ಸರಿಯು ಕಾಣೆನೊ ಧರಣಿಯೊಳಗಮ್ಮ
ಶ್ರೀ ದೇವಿಯಾದೆಮ್ಮ || ಸರಿಯು ||

ಏನು ಹೇಳಲಿ ನಿನ್ನ ಕೌತುಕವ
ನೀನಾದೆಯಲ್ಲೇ ತುಂಬಿ ತುಳುಕುವ ಏಕ ಬಿಂಬದಲಿ
ಜ್ಞಾನವು ಇಲ್ಲದ ಮೂವರು
ಸೋಜಿಗವನೇ ಬೊಗಳುತಿಹರು
ಮಾನವಂತರ ಮಾನವ ಕಳೆದಮ್ಮ
ಸರಿಗಾಣೆನಮ್ಮ ಸರಿಹೇಳನಮ್ಮ

ಪ್ರಥಮ ಕೃತಯುಗದಲ್ಲಿ ಪರಶಿವಗೆ
ನೀ ಸತಿಯಳಾದೆ ನಿತ್ಯಮೆರದೆ ರಜತಗಿರಿಯೊಳಗೆ
ಕೃತಕ ಮಧು ಕೈಟಬರ ಪ್ರಾಣ ಹತವ ಮಾಡದೆ

ತ್ರೇತಯುಗದಲಿ ಭೂಮಿಯಲಿ ಜನಿಸಿ
ಶ್ರೀರಾಮಚಂದ್ರನಿಗೆ ಸೀತೆ ಎಂದೆನ್ನಿಸಿ

ಕೋಟಿ ಬಳಗವ ಕೂಡಿಕೊಂಡು
ಸೇತುಬಂಧವ ಕಟ್ಟಿ ಕಲಹದಿ

ಪಾತಕಿಯರ ಹತವ ಮಾಡಿ
ದ್ವಾಪರಯುಗದಲ್ಲಿ ಶಿವಹರಿಗೆ
ಪತ್ನಿಯಾದೆ ಪಂಚ ಪಾಂಡವರಿಗೆ

ಪಾಪಿ ಕೌರುವ ಕರ್ಣ ದುಶ್ಯಾಸನರು
ತಾಪ ಕೊಡಲು ನಿನ್ನ ಚಂದಕೆ

ಕೋಪ ಶೌರವ ತಾಳಿ ನಾಶಮಾಡಿ
ಯುದ್ಧ ಮುಖದಿ

ಸರಿಯು ಕಾಣೆನು ಧರಣಿಯೊಳಗಮ್ಮ
ಶ್ರೀದೇವಿಯಾದಮ್ಮ ಸರಿಯು ಕಾಣೆನು
ಕಲಿಯುಗದಲಿ ಆದೇ ನೀ ಎಲ್ಲಮ್ಮ
ಜಮಾದಗ್ನಿ ಋಷಿಗೆ ಬಾರ‍್ಯಳಾದೆಮ್ಮ