ತತ್ವ ಚಿಂತನೆ ಮಾಡೋ ಮನುಜ | ವ್ಯರ್ಥ
ಕಾಲವ ಸುಳಿಯದೇ | ಮೃತ್ಯಚಿರುವುದು
ಮುಂದೆ ಕೇಳೋ ಮೂರುಬಾರಿಗೊಸಾರಿದೆ || ತತ್ವ ||

ಮನೆಯು ಉರಿಯುವಾಗ ಬಾವಿಯ ತೆಗೆಯುವ
ನರನಂದದೀ ಕೊನೆಗೆ ಯಮನರು ಬಂದು
ಎಳೆವಾಗ | ಕೋರಿದರೆ ಸುಖ ದೊರೆವುದು || ಪ ||

ತಾನು ತನ್ನದು ಎಂಬ ಉದರದಿ ಮಾನ ಹೀನ
ನಾಗಬೇಡವೋ | ನಿನ್ನ ಸ್ವಾನುಭಾವಕೆ ಹಾನಿ
ತಪ್ಪದು | ನೀನು ನಿನ್ನೊಳು ನೋಡಲೊ || ಪ ||

ಎಲ್ಲಿ ನೋಡಿದರಲ್ಲೋ ಶಿವನ ಸೊಲ್ಲು ಸೊಲ್ಲಿಗ
ಸ್ಮರಿಸುತಬಲ ಶರಣರೊಳ್ | ಕೂಡಿ ಸಂಗಮ
ಅಲ್ಲಿ ಕಳೆದುಳಿಮೆ ಮಾಡುತ || ಪ ||

ಈ ಶಣತ್ರಯದಾಸೆಯಿಂದಲ್ಲಿ ಮೋಸ ಹೋಗಲು
ಬೇಡವೋ |
ನಿನ್ನ ರೋಷ ದೋಷಕ್ಕೆ ಕಾರಣಗಳ | ನೆಮಗಳನ್ನು
ಅನುಸರಿಸುತ್ತ || ಪ ||

ಪ್ರೇಮದಿಂದ ಗುರುರಾಮ ವಿಠಲನೆ ನಾಮ
ಸ್ಮರಣೆಯ ಮಾಡಲು | ಈ ಕಾಮ ನೋಟಕ್ಕೆ
ಮನವ ಸೋಲದೆ ನೇಮಗಳನ್ನು ಅನುಸರಿಸುತ್ತಾ || ಪ ||