ಯಾಕ ತಂಗಿ ಹಿಂಗ್ಯಾಕ ಹಾರ್ಯಾಡ್ತಿ
ಪರಿ ಬಂದಂಗಾಡ್ತಿ||
ತೀರಿಧಾಂಗ ಎಲ್ಲಾ ಬಾಕಿ
ಆರಮೂರ ಭಿಡೆಗಳ ಬಿಟಕೊಟ್ಟಿ|| ಕೇಳವ್ವಾ ತಂಗಿ||
ಸೆರಗ ಹರದ ಹೊಸಲಾ ದಾಟಿ
ತಿರಗತೀಯೆ ಹುರಿಗೊಂಡ ಬುಗುರಿ
ಭರ್ತಿ ಸೇರಿ ಶಿವಾಪುರ ಸಂತಿ
ಖಬರಬೇಡಿ ಪರಭಾರೆ ನಿಂತಿ||
ಅಂಗೈಯಾಗ ಕನ್ನಡಿ ಹಿಡದಿ
ಗೀರು ಗಂಧ ಕಾಡಿಗಿ ತೀಡಿಕೊಂಡಿ|| ಕೇಳವ್ವಾ ತಂಗಿ||
ಮೊಗಮ್ಮಾಗಿ ರಿದಮ್ಮ ಹಾಡಿ
ಸೊಲ್ಲಿಗೊಮ್ಮಿ ದಿಲ್ಲಗಿಯಾಡಿ
ವಾರಿ ನೋಡಿ ಒಳಗs ನಕ್ಕಿ
ಕನ್ನಡಿ ಒಳಗ ಯಾವನ ಕಂಡಿ?
ಕನ್ನಡ್ಯಾಗಿನ ಅಂಬರದಾಗ
ಮೂಡಿದಾವ ಅಂಬುಜಗಳು ಮೂರಾ||
ಹುಚ್ಚು ಶಿವನ ಜೋಡೀಕಣ್ಣಾ
ಯೋಗ ಭೋಗ ಉಂಡಾವ ನೋಡವ್ವಾ|| ಕೇಳವ್ವಾ ತಂಗಿ||
ಸುರಸುಖದ ಮೂರನೆ ಕಣ್ಣಾ
ರುಚಿಗೆ ಮೆಚ್ಚಿ ಮುಚ್ಯಾವಲ್ಲ
ಶಿವಲಿಂಗನ ಪಾದಾ ನಂಬಿ
ಹಾಡತಾವ ಹಾರುವ ದುಂಬಿ||
Leave A Comment