ಇವರು ಮೊಯಿಲಿ ಅವರು-ನೊಂದವರ ಬೆಂದವರ
ಗಾಯಗಳು ಹದಗೊಂಡು ಅರಳಿದವರು.
ಹೆತ್ತವರ ಹೊತ್ತವರ ಪುಣ್ಯವಂತರ ಕನಸು
ಕಾಲೋಚಿತವನರಿತು ರೂಪುದಳೆದವರು.

ಒಲೆಯ ಉರುವಲದಂತೆ ಉರಿವ ಜನತೆಯ ತಾಪ
ಅಲ್ಲೋಲ ಕಲ್ಲೋಲಗಳಲಿ ಕುದಿದು
ರಾಜಕಾರಣಕಿಳಿದು ಚಮಚಗಿರಿಗಳನೊಡೆದು
ಕಸಿದ ಕನಸುಗಳನ್ನು ತಿರುಗಿ ಕೊಟ್ಟವರು;

ರಾಮಾಯಣವ ಬರೆದು ರಾಮರಾಜ್ಯವ ಹುಡುಕಿ
ಮಳೆಬಿದ್ದ ಹೃದಯದಲಿ ಬೆಳೆದವರು!

ನುಡಿಯ ಗುಡಿ ಕಟ್ಟಿದಿರಿ ವಿದ್ಯೆಗಳ ಸಾಕಿದಿರಿ
ಎತ್ತಿ ಹಿಡಿದಿರಿ ಬೃಹದ್ದೇಶಿಯೆಂದು;
ಖುದ್ದಾಗಿ ಕೋಲು ಮೇಸ್ತ್ರಿಯ ಕೆಲಸ ಮಾಡಿದಿರಿ,
ಸಾರಿದಿರಿ ಕನ್ನಡವೆ ಸತ್ಯವೆಂದು.

ಬೇರೆ ಕಲರುಗಳನ್ನು ಬೆರಕೆ ಮಾಡದೆ ಶುದ್ಧ
ಹಸಿರಲದಿದ್ದದ ಹೊಸಾ ಕನಸುಗಳನು
ಕಣ್ಣ ತುಂಬಾ ಕೊಟ್ಟು ನಮ್ಮ ಕಳಿಸಿದಿರಯ್ಯ,
ತೋರಿ ಹಂಪಿಯ ಹೊಳೆವ ಕ್ಷಿತಿಜವನ್ನು.

ನಿಮ್ಮ ಕೀರ್ತಿಯ ಗಾಳಿ ನಮ್ಮ ಕಡೆ ಬೀಸಿದರೆ
ನಿಮ್ಮದೇ ನೆನಪು ನಮಗೆ.
ಅಷ್ಟೊ ಇಷ್ಟೋ ದಾರಿ ನಡೆದವಯ್ಯ
ನಿಮ್ಮ ಕಣ್ಣುಗಳ ಬೆಳಕಿನೊಳಗೆ.