ಎಲ್ಲಾ ರೂಪವುತಾನಂತೆ | ಎಲ್ಲೆಲ್ಲಿಯು ತುಂಬಿಹನಂತೆ | ಅಲ್ಲಲ್ಲರಸುತ ಗುಡಿಗಳ ತಿರುಗುವ ಕಳ್ಳರ ಕಣ್ಣಿಗೆ ಕಲ್ಲಂತೆ || ಪ || ದೃಶ್ಯ ವಿದಾದವತಾನಂತೆ ದೃಶ್ಯವನರಿವನು ತಾನಂತೆ | ದೃಶ್ಯಾದೃಶ್ಯಗಳೆರ ಡರನಡುವೆ ಶಾಶ್ವತನಾದವ ತಾನಂತೆ || ೧ || ಕಳವಳಗಳು ತನಗಿಲ್ಲಂತೆ ಮೊಳೆಯುವದಿನ್ನೊಂದಿಲ್ಲಂತೆ | ಒಳಗೊರಗುದಿಸುವ ಕಲ್ಪಿತ ರೂಪವ ಬೆಳಗಿಸಿ ತಾಬೆಳಗುವನಂತೆ || ೨ || ಕುಂದೆಂಬುದು ತನಗಿಲ್ಲಂತೆ ಮುಂದೊಂದಾದವತಾನಂತೇ ಮುಂದೊಂದಾವಂದರೊಳೊಡಗೂಡುವ ಸಂದಿನೊಳಗು ಸೇರಿಹನಂತೆ || ೩ || ಕಣ್ಣೆಂಬುದುತನಗಿಲ್ಲಂತೆ ಕಣ್ಣಿಗೆ ಕಣ್ಣಾಗಿಹನಂತೆ | ಕಣ್ಣತೆರೆದುತನ್ನರಸುವಜನರಿಗೆ ತಾ ಬಣ್ಣ ಬಣ್ಣವಾಗಿಹನಂತೆ || ೪ || ಕಳೆದುಳಿಯುವುದೇ ತಾನಂತೆ | ಉಳಿವನ ಕಳೆವವರಿಲ್ಲಂತೆ | ಕುಲಶೀಲಗಳೆಂಬ ಕೊಳೆಯಿಲ್ಲದೆ ನಿರ್ಮಲದೊಳಗಿರುವನು ತಾನಂತೆ || ೫ || ಕಿಂಕರನಾದವತಾನಂತೆ | ಶಂಕರನಾದವ ತಾನಂತೆ | ಮಂಕನು ಬಿಡಿಸುತ ಕಿಂಕರರಿಗೆ ಗುರು ಶಂಕರನಾದವ ತಾನಂತೆ || ೬ ||
ಎಲ್ಲಾ ರೂಪವು
By kanaja|2011-08-21T14:38:18+05:30August 21, 2011|ಕನ್ನಡ, ಜಾನಪದ, ಪದ್ಯ ಸಾಹಿತ್ಯ ಪ್ರಕಾರ - ೧೪, ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ - ೨೬|0 Comments
Leave A Comment