ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1755: ಸ್ಯಾಮ್ಯುಯೆಲ್ ಜಾನ್ಸನ್ ಅವರ ‘ಎ ಡಿಕ್ಷನರೀ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್’ ಲಂಡನ್ನಿನಲ್ಲಿ ಪ್ರಕಟಗೊಂಡಿತು” open=”no”]ಸ್ಯಾಮ್ಯುಯೆಲ್ ಜಾನ್ಸನ್ ಅವರ ‘ಎ ಡಿಕ್ಷನರೀ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್’ ಲಂಡನ್ನಿನಲ್ಲಿ ಪ್ರಕಟಗೊಂಡಿತು.[/fusion_toggle][fusion_toggle title=”1817: ಥಾಮಸ್ ಹಾಪ್ ಕಿನ್ಸ್ ಗಲ್ಲಾವ್ ಡೆಟ್ ಮತ್ತು ಲಾರೆಂಟ್ ಕ್ಲರ್ಕ್ ಅವರು ಕಿವುಡರಿಗಾಗಿ ಶಾಲೆ ಪ್ರಾರಂಭಿಸಿದರು” open=”no”]ಥಾಮಸ್ ಹಾಪ್ ಕಿನ್ಸ್ ಗಲ್ಲಾವ್ ಡೆಟ್ ಮತ್ತು ಲಾರೆಂಟ್ ಕ್ಲರ್ಕ್ ಅವರು ಕನೆಕ್ಟಿಕಟ್ ಬಳಿಯ ಹಾರ್ಟ್ಫೋರ್ಡ್ ಎಂಬಲ್ಲಿ ಅಮೆರಿಕದ ಪ್ರಥಮ ಕಿವುಡರಿಗಾಗಿನ ಶಾಲೆ ಪ್ರಾರಂಭಿಸಿದರು[/fusion_toggle][fusion_toggle title=”1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ನಿಧನ” open=”no”]ಗುಂಡೇಟಿನ ಗಾಯಗಳ ಪರಿಣಾಮವಾಗಿ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ್ದ.[/fusion_toggle][fusion_toggle title=”1892: ದಿ ಜನರಲ್ ಎಲೆಕ್ಟ್ರಿಕ್ ಕಂಪೆನಿ ಸ್ಥಾಪನೆಗೊಂಡಿತು” open=”no”]ದಿ ಜನರಲ್ ಎಲೆಕ್ಟ್ರಿಕ್ ಕಂಪೆನಿ ಸ್ಥಾಪನೆಗೊಂಡಿತು.[/fusion_toggle][fusion_toggle title=”1896: ಅಥೆನ್ಸ್’ನಲ್ಲಿ ನಡೆದ ಮೊಟ್ಟ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವು ಸಮಾರೋಪಗೊಂಡಿತು ” open=”no”]ಅಥೆನ್ಸ್’ನಲ್ಲಿ ನಡೆದ ಮೊಟ್ಟ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವು ಸಮಾರೋಪಗೊಂಡಿತು.[/fusion_toggle][fusion_toggle title=”1912: ಅಮೆರಿಕದ ಐಷಾರಾಮಿ ನೌಕೆ ಟೈಟಾನಿಕ್ ನ್ಯೂ ಫೌಂಡ್ ಲ್ಯಾಂಡ್ ಬಳಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು” open=”no”]ಅಮೆರಿಕದ ಐಷಾರಾಮಿ ನೌಕೆ ಟೈಟಾನಿಕ್ ನ್ಯೂ ಫೌಂಡ್ ಲ್ಯಾಂಡ್ ಬಳಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ನಲವತ್ತು ನಿಮಿಷಗಳಿಗೆ ಮುಂಚೆ ದೊಡ್ಡ ಹಿಮಗಡ್ಡೆಗೆ ಡಿಕ್ಕಿ ಹೊಡೆದ ಈ ಹಡಗು ಬೆಳಿಗ್ಗೆ 2.20ರ ವೇಳೆಗೆ ನೀರಿನಲ್ಲಿ ಮುಳುಗಿತು. ಪಯಣಿಸುತ್ತಿದ್ದ ಒಟ್ಟು 2227 ಪಯಣಿಗರಲ್ಲಿ ಕೇವಲ 710 ಜನ ಮಾತ್ರಾ ಬದುಕುಳಿದರು.[/fusion_toggle][fusion_toggle title=”1923: ಇನ್ಸುಲಿನ್ ಸಾಮಾನ್ಯವಾಗಿ ಎಲ್ಲೆಡೆಯೂ ದೊರಕುವಂತಾಯಿತು” open=”no”]ಡಯಾಬಿಟಿಸ್ ರೋಗಕ್ಕೆ ಔಷದವಾದ ಇನ್ಸುಲಿನ್ ಎಲ್ಲೆಡೆ ಸಾಮಾನ್ಯವಾಗಿ ದೊರಕುವಂತಹ ಔಷದವಾಯಿತು.[/fusion_toggle][fusion_toggle title=”1924: ರಾಂಡ್ ಮೆಕ್ನಲ್ಲಿ ಅವರು ಪ್ರಥಮ ರಸ್ತೆ ಅಟ್ಲಾಸ್ ಅನ್ನು ಪ್ರಕಟಿಸಿದರು.” open=”no”]ರಾಂಡ್ ಮೆಕ್ನಲ್ಲಿ ಅವರು ಪ್ರಥಮ ರಸ್ತೆ ಅಟ್ಲಾಸ್ ಅನ್ನು ಪ್ರಕಟಿಸಿದರು.[/fusion_toggle][fusion_toggle title=”1955: ಮ್ಯಾಕ್ ಡೊನಾಲ್ಡ್ಸ್ ರೆಸ್ಟೋರೆಂಟಿಗೆ ಪ್ರಾರಂಭ ದೊರಕಿತು” open=”no”]ರೇ ಕ್ರಾಕ್ ಅವರು ಇಲಿನಾಯ್ಸಿನ ಡೆಸ್ ಪ್ಲೈನ್ಸ್ ಎಂಬಲ್ಲಿ ಮೆಕ್ ಡೊನಾಲ್ಡಿನ ಪ್ರಥಮ ಫ್ರಾಂಚೈಸ್ ಶಾಖೆಯನ್ನು ಆರಂಭಿಸಿದರು.[/fusion_toggle][fusion_toggle title=”1986: 56 ಚೆಂಡುಗಳಲ್ಲಿ ಶತಕ ಬಾರಿಸಿದ ವಿವಿಯನ್ ರಿಚರ್ಡ್ಸ್ ” open=”no”]ಅಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸಿನ ಪ್ರಸಿದ್ಧ ಆಟಗಾರ ವಿವಿಯನ್ ರಿಚರ್ಡ್ಸ್ಸ್ ಅವರು ಕೇವಲ 56 ಚೆಂಡುಗಳಲ್ಲಿ ಟೆಸ್ಟ್ ಶತಕ ಬಾರಿಸಿದರು.[/fusion_toggle][fusion_toggle title=”2007: ಬೆಂಗಳೂರು ಮೆಟ್ರೊ ರೈಲು ಯೋಜನೆ ಸಿವಿಲ್ ಕಾಮಗಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚಾಲನೆ ನೀಡಲಾಯಿತು.” open=”no”]ಬೆಂಗಳೂರು ಮೆಟ್ರೊ ರೈಲು ಯೋಜನೆ ಸಿವಿಲ್ ಕಾಮಗಾರಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಚಾಲನೆ ನೀಡಲಾಯಿತು.[/fusion_toggle][fusion_toggle title=”2008: ಜಗತ್ತಿನ ಅತಿ ದೊಡ್ಡ ತಿರುಗುವ ವೀಕ್ಷಣಾ ಚಕ್ರವಾದ ಸಿಂಗಪುರ ಫ್ಲೈಯರ್ ಸಿಂಗಪುರದಲ್ಲಿ ಚಾಲನೆಗೊಂಡಿತು. ” open=”no”]ಜಗತ್ತಿನ ಅತಿ ದೊಡ್ಡ ತಿರುಗುವ ವೀಕ್ಷಣಾ ಚಕ್ರವಾದ ‘ಸಿಂಗಪುರ್ ಫ್ಲೈಯರ್’ ಸಿಂಗಪುರದಲ್ಲಿ ಚಾಲನೆಗೊಂಡಿತು.[/fusion_toggle][fusion_toggle title=”2009: ‘ಪೃಥ್ವಿ-2’ ಖಂಡಾಂತರ ಕ್ಷಿಪಣಿಯ ಯಶಸ್ವೀ ಪ್ರಯೋಗ” open=”no”]ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯಬಲ್ಲ 350 ಕಿ.ಮೀ. ವ್ಯಾಪ್ತಿಯುಳ್ಳ ಸಂಪೂರ್ಣ ಸ್ವದೇಶಿ ನಿರ್ಮಿತವಾದ ‘ಪೃಥ್ವಿ-2’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1452: ಮಹಾನ್ ಕಲಾವಿದ ಲಿಯನಾರ್ಡೊ ಡ ವಿಂಚಿ ಜನನ ” open=”no”]‘ಮೊನಾಲೀಸಾ’, ‘ಲಾಸ್ಟ್ ಸಪ್ಪರ್’ ಮುಂತಾದ ಮೇರು ಕೃತಿಗಳ ಸೃಷ್ಟಿಕರ್ತರಾದ ಲಿಯನಾರ್ಡೋ ಡ ವಿಂಚಿ ಇಟಲಿಯ ವಿಂಚಿ ಎಂಬಲ್ಲಿ ಜನಿಸಿದರು. ಬಹುಮುಖ ಪ್ರತಿಭೆಯಾಗಿದ್ದ ಲಿಯನಾರ್ಡೊ ಡ ವಿಂಚಿ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ ಹೀಗೆ ಅನೇಕ ರೀತಿಯಲ್ಲಿ ಪ್ರಸಿದ್ಧರಾಗಿದ್ದಾರೆ.[/fusion_toggle][fusion_toggle title=”1469: ಗುರುನಾನಕ್ ಜನನ ” open=”no”]ಪಂಜಾಬಿನ ಜನರಿಂದ “ನಾನಕ್, ಸತ್ಯದೇವರು, ಹಿಂದೂಗಳ ಗುರು, ಮುಸಲ್ಮಾನರ ಮೌಲ್ವಿ” ಎಂದು ಗುರುತಿಸಲ್ಪಡುವ, ಸಿಖ್ಖರ ಪ್ರಥಮ ಗುರುವರ್ಯರಾದ ಗುರುನಾನಕ್ ಅವರು ರಾವಿ ಮತ್ತು ಚೀನಾಬ್ ನದಿಯ ಮಧ್ಯದಲ್ಲಿರುವ ‘ತಳವಂಡಿ’ ಎಂಬಲ್ಲಿ ಜನಿಸಿದರು.[/fusion_toggle][fusion_toggle title=”1874: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಜೋಹಾನ್ನೆಸ್ ಸ್ಟಾರ್ಕ್ ಜನನ ” open=”no”]ಜರ್ಮನ್ ಭೌತವಿಜ್ಞಾನಿ ಜೋಹಾನ್ನೆಸ್ ಸ್ಟಾರ್ಕ್ ಅವರು ಸ್ಕಿಕ್ಕೆನ್ ಹೊಫ್ ಎಂಬಲ್ಲಿ ಜನಿಸಿದರು. ‘ಡಾಪ್ಲರ್ ಎಫೆಕ್ಟ್ ಇನ್ ಕೆನಾಲ್ ರೇಸ್ ಅಂಡ್ ಸ್ಪ್ಲಿಟ್ಟಿಂಗ್ ಆಫ್ ಸ್ಪ್ಕೆಕ್ಟ್ರಲ್ ಲೈನ್ಸ್ ಇನ್ ಎಲೆಕ್ಟ್ರಿಕ್ ಫೀಲ್ಡ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1919 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1874: ನೊಬೆಲ್ ಪುರಸ್ಕೃತ ರಸಾಯನಶಾಸ್ತ್ರ ವಿಜ್ಞಾನಿ ನಿಕೊಲಾಯ್ ಸೆಮ್ಯೋನೌ ಜನನ ” open=”no”]ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ನಿಕೊಲಾಯ್ ಸೆಮ್ಯೋನೌ ರಷ್ಯಾದ ಸರಟೋವ್ ಎಂಬಲ್ಲಿ ಜನಿಸಿದರು. ‘ಮೆಕಾನಿಸಮ್ ಆಫ್ ಕೆಮಿಕಲ್ ಟ್ರಾನ್ಸ್ಫಾರ್ಮೇಶನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1956 ವರ್ಷದ ನೊಬೆಲ್ ರಸಾಯನಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1901: ಸ್ವಾತಂತ್ರ್ಯ ಯೋಧ ಮತ್ತು ಪಶ್ಚಿಮ ಬಂಗಾಳದ ನಾಲ್ಕನೆಯ ಮುಖ್ಯಮಂತ್ರಿಗಳಾದ ಅಜೋಯ್ ಮುಖರ್ಜಿ ಜನನ” open=”no”]ಸ್ವಾತಂತ್ರ್ಯಯೋಧ ಮತ್ತು ಪಶ್ಚಿಮ ಬಂಗಾಳದ ನಾಲ್ಕನೆಯ ಮುಖ್ಯಮಂತ್ರಿಗಳಾದ ಅಜೋಯ್ ಮುಖರ್ಜಿ ಅವರು ಕೋಲ್ಕತ್ತದಲ್ಲಿ ಜನಿಸಿದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು.[/fusion_toggle][fusion_toggle title=”1907: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ನಿಕೋಲಾಸ್ ಟಿನ್ ಬೆರ್ಗೆನ್ ಜನನ” open=”no”]ಡಚ್-ಇಂಗ್ಲಿಷ್ ವೈದ್ಯ ಶಾಸ್ತ್ರಜ್ಞ ನಿಕೋಲಾಸ್ ಟಿನ್ ಬೆರ್ಗೆನ್ ಅವರು ನೆದರ್ ಲ್ಯಾಂಡಿನ ‘ದಿ ಹೇಗ್’ ಎಂಬಲ್ಲಿ ಜನಿಸಿದರು. ‘ಆರ್ಗನೈಸೆಶನ್ ಅಂಡ್ ಎಲಿಸಿಟೇಶನ್ ಆಫ್ ಇಂಡಿವಿಜುಯಲ್ ಅಂಡ್ ಸೋಷಿಯಲ್ ಬಿಹೇವಿಯರ್ ಪ್ಯಾಟರ್ನ್ಸ್ ಆಫ್ ಅನಿಮಲ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1973 ವರ್ಷದ ನೊಬೆಲ್ ಪುರಸ್ಕಾರ ಸಂದಿತು.[/fusion_toggle][fusion_toggle title=”1922: ಸುಗಮ ಸಂಗೀತ ಕಲಾವಿದ ಎಂ. ಪ್ರಭಾಕರ್ ಜನನ” open=”no”]ಸುಗಮ ಸಂಗೀತ ಕಲಾವಿದ ಎಂ. ಪ್ರಭಾಕರ್ ಭಟ್ಕಳದಲ್ಲಿ ಜನಿಸಿದರು. ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ಸುಗಮ ಸಂಗೀತದ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.[/fusion_toggle][fusion_toggle title=”1922: ಪ್ರಸಿದ್ಧ ಹಿಂದೀ ಮತ್ತು ಉರ್ದು ಕವಿ ಹಾಗೂ ಚಲನಚಿತ್ರ ಗೀತರಚನಕಾರ ಹಸರತ್ ಜೈಪುರಿ ಜನನ” open=”no”]ಪ್ರಸಿದ್ಧ ಹಿಂದೀ ಮತ್ತು ಉರ್ದು ಕವಿ ಹಾಗೂ ಚಲನಚಿತ್ರ ಗೀತರಚನಕಾರ ಹಸರತ್ ಜೈಪುರಿ ಅವರು ಜೈಪುರದಲ್ಲಿ ಜನಿಸಿದರು.[/fusion_toggle][fusion_toggle title=”1931: ನೊಬೆಲ್ ಪುರಸ್ಕೃತ ಸಾಹಿತಿ ಥಾಮಸ್ ಟ್ರಾನ್ಸ್ ಟ್ರೋಮರ್ ಜನನ” open=”no”]ಸ್ವೀಡಿಷ್ ಕವಿ, ಅನುವಾದಕ ಮತ್ತು ಮನಃಶಾಸ್ತ್ರಜ್ಞರಾದ ಥಾಮಸ್ ಟ್ರಾನ್ಸ್ ಟ್ರೋಮರ್ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ಇವರಿಗೆ 2011 ವರ್ಷದಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಂದಿತು.[/fusion_toggle][fusion_toggle title=”1932: ಮರಾಠಿ ಕವಿ ಮತ್ತು ಗೀತರಚನಕಾರ ಸುರೇಶ ಭಟ್ ಜನನ” open=”no”]ಮರಾಠಿ ಕವಿ ಮತ್ತು ಗೀತರಚನಕಾರ ಸುರೇಶ ಭಟ್ ಅವರು ಮಹಾರಾಷ್ಟ್ರದ ಅಮರಾವತಿ ಎಂಬಲ್ಲಿ ಜನಿಸಿದರು. ಇವರು ಗಝಲ್ ರೂಪದ ರಚನೆಗಳಿಗೆ ಪ್ರಸಿದ್ಧಿ ಪಡೆದಿದ್ದರು.[/fusion_toggle][fusion_toggle title=”1935: ನಟ ರಾಜೇಶ್ ಜನನ” open=”no”]ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲಿ ಒಬ್ಬರಾದ ರಾಜೇಶ್ ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಧಾರವಾಡ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.[/fusion_toggle][fusion_toggle title=”1943: ನೊಬೆಲ್ ವೈದ್ಯಶಾಸ್ತ್ರಜ್ಞ ಮತ್ತು ಜೈವಿಕ ವಿಜ್ಞಾನಿ ರಾಬರ್ಟ್ ಲೆಫ್ಕೋವಿಟ್ಜ್ ಜನನ” open=”no”]ಅಮೆರಿಕದ ವೈದ್ಯಶಾಸ್ತ್ರಜ್ಞ ಮತ್ತು ಜೈವಿಕ ವಿಜ್ಞಾನಿ ರಾಬರ್ಟ್ ಲೆಫ್ಕೋವಿಟ್ಜ್ ಅವರು ನ್ಯೂಯಾರ್ಕಿನಲ್ಲಿ ಜನಿಸಿದರು. ‘ಜಿ ಪ್ರೊಟೀನ್-ಕಪಲ್ಡ್ ರಿಸೆಪ್ಟರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 2012 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.[/fusion_toggle][fusion_toggle title=”1977: ಮರಳಿನಲ್ಲಿ ಶಿಲ್ಪ ಮೂಡಿಸುವ ಕಲಾವಿದ ಸುದರ್ಶನ್ ಪಟ್ನಾಯಕ್ ಜನನ” open=”no”]ಮರಳಿನಲ್ಲಿ ಶಿಲ್ಪ ಮೂಡಿಸುವ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯಲ್ಲಿ ಜನಿಸಿದರು. ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಇವರಿಗೆ ಪದ್ಮಶ್ರೀ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1865: ಗುಂಡೇಟಿನ ಗಾಯಗಳ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ನಿಧನ” open=”no”]ಗುಂಡೇಟಿನ ಗಾಯಗಳ ಪರಿಣಾಮವಾಗಿ ಪರಿಣಾಮವಾಗಿ ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೃತರಾದರು. ವಾಷಿಂಗ್ಟನ್ನಿನ ಫೋರ್ಡ್ಸ್ಸ್ ಥಿಯೇಟರಿನಲ್ಲಿ ಹಿಂದಿನ ದಿನ ಜಾನ್ ಡಬ್ಲ್ಯೂ ಬೂತ್ ಎಂಬ ನಟ ಲಿಂಕನ್ ಅವರ ಮೇಲೆ ಗುಂಡು ಹಾರಿಸಿದ್ದ. ಮಾರ್ಚ್ 1861ರಿಂದ ಎಪ್ರಿಲ್ 1865ರಲ್ಲಿ ಹತ್ಯೆಯಾಗುವವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವರು ದೇಶದ ಆಂತರಿಕ ಕ್ರಾಂತಿಯ ಪರೀಕ್ಷೆಯ ಕಾಲದಲ್ಲಿ ಸಮರ್ಥವಾಗಿ ಆಡಳಿತ ನಡೆಸಿ ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಗುಲಾಮಗಿರಿಯನ್ನು ಹೋಗಲಾಡಿಸಿ, ದೇಶದ ಗಣರಾಜ್ಯ ಸ್ವರೂಪವನ್ನು ಹೆಚ್ಚು ಶಕ್ತಿಯುತಗೊಳಿಸಿ, ಆರ್ಥಿಕ ಸ್ಥಿತಿಯನ್ನು ಆಧುನಿಕಗೊಳಿಸಿದರು.[/fusion_toggle][fusion_toggle title=”1980: ಮಹಾನ್ ತತ್ವಜ್ಞಾನಿ ಜೀನ್-ಪೌಲ್ ಸಾರ್ತ್ರೆ ನಿಧನ” open=”no”]ಫ್ರೆಂಚ್ ದಾರ್ಶನಿಕ ಜೀನ್-ಪೌಲ್ ಸಾರ್ತ್ರೆ ಪ್ಯಾರಿಸ್ನಲ್ಲಿ ನಿಧನರಾದರು. 1964ರ ವರ್ಷದಲ್ಲಿ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ, ಅವರು “ತಾವು ಯಾವುದೇ ಗೌರವಗಳನ್ನು ಸ್ವೀಕರಿಸಲು ಇಚ್ಚಿಸುವುದಿಲ್ಲ, ಬರಹಗಾರನೊಬ್ಬ ಸಂಸ್ಥೆಯಾಗಿ ಬಿಡಬಾರದು ಎಂಬುದು ನನ್ನ ಅನಿಸಿಕೆ” ಎಂದು ಪ್ರಶಸ್ತಿಗಳೆಲ್ಲವನ್ನೂ ನಿರಾಕರಿಸಿದರು.[/fusion_toggle][/fusion_accordion]