಣಿಲೆ ನೋಡೋ |

ಕಣ್ಣಿಲೆ ನೋಡೋ ನೀ ಉರಿಗಣ್ಣ ತೆರಿಬ್ಯಾಡೋ

ಎಡಬಲ ಕಣ್ಣು ಅರೆ ಮುಚ್ಚಿದರ ಲಿಂಗಾ ||2||

ನೀಗಿಸಿ ಬಿಡೋ ಎನ್ನಯ ಜನ್ಮ ನೀಗಿಸಿ ಬಿಡೋ |

ನೀಗಿಸಿ ಬಿಡೋ ನಿನ್ನಯ ರೂಪ ನಿಜಗೂಡೋ

ಕೊನೆಪೂರ ಕಡಿ ಮಾಡೊ ಗುರು ಮೃಗಾಕರಿಲಿಂಗಾ ||3||

ಎಂಥಾದು ಗುರುಮಂತ್ರವೋ |

ಆತ್ಮದಂತಾರ ತಿಳಿವಂಥದೋ

ಅಂತಾರ ತಿಳಿವಂಥ ಕಾಂತಾರ ಸೇರುವಂಥ

ಕುಂತಾರೆ ನಿಂತಾರೆ ಸುತಾರೆಕೊಳ್ಳುವಂಥ ||1||

ಆರಾರ ಅರಿಯಂಥದೋ ಇದು ಮೂರಾರ ಕಳಿವಂಥ |

ಆರಾರ ಅರಿವಂಥ ಮೂರಾರ ತಿಳಿವಂಥ

ಎಂಟು ಆರು ಐದು ಮೂರು

ಗಂಟ್ಹಾಕಿ ಹೋಗುವಂಥ ||2||

ಸುದ್ದಿಯ ಹೇಳುವಂಥದೋ ತನು |

ಬುದ್ಧಿಯ ಕಲಿಸುವಂಥದೋ

ಬುದ್ಧಿಯ ಕಲಿಸಿ ಗುಣ ತಿದ್ದಿಯೆ ತಿಳಿಸಿ ಬ್ರಹ್ಮ

ಸುದ್ದಿಯಲೇ ಮನ ಸಂತೈಸಿಕೊಳ್ಳುವಂಥ ||3||

ಹೋಗಾದು ಆಗಂಥದೋ |

ಆಗಿ ಹೋಗಾದು ತಿಳಿಯಂಥದೋ

ಆಗಾದ ಹೋಗಾದ ಸಿಗಾದ ಆಶೆ ಬಿಟ್ಟು

ನೀಗಾದ ಸಂಸಾರ ಸಾಕು ಮಾಡಿಕೊಳ್ಳುವಂಥ ||4||

ಕೋನೇರಿ ಇಳಿವಂಥದೋ |

ಕೊನೆಪುರದೊಳು ಇರುವಂಥದೋ

ಶುದ್ದಾಗಿ ಬದ್ಧಾಗಿ ಮುದ್ದಾಗಿ ಇರುವಂಥ

ರದ್ದಾಗಿ ಹೋಗೋ ಗುರುಮೃಗಾನ ಕೊಳ್ಳುವಂಥ ||5||

ಮಾಡಬೇಕೆಲೋ ಮೂಢಾ ಭಕುತಿ |

ಕಾಡಿಬೇಡಿ ಗುರುವಿನೊಳು ಪಡಿ ನಿಜ ಮುಕ್ತಿ ||ಪಲ್ಲ||

ಗೂಢದಲ್ಲಿರಿಸೋ ಗುರುಸ್ತುತೀ |

ಗಾಢಾ ನಿದ್ರೆಯೊಳಗೆ ಕಾಣೋ ಪರಬ್ರಹ್ಮಜ್ಯೋತಿ

ಗುರು ಮಂತ್ರ ಜಪ ಒಂದೇ ಮುಕ್ತಿ

ಬೇಡಾ ಕಾವಿ ಕಪನಿಯು ಕಳ್ಳರಿಪು ಮಂತ್ರಶಕುತಿ ||1||

ದೇಶಾಕೋಶವ ತಿರುಗಿ ಸೋತೀ |

ಈಶಾ ಕಾಶಿ ತಿರುಪತಿ ಹೋಗಿ ಕಳಲಿಲ್ಲೋ ಭ್ರಾಂತೀ

ಯಾತ್ರೆಯೆಂಬುದೇ ಮಾತೃ ಭಕುತೀ

ಪಿತೃಗಾತ್ರಾವನರಿದ ನೀ ಹೊಂದೋ ಸದ್ಗತಿ ||2||

ಬಿಚ್ಚಿ ನೋಡುವದ್ಯಾಕೋ ಪೋತೀ |

ಹೆಚ್ಚು ವೇದ ಶಾಸ್ತ್ರವನೋದಿ ಅಗಡ್ಯಾಕ ಬೀಳತೀ

ಹಚ್ಚಿ ತರ್ಕವ ಕಾಣೇನಂತೀ

ಕೆಚ್ಚೀ ಉಚ್ಚಿಗುಂಡಿಗೆ ಮೆಚ್ಚೀ ಹುಚ್ಚಾಗಿ ಕುಂತೀ ||3||

ಕಾಮ ಕ್ರೋಧವ ಕಳೆದು ಭ್ರಾಂತೀ |

ಬಂಧ ಮಾಯ ಮೋಹಗಳೆಂಬ ಬುಡ ಬೇಲಿ ಕಿತ್ತೀ

ಕಾಯಾ ಮಾಯಾ ಸುಳ್ಳು ಧರತೀ

ಛಾಯಾ ರಜ್ಜೂ ಸರ್ಪದಂತೆ ತಿಳಿ ಪಡೀ ಶಾಂತೀ ||4||

ಮನಗಂಡುದೇ ಚಿದ್ಛನಮೂರ್ತಿ |

ಜನಾ ಪಡಿಯಲಾರರು ಎಂದು ತೋರಾದನು ಮತೀ

ಧೀರಾ ಕೊನೆಪುರದಲ್ಲಿರುತೀ

ಘನಗುರು ಮೃಗೇಂದ್ರರ ಧ್ಯಾನವ ಮರತೀ ||5||

ಎರವಾದೆನಮ್ಮಾ ನಿಮ್ಮೂರಿಗೆ ಅರುವಾದೆನಮ್ಮಾ |

ಮೊರೆ ಹೋದೆನಮ್ಮ ಸದ್ಗುರುವಿಗೆ ಸೆರೆ ಹೋದೆನಮ್ಮಾ

ಎರವಾದೆ ಪೊರಕಿನ್ನು ಬೆರಗಾಗಿ ಮನದಲೀ

ಅರಿಯಾದೆ ಆತ್ಮನ ಬರೇ ಬಾಯಿ ಬಿಡುತಿದ್ದೇ ||1||

ಬಾಧೆ ಬಾಳಮ್ಮಾ ಭಾಗೇದ ಭ್ರಾಂತೀ ಭೋಗಾ ಸಾಕಮ್ಮಾ |

ಬರಿದೆ ಭ್ರಮಿಸಿ ಬೇಸರಾಯಿತಮ್ಮ ಬೇಸರಾಯಿತು ಮನಕಿನ್ನು

ಹೇಸಿದ್ದಾಯಿತು ಹೊನ್ನು ಹೆಣ್ಣು ಮೋಸ ಹೋಯಿತು

ಈಶನ್ನ ಧ್ಯಾಸದಲ್ಲಿಡುವೇನು ಇನ್ನು ||2||

ದೂರ ನೋಡಮ್ಮಾ ಆ ಊರಿಗೆ ದಾರಿ ಭ್ಹಾಳಮ್ಮಾ |

ನಡು ದಾರಿಗೆ ಕಳ್ಳರ್ಹಾರಮ್ಮ ದಾರಿ ಭ್ಹಾಳಾ ದೂರ ನೋಡು

ಯಾರು ನೋಡಾದಂಥ ಕಾಡಾ ಘನ ಗುರುವಿನ ಜೋಡು

ಮಾಡೊ ರಮಸಿ ರಮಸಿ ಮಜಲು ಮಾಟೂ ||3||

ಮಿಡುಗದಿರಮ್ಮ ಅದಕಾಗಿ ನೀನು ದುಡುಕದಿರಮ್ಮ |

ಕಾಮನ ಕಾಟಾ ಭಾಳ ನೋಡಮ್ಮಾ ಅಡಕವಾಗಲು ಮಿಡುಕದಿರಮ್ಮ

ಒಡಕ ಗಡಗಿಯಾ ರೀತಿ ನೋಡು ಮಿಡಕಿ ಮಿಡಕೀ

ಒಡಕವಾದರೆ ಮುಂದೆ ನಿನಗದು ಕೇಡು ನೋಡು ||4||

ಕೊನೆಪೂರಮ್ಮ ಕೋಪದ ದಾರೀ ರಾಮಾ ನೋಡಮ್ಮಾ |

ಕೋಮಲಿಯ ಕೊಡುವ ಶಾಮಾ ನೋಡಮ್ಮಾ ಶ್ಯಾಮಸುಂದರ

ಮೂರ್ತಿ ನೋಡು ಕಾಮ ಕ್ರೋಧವ ಬಿಟ್ಟುಬಿಡೂ

ರಾಮ ಯಾದವನ್ಹಾಡಿದ್ಹಾಡು ರಮ್ಯ ಮನದಲಿ ತಿಳಿದು ನೋಡು ||5||

ಗುರುಧ್ಯಾನವೆ ಮುಕ್ತಿ ಮಾರ್ಗ |

ಅರಿಯುವ ಜ್ಞಾನವು ನೋಡೋ ||ಪಲ್ಲ||

ಗುರುಧ್ಯಾನ ಮನದಲಿ ಮಾಡೊ |

ಗುರ್ತಿಸಿ ಶರಣರ ಕೂಡೋ

ಅರ್ತಿಸಿ ಅವತಣ ನೀಡೋ ||1||

ಸಂಸಾರವು ಸಾಕಷ್ಟು ಮಾಡೊ |

ಸಡಗರದಿ ಸಜ್ಜನರ ಕೂಡೋ

ಸರಿಯಾದ ನ್ಯಾಯವ ಮಾಡೋ ||2||

ನಿನ್ನಂತೆ ಪರರನು ನೋಡೊ |

ನಿರಾಶೆದಿ ವ್ಯವಹಾರ ಮಾಡೊ

ನಿಂದೆಂಬುದ ಸುಳ್ಳಾದ ನೋಡೋ ||3||

ಬರುವಾಗ ಬತ್ತಲೆ ನೋಡೋ |

ಹೋಗುವಾಗ ಬತ್ತಲೆ ನೋಡೋ

ಕಂಡದ್ದು ಕತ್ತಲೆ ನೋಡೋ ||4||

ಶರಣರ ಸಂತರ ಕೂಡೊ |

ಜೀವ ಹೋದರು ಬಿಡಲು ಬೇಡೋ

ಇದು ರಾಮದಾಸನ ಹಾಡೋ ||5||

ಅರವು ಮರವಿನಲಿ ಸೇರಿಸವಿದು ಮನ |

ಚಂಚಲ ರೂಪದಿ ಓಡುತಿದೆ ||ಪಲ್ಲ||

ಸ್ಥಿರವಾಗಲು ಮನ ಗುರುಸೇವೆಯು ಘನ |

ಮಾಡಲು ನಿತ್ಯದಿ ಮೋಕ್ಷವಿದೆ ||1||

ತಿಳಿಯದೆ ನಿಜಸುಖ ಕಳೆಯಲು ಕ್ರೋಧವ |

ದುರುಳರ ಸಂಘವ ಮಾಡುತಿದೆ ||2||

ತೊಳೆಯದೆ ಆತ್ಮವ ಸುಳಿಯದೆ ಜ್ಞಾನವ |

ಮೊಳೆಯದ ಬೀಜವ ಬಿತ್ತುತಿದೆ ||3||

ಹೆಂಡರ ಮಕ್ಕಳ ಎಡಬಿಡದಲಿ ತನು |

ಶಾಶ್ವತವೆಂದು ನಂಬುತಿದೆ ||4||

ಮಾಡಿದ ಪಾಪವ ಕಳೆಯದೆ ಕರ್ಮವ |

ಕಷ್ಟದಿ ಭೋಗವ ಭೋಗಿಸಿದೆ ||5||

ಆರು ಶಾಸ್ತ್ರ ಹದಿನೆಂಟು ಪುರಾಣವ |

ಆಗಮ ವೇದವ ಓದಿಸಿದೆ ||6||

ನಿನ್ನ ನಿಜವ ನೀ ಅರಿಯದೆ ಅಂತರ |

ಅಂದದಿ ಛಂದದ ಬಯಸುತಿದೆ ||7||

ಶ್ರೀಶ ಶ್ರೀವೆಂಕಟ ಕಳೆಯಲು ಸಂಕಟ |

ತೊಳೆಯಲು ಪಾಪದ ಕೂಪವಿದೆ ||8||

ಧರೆಯೊಳು ಕೊನೆಪುರ ಗುಡಿಯೊಳು ಹರಿಹರ |

ಛೇದರಹಿತ ಭವ್ಯ ವಾಸವಿದೆ ||9||

ಪೂಜೀ ನಡಿತಾದ ನಡಿರಮ್ಮ |

ತಂಗೀ ಸೇವೆ ನಡಿತಾದ ||ಪಲ್ಲ||

ಜ್ಯಾಕನ್ಹಳ್ಳಿ ಗುರು ಜಂಗಮ ಪೂಜೀ |

ಚಿಂತನ್ಹಳ್ಳಿ ಗವಿಸಿದ್ದಾನ ಪೂಜೀ

ಭಕ್ತಿಗೊಲಿದಾತ ಬಸವಾನ ಪೂಜೀ

ಮಕ್ತಿಗೊಲಿದಾತ ಮುತ್ಯಾನ ಪೂಜೀ ||1||

ಶ್ರಾವಣ ಮಾಸದ ಸರಿಯಾದ ಪೂಜೀ |

ನಂದಿರಾಜನ ಸೋಮವಾರ ಪೂಜೀ

ಮಲಗಿದ್ದ ಮಲ್ಲಿನಾಥನ ಪೂಜೀ

ಮಾತಾಡದಂಥ ಮೂಕಾನ ಪೂಜೀ ||2||

ಸೀಮಿ ತಿರುಗೊ ಸಿದ್ದಲಿಂಗಾನ ಪೂಜೀ |

ಭೂಮಿ ತಿರುಗೊ ಭವಲಿಂಗಾ ಪೂಜೀ

ಊರು ತಿರುಗೊ ವರಲಿಂಗಾನ ಪೂಜೀ

ಕೇರಿ ತಿರುಗೊ ಕರಿಲಿಂಗಾನ ಪೂಜೀ ||3||

ಆಜುಬಾಜಲೆ ಬಂದ ಬಳಗಾದ ಪೂಜೀ |

ಮೋಜು ಮೋಜಿಲೆ ಮಾಡೋ ಮಹಾತ್ಮದ ಪೂಜೀ

ನಿಷ್ಠಾವಂತರಾಗಿದ್ದು ಇಷ್ಟಾದ ಪೂಜೀ

ಸಿಸ್ಟವಂತರಿಗದು ಶ್ರೇಷ್ಠಾದ ಪೂಜೀ ||4||

ವಾಸ ಕೊನೆಪೂರ ಈಶಾನ್ಯ ಪೂಜೀ |

ದಾಸ ರಾಮನು ತನ್ನ ಮನಗೊಂಡ ಪೂಜೀ

ಖಾಸ ಮುತ್ಯಾನು ಕುಂತು ಮಾಡುವ ಪೂಜೀ

ವ್ಯಾಸಗುರು ಮೃಗೇಂದ್ರನೊಪ್ಪುವ ಪೂಜೀ ||5||

ಜನ್ಮ ಸಾರ್ಥಕ ಮಾಡಿಕೊಳ್ಳಣ್ಣ ಅಸ್ಥಿರ ದೇಹ |

ಮಾಯ ಮರವಿದು ತಿಳಿದು ನೋಡಣ್ಣ ||ಪಲ್ಲ||

ಇಂದು ನಾಳೆಂದನ್ನಬೇಡ |

ಮುಂದೆ ನಿಂತಿದೆ ಮೃತ್ಯು ನೋಡ

ಕರ್ಮ ಸಾಧಿಸಿ ಕರುಣೆ ತಪ್ಪಿ

ಮರಣ ಹೊಂದಲು ಏನು ಮಾಡುವಿ ||ಅನುಪಲ್ಲ||

ಜಗದ ಭ್ರಾಂತಿಯ ಬಿಟ್ಟುಬಿಡಣ್ಣ ಮೂಜಗದ |

ಹರನನು ಸ್ತುತಿಸಿ ಆಲಿಸಿ ಕಾಲ ಕಳೆಯಣ್ಣ

ಬಲವು ತಪ್ಪಲು ನೆಲವ ಹಿಡಿಯುತೆ

ಮಲವ ಮೂತ್ರವ ಮನೇಲೆ ಮಾಡುತ

ಮಡದಿ ಮಕ್ಕಳ ನೋಡಿ ಮಿಡುಕುತ

ಬೊಬ್ಬೆ ಹೊಡೆದರು ಯಾರು ಸೇರರು ||1||

ಮಕ್ಕಳ ಮನೆಯ ಮಾಡಿಟ್ಟಿ ಮನೆಮನೆಯ |

ಸುಲಿದು ಶೂಲಿಗೇರುವ ಪಾಪ ಘಳಿಸಿಟ್ಟಿ

ಭಾಗ್ಯಕೆಲ್ಲರು ಪಾಲಕಾರರು

ಪಾಪಕಿಂಚಿತ ಯಾರು ಕೇಳ್ವರು

ಕೋಪದಿಂ ಯಮ ಬಂದು ಎಳೆವಾಗ

ಬೇಡವೆಂದೆನುವರು ಯಾರು ||2||

ಯಾರಿಗ್ಯಾರು ಇಲ್ಲ ನೋಡಣ್ಣ ಮಾಯಾದ |

ಬಲಿಯೊಳು ಬಿದ್ದು ಸಿಲಿಕಿ ಮಿಡುಕದಿರಣ್ಣ

ನಾಲ್ಕು ಕಂಬದ ನಡುವೆ ಮಂಟಪ

ದೊಳಗೆ ಬೆಳಗುವ ಜೀವ ಜ್ಯೋತಿಯು

ಹಗಲು ಇರುಳು ಅಗಲದಂತಿಹ

ಆಸ್ತಿಯನ್ನೇ ಬಿಟ್ಟುಬಿಡುತಿರೆ ||3||

ಕೊನೆಪೂರ ಊರ ಬಹು ಸಣ್ಣ ಕೋನೇರಿ |

ಎಂಬ ಪೂರ್ವಕಾಲದ ಹೆಸರು ಕೇಳಣ್ಣ

ಪದ್ಮನಾಭನೆ ಪರಮ ಪುರುಷನೆ

ಪತಿತ ಪಾವನ ವೆಂಕಟೇಶನೆ

ಎಂದು ಪಾಡುತ ಮೋಹ ದೂಡುತ

ಅರಿದು ತೋರೆಂದಾನು ಯಾದವ ||4||

ರಾಮನಾಮ ಜಪ ಸಾಧಿಸು ಪ್ರಾಣೀ |

ಯಾತಕೆ ಗರ್ವವ ಪಡುತಲಿದ್ದೀ

ಸಾರ್ಥಕವಲ್ಲದ ದೇಹವ ನಂಬೀ

ವ್ಯರ್ಥದಿ ಇಳಿಯೊಳು ಸುಳಿತಿದ್ದೀ ||1||

ಬ್ರಾಹ್ಮಣನಾಗಿ ವೇದವನೋದೀ |

ಸ್ನಾನ ತರ್ಪಣವ ಮಾಡುತಿದ್ದೀ

ಸದಾ ಕಾಲ ಬರೆ ಸುಚಿರಭೂತನಿರೆ

ಚಿದಾಕಾಂತನೆಲ್ಲಿ ಕಂಡ್ಹಿಡದೀ ||2||

ಜೋಗಿ ಜಂಗಮನಾಗಿ ಜಡಿಯ ಬೆಳಸಿದಿ |

ಅಲಕ್‍ನಿರಂಜನ ಬಾಯಿಲಂದೀ

ನಿಲಕನಿಲ್ಲದೆ ಮನ ತನುವನು ನೋಯಿಸುತ

ಅನುಮಾನ ಅದ್ವೈತವೆಲ್ಲಿ ಕಳದೀ ||3||

ಭಾವ ಭಕುತಿಯಲ್ಲಿ ಭರವಸೆ ನಿಲ್ಲದೆ |

ಬಟ್ಟಿಯು ಕರೆದುಟ್ಟೇನಂದೀ

ಹೊಟ್ಟೆಯು ತುಂಬುವ ಹೊಲಸ ಕೆಲಸವಿದು

ಕಲುಷ ಕರ್ಮವ ಕಳಿಯದೆ ನೊಂದೀ ||4||

ಅಲ್ಲನೆಂದು ಗುಲ್ಲು ಮಾಡಿ ಕೂಗಲಿಕ್ಕೆ |

ಅಲ್ಲನೆಲ್ಲಿಹಾನೆಂದು ತಿಳಿದೀ

ನಿನ್ನಲಲ್ಲದಲ್ಲಾ ಎಲ್ಲಿ ಇಲ್ಲೇ ಇಲ್ಲ

ಅಲ್ಲ ಮಹಪ್ರಭೊ ಒಬ್ಬನೆ ತಂದೀ ||5||

ಜಂಗಮನಾಗಿ ಲಿಂಗವ ಧರಿಸಿ |

ಮನಿಮನಿ ಭಿಕ್ಷವ ಬೇಡುತಿದ್ದಿ

ಅಂಗದ ಲಿಂಗದ ಸಂಗದ ಸಮರಸ

ಹೊಂದಿ ಶ್ರೀಮಂತ ನೀನಿದ್ದೀ ||6||

ಅಂದ ಕಬೀರಾ ಹಿಂದಿಲಿ ಶೂರಾ ಹೊಂದಿಸಿ |

ಮಂದಿಗೆ ತಿಳಿಲೆಂದು ವಾಕ್ಯಾದ ಕನ್ನಡದಿ

ನುಡಿ ಕೊನೆಪೂರದಿ ಇರೆ

ಗುರು ಧ್ಯಾಸದಿ ಮೃಗ ನಿಜದಿ ||7||

ಅಭಿನಂದಿಸಿ ಹರಿನಾಮವ ಪಾಡುವೇನೆ |

ಶಿರವಂದಿಸಿ ಸ್ಥಿರ ಮುಕ್ತಿಯ ಬೇಡುವೆನೆ ||ಪಲ್ಲ||

ಗೋವಿಂದನೆ ಹರಿ ಗೋಪಾಲನೆ |

ಗೋಪಿಕ ವಲ್ಲಭ ಶ್ರೀಹರಿ ನೀನೇ ||1||

ಗೋವರ್ಧನ ಕಿರಿ ಬೆರಳೊಳು ಯೆತ್ತೀ |

ಗೋವುಗಳ ಕಾಯದಾ ಗೋಪಾಲನೇ ||2||

ಮುರಲೀಧರ ಹರ ಮುರ ಮರ್ದನನೇ |

ಮೋಹನ ರೂಪೀ ಮಾಧವನೇ ||3||

ಮುಕುಂದನೆ ಹರಿ ಮಧುಸೂದನನೇ |

ಮಧುರದ ವೇಣು ಗಾಯಕನೇ ||4||

ಮರಿಗಳ ರೂಪಾ ಕಂಗಳ ನೋಡುತ |

ಪಿಂಗಲ ಮಾರ್ಗದರ್ಶಕನೇ ||5||

ಕರೀವರದನೆ ಹರೀ ಮೂರುತಿ ನೀನೆ

ಪರಿಪರಿ ವಿಧದಲಿ ಮಾಡುವೆ ಪ್ರಾರ್ಥನೆ ||6||

ಧರಿಯೊಳು ಕೊನೆಪೂರ ನಿವಾಸನೇ

ಗಿರಿಯೊಳು ಗರುಡಾ ವಾಹನನೇ ||7||

ಶ್ರೀ ಶ್ರೀಶಾ ಶ್ರೀ ವೆಂಕಟಾ ನಿನ್ನಾಳು ನಾನೂ |

ಏನಾರೂ ಮಾಡಯ್ಯಾ ನೀನೂ ||ಪಲ್ಲ||

ಏನೂ ತಿಳಿಯದವನು ನಾ |

ನಿನ್ನಯ ಮಹಿಮೆ ಏನೂ ಅರಿಯದವನೂ

ಏನೂ ಅರಿಯೆನು ನಿನ್ನಾ ಖೂನಾ ಧ್ಯಾನವ ಬಿಟ್ಟೂ

ಸ್ವಾನಿನಂದದಿ ತಲಾ ಬಾಗೀಲೇ ಕಾಯುವೆನು ||1||

ಮೋಸಾ ಹೋದವನು ನಾ |

ಘಾಸೀಪ ದೇಹಾ ಕಾಶೀ ಪಟ್ಟವನೂ

ಏಸೋ ಜನ್ಮವನೆತ್ತಿ ಹೇಸಿಕಿಲ್ಲದವನೂ

ಈಸಾಲಾರದ ಭವಸಾಗರ ಬಿದ್ದವನೂ ||2||

ಅರುವಾರಿದವನೂ ನಾ |

ಕ್ಲೇಶದಿ ಮನಾ ಮರುವಾದವನೂ

ನಾ ಕೊನೆಪೂರದಿರುವೆನೂ

ಗುರು ಮೃಗರಾಜನ ಗುಣಗಾನ ಮಾಡುವೇನೂ ||3||

ದೇವರೆಲ್ಲ್ಯಾನ ನೋಡೋ ನಿನ್ನಾ ದೇಹದೊಳಗೆ |

ಭಾವನಿಲ್ಲಾದೆ ಬರೇ ನಿರ್ದಯದೊಳಗೇ

ಯಾವ ಕಾಲಕ್ಕೂ ಕಾಣುವಲ್ಲಿ ಕಲೀವಳಗೇ ||1||

ದಯಾ ಧರ್ಮಾವೆ ಬೇಕೂ ಭಾರತದೊಳಗೇ |

ನ್ಯಾಯ ನೀತೀಲಿ ನಡೆದ ಧರ್ಮರಾಜ್ಯದೊಳಗೇ

ಸತ್ತ್ಯಾ ಹರಿಶ್ಚಂದ್ರ ನಳ ಬಲೀ ಯುಗದೊಳಗೇ ||2||

ಪಂಚ ಶೀಲಾವನರಿತು ಪ್ರಪಂಚದೊಳಗೇ |

ಪಂಚ ಕ್ಲೇಶಾವ ಕಳೆದು ಪಾರಮಾರ್ಥದೊಳಗೇ

ವಂಚನಾರ್ಥವ ಬ್ಯಾಡ ದರಬಾರದೊಳಗೇ ||3||

ಊಚ ನೀಚಂದ ಭೇದ ಬ್ಯಾಡೊ ನಿಮ್ಮೊಳಗೇ |

ಸೋಚ ಮಾಡಿದರೆ ನೀಚರಿಲ್ಲಾ ನಿಜದೊಳಗೇ

ವಾಚ್ಯ ನಾನೆಂದು ಹೇಳಲಿಲ್ಲೆ ವೇದದೊಳಗೇ ||4||

ನಿನ್ನಾ ಹಿಂದಿಲ್ಲ ಮುಂದಿಲ್ಲ ಕಷ್ಟದೊಳಗೇ |

ಮುಂದೆ ಬಂದಿಲ್ಲಾ ಬಳಗಿಲ್ಲ ರೂಢಿವಳಗೆ

ಏನೂ ತಂದಿಲ್ಲ ಒಯ್ಯೋದಿಲ್ಲಾ ಕಡೀವಳಗೆ ||5||

ಕಷ್ಟಂತೆ ರಾಜ್ಯವೂ ಇಹದೊಳಗೇ |

ಮತ್ತೆ ರಾಜ್ಯಂತೆ ನರ್ಕವೂ ಪರದೊಳಗೇ

ಖರೇ ಗುರು ಮೃಗಹಿಡೀ ಕೊನೇರಿ(ಪೂರ)ಯೊಳಗೇ ||6||

ಮೋನಯ್ಯಾ ತಾನೇ ಬಂದಾ |

ತಿಂತಿಣಿಯಲಿಂದಾ ||ಪಲ್ಲ||

ರಾಘಪೂರಾ ಊರ ಬಾಜಿಂದಾ |

ಹೊಲಿಗೇರಿ ಹಿಂದಾ

ಎಲಬ ಹಂದರ ಹಾಕಿ ನೋಡಂದಾ

ಎಂಟು ಗುಂಜಿಲಿಂದಾ

ತುಂಟ ಚುಣಕೂ ನರದ ತೋರಣಂದಾ

ತೊಗಲ್ಹೊದಕೀಯಂದಾ ||1||

ಜೀವ ಶಿವ ವರ ಕನ್ಯ |

ನೋಡಂದಾ ವನಗೂಡಿಸಂದಾ

ತನುವ ಬಳಗವನರಿಸಿ

ಮನದಿಂದ ತಾಳಿ ಕಟ್ಟೆಂದಾ

ಗಾಳಿಗೋಪುರ ನಂಬ

ಬೇಡಂದಾ ಬರುದಿಲ್ಲೊ ಹಿಂದಾ ||2||

ಯಾವ ಕುಲವೆಂದ್ಹೇಳಲಿ ನಾನಂದಾ |

ಅಸ್ತಿ ಮಾಸದಿಂದ

ಹುಟ್ಟಿ ಬಂದಿಹ ಎರಡೆ ಜಾತೆಂದ

ಹೆಣ್ಣು ಗಂಡು ಬಂದಾ

ಎಂಬತ್ತುನಾಲ್ಕುಲಕ್ಷ ಜೀವನೆಂದಾ

ಶಿವನೊಬ್ಬನಂದಾ ||3||

ನಂದು ನಿಂದು ಅಂಬುದ್ಯಾಕಂದಾ |

ನಂದೆಂದು ನಂಬೀ ಹಿಂದೆ ಮಾಡಿದ

ಖೂನ ತೋರಿಸಂದಾ ಸಂದೇಹವ್ಯಾತಕೆ

ತಂದೆ ಒಬ್ಬನೆ ಬಂದೆ ಬ್ಹಾಳಂದಾ

ಮುಂದ್ಯಾರು ನಾವ್ಯಾರು ಒಂದು ತಿಳಿಯದೆ

ಬಂದ ಭೇದಂದಾ ||4||

ಊಚ ನೀಚದ ಸೋಚು ಮಾಡಂದಾ |

ಬುಡಮೇಲೆ ವಂದಾ

ಒಡಿಯನಾದರೂ ಕಡಿಗೆ ಕಾಡಂದಾ

ತಪ್ಪಾದುಯಂದಾ

ಪಾಪ ಪುಣ್ಯದ ಫಲವೂ ಕಾಣಂದಾ

ಸಮನೆಲ್ಲರೆಂದಾ ||5||

ಕೊನೆಪೂರಾ ಊರ ಬಲು ಚೆಂದಾ |

ಕೋನೇರಿಯ ಹಿಂದ

ಕೋಮಲಾಂಗದ ಗುಡಿಯು ಕಾಣಂದಾ

ಕೋರಿದ ವೀಳೆದೆಲಿ ತೋಟ ಪಟ್ಟಿಯ ರಾಜಿ

ಪೂರವಾದ ವರಕವಿಯ ಮೃಗ

ವರ ಪಾದಸೇವೆಯೇ ಪರಮ ಸುಖವೆಂದ ||6||

ಎಷ್ಟೋ ಕಷ್ಟದಿ ನಷ್ಟ ದೇಹಕ್ಕೆ ನಾ ಬಂದೇ |

ಇಷ್ಟಾವೇ ತೀರಲಿಲ್ಲಮ್ಮಾ

ಪರಿತು ಶ್ವಾನಾನಾಗಲಿಲ್ಲಮ್ಮಾ

ಅಷ್ಟೋ ಇಷ್ಟೋ ಎಷ್ಟೋ

ಇಷ್ಟಾದ ಲಿಂಗಕ್ಕೆ ನಿಷ್ಟೀಲಿ ಭಜಿಸಲಿಲ್ಲಮ್ಮಾ

ಅದೃಷ್ಟಾವೇ ಅರಿಯಾಲಿಲ್ಲಮ್ಮಾ ||ಪಲ್ಲ||

ಬಿಂದು ಮಾತ್ರದ ಸುಖವು ದುಃಖ |

ಪರ್ವತದಷ್ಟು ಅರ್ಥಾವೇ ಅರಿಯಲಿಲ್ಲಮ್ಮಾ

ಬಲು ಸಂದೇಹದೊಳಗಾದೆನಮ್ಮಾ

ಅರುವನಿಲ್ಲದೆ ದೇಹ ಸ್ಥಿರವೆಂದೂ ನಂಬಿ ನಾ

ಹಂಬಾಲ ಬಿಡಲಿಲ್ಲವಮ್ಮಾ

ಮಾಯಾ ಬೆಂಬಾಲದೊಳಗಾದೆನಮ್ಮಾ ||1||

ಮುಂದೆ ಬರುವ ಬ್ರಹ್ಮ ಬಂಧನ ಅರಿಯಾದೇ |

ಚೆಂದಿರ ನಾನೆಂದೆನಮ್ಮಾ ಬಲು

ಸುಂದರ ನಾನೆಂದೆನಮ್ಮಾ

ತಂದಿ ತಾಯಿ ಬಂಧೂ ನಂದಂಬು ಬಳಗ

ವೆಂದೂ ಭ್ರಾಂತಿಯ ವಳಗಾದೆನಮ್ಮಾ

ವಿಶ್ರಾಂತಿಯೇ ಪಡಿಯಾಲಿಲ್ಲಮ್ಮಾ ||2||

ಆಶ್ಯಾವ ಕಡಿಲಿಲ್ಲಾ ದೇಶ್ಯಾವ ಬೆಳಿತಿಲ್ಲ |

ಮೋಸಕ್ಕೆ ವೊಳಗಾದೆನಮ್ಮಾ

ಕ್ಲೇಶಾ ವಾಸನೆ ಅಳಿಯಲಿಲ್ಲಮ್ಮಾ

ಶ್ಲೇಶಕಾಸದಿ ರೋಗ ಬೆನ್ನಟ್ಟಿ ಬರುತಿರೇ

ಗೊಣಗುಟ್ಟಿ ಹೆಣನಾದೆನಮ್ಮಾ

ಹಣ ಗುಣ ಹೋಗಿ ಹೆಣನಾದೆನಮ್ಮಾ ||3||

ಧರಿಯೊಳು ಕೊನೆಪೂರ ಮನೆ ಮುಂದೆ ಹರಿದ್ವಾರಾ |

ಕರಿಪರದ ಕಾಣಲಿಲ್ಲಮ್ಮಾ ನಾ

ಮುರಮರ್ದನ ನೋಡಲಿಲ್ಲಮ್ಮಾ

ಧರೆಪೂರದೊಳಿರುವ ವರಕವಿ ಗುರು ನಮ್ಮಾ

ಮೃಗರಾಜಗ ಸೆರೆಹೋದೆನಮ್ಮಾ

ಯೋಗಿ ಮಹಾರಾಜನಿಗೆ ಮೊರೆಹೋದೆನಮ್ಮಾ ||4||

ಪಗಡಿ ಪಚ್ಚೀಸದಾಟ ದುಸ್ತಾರ |

ಲೆಕ್ಕ ಮಾಡಿ ತಿಳಿ ಅದರ ವಿಸ್ತಾರ

ಪಚ್ಚೀಸ ಮನಿ ಆದೋ ಏಳ ಪದರಾ

ಅದಕೆ ಕೈ ಕಾಲು ನಾಲ್ಕು ದಿಕ್ಕು ಆಶಾರ ||ಪಲ್ಲ||

ಮೂರೇ ಮನೀಯ ಮೇಲೆ ಕಟ್ಟಿ ಬೇಸೀ |

ತಿರಗಿ ಪರಗಿ ಎರಡು ಗೀಟು ತಿಳಿ ಸೋಸಿ

ಮೂರು ನಾಲ್ಕರಲ್ಲಿ ಕೈಲಾಸ ವಾಸೀ

ನಟ್ಟನಡುವೆ ವೈಕುಂಠ ತಿಳಿ ಬೇಸೀ ||1||

ಅಗಡೀಗ ಬಿದ್ದಿ ನೀನೆಲೊ ಪೋರಾ |

ಬಲು ತಿಗಡೀಯ ಲೆಖ್ಖಾದ ಸೂಸ್ತರಾ

ದಿಗಡೀಲಿ ಆಡದಲ್ಲೋ ತಡಿ ಜರಾ

ದುಗಡು ಅಗಡಾಗಿ ಪಾಂಡವ ಕೆಟ್ಟರಲ್ಲಾ ||2||

ಆರಿಗ್ಯಾ ಮರಿಗ್ಯಾ ಕೂಡಿಸುವ ಜೋಡೀ |

ಏಕಾಂತದಲ್ಲ್ಯಾಡಿ ಜ್ಯಾಗ ಮಾಡೀ

ಸುದರಾಸಿ ಹಿಡಿ ಎಂಟು ಕವಡಿ ನೋಡೀ

ತಂಟೆ ತಗಾಲು ಬಿಟ್ಟಾಕು ಮನಸು ಮಾಡೀ ||3||

ಒಂದು ಬಿದ್ದರೆ ಹತ್ತಾಯಿತು |

ಎರಡು ಬಿದ್ದರೆ ಕೊರಡು ಹೋದಿಗಿ ಸೋತು

ಮೂರು ಬಿದ್ದರೆ ಕಟ್ಟಿ ಸನಿ ಬಂತು

ನಾಲ್ಕು ಬಿದ್ದರೆ ಕಟ್ಟಿ ನೋಡೋ ಕುಂತು ||4||

ಐದು ಬಿದ್ದರೆ ಪಚ್ಚಿಸ ಆಟ ಆಡು |

ಬೋಳ ಬಿದ್ದರೆ ಹಾಳಾಗಿದಿ ನೊಡು

ಜೋಡಿಯ ಮನಿ ಸರಿಯಾಗಿ ನೋಡು

ನೀನು ಕವಡಿ ಹಾಕಿ ವೈರಿ ಕಾಯಿ ಪುಡಿ ಮಾಡು ||5||

ಧರಿಯೊಳು ಕೊನೆಪೂರ ಕಡಿ ನೋಡು |

ಹರಗೂಡಿ ಮುಂದೆ ಕುಂತು ಧ್ಯಾಸ ಮಾಡು

ವೈಕುಂಠ ನಡುಮನಿ ಸನಿ ಮಾಡು

ಗುರು ಮೃಗೇಂದ್ರ ಕೂಡಿ ಕಾಯಿ ಹಣ್ಣು ಮಾಡು ||6||

ಬೈಸೂವಿ ಯಾಕೋ ಬರೆ ದೇಹಕ್ಕೆ ಭ್ರಮಿಸುವಿ ಯಾಕೋ |

ಬೈಸೂವೀ ಭ್ರಮಿಸೂವೀ ಗಮಿಸುವೀ ಗತಿಸೂವೀ

ಸತಿಸುತರ ನಂಬಿ ನಾಶ್ಯಗೋ ದೇಹಕ್ಕೇ ||1||

ಹಿಗ್ಗೂವಿ ಯಾಕೋ ಹೀನ ದೇಹಕ್ಕೆ ಹಿಗ್ಗೂವಿ ಯಾಕೋ |

ಹಿಗ್ಗೂವೀ ತಗ್ಗೂವೀ ನುಗ್ಗೂವೀ ಮುಗ್ಗೂವೀ

ಅಗ್ನಿ ಒಳಗೆ ಬಿದ್ದು ದಗ್ಧಾಗೋ ದೇಹಕ್ಕೆ ||2||

ನಂಬುವಿ ಯಾಕೋ ನರದೇಹಕ್ಕೆ ನಂಬೂವಿ ಯಾಕೋ |

ನಂಬೂವೀ ಕೊಂಬೂವೀ ತಿಂಬೂವೀ ಉಂಬೂವೀ

ಕುಂಭೀನಿಯೊಳಗೆ ಬಿದ್ದು ಕೊಂಬ್ಹೋಗೋ ದೇಹಕ್ಕೆ ||3||

ಹಿತಿಸೂವಿ ಯಾಕೋ ಹೇಸಿ ದೇಹಕ್ಕೇ ಹಿತಿಸೂವಿ ಯಾಕೋ |

ಹಿತಿಸೂವೀ ಸ್ತುತಿಸೂವೀ ಸತಿಸೂವೀ ಮತಿಸೂವೀ

ಅತೀಹಿತಗತಿಯುತ ಮಿತವಿಲ್ಲ ದೇಹಕ್ಕೆ ||4||

ಕೊಂಬೂವಿ ಯಾಕೋ ಕೊಟ್ಟಿ ದೇಹಕ್ಕೆ ಕೊಂಬೂವಿ ಯಾಕೋ |

ಕೊಂಬೂವೀ ಕಾಯಾಪೂರ ಕುಂಭಿನಿಯೊಳು ಕೊನೆಪೂರಾ

ಗುರು ನಮ್ಮ ಮೃಗವರಾ ನಂಬಾದ ದೇಹಕ್ಕೆ ||5||

ಆಡುವ ವೇದಾಂತವೂ ಹಗೂರಪ್ಪಾ ನೀ |

ಆಡಿದಂತೆ ನಡಿವದು ಬಿರಿಯೆಪ್ಪಾ

ಪ್ರಪಂಚ ಪಾರಮಾರ್ಥ ಜೋಡಪ್ಪಾ

ಣುಳಿದು ಎರಡು ಬಳಸೀ ನಡಿದವರ್ಯಾರಪ್ಪಾ ||1||

ಪ್ರಪಂಚವೆಂಬೂದು ರುಚಿಯೆಪ್ಪಾ |

ಬಲು ಸುಖವಾಗಿ ತೋರುವದೂ ನೋಡಪ್ಪಾ

ಹೊನ್ನು ಹೆಣ್ಣು ಮಣ್ಣು ಸಂಪದವಪ್ಪಾ

ಕಂಡು ಕಾಂಕ್ಷೆ ಬಿಟ್ಟವರ್ಯಾರಪ್ಪಾ ||2||

ಬೇಸನ ಬೋಂದಿ ಹೋಳಗಿ ತುಪ್ಪ ಪಾಯಸಪ್ಪಾ |

ಸವಿ ಸಾರ ಖೀರ ವಾಂಗೆಭಾತ ರುಚಿಯೆಪ್ಪಾ

ಹೇರ ಪೇರ ಇಲ್ಲಾ ವಳ್ಳೆ ಕೆಟ್ಟದಪ್ಪಾ

ಸರಿಸಮನಾಗಿ ತಿಂದವರ್ಯಾರಪ್ಪಾ ||3||

ಕೈಲಾಸಪತಿ ಶಿವ ಪಾಡಪ್ಪಾ |

ಪರಟಿ ಕೈಯಾಗಿಡದಿಹ ಜ್ಯಾಣಪ್ಪಾ

ಜಾಗ ಮನಿ ಇಲ್ಲೇನು ಆತಗ ಒಳ್ಳೆದಪ್ಪಾ

ಹೋಗಿ ಕುರುಡಾಗಿ ಕುಂತ ನೋಡಪಾ ||4||

ಧರಿಯೋಳು ಕೊನೆಪೂರ ನೋಡಪ್ಪಾ ನೀ |

ಸ್ಥಿರವೆಂದು ನಂಬೀ ಹಾಳಾದಿಯಪ್ಪಾ

ಖರೆ ತಿಳಿದ ಗುರು ಮೃಗರಾಜನಪ್ಪಾ

ದೊರೆಪೂರದೊಳಿರುತಿಹ ನೋಡಪ್ಪಾ ||5||

ವ್ಯರ್ಥ ಚಿಂತಿಸಿ ಫಲವೇನಿಲ್ಲಣ್ಣಾ ನೀ |

ತುರ್ತು ಬಂದುದು ಅರ್ತಿಲಿಂದನುಭವಿಸಬೇಕಣ್ಣ

ಕರ್ತೃ ಗುರುವಿನ ಗುರ್ತನ್ಹೀಡಿಯುತ

ನಿರ್ತ ಸೇವೆಯ ಸುಗಮಗೊಳಿಸುತ

ಅರ್ಥ ಕಾಮದ ಆಶೆ ಕಳಿಯುತ

ಮರ್ತು ಮಾಯದ ಮರ್ತೆ ದಾಟದೆ ||1||

ಹತ್ತಿ ಬಂದ್ಹಾಂಗ್ಹೊತ್ತುಗಳಿಯಣ್ಣ ಈ |

ಮಂಗ ಮನಸಿನ ಸಂಗವನ್ನೇ ಬಿಟ್ಟುಬಿಡಣ್ಣಾ

ಅಂಗನಿಯ ಕಂಗಳದಿ ನೋಡುತ

ವೆಂಗ ಮನಸಿಲಿ ಸಂಗ ಬೇಡುತ

ಭೃಂಗಿಯಂತೇ ಕಮಲ ಸೇರುತ

ಭಂಗಪಡುವಾ ಬೈಕೆನರಿಯದೆ ||2||

ಭಾಗ್ಯ ಭೋಗದ ತ್ಯಾಗ ಮಾಡಣ್ಣಾ |

ಬರೆ ಬಾಯಿ ಮಾತಿಲೆ ಭ್ರಾಂತಿ ಪಟ್ಟರೆ ಬರುವದಿಲ್ಲಣ್ಣಾ

ಮಾಡಿದವರಿಗೆ ಮಣಿಯ ಕಡಬದು

ಬೇಡೆನೆಂದರೆ ಸುಮ್ಮನೆ ಸಿಗದು

ನೋಡೆನೆಂದರೆ ಸುಳ್ಳೆ ಕನಸದು

ನಾಡ ದೈವದ ನಲುಮೆನರಿಯದೇ ||3||

ಎಷ್ಟು ಮಾಡಿದರಷ್ಟು ಫಲವಣ್ಣಾ |

ಇಷ್ಟು ಕೇಳಲು ಕಷ್ಟಪಡದ್ಯಾರಪ್ಪನ ಗಂಟಣ್ಣಾ

ಇಷ್ಟ ದೇವರ ಸ್ಥಾನಕಿಳಿಯುತ

ನಿಷ್ಟಿಯಿಂದಲೆ ನೇಮ ಹಿಡಿಯುತ

ನೊಷ್ಟಿ ಲಿಖಿತದ ರೇಖೆನರಿಯುತ

ಸಂತುಷ್ಟನಾಗೀ ಕಾಲ ಕಳಿಯದೇ ||4||

ನಷ್ಟ ವೈಭವ ವಿಶ್ವ ವ್ಯಾಕಣ್ಣಾ ಕನಿ |

ಕಷ್ಟ ಜನ್ಮದರುಸ್ಪದಿದ್ದುದೆ ಸವಿದು ಸುಖಿಸಣ್ಣಾ

ದುಷ್ಟ ವೆಸನವ ನಷ್ಟಗೊಳಿಸದೆ

ಇಷ್ಟ ಕೊನೆಪೂರದಿರಸದೆ

ಅಷ್ಟಯೋಗದ ಸೋಗ ಸೇರಿಸಿ

ಶ್ರೇಷ್ಠಗುರು ಮೃಗರಾಜನರಿಯದೆ ||5||

ಯಾಕೇ ಓಡ್ಯಾಡೂವೀ ಮನಸೇ |

ನೀನೂ ಮಾಡೀ ನೋಡುವದೆಲ್ಲಾ ಕನಸೇ ||ಪಲ್ಲ||

ಜಾಡೀ ಮಕ್ಮಲ ಬಟ್ಟೀ ಬೆಳ್ಳೀ ಭಂಗಾರ ತಟ್ಟೀ |

ಸಾಕಷ್ಟು ಘಳಸಿಟ್ಟೀ ಕಡಿಗೇ ಹೊಟ್ಟಿಯ ಸುಟ್ಟೀ ||ಅ.ಪಲ್ಲ||

ಏಳು ಅಂತರ ಮನಿ ಕಟ್ಟೀ ಅದಕಾ ಗಚ್ಚಾ ಸಿಮೆಂಟ ವರಸಿಟ್ಟ |

ಉಕ್ಕ ಕಬ್ಬಿಣ ತೊಲೇ ಪಕ್ಕಾ ಬುನಿಯಾದಿ ಮ್ಯಾಲೇ

ಹಾಕಿ ಹಿತಾಳಿ ಕೀಲಾ ನಡದಿ ಕಾಡಿನ ಖೋಲೆ ||1||

ಆನಿ ಕುದರಿ ಒಂಟೆ ತರಸೀ ಕುಂತೀ ಮ್ಯಾಣೇ ಪಲ್ಲಕ್ಯಾಗ್ಹರಸಿ |

ಜೀಬ ಮೋಟಾರ ಕಾರ ತಿರಿಗೀ ವಿಮಾನ ದ್ವಾರ

ಒರಗೀ ಬೀಳಲು ಜರಾ ತಿರಗೀ ನೋಡವರ್ಯಾರಾ ||2||

ಮದನ ಕೇಳಿಗೆ ಮನಸು ಮಾಡಿ ಕಣ್ಣ ಕಂಡುದೆ ತರಸೀ ಸ್ತ್ರೀ ನೋಡಿ |

ಮಣ್ಣ ಮುಕ್ಕಿಸಿ ನಿನ್ನ ಬಣ್ಣ ಕೊಟ್ಟಳೊ ಹೆಣ್ಣ

ಬಣ್ಣಿಸಿ ಕರದಾರೇ ಬಾರದ್ಹೋಯಿತು ಪ್ರಾಣಿ ||3||

ಧರಿಯೊಳು ಕೊನೆಪೂರ ವಾಸ ಮಾಡೂ ವೆಂಕಟೇಶನ ನಿಜದ್ಯಾನ |

ವರಕವಿಯೆನ್ನ ಗುರೂ ತಂದೆ ಮೃಗೇಂದ್ರರ

ವಂದಿಸಿ ವರ ಬೇಡಿ ಪಡಿ ನೀ ನೆಲೆ ಖೋಡಿ ||4||

ಸೇವೆ ಗಂಡನ ಮಾಡಬೇಕಮ್ಮಾ |

ನಿಜ ಗಂಡನಿಲ್ಲದ ಬಾಳು ಬದುಕೇ ಸಾರ್ಥಕಲ್ಲಮ್ಮಾ

ಸೈರೆ ಬದುಕದು ಸಾರ್ಥಕಲ್ಲಾ

ಉಂಡು ಉಟ್ಟರು ಸುಖವೇನಿಲ್ಲಾ

ಕೊಂಡದಂತೇ ಕಂಡುಬರುತಿಹ

ಮಿಂಡನಾಸ್ತಿಗೆ ಆಶಿನಿಡದೇ ||1||

ತಾಳಿ ಕಟ್ಟಿದವನೇ ಗಂಡಮ್ಮಾ ನಿ |

ತಾಳಿ ಬಾಳೀ ನಡದುಕೊಂಡರೇ ಬಹಳೆ ಸುಖವಮ್ಮಾ

ಗಂಡನೇ ಶಿವರುಂಡನೆಂದು

ಗಂಡ ದೇವರ ಭ್ರಾಂತಿನಳಿದೂ

ಅಂಡಪಿಂಡ ಬ್ರಹ್ಮಾಂಡ ತಿಳಿದೂ

ಕಂಡು ಕೆಡುತಿಹ ಕಾಮನ್ಹಳಿದೂ ||2||

ನಾದ ವಿನಾದದಿ ನಾದವಾಡಮ್ಮಾ |

ವಿನೋದವಾದದಿ ಮೋದಗೊಳಿಪ ಮೋಹ ಮಾಡಮ್ಮಾ

ಮನವ ನೋಯಿಸದೆ ಮದನ ಕೇಳಿ

ಗಿನಿಯಾ ಮೆಚ್ಚಿಸಿ ಸ್ತನವ ಅರ್ಪಿಸಿ

ಅಧರ ಅಮೃತ ಮಧುರ ಸವಿಸುತ

ಬೆದರದೆ ತುಟಿ ಹಚ್ಚಿ ಹಬ್ಬುತ ||3||

ಮೋಹದೊಳು ಲಯವಾಗಬೇಕಮ್ಮಾ ಆ |

ಮೋಹ ರೂಪ ನಿನ್ನಾಲಯದೊಳಿರಿಸಬೇಕಮ್ಮಾ

ಅರ್ಚನಾದಿ ಆರು ಮೂರೊಂಭತ್ತು

ವಿಧದ ಭಕ್ತಿ ಭಾವದಿ

ಅಷ್ಟವರ್ಣದ ಕಷ್ಟ ನಿಲ್ಲದೆ

ಇಷ್ಟದಿಂದಲೆ ಸಿದ್ಧಪಡಿಸುತ ||4||

ಗಂಡ ಬಿಟ್ಟರೆ ಗರ್ತೆಯಲ್ಲಮ್ಮಾ |

ಗುಣವಂತಿಯಿದ್ದರೂ ಶಬ್ದ ಸೂತಕ ತಪ್ಪೋದಿಲ್ಲಮ್ಮಾ

ಕಾಂತನೆಂದಿಗೆ ಅಗಲದೇ

ಏಕಾಂತ ಸೇವೆಗೆ ಹೇಸಲಾರದೇ

ವಾಸ ಕೊನೆಪೂರ ಬಿಡದೇ

ಈಶ ಗುರು ಮೃಗರಾಜ ಮರಿಯಾದೆ ||5||

ಗುರು ಪುತ್ರನಾದರೇನಿಲ್ಲಾ ನಿನ್ನ ಮನಸಿನ |

ದುರ್ಗುಣ ಒಂದು ಬಿಟ್ಟಿಲ್ಲಾ ಏನೂ ಮಾಡಿದರೇನಿಲ್ಲ ||ಪಲ್ಲ||

ಜಪ ತಪ ನೇಮದ ಹಿಡ್ತದಿ ನೀನೂ |

ಅಪರಮಿತವಾದ ಕರ್ಮಕೀಡಾದಿ

ಸುವಿಚಾರ ಮಾರ್ಗ ತಿಳಿದ್ಹೋದಿ ನೀನೂ

ಅವಿಚಾರದಿಂದಲಿ ಪಾಪಕೊಳಗಾದಿ ||1||

ಜಡಿ ಮುಡಿಗಳನೂ ಬಿಟ್ಟೀ ನೀನೂ |

ಅಡ್ವಿ ಪರ್ಣವ ತಿಂದು ದೇಹಾವ ಸುಟ್ಟೀ

ಕಡು ನೊಂದೋ ತಾಪವ ಪಟ್ಟೀ ಇಂಥ

ಬೆಡಗೀಗೆ ಮೃಡ ಸಿಗ ತಿಳಿಯೋ ನೀ ಘಟ್ಟೀ ||2||

ಸತಿಸುತರಿಗೆ ತ್ಯಾಗ ಮಾಡಿ |

ನಿರ್ಗತಿಗೆ ಹೊಂದಿದನೆಂದು ಕೀರ್ತಿ ಕೊಂಡಾಡಿ

ಹಿತದಿಂದೆ ಜನರೊಳು ಕೂಡಿ ಅವ

ಕೃತ್ಯವ ಬಿಡದೆ ಯಮಪುರದೋಳು ಸೇರಿ ||3||

ಕಾವೀ ಕಪನಿಯು ಧರಿಸೆನಂದೀ ಕೊಳ್ಳಗ |

ರುದ್ರಾಕ್ಷೀ ಹಣೆ ಮೇಲೆ ಭಸ್ಮಚ್ಛೇ ನಂದೀ

ವೇಷ ಮೋಸದಿ ಸಾಧೂಯೆಂದಿ

ಈಶನರಿಯಾದೆ ಘಾಸೀಸಿ ಆದೇಲೋ ಹಂದಿ ||4||

ಡಂಬಕಚ್ಯಾರ ನಿನಗ್ಯಾಕೋ ಬಹು |

ಜಂಭಾದಿ ಹೇಳೂವ ಶಾಸ್ತ್ರವು ಸಾಕೋ

ತುಂಬೀದ ದುರ್ಗುಣ ನೂಕೋ ಧೀರ

ಗುರುರಾಜ ಮೃಗವರೆಗೆ ತಿಳಿದಾರೆ ಸಾಕೋ ||5||

ನೀನಾಗಿರುತೀರೆ ಬ್ರಹ್ಮಾ ಪರಬ್ರಹ್ಮಾ |

ನಾನಾರೆಂದು ಕೇಳುವರೇ ಅರೆಹುಚ್ಚ ತಮ್ಮಾ

ಯೋಚಿಸಿ ಬಿಡು ಅದರ ನಾಮಾ ಕಳೆದು ಕಾಮಾ

ತಿಳಿದು ಆಗುಹೋಗುಗಳೆಲ್ಲಾ ತೋರಕಿಯ ಧರ್ಮಾ ||1||

ಬೈಲುವೆಂಬುವ ಅದರ ನಾಮಾ ಇಲ್ಲಾ ಧಾಮಾ ಆ |

ಬೈಲುದೊಳಗೆ ಕಾಯ ಹುಟ್ಟೀತೋ ತಮ್ಮಾ

ಕಾಯದೊಳಗೆ ಬೈಲು ಸಮಾ ಎರ್ಕ ತಮ್ಮಾ

ಅರ್ಕಕಿರಣಕ್ಕೆ ಬ್ಯಾರಿಲ್ಲ ತಿಳಕೊಳ್ಳೊ ತಮ್ಮಾ ||2||

ಅರವುಗೊಂಡರೆ ಬಂತು ನಿಮ್ಮಾ ರೂಪಾ ನಾಮಾ |

ಆ ಅರವ ಹಾರಲು ರೂಪಾ ಹೋಯಿತು ನಾಮಾ

ನೆನವದಿಂದಲೆ ನಿತ್ಯ ನೇಮಾ ವೆರ್ಥ ಪ್ರೇಮಾ

ಗುರ್ತುಗೊಂಡಾರೆ ಎಲ್ಲಳಿದು ಉಳಿಹುವದೆ ಬ್ರಹ್ಮಾ ||3||

ಆತ್ಮನರವದೆ ನಿನ್ನ ಧರ್ಮಾ ಬೇಡ ಕರ್ಮಾ |

ನಿರ್ಮಲಾತ್ಮದಿಂದಲಿ ನಿಜ ತಿಳಿ ಅದರ ಮರ್ಮಾ

ಕಾಮ ಕ್ರೋಧ ರಿಪು ಷಡ್ಗಳನಾ ಎಂಟ ಮದನಾ

ತಂಟ್ವೆ ಹಾರೀಸಿ ಹಿಡಿ ಮನದಿ ದೃಢ ಜ್ಞಾತೃಕರಣಾ ||4||

ವಿಶ್ವವೆ ಒಡಲೊಳು ನಿಮ್ಮ ನಂಬು ಒಮ್ಮಾ |

ಬೆಡದೇ ಪರಕೀಸಿ ನೋಡಿದಾರೆ ತರ್ಕಾವೆ ಬ್ರಹ್ಮಾ

ರೂಢಿಗೇ ಕೊನೆಪೂರನಮ್ಮಾ ಅಂಬೊಹಮ್ಮಾ

ಶಂಭೂ ರೂಪಾವೆ ತಾ ಗುರೂ ಮೃಗರಾಜನಮ್ಮಾ ||5||

ಕಲ್ಲು ಕಲ್ಲೆನಬೇಡ ಕಲ್ಲು ಕಲ್ಪನೆ ಬೇಡ |

ಕಲ್ಲಿನಂತಾದಡೆ ಜನಮ ಕಡೀ ಕಾಣಯ್ಯಾ

ಹೇಮಾ ಕನಕ ಕಲ್ಲು ತಾಂಬ್ರ ಹಿತ್ತಾಳಿ ಕಲ್ಲು

ಉಕ್ಕು ಕಬ್ಬಿಣ ಕಲ್ಲು ಕಂಚು ಕಲ್ಲಯ್ಯಾ ||1||

ಕಾರ್ಯಾಲಯವು ಕಲ್ಲು ಕಾರಾಗ್ರಹವು ಕಲ್ಲು |

ಕಲ್ಯಾಣದಿರೋ ಬಸವ ಕರಿಕಲ್ಲಯ್ಯಾ

ಕಂಚೆ ಕಾಮಾಕ್ಷಿ ಕಲ್ಲು ಕೈಲಾಸಪತಿ ಕಲ್ಲು

ಕರಿವರದಹರಿ ಕಲ್ಲು ಸಿರಿ ಕಲ್ಲಯ್ಯಾ ||2||

ಏಳು ಕೊಂಡವು ಕಲ್ಲು ಏರೋ ಪಾಂವಡಿ ಕಲ್ಲು |

ಏಳು ದುರ್ಗವು ಕಲ್ಲು ಏಸೊ ಕಲ್ಲಯ್ಯಾ

ಏಳು ಗೋಪುರ ಕಲ್ಲು ಏಳುಕೋಟಿಯ ಕಲ್ಲು

ಏಳು ದ್ವಾರವು ಕಲ್ಲು ಮೊಕವ ಕಲ್ಲಯ್ಯಾ ||3||

ಪಾಕಮದೀನಾ ಕಲ್ಲು ಪಾಯಿಖಾನೆಯು ಕಲ್ಲು |

ಪಾಪನಾಶನೆ ಕಾಶಿಪತಿ ಕಲ್ಲಯ್ಯಾ

ಪಾಪ ವಿಮೋಚನೆ ಪಾತಾಳಗಂಗೆ ಕಲ್ಲು

ತುಂಗಾ ತೀರದಲಿರೊ ರಂಗ ಕಲ್ಲಯ್ಯಾ ||4||

ಕೊನೆಪೂರವು ಕಲ್ಲು ಕೋದಂಡಧಾರಿ ಕಲ್ಲು |

ಕೇದಾರೀಶ್ಯಾನೂ ಕಲ್ಲು ಖಲೂ ಕಲ್ಲಯ್ಯಾ

ಕೋಮತಿಯುಳ್ಳಂಥ ಗುರು ನಮ್ಮ ಮೃಗರಾಜ

ಅಂಗಯದಲ್ಲ್ಯಾಡೂವ ಲಿಂಗ ಕಲ್ಲಯ್ಯಾ ||5||

ಏನೇನ ಹೈರಣವಾಗುವರೀ |

ಜನರೂ ನಿಜವರಿಯದವರೊ ||ಪಲ್ಲ||

ಏಳು ಅಂತರದಾ ಮನೆ ಕಟ್ಟುವರೊ |

ಕಾಳೂ ಕನಕ ಹೇಮ ಕೂಡ್ಹಾಕುವರೊ

ಬೀಳು ಹಾಳು ಭೂಮಿ ಹಸ ಮಾಡುವರೊ

ಬಹಾಳ ದಿನದ ಬಾಳೆವೆಂದು ನಂಬುವರೊ

ನಾಳಿಂದರಿಯದೆ ಹಾಳಾಗ್ಹೋಗುವರೊ ||1||

ಹೇಳಿದ ನೀತಿಯು ಸುಳ್ಳೆಂಬುವರೊ |

ಹಾಳೀನ ಸಂಸಾರ ಖರೆವೆಂಬುವರೊ

ಕೂಳಿನ ಆಶಿಗೆ ಕೈ ಚಾಚುವರೊ

ಸೂಳಿನ ಸಂಗತಿ ಶೆರೆ ಬೀಳುವರೊ

ಬಾಳಿಯ ಸುಳಿಯಂತರದ್ಹೋಗುವರೊ ||2||

ನೆಟ್ಟಕಾಗಲು ತನ ಕಷ್ಟವೆಂಬುವರೊ |

ಕೆಟ್ಟು ಹೋಗಲು ಅದ್ರುಷ್ಟವೆಂಬುವರೊ

ಹೊಟ್ಟಿ ತುಂಬಲು ಶಿವ ಬಿಟ್ಟೆಬಿಡುವರೊ

ಬಟ್ಟೆ ಕಾಣದೆ ಶಿವ ಖೊಟ್ಟೆನೆಂಬುವರೊ

ಇಟ್ಟಂಗಿ ಭಟ್ಟೆಂತೆ ಸುಟ್ಟೇ ಹೋಗುವರೊ ||3||

ಹೊಲ ಮನಿ ಧನವೆಲ್ಲಾ ನಂದೆಂಬುವರೊ |

ಮಂದಿನ ಕಂಡರೆ ಸೇರಲಾರದವರೊ

ಹಿಂದಿನ ಜನ್ಮವ ತಿಳಿಲಾರದವರೊ

ಮುಂದಿನ ಮಾರ್ಗವ ನೋಡಲಾರದವರೊ

ಹಂದಿ ನಾಯಿಯಂತೆ ಬಂದ್ಹೋಗುವರೊ ||4||

ಇಳಿಯೊಳೂ ಕೊನೆಪೂರಾ ಸ್ಥಿರವೆಂಬುವರೊ |

ಅಳಲೋಳು ಅರುವನೂ ಸುಳಿಲಾರದವರೊ

ಕಳಕಳಿಯಿಂದ ಜೀವ ಕಲಕೊಂಬುವರೊ

ವಿಳೇದೆಲೇ ಮಳೆದುರ ಹೋಗಲಾರದವರೊ

ಒಳ್ಳೆ ಗುರು ಮೃಗ ಸೇರಲಾರದವರೊ ||5||

ಭೇದಪಡುವದ್ಯಾಕೋ ಮನುಜನೇ |

ಭೇದ ಬಳಿಸಿದ್ಯಾಕೋ

ಭೇಧವ ಬಳಸೀ ಭಾಗ್ಯವ ಘಳಿಸೀ

ಯೋಗ್ಯದ ದಾನವ ಮಾಡದೆ ಕಳಕೊಂಡು ||1||

ನಂದು ನಮ್ಮವರೇಕೋ ಪರರನು |

ಕೊಂದು ತಿಂಬುವದೇಕೋ

ಮಂದಿ ಮಕ್ಕಳೆಂದು ದ್ವಂದ್ವವ ಭಾವಿಸಿ

ಹಂದಿ ನಾಯಿಯಾಗಿ ನರ್ಕಕೆ ಬಂದೂ ||2||

ತಿಳದು ಮರವು ಯಾಕೋ |

ಉಳಿಯೆದ ವಸ್ತು ಯಾಕ ಬೇಕೋ

ಅಳಿಯುವ ದೇಹದ ಆಶೆಯು ಬಿಡದೇ

ಮೋಸದಿ ಈಶನ ಧ್ಯಾಸವ ಮರೆತೂ ||3||

ಹುಟ್ಟಿ ಬಂದುದ್ಯಾಕೋ |

ಹುಟ್ಟುತೆ ಸತ್ತುದು ಮರತ್ಯಾಕೋ

ಕಟ್ಟಿದ ಬುತ್ತಿಯು ಕಡಿಗೆನುತಲಿ

ಒಟ್ಟಿದ ಪಾಪ ರಾಶಯು ಕಳಿಯದೆ ||4||

ದಯಾ ಧರ್ಮ ಬೇಕೊ |

ಧರಿಯೊಳು ಕೊನೆಪೂರ ಮರಿಬೇಕೊ

ಮರವುತನದಿ ಮರಿಲಾರದೆ ಅರವಿಸಿ

ಗುರುವು ನಮ್ಮ ಮೃಗೇಂದ್ರರ ಪಡಿಯದೆ ||5||

ಮಹಾಜ್ಞಾನಿಯೆಂದೀ ಮುಕ್ತಿಯ |

ಮಾರ್ಗ ತಿಳಿಯದ್ಹೋದಿ

ಮಹಾರ್ತು ಮೀಮಾಂಸಾ ಶಾಸ್ತ್ರನೋದಿ

ಮರಳುತನದಿ ಹಗಲಿರುಳು ಬಳಲಿದೀ ||1||

ವೇದ ಶಾಸ್ತ್ರನೋದೀ |

ವಾದಿಸಿ ಆದೆ ಶಾಸ್ತ್ರಯೆಂದಿ

ವೇದದ ವಾದದಿ ಭೇದವ ಪಡಿಯದೆ

ಮೋದದಿ ಮನದಲೀ ಭೇದವ ಬಗಿಸೀ

ಯಂತ್ರ ತಂತ್ರನೋದೀ ಕುತಂತ್ರದ ||2||

ಮಂತ್ರಗಾರನಾದೀ |

ಪರತಂತ್ರನರಿದ ಗುರು ಮಂತ್ರ ಪಡಿಯದೆ

ಕುಂತ್ರ ನಿಂತ್ರ ಶಿವ ಸಂತ್ರರ ನಿಂದಿಸೀ

ಬರಹುತಲೇನು ತಂದಿ ಹೋಗುತ

ಬರೇ ಬತ್ತಲೆ ನಡದೀ

ಬರಹುವ ಹೋಗುವ ಬೈಕೆಯಾ ಬಿಡದಿ

ಬಯಸೀ ಬಯಸೀ ಬರೆ ಬರಹುತೆ ನಡಿದೀ ||3||

ಪಂಡಿತ ನಾನೆಂದೀ ಪರಕಿಸೀ |

ಪಾಪ ತಿಳಿಯದ್ಹೋದೀ

ಖಂಡಿತವಾಗಿಹ ಆತ್ಮಜ್ಞಾನವನು

ಅರಿಯದೆ ಅನ್ಯರ ಆಸ್ತಿಯಾ ಬೈಸುತೇ ||4||

ನಿಜವ ತಿಳಿಯದ್ಹೋದೀ |

ಗಜಿಬಿಜಿ ಮಾತಿಗೆ ಬೆರಗಾದೀ

ಕುಜನ ವೈರಿಹರಿ ಕೊನೆಪೂರೀಶನ

ಭಜನ ಮಾಡಿ ಗುರು ಮೃಗೇಂದ್ರರ ಪಡೆಯದೇ ||5||

ಬಿಳೀ ಕಾಳೀನ ಕುದರಿ ಬಿಟುಕೊಂಡು |

ಹೋಗುತಾದ ಬಿಗಿಯಾಗ ಬೇಗ ಕಟ್ಟರೀ

ಬೈಲೊಳಗೆ ಬರೆಗಾಲಿಲ್ಯಾಕ ಬಿಡತಿರೀ

ಕಾಳಿಗೊಂದು ಕಡಿಯದಂಥ ದಾವ ಹಚ್ಚಾರೀ ||1||

ಕಡ್ಲಿ ಇಟ್ಟರೆ ಅದು ಕಡಕೊಂಡು ತಿನೊದಿಲ್ಲೊ |

ಕಡಿತನಕ ಅದೇ ಹಟರೀ

ಬ್ಯಸಿಗಾಗ ಆಯಿತಪ್ಪ ಸಾಯೋ ಹೆಣಾರೀ

ಧ್ಯಾಸದಾಗ ನೆನಿತಾದ ಹೆಣ್ಣ ಕುದರಿ ||2||

ಬಿಟ್ಟಗಿ ಮೆಯು ಕುದರೀ ತಟ್ಟಿ ಕಟ್ಟಿನ ಮೇಸಿದರೇ |

ಘಟ್ಟಿ ಮನಸು ಯಾಕ ಮಾಡೆತರೀ

ಅಟ್ಟಿನಾಗಾ ಕೆಟ್ಟ ಗುಣಾ ಅದರಲಿ ಸೇರ್ಯಾವರೀ

ಬಿಟ್ಟುಕೊಟ್ಟರೆ ಘಟ್ಟಮುಟ್ಟ ತಾನೇ ಆಗತದರೀ ||3||

ಹುಲ್ಲು ತಿನಲೆಂದು ಕುದರಿ ಹೊಲದಾಗ ಕಟ್ಟೀದಾರೆ |

ಕಲ್ಲು ಕರಟಿ ಕಡೆ ನೋಡುತದರೀ

ಗಡಬಡ ಮಾಡಿ ಗೂಟ ಕಿತ್ತೋ ಯತ್ನ ಮಾಡತದರಿ

ಹುಲ್ಲು ಕಿಸ್ತು ಮೋತಿ ಮ್ಯಾಕ ಮಾಡಿ ನೋಡುತದರಿ ||4||

ಎಷ್ಟು ಲಾಭಿದ್ದರೇನು ಅದೆಷ್ಟು ಶೋಭಿದ್ದರೇನು |

ಕಟ್ಟಬಾರದಿಂಥ ಕುದರೀ ರೂಢಿಯೊಳಗ

ದಿಟ್ಟವಾದ ಕೊನೆಪೂರರೀ ಗುರುರಾಜನಿಗೆ

ಅರ್ಪಿತ ಮಾಡಿ ಆನಂದಪಡಿಯಾರೀ ||5||