ಮನೆತನ : ಸಂಗೀತಾಸಕ್ತರ ಮನೆತನ.

ಗುರುಪರಂಪರೆ : ಮೈಸೂರಿನಲ್ಲಿ ಎಸ್.ಕೃಷ್ಣಯ್ಯಂಗಾರ್ ಅವರಲ್ಲಿ ೧೦ ವರ್ಷಗಳ ಕಾಲ ಕರ್ನಾಟಕ ಸಂಗೀತದಲ್ಲಿ ಸತತ ಶಿಕ್ಷಣ.

ಸಾಧನೆ : ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಸುಗಮ ಸಂಗೀತದತ್ತ ಒಲವು. ಆಗಲೇ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಕೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಸುಗಮ ಸಂಗೀತವನ್ನು  ಹವ್ಯಾಸವನ್ನಾಗಿ ಮಾಡಿಕೊಂಡವರು. ೧೯೫೦ ರಲ್ಲಿ ತಮ್ಮದೇ ಆದ ಗಾನ ಸುಧಾ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಪ್ರಧಾನ ಗಾಯಕರಾಗಿ ಕಾರ್ಯನಿರ್ವಹಣೆ ಸಂಗೀತ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ೧೯೫೬ ರಲ್ಲಿ ದೆಹಲಿಯಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಉತ್ಸವ, ೧೯೬೦ ರಲ್ಲಿ ರಣರಾಜ್ಯೋತ್ಸವದಲ್ಲಿ ಮೈಸೂರು ಕಲಾವಿದರ ತಂಡದ ಗಾಯಕರಾಗಿ. ಅಲ್ಲದೆ ಒರಿಸ್ಸಾ ಬಂಗಾಳ, ತಮಿಳು ನಾಡುಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿ-ದೂರದರ್ಶನಗಳ ಮೂಲಕ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ರಸ ಋಷಿ ದ. ರಾ. ಬೇಂದ್ರೆಯವರು ತಮ್ಮ ಕವಿತೆಗಳ ಸೊಬಗನ್ನು ಇವರ ಬಾಯಿಂದ ಕೇಳಿ ಪ್ರಶಸಂಸೆಯ ಮಾತನ್ನಾಡಿದ್ದಾರೆ.

ಪ್ರಶಸ್ತಿ – ಸನ್ಮಾನ : ಬೆಂಗಳೂರಿನ ಕೆಲವು ಸಾಂಸ್ಕೃತಿಕ ಹಾಗೂ ಸಂಗೀತ ಸಭಾಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ಸಂಗೀತ ಗಂಗಾ ಪ್ರಶಸ್ತಿಯೇ ಅಲ್ಲದೆ ೧೯೯೬-೯೭ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸಹ ಇವರಿಗೆ ಲಭಿಸಿದೆ. ಅಲ್ಲದೆ ೧೯೯೮ ರಲ್ಲಿ ಪದ್ದಣ್ಣ ಪ್ರಶಸ್ತಿ. ೨೦೦೩ ರಲ್ಲಿ ಅನನ್ಯ ಕಲಾಭಿಜ್ಞ ಪ್ರಶಸ್ತಿ, ೨೦೦೫ ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.