ಏನ್ ಕೊಡ ಏನು ಕೊಡವ್ವ ಹುಬ್ಬಳ್ಳಿಮಠ
ಏನು ಚಂದುಳ್ಳಿ ಕೊಡವ್ವ
ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳೆಯುವ
ಕೊಡ ಕಂಚುದಲ್ಲ ತಾಮ್ರದಲ್ಲ
ಮಿರಿ ಮಿರಿ ಮಿಂಚುವ ಕೊಡ         || ಏನು ಕೊಡ ||

ಆರು ಮಂದಿ ಅಕ್ಕ ತಂಗಿಯ ಬಾವಿಯ
ನೀರಿಗೆ ಹೋಗಿ ಮೂರು ಮಂದಿ ಮುತ್ತೈದೆಯ
ಮುತ್ತಿಗೆ ಹಾಕಿದ ಕೊಡ     || ಏನು ಕೊಡ ||

ಶಿವರಾತ್ರಿ ಜಾಗರಣೆಗೆ ಹೋಗಿ ಸಿದ್ಧಲಿಂಗನ
ದರುಶನ ಮಾಡಿ ಮಾಯ ಬಜಾರ್
ಬಜಾರ್‌ನೊಳಗೆ ಮಾರಿ ಹೋಯಿತ್ತವ್ವ ಕೊಡ || ಏನು ಕೊಡ ||

ಶಿಶುನಾಳು ದಿಸರು ತಿದ್ದಿ ಮಾಡಿದ
ಕೊಡ ಗುರುಗೋವಿಂದ ಅಜ್ಜನ ಕೊಡ
ನೆಲೆಯಾಯಿತ್ತವ್ವ ಕೊಡ   || ಏನು ಕೊಡ ||