ಈ ಆಟದಲ್ಲಿ ಎರಡು ಪಕ್ಷ. ಮನೆಯ ಅಂಗಳದಲ್ಲಿ ೧೦” – ೧೨” ವ್ಯಾಸದ ವರ್ತುಳ ತೆಗೆದು ಅದರಲ್ಲಿ ಒಂದು ಪಕ್ಷ, ಆ ಕೋಟೆಯ ಹೊರಗೆ ಇನ್ನೊಂದು ಪಕ್ಷ ಒಳಗೆ ನಿಂತಿರುತ್ತದೆ. ಎಲ್ಲರೂ ತಮ್ಮ ತಮ್ಮ ನಾಯಕನ ಮುಂದಾಳ್ತನದಲ್ಲಿ ಉಗಿ ಬಂಡಿಯಾಕಾರದಲ್ಲಿ ನಿಂತಿರುತ್ತಾರೆ, ಕೋಟೆಯ ಹೊರಗೆ ನಿಂತವರು:

ಗುಡು ಗುಡು ಚೆಂಡಕ್ಕೆ
ಯಾರ್ ಮೆಟ್ಟಕ್ಕೇ
ಹಬ್ ಕೊಂದು ಕುರಿಕೊಟ್ರೆ
ಬೀರಣ್ಣ ಮೆಟ್ಟಕ್ಕೆ –

ಎನ್ನುವರು.

ಹೆಸರು ಹೇಳಿಸಿಕೊಂಡವನು ಒಳಗಿರುವ ಪಕ್ಷದವನು, ಅವನನ್ನು ಹೊರಗಿನವರು ಎಳೆಯಲು ಕೋಟೆಯ ಸುತ್ತಲೂ ನಿಲ್ಲುವರು. ಆತನು ಸಿಕ್ಕರೆ ತಮ್ಮೆಡೆ ಎಳೆಯುವರು. ಆಗ ಉಳಿದವರು ಅವನ ಸೊಂಟ ಹಿಡಿದುಕೊಳ್ಳುವರು. ಹೊರಗಿನವರು ಒಳಗಿನ ಎಲ್ಲ ಜನರನ್ನು ಎಳೆದು ಕೋಟೆಯ ರೇಖೆ ದಾಟಿಸಿದರೆ ಅವರು ಗೆದ್ದಂತೆ.