ಅರ್ಧ ಶತಮಾನ ಕಾಲಕ್ಕೂ ಮಿಗಿಲಾಗಿ ಸಂಗೀತ ಕ್ಷೇತ್ರದಲ್ಲಿ ಮೃದಂಗ ವಾದಕರಾಗಿ ಸೇವೆ ಸಲ್ಲಿಸಿರುವ ವರದಾಚಾರ್ಯರ ಜನನ ೧೯೩೯ರಲ್ಲಿ, ಮೈಸೂರು ಆಸ್ಥಾನ ವಿದ್ವಾನ್‌ ಟಿ.ಎಂ. ವೆಂಕಟೇಶ ದೇವರ್ ಅವರಲ್ಲಿ ಅನೇಕ ವರ್ಷಗಳು ಶಿಕ್ಷಣ ಪಡೆದು ಪ್ರೌಢಿಮೆ ಗಳಿಸಿದರು. ಧಾರವಾಡ ಆಕಾಶವಾಣಿಯ ನಿಲಯದ ಕಲಾವಿದರಾಗಿ ವೃತ್ತಿಯಲ್ಲಿದ್ದು ವಿಶ್ರಾಂತರಾದರು. ಅನೇಕ ವಿಖ್ಯಾತ ನಾಮ ವಿದ್ವಾಂಸರುಗಳಿಗೆ ಮೃದಂಗ ಸಹಕಾರ ನೀಡಿರುವ ಹಿರಿಮೆ ಇವರದು.

ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿಗಳವರು ವರದಾಚಾರ್ಯರ ಸಾಧನೆಯನ್ನು ಮೆಚ್ಚಿ ತಮ್ಮ ಮಠದಿಂದ ‘ಮೃದಂಗ ಕಲಾ ಪ್ರವೀಣ’ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಯನ್ನು ಪಡೆದ ಶ್ರೀಯುತರು ಕಲಾಭಿಮಾನಿ ದೇವತೆಯ ಪಾದಗಳನ್ನು ಸೇರಿದರು.