ಇದರಲ್ಲಿ ಎರಡು ಪಕ್ಷ, ಪ್ರತಿಪಕ್ಷದಲ್ಲಿಯೂ ಎಷ್ಟು ಬೇಕಾದರೂ ಜನರು ಇರಬಹುದು: ಆದರೆ ಸಂಖ್ಯೆ ಮಾತ್ರ ಅಷ್ಟಷ್ಟೇ ಇರಬೇಕು. ನಡುವೆ ಒಂದು ಗೆರೆ ಎಳೆದಿದ್ದು ಆಚೆ ಈಚೆ ಆಯಾ ಪಕ್ಷದ ಆಟಗಾರರು ನಿಂತಿರುತ್ತಾರೆ. ಪ್ರತಿಪಕ್ಷದ ಪ್ರತಿಯೊಬ್ಬರು ತಮ್ಮ ಎದುರಿಗಿದ್ದವರನ್ನು ಗೆರೆದಾಟಿಸಿ ತಮ್ಮೆಡೆಗೆ ಎಳೆದುಕೊಳ್ಳಲು ಪ್ರಯತ್ನಿಸುವರು. ಪ್ರತಿಯೊಬ್ಬರು ತಮ್ಮ ಕೈ ಮುಂದೆ ಮಾಡಿ ಕೈ ಕೊಡಜ್ಜಿ ಕೈ ಕೊಡಜ್ಜಿ” ಎನ್ನುವರು. ಸಮಯ ಸಾಧಿಸಿ ಕೈ ಗಟ್ಟಿಯಾಗಿ ಹಿಡಿದು ಎಳೆಯುವರು. ಎರಡೂ ಕೈಗಳನ್ನೂ ಉಪಯೋಗಿಸಬಹುದು.

ಸ್ವಲ್ಪ ಹೊತ್ತು ಆಟ ನಡೆದ ಮೇಲೆ, ಒಂದು ಪಕ್ಷದಲ್ಲಿ ಕಡಿಮೆ ಜನರೂ ಇನ್ನೊಂದು ಪಕ್ಷದಲ್ಲಿ ಹೆಚ್ಚು ಜನರೂ ಎಳೆಯುವರು. ಆಗ ಕೂಡ ಹೆಚ್ಚು ಜನರೆಲ್ಲರೂ ಕೊಡಿ ಕಡಿಮೆ ಜನರನ್ನು ಎಳೆಯಬಹುದು. ಒಂದು ಪಕ್ಷದ ಎಲ್ಲ ಜನರನ್ನೂ ಗೆರೆ ಈಚೆ ಎಳೆಯುವದು ಮುಗಿದೊಡನೆ ಆ ಪಕ್ಷ ಸೋತಿತೆಂದು ತೀರ್ಮಾನ.