ಏಕೀ ವಿಷಾದವು ರಾಧೆ, ಓ ಸೌಮ್ಯ ಶಶಿವದನೆ
ಏಕೆ ಮರುಳಿನ ತೆರದಿ ಹೊರಳುತಿರುವೆ ?
ಕನಕ ವರ್ಣದ ಕಾಯ ಬೂದಿಯೊಲು ಮಂಕಾಯ್ತು,
ಹೊದ್ದ ಸೆರಗೂ ಜಾರಿದರಿವಿಲ್ಲವೆ?

ಹಗಲೂ ಇರುಳೂ ಅತ್ತು ಕೆಂಪಾಗಿವೆ ಕಣ್ಣು,
ಬಾಡಿಹುದು ಸುಕುಮಾರ ಕಮಲವದನ.
ನಮ್ಮ ಎದೆಯೂ ಕೂಡ ಒಡೆಯಬಹುದೋ ಏನೊ
ನೀನು ಹೇಳದೆ ಇರಲು ನಿನ್ನ ವ್ಯಸನ ?