ಅತಿ ಅತಿಯಾಗಿ ಕೇಳಿದೆ ತಾಯೆ ಗೋಪುರ ಘಂಟನಾದ
ಆರತಿಯೆತ್ತುವ ವೇಳೆಗೆ ಮನದಿ ಏನೋ ಭಾವೋನ್ಮಾದ
ಸಾವಿರ ಕೊರಳಲು ಪ್ರತಿ ಹನಿಯಾಗಿ ಅರ್ಚನೆ ಮಂತ್ರಾವೇದ
ಕಿವಿಯನು ತುಂಬಿ ಹೃದಯಕೆ ನೀಡಿದೆ ಭಕ್ತಿ ಪರವಶತೆಯಾ ಮೋದ
ಅತಿ ಅತಿಯಾಗಿ…….

ಚಂದನಲೇಪಿತ ಸುಂದರವದನೆ ಅರವಿಂದನಳಾಯಿತ ಚಾರುನಯನೆ
ಮಂದಹಾಸ ಮಕರಂದವ ಸೂಸುವ ಇಂದುಮುಖಿ
ಆನಂದಸದನೆ ಕಣ್ಣುತುಂಬ ಪ್ರತಿಬಿಂಬವ ಹೊಂದಿದೆ ನಿನ್ನಯ
ಮೊಗದಕಾಂತಿ ಅಂಬಾ ನಿನ್ನನು ನಂಬಿದ ಮನಕೆ
ತುಂಬಿದ ನೀ ಮನಶ್ಶಾಂತಿ
ಅತಿ ಅತಿಯಾಗಿ……..

ಎಷ್ಟು ಪುಣ್ಯವ ಮಾಡಿತೊ ನಿನ್ನ ಕೊರಳಿನ ಹಾರದ
ಹೂವಿನ ನಾರು ನಿನ್ನ ಚರಣವು ಮೆಟ್ಟಿದ ಮಣ್ಣಿನ
ಭಾಗ್ಯವ ಅರಿತವರಾರು ಎಷ್ಟು ಧನ್ಯವೋ ಅಭಿಷೇಕದಲಿ
ಒಡಲನು ತೊರೆದ ಆ ಗಂಗೆಯ ನೀರು
ಭಕುತಜನ ಭವವನೀಗಿಸಿ ಹಿಂಡಿಸಿ ಮುಕ್ತಿಗೆ
ದಾರಿಯ ತೋರು ||
ಅಲೆ ಅಲೆಯಾಗಿ……