ಮೊನ್ನೆ ತಾಯಿಯ ಹೆಸರು ಮರೆತೆ,
ನಿನ್ನೆ ತಂದೆಯ ಹೆಸರು ಮರೆತೆ,
ಇವತ್ತು ನನ್ನ ಹೆಸರೇ ಮರೆವಾಗಿ-
ಇಂಚಿಂಚು ಇಲ್ಲವಾಗುತ್ತ-ಇಲ್ಲವಾಗುತ್ತಿದ್ದಂತೆ
ಗಕ್ಕನೆ ಕವಿತೆ ಕಣ್ಣಾಗಿ
ನನ್ನ ನೋಡಿದಂತೆನಿಸಿ
ನಾಚಿಕೊಂಡೆ ಸಾವಳಗಿ ಶಿವಲಿಂಗಾ!