ತಿಂಗಳ ನಗೆಯವಳೋ
ನಮ್ಮ ಯಕ್ಷಿ| ಚಿಕ್ಕೆಗಳ ಮುಡಿಯುವವಳೊ
ಎದ್ದು ನೋಡೋ ಮುದ್ದು ಚಂದ್ರಾಮ ಕಾಡಿನಲಿ
ಕೈಲಾಸ ತೂಗಿರುವಳೋ! ||

ಗಿಂಡೀಯ ಮೊಲೆಯವಳೊ
ಚಿನ್ನದ| ಚೊಂಬಿನ ಮೊಲೆಯವಳೊ
ಚಿನ್ನದ ಚೊಂಬಿನ ಮೊಲೆಯಿಂದ ಬೆಳಕೀನ
ನೊರೆ ಹಾಲ ಸುರಿಸುವವಳೋ||

ಹಾಡಿಗೆ ಒಲಿಯುವವಳೊ
ಹುರಿಗೊಂಡ ನಾದದಲಿ ಅಡಗಿರುವಳೋ
ಗುಂಗು ಗುಂಗಿನ ನಾದ ಗುಂಭದ ಒಳಗಿಂದ
ಹಾಡಾಗಿ ಹೊಮ್ಮುವವಳೋ||