ನೆಲದ ಮೇಲೆ ಒಂದು ವರ್ತುಳ ಬರೆದು ಕೋಟೆಯೆಂದು ಭಾವಿಸುವರು. ಕೋಟೆಯೊಳಗೆ ಎಲ್ಲರೂ ನಿಂತಿರುತ್ತಾರೆ. ಕೋಟೆಯ ಹೊರಗೆ ಬೇಟೆಗಾರ ನಿಂತಿರುತ್ತಾನೆ:

“ಬೇಟೇಗೀಟೆ ಉಂಟ್?”

“ಹೌದು

“ಎಷ್ಟು ಮಂದಿ”

“ಸಾವಿರಾರು”

“ಹಾಕ್ತೀರಮ್ಮಾ”

ಇದು ಬೇಟೆಗಾರನಿಗೂ ಒಳಗಿನವರಿಗೂ ನಡೆದ ಸಂಭಾಷಣೆ. “ಹಾಕ್ತೀರಮ್ಮಾ” ಎಂದು ಕೇಳುತ್ತ ಬೇಟೆಗಾರ ಒಳಗಿನ ಒಬ್ಬರನ್ನು ತನ್ನೆಡೆ ಎಳೆದು, ತಲೆಯ ಮೇಲೆ “ಉಪ್ಪುಪ್ಪು” ಎಂದು ಹೇಳಿ ಬಡಿಯಬೇಕು. ಹಾಗೆ ಹೇಳದೇ ಹೋದರೆ ಅವರು ಕೋಟೆಯ ಒಳಗೆ ಹೋಗಬೇಕು. ಉಪ್ಪುಪ್ಪು ಎಂದ ಮೇಲೆ ಹೊರಗೆ ಬಂದವರೆಲ್ಲ ಬೇಟೆಗಾರನ ಪಕ್ಷ. ಅವರೂ ಒಳಗಿನವರನ್ನು ಹೊರಗೆಳೆಯುವರು. ಒಳಗಿನವರು ತಪ್ಪಿಸಿಕೊಳ್ಳಲು ಪ್ರಯತ್ನಿಸುವರು. ಹೊರಗೆ ಹೋಗುವವರನ್ನು ತಮ್ಮೆಡೆ ಎಳೆದು ತಪ್ಪಿಸುವರು. ಉಗಿಬಂಡಿಯಂತೆ ನಿಲ್ಲವದಿಲ್ಲ, ಹೀಗೆ ಎಲ್ಲರೂ ಬೇಟೆಗಾರನ ಪಾಲಾಗುವವರೆಗೆ ಆಟ ಸಾಗುತ್ತದೆ.