ಶ್ರೀ ಚಂದ್ರಶೇಖರ ಕಂಬಾರರ ಈ ಸಂಕಲನ ಅವರ ಹಿಂದಿನ ಸಂಕಲನ ಪ್ರಕಟವಾಗಿ ಹದಿನೈದು ವರ್ಷಗಳ ನಂತರ ಪ್ರಕಟಗೊಳ್ಳುತ್ತಿದೆ. ಎಲ್ಲ ರೀತಿಯಿಂದಲೂ ಮಹತ್ವದ ಸಂಕಲನವಿದು. ಈ ಸಂಕಲನದ ವಿಶೇಷತೆಯೆಂದರೆ ಅವರ ಬದುಕಿನ ಮುಖ್ಯ ಘಟನೆಗಳ ಮಧ್ಯೆ ಮರೆತು ಅಥವಾ ನೇಪಥ್ಯಕ್ಕೆ ಸರಿದ ಪುಟ್ಟ ಪುಟ್ಟ ವಿಷಯಗಳೇ ಕವಿತೆಗಳಾಗಿರುವುದು. ಹೀಗಾಗಿ ಇವುಗಳಿಗೆ ತನ್ನದೇ ಆದ ಮಹತ್ವ ಲಭ್ಯವಾಗಿದೆ .

ಈ ಸಂಕಲನದ ಮತ್ತೊಂದು ವಿಶೇಷತೆಯೆಂದರೆ ವೈವಿಧ್ಯತೆಯದು. ಅಂದರೆ ಶ್ರೀ ಕಂಬಾರರ ಜೀವನದ ವಿಸ್ತಾರವಾದ ಹರವು ಇಲ್ಲಿಯ ಕವಿತೆಗಳಲ್ಲಿ ಮೈದಾಳಿರುವುದರಿಂದ ಸಹಜವಾಗಿಯೇ ಅಪಾರ ವೈವಿಧ್ಯತೆಯಿಂದ ಕೂಡಿದೆ. ಅಷ್ಟೇ ಅಲ್ಲ ಸಹಜವಾಗಿ ಮೂಡಿಬಂದಿದೆ.

*

‌‌‌‌‌ಈ ಸಂಕಲನವನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಚಂದ್ರಶೇಖರ ಕಂಬಾರರಿಗೆ, ಮತ್ತು ತಮ್ಮ ಅನಾರೋಗ್ಯದ ನಡುವೆಯೂ ಮುನ್ನುಡಿ ಬರೆದುಕೊಟ್ಟ ಶ್ರೀ ಯು.ಆರ್. ಅನಂತಮೂರ್ತಿ ಅವರಿಗೆ, ಅಕ್ಷರವಿನ್ಯಾಸ ಮಾಡಿಕೊಟ್ಟಿರುವ ಶ್ರೀಧರ್ ಮತ್ತು ಮುಖಪುಟದ ಕಲಾವಿದ ಸುಭಾಷ್‌ ಕಮ್ಮಾರ್, ಮುದ್ರಿಸಿದ ಹೂವಪ್ಪ ಅವರಿಗೆ, ನಮ್ಮ ಕೆಲಸವನ್ನು ಬೆಂಬಲಿಸುತ್ತಿರುವ ಎಲ್ಲ ಹಿರಿಯರಿಗೆ, ಗೆಳೆಯರಿಗೆ ಧನ್ಯವಾದಗಳು.

. ರವಿಕುಮಾರ
ಅಭಿನವ ಪರವಾಗಿ