ಮೇಲಿನ ಆಟಕ್ಕೆ ಇನ್ನೊಂದು ಹೆಸರು ಹತ್ತೊಂಬಳ್ಳಿ. ಆಡುವ ರೀತಿ ಮೇಲಿನಂತೆ. ಹಾಡು ಮಾತ್ರ ಬೇರೆಯಾಗಿದೆ:

“ಹತ್ತೊಂಬಳ್ಳಿ ಹರಗೀಬಳ್ಳಿ
ನಾಯಿಗೆ ನುಚ್ಚು ಹಾಕಲಾರೆ
ಇಲಿಗೆ ಬೆಲ್ಲ ತಿನಿಸಲಾರೆ
ಅವ್ವನ ಸೀರೆ ಮಡಚಲಾರೆ
ಅಪ್ಪನ ರೊಕ್ಕಾ ಎಣಿಸಲಾರೆ
ಗುಳುಂ ಗುಟ್”