ನಿಂದಿಸುವರು ನಮ್ಮ ಬಂಧುಕುಲನರ
ಹಂದಿಗಳೊಡ |
ನಮಗೇನು ಫಲ ? ಸಂದುಗೊಂದಿಲ್ಲ ಆನಂದ
ರಸವೇ ತುಂಬಿ ಬಂಧುರವಾಗಿದೆ ನಮ್ಮ ಬಲ
ಬಂದಿರುವಿ ಭವಬಂಧನ ಹೊಳಿಯದ ವಂದನೆಯಿಂದೆ
ಮಗೆ ಫಲ ? || ನಿಂದಿಸುವರು ||

ಎಲ್ಲೆಲ್ಲಿಯು ಎಡೆಯಿಲ್ಲದ ಮೂರ್ತಿಗೆ ಕಲ್ಲಿನ
ಮನೆಯಿಂದೇನು ಫಲ ?
ಸಲ್ಲಲಿ ತಾನುದಲಿಸಿದಾತ್ಮಕೆ ಬೆಲ್ಲವ
ಕೋರಿದೊಡೇನು ಫಲ ? || ನಿಂದಿಸುವರು ||

ಮಾರ ಜನಕನಾಕಾರವ ಕಾಣದೆ ಆರತಿ
ಬೆಳಗಿದೊಡೇನು ಫಲ ?
ಮುರು ಗುಣಂಗಳ ಮೀರಿದ ಶಿವನೊಳು
ಸೇದ ಸುಖದಿಂದೇನು ಫಲ ? || ನಿಂದಿಸುವರು ||

ಪರಮ ಪುರುಷ ತನ್ನ ಕರಣದಿ ನೆಲೆಸಿದೆ
ಧರೆಯನು ತಿರುಗಿದೊಡೇನು ಫಲ ?
ಮರಣವು ಬಂದಿಹ ಪರಿಯನು ತಿಳಿಯದೆ
ಶರಣನು ಎಂದೋಡದೇನು ಫಲ || ನಿಂದಿಸುವರು ||

ದೇವರು ಬೆಳಗುವ ಭಾವವ
ತಿಳಿಯದೆ ಬಾವಿಗೆ ತಿರುಗಿದೊಡೇನು ಫಲ ?
ಜೀವನ ಎಂಬುವ ಭವವು
ಪೂಗಟೆ ಕೊವಿದನಾದೊಡೆದೇನು ಫಲ ? || ನಿಂದಿಸುವರು ||

ಹೊರ ಬಳಗೆಂಬುದ ಧರಿಸಿದ ಮಾಯಯ
ನರಿಯದ ಮತಿಯಿಂದೇನು ಫಲ ?
ವರಗುರು ಶಂಕರ ನಡಿಯೊಳು ಬೆರೆಯದ
ನರದೇಹವು ಇದ್ದೇನು ಫಲ || ನಿಂದಿಸುವರು ||