ಜನನ : ೧೯೨೧ ರಲ್ಲಿ ಚಿಕ್ಕರಸನಹಳ್ಳಿಯಲ್ಲಿ

ಮನೆತನ : ಕೀರ್ತನ ಕಲೆ -ಯಕ್ಷಗಾನ ಕಲಾವಿದರ ಮನೆತನ. ತಂದೆ ನಂಜುಂಡಾಚಾರ್ ಹೆಸರಾಂತ ಯಕ್ಷಗಾನ ಕಲಾವಿದರಾಗಿದ್ದರು.

ಶಿಕ್ಷಣ : ಟಿ. ನರಸೀಪುರದ ಕೃಷ್ಣಮೂರ್ತಿ ಭಾಗವತರು ಹಾಗೂ ಗಮಕಿ ರಾಮಕೃಷ್ಣ ಶಾಸ್ತ್ರೀಗಳಲ್ಲಿ ಕೀರ್ತನ ಕಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಹಾರ್ಮೋನಿಯಂ ನುಡಿಸುವುದರಲ್ಲಿ ಪರಿಶ್ರಮವಿದೆ.

ಕ್ಷೇತ್ರ ಸಾಧನೆ : ತಮ್ಮ ಹದಿನಾರನೆಯ ವಯಸ್ಸಿನಲ್ಲೇ ಪ್ರಥಮ ಕಾರ್ಯಕ್ರಮ ನೀಡಿ ಕೀರ್ತನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ಅನೇಕ ಹರಿಕಥಾ ಕಾರ್ಯಕ್ರಮಗಳಿಗೆ ಹಾರ್ಮೋನಿಯಂ ಪೆಕ್ಕ ವಾಯ ನುಡಿಸುವುದರಲ್ಲೂ ಸಹಕಾರ ನೀಡಿರುತ್ತಾರೆ. ಸುಮಾರು ೬೫ ವರ್ಷಗಳಿಂದ ಹಾಸನ ಜಿಲ್ಲೆಯಾದ್ಯಂತ ಹಾಗೂ ನೆರೆ ಜಿಲ್ಲೆಗಳಲ್ಲಿ ಕಥಾ ಕೀರ್ತನ ನೀಡುತ್ತಾ ಬಂದಿದ್ದು ಜಿಲ್ಲೆಯ ಹಿರಿಯ ವಿದ್ವಾಂಸರಲ್ಲೊಬ್ಬರಾಗಿ ಜನಮನ್ನಣೆ ಗಳಿಸಿದವರು. ಅನೇಕ ಶಿಷ್ಯರುಗಳನ್ನೂ ತಯಾರು ಮಾಡಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು, ಮಠಾಧಿಪತಿಗಳು ಗೌರವಿಸಿ ಸನ್ಮಾನಿಸಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೦-೦೧ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.