ಸಾಗರದ ಸಾರಾಂಶಕ್ಕೆ ರೆಕ್ಕೆ ಮೂಡಿ
ಹಾರುತ್ತದೆ ಆಕಾಶಕ್ಕೆ.

ಹನಿಯಾಗಿ ಭೂಮಿಗೆ ಬಿದ್ದು,
ಹಸಿರುಧರ್ಮವರಳಿ
ಮಾತಿಗೆ ಮೊದಲಿಟ್ಟು ತೊದಲಿದರೆ ಅಕೋ
ಶಬ್ದ ಭೋರ್ಗರೆದು ನದಿಯಾಗಿ ಹರಿದು
ಸಾಗರ ಸೇರಿದರೆ,
ಬಿಡಿಯಾದ ಕಥೆ ಇಡಿಯಾಗಿ
ಪೂರ್ಣದಿಂದ ಪೂರ್ಣವಾಯಿತಲ್ಲವೆ
ಸಾವಳಗಿ ಶಿವಲಿಂಗಾ!