ಪ್ರಪಂಚದಲ್ಲಿ ಸಾವಿರಾರು ಭಾಷೆ, ಉಪಭಾಷೆಗಳಿವೆ. ಇನ್ನೂ ಹೊಸ ಹೊಸ ಭಾಷೆಗಳು ಬೆಳಕಿಗೆ ಬರುತ್ತಲೇ ಇವೆ. ಭಾಷೆಯನ್ನು ನಾವು ಬಳಸುತ್ತಾ ಹೋದಂತೆ ಅವು ನಮಗರಿವಿಲ್ಲದಂತೆ ಬೆಳೆಯುತ್ತಾ ಹೋಗುತ್ತವೆ. ಭಾಷೆ ಚಲನಶೀಲವಾಗಿರುವುದರಿಂದ ಅದರ ಮೇಲೆ ಅದನ್ನಾಡುವ ಭಾಷಿಕರ ಮೇಲೆ ಯಾವುದೇ ರೀತಿಯ ನಿಯಂತ್ರಣವಿಲ್ಲ. ಜನಸಂಖ್ಯೆಯ ಹಂಚಿಕೆ, ಸಾಂದ್ರತೆ, ವಯೋಮಾನದ ಬದಲಾವಣೆಗಳಿಂದಾಗಬಹುದಾದ ಪರಿಣಾಮ ಗಳೊಡನೆ ಒಂದು ಭಾಷಾ ಸಮುದಾಯ ಮುಕ್ತವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಜನಸಂಖ್ಯೆ ಸಂಬಂಧೀ ಚಲನಶೀಲ ಲಕ್ಷಣಗಳು ಸಾಮಾಜಿಕ ಮತ್ತು ಭಾಷಿಕ ಪರಿಸರದ ಮೇಲೆ ಪ್ರಭಾವ ಬೀರುತ್ತವೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜನಸಂಖ್ಯೆ ಹಂಚಿಕೆಯಾದಂತೆ ಬೇರೆ ಬೇರೆ ಭಾಷೆಯನ್ನಾಡುವ ಭಾಷಿಕರು ಹಂಚಿಕೆಯಾಗುತ್ತಾರೆ. ಆ ಹಂಚಿಕೆಯ ಪ್ರಮಾಣ ಬೇರೆ ಬೇರೆಯಾಗಿರಬಹುದು. ಅದು ಭೌಗೋಳಿಕ ಪರಿಸರ ಹಾಗೂ ಆರ್ಥಿಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ವಿಶ್ವದ ಜನಸಂಖ್ಯೆ ತೀವ್ರಗತಿಯಿಂದ ಬೆಳವಣಿಗೆ ಹೊಂದುತ್ತಿದೆ. ಕ್ರಿ.ಶ. 1991 ರ ಅಂಕಿ ಅಂಶಗಳಂತೆ ವಿಶ್ವದ ಜನಸಂಖ್ಯೆ 5.3 ಬಿಲಿಯನ್ಗಳು. ಪ್ರತಿ ನಿಮಿಷಕ್ಕೆ ಸುಮಾರು 150 ಜನರು ಜನಿಸುತ್ತಾರೆ. ಪ್ರತಿ ದಿನಕ್ಕೆ 2,22000 ಜನರೂ, ಪ್ರತಿ ವರ್ಷಕ್ಕೆ ಸುಮಾರು 90 ರಿಂದ 100 ಮಿಲಿಯನ್ ಜನಸಂಖ್ಯೆ ಹೆಚ್ಚಾಗುತ್ತದೆ. ಪ್ರತಿ ಹತ್ತು ವರ್ಷಗಳಿಗೆ ವಿಶ್ವದ ಜನಸಂಖ್ಯೆ ಸುಮಾರು 100 ಕೋಟಿಗಳಷ್ಟು ಹೆಚ್ಚಾಗುತ್ತದೆ. ಜನಸಂಖ್ಯೆ ಬೆಳವಣಿಗೆಯ ತೀವ್ರತೆಯನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು. 1901ರಲ್ಲಿ ಭಾರತದ ಜನಸಂಖ್ಯೆ 23.83 ಕೋಟಿಗಳಷ್ಟಿತ್ತು. 1991 ರಲ್ಲಿ 84.39 ಕೋಟಿಗಳಷ್ಟಾಯಿತು. ಇದನ್ನು ಗಮನಿಸಿದಾಗ 20ನೆಯ ಶತಮಾನದಲ್ಲಿಯ ಭಾರತದ ಜನಸಂಖ್ಯೆಯ ಬೆಳವಣಿಗೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬಹುದು. ಜನಸಂಖ್ಯೆ ಹೆಚ್ಚಾದಂತೆ ಭಾಷಿಕರ ಸಂಖ್ಯೆಯೂ ಹೆಚ್ಚುತ್ತ ಹೋಗುತ್ತದೆ. ಒಂದು ಭಾಷಾ ಕುಟುಂಬದಲ್ಲಿಯ ಜನರು ಬೇರೆ ಬೇರೆ ಕಾರಣಗಳಿಂದಾಗಿ ವಿಶೇಷವಾಗಿ ವಲಸೆ ಹೋಗುತ್ತಾರೆ. ಅದು ಆಂತರಿಕ ವಲಸೆಯಾಗಿರಬಹುದು ಅಥವಾ ಅಂತರಾಷ್ಟ್ರೀಯ ವಲಸೆಯಾಗಿರಬಹುದು. ವಲಸೆಗೆ ಉದ್ಯೋಗ, ಶಿಕ್ಷಣ ಮುಂತಾದವು ಕಾರಣವಾಗುತ್ತವೆ. ವಲಸೆಯಿಂದ ಒಂದು ಭಾಷೆಯನ್ನಾಡುವ ಭಾಷಿಕರು ಅಭಿವೃದ್ದಿ ಹೊಂದಿದ ರಾಷ್ಟ್ರ ಅಥವಾ ಪ್ರದೇಶಗಳಲ್ಲಿ ನೆಲೆ ನಿಲ್ಲುತ್ತಾರೆ. ಆ ಪ್ರದೇಶದ ಭಾಷೆಯನ್ನು ಕಲಿಯಬೇಕಾಗು ತ್ತದೆ. ಇಂತಹ ಸನ್ನಿವೇಶ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಇದೆ.
ಜಗತ್ತಿನಾದ್ಯಂತ ಆದಿವಾಸಿ, ಅಲ್ಪಸಂಖ್ಯಾತ, ಬುಡಕಟ್ಟು ಸಮುದಾಯದ ಭಾಷಿಕರು ತಮ್ಮ ಮನೆ ಅಥವಾ ಪರಿಸರದಲ್ಲಿ ಬಳಸುವ ಭಾಷೆಯೇ ಬೇರೆ. ಹೊರಗಡೆಗೆ ವ್ಯವಹಾರಕ್ಕಾಗಿ ಬಳಸುವ ಭಾಷೆಯೇ ಬೇರೆ. ಈ ಅಂಶ ಕೇವಲ ಅಲ್ಪಸಂಖ್ಯಾತ ಭಾಷೆಗಳಿಗಷ್ಟೆ ಅಲ್ಲದೆ ಬಹುಭಾಷಿಕ ಸಮುದಾಯಗಳಿಗೂ ಕೆಲವು ವಿದ್ಯಾವಂತ ಕುಟುಂಬ ವಲಯಗಳಿಗೂ ಅನ್ವಯಿಸುತ್ತದೆ. ಭಾಷಿಕರ ಸಂಖ್ಯೆಯನ್ನು ಗುರುತಿಸುವಾಗ, ಶೋಧಿಸುವಾಗ ಇವುಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ.
ಜೀವಂತ ಭಾಷೆಯೊಂದರ ಭಾಷಿಕರು ತಮ್ಮ ಮಾತೃಭಾಷೆಯನ್ನು ನಿರಂತರವಾಗಿ ಮಾತನಾಡುವವರು ಸಿಗುವುದು ವಿರಳ. ಈ ಆಧುನಿಕ ಯುಗದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಭಾಷಿಕರು ಜಗತ್ತಿನಾದ್ಯಂತ ಹರಡಿದ್ದರೆ ತಾವು ಬದುಕಿ ಬಾಳುತ್ತಿರುವ ಪರಿಸರದ ಭಾಷೆಯನ್ನು ಅಥವಾ ಆ ಪ್ರದೇಶದ ಸಂಪರ್ಕ ಭಾಷೆಯನ್ನು ಕಲಿಯುತ್ತಾರೆ. ಉದಾ: ಕನ್ನಡ ಮಾತೃಭಾಷೆಯುಳ್ಳ ಕೆಲವರು ಇಂಗ್ಲೆಂಡ್ ಅಥವಾ ಅಮೇರಿಕಾಕ್ಕೆ ಹೋಗಿ ನೆಲೆಸಿದ್ದಾರೆ. ಅವರ ಮಕ್ಕಳಿಗೆ ಕನ್ನಡ ಬರುವುದಿಲ್ಲ. ಇಂಗ್ಲಿಷ್ ಅಥವಾ ಅಮೆರಿಕನ್ ಭಾಷೆಗಳನ್ನು ಕಲಿತಿರುತ್ತಾರೆ. ಕನ್ನಡದ ಪರಿಸರದಲ್ಲಿ ಹುಟ್ಟಿದರೂ ಮಾತು ಕಲಿಯುವ ವಯಸ್ಸಿನಲ್ಲಿ ಅನ್ಯಭಾಷೆಯ ಪರಿಸರದಲ್ಲಿ ಬೆಳೆಯುತ್ತಿರು ವಾಗ ಕನ್ನಡ ಕಲಿಯಲು ಹೇಗೆ ಸಾಧ್ಯ? ಆ ಮಕ್ಕಳು ಅಲ್ಲಿಯೇ ನೆಲೆಸಿದಾಗ ಕನ್ನಡವೇ ಅವರ ಅನ್ಯಭಾಷೆಯಾಗುತ್ತದೆ. ಇಂತಹ ಉದಾಹರಣೆಗಳು ಜಗತ್ತಿನಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿವೆ.
ಭಾಷಿಕರ ಸಂಖ್ಯೆಯನ್ನು ನಿರ್ಣಯಿಸುವಾಗ ಭಾಷಿಕರ ಪರಸ್ಪರ ತಿಳುವಳಿಕೆ ಮತ್ತು ಸಾಮಾನ್ಯ ಸಾಂಸ್ಕೃತಿಕ ಹಿನ್ನೆಲೆ ಇವು ಮಹತ್ವದ ಪಾತ್ರ ಬೀರುತ್ತವೆ. ಜನಸಂಖ್ಯೆಯ ಹಂಚಿಕೆ, ಪರಿಸರ, ವಲಸೆ, ಶಿಕ್ಷಣ ಇವುಗಳನ್ನು ಗಮನದಲ್ಲಿಟ್ಟುಕೊಂಡು ಭಾಷಿಕರ ಸಂಖ್ಯೆಯನ್ನು ಖಚಿತಪಡಿಸಬೇಕಾಗುತ್ತದೆ. ಎಷ್ಟು ಭಾಷೆಗಳಿವೆ ಎಂಬುದಕ್ಕೆ ಉತ್ತರ ಎಷ್ಟೊಂದು ಕಷ್ಟಸಾಧ್ಯವೊ ಎಷ್ಟು ಜನ ಭಾಷಿಕರು ಎಂಬುದಕ್ಕೆ ಉತ್ತರ ಅಷ್ಟೇ ಕಷ್ಠಸಾಧ್ಯ.
ಪ್ರಪಂಚದ ಪ್ರಮುಖ ಭಾಷೆಗಳ ಮತ್ತು ಭಾಷಿಕರ ಬಗೆಗೆ ಭಾಷಾ ವಿಜ್ಞಾನಿಗಳು ಸಮೀಕ್ಷೆ, ಸಂಶೋಧನೆ ನಡೆಸಿ ಕೋಷ್ಠಕ ರೂಪದಲ್ಲಿ ಹೇಳಿದ್ದಾರೆ. ಅವುಗಳನ್ನು ಗಮನಿಸಿದರೆ ಒಂದು ಸ್ಥೂಲನೋಟ ಸಿಗುತ್ತದೆ.
ಭಾಷೆಗೆ ಉಪಭಾಷೆಗಳಿರುತ್ತವೆಂದು ಒಪ್ಪಿದ ಕೂಡಲೇ ಕೆಲವು ಸಮಸ್ಯೆಗಳು ಎದುರಾಗುತ್ತವೆ. ನುಡಿ ಪ್ರಭೇದಗಳನ್ನು ಎ ಮತ್ತು ಬಿ ಎನ್ನೋಣ. ಇವುಗಳ ನಡುವೆ ಇರಬಹುದಾದ ಸಂಬಂಧಗಳಲ್ಲಿ ಕೆಲವು ಹೀಗಿವೆ.
1. ಎ ಮತ್ತು ಬಿ ಪ್ರತ್ಯೇಕ ಭಾಷೆಗಳು. 2. ಎ (ಅಥವಾ) ಎ ಯ ಉಪಭಾಷೆ. 3. ಎ ಮತ್ತೂ ಬಿ ಗಳೆರಡೂ ಸಿ ಎಂಬೊಂದು ಭಾಷೆಯ ಉಪಭಾಷೆಗಳು. ಈ ಸಂಬಂಧಗಳಲ್ಲಿ ಯಾವುದು ಆ ನುಡಿ ಪ್ರಭೇದಗಳ ನಡುವೆ ಇದೆಯೆಂದು ತಿಳಿಯುವುದು? ಇದಕ್ಕೆ ಪರೀಕ್ಷೆಗಳೇನು? ಇವುಗಳಲ್ಲಿ ಎರಡು ಮತ್ತು ಮೂರನೆಯ ಸಾಧ್ಯತೆಗಳ ನಡುವೆ ಅಷ್ಟೊಂದು ವ್ಯತ್ಯಾಸಗಳಿಲ್ಲ. ಒಂದೇ ಭಾಷೆಯ ಎರಡು ಉಪಭಾಷೆಗಳ ನಡುವೆ ಇರುವ ಸಂಬಂಧಕ್ಕೂ ಒಂದು ಭಾಷೆ ಅದರ ಉಪಭಾಷೆಯ ನಡುವೆ ಇರುವ ಸಂಬಂಧಕ್ಕೂ ವ್ಯತ್ಯಾಸವೇನಿಲ್ಲ. ಅಥವಾ ಅಂಥ ವ್ಯತ್ಯಾಸಗಳಿದ್ದರೂ ಅವು ಬೇರೆಯೇ ಆದ ಕಾರಣಗಳನ್ನು ಹೊಂದಿರುತ್ತವೆ. ಉದಾ.ಗೆ ಮೊದಲನೆಯ ಮಾದರಿಯ ಉಪಭಾಷೆಗಳ ನಡುವೆ ಸಮಾನ ಸ್ಥಾನಮಾನವಿದ್ದರೆ, ಎರಡನೆಯ ಮಾದರಿಯಲ್ಲಿ ಭಾಷೆ ಯಾಜಮಾನ್ಯವನ್ನು ಉಪಭಾಷೆಯ ಅಧೀನತೆಯನ್ನು ಪ್ರಕಟಿಸುತ್ತವೆ.
ಭಾಷೆಗೆ ಉಪಭಾಷೆಗಳಿರುತ್ತವೆಂದು ಒಪ್ಪಿದ ಕೂಡಲೇ ಕೆಲವು ಸಮಸ್ಯೆಗಳು ಎದುರಾಗುತ್ತವೆ. ನುಡಿ ಪ್ರಭೇದಗಳನ್ನು ಎ ಮತ್ತು ಬಿ ಎನ್ನೋಣ ಇವುಗಳ ನಡುವೆ ಇರಬಹುದಾದ ಸಂಬಂಧಗಳಲ್ಲಿ ಕೆಲವು ಹೀಗಿವೆ.
1. ಎ ಮತ್ತು ಬಿ ಪ್ರತ್ಯೇಕ ಭಾಷೆಗಳು 2. ಎ (ಅಥವಾ) ಎ ಯ ಉಪಭಾಷೆ 3 ಎ ಮತ್ತೂ ಬಿ ಗಳೆರಡೂ ಸಿ ಎಂಬೊಂದು ಭಾಷೆಯ ಉಪಭಾಷೆಗಳು. ಈ ಸಂಬಂಧಗಳಲ್ಲಿ ಯಾವುದು ಆ ನುಡಿ ಪ್ರಭೇದಗಳ ನಡುವೆ ಇದೆಯೆಂದು ತಿಳಿಯುವುದು? ಇದಕ್ಕೆ ಪರೀಕ್ಷೆಗಳೇನು? ಇವುಗಳಲ್ಲಿ ಎರಡು ಮತ್ತು ಮೂರನೆಯ ಸಾಧ್ಯತೆಗಳ ನಡುವೆ ಅಷ್ಟೊಂದು ವ್ಯತ್ಯಾಸಗಳಿಲ್ಲ. ಒಂದೇ ಭಾಷೆಯ ಎರಡು ಉಪಭಾಷೆಗಳ ನಡುವೆ ಇರುವ ಸಂಬಂಧಕ್ಕೂ ಒಂದು ಭಾಷೆ ಅದರ ಉಪಭಾಷೆಯ ನಡುವೆ ಇರುವ ಸಂಬಂಧಕ್ಕೂ ವ್ಯತ್ಯಾಸವೇನಿಲ್ಲ. ಅಥವಾ ಅಂಥ ವ್ಯತ್ಯಾಸಗಳಿದ್ದರೂ ಅವು ಬೇರೆಯೇ ಆದ ಕಾರಣಗಳನ್ನು ಹೊಂದಿರುತ್ತವೆ. ಉದಾ.ಗೆ ಮೊದಲನೆಯ ಮಾದರಿಯ ಉಪಭಾಷೆಗಳ ನಡುವೆ ಸಮಾನಸ್ಥಾನಮಾನವಿದ್ದರೆ, ಎರಡನೆಯ ಮಾದರಿಯಲ್ಲಿ ಭಾಷೆ ಜಮಾನ್ಯವನ್ನು ಉಪಭಾಷೆಯು ಅಧೀನತೆಯನ್ನು ಪ್ರಕಟಿಸುತ್ತವೆ. |
ಭಾಷಿಕ ಸಂಖ್ಯೆ
ವೆಗಲಿನ್ ಮತ್ತು ವೆಗಲನ್ರ ವರ್ಗೀಕರಣವನ್ನನುಸರಿಸಿ ಜಾಗತಿಕ ಭಾಷೆಗಳನ್ನು ಮತ್ತು ಭಾಷಿಕರನ್ನು ಮೇಲಿನ ಸೂಚಿ ಸೂಚಿಸುತ್ತದೆ. ಅಂಕಿ ಅಂಶಗಳ ಪ್ರಕಾರ ನಾಲ್ಕರಲ್ಲಿ ಮೂರರಷ್ಟು ಭಾಷೆಗಳನ್ನು ಆಡುವವರ ಸಂಖ್ಯೆ ತುಂಬ ಕಡಿಮೆಯಾಗಿದೆ. ಜಾಗತಿಕ ಒಟ್ಟು ಭಾಷೆಗಳ ಸಂಖ್ಯೆ (ಅಳಿದವುಗಳು ಸೇರಿ) 4,522 ಎಂದು ವೆಗಲಿನ್ ಮತ್ತು ವೆಗಲನ್ರು ಅಭಿಪ್ರಾಯಪಟ್ಟಿದ್ದಾರೆ.
ಇಂಡೋ ಯುರೋಪಿಯನ್ | 2,000,000,00 |
ನೈಲೋಸಹಾರ | 30,000,000 |
ಸಿನೊ ಟಿಬೇಟಿಯನ್ | 1,040,000,000 |
ಅಮೇರಿ ಇಂಡಿಯನ್ | 25,000,000 |
ವೈಗೆರಾ-ಕಾಂಗೋ | 260,000,000 |
ಆಫರೊ-ಏಶಿಯಾಟಿಕ್ | 230,000,00 |
(ದಕ್ಷಿಣ ಅಮೇರಿಕಾದ ಉತ್ತರ | 230,000,000 |
ಮತ್ತು ಮಧ್ಯಭಾಗ) | |
ಆಸ್ಟ್ರೋನೇಶಿಯಾ | 200,000,000 |
ಉರಾಲಿಕ್ | 23,000,000 |
ದ್ರವಿಡಿಯನ್ | 140,000,000 |
ಮೈಲೊ ಯಾವೊ | 7,000,000 |
ಜಪಾನೀಸ್ | 120,000,000 |
ಕಕೇಶಿಯನ್ | 6,000,000 |
ಅಲ್ಟೆಕ್ | 90,000,000 |
ಇಂಡೋ ಫೆಸಿಫಿಕ್ | 3,000,000 |
ಆಸ್ಟ್ರೊ-ಏಶಿಯಾಟಿಕ್ | 60,000,000 |
ಕೋಸಾನ್ | 50,000 |
ಕೊರೆವಾ | 50,000,000 |
ಆಸ್ಟ್ರೊಲಿಯನ್ ಅದ್ರೂಜಿವೆ | 50,000 |
ಥಾಯಿ | 50,000,000 |
ಪಾಲಿರೂಬೆರಿನ್ | 50,000 |
1980 ರಲ್ಲಿ ಜಾಗತಿಕ ಜನಸಂಖ್ಯೆಯು 4 ಸಾವಿರ ಮಿಲಿಯನ್ಕ್ಕಿಂತ ಹೆಚ್ಚಿರುವಾಗ ಪ್ರಮುಖ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳನ್ನು ಮತ್ತು ಅವುಗಳನ್ನಾಡುವ ಭಾಷಿಕರನ್ನು ಮೇಲಿನ ಕೋಷ್ಠಕ ಸೂಚಿಸುತ್ತದೆ. (ಸಂಭಾವ್ಯ ರೀತಿ ಅಂದಾಜು ಅಂಕಿ ಅಂಶಗಳಿವು)
ಇಪ್ಪತ್ತು ಪ್ರಮುಖ ಭಾಷೆಗಳು
(ಲಕ್ಷಗಳಲ್ಲಿ)
ಮಾತೃ ಭಾಷಿಕರು |
ಆಡಳಿತ ಭಾಷೆಯ ಜನಸಂಖ್ಯೆ | ||
1. ಚೈನೀಸ್ | 1,000 | 1. ಇಂಗ್ಲೀಷ್ | 1,400 |
2. ಇಂಗ್ಲೀಷ್ | 350 | 2. ಚೈನೀಸ್ | 1,000 |
3. ಸ್ಪ್ಯಾನಿಷ್ | 250 | 3. ಹಿಂದಿ | 700 |
4. ಹಿಂದಿ | 200 | 4. ಸ್ಪಾನಿಷ್ | 280 |
5. ಅರ್ಯಾಬಿಕ್ | 150 | 5. ರಶಿಯನ್ | 270 |
6. ಬಂಗಾಲಿ | 150 | 6. ಫ್ರೆಂಚ್ | 220 |
7. ರಶಿಯನ್ | 150 | 7. ಅರ್ಯಾಬಿಕ್ | 170 |
8. ಪೋರ್ಚುಗೀಸ್ | 135 | 8.ಪೋರ್ಚುಗೀಸ್ | 160 |
9. ಜಪಾನೀಸ್ | 120 | 9. ಮಲಯಾ | 160 |
10. ಜರ್ಮನ್ | 100 | 10. ಬಂಗಾಲಿ | 150 |
11. ಫ್ರೆಂಚ್ | 70 | 11. ಜಪಾನೀಸ್ | 120 |
12. ಪಂಜಾಬಿ | 70 | 12. ಜರ್ಮನ್ | 100 |
13. ಜಪಾನೀಸ್ | 65 | 13. ಉರ್ದು | 85 |
14. ಬಿಹಾರಿ | 65 | 14. ಇಟಾಲಿಯನ್ | 60 |
15. ಇಟಾಲಿಯನ್ | 60 | 15. ಕೊರಿಯನ್ | 60 |
16. ಕೊರಿಯನ್ | 60 | 16.ವಿಯಟ್ನಾಮಿಸ್ | 60 |
17. ತೆಲಗು | 55 | 17. ಪರ್ಶಿಯನ್ | 55 |
18. ತಮಿಳು | 55 | 18. ಟ್ಯಾಗಲೊಗ್ | 50 |
19. ಮರಾಠಿ | 50 | 19. ಥಾಯಿ | 50 |
20. ವಿಯಟ್ನಾಮಿಸ್ | 50 | 20. ತುರ್ಕಿಸ್ | 50 |
ಈ ಕೋಷ್ಟಕದಲ್ಲಿ ಜಗತ್ತಿನ ಪ್ರಮುಖ ಭಾಷೆಗಳನ್ನು ಆಡುವವರ ಅಂದಾಜು ಸಂಖ್ಯೆ ಮಿಲಿಯನ್ಗಳಲ್ಲಿದೆ. ಮೊದಲನೆಯ ಕಾಲಂನಲ್ಲಿ ಮಾತೃ ಭಾಷೆಯನ್ನು ಆಡುವವರ ಸಂಖ್ಯೆಯನ್ನು ಅನುಸರಿಸಿ ಎರಡನೆಯ ಕಾಲಂನಲ್ಲಿ ಆಡಳಿತ ಭಾಷೆಯಾಗಿ ಆಡುವವರನ್ನು ಅನುಸರಿಸಿ ಪಟ್ಟಿ ಮಾಡಲಾಗಿದೆ. ಎರಡು ಕಾಲಂನಲ್ಲಿರುವ ಭಾಷಿಕರ ಸಂಖ್ಯೆ ಸಮಾನವಾಗಿರಬೇಕಿಲ್ಲ. (ಉದಾ: ಜಪಾನಿ ಮತ್ತು ತೆಲುಗು). ಕೆಲವು ಭಾಷೆಗಳು ಇಡೀ ದೇಶದ ಆಡಳಿತ ಭಾಷೆಗಳಾಗದಿರುವ ಸಂದರ್ಭ ಇರುತ್ತದೆ. ಕೆಲವು ಭಾಷೆಗಳು ಹಲವು ಭಾಷೆಗಳನ್ನೊಳಗೊಂಡ ದೇಶದ ಆಡಳಿತ ಭಾಷೆ ಆಗಿರಬಹುದು. (ಉದಾ: ಇಂಡಿಯಾ). ಕೆಲವು ದೇಶಗಳಲ್ಲಿ ದ್ವಿತೀಯ ಭಾಷೆ ಬಹು ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ ಎರಡನೇ ಕಾಲಂನಲ್ಲಿ ಭಾಷಿಕರ ಸಂಖ್ಯೆಯು ಹೆಚ್ಚು ಕಡಿಮೆಯಾಗುವ ಸಂಭವ ಇರುತ್ತದೆ. ಈ ಸಂಖ್ಯೆಗಳು ಭಾಷೆಯ ಚಲನಶೀಲತೆಯನ್ನು ಸೂಚಿಸುತ್ತದೆ.
Leave A Comment