Categories
e-ದಿನ

ಏಪ್ರಿಲ್-10

ದಿನಾಚರಣೆಗಳು:

ವಿಶ್ವ ಹೋಮಿಯೋಪಥಿ ದಿನ

ಹೋಮಿಯೋಪಥಿ ವೈದ್ಯ ಪದ್ಧತಿಯನ್ನು ಕಂಡು ಹಿಡಿದ ಜರ್ಮನ್ ಸಂಜಾತ ಫ್ರೆಂಚ್ ವೈದ್ಯರಾದ ಸ್ಯಾಮ್ಯುಯೆಲ್ ಹಹ್ನೇಮನ್ ಅವರ ಜನ್ಮದಿನಾಚರಣೆಯ ಈ ದಿನವನ್ನು ವಿಶ್ವ ಹೋಮಿಯೋಪಥಿ ದಿನ ಎಂದು ಆಚರಿಸಲಾಗುತ್ತಿದೆ.

ಸಿಬ್ಲಿಂಗ್ಸ್ ಡೇ – ಒಡಹುಟ್ಟಿದವರ ದಿನ
ವಿಶ್ವದ ಹಲವಾರು ದೇಶಗಳಲ್ಲಿ ಈ ದಿನವನ್ನು ‘ಸಿಬ್ಲಿಂಗ್ಸ್ ಡೇ’ ಅಥವಾ ‘ಒಡಹುಟ್ಟಿದವರ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”837: ಹ್ಯಾಲಿ ಧೂಮಕೇತುವಿನ ಭೂಮಿಯ ಜೊತೆಗಿನ ಅತ್ಯಂತ ಸಾಮೀಪ್ಯ” open=”no”]ಹ್ಯಾಲಿ ಧೂಮಕೇತುವು ಭೂಮಿಗೆ 5.1 ದಶಲಕ್ಷ ಕಿಲೋಮೀಟರುಗಳ ಸಮೀಪದಲ್ಲಿತ್ತು. ಇದು ಹ್ಯಾಲಿ ಧೂಮಕೇತು ಮತ್ತು ಭೂಮಿಯ ನಡುವಣ ಅತ್ಯಂತ ಸಾಮೀಪ್ಯವಾಗಿದೆ.[/fusion_toggle][fusion_toggle title=”1710: ಕೃತಿಸ್ವಾಮ್ಯದ ರಕ್ಷಣೆಗಾಗಿ ಗ್ರೇಟ್ ಬ್ರಿಟನ್ನಿನ್ನಲ್ಲಿ ಮೂಡಿಬಂದ ಪ್ರಥಮ ಕಾನೂನಾದ ‘ಸ್ಟಾಚ್ಯೂಟ್ ಆಫ್ ಆನ್’ ” open=”no”]‘ಸ್ಟಾಚ್ಯೂಟ್ ಆಫ್ ಆನ್’, ಕೃತಿಸ್ವಾಮ್ಯದ ರಕ್ಷಣೆಗಾಗಿ ಗ್ರೇಟ್ ಬ್ರಿಟನ್ನಿನ್ನಲ್ಲಿ ಮೂಡಿಬಂದ ಪ್ರಥಮ ಕಾನೂನು ಎನಿಸಿತು.[/fusion_toggle][fusion_toggle title=”1815: 71,000 ಜನರನ್ನು ಬಲಿ ತೆಗೆದುಕೊಂಡ ತಂಬೋರ ಪರ್ವತದ ಮೂರು ತಿಂಗಳ ವರೆಗಿನ ಸುದೀರ್ಘ ಜ್ವಾಲಾಮುಖಿಯು ಆರಂಭಗೊಂಡಿತು” open=”no”]71,000 ಜನರನ್ನು ಬಲಿ ತೆಗೆದುಕೊಂಡ ತಂಬೋರ ಪರ್ವತದ ಮೂರು ತಿಂಗಳವರೆಗಿನ ಸುದೀರ್ಘ ಜ್ವಾಲಾಮುಖಿಯು ಈ ದಿನದಂದು ಆರಂಭಗೊಂಡಿತು. ಅಷ್ಟೊಂದು ಜನರ ಸಾವಿಗೆ ಕಾರಣವಾಗಿದ್ದರ ಜೊತೆಗೆ, ಈ ಜ್ವಾಲಾಮುಖಿಯ ದೆಸೆಯಿಂದ ಮುಂದಿನ ಎರಡು ವರ್ಷಗಳಲ್ಲಿ ಭೂಮಿಯ ವಾತಾವರಣವೇ ಕ್ಷುಬ್ರಗೊಂಡಿತ್ತು.[/fusion_toggle][fusion_toggle title=”1826: ಟರ್ಕಿ ಆಕ್ರಮಣದಿಂದ ಮಿಸ್ಸೋಲಾಂಘೀ ತೊರೆದ ಗ್ರೀಕ್ ನಿವಾಸಿಗಳು” open=”no”]ಟರ್ಕಿ ಜನಾಂಗೀಯರ ಆಕ್ರಮಣದಿಂದಾಗಿ 10,500 ಮೂಲ ಗ್ರೀಕ್ ನಿವಾಸಿಗಳು ಮಿಸ್ಸೋಲಾಂಘಿ ಪಟ್ಟಣವನ್ನು ತೊರೆಯಲಾರಂಭಿಸಿದರು. ಅವರಲ್ಲಿ ಅತ್ಯಲ್ಪ ಜನಮಾತ್ರ ಬದುಕುಳಿದರು.[/fusion_toggle][fusion_toggle title=”1849: ವಾಲ್ಟೇರ್ ಹಂಟ್ ಅವರಿಗೆ ‘ಸೇಫ್ಟಿ ಪಿನ್’ಗೆ ಪೇಟೆಂಟ್ ಲಭಿಸಿತು. ” open=”no”]ವಾಲ್ಟೇರ್ ಹಂಟ್ ಅವರಿಗೆ ‘ಸೇಫ್ಟಿ ಪಿನ್’ಗೆ ಪೇಟೆಂಟ್ ಲಭಿಸಿತು.
1858: ಲಂಡನ್ನಿನ ಪೂರ್ವಭಾಗದ ವೈಟ್ ಚಾಪೆಲಿನಲ್ಲಿ ಜಗದ್ವಿಖ್ಯಾತ ಗಂಟೆ 13.76 ಟನ್ ತೂಕದ ‘ಬಿಗ್ ಬೆನ್’ ಅನ್ನು ಎರಕಹೊಯ್ಯಲಾಯಿತು.
ಲಂಡನ್ನಿನ ಪೂರ್ವಭಾಗದ ವೈಟ್ ಚಾಪೆಲಿನಲ್ಲಿ ಜಗತ್ತಿನ ಖ್ಯಾತ ಗಂಟೆ 13.76 ಟನ್ ತೂಕದ ‘ಬಿಗ್ ಬೆನ್’ ಅನ್ನು ಎರಕಹೊಯ್ಯಲಾಯಿತು. ಮೊದಲಿಗೆ ಸ್ಥಾಪಿಸಲಾದ 14.5 ಟನ್ ತೂಕದ ಗಂಟೆಯಲ್ಲಿ ಬಿರುಕು ಕಂಡ ಕಾರಣ ಅದನ್ನು 13.76 ತೂಕಕ್ಕೆ ಪುನರ್ ಎರಕಹೊಯ್ಯಲಾಯಿತು.[/fusion_toggle][fusion_toggle title=”1866: ಅಮೆರಿಕನ್ ಪ್ರಾಣಿದಯಾ ಸಂಘ ಸ್ಥಾಪನೆಗೊಂಡಿತು” open=”no”]‘ಅಮೆರಿಕನ್ ಸೊಸೈಟಿ ಫಾರ್ ದಿ ಪ್ರಿವೆನ್ಶನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್’ – ಪ್ರಾಣಿ ದಯಾ ಸಂಘವನ್ನು ಹೆನ್ರಿ ಬರ್ಗ್ ಅವರು ನ್ಯೂಯಾರ್ಕ್ ನಗರದಲ್ಲಿ ಸ್ಥಾಪಿಸಿದರು.[/fusion_toggle][fusion_toggle title=”1875: ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಆರ್ಯಸಮಾಜದ ಸ್ಥಾಪನೆ” open=”no”]ಸ್ವಾಮಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಮೊದಲ ಶಾಖೆಯನ್ನು ಮುಂಬೈಯಲ್ಲಿ ಸ್ಥಾಪಿಸಿದರು. ವೇದಗಳನ್ನು ಹಿಂದೂ ನಂಬಿಕೆ ಹಾಗೂ ಆಚರಣೆಗಳ ಆಧಾರವಾಗಿ ಪುನಃಸ್ಥಾಪನೆ ಮಾಡುವ ಉದ್ದೇಶ ಇದಕ್ಕಿತ್ತು. ವೇದಗಳ ಜೊತೆಗೆ ಶಿಕ್ಷಣಕ್ಕೂ ಮಹತ್ವ ನೀಡುವ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿ ಆರ್ಯಸಮಾಜವು ಮಹತ್ವದ ಪಾತ್ರ ವಹಿಸಿತು.[/fusion_toggle][fusion_toggle title=”1904: ಅಲೆಯಿಸ್ಟರ ಕ್ರೌಲೆಯ್ ಅವರು ತಮ್ಮ ‘ದಿ ಬುಕ್ ಆಫ್ ದಿ ಲಾ’ ಗ್ರಂಥದ ಮೂರನೆಯ ಮತ್ತು ಕೊನೆಯ ಅಧ್ಯಾಯವನ್ನು ಲಿಪ್ಯಂತರ ಗೊಳಿಸಿದರು. ” open=”no”]ಅಲೆಯಿಸ್ಟರ ಕ್ರೌಲೆಯ್ ಅವರು ತಮ್ಮ ‘ದಿ ಬುಕ್ ಆಫ್ ದಿ ಲಾ’ ಗ್ರಂಥದ ಮೂರನೆಯ ಮತ್ತು ಕೊನೆಯ ಅಧ್ಯಾಯವನ್ನು ಲಿಪ್ಯಂತರಗೊಳಿಸಿದರು.[/fusion_toggle][fusion_toggle title=”1912: ಆರ್.ಎಮ್.ಎಸ್. ಟೈಟನಿಕ್ ಹಡಗು ಸೌತಾಂಪ್ಟನ್ ಇಂದ ತನ್ನ ಪ್ರಥಮ ಮತ್ತು ಏಕೈಕ ಯಾನವನ್ನು ಪ್ರಾರಂಭಿಸಿತು” open=”no”]ಆರ್.ಎಮ್.ಎಸ್. ಟೈಟನಿಕ್ ಹಡಗು ಸೌತಾಂಪ್ಟನ್ ಇಂದ ತನ್ನ ಪ್ರಥಮ ಮತ್ತು ಏಕೈಕ ಯಾನವನ್ನು ಪ್ರಾರಂಭಿಸಿತು.[/fusion_toggle][fusion_toggle title=”1916: ಅಮೆರಿಕನ್ ವೃತಿಪರ ಗಾಲ್ಫ್ ಆಟಗಾರರ ಸಂಘವಾದ ‘PGA’ ಅಮೆರಿಕದಲ್ಲಿ ಸ್ಥಾಪನೆಗೊಂಡಿತು” open=”no”]ಅಮೆರಿಕನ್ ವೃತಿಪರ ಗಾಲ್ಫ್ ಆಟಗಾರರ ಸಂಘವಾದ ‘PGA’ ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆಗೊಂಡಿತು.[/fusion_toggle][fusion_toggle title=”1919: ಮೆಕ್ಸಿಕನ್ ಕ್ರಾಂತಿಕಾರಿ ನಾಯಕ ಎಮಿಲಿಯಾನೋ ಸಪಾಟ ಅವರನ್ನು ಸರ್ಕಾರಿ ಪಡೆಗಳು ಗುಂಡಿಟ್ಟು ಕೊಂದವು” open=”no”]ಮೊರೆಲೋಸ್ ಎಂಬಲ್ಲಿ, ಮೆಕ್ಸಿಕನ್ ಕ್ರಾಂತಿಕಾರಿ ನಾಯಕ ಎಮಿಲಿಯಾನೋ ಸಪಾಟ ಅವರನ್ನು ಸರ್ಕಾರಿ ಪಡೆಗಳು ಗುಂಡಿಟ್ಟು ಕೊಂದವು.[/fusion_toggle][fusion_toggle title=”1925: ಎಫ್. ಸ್ಕಾಟ್ ಫಿಟ್ಜ್ ಗೆರಾಲ್ಡ್ ಅವರ ‘ದಿ ಗ್ರೇಟ್ ಗ್ಯಾಟ್ಸ್ಬಿ’ ಕೃತಿಯು ಮೊದಲಿಗೆ ಅಮೆರಿಕದಲ್ಲಿ ಪ್ರಕಟಗೊಂಡಿತು” open=”no”]ಎಫ್. ಸ್ಕಾಟ್ ಫಿಟ್ಜ್ ಗೆರಾಲ್ಡ್ ಅವರ ‘ದಿ ಗ್ರೇಟ್ ಗ್ಯಾಟ್ಸ್ಬಿ’ ಕೃತಿಯನ್ನು ಚಾರ್ಲ್ಸ್ ಸ್ಕ್ರಿಬ್ನರ್ಸ್ ಸನ್ಸ್ ಸಂಸ್ಥೆಯು ಮೊದಲಿಗೆ ನ್ಯೂಯಾರ್ಕ್ ನಗರದಲ್ಲಿ ಪ್ರಕಟಿಸಿತು.[/fusion_toggle][fusion_toggle title=”1957: ಮೂರು ತಿಂಗಳು ಮುಚ್ಚಿದ್ದ ಈಜಿಪ್ಟಿನ ಸ್ಯೂಯಜ್ ಕಾಲುವೆಯು ಪುನಃ ನೌಕಾಯಾನಕ್ಕೆ ಮುಕ್ತಗೊಂಡಿತು. ” open=”no”]ಮೂರು ತಿಂಗಳು ಮುಚ್ಚಿದ್ದ ಈಜಿಪ್ಟಿನ ಸ್ಯೂಯಜ್ ಕಾಲುವೆಯು ಪುನಃ ನೌಕಾಯಾನಕ್ಕೆ ಮುಕ್ತಗೊಂಡಿತು.[/fusion_toggle][fusion_toggle title=”1972: ಚೀನಾದ ಶಾಂಡಾಂಗ್ ಎಂಬಲ್ಲಿ ಕಟ್ಟಡದ ಕಾರ್ಮಿಕರು ಅಕಸ್ಮಾತ್ತಾಗಿ ಅಮೂಲ್ಯವಸ್ತುಗಳಿದ್ದ ಸಮಾಧಿಗಳನ್ನು ಪತ್ತೆಹಚ್ಚಿದರು” open=”no”]ಚೀನಾದ ಶಾಂಡಾಂಗ್ ಎಂಬಲ್ಲಿ ಕಟ್ಟಡದ ಕಾರ್ಮಿಕರು ಅಕಸ್ಮಾತ್ತಾಗಿ ಅಮೂಲ್ಯವಸ್ತುಗಳಿದ್ದ ಸಮಾಧಿಗಳನ್ನು ಪತ್ತೆಹಚ್ಚಿದರು. ಇವುಗಳಲ್ಲಿ ಬಿದಿರಿನ ಎಳೆಗಳಲ್ಲಿ ಮೂಡಿಸಲ್ಪಟ್ಟ ‘ಸನ್ ಟ್ಸು’ ಅವರ ‘ಯುದ್ಧ ಕಲೆ’ ಮತ್ತು ‘ಸನ್ ಬಿನ್’ ಅವರ ಕಳೆದು ಹೋಗಿದ್ದ ‘ಮಿಲಿಟರಿ ಶಾಸ್ತ್ರಗ್ರಂಥ’ ಮುಂತಾದ ಅಮೂಲ್ಯ ಕೃತಿಗಳಿದ್ದವು.[/fusion_toggle][fusion_toggle title=”1972: ಎಪ್ಪತ್ತನಾಲ್ಕು ದೇಶಗಳು ಜೈವಿಕ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಬಹಿಷ್ಕರಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ” open=”no”]ಎಪ್ಪತ್ತನಾಲ್ಕು ದೇಶಗಳು ಜೈವಿಕ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಬಹಿಷ್ಕರಿಸುವ ಒಪ್ಪಂದಕ್ಕೆ ಸಹಿ ಹಾಕಿದವು.[/fusion_toggle][fusion_toggle title=”1982: ಭಾರತದ ಇನ್ಸಾಟ್-1ಎ ಉಪಗ್ರಹವನ್ನು ಅಮೆರಿಕದ ಡೆಲ್ಟಾ ರಾಕೆಟ್ ಬಾಹ್ಯಾಕಾಶಕ್ಕೆ ಹಾರಿಸಿತು.” open=”no”]ಭಾರತದ ಇನ್ಸಾಟ್-1ಎ ಉಪಗ್ರಹವನ್ನು ಅಮೆರಿಕದ ಡೆಲ್ಟಾ ರಾಕೆಟ್ ಬಾಹ್ಯಾಕಾಶಕ್ಕೆ ಹಾರಿಸಿತು. ಇದು ಜಗತ್ತಿನ ಮೊತ್ತ ಮೊದಲ ಹವಾಮಾನ ಮತ್ತು ಸಂಪರ್ಕ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.[/fusion_toggle][fusion_toggle title=”1988: ಪಾಕಿಸ್ಥಾನದ ಓಜ್ಹಿರಿ ಕ್ಯಾಂಪ್ ದುರಂತದಲ್ಲಿ 1000ಕ್ಕೂ ಹೆಚ್ಚು ಸಾವು” open=”no”]ಪಾಕಿಸ್ಥಾನದ ಓಜ್ಹಿರಿ ಕ್ಯಾಂಪ್ ದುರಂತದಲ್ಲಿ, ರಾಕೆಟ್ಟುಗಳು ಮತ್ತು ಯುದ್ಧಸಾಮಾಗ್ರಿಗಳು ಸ್ಪೋಟಗೊಂಡು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದಿನ 1000ಕ್ಕೂ ಹೆಚ್ಚು ಜನ ಸಾವಿಗೀಡಾದರು.
2000: ಜುಂಪಾ ಲಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ ‘ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್’ ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.
ಭಾರತೀಯ ಬಂಗಾಳಿ ಕುಟುಂಬದಲ್ಲಿ ಜನಿಸಿದ ಅಮೆರಿಕನ ಪ್ರಜೆ ಜುಂಪಾ ಲಹಿರಿ ಅವರು ತಮ್ಮ 9 ಸಣ್ಣ ಕಥೆಗಳ ಸಂಗ್ರಹ ‘ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್’ ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಗಳಿಸಿದರು.[/fusion_toggle][fusion_toggle title=”2006: ದಿನಗೂಲಿ ಕಾರ್ಮಿಕರಿಗೆ ಸರ್ಕಾರದಲ್ಲಿ ಖಾಯಂ ಉದ್ಯೋಗ ಪಡೆಯುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು” open=”no”]ದಿನಗೂಲಿ ಕಾರ್ಮಿಕರಿಗೆ ಸರ್ಕಾರದಲ್ಲಿ ಖಾಯಂ ಉದ್ಯೋಗ ಪಡೆಯುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.[/fusion_toggle][fusion_toggle title=”2008: ಶೇ 27ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್” open=”no”]ಐಐಟಿ, ಐಐಎಂ, ಎಐಐಎಂಎಸ್ ಮತ್ತಿತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ(ಓಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಆದರೆ ಈ ಮೀಸಲಾತಿ ಸೌಲಭ್ಯದಿಂದ ಕೆನೆಪದರವನ್ನು ಹೊರಗಿಟ್ಟಿದ್ದು ವಾರ್ಷಿಕ ರೂ 2.5 ಲಕ್ಷಕ್ಕೂ ಹೆಚ್ಚಿನ ಆದಾಯ ಹೊಂದಿದ ಕುಟುಂಬಗಳನ್ನು ಕೆನೆಪದರ ವರ್ಗಕ್ಕೆ ಸೇರಿಸಿತು. ಪ್ರತಿ ಐದು ವರ್ಷಗಳಿಗೆ ಒಮ್ಮೆ ಮೀಸಲಾತಿಯನ್ನು ಮರುವಿಮರ್ಶೆಗೆ ಒಳಪಡಿಸಬೇಕೆಂದೂ ನ್ಯಾಯಪೀಠ ಸೂಚಿಸಿತು.[/fusion_toggle][fusion_toggle title=”2009: ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪದಕ ಗೆದ್ದ ಗಗನ್ ನಾರಂಗ್” open=”no”]ಅನುಭವಿ ಶೂಟರ್ ಗಗನ್ ನಾರಂಗ್ ಅವರು ದಕ್ಷಿಣ ಕೊರಿಯಾದ ಚಾಂಗ್‌ವಾನ್‌ನಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ ಶಿಪ್ಪಿನ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್ ಚಾಂಪಿಯನ್‌ ಶಿಪ್ಪಿನಲ್ಲಿ ಕಂಚಿನ ಪದಕ ಗೆದ್ದುಕೊಂಡರು.[/fusion_toggle][fusion_toggle title=”2016: ವಿಷು ಹಬ್ಬದ ಸಂದರ್ಭದಲ್ಲಿ ಪರವುರ್ ದೇಗುಲದಲ್ಲಿನ ಪಟಾಕಿಗಳು ಸಿಡಿದು ನೂರಕ್ಕೂ ಹೆಚ್ಚು ಸಾವು” open=”no”]ವಿಷು ಹಬ್ಬದ ಸಂದರ್ಭದಲ್ಲಿ ಪರವುರ್ ಭದ್ರಕಾಳಿ ದೇಗುಲದಲ್ಲಿ ಪೇರಿಸಿಟ್ಟಿದ್ದ ಪಟಾಕಿಗಳು ಸಿಡಿದು ನೂರಕ್ಕೂ ಹೆಚ್ಚು ಜನ ಸಾವಿಗೀಡಾದರು.[/fusion_toggle][/fusion_accordion]

ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1755: ಹೋಮಿಯೋಪಥಿ ಔಷದ ಪದ್ಧತಿಯನ್ನು ಕಂಡುಹಿಡಿದ ಸ್ಯಾಮ್ಯುಯೆಲ್ ಹಹ್ನೇಮನ್ ಜನನ” open=”no”]ಹೋಮಿಯೋಪಥಿ ಔಷದ ಪದ್ಧತಿಯನ್ನು ಕಂಡುಹಿಡಿದ ಜರ್ಮನ್ ವೈದ್ಯರಾದ ಕ್ರಿಶ್ಚಿಯನ್ ಫ್ರೆಡ್ರಿಕ್ ಸ್ಯಾಮ್ಯುಯೆಲ್ ಹಹ್ನೇಮನ್ ಅವರು ಡ್ರೆಸ್ಡೆನ್ ಬಳಿಯ ಮೀಸ್ಸೆನ್ ಎಂಬಲ್ಲಿ ಜನಿಸಿದರು.[/fusion_toggle][fusion_toggle title=”1847: ಅಮೆರಿಕದ ಪ್ರಸಿದ್ಧ ಪತ್ರಿಕಾ ಸಂಪಾದಕರೂ, ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಸ್ಥಾಪಕರೂ ಆದ ಜೋಸೆಫ್ ಪುಲಿಟ್ಜರ್ ಜನನ” open=”no”]ಅಮೆರಿಕದ ಪ್ರಸಿದ್ಧ ಪತ್ರಿಕಾ ಸಂಪಾದಕರೂ, ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಸ್ಥಾಪಕರೂ ಆದ ಜೋಸೆಫ್ ಪುಲಿಟ್ಜರ್ ಅವರು ಆಸ್ಟ್ರಿಯಾ ಆಡಳಿತದಲ್ಲಿದ ಹಂಗೆರಿಯ ಮಾಕೋ ಎಂಬಲ್ಲಿ ಜನಿಸಿದರು.[/fusion_toggle][fusion_toggle title=”1887: ನೊಬೆಲ್ ಪುರಸ್ಕೃತ ವೈದ್ಯ ವಿಜ್ಞಾನಿ ಬರ್ನಾರ್ಡೋ ಹೌಸ್ಸೇ ಜನನ” open=”no”]ಅರ್ಜೆಂಟಿನಾದ ವೈದ್ಯವಿಜ್ಞಾನಿ ಬರ್ನಾರ್ಡೋ ಹೌಸ್ಸೇ ಅವರು ಬ್ಯೂನೆಸ್ ಏರ್ಸ್ ಎಂಬಲ್ಲಿ ಜನಿಸಿದರು. ‘ಗ್ಲೂಕೋಸ್ ಇನ್ ಕಾರ್ಬೋ ಹೈಡ್ರೇಟ್ ಮೆಟಬಾಲಿಸಮ್ ಕುರಿತಾದ ಸಂಶೋಧನೆಗೆ’ ಪ್ರಸಿದ್ಧರಾದ ಇವರಿಗೆ 1947 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1894: ಸ್ವಾತಂತ್ರ್ಯ ಹೋರಾಟಗಾರ, ಉದ್ಯಮಿ ಘನಶ್ಯಾಮದಾಸ್ ಬಿರ್ಲಾ ಜನನ” open=”no”]ಜಿ. ಡಿ. ಬಿರ್ಲಾ ಎಂದೇ ಪ್ರಖ್ಯಾತರಾದ, ಭಾರತದ ಕೈಗಾರಿಕ ಕ್ಷೇತ್ರ, ಸ್ವಾತಂತ್ರ್ಯ ಹೋರಾಟ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಘನಶ್ಯಾಮ ದಾಸ ಬಿರ್ಲಾ ಅವರು ರಾಜಾಸ್ಥಾನದ ಮರುಭೂಮಿಯ ಮಧ್ಯದಲ್ಲಿನ ಪಿಲಾನಿ ಎಂಬಲ್ಲಿ ಜನಿಸಿದರು. ಇವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.[/fusion_toggle][fusion_toggle title=”1917: ಖ್ಯಾತ ಪಿಟೀಲು ವಿದ್ವಾಂಸ ಬಿ.ಆರ್. ಗೋವಿಂದಸ್ವಾಮಿ ಜನನ” open=”no”]ಖ್ಯಾತ ಪಿಟೀಲು ವಿದ್ವಾಂಸ ಬಿ.ಆರ್. ಗೋವಿಂದಸ್ವಾಮಿ ಅವರು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಮೈಸೂರು ಸಂಸ್ಥಾನದಲ್ಲಷ್ಟೇ ಅಲ್ಲದೆ, ಭಾರತದಾದ್ಯಂತ ಇವರ ಪಿಟೀಲು ವಾದನ ಕೀರ್ತಿಗಳಿಸಿತ್ತು.[/fusion_toggle][fusion_toggle title=”1897: ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಪ್ರಫುಲ್ಲ ಚಂದ್ರ ಸೆನ್ ಜನನ” open=”no”]ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಪ್ರಫುಲ್ಲ ಚಂದ್ರ ಸೆನ್ ಅವರು ಖುಲ್ನ ಜಿಲ್ಲೆಯ ಸೆನ್ಹಟಿ ಎಂಬಲ್ಲಿ ಜನಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಇವರು ಪಶ್ಚಿಮ ಬಂಗಾಳದ ಮೂರನೇ ಮುಖ್ಯಮಂತ್ರಿಗಳಾಗಿದ್ದರು.[/fusion_toggle][fusion_toggle title=”1917: ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರ ವಿಜ್ಞಾನಿ ರಾಬರ್ಟ್ ಬರ್ನ್ಸ್ ವುಡ್ವರ್ಡ್ ಜನನ” open=”no”]ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರ ವಿಜ್ಞಾನಿ ರಾಬರ್ಟ್ ಬರ್ನ್ಸ್ ವುಡ್ವರ್ಡ್ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಕೆಮಿಕಲ್ ರಿಯಾಕ್ಷನ್ಸ್ ಕುರಿತಾದ ಸೈದ್ಧಾಂತಿಕ ಅಧ್ಯಯನಗಳಿಗೆ ಪ್ರಸಿದ್ಧರಾದ ಇವರಿಗೆ 1965 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1927: ನೊಬೆಲ್ ಪುರಸ್ಕೃತ ಜೈವಿಕ ವಿಜ್ಞಾನಿ ಮಾರ್ಷಲ್ ವಾರ್ರೆನ್ ನಿರೇನ್ ಬರ್ಗ್ ಜನನ” open=”no”]ಅಮೆರಿಕದ ಜೈವಿಕ ವಿಜ್ಞಾನಿ ಮಾರ್ಷಲ್ ವಾರ್ರೆನ್ ನಿರೇನ್ ಬರ್ಗ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ಜೆನೆಟಿಕ್ ಕೋಡ್ ಕುರಿತಾದ ಇವರ ಸಂಶೋಧನೆಗಳಿಗಾಗಿ 1968 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1932: ಹಿಂದೂಸ್ಥಾನಿ ಸಂಗೀತದ ಮಹಾನ್ ಗಾಯಕಿ ಕಿಶೋರಿ ಅಮೋನ್ಕರ್ ಜನನ ” open=”no”]ಹಿಂದೂಸ್ಥಾನಿ ಸಂಗೀತ ಗಾಯನದ ಮೇರುಶಿಖರರಲ್ಲೊಬ್ಬರಾದ ಕಿಶೋರಿ ಅಮೋನ್ಕರ್ ಮುಂಬೈನಲ್ಲಿ ಜನಿಸಿದರು. ಇವರು ಖಯಾಲ್ ಶಾಸ್ತ್ರೀಯ ಸಂಗೀತ ಹಾಗೂ ಸಂಗೀತದ ಸುಗಮ ಶಾಸ್ತ್ರೀಯ ಸ್ವರೂಪಗಳಾದ ತುಮ್ರಿ ಮತ್ತು ಭಜನ ಸಂಗೀತಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ ಮತ್ತು ಕೇಂದ್ರ ಸಂಗೀತ ಅಕಾಡೆಮಿ ಗೌರವಗಳು ಇವರಿಗೆ ಸಂದಿವೆ.[/fusion_toggle][fusion_toggle title=”1938: ಶಿಕ್ಷಣ ತಜ್ಞೆ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಚಿ. ನ. ಮಂಗಳಾ ಜನನ” open=”no”]ಖ್ಯಾತ ಶಿಕ್ಷಣ ತಜ್ಞೆ, ಸ್ತ್ರೀವಾದಿ, ಬರಹಗಾರ್ತಿ ಚಿ.ನ. ಮಂಗಳಾ ಅವರು ಬೆಂಗಳೂರಿನಲ್ಲಿ ಜನಿಸಿದರು. ವಿವಿಧ ರೀತಿಯ ಬರಹಗಳನ್ನು ಮಾಡಿದ್ದ ಇವರು ತಿರುಮಲಾಂಬ ಅವರ ನೆನಪಿಗಾಗಿ ಶಾಶ್ವತಿ ಸಂಸ್ಥೆಯನ್ನು ಸ್ಥಾಪಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.[/fusion_toggle][fusion_toggle title=”1972: ‘ಸ್ಕೈಪ್’ ಸಹ ಸಂಸ್ಥಾಪಕರಾದ ಪ್ರಿಟ್ ಕಸೆಸಲು ಜನನ” open=”no”]ಎಸ್ಟೋನಿಯದ ಕಂಪ್ಯೂಟರ್ ತಜ್ಞ, ಸ್ಕೈಪ್ ಸಹ ಸಂಸ್ಥಾಪಕ ಪ್ರಿಟ್ ಕಸೆಸಲು ಜನಿಸಿದರು.[/fusion_toggle][/fusion_accordion]

ನಿಧನ:

[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”2013: ನೊಬೆಲ್ ಪುರಸ್ಕೃತ ವೈದ್ಯವಿಜ್ಞಾನಿ ರಾಬರ್ಟ್ ಎಡ್ವರ್ಡ್ಸ್ ನಿಧನ” open=”no”]ಇಂಗ್ಲಿಷ್ ವೈದ್ಯವಿಜ್ಞಾನಿ ರಾಬರ್ಟ್ ಎಡ್ವರ್ಡ್ಸ್ ಅವರು ಕೇಂಬ್ರಿಡ್ಜ್ ಬಳಿಯಲ್ಲಿ ಜನಿಸಿದರು. ‘ವಿಟ್ರೋ ಫರ್ಟಿಲೈಸೇಶನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 2010 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1995: ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ನಿಧನ” open=”no”]ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮುಂಬೈನಲ್ಲಿ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾದರು. ನೈತಿಕ ವ್ಯಕ್ತಿತ್ವ, ಶಿಸ್ತು, ಸಂಯಮ, ವಿದ್ವತ್ತು, ನಿಷ್ಠುರವಾದಿತ್ವ, ನೂರರ ವಯಸ್ಸಿನಲ್ಲೂ ಚಟುವಟಿಕೆಯಿಂದಿದ್ದ ಆರೋಗ್ಯವಂತ, ಆಡಳಿತದಲ್ಲಿ ಚುರುಕು ಮೂಡಿಸಿದಾತ, ದೇಶಸೇವೆಗಾಗಿ ಲಾಭದಾಯಕ ಹುದ್ದೆ ತೊರೆದು ಹಲವಾರು ಬಾರಿ ಸೆರೆವಾಸ ಅನುಭವಿಸಿದ ರಾಷ್ಟ್ರಭಕ್ತ, ಅಪ್ರತಿಮ ಗಾಂಧೀವಾದಿ, ಸಮಾಜ ಸೇವಕ ಮತ್ತು ಸುಧಾರಕ, ಕಾಂಗ್ರೆಸ್ಸೇತರ ಪ್ರಥಮ ಪ್ರಧಾನಿ ಹೀಗೆ ಇವರು ಹಲವಾರು ವಿಶಿಷ್ಟತೆಗಳಿಂದ ಹೆಸರಾಗಿದ್ದರು.[/fusion_toggle][/fusion_accordion]